ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಕಳೆದ ಕೆಲವು ವಾರಗಳಿಂದ ಶ್ರೇಷ್ಠ ಆಜ್ಞೆಯನ್ನು ಪರಿಪೂರ್ಣವಾಗಿ ಪಾಲಿಸುವುದೆಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಜನಾಂಗಗಳಿಗೆ ಹೋಗಿ, ಶಿಷ್ಯರನ್ನಾಗಿ ಮಾಡಿರಿ ಎಂದು ಮತ್ತಾಯ 28:19ರಲ್ಲಿ ಯೇಸು ಹೇಳುತ್ತಾರೆ. ಆದ್ದರಿಂದ ನಾವು ಲೂಕ 14ರಲ್ಲಿ ವಿವರಿಸಿದ ಶಿಷ್ಯತ್ವದ ಷರತ್ತುಗಳನ್ನು ಪರಿಶೀಲಿಸಿದ್ದೇವೆ.

ಮೊದಲನೆಯದಾಗಿ, ಈ ಭೂಮಿಯ ಮೇಲಿನ ಯಾವುದೇ ಮನುಷ್ಯನಿಗಿಂತ ಕ್ರಿಸ್ತನನ್ನು ಹೆಚ್ಚಾಗಿ ಪ್ರೀತಿಸುವುದು. ಕೀರ್ತನೆ 73:11ರಲ್ಲಿರುವ ವಾಕ್ಯವು ನಿಜವಾದ ಶಿಷ್ಯನ ಅರಿಕೆಯಾಗಿದೆ - "ಪರಲೋಕದಲ್ಲಿ ನನಗೆ ನೀನಲ್ಲದೆ ನನಗೆ ಮತ್ತಾರಿದ್ದಾರೆ? ಇಹಲೋಕದಲ್ಲಿ, ನಿನ್ನನ್ನಲ್ಲದೆ, ಇನ್ಯಾವುದನ್ನೂ, ಇನ್ಯಾರನ್ನೂ ನಾನು ಬಯಸುವುದಿಲ್ಲ".ಕ್ರಿಸ್ತನಿಗಿಂತ ಹೆಚ್ಚಾಗಿ ನಾನು ಭೂಮಿಯಲ್ಲಿ ಯಾರನ್ನೂ ಬಯಸುವುದಿಲ್ಲ.

ಎರಡನೆಯದಾಗಿ, ನನ್ನ ಸ್ವಂತ ಚಿತ್ತ ಮತ್ತು ನನ್ನ ಸ್ವಂತ ಆಯ್ಕೆಗಿಂತ ಹೆಚ್ಚಾಗಿ ಕ್ರಿಸ್ತನನ್ನು ಪ್ರೀತಿಸುವುದು. "ಕರ್ತನೇ, ಯಾವುದೇ ವಿಷಯದಲ್ಲಿ ನಾನು ನನ್ನ ಆಯ್ಕೆಯನ್ನು ಬಯಸುವುದಿಲ್ಲ. ನನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ - ಅಂದರೆ, ನಾನು ನನ್ನ ಸಮಯವನ್ನು ಕಳೆಯುವ ರೀತಿ, ನನ್ನ ಹಣ, ನನ್ನ ಶಕ್ತಿ, ನನ್ನ ಜೀವನ ಮತ್ತು ನನ್ನ ಮಹತ್ವಾಕಾಂಕ್ಷೆ - ಪ್ರತಿಯೊಂದರಲ್ಲೂ ನಿಮ್ಮ ಚಿತ್ತವನ್ನು ನಾನು ಬಯಸುತ್ತೇನೆ. ನನ್ನ ಭವಿಷ್ಯವು ಯೇಸುವಿನ ಪಾದದ ಬಳಿ ಇಡಲ್ಪಟ್ಟಿದೆ".

ಮೂರನೆಯದಾಗಿ, ಭೂಮಿಯ ಮೇಲಿನ ಎಲ್ಲವನ್ನೂ ಸಡಿಲವಾಗಿ ಹಿಡಿದಿಟ್ಟುಕೊಳ್ಳುವುದು; ಏಕೆಂದರೆ ಕ್ರಿಸ್ತನೇ ನನಗೆ ಎಲ್ಲವುಗಳಿಗಿಂತ ಹೆಚ್ಚಾಗಿದ್ದಾರೆ. ಈ ಸಂಗತಿಗಳಲ್ಲಿ ಕರ್ತನು ಒಂದು ವೇಳೆ ಕೆಲವನ್ನು ತೆಗೆದುಕೊಂಡಲ್ಲಿ ಅಥವಾ ಅದರಲ್ಲಿ ಸ್ವಲ್ಪವನ್ನು ನಾನು ಕಳೆದುಕೊಂಡಲ್ಲಿ, ಯೋಬನು 1:21ರಲ್ಲಿ ಯೋಬ ಹೇಳುವಂತೆ ಈ ರೀತಿ ನಾನು ಹೇಳುತ್ತೇನೆ, "ಕರ್ತರು ಕೊಟ್ಟರು, ಕರ್ತರು ತೆಗೆದುಕೊಂಡರು, ಕರ್ತರ ನಾಮಕ್ಕೆ ಸ್ತೋತ್ರವಾಗಲಿ".ಅದು ನಿಜವಾದ ಶಿಷ್ಯನ ಮನೋಭಾವ.

ಆದ್ದರಿಂದ ಮತ್ತಾಯ 28:19ರಲ್ಲಿ ಏನು ಹೇಳಲ್ಪಟ್ಟಿದೆ ಎಂಬುದನ್ನು ನಾವು ಪ್ರಮುಖವಾಗಿ ಒತ್ತಿ ಹೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲಾ ಜನಾಂಗಗಳಿಗೆ ಹೋಗಿ, ಶಿಷ್ಯರನ್ನು ಮಾಡಬೇಕು.

ಲೂಕ 14ರಲ್ಲಿಹೇಳಿರುವ ಪ್ರಕಾರ, ಒಬ್ಬ ವ್ಯಕ್ತಿಯು ಶಿಷ್ಯತ್ವದ ಈ ಮೂರೂ ಷರತ್ತುಗಳನ್ನು ನೆರವೇರಿಸದಿದ್ದರೆ, ಆತನು ಶಿಷ್ಯನಲ್ಲ.

ಯೇಸು ತನ್ನ ಅಪೊಸ್ತಲರಿಗೆ ಮತ್ತಾಯ 28:19 ರಲ್ಲಿ ಎಲ್ಲಾ ಜನಾಂಗಗಳಿಗೆ ಹೋಗಿ ಶಿಷ್ಯರನ್ನು ಮಾಡಬೇಕೆಂದು ಹೇಳಿದಾಗ, ಕ್ರಿಸ್ತನು ತಮ್ಮ ಪಾಪಗಳನ್ನು ಕ್ಷಮಿಸುವವನಾಗಿರುವನು ಎಂದು ಅವರು ತಿಳಿದಿರುವ ಪ್ರಕಾರ ಮಾತ್ರವಲ್ಲದೆ, ತಮ್ಮ ಕರ್ತನನ್ನಾಗಿಯೂ ಕೂಡ ಒಪ್ಪಿಕೊಳ್ಳುವಂತ ಸ್ಥಿತಿಗೆ ಅವರನ್ನು ನಾವು ಕರೆತರಬೇಕು ಎಂದು ಯೇಸು ಹೇಳಿರುವುದರ ಅರ್ಥವು ಇದಾಗಿದೆ. ಅದರ ಅರ್ಥ, ಭೂಮಿಯ ಮೇಲಿರುವ ಎಲ್ಲರಿಗಿಂತ, ನಮ್ಮ ಸ್ವಂತ ಜೀವಿತಕ್ಕಿಂತ, ನಮ್ಮ ಸ್ವಂತ ಚಿತ್ತಕ್ಕಿಂತ ಮತ್ತು ನಾವು ನಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರತಿಯೊಂದಕ್ಕಿಂತಲೂ ಯೇಸುವನ್ನು ಹೆಚ್ಚು ಪ್ರೀತಿಸಬೇಕು. ಯೇಸು ನಮಗೆ ಇವೆಲ್ಲಕ್ಕಿಂತ ಹೆಚ್ಚು ಮುಖ್ಯವಾಗಿರಬೇಕು.

ಸುವಾರ್ತೆಯನ್ನು ಬೋಧಿಸುವಂತ ಕ್ರೈಸ್ತ ಮಿಷನರಿಗಳು ಮತ್ತು ಸುವಾರ್ತಾ ಪ್ರಚಾರಕರು ಶ್ರೇಷ್ಠ ಆಜ್ಞೆಯ ದ್ವಿತೀಯಾರ್ಧ ಭಾಗವನ್ನು ನೆರವೇರಿಸಿದ್ದಾರೆಂದು ನೀವು ಹೇಳಬಲ್ಲಿರಾ? ನಾನು ಇಲ್ಲ ಎಂದು ಹೇಳುತ್ತೇನೆ. 99% ರಷ್ಟು ಮಂದಿ ಮಾರ್ಕ 16:15 ಅನ್ನು ಮತ್ತು 1% ರಷ್ಟು ಮಂದಿ ಮತ್ತಾಯ 28:19-20ಅನ್ನು ನೆರವೇರಿಸುವ ದೃಷ್ಟಾಂತವನ್ನು ನಾನು ಏಕೆ ಉಪಯೋಗಿಸಿದ್ದೇನೆಂದು ನೀವು ನೋಡುತ್ತೀರಾ? ತೊಂಬತ್ತೊಂಬತ್ತು ಜನರು ಮರದ ದಿಮ್ಮಿಯ ಒಂದು ತುದಿಯನ್ನು ಹಿಡಿದರೆ ಇನ್ನೊಂದು ತುದಿಯನ್ನು ಒಬ್ಬ ವ್ಯಕ್ತಿಯು ಮಾತ್ರ ಹಿಡಿದಿದ್ದಾನೆ? ಅದಕ್ಕಾಗಿ, ಕರ್ತರು ನನ್ನನ್ನು, ಆ ಮತ್ತೊಂದು ತುದಿಯನ್ನು ಹಿಡಿದಿರುವ ಆ ಒಬ್ಬ ವ್ಯಕ್ತಿಗೆ ಸಹಾಯ ಮಾಡುವುದಕ್ಕಾಗಿ ಕರೆದರು ಎಂಬುದನ್ನು ನಾನು ಕಂಡುಕೊಂಡೆ. ಇದು ಇಂದು ಬಹಳ ಅಗತ್ಯವಾಗಿದೆ ಮತ್ತು ಕ್ರೈಸ್ತತ್ವವು ಅನೇಕ ರಾಷ್ಟ್ರಗಳಲ್ಲಿ ಕೆಟ್ಟ ಸಾಕ್ಷಿಯನ್ನು ಹೊಂದಲು ಇದು ಕೂಡ ಒಂದು ಕಾರಣವಾಗಿದೆ ಎಂದು ನಾನು ನಂಬುತ್ತೇನೆ.

ಹೊಸದಾಗಿ ಹುಟ್ಟಿದ ಕ್ರೈಸ್ತರು ಕರ್ತನ ಹೆಸರಿಗೆ ಹೇಗೆ ಅಪಮಾನ ತಂದಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಏಕೆ? ಏಕೆಂದರೆ ಅವರು ಕೇವಲ ಪರಿವರ್ತನೆ ಹೊಂದಿದ್ದಾರೆ; ಅವರು ಶಿಷ್ಯರಾಗಿಲ್ಲ. ಅವರು ತಮ್ಮ ಸ್ವಂತ ಚಿತ್ತವನ್ನು ಬಿಟ್ಟುಕೊಟ್ಟಿಲ್ಲ ಅಥವಾ ಅವರು ತಮ್ಮ ಬಳಿ ಇರುವ ವಸ್ತುಗಳ ಮೇಲಿನ ನಂಟಿನಿಂದ ಹೊರಬಂದಿಲ್ಲ. ಹಾಗಾಗಿ ಅಂತಿಮ ಫಲಿತಾಂಶವು ಯೇಸು ಲೂಕ 14ರಲ್ಲಿಹೇಳಿದಂತೆ, ಅವರು ಅಸ್ತಿವಾರವನ್ನು ಹಾಕಿದರೂ, ಕಟ್ಟಡವನ್ನು ಪೂರ್ಣಗೊಳಿಸಲು ಸಾಕಷ್ಟಿಲ್ಲದ ಜನರಂತೆ ಇದ್ದಾರೆ.

ಇಡೀ ಶಿಷ್ಯತ್ವದ ಬಗ್ಗೆ ಲೂಕ 14ರಲ್ಲಿಇರುವ ಮಧ್ಯ ಭಾಗದಲ್ಲಿ, ಗೋಪುರವನ್ನು ಕಟ್ಟಬೇಕಿಂದಿರುವ ಒಬ್ಬ ಮನುಷ್ಯನ ಬಗ್ಗೆ ಯೇಸುವು ಮಾತನಾಡಿರುವುದು, ಇಡೀ ಕ್ರೈಸ್ತ ಜೀವಿತದ ಒಂದು ಚಿತ್ರಣವಾಗಿದೆ. ಅವನು ಅಸ್ತಿವಾರವನ್ನು ಮುಗಿಸುವ ಹಂತಕ್ಕೆ ಬಂದಾಗ, ಅದನ್ನು ಪೂರ್ಣಗೊಳಿಸಲು ಅವನಲ್ಲಿ ಸಾಕಷ್ಟು ಇರಲಿಲ್ಲವೆಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ. ಶಿಷ್ಯತ್ವದ ಈ ಮೂರೂ ಷರತ್ತುಗಳ ಸನ್ನಿವೇಶದಲ್ಲಿ ಅದನ್ನು ಅರ್ಥಮಾಡಿಕೊಳ್ಳುವುದಾದರೆ, ಅವನು ಆ ಗೋಪುರವನ್ನು ಪೂರ್ಣಗೊಳಿಸಲು ಬೆಲೆಯನ್ನು ಕಟ್ಟಲು ಇಷ್ಟಪಡದಿರಬಹುದು. ಬಹುಶ: ಅವನ ಬಳಿ ಹಣ ಇದ್ದಿರಬಹುದು. ಆದರೆ ಅವನು, "ನನಗೆ ಅದನ್ನು ಪೂರ್ಣಗೊಳಿಸಲು ಇಷ್ಟವಿಲ್ಲ" ಎಂಬುದಾಗಿ ಹೇಳುತ್ತಿರಬಹುದು.

ಅಸ್ತಿವಾರವೇನೆಂದರೆ, ಒಮ್ಮೆ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು, ನಮಗೆ ಪವಿತ್ರಾತ್ಮನನ್ನು ಕೊಡಲ್ಪಟ್ಟು, ನಾವು ದೇವರ ಮಕ್ಕಳಾಗುವುದಾಗಿದೆ. ಆದರೆ, ಕ್ರೈಸ್ತ ಜೀವಿತವು ಆಷ್ಟೇ ಆಗಿದೆಯೇ? ಆದರೆ, ಯೇಸುವು ಹೇಳಿದ ಹಾಗೆ, ಅದು ಕೇವಲ ಅಸ್ತಿವಾರವಲ್ಲ, ಅದು ಗೋಪುರವಾಗಿರಬೇಕು. ಗೋಪುರವನ್ನು ಪೂರ್ಣಗೊಳಿಸದ ವ್ಯಕ್ತಿಯು ಪರಿಹಾಸ್ಯಕ್ಕೆ ಗುರಿಯಾಗುತ್ತಾನೆ ಎಂದು ವಚನ 29ರಲ್ಲಿಹೇಳಲ್ಪಟ್ಟಿದೆ ಮತ್ತು ಕ್ರೈಸ್ತ ಜೀವಿತದಲ್ಲಿ ಕೇವಲ ಅಸ್ತಿವಾರವನ್ನು ಹಾಕಿ, ಅದೇ ಕ್ರೈಸ್ತತ್ವದ ಪೂರ್ಣ ಉದ್ದೇಶವೆಂಬುದಾಗಿ ತಿಳಿದಿರುವ ಕ್ರೈಸ್ತರನ್ನು ಪರಲೋಕದಲ್ಲಿರುವ ದೇವದೂತರು ನೋಡಿ ಆಶ್ಚರ್ಯಪಡುತ್ತಾರೆ.

ಆದ್ದರಿಂದ ಮತ್ತಾಯ 28:19ರಲ್ಲಿ ಏನು ಹೇಳಲ್ಪಟ್ಟಿದೆ ಎಂಬುದನ್ನು ನಾವು ಪ್ರಮುಖವಾಗಿ ಒತ್ತಿ ಹೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲಾ ಜನಾಂಗಗಳಿಗೆ ಹೋಗಿ, ಶಿಷ್ಯರನ್ನು ಮಾಡಬೇಕು. ಈ ದಿನ ನೀವು ಯಾವ ದೇಶದಲ್ಲಿ ಇದ್ದರೂ, ಒಂದು ವೇಳೆ ನೀವು ಬೋಧಿಸುತ್ತಿದ್ದರೆ, ಅಲ್ಲಿ ನೀವು ಶಿಷ್ಯರನ್ನು ಮಾಡಬೇಕು.

ಯೇಸುವು ಶ್ರೇಷ್ಠ ಆಜ್ಞೆಯ ದ್ವಿತೀಯಾರ್ಧ ಭಾಗದಲ್ಲಿ, "ಇಗೋ, ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ"ಎಂಬುದಾಗಿ ಹೇಳುತ್ತಾರೆ. ಇದರ ಸಾರಾಂಶವೇನೆಂದರೆ, "ಒಂದು ವೇಳೆ ನೀವು ಇದನ್ನು ಮಾಡಿದಲ್ಲಿ, ಅಂದರೆ, ನೀವು ಎಲ್ಲಾ ಜನಾಂಗಗಳಿಗೆ ಹೋಗಿ, ಅಲ್ಲಿ ಶಿಷ್ಯರನ್ನು ಮಾಡುತ್ತಿದ್ದರೆ, ನಾನು ಯಾವಾಗಲೂ ನಿಮ್ಮೊಂದಿಗೆ ಇರುವೆನು". ನಾವು ವಚನದಲ್ಲಿರುವ ಷರತ್ತನ್ನು ಪೂರ್ಣಗೊಳಿಸದ ಹೊರತು, ಈ ವಿಸ್ಮಯಕಾರಿ ವಾಗ್ದಾನವನ್ನು ನಮ್ಮ ಹಕ್ಕಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಒಂದು ವೇಳೆ ನಾವು ಶಿಷ್ಯರನ್ನು ಮಾಡುತ್ತಿದ್ದರೆ, ಇದು ಎಂಥಹ ಅದ್ಭುತಕರವಾದ ಭರವಸೆ: ಒಂದು ವೇಳೆ ನಾನು ಪ್ರಪಂಚದ ಎಲ್ಲಾ ಕಡೆಗೂ ಹೋಗಿ ದೇವರ ವಾಕ್ಯವನ್ನು ಬೋಧಿಸಿ, ಶಿಷ್ಯರನ್ನು ಮಾಡುವುದಾಗಿ ನಿಶ್ಚಯಿಸಿಕೊಂಡರೆ, ಕರ್ತನು ಯಾವಾಗಲೂ ನಮ್ಮೊಂದಿಗೆ ಇರುತ್ತಾನೆ.