WFTW Body: 

ಧರ್ಮೋಪದೇಶಕಾಂಡ 1:13 ರಲ್ಲಿ, ಮೋಶೆಯು ಇಸ್ರಾಯೇಲ್ ಗಾಗಿ ತಾನು ಆರಿಸಿದ ಒಂದು ವರ್ಗದ ನಾಯಕರುಗಳ ಬಗ್ಗೆ ಕಾಳಜಿ ವಹಿಸಿ, ಅವರಿಗೆ ಸಲಹೆ ಕೊಡುವುದನ್ನು ನಾವು ನೋಡುತ್ತೇವೆ. ಮೋಶೆಯು ನೋಡಿದ 3 ಗುಣಮಟ್ಟಗಳನ್ನು ನೀವು ಸಹ ನೋಡಬೇಕೆಂದು ನಾನು ಬಯಸುತ್ತೇನೆ. ಅವು ಯಾವುವೇಂದರೆ - ಜ್ಞಾನ, ಸೂಕ್ಷ್ಮಗ್ರಹಿಕೆ ಮತ್ತು ಅನುಭವ.

ನಾಯಕತ್ವಕ್ಕೆ ಬೇಕಾಗಿರುವ ಮೊದಲ ಅಗತ್ಯತೆ ಏನೆಂದರೆ, ಅದು ಜ್ಞಾನವಾಗಿದೆ. ಜ್ಞಾನವು ತಿಳುವಳಿಕೆಗಿಂತ ವ್ಯತ್ಯಾಸವುಳ್ಳದ್ದಾಗಿದೆ. ತಿಳುವಳಿಕೆಯು ಅಭ್ಯಾಸಿಸುವುದರಿಂದ ಬರುತ್ತದೆ. ಯಾರು ಬುದ್ಧಿವಂತ ಮೆದುಳನ್ನು ಹೊಂದಿರುತ್ತಾರೋ, ಅವರು ತಿಳುವಳಿಕೆಯಲ್ಲಿ ಅತ್ಯುತ್ತಮರಾಗಿರುತ್ತಾರೆ. ಜ್ಞಾನವು ಅನೇಕ ಸಂಕಟಗಳಲ್ಲಿ ಹಾದುಹೋಗುವ ಮುಖಾಂತರ ಬರುತ್ತದೆ. ಯಾರು ನಂಬಿಗಸ್ಥರಾಗಿರುತ್ತಾರೋ, ಅವರು ಜ್ಞಾನದಲ್ಲಿ ಅತ್ಯುತ್ತಮರಾಗಿರುತ್ತಾರೆ. ಜೀವನದಲ್ಲಿ ಎದುರಾಗುವ ಹಲವು ವಿಭಿನ್ನ ಪರಿಸ್ಥಿತಿಗಳಿಗೆ ಬೇಕಾಗುವ ಜ್ಞಾನವು ತಿಳುವಳಿಕೆಯ ಸತತ ಪ್ರಯತ್ನದಿಂದ ಬರುವಂತದ್ದಾಗಿದೆ. ನೀವು ಸತ್ಯವೇದದ ಬಹಳಷ್ಟು ತಿಳುವಳಿಕೆಯನ್ನು ಹೊಂದಿರಬಹುದು. ಆದರೆ ದೈವಿಕ ಜ್ಞಾನ ಹೊಂದಿರುವುದಿಲ್ಲ. ಜ್ಞಾನೋಕ್ತಿಗಳ ಪುಸ್ತಕವು, ಜ್ಞಾನವನ್ನು ಹೊಂದಿರಬೇಕು ಎಂಬುದರ ಬಗ್ಗೆ ಹೆಚ್ಚಿನ ಒತ್ತನ್ನು ಕೊಟ್ಟಿದೆಯೇ ಹೊರತು, ಸತ್ಯವೇದದ ಅಂಶಗಳನ್ನು ಅರಿತಿರಬೇಕು ಎಂಬುದರ ಬಗ್ಗೆ ಒತ್ತು ಕೊಟ್ಟಿಲ್ಲ. ಆದರೆ ದೇವರನ್ನು ಅರಿಯುವುದರ ಬಗ್ಗೆ ಹೆಚ್ಚು ಒತ್ತು ಕೊಟ್ಟಿದೆ. ಸತ್ಯವೇದದ ಅರ್ಥ ಏನೆಂದರೆ, ನಾವು ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ದೇವರನ್ನು ಅರಿಯಬೇಕು ಎಂಬುದಾಗಿದೆ. ಸತ್ಯವೇದವನ್ನು ಅಭ್ಯಾಸಿಸುವಂತ ಅನೇಕ ಜನರು ತಿಳುವಳಿಕೆಯನ್ನು ಆವರಿಸಿಕೊಂಡಿರುತ್ತಾರೆ. ಆದರೆ ತಿಳುವಳಿಕೆಯ ಮರವು ಮರಣವನ್ನು ತರುತ್ತದೆ. ಸತ್ಯವೇದದ ಜ್ಞಾನ ಉಬ್ಬಿಕೊಳ್ಳುತ್ತದೆ (1 ಕೊರಿಂಥ 8:1). ಜೀವವುಳ್ಳಂತ ಮರವು, ನಾವು ಹೇಗೆ ಜೀವಿಸಬೇಕು ಮತ್ತು ಜೀವಿತದಲ್ಲಿ ಎದುರಾಗುವ ಭಿನ್ನ ಭಿನ್ನ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಯಿಸಬೇಕು ಎಂಬ ಜ್ಞಾನವನ್ನು ಕೊಡುವ ಮೂಲಕ ನಮಗೆ ಬೋಧಿಸುತ್ತದೆ. ನಾಯಕನಿಗೆ ಮೊದಲು ಜ್ಞಾನದ ಅಗತ್ಯತೆ ಇದೆ.

ನಾಯಕತ್ವಕ್ಕೆ ಬೇಕಾಗಿರುವ ಎರಡನೇ ಅಗತ್ಯತೆ ಏನೆಂದರೆ, ಅದು ಸೂಕ್ಷ್ಮಗ್ರಹಿಕೆ. ಇಂದು ನಾಯಕತ್ವದಲ್ಲಿ ಸೂಕ್ಷ್ಮಗ್ರಹಿಕೆಯು ತುಂಬಾ ಅವಶ್ಯವುಳ್ಳಂತದ್ದಾಗಿದೆ. ಒಬ್ಬ ನಾಯಕನಿಗೆ ದೈವಿಕತೆ ಮತ್ತು ಮಾನವೀಯತೆ ಎಂಬುದರ ನಡುವಿನ ವ್ಯತ್ಯಾಸವನ್ನು ಗ್ರಹಿಸಿಕೊಳ್ಳುವ ಸಾಮಾರ್ಥ್ಯವಿರಬೇಕೆ ಹೊರತು, ದೈವಿಕತೆ ಮತ್ತು ಅತಿಮಾನುಷ ಶಕ್ತಿ (ದೆವ್ವ) ಎಂಬುದರ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗ್ರಹಿಸಿಕೊಳ್ಳುವ ಸಾಮರ್ಥ್ಯ ಮಾತ್ರವಲ್ಲ. ಆದರೆ ಯಾವುದು ದೇವರದು ಮತ್ತು ಯಾವುದು ಮನುಷ್ಯನದು ಮತ್ತು ಯಾವುದು ಆತ್ಮೀಕತೆ ಮತ್ತು ಯಾವುದು ಆಧ್ಯಾತ್ಮಿಕತೆ ಎಂಬುದನ್ನು ಗ್ರಹಿಸಿಕೊಳ್ಳುವ ಸಾಮಾರ್ಥ್ಯವನ್ನು ಹೊಂದಿರಬೇಕು.

ಯೇಸು ಯಾವಾಗಲು ತನ್ನ ಹೃದಯದಿಂದ ಮಾತಾನಾಡುತ್ತಿದ್ದನು. ನಾವು ನಮ್ಮ ಹೃದಯದಿಂದ ಮಾತನಾಡುವಂತದ್ದನ್ನು ಕಲಿಯಬೇಕು

ಕೆಲವೊಮ್ಮೆ ಜನರು ಹೀಗೆ ಹೇಳುತ್ತಾರೆ, ”ಒಳ್ಳೆದು, ನಾವು ಕೇವಲ ಮನುಷ್ಯರು ಮಾತ್ರ” ಎಂದು. ಆದರೆ ಪೌಲನು, ”ಪ್ರಾಪಂಚಿಕ ಮನುಷ್ಯರಂತೆ ನಡೆಯುತ್ತಿರುವುದಕ್ಕಾಗಿ” ಕೊರಿಂಥದವರನ್ನು ಗದರಿಸುತ್ತಾನೆ (1 ಕೊರಿಂಥ 3:3). ನಾವು ಪ್ರಾಪಂಚಿಕ ಮನುಷ್ಯರಂತೆ ನಡೆಯಬಾರದು. ನಾವು ಯೇಸು ಕ್ರಿಸ್ತನ ರೀತಿಯಲ್ಲಿ ನಡೆಯಬೇಕು. ”ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆದಂತೆಯೇ ತಾನೂ ನಡೆಯುವುದಕ್ಕೆ ಬದ್ದನಾಗಿದ್ದಾನೆ” (1 ಯೋಹಾನ 2:6). ಆತ್ಮೀಕ ಮನುಷ್ಯನ ಮತ್ತು ಪ್ರಾಪಂಚಿಕ ಮನುಷ್ಯನ (ಅಂದರೆ, ಯಾರು ಪಾಪದಲ್ಲಿ ಜೀವಿಸುತ್ತಿರುವರೋ ಅವರು) ನಡುವಿನ ವ್ಯತ್ಯಾಸವನ್ನು ಗ್ರಹಿಸುವುದು ತುಂಬಾ ಸುಲಭ. ಆದರೆ ನಾವು ಆತ್ಮೀಕ ಮನುಷ್ಯ ಮತ್ತು ಆಧ್ಯಾತ್ಮಿಕ ಮನುಷ್ಯನ (ಅಂದರೆ, ಯಾರು ತಮ್ಮ ಮನುಷ್ಯನ ಸಾಮಾರ್ಥ್ಯಗಳಿಂದ ಜೀವಿಸುತ್ತಾನೋ ಅವನು) ಮಧ್ಯ ಇರುವ ವ್ಯತ್ಯಾಸವನ್ನು ಗ್ರಹಿಸಲು ಸಾಮಾರ್ಥ್ಯವುಳ್ಳವರಾಗಿರಬೇಕು. ಒಬ್ಬ ಮನುಷ್ಯನು ಮಾತನಾಡುವಂತದ್ದನ್ನು ನೀವು ಕೇಳುವಾಗ, ಅವನು ತನ್ನ ಹೃದಯದಿಂದ ಮಾತನಾಡುತ್ತಿದ್ದಾನೋ ಅಥವಾ ತನ್ನ ತಲೆಯಿಂದ ಮಾತನಾಡುತ್ತಿದ್ದಾನೋ ಎಂದು ನೀವು ಗ್ರಹಿಸಲು ಶಕ್ತರಾಗಿರಬೇಕ . ಒಬ್ಬ ಮನುಷ್ಯನ ತಲೆಯಿಂದ ಬಂದಂತದ್ದು ಮತ್ತೊಬ್ಬರ ತಲೆಗೆ ಮಾತ್ರ ಹೋಗುತ್ತದೆ. ಆದರೆ ಮನುಷ್ಯನ ಹೃದಯದಿಂದ ಬರುವಂತದ್ದು, ಮತ್ತೊಬ್ಬರ ಹೃದಯದೊಳಕ್ಕೆ ಹೋಗುತ್ತದೆ. ಯೇಸು ಯಾವಾಗಲು ತನ್ನ ಹೃದಯದಿಂದ ಮಾತಾನಾಡುತ್ತಿದ್ದನು. ನಾವು ನಮ್ಮ ಹೃದಯದಿಂದ ಮಾತನಾಡುವಂತದ್ದನ್ನು ಕಲಿಯಬೇಕು. ಸತ್ಯವೇದ ನಮ್ಮ ಹೃದಯಕ್ಕಾಗಿ ಬರೆಯಲ್ಪಟ್ಟಿದೆಯೇ ಹೊರತು ನಮ್ಮ ತಲೆಗಾಗಿ ಅಲ್ಲ. ಕೀರ್ತನೆಗಾರನು ಈ ರೀತಿಯಾಗಿ ಹೇಳುತ್ತಾನೆ ”ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ” (ಕೀರ್ತನೆಗಳು 119:11) - (ಕೆ.ಜೆ.ವಿ ಭಾಷಾಂತರ)

ನಾಯಕತ್ವಕ್ಕೆ ಬೇಕಾಗಿರುವ ಮೂರನೇಯ ಅಗತ್ಯತೆ ಏನೆಂದರೆ, ಅದು ಅನುಭವ. ನೀವು ಯೌವನಸ್ಥರಾಗಿರುವಾಗಲೇ ಹೆಚ್ಚು ಜ್ಞಾನವನ್ನು ಪಡೆದುಕೊಂಡಿರುತ್ತೀರಿ. ನೀವು ಸೂಕ್ಷ್ಮ ಗ್ರಹಿಕೆಯನ್ನು ಹೊಂದಿರುತ್ತೀರಿ. ಆದರೆ ನೀವು ಒಬ್ಬ ದೈವಿಕ ಮನುಷ್ಯರಾಗಲು ಅನುಭವದ ಅಗತ್ಯತೆ ಇದೆ ಮತ್ತು ಅದು ಸಮಯ ಹಿಡಿಯುತ್ತದೆ. ನೀವು ನಾನಾ ವಿಧವಾದ ಸಂಕಟಗಳ ಮಧ್ಯ ಹಾದು ಹೋಗುವ ಮುಖಾಂತರ ಮತ್ತು ದೇವರ ಬಲವನ್ನು ರುಚಿಸುವ ಮುಖಾಂತರ ಹಾಗೂ ಆ ಸಂಕಟಗಳಿಂದ ಪಡೆದುಕೊಳ್ಳುವ ಪ್ರೋತ್ಸಾಹ, ಸಂತೈಸುವಿಕೆಗಳ ಮುಖಾಂತರ ಅನುಭವ ಬರುತ್ತದೆ. ಸಂಕಟಗಳ ಮುಖಾಂತರ ನಾವು ಪಡೆದುಕೊಳ್ಳುವ ಬಲವು ನಮಗೆ ಸೇವೆಯನ್ನು ಕೊಡುತ್ತದೆ, ಆ ಸೇವೆಯನ್ನು ನಾವು ಮತ್ತೊಬ್ಬರಿಗೆ ಕೊಡಲು ಅನುಕೂಲವಾಗುತ್ತದೆ. ಮುಖದಾಕ್ಷಿಣ್ಯ ಅಥವಾ ಪಕ್ಷಪಾತ ಮಾಡದಂತೆ ಮೋಶೆಯು ನ್ಯಾಯಸ್ಥಾಪಕರಿಗೆ ಎಚ್ಚರಿಸುತ್ತಾನೆ. ಇದರ ಹೊರತಾಗಿ ಅಧಿಕರನ್ನೂ ಅಲ್ಪರನ್ನೂ ಸಮನಾಗಿ ತಿಳಿಯಬೇಕೆಂದು ಹೇಳುತ್ತಾನೆ (ಧರ್ಮೋಪದೇಶಕಾಂಡ 1:17) ನಾಯಕರುಗಳಿಗೆ ಇದು ತುಂಬಾ ಮುಖ್ಯವಾಗಿ ಬೇಕಾಗಿರುವಂತದ್ದು. ಐಶ್ವರ್ಯವಂತರಿಗೆ ಮುಖ ಸ್ತುತಿ ಮಾಡಬಾರದು.

ನಾನು ಯೌವನಸ್ಥ ವಿಶ್ವಾಸಿಯಾಗಿದ್ದಾಗ, ನಾನು ಹೋದಂತ ಪ್ರತಿ ಸಭೆಯಲ್ಲಿಯೂ, ಸಮಾಜದಲ್ಲಿ ಒಬ್ಬ ಪ್ರಭಾವಶೀಲ ವ್ಯಕ್ತಿಯನ್ನು, ಸರ್ಕಾರಿ ಅಧಿಕಾರಿಯನ್ನು ಅಥವಾ ಒಬ್ಬ ಶ್ರೀಮಂತ ವ್ಯವಹಾರಸ್ಥನು, ಇಂತವರು ಯಾವಾಗಲೂ ಸಭೆಯ ಫಲಕದ ಮೇಲೆ ಇರುತ್ತಾರೆ. ಈ ರೀತಿಯಾಗಿ ಯಾಕಿದೆ ಎಂದು ನಾನು ಆಶ್ಚರ್ಯಗೊಂಡೆ. ನಿಶ್ಚಯವಾಗಿ ಲೋಕದಲ್ಲಿರುವಂತ ದೊಡ್ಡ ಮನುಷ್ಯನು ಆತ್ಮೀಕ ಮನುಷ್ಯನಾಗಿರುವುದಿಲ್ಲ. ಸತ್ಯವೇದ ಸಹ ಹೀಗೆ ಹೇಳುತ್ತದೆ, ”ಲೌಕಿಕ ವಿಷಯದಲ್ಲಿ ಬಡವರಾಗಿರುವವರನ್ನು ಆದುಕೊಂಡು ಅವರು ನಂಬಿಕೆಯಲ್ಲಿ ಐಶ್ವರ್ಯವಂತರಾಗಿರಬೇಕೆಂದು ಅವರನ್ನು ನೇಮಿಸಿದ್ದಾನೆ”. (ಯಾಕೋಬ 2:5). ಹಾಗಾಗಿ ಸಭೆಯಲ್ಲಿನ ಜನರು ನಿಶ್ಚಯವಾಗಿ ಲೋಕದ ಪ್ರಭಾವಿಗಳನ್ನು ಆರಿಸಿಕೊಂಡಿದ್ದಾರೆ. ಈ ರೀತಿಯ ಎಲ್ಲಾ ಸಭೆಗಳು ಆದಷ್ಟು ಬೇಗ ಹಿಂಜಾರಿ ಹೋದರೆ ಆಶ್ಚರ್ಯವಿಲ್ಲ. ಅವರು ತುಂಬಾ ಪಕ್ಷಪಾತವನ್ನು ತೋರಿಸಿರುತ್ತಾರೆ. ಪಕ್ಷಪಾತವನ್ನು ನಾವು ವಿರೋಧಿಸಬೇಕು ಎಂದು ಯಾಕೋಬ 2 ರಲ್ಲಿ ಎಚ್ಚರಿಸಲ್ಪಟ್ಟಿದ್ದೇವೆ. ದೇವರು ನನ್ನ ಶ್ರಮೆಗಳ ಮೂಲಕ ತನ್ನ ಸಭೆಯನ್ನು ಕಟ್ಟಿದರೆ, ಯಾರು ಆತ್ಮೀಕ ಮನುಷ್ಯನಾಗಿರುತ್ತಾರೋ, ಅಂತವರನ್ನು ಸಭಾ ಹಿರಿಯರನ್ನಾಗಿ ನೇಮಿಸುತ್ತೇನೆಯೇ ಹೊರತು, ಪ್ರಭಾಶಾಲಿ ಮನುಷ್ಯನನ್ನು ನೇಮಿಸುವುದಿಲ್ಲ ಎಂಬುದಾಗಿ ನಾನು ನಿರ್ಧರಿಸಿದೆ. ನಮ್ಮ ಮೂಲಕ ದೇವರು ಕಟ್ಟಿದ ಎಲ್ಲಾ ಸಭೆಗಳಲ್ಲಿ ನಾವು ಇದನ್ನೇ ಪಾಲಿಸಿದ್ದೀವಿ.

”ಮನುಷ್ಯರನ್ನು ನೋಡಿ ಹೆದರಬೇಡಿರಿ” ಎಂದು ಮೋಶೆ ನಾಯಕರುಗಳಿಗೆ ಹೇಳಿದನು (ಧರ್ಮೋಪದೇಶಕಾಂಡ 1:17). ನೀವು ನಾಯಕನಾಗಬೇಕಾದರೆ, ಯಾವುದೇ ಮನುಷ್ಯನಿಗೆ ಹೆದರಬಾರದು.