ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ Struggling
WFTW Body: 

ಪ್ರಮುಖವಾಗಿ ಎಲ್ಲಾ ವಿಶ್ವಾಸಿಗಳನ್ನು ದೂಷಣೆ ಮಾಡುವಂತವನು ಸೈತಾನನಾಗಿದ್ದಾನೆ (ಪ್ರಕಟನೆ 12:10). ಆದರೆ ಸೈತಾನನು ವಿಶ್ವಾಸಿಗಳ ಮಧ್ಯದಲ್ಲಿ ತನ್ನ ಕೆಲಸಕ್ಕೆ (ದೂಷಣೆ ಮಾಡುವುದಕ್ಕೆ) ಸಹಾಯವಾಗುವಂತೆ ಜೊತೆ ಕೆಲಸಗಾರರನ್ನು ಯಾವಾಗಲೂ ಹುಡುಕುತ್ತಿರುತ್ತಾನೆ. ಮತ್ತು ಇಡೀ ಲೋಕದಲ್ಲಿ ಅಂತಹ ಅನೇಕ ಜೊತೆ ಕೆಲಸಗಾರರನ್ನು ಕಂಡುಕೊಂಡಿದ್ದಾನೆ.

ಸೈತಾನನು ನಮಗೆ ಸುಳ್ಳನ್ನು ಹೇಳುವವನಾಗಿದ್ದಾನೆ. ಆದರೆ ಆತನು ದೇವರ ಬಳಿ ನಮ್ಮನ್ನು ದೂಷಿಸುವಾಗ, ನಮ್ಮ ವಿರುದ್ಧವಾಗಿ ಮಾಡುವ ಎಲ್ಲಾ ದೂಷಣೆಗಳು ನಿಜವಾಗಿರುತ್ತವೆ, ಏಕೆಂದರೆ ದೇವರ ಎದುರಿಗೆ ಸುಳ್ಳನ್ನು ಹೇಳಲು ಸೈತಾನನಿಗೆ ಧೈರ್ಯವಿಲ್ಲ. ಆದರೆ ಆತನು ಸತ್ಯವನ್ನೇ ಹೇಳುತ್ತಿದ್ದರೂ ಸಹ ಆತನ ಆತ್ಮವು ದೂಷಿಸುವಂತಹ ಆತ್ಮದಿಂದ ಕೂಡಿದೆ. ಇದರಿಂದ ನಾವು ಒಂದು ಸಂಗತಿಯನ್ನು ಕಲಿತುಕೊಳ್ಳಬೇಕು - ಅದೇನೆಂದರೆ : ಒಬ್ಬ ಸಹೋದರನ ಪಾಪಗಳನ್ನು ಆತನ ಎದುರಿಗೆ ನೇರವಾಗಿ ಮಾತನಾಡದೇ, ಆತನ ಹಿಂದೆ ಮಾತನಾಡುವುದಾದರೆ, ಆಗ ನಾವು ಸೈತಾನನ ದೂಷಿಸುವಂತ ಸೇವೆಯಲ್ಲಿ ಆತನ ಜೊತೆ ಕೆಲಸಗಾರರಾಗಿರುತ್ತೇವೆ, ನಾವು ಆಡುವ ಪ್ರತಿ ಮಾತು ಸತ್ಯವಾಗಿದ್ದರೂ ಸಹ.

ನಾವು ಎಂದಿಗೂ ದೂಷಿಸುವಂತವನೊಟ್ಟಿಗೆ ಅನ್ಯೋನ್ಯತೆಯನ್ನು ಮಾಡಬಾರದು. ಒಬ್ಬ ಸಹೋದರನು ಪಾಪ ಮಾಡಿದಾಗ, ನಾವು ಅದನ್ನು ಶಾಂತಭಾವದಿಂದ ತಿದ್ದಬೇಕು ಎಂಬುದಾಗಿ ದೇವರ ವಾಕ್ಯವು ನಮಗೆ ಆದೇಶಿಸಲ್ಪಟ್ಟಿದೆ (ಗಲಾತ್ಯ 6:1). ನಾವು ಪಾಪ ಮಾಡಿದಂತ ಸಹೋದರನೊಟ್ಟಿಗೆ ನೇರವಾಗಿ ಮಾತನಾಡಬೇಕು. ಆತನು ನಮ್ಮ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಅಲಕ್ಷ್ಯ ಮಾಡಿದರೆ, ನಂತರ ನಾವು ಇದರ ಬಗ್ಗೆ ಸಭಾ ಹಿರಿಯರ ಬಳಿ ಹೇಳಿಕೊಳ್ಳಬೇಕು. ಒಂದು ವೇಳೆ ಆತನು ಸಭಾ ಹಿರಿಯರ ಮಾತನ್ನು ಕೇಳಿಲ್ಲವೆಂದರೂ ಸಹ, ನಂತರ ಆತ್ಮೀಕ ಅಧಿಕಾರಕ್ಕೆ ಅಧೀನನಾಗುವುದಕ್ಕೆ ಮನಸ್ಸಿಲ್ಲದಿರುವಿಕೆಯ ಆತನ ವಿಷಯವಾಗಿ ಇಡೀ ಸಭೆಗೆ ಹೇಳಬೇಕು. ನಂತರ ಆತನನ್ನು ಸಭೆಯಿಂದ ಹೊರ ಹಾಕಬೇಕು. ಮತ್ತಾಯ 18:15-20 ರಲ್ಲಿ ಯೇಸು ನಮಗೆ ಇದರ ವಿಷಯವಾಗಿ ಸ್ಪಷ್ಟವಾದ ವಿಧಾನವನ್ನು ಹೇಳಿದ್ದಾರೆ. ನಾವು ಸಭೆಯಲ್ಲಿನ ಸೈತಾನನ ದೂಷಿಸುವಂತ ಚಟುವಟಿಕೆಯನ್ನು ಕಟ್ಟಿಹಾಕಬೇಕು ಎಂಬುದಾಗಿ ಯೇಸು ಹೇಳುತ್ತಾ ಸಾಗಿದ್ದಾರೆ.

ಒಂದು ವೇಳೆ ಸಭಾ ಹಿರಿಯರ ವಿರುದ್ಧವಾಗಿ ದೂಷಣೆ ಬಂದಿದ್ದರೆ, ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು (1 ತಿಮೊಥೆ 5:19). ಈ ವಿಷಯವಾಗಿ ಮಿಕ್ಕ ಹಿರಿಯ ಸಹೋದರರುಗಳಿಂದ ತುಂಬಾ ಎಚ್ಚರಿಕೆಯಿಂದ ವಿಚಾರಣೆ ನಡೆಯಬೇಕು. ಹಳೆಯ ಒಡಂಬಡಿಕೆಯ ಕೆಳಗೆ, ದೇವರು ಸ್ಪಷ್ಟವಾಗಿ ಈ ರೀತಿ ಆದೇಶಿಸಿದ್ದಾರೆ - ”ನೀವು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು; ಆ ಕಾರ್ಯವು ನಿಶ್ಚಯವಾಗಿ ಸತ್ಯವಾಗಿದೆಯಾ ಎಂದು ತಿಳಿದುಕೊಳ್ಳುವವರಾಗಿರಬೇಕು” (ಧರ್ಮೋಪದೇಶಕಾಂಡ 13:14), ಆ ಸಭಾ ಹಿರಿಯನು ಪಾಪದಲ್ಲಿ ನಡೆದಿರುವುದು ರುಜುವಾತಾದರೆ, ಮಿಕ್ಕ ಹಿರಿಯ ಸಹೋದರರು ಪಾಪದಲ್ಲಿ ನಡೆದಂತ ಮತ್ತೊಬ್ಬ ಹಿರಿಯ ಸಹೋದರನನ್ನು ಸಭೆಯ ಎಲ್ಲರ ಮುಂದೆಯೇ ಗದರಿಸಬೇಕು (1 ತಿಮೊಥೆ 5:20).

ಒಂದು ವೇಳೆ ಮಿಕ್ಕ ಹಿರಿಯ ಸಹೋದರರು ಪಾಪ ಮಾಡಿದಂತ ಮತ್ತೊಬ್ಬ ಹಿರಿಯ ಸಹೋದರನ ವಿಷಯವಾಗಿ ದಯೆ ಎಂಬ ಕುಂಟು ನೆಪವನ್ನು ಇಟ್ಟುಕೊಂಡು ಸಾರ್ವಜನಿಕವಾಗಿ ಗದರಿಸದಿದ್ದರೆ, ತಾನು ಪವಿತ್ರಾತ್ಮನ ತಿಳುವಳಿಕೆಗಿಂತ ಉನ್ನತವಾದ ತಿಳುವಳಿಕೆಯನ್ನು ಹೊಂದಿಕೊಂಡಿದ್ದೀನಿ ಅಂದುಕೊಳ್ಳುವುದಾಗಿದೆ! ಹಾಗಾಗಿ ದೀನತೆಯಲ್ಲಿ ನಡೆಯುವಂತದ್ದು ಮತ್ತು ದೇವರು ಹೇಳಿದ್ದಂತಕ್ಕೆ ವಿಧೇಯರಾಗುವುದು ಸಹ ಉತ್ತಮವಾಗಿದೆ.

ಮತ್ತು ಪ್ರಸ್ತುತ ಯಾರು ಮತ್ತೊಬ್ಬರಿಂದ ತಪ್ಪಾದ ದೂಷಣೆಯನ್ನು ಹೊರಿಸಿಕೊಂಡಿದ್ದೀರೋ, ಅಂಥವರ ಪ್ರೋತ್ಸಾಹಕ್ಕಾಗಿ ಎರಡು ವಾಗ್ದಾನಗಳನ್ನು ನಿಮಗೆ ಕೊಡಬಯಸುತ್ತೇನೆ :

”ಕರ್ತನಾದ ದೇವರು ನನಗೆ ಸಹಾಯ ಮಾಡುವನು; ಆದಕಾರಣ ನಾನು ಆಶಭಂಗ ಪಡುವುದಿಲ್ಲ; ಆದ್ದರಿಂದ ನನ್ನ ಮುಖವನ್ನು ಬೆಣಚು ಕಲ್ಲಿನಂತೆ ಮಾಡಿಕೊಂಡಿದ್ದೇನೆ; ಮತ್ತು ನಾನು ನಾಚಿಕೆ ಪಡಲಾರೆನೆಂದು ನನಗೆ ಗೊತ್ತು. ನನಗೆ ನೀತಿ ನಿರ್ಣಯಿಸುವಾತನು ಸಮೀಪದಲ್ಲಿಯೇ ಇದ್ದಾನೆ; ನನ್ನೊಂದಿಗೆ ಹೋರಾಡುವವನು ಯಾರು? ನಾವು ಒಟ್ಟಿಗೆ ನಿಂತುಕೊಳ್ಳೋಣ, ನನ್ನ ಎದುರಾಳಿ ಯಾರು? ಅವನು ನನ್ನ ಸಮೀಪಕ್ಕೆ ಬರಲಿ. ಇಗೋ, ಕರ್ತನಾದ ದೇವರು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು; ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದು ಬಿಡುವುದು. ನಿಮ್ಮೊಳಗೆ ಕರ್ತನಿಗೆ ಭಯಪಟ್ಟು, ಆತನ ಸೇವಕನ ಸ್ವರವನ್ನು ಕೇಳಿ, ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು, ತನ್ನ ದೇವರ ಮೇಲೆ ಆತುಕೊಳ್ಳಲಿ. ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವುದು ಇದೇ; ನೀವು ದು:ಖದಲ್ಲಿ ಬಿದ್ದುಕೊಂಡಿರುವಿರಿ”. (ಯೆಶಾಯ 50:7-11).

”ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯುಧಗಳು ಸಫಲವಾಗುವುದಿಲ್ಲ; ಮತ್ತು ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವಕರ ಬಾಧ್ಯತೆಯು ಮತ್ತು ಅವರ ನೀತಿಯು ನನ್ನದೇ” ಎಂದು ಕರ್ತನು ಹೇಳುತ್ತಾನೆ (ಯೆಶಾಯ 54:17).

ದೇವರು ತನ್ನ ಜನರನ್ನು ಪರೀಕ್ಷಿಸುವ ಸಲುವಾಗಿ ಸೈತಾನನನ್ನು ಅವರ ಜೀವಿತದಲ್ಲಿ ಅನುಮತಿಸುತ್ತಾನೆ, ತನ್ನ ಹೆಸರಿನಿಂದ ಕರೆಯಲ್ಪಟ್ಟ ಪ್ರತಿಯೊಬ್ಬರ ಹೃದಯದ ನಿಜವಾದ ಸ್ಥಿತಿಯನ್ನು ತೋರಿಸುವ ಸಲುವಾಗಿ ದೇವರು ಹೀಗೆ ಮಾಡುತ್ತಾರೆ. ನಾವು ಅನೇಕ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವಂತೆ ದೇವರು ನಮ್ಮನ್ನು ಅನುಮತಿಸುತ್ತಾರೆ, ಕಾರಣ, ಇಡೀ ಲೋಕದಲ್ಲಿ ಸುಳ್ಳು ಮತ್ತು ಹಗೆತನ ತುಂಬಿಕೊಂಡಿದ್ದರೂ ಸಹ, ನಾವು ಸತ್ಯದಲ್ಲಿ ಮತ್ತು ಪ್ರೀತಿಯಲ್ಲಿ ಕೊನೆಯವರೆಗೂ ನೆಲೆಗೊಳ್ಳುತ್ತೇವಾ ಎಂಬುದಾಗಿ ದೇವರು ನೋಡುತ್ತಾರೆ.

ಯಾರು ಆತ್ಮಿಕ ಕಣ್ಣನ್ನು ಹೊಂದಿದ್ದಾರೋ ಅಂಥವರು, ಯಾರು ದೈವಿಕರು ಮತ್ತು ಯಾರು ದೈವಿಕರಲ್ಲ ಎಂಬುವಂತ ಸೂಕ್ಷ್ಮಗ್ರಹಿಕೆಯನ್ನು ಹೊಂದಿರುತ್ತಾರೆ. ಮತ್ತು ಯಾರು ಒಳ್ಳೇತನದಿಂದ ಪ್ರೇರಣೆಗೊಂಡಿದ್ದಾರೆ ಹಾಗೂ ಯಾರು ಹೊಟ್ಟೆಕಿಚ್ಚು ಮತ್ತು ಹಗೆತನದಿಂದ ಪ್ರೇರಣೆಗೊಂಡಿದ್ದಾರೆ ಎಂಬುವಂತ ಸೂಕ್ಷ್ಮಗ್ರಹಿಕೆಯನ್ನು ಸಹ ಹೊಂದಿರುತ್ತಾರೆ. ಆದರೆ ಕೆಲವರು ಕುರುಡರಾಗಿಯೇ ಮತ್ತು ಕೊನೆಯವರೆಗೂ ಸೂಕ್ಷ್ಮಗ್ರಹಿಕೆ ಇಲ್ಲದವರಾಗಿಯೇ (ಫರಿಸಾಯರ ರೀತಿ) ಉಳಿದು ಬಿಡುತ್ತಾರೆ. ಬಂಗಾರವು ಬೆಂಕಿಯಲ್ಲಿ ಶುದ್ಧಿಕರಿಸಲ್ಪಡುತ್ತದೆ, ಆದರೆ ಹುಲ್ಲು ಬೂದಿಯಾಗಿ ಕ್ಷೀಣಿಸುತ್ತದೆ.