WFTW Body: 

ಜ್ಞಾನೋಕ್ತಿಗಳು 8:1,27 ರಲ್ಲಿ, ವರನು ”ಜ್ಞಾನ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ ಮತ್ತು ಮುಂದಿನ ಅಧ್ಯಾಯದಲ್ಲಿ ವಧುವು ಸಹ ”ಜ್ಞಾನ” ಎಂಬುದಾಗಿ ಕರೆಯಲ್ಪಟ್ಟಿದ್ದಾಳೆ (ಜ್ಞಾನೋಕ್ತಿಗಳು 9:1). ಏಕೆಂದರೆ ವಧುವು ವರನ ಜೊತೆ ಪ್ರತಿಯೊಂದು ಮಾರ್ಗದಲ್ಲಿ ಇರುವಂತವಳಾಗಿದ್ದಾಳೆ ಮತ್ತು ಆಕೆಯ ಹಣೆಯಲ್ಲಿ ಆತನ ಹೆಸರು (ಜ್ಞಾನ) ಎಂಬುದಾಗಿ ಬರೆಯಲ್ಪಟ್ಟಿದೆ - ಆಕೆಯ ವರನು ಜಯಗಳಿಸಿದ ಹಾಗೇ ಆಕೆಯು ಜಯಗಳಿಸಬೇಕು ಎಂಬುದು ಅದರ ಅರ್ಥವಾಗಿದೆ (ಪ್ರಕಟನೆ 3:12, 21 ಮತ್ತು 14:1). ಜ್ಞಾನೋಕ್ತಿಗಳು 9ನೇ ಅಧ್ಯಾಯದಲ್ಲಿ ವ್ಯೇಶ್ಯೆ ಮತ್ತು ವಧುವು ತದ್ವಿರುದ್ದವಾಗಿರುವುದನ್ನು ನಾವು ನೋಡುತ್ತೀವಿ. ಈ ಅಧ್ಯಾಯದ ಮೊದಲ 12 ವಚನಗಳು, ವಧುವು ಎಲ್ಲಾ ಮೂಢರನ್ನು ಅವರ ಮೂಢತನ ದಿಂದ ತಿರುಗಿಕೊಳ್ಳುವಂತೆ ಮತ್ತು ಅವರ ಪಾಪವುಳ್ಳಂತ ಸಹವಾಸವನ್ನು ಬಿಡುವಂತೆ (ವಚನ ೬) ತಿಳಿಸುತ್ತದೆ ಹಾಗೂ ವಧುವು ಜ್ಞಾನದ ಮೂಲವಾದ ದೇವರ ಭಯವನ್ನು ಕಲಿಯುವಂತೆ ಆಹ್ವಾನಿಸುತ್ತಾಳೆ (ವಚನ 10). ಈ ಅಧ್ಯಾಯದ ಕೊನೆಯ 6 ವಚನಗಳು, ವ್ಯೇಶ್ಯೆಯ ಬಗ್ಗೆ ಓದುತ್ತೇವೆ. ಅನೇಕರು ವ್ಯೇಶ್ಯೆಯ ಮಾತಿಗೆ ಓಗೊಟ್ಟು, ಆತ್ಮೀಕ ಮರಣದಲ್ಲಿ ಕೊನೆಗಾಣುತ್ತಾರೆ (ವಚನ 18). ವಧುವು (ಜ್ಞಾನ) ಏಳು ಕಂಬಗಳ ಮೇಲೆ ತನ್ನ ಮನೆಯನ್ನು ಕಟ್ಟುವುದರ ಬಗ್ಗೆ ನಾವು ಅಲ್ಲಿ ಓದುತ್ತೇವೆ. ಯಾಕೋಬ 3:17 ರಲ್ಲಿ ಆ ಏಳು ಕಂಬಗಳ ಪಟ್ಟಿಯು ನಮಗೆ ದೊರೆಯುತ್ತದೆ ಮತ್ತು ನಿಜವಾದ ಸಭೆಯು ಸಹ ಈ ಕಂಬಗಳ ಮೇಲೆಯೆ ಕಟ್ಟಲ್ಪಟ್ಟಿರುತ್ತದೆ. ಈ ಗುಣಲಕ್ಷಣಗಳಿಂದ ನಾವು ಕ್ರಿಸ್ತನ ವಧುವನ್ನು ಗುರುತಿಸಬಹುದು :

1. ಶುದ್ಧತೆ :

ನಿಜವಾದ ಸಭೆಯಲ್ಲಿ ಮೊದಲ ಮತ್ತು ಬಹು ಮುಖ್ಯವಾದ ಕಂಬ ಶುದ್ಧತೆಯಾಗಿದೆ. ಈ ಶುದ್ಧತೆಯು ಹೊರಗಡೆ ತೋರಿಸುವಂತ ಸುಳ್ಳಾದ ಶುದ್ಧತೆಯಲ್ಲ. ಇಲ್ಲ. ಇದು ಸ್ಥಿರವಾದ ಶುದ್ಧತೆಯಾಗಿದೆ. ಅದು ಹೃದಯದ ಶುದ್ಧತೆಯಾಗಿದೆ ಮತ್ತು ಆ ಶುದ್ಧತೆಯು ಹೃದಯದ ಅಂತರಾಳದಲ್ಲಿನ ದೇವರ ಭಯದ ಬೀಜದಿಂದ ಬೆಳೆಯುವಂತದ್ದಾಗಿದೆ. ಇದು ಬುದ್ಧಿವಂತ ಮೆದುಳಿನಿಂದ ಅಲ್ಲ, ಆದರೆ ಶುದ್ಧ ಹೃದಯದಿಂದ ಕ್ರಿಸ್ತನ ಸಭೆಯು ಕಟ್ಟಲ್ಪಡುತ್ತದೆ. ದೇವರ ಮೇಲೆ ಮತ್ತು ದೇವರ ಮಾರ್ಗಗಳ ಮೇಲೆ ಆತ್ಮೀಕ ಪ್ರಕಟನೆಯನ್ನು ಹೊಂದಿಲ್ಲವೆಂದರೆ ನಾವು ಸಭೆಯನ್ನು ಕಟ್ಟಲು ಸಾಧ್ಯವಿಲ್ಲ - ಏಕೆಂದರೆ ಹೃದಯದಲ್ಲಿ ಶುದ್ಧತೆಯನ್ನು ಹೊಂದುವವರು ಮಾತ್ರ ತಮ್ಮ ಹೃದಯದಲ್ಲಿ ದೇವರನ್ನು ನೋಡುತ್ತಾರೆ (ಮತ್ತಾಯ 5:8).

2. ಸಮಾಧಾನ :

ನೀತಿಯು ಮತ್ತು ಸಮಾಧಾನವು ಯಾವಾಗಲೂ ಒಟ್ಟಾಗಿ ಹೋಗುತ್ತವೆ. ಅವುಗಳು ಒಂದು ರೀತಿ ಅವಳಿ-ಜವಳಿ ಇದ್ದ ಹಾಗೇ. ದೇವರ ರಾಜ್ಯವು ನೀತಿಯು ಮತ್ತು ಸಮಾಧಾನವು ಆಗಿದೆ (ರೋಮ 14:17). ನಿಜವಾದ ಜ್ಞಾನವು ಎಂದಿಗೂ ವಾಗ್ವಾದವನ್ನಾಗಲಿ ಅಥವಾ ಜಗಳವನ್ನಾಗಲಿ ಮಾಡಲು ಹೋಗುವುದಿಲ್ಲ. ಅದು ಶ್ರಮ ಪಡುವಂತದ್ದಾಗಿರುವುದಿಲ್ಲ. ಅದು ಎಲ್ಲರೊಟ್ಟಿಗೂ ಎಷ್ಟು ಸಾಧ್ಯನೋ ಅಷ್ಟು ಸೌಹಾರ್ಧತೆಯಿಂದ ಸಂಬಂಧವನ್ನು ಕಾಪಾಡಿಕೊಳ್ಳುತ್ತದೆ. ದೈವಿಕ ಜ್ಞಾನದಿಂದ ಯಾರು ತುಂಬಿಸಲ್ಪಟ್ಟಿರುತ್ತಾರೋ, ಅಂಥವರು ಜಗಳವಾಡುವುದು ಅಸಾಧ್ಯವಾಗಿರುತ್ತದೆ, ಇಂತಹ ಮನುಷ್ಯನು ಸಮಾಧಾನವುಳ್ಳಂತ ಮನುಷ್ಯನಾಗಿರುತ್ತಾನೆ. ಆತನು ಧೃಢವಾಗಿರುತ್ತಾನೆ ಮತ್ತು ರಾಜಿಯಾಗುವಂತವರಿಂದ ದ್ವೇಷಿಸಲ್ಪಟ್ಟಿರುತ್ತಾನೆ. ಆದರೆ ಆತನು ಯಾವಾಗಲೂ ಸಮಾಧಾನದಿಂದ ಕೂಡಿರುತ್ತಾನೆ. ಯೇಸು ತನ್ನ ಶಿಷ್ಯಂದಿರಿಗೆ ಈ ರೀತಿಯಾಗಿ ಹೇಳಿದರು - ನೀವು ಸುವಾರ್ತೆ ಸಾರಲು ಪ್ರಯಾಣಿಸುವಾಗ, ”ಸಮಾಧಾನದಿಂದ ಇರುವಂತ ಮನುಷ್ಯರ” ಮನೆಯಲ್ಲಿ ಮಾತ್ರ ಉಳಿದುಕೊಳ್ಳಬೇಕು. (ಲೂಕ 10:5-7) . ದೇವರ ಮನೆಯನ್ನು ಕಟ್ಟಬೇಕೆಂದರೆ, ನಾವು ಸಮಾಧಾನವುಳ್ಳಂತ ಮನುಷ್ಯರಾಗಿರಬೇಕು.

3. ಪರಿಗಣನೆ :

ಕ್ರಿಸ್ತನ ವಧುವು ಮತ್ತೊಬ್ಬರೊಟ್ಟಿಗೆ ಯಾವಾಗಲೂ ನ್ಯಾಯಯುತವಾಗಿಯೂ, ಸಾತ್ವಿಕತ್ವದಿಂದಲೂ, ತಾಳ್ಮೆಯಿಂದಲೂ, ಸಹಿಸಿಕೊಳ್ಳುವವಳಾಗಿಯೂ ಮತ್ತು ವಿನಯಶೀಲಳಾಗಿಯೂ ಇರುತ್ತಾಳೆ. ಸಭೆಯು ಯಾವಾಗ ಈ ಕಂಬದ ಆಧಾರದ ಮೇಲೆ ನಿಂತಿರುತ್ತದೋ, ಆಗ ಮತ್ತೊಬ್ಬರನ್ನು ಸಹಿಸಿಕೊಳ್ಳುವುದು ಸುಲಭವಾಗುತ್ತದೆ - ಸಭೆಯಲ್ಲಿ ಕೆಲವರು ಅರ್ಥಮಾಡಿಕೊಳ್ಳುವುದರಲ್ಲಿ ನಿಧಾನರಾಗಿಯೂ ಅಥವಾ ತಮ್ಮ ನಡವಳಿಕೆಯಲ್ಲಿ ಒರಟಾಗಿ ಇದ್ದರೂ ಸಹ ಅಂಥವರನ್ನು ಸಹಿಸಿಕೊಳ್ಳುವುದು ಸುಲಭವಾಗುತ್ತದೆ. ಈ ರೀತಿ ಇದ್ದಾಗ, ನಮ್ಮ ಸಹೋದರ ಮತ್ತು ಸಹೋದರಿಯ ಒರಟುತನವು ನಿಜವಾದ ಸಮಸ್ಯೆಯಲ್ಲ, ಆದರೆ ನಮ್ಮಲ್ಲಿ ನೆಲೆಗೊಂಡಿರುವಂತ ತಾಳ್ಮೆ ಇಲ್ಲದಿರುವಿಕೆಯು ನಿಜವಾದ ಸಮಸ್ಯೆ ಎಂದು ನಾವು ಗ್ರಹಿಸಿಕೊಳ್ಳಲು ಪ್ರಾರಂಭಿಸುತ್ತೇವೆ ಮತ್ತು ನಮ್ಮ ನಿಜವಾದ ಶತ್ರುವಾದ ಸ್ವಾರ್ಥ ಜೀವಿತದೊಟ್ಟಿಗೆ ಹೋರಾಟ ಮಾಡಲು ಪ್ರಾರಂಭಿಸುತ್ತೇವೆಯೇ ಹೊರತು, ನಮ್ಮ ಸಹೋದರ ಮತ್ತು ಸಹೋದರಿಯರೊಟ್ಟಿಗೆ ಅಲ್ಲಾ.

4. ಒಪ್ಪಿಕೊಳ್ಳುವುದರಲ್ಲಿ ಮನಸ್ಸುಳ್ಳವರಾಗಿರುತ್ತೇವೆ :

ಯಾರು ಎಚ್ಚರಿಕೆಯನ್ನು ಮತ್ತು ಬುದ್ಧಿವಾದವನ್ನು ಸ್ವೀಕರಿಸಿಕೊಳ್ಳುವುದಿಲ್ಲವೋ ಅಥವಾ ನಾನು ಬುದ್ಧಿ ಹೇಳಿಸಿಕೊಳ್ಳುವ ಹಂತವನ್ನು ದಾಟಿದ್ದೀನಿ ಎಂದು ಭಾವಿಸುತ್ತಾರೋ, ಅವರು ಹಿರಿಯರಾಗಿದ್ದರೂ ಸರಿ ಅಥವಾ ವೃದ್ಧರಾಗಿದ್ದರೂ ಸರಿಯೇ, ಅಂಥವರುಗಳು ನಿಜವಾದ ಮೂಢರಾಗಿದ್ದಾರೆ (ಪ್ರಸಂಗಿ 4:13). ವಿಶೇಷವಾಗಿ ಭಾರತದಲ್ಲಿ, ಅನೇಕ ಜನಗಳಲ್ಲಿ ಅವರದೇ ಅದಂತಹ ಒಂದು ಅಭಿಪ್ರಾಯ ಏನೆಂದರೆ, ”ವಯೋವೃದ್ಧರು ಜ್ಞಾನವಂತರು” ಎಂಬುದಾಗಿ. ಇಹಲೋಕದ ವಿಚಾರಕ್ಕೆ ಬಂದಾಗ ಅದು ನಿಜವಾಗಿರಬಹುದು, ಆದರೆ ಆತ್ಮೀಕ ವಿಚಾರಗಳಲ್ಲಿ ಅದು ಹಾಗಿಲ್ಲ. ಯೇಸು ತನ್ನ ಸಭೆಯಲ್ಲಿ ಅಪೋಸ್ತಲರನ್ನಾಗಿ ವಯೋವೃದ್ಧರನ್ನು ಆಯ್ಕೆ ಮಾಡಲಿಲ್ಲ. ಆತನು ಯೌವನಸ್ಥರನ್ನು ಆರಿಸಿಕೊಂಡನು. ಒಂದು ವೇಳೆ ಯೌವನಸ್ಥರು ಸಭಾ ಹಿರಿಯರಾಗಿದ್ದರೆ ಮತ್ತು ವೃದ್ಧರಿಗಿಂತ ಹೆಚ್ಚು ದೈವಿಕರಾಗಿದ್ದಲ್ಲಿ, ಅಂಥಹ ಯೌವನಸ್ಥರಿಂದ ಸಭೆಯಲ್ಲಿರುವಂತ ವಯೋವೃದ್ಧರು ಎಚ್ಚರಿಕೆಯನ್ನು ಸ್ವೀಕರಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದು ಏಕೆಂದರೆ ಅವರಲ್ಲಿನ ಗರ್ವದಿಂದಾಗಿ. ಯಾರು ಸರಿಪಡಿಸುವಿಕೆಯನ್ನು ತೆಗೆದುಕೊಳ್ಳಲು ಮನಸ್ಸುಳ್ಳವರಾಗಿರುತ್ತಾರೋ, ಅಂಥವರು ಜ್ಞಾನಿಗಳು. (ಜ್ಞಾನೋಕ್ತಿ 13:10) ಮತ್ತು ಯಾವ ಸಭೆಯಲ್ಲಿ ಸಹೋದರರು ಮತ್ತು ಸಹೋದರಿಯರು ಸರಿಪಡಿಸುವಿಕೆಯನ್ನು ಹಾಗೂ ಎಚ್ಚರಿಕೆಯನ್ನು ಸ್ವೀಕರಿಸಿಕೊಳ್ಳಲು ಕಾತುರವುಳ್ಳವರಾಗಿರುತ್ತಾರೋ, ಅಂತಹ ಸಭೆಯು ಅದ್ಬುತ ಸಭೆಯಾಗಿ ಕಟ್ಟಲ್ಪಡುತ್ತದೆ. ಒಬ್ಬ ಜ್ಞಾನವಂತನು, ತನಗೆ ನಂಬಿಗಸ್ಥಿಕೆಯಿಂದ ಎಚ್ಚರಪಡಿಸುವಂತವರನ್ನು ಪ್ರೀತಿಸುತ್ತಾನೆ ಮತ್ತು ಅಂಥವರ ಜೊತೆ ಸಹವಾಸವನ್ನು ಎದುರು ನೋಡುತ್ತಾನೆ. ”ಒಬ್ಬರಿಗೊಬ್ಬರು ವಿಧೇಯರಾಗಿರಿ” (ಎಫೆಸ 5:21) ಎಂಬ ಈ ಮಾತುಗಳು ಆ ಕಂಬದ ಮೇಲೆ ಬರೆದಿರುತ್ತದೆ.

5. ಕರುಣೆಯಿಂದ ತುಂಬಿರುವುದು ಮತ್ತು ಅದರಿಂದ ಬರುವ ಒಳ್ಳೇ ಫಲಗಳು :

ಕ್ರಿಸ್ತನ ವದುವು ಕರುಣೆಯಿಂದ ತುಂಬಲ್ಪಟ್ಟಿರುತ್ತಾಳೆ - ಯಾವಗಲೋ ಒಮ್ಮೆ ಮಾತ್ರ ಕರುಣೆಯಿಂದ ಇರುವುದಿಲ್ಲ. ಯಾರನ್ನೇ ಆಗಲಿ ಹೃದಯದಿಂದ ಮುಕ್ತವಾಗಿ, ಯಥಾರ್ಥವಾಗಿ ಕ್ಷಮಿಸುವುದರಲ್ಲಿ ಆಕೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆಕೆಯು ಯಾರನ್ನೂ ಸಹ ತೀರ್ಪು ಮಾಡುವುದಾಗಲಿ ಅಥವಾ ಖಂಡಿಸುವುದಾಗಲಿ ಮಾಡುವುದಿಲ್ಲ. ಆದರೆ ಆಕೆಯು ಹೇಗೆ ತನ್ನ ವರನ ವಿಷಯವಾಗಿ ದಯೆಯುಳ್ಳವಳಾಗಿರುತ್ತಾಳೋ, ಹಾಗೇ ಮತ್ತೊಬ್ಬರ ಕಡೆಗೂ ಇರುತ್ತಾಳೆ. ಈ ಒಂದು ಕರುಣೆಯು ಕೇವಲ ಮಾನಸಿಕ ನಡುವಳಿಕೆಯಾಗಿರದೇ, ಆಕೆಯ ಕಾರ್ಯದಿಂದ ಹೊರ ಹೊಮ್ಮುವಂತ ಒಳ್ಳೇಯ ಫಲಗಳನ್ನು ತೋರಿಸುವಂತದ್ದಾಗಿದೆ. ಆಕೆಯು ಎಲ್ಲಾ ಮಾರ್ಗಗಳಲ್ಲಿ, ಎಲ್ಲರಿಗೂ, ಎಲ್ಲಾ ಸಮಯದಲ್ಲಿ ಒಳ್ಳೇಯದನ್ನೇ ಮಾಡುತ್ತಾಳೆ.

6. ಧೃಢತೆ :

ದೈವಿಕ ಜ್ಞಾನವನ್ನು ಹೊಂದಿರುವಂತ ಸಹೋದರನು ಎಲ್ಲಾ ವಕ್ರತೆಯಿಂದ ಬಿಡುಗಡೆ ಹೊಂದಿರುತ್ತಾನೆ. ಆತನು ಮನ:ಪೂರ್ವಕನಾಗಿಯೂ ಮತ್ತು ನೇರವಾಗಿಯೂ ಇರುತ್ತಾನೆ, ದೇವರನ್ನು ಮೆಚ್ಚಿಸಬೇಕೆಂಬ ಒಂದೇ ದೃಷ್ಠಿಯನ್ನು ಮಾತ್ರ ಹೊಂದಿರುತ್ತಾನೆ, ಅನುಮಾನಗಳಿಂದ ಮತ್ತು ಹಿಂಜರಿಯುವುದರಿಂದ ಬಿಡುಗಡೆ ಹೊಂದಿರುತ್ತಾನೆ. ಆತನು ಎರಡು ಮನಸ್ಸುಳ್ಳವನಾಗಿರುವುದಿಲ್ಲ, ಆದರೆ ದೇವರ ಮೇಲಿನ ನಂಬಿಕೆಯಲ್ಲಿ ಬಲವಾಗಿರುತ್ತಾನೆ ಮತ್ತು ಆತನು ತನ್ನ ಬಲಹೀನತೆಗಳನ್ನು ನೋಡುತ್ತಿರುವುದಿಲ್ಲ, ಆದರೆ ದೇವರ ವಾಗ್ದಾನಗಳನ್ನು ನೋಡುತ್ತಿರುತ್ತಾನೆ. ಅಂಥಹ ಸಹೋದರನು ತನ್ನ ಅರಿವಿಗೆ ಬರುವಂತ ಪಾಪದ ಮೇಲೆ ಜಯವನ್ನು ಹೊಂದುವಂತ ಸಾಧ್ಯತೆಯನ್ನು ಯಾವಾಗಲೂ ಅರಿತವನಾಗಿರುತ್ತಾನೆ. ಆತನು ವಿಶ್ವಾಸರ್ಹ ವ್ಯಕ್ತಿಯಾಗಿರುತ್ತಾನೆ ಮತ್ತು ತನ್ನ ಮಾತನ್ನು ಉಳಿಸಿಕೊಳ್ಳುವಂತ ವಿಷಯದಲ್ಲಿ ಹೊಣೆಯನ್ನು ಹೊತ್ತಿರುವವನು ಆಗಿರುತ್ತಾನೆ. ಆತನು ದೃಢನಾಗಿಯೂ ಮತ್ತು ಕದಲದವನಾಗಿಯೂ ಇರುತ್ತಾನೆ. ಆತನ ನಿರ್ಧಾರಗಳನ್ನು ನೀವು ಬಗ್ಗಿಸಲು ಆಗುವುದಿಲ್ಲ ಅಥವಾ ಆತನನ್ನು ಯಾವುದೇ ವಿಷಯದಲ್ಲಿ ರಾಜಿ ಮಾಡಲು ಆಗುವುದಿಲ್ಲ. ಆತನು ಬೆತ್ತದ ಹಾಗೇ ನೇರವಾಗಿಯೂ ಮತ್ತು ಪ್ರಾಮಾಣಿಕನಾಗಿಯೂ ಇರುತ್ತಾನೆ.

7. ಕಪಟಿತನದಿಂದ ಬಿಡುಗಡೆ ಹೊಂದಿರುವುದು :

ಬೇರೆಯವರು ತನ್ನ ಹೊರಗಿನ ಜೀವಿತ ನೋಡುವ ವಿಷಯಕ್ಕಿಂತ, ವಧುವು ಒಳಗಿನ ಆತ್ಮೀಕ ವಿಷಯದಲ್ಲಿ ಹೆಚ್ಚು ತೃಪ್ತಿಯನ್ನು ಹೊಂದಿರುತ್ತಾಳೆ. ಬೇರೆಯವರು ಆಕೆಯ ಹೊರಗಡೆ ಜೀವಿತವನ್ನು ನೋಡಿ ಹೊಂದಿರುವ ಅಭಿಪ್ರಾಯಕ್ಕಿಂತ ಆಕೆಯ ರಹಸ್ಯ ಜೀವಿತವು ಉತ್ತಮವಾಗಿರುತ್ತದೆ, ಇದು ಯಾವುದರ ವಿರುದ್ಧವಾಗಿದೆ ಎಂದರೆ - ””ಆತ್ಮೀಕ ವ್ಯಭಿಚಾರಿಗಳ” ಅಥವಾ ”ವ್ಯೇಶ್ಶೆಯರ’ ವಿರುದ್ಧವಾಗಿದೆ, ಆತ್ಮೀಕ ವ್ಯಭಿಚಾರಿಗಳು ಯಾರೆಂದರೆ - ಮನುಷ್ಯರಿಂದ ಗೌರವವನ್ನು ಸ್ವೀಕರಿಸಿಕೊಳ್ಳುವುದು ಮಾತ್ರ ಆತ್ಮೀಕತೆ ಎಂದು ಕರೆಯಲ್ಪಡುವವರು. ಆಕೆಯು ನಿಜವಾಗಿಯೂ ”ಧಾರ್ಮಿಕತೆಯನ್ನು” ಹೊಂದಿರುತ್ತಾಳೆ, ಅದು ನಿಜವಾದ ಆತ್ಮೀಕತೆಯಲ್ಲ. ವಧುವು ಆಕೆಯ ಒಳ ಆಲೋಚನೆಗಳನ್ನು, ಉದ್ದೇಶಗಳನ್ನು ಮತ್ತು ವರ್ತನೆಗಳನ್ನು ಹೆಚ್ಚು ಗಮನಿಸುತ್ತಿರುತ್ತಾಳೆ, ಆಕೆಯ ಹೊರಗಿನ ಕಾರ್ಯ ಮತ್ತು ಮಾತುಗಳಿಗಿಂತ. ಆಕೆಯು ತನ್ನ ಒಳಗಿನ ಜೀವಿತದ ಮೇಲೆ ದೇವರ ಮೆಚ್ಚಿಗೆಗಾಗಿ ಹೆಚ್ಚು ಬಯಕೆಯನ್ನು ಹೊಂದಿರುತ್ತಾಳೆ ಮತ್ತು ಆಕೆಯ ಹೊರ ಜೀವಿತದ ಬಗ್ಗೆ ಇರುವ ಮನುಷ್ಯರ ಅಭಿಪ್ರಾಯಗಳ ಬಗ್ಗೆ ಆಕೆಯು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಒಂದು ಪರೀಕ್ಷೆಯಿಂದ, ನಾವು ಕ್ರಿಸ್ತನ ವಧುವಿನ ಭಾಗವಾಗಿದ್ದೇವೋ ಅಥವಾ ವ್ಯೇಶ್ಶೆಯ ಭಾಗವಾಗಿದ್ದೇವೋ ಎಂದು ಅರಿಯಬೇಕು.

ಕ್ರಿಸ್ತನ ವಧುವು ಜ್ಞಾನದ ಬೀಜವಾಗಿದ್ದು, ಜ್ಞಾನವೆಂಬ ಬೀಜವು ಆಕೆಯ ಹೃದಯದಲ್ಲಿ ನಡಲ್ಪಟ್ಟಿರುತ್ತದೆ ಮತ್ತು ಆಕೆಯು ಈ ಏಳು ಗುಣಲಕ್ಷಣಗಳನ್ನು ಹೊಂದಿಕೊಂಡು, ಈ ಗುಣಲಕ್ಷಣಗಳಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುತ್ತಾಳೆ. ಹಾಗಿದ್ದರೂ ಸಹ ಈಕೆಯು ಪರಿಪೂರ್ಣತೆಗೆ ಇನ್ನೂ ದೂರವಾಗಿರುತ್ತಾಳೆ, ಆಕೆಯು ಪರಿಪೂರ್ಣತೆಯ ಕಡೆಗೆ ಒತ್ತು ಕೊಡುತ್ತಿರುತ್ತಾಳೆ ಮತ್ತು ಅದರಲ್ಲಿ ಬೆಳೆಯುತ್ತಿರುತ್ತಾಳೆ.