WFTW Body: 

ಪ್ರಕಟನೆ ಪುಸ್ತಕದ ಅಧ್ಯಾಯ 2 ಮತ್ತು 3ನೇ ಅಧ್ಯಾಯದಲ್ಲಿ ಪವಿತ್ರಾತ್ಮನು ಪೂರ್ಣಹೃದಯದಿಂದ ಮತ್ತು ನಂಬಿಗಸ್ಥಿಕೆಯಿಂದ ಇರುವಂತ ವಿಶ್ವಾಸಿಗಳ ಗುಂಪನ್ನು ಸಭೆಯಲ್ಲಿ ಗುರುತಿಸಿ, ಅವರನ್ನು ”ಜಯಹೊಂದುವವರು” ಎಂದು ಕರೆಯುವುದನ್ನು ನಾವು ಕಂಡುಕೊಳ್ಳುತ್ತೇವೆ. ಇಂಥವರು ಪಾಪವನ್ನು ಮತ್ತು ಪ್ರಾಪಂಚಿಕತೆಯನ್ನು ಜಯಿಸುತ್ತಾರೆ ಹಾಗೂ ತಮ್ಮ ಸುತ್ತ ಇರುವ ವಿಶ್ವಾಸಿಗಳ ಆತ್ಮಿಕ ಕುಸಿತದ ಮಧ್ಯದಲ್ಲಿ ಕರ್ತನಿಗಾಗಿ ನಂಬಿಗಸ್ಥಿಕೆಯಿಂದ ನಿಲ್ಲುವವರಾಗಿರುತ್ತಾರೆ. ಕರ್ತನು ಪ್ರಾಥಮಿಕವಾಗಿ ಜಯಹೊಂದುವವರಲ್ಲಿ ಆಸಕ್ತಿಯನ್ನು ಹೊಂದಿದ್ದಾನೆ ಮತ್ತು ಆ ಜಯ ಹೊಂದುವವರಿಗೆ ಏಳು ವಾಗ್ದಾನಗಳನ್ನು ಸಹ ನೀಡಿದ್ದಾನೆ.

ಮೊದಲನೇ ವಾಗ್ದಾನ : ಪ್ರಕಟನೆ 2:7ರಲ್ಲಿ ಎಫೆಸದಲ್ಲಿನ ಸಭೆಯ ದೂತನಿಗೆ ಬರೆ: ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಕೊಡುವೆನು. ಜಯಹೊಂದುವವರಿಗೆ ದೇವರು ಪ್ರತಿಫಲವನ್ನು ಕೊಡುವ ವಾಗ್ದಾನವನ್ನು ನೀಡಿದ್ದಾನೆ. ಅದು ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವ ಸೌಭಾಗ್ಯವಾಗಿದೆ (ಪ್ರಕ 2:7). ಆ ಒಂದು ಸೌಭಾಗ್ಯವನ್ನು ಆದಾಮನು ತಪ್ಪಿಸಿಕೊಂಡನು. ಆ ಜೀವದಾಯಕ ಮರವು ದೈವಿಕ ಜೀವಿತದ ಗುರುತಾಗಿದೆ. ದೇವರು ಮನುಷ್ಯನಿಗೆ ಕೊಡುವ ಶ್ರೇಷ್ಟವಾದ ವರ ಯಾವುದೆಂದರೆ, ದೇವರ ಸ್ವಭಾವವನ್ನು ಹೊಂದುವಂಥದ್ದು. ಇಹಲೋಕದಲ್ಲಿ ಅನೇಕ ವಿಶ್ವಾಸಿಗಳು ಇದರ ಬಗ್ಗೆ ಉನ್ನತವಾಗಿ ಯೋಚಿಸುವುದಿಲ್ಲ. ಆದರೆ ನಿತ್ಯತ್ವದ ಸ್ಪಷ್ಟವಾದ ಬೆಳಕಿನಲ್ಲಿ, ನಾವು ಕಂಡುಕೊಳ್ಳುವುದೇನೆಂದರೆ - ಮಾನುಷ್ಯರಿಗೆ ದೇವರು ಕೊಡುವಂತ ಅತಿ ಶ್ರೇಷ್ಟವಾದ ವರವೇನೆಂದರೆ, ಆತನ ಸ್ವಭಾವದಲ್ಲಿ ಪಾಲುದಾರರಾಗುವುದು.

ಎರಡನೇ ವಾಗ್ದಾನ : ಪ್ರಕಟನೆ 2:11 ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ: ಜಯ ಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ. ಎರಡನೇ ಮರಣವು ನಿತ್ಯತ್ವದ ಮರಣವಾಗಿದೆ - ಅಂದರೆ ನಿತ್ಯತ್ವದ ಎಲ್ಲಾ ಕಾಲಕ್ಕೂ ದೇವರ ಸಾನಿಧ್ಯದಿಂದ ನರಕದ ಬೆಂಕಿಯೊಳಗೆ ತಳ್ಳಿಹಾಕಕಲ್ಪಡುವುದಾಗಿದೆ. ಎರಡನೇ ಮರಣದಿಂದ ತಪ್ಪಿಕೊಳ್ಳುವಂತಹ ವಾಗ್ದಾನವು ಜಯಹೊಂದುವವರಿಗೆ ಮಾತ್ರ ಕೊಟ್ಟಿರುವುದು ಗಮನಾರ್ಹ ಸಂಗತಿಯಾಗಿದೆ. ಅದಕ್ಕಾಗಿ ಪಾಪವನ್ನು ಜಯಿಸುವಂತದ್ದು ತುಂಬಾ ಮುಖ್ಯವಾಗಿದೆ - ಪಾಪದ ಕೊನೆಯ ಫಲಿತಾಂಶ ಮರಣವಾಗಿದೆ (ಯಾಕೋಬ 1:15). ಇಡೀ ಹೊಸ ಒಡಂಬಡಿಕೆಯ ಮುಖಾಂತರ ಪವಿತಾತ್ಮನು ಕೊಡುವ ಮೂಲಭೂತ ಸಂದೇಶವೇನೆಂದರೆ - ಪ್ರತಿಯೊಂದು ರೂಪದಲ್ಲಿ ನಾವು ಪಾಪವನ್ನು ಜಯಿಸಬೇಕು ಎಂಬುದಾಗಿ.

ಮೂರನೇ ವಾಗ್ದಾನ: ಪ್ರಕಟನೆ 2:17 - ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ: ಯಾವನು ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು; ಇದಲ್ಲದೆ ಅವನಿಗೆ ಬಿಳೀ ಕಲ್ಲನ್ನು ಮತ್ತು ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನು ಕೊಡುವೆನು; ಅದು ಆ ಹೆಸರು ಪಡೆಯುವವನಿಗಲ್ಲಿದೇ ಬೇರಾರಿಗೂ ತಿಳಿದಿರುವುದಿಲ್ಲ. ಬಚ್ಚಿಟ್ಟಿರುವ ಅತಿಮುಖ್ಯವಾದ ಮನ್ನದ ಜೊತೆಗೆ ಕಲ್ಲಿನ ಮೇಲೆ ಜಯ ಹೊಂದಿದವರ ಹೆಸರು ಬರೆಯಲ್ಪಡುವುದು, ದೇವರೊಂದಿಗಿರುವ ನಿಕಟವಾದ ಸಂಬಂಧದ ಬಗ್ಗೆ, ಅಂದರೆ ಮದಲಗಿತ್ತಿಯು ಮದಲಿಂಗನೊಂದಿಗಿರುವ ಸಂಬಂಧದ ಬಗ್ಗೆ ಮಾತನಾಡುತ್ತದೆ. ನಿಶ್ಚಿತಾರ್ಥದ ಸಮಯದಲ್ಲಿ ಜಗತ್ತಿನಲ್ಲಿ ಒಬ್ಬ ಮದುಮಗನು ತನ್ನ ಮದುಮಗಳಿಗೆ ಕೊಡುವ (ಅತಿ ಅಮೂಲ್ಯವಾದ ಕಲ್ಲು ಮತ್ತು ಅದರ ಮೇಲೆ ಹೆಸರು ಬರೆದಿರುವಂತಹ) ಉಂಗುರವನ್ನು ಕೊಡುವ ರೀತಿಗೆ ಆತ್ಮಿಕತೆಯು ಹೋಲಿಸಲ್ಪಟ್ಟಿದೆ. ಮದಲಿಂಗನು ಮದಲಗಿತ್ತಿಗೆ ಬೇರೆ ಯಾರಿಗೂ ಗೊತ್ತಿಲ್ಲದಂತ ವೈಯುಕ್ತಿಕ ಹೆಸರನಿಂದ ಕರೆಯುತ್ತಾನೆ (ಪ್ರಕ 2:17). ದೇವರೊಟ್ಟಿಗಿನ ಈ ಒಂದು ಮದುವೆ ರೀತಿಯದಂತ ವೈಯುಕ್ತಿಕ ಸಂಬಂಧದ ಪ್ರತಿಫಲವು ಜಯಹೊಂದುವವರಿಗೆ ದಕ್ಕುತ್ತದೆ. ಸಾಧಾರಣವಾದ ಆತ್ಮಿಕತೆಯಲ್ಲಿರುವಂತ ವಿಶ್ವಾಸಿಯು ಕ್ರಿಸ್ತನೊಟ್ಟಿಗೆ ಒಣಗಿದಂತ ಮತ್ತು ಬೇಸರದ ಸಂಬಂಧವನ್ನು ಹೊಂದಿರುತ್ತಾನೆ. ಏಕೆಂದರೆ ಆತನು ಪಾಪವನ್ನು ಮತ್ತು ಪ್ರಾಪಂಚಿಕತೆಯನ್ನು ತೀವ್ರವಾಗಿ ದ್ವೇಷಿಸುವುದಿಲ್ಲ. ಆದರೆ ನಿಜವಾಗಿ ಜಯ ಹೊಂದುವವನು ದೇವರೊಟ್ಟಿಗೆ ಆತ್ಮಿಕವಾದಂತ ಭಾವಪರವಶವಾದಂತ ಸಂಬಂಧದೊಟ್ಟಿಗೆ ಪ್ರವೇಶಿಸುತ್ತಾನೆ. ಅಂದರೆ, ಹೇಗೆ ಮದಲಗಿತ್ತಿ ಮತ್ತು ಮದಲಿಂಗನು ಆಳವಾದಂತಹ ಪ್ರೀತಿಯಲ್ಲಿರುತ್ತಾರೋ ಹಾಗೇ. ”ಪರಮಗೀತೆ” ಪುಸ್ತಕದಲ್ಲಿ ಈ ರೀತಿಯ ಒಂದು ಸಂಬಂಧವು ವಿವರಿಸಲ್ಪಟ್ಟಿದೆ ಮತ್ತು ಜಯಹೊಂದುವಂತವನು ಮಾತ್ರ ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುತ್ತಾನೆ ಹಾಗೂ ಇದರ ನೈಜತೆಯನ್ನು ಅನುಭವಿಸುತ್ತಾನೆ.

ನಾಲ್ಕನೇ ವಾಗ್ದಾನ : ಪ್ರಕಟಣೆ 2:26 ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ: ಯಾವನು ಜಯಹೊಂದಿ ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುತ್ತಾನೋ ಅವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುತ್ತೇನೆ. ನಾನು ನನ್ನ ತಂದೆಯಿಂದ ಹೊಂದಿದ ಪ್ರಕಾರವೇ ಅವನು ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವನು; ಅವರು ಕುಂಬಾರನ ಮಡಿಕೆಗಳಂತೆ ಒಡೆದು ಚೂರಾಗುವರು. ನಾನು ಅವನಿಗೆ ಉದಯನಕ್ಷತ್ರವನ್ನು ಕೊಡುವೆನು. ಜಯಹೊಂದುವವನಿಗೆ ಕರ್ತನು ಇಲ್ಲಿ ಈ ರೀತಿಯಾಗಿ ವಿವರಿಸಲ್ಪಟ್ಟಿದ್ದಾನೆ, ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುವವನು ಜಯಹೊಂದುವವನಾಗುತ್ತಾನೆ ಎಂಬುದಾಗಿ (ಪ್ರಕ 2:26). ಯೇಸುವಿನ ಕ್ರಿಯೆಯೇನೆಂದರೆ, ಆತನು ಶರೀರಧಾರಿಯಾಗಿ ಇಹಲೋಕದಲ್ಲಿ ಜೀವಿಸುತ್ತಿದ್ದಾಗ ಶೋಧನೆಗಳ ಮೇಲೆ ಜಯಗಳಿಸಿರುವಂತದ್ದಾಗಿದೆ. ಯೇಸು ಜಯಗಳಿಸಿದ ಹಾಗೇ ಜಯಹೊಂದುವವನು ಶೋಧನೆಗಳನ್ನು ಜಯಿಸುವಾತನಾಗಿದ್ದಾನೆ ಮತ್ತು ಕೊನೆಯವರೆಗೂ ಈ ಒಂದು ಹಾದಿಯಲ್ಲಿ ಎಲ್ಲವನ್ನು ಸೈರಿಸಿಕೊಳ್ಳುತ್ತಾನೆ. ಜಯಹೊಂದುವವನಿಗೆ ಕರ್ತನು ಕೊಡುವಂತ ವಾಗ್ದಾನವೇನೆಂದರೆ - ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವುದಾಗಿದೆ (ಪ್ರಕ 2:26). ಇಲ್ಲಿ ಯಾವ ರೀತಿ ಹೇಳಲಾಗಿದೆ ಎಂದರೆ - ”ಅವನು ಜನಾಂಗಗಳ ಮೇಲೆ ಆಳುವನು” ಎಂಬುದಾಗಿ (ಪ್ರಕ 2:27). ಇದರ ನಿಜವಾದ ಅರ್ಥ ”ಅವರಿಗೆ ಆತನು ಕುರುಬನಾಗಿರುತ್ತಾನೆ” ಎಂಬುದಾಗಿ. ಜಯಹೊಂದುವವನಿಗೆ ಮತ್ತೊಂದು ವಾಗ್ದಾನವೇನೆಂದರೆ ”ಆತನಿಗೆ ಉದಯನಕ್ಷತ್ರವನ್ನು ಕೊಡುವುದಾಗಿದೆ” (ಪ್ರಕ 2:28). ಆ ಉದಯನಕ್ಷತ್ರವು ಯೇಸುವೇ ಆಗಿದ್ದಾರೆ (ಪ್ರಕಟಣೆ 22:16 ನೋಡಿ). ಯೇಸು ನೀತಿಯ ಸೂರ್ಯನು ಎಂಬುದಾಗಿ ಕರೆಯಲ್ಪಟ್ಟಿದ್ದಾನೆ, ಆತನು ಕೆಡುಕು ಮಾಡುವವರನ್ನು ಸುಟ್ಟುಬಿಟ್ಟು, ತನ್ನ ಹೆಸರಿಗೆ ಭಯಪಡುವವರಿಗೆ ಸ್ವಸ್ಥತೆಯನ್ನು ತರುವವನಾಗಿದ್ದಾನೆ (ಮಲಾಕಿ 4:1,2)). ಲೋಕವು ಆತನನ್ನು ನೀತಿಯ ಸೂರ್ಯನು ಎಂಬುದಾಗಿ ಮಾತ್ರ ನೋಡಲು ಸಾಧ್ಯ, ಆದರೆ ಜಯಹೊಂದುವವರು ಆತನನ್ನು ಉದಯ ನಕ್ಷತ್ರವನ್ನಾಗಿ ನೋಡುತ್ತಾರೆ. ಉದಯದ ನಕ್ಷತ್ರವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವುದಾಗಿದೆ. ಈ ಜನಾಂಗದ ಕೊನೆ ಕ್ಷಣದಲ್ಲಿ, ದೊಡ್ಡ ಸಂಕಟದ ಕೊನೆಯಲ್ಲಿ, ಲೋಕವು ಕತ್ತಲೆಯಲ್ಲಿ ಮುಳುಗಿರುವಾಗ, ಕೊನೆ ತುತ್ತೂರಿಯು ಶಬ್ದ ಮಾಡುತ್ತದೆ ಮತ್ತು ಕರ್ತನು ತಾನೇ ಪರಲೋಕದಿಂದ ಕೆಳಗೆ ಇಳಿದು ಬಂದು ಕೂಗುತ್ತಾನೆ.

ಎಲ್ಲಾ ಜನಾಂಗಗಳಲ್ಲಿನ ಜಯಹೊಂದಿರುವವರು ಆತನನ್ನು ಮೇಘಗಳೋಪಾದಿಯಲ್ಲಿ ಆತನನ್ನು ಗಾಳಿಯಲ್ಲಿ ಸಂಧಿಸುತ್ತಾರೆ ಮತ್ತು ಆತನನ್ನು ಹಿಂತಿರುಗಿ ಸ್ವಾಗತಿಸುತ್ತಾರೆ. ಆಗ ಆತನನ್ನು ಉದಯ ನಕ್ಷತ್ರವನ್ನಾಗಿ ನೋಡುತ್ತಾರೆ.

ಐದನೇ ವಾಗ್ದಾನ: ಪ್ರಕ 3:5: ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ: ಜಯಹೊಂದುವವನು ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವುದೇ ಇಲ್ಲ, ಅಂದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು. ಯಾರು ತಮ್ಮ ಹೃದಯವನ್ನು ಶುದ್ದವಾಗಿಟ್ಟುಕೊಂಡಿರುವರೋ ಅಂಥವರ ಹೆಸರುಗಳ ಪಟ್ಟಿಯನ್ನು ದೇವರು ಹೊಂದಿದ್ದಾರೆ. ಈ ಒಂದು ಶುದ್ಧತೆಯ ಉಲ್ಲೇಖವು ಕೇವಲ ಶರೀರದ ಪಾಪಗಳಿಂದ ಬಿಡುಗಡೆ ಹೊಂದುವುದು ಮಾತ್ರವಲ್ಲ, ಮನುಷ್ಯನ ಗೌರವವನ್ನು ಹುಡುಕುವಂತದ್ದರಿಂದ ಮತ್ತು ಆತ್ಮಕ್ಕೆ ಸಂಬಂಧಿಸಿದ ಬೇರೆ ಬೇರೆ ಪಾಪಗಳಿಂದ ಬಿಡುಗಡೆ ಹೊಂದುವುದಾಗಿದೆ. ಇವರು ಜಯಹೊಂದುವವರಾಗಿದ್ದು ಸಾರ್ದಿಸಿನಲ್ಲಿ ದೇವರ ಎದುರಿಗೆ ಉಳಿದವರಾಗಿ ಜೀವಿಸುವವರಾಗಿದ್ದಾರೆ. ಜಯಹೊಂದುವಂತ ಎಲ್ಲರಿಗೆ ಕೊಡಲ್ಪಟ್ಟ ವಾಗ್ದಾನವೇನೆಂದರೆ, ಬಿಳೀ ವಸ್ತ್ರವನ್ನು ಹೊದಿಸಲ್ಪಡುವುದಾಗಿದೆ (ಪ್ರಕ 3:5). ಇದು ಸ್ಪಷ್ಟವಾಗಿ ಸೂಚಿಸುವುದೇನೆಂದರೆ, ಕೇವಲ ಜಯಹೊಂದುವವರು ಮಾತ್ರ ಕ್ರಿಸ್ತನ ಮದಲಗಿತ್ತಿಗಳಾಗುತ್ತಾರೆ ಎಂಬುದಾಗಿ. ಜಯಹೊಂದುವವರಿಗೆ ಮತ್ತೊಂದು ವಾಗ್ದಾನವೇನೆಂದರೆ, ಅವರುಗಳ ಹೆಸರುಗಳನ್ನು ಜೀವದ ಪುಸ್ತಕದಿಂದ ಅಳಿಸಿ ಬಿಡುವದೇ ಇಲ್ಲ ಎಂಬುದಾಗಿ (ಪ್ರಕ 3:5). ಜಯಹೊಂದುವವರಿಗೆ ಮತ್ತೊಂದು ವಾಗ್ದಾನವೇನೆಂದರೆ, ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೇನು ಎಂಬುದಾಗಿ. ಈ ಒಂದು ಪ್ರತಿಫಲದ ವಾಗ್ದಾನವು ಯಾರು ಆತನ ನಾಮವನ್ನು ಜನರ ಎದುರಿಗೆ ನಾಚಿಕೆ ಪಡದೇ ಅರಿಕೆ ಮಾಡುತ್ತಾರೋ ಅವರಿಗೆ ಎಂಬುದಾಗಿ (ಮತ್ತಾಯ 2:10:32; ಲೂಕ 12:8). ಯಾರು ಆತನ ನಾಮವನ್ನು ಸಾರ್ವಜನಿಕವಾಗಿ, ಸಂಬಂಧಿಕರ ಮುಂದೆ, ಸ್ನೇಹಿತರ ಮುಂದೆ, ನೆರೆಹೊರೆಯವರ ಮುಂದೆ ಮತ್ತು ಕೆಲಸ ಮಾಡುವಂತ ಸ್ಥಳದಲ್ಲಿ ತನ್ನ ಸಹ ಕೆಲಸಗಾರರ ಮುಂದೆ ಅರಿಕೆ ಮಾಡುತ್ತಾರೋ ಅವರಿಗೆ ಕರ್ತನು ದೊಡ್ಡ ಸ್ಥಾನವನ್ನು ಪರಲೋಕದಲ್ಲಿ ಇಟ್ಟಿದ್ದಾನೆ ಎಂಬುದಾಗಿ.

ಆರನೇ ವಾಗ್ದಾನ : ಪ್ರಕಟನೆ 3:12 ರಲ್ಲಿ ಫಿಲಿದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ : ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವದೇ ಇಲ್ಲ (ಪ್ರಕ 3:12). ಇದರ ಅರ್ಥವೇನೆಂದರೆ, ಸಭೆಯಲ್ಲಿರುವ ಇತರರಿಗೆ ಸಹಾಯ ಮಾಡುವುದಾಗಿದೆ, ಅವರ ಭಾರಗಳನ್ನು ಹೊರುವುದಾಗಿದೆ. ಆತನು ಮತ್ತೊಬ್ಬರಿಗೆ ಆತ್ಮಿಕ ”ತಂದೆ”ಯಾಗಿರುತ್ತಾನೆ. ಪ್ರತಿಯೊಂದು ಸಭೆಯಲ್ಲಿ ಇಂತಹ ಸ್ತಂಭಗಳ ದೊಡ್ಡದಾದ ಅಗತ್ಯತೆ ಇದೆ. ಜಯಹೊಂದುವವರು ದೇವರ ಹೆಸರನ್ನು ಹೊಂದಿರುತ್ತಾರೆ, ಹೊಸ ಯೆರೂಸಲೇಮಿನ ಹೆಸರನ್ನು ಹೊಂದಿರುತ್ತಾರೆ ಮತ್ತು ಆತನ ಹಣೆಯ ಮೇಲೆ ಕರ್ತನ ಹೊಸ ಹೆಸರು ಬರೆಯಲ್ಪಟ್ಟಿರುತ್ತದೆ. ಮತ್ತೊಂದು ಪದದಲ್ಲಿ, ಆತನು ಎಲ್ಲೇ ಹೋದರೂ ಯೇಸುವಿನ ಪೂರ್ಣಹೃದಯದ ಶಿಷ್ಯನೆಂದು ಸಾರ್ವಜನಿಕವಾಗಿ ಗುರುತಿಸಲ್ಪಡುವುದಾಗಿದೆ.

ಏಳನೇ ವಾಗ್ದಾನ : ಪ್ರಕಟನೆ 3:21 ರಲ್ಲಿ ಲವೊದಿಕೇಯದಲ್ಲಿರುವ ಸಭೆಯ ದೂತನಿಗೆ ಬರೆ: ಜಯಹೊಂದುವವನು ತಂದೆಯೊಡನೆ ಆತನ ಸಿಂಹಾಸನದಲ್ಲಿ ಕೂತುಕೊಂಡ ಹಾಗೆಯೇ ತಂದೆಯೊಡನೆ ಆತನ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಅನುಗ್ರಹವಾಗುವುದು. ಕರ್ತನು ಇಲ್ಲಿ ಹೇಳುವುದೇನೆಂದರೆ, ಇಹಲೋಕದಲ್ಲಿ ಯೇಸು ಜಯಹೊಂದಿದ ಹಾಗೇ, ನಾವು ಸಹ ಜಯ ಹೊಂದಬೇಕು ಎಂಬುದಾಗಿ (ಪ್ರಕ 3:21). ಯೇಸು ಮೊದಲು ಜಯಹೊಂದಿದವನಾಗಿದ್ದಾನೆ. ಆತನು ನಮ್ಮ ಮುಂದಾಗಿ ಹೋಗುವವನು, ಆತನು ಈಗಾಗಲೇ ಲೋಕವನ್ನು ಮತ್ತು ಸೈತಾನನನ್ನು ಜಯಿಸಿದ್ದಾನೆ. ಅದಕ್ಕಾಗಿ ಆತನು ಮೇಲಕ್ಕೆ ಎತ್ತಲ್ಪಟ್ಟು ತಂದೆಯೊಟ್ಟಿಗೆ ಆತನ ಸಿಂಹಾಸನದಲ್ಲಿ ಕೂತುಕೊಂಡಿದ್ದಾನೆ. ಈಗ ನಾವು ಆತನು ಜಯಗಳಿಸಿದಂತೆ ಜಯಗಳಿಸಲು ಸಾಧ್ಯವಿದೆ. ನಾವು ಜಯಹೊಂದಿದವರಾದರೆ, ನಾವು ಸಹ ಆತನ ಸಿಂಹಾಸನದಲ್ಲಿ ಆತನೊಟ್ಟಿಗೆ ಒಂದು ದಿನ ಆತನ ಮದಲಗಿತ್ತಿಯಾಗಿ ಕೂತುಕೊಳ್ಳುತ್ತೇವೆ.