WFTW Body: 

ಯೋಬನ ಪುಸ್ತಕವು ಸತ್ಯವೇದವನ್ನು ಪ್ರೇರಣೆಗೊಳಿಸಿದ ಮೊದಲ ಪುಸ್ತಕವಾಗಿದೆ - ಈ ಮೊದಲ ಪುಸ್ತಕವು ಆದಿಕಾಂಡಕ್ಕಿಂತ ಮೊದಲು, ಅಂದರೆ ನೂರಾರು ವರುಷಗಳ ಹಿಂದೆ ಬರೆದಿದ್ದಾಗಿದೆ (ಕ್ರಿಸ್ತನು ಬರುವುದಕ್ಕಿಂತ ಮುಂಚೆ 1500 ವರ್ಷಗಳ ಹಿಂದೆ ಮೋಶೆಯು ಆದಿಕಾಂಡ ಪುಸ್ತಕವನ್ನು ಬರೆದಿದ್ದಾನೆ)

ದೇವರು ಸತ್ಯವೇದವನ್ನು ಬರೆಯಲು ನಿರ್ಧರಿಸಿದಾಗ, ಅವರು ಬರೆದ ಮೊಟ್ಟಮೊದಲ ಪುಸ್ತಕ ಸೃಷ್ಠಿಯ ಬಗ್ಗೆ ಇರದೇ, ಒಬ್ಬ ದೈವಿಕ ಮನುಷ್ಯನ ಬಗ್ಗೆ ಇದೆ ಎನ್ನುವದು ಸ್ವಾರಸ್ಯಕರ! ಅದು, ದೇವರು ಯಾವಾಗಲೂ ಏನನ್ನು ಎದುರು ನೋಡುತ್ತಿರುವರು ಎಂದು ನಮಗೆ ತೋರಿಸುತ್ತದೆ. ಹನೋಕನ ಕಾಲದಲ್ಲಿ, ನೋಹನ ಕಾಲದಲ್ಲಿ ಮತ್ತು ಯೋಬನ ಕಾಲದಲ್ಲಿ ಅವರಿಗೆ ಬೇಕಿದ್ದುದು ಒಬ್ಬ ದೈವಿಕ ಮನುಷ್ಯ. 66 ಪುಸ್ತಕಗಳನ್ನು ಒಳಗೊಂಡ ಸತ್ಯವೇದವನ್ನು ನಮಗೆ ನೀಡಲು ದೇವರು ಆದಿಕಾಲದಿಂದ ಯೋಜಿಸಿದ್ದರು. ಇವುಗಳಲ್ಲಿ ಪ್ರಪ್ರಥಮ ಪುಸ್ತಕದಲ್ಲಿ ಅವರು ಬರೆದ್ದದ್ದು, ತನ್ನ ಹೃದಯಕ್ಕೆ ಅತ್ಯಂತ ನಿಕಟವಾಗಿದ್ದ ಒಬ್ಬ ದೈವಿಕ ಮಾನವನ ಬಗ್ಗೆ. ಈಗ ಸತ್ಯವೇದವನ್ನು ಪ್ರೇರಪಣೆಗೊಳಿಸಿದ ಮೊದಲ ಪುಸ್ತಕದ ಮೊದಲ ವಾಕ್ಯವನ್ನು ಗಮನಿಸಿರಿ: "ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು; ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು" (ಯೋಬನು 1:1). ಇಲ್ಲಿ ಸತ್ಯವೇದದ ಮೊದಲ ವಾಕ್ಯದಲ್ಲಿ ನೀವು ದೇವರ ಹೃದಯವನ್ನು ಕಾಣಬಲ್ಲಿರಾ? ಅದು ಅಲ್ಲಿ ಗುರುತಿಸಲಾದ ಒಬ್ಬ ವ್ಯಕ್ತಿಯ ಕುರಿತಾಗಿತ್ತು - ಯೋಬ ಎನ್ನುವ ಹೆಸರಿನ ಒಬ್ಬಾತನು ವಾಸಿಸುತ್ತಿದ್ದದ್ದು ಊಚ್ ಎಂಬ ಊರಲ್ಲಿ (ಈತನನ್ನು ಬೇರೊಂದು ಊರಲ್ಲಿ ವಾಸಿಸಿದ್ದ ಇನ್ನೊಬ್ಬ ಯೋಬನೆಂದು ತಪ್ಪಾಗಿ ಗ್ರಹಿಸದಿರುವಂತೆ). ಮುಂದೆ ಈ ವ್ಯಕ್ತಿಯ ಬಗ್ಗೆ ತಮ್ಮ ಸಾಕ್ಷಿಯನ್ನು ದೇವರು ನೀಡುತ್ತಾರೆ - ಅದು ಅವನ ಅತ್ಯುತ್ತಮ ಗುಣದ ಬಗ್ಗೆಯೇ ಆಗಿತ್ತು, ಅವನ ಜಾಣತನ, ಅಥವಾ ಅವನ ಸಂಪತ್ತು, ಇಲ್ಲವೇ ಅವನು ಜನರಿಂದ ಪಡೆದಿದ್ದ ಕೀರ್ತಿ ಇವುಗಳ ಕುರಿತಾಗಿ ಅಲ್ಲ. ದೇವರ ದೃಷ್ಟಿಯಲ್ಲಿ ಹೆಚ್ಚಿನ ಬೆಲೆ ಯಾವುದಕ್ಕೆ ಇರುವದೆಂದು ಇಲ್ಲಿ ನಮಗೆ ಕಂಡುಬರುವದು - ಅದು ಯಥಾರ್ಥತೆ, ದೇವರಲ್ಲಿ ಭಯಭಕ್ತಿ ಮತ್ತು ಎಲ್ಲಾ ಕೆಟ್ಟದ್ದರಿಂದ ದೂರ ಸರಿಯುವದು. ನಾನು ನಿರೀಕ್ಷಿಸುತ್ತೇನೆ ಇದು ನಿಮ್ಮನ್ನು ಸವಾಲುಗೊಳಿಸುತ್ತದೆ ಎಂಬುದಾಗಿದೆ.

ಸೈತಾನನು ಲೋಕದ ಸುತ್ತಲೂ ಪ್ರಯಾಣ ಮಾಡಿ, ವಿಶೇಷವಾಗಿ ವಿಶ್ವಾಸಿಗಳನ್ನು ಗಮನಿಸುತ್ತಿರುತ್ತಾನೆ. ಆತನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ತಿರುಗುತ್ತಿರುತ್ತಾನೆ (1 ಪೇತ್ರ 5:8). ದೇವರು ಸೈತಾನನಿಗೆ - ''ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ?'' ಎಂದು ಕೇಳಿದಾಗ, ಸೈತಾನನು ಈ ರೀತಿಯಾಗಿ ಪ್ರತಿಕ್ರಿಯಿಸುತ್ತಾನೆ - ”ಹೌದು, ಆತನ ಬಗ್ಗೆ ನನಗೆ ಎಲ್ಲವೂ ಗೊತ್ತು” ಎಂಬುದಾಗಿ. ''ಪ್ರತಿಯೊಬ್ಬ ವ್ಯಕ್ತಿಯ ಆತ್ಮೀಕ ಸ್ಥಿತಿಯನ್ನು ಸೈತಾನನು ತಿಳಿದಿದ್ದಾನೆ. ಆತನ ದೆವ್ವಗಳು ಸಹ ಎಲ್ಲಕಡೆಯೂ ಸಂಚರಿಸಿ, ಮನುಷ್ಯರ ಜೀವಿತವನ್ನು ಪರೀಕ್ಷಿಸಿ, ಆತನಿಗೆ ವರದಿಯನ್ನು ಒಪ್ಪಿಸುತ್ತಿರುತ್ತಾರೆ. ಈ ಲೋಕದಲ್ಲಿನ ಪ್ರತಿಯೊಬ್ಬರ ಬಗ್ಗೆ ಎಲ್ಲವನ್ನೂ ಸೈತಾನನು ತಿಳಿದಿದ್ದಾನೆ ”. ಕರ್ತರು ಸೈತಾನನಿಗೆ ಯೋಬನ ಗುಣ ವಿಶೇಷವನ್ನು ವಿವರಿಸಿದರು: "ಅವನ ಸಮಾನನು ಭೂಲೋಕದಲ್ಲಿ ಎಲ್ಲೂ ಸಿಕ್ಕುವದಿಲ್ಲ - ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ" (ಯೋಬನು 1:8) ಎಂದು. ದೇವರ ಭಯ - ದೇವರಲ್ಲಿ ಗೌರವ ಮತ್ತು ಆದರ - ಇದು ದೇವಪ್ರೇರಿತವಾದ ಪ್ರಥಮ ಪುಸ್ತಕದಲ್ಲಿ ಮತ್ತೆ ಮತ್ತೆ ಕಂಡುಬರುವ ಸಂಗತಿ. ಇಲ್ಲಿ ದೇವರು ಯೋಬನನ್ನು ಲೋಕದ ಇತರ ಜನರೊಂದಿಗೆ ಹೋಲಿಸಿ ನೋಡಿದ್ದನ್ನು ನಾವು ಕಾಣುತ್ತೇವೆ. ಈ ದಿನವೂ ದೇವರು ಹಾಗೆಯೇ ಮಾಡುತ್ತಾರೆ.

ನಂತರ ಸೈತಾನನು ದೇವರಿಗೆ ಈ ರೀತಿಯಾಗಿ ಹೇಳುತ್ತಾನೆ - ”ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತು ಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ” (ಯೋಬ 1:10). ಸೈತಾನನು ಹೇಳುವಂತದ್ದರಿಂದ, ನಾವು ಮೂರು ದೊಡ್ಡ ಸತ್ಯಗಳನ್ನು ಕಲಿಯಬಹುದು. ದೇವರು ಒಬ್ಬ ದೈವಿಕ ಮನುಷ್ಯನ ಸುತ್ತಲೂ ಬೇಲಿಯನ್ನು ಹಾಕಿದ್ದಾನೆ: ಮೊದಲನೇಯದಾಗಿ ವೈಯುಕ್ತಿಕವಾಗಿ, ಎರಡನೆಯದಾಗಿ ಆತನ ಕುಟುಂಬದ ಸುತ್ತಲೂ, ಮತ್ತು ಮೂರನೇಯದಾಗಿ ಆತನ ಹಣಕಾಸಿನ ಹಾಗೂ ಆತನ ಸ್ವಾಸ್ತ್ಯದ ಸುತ್ತಲೂ. ಸೈತಾನನು ಆತ್ಮೀಕ ಕ್ಷೇತ್ರದೊಳಗೆ ನೋಡಬಲ್ಲಾತನಾಗಿರುವುದರಿಂದ, ಅದರ ಬಗ್ಗೆ ಅರಿತವನಾಗಿದ್ದಾನೆ. ನಾವು ಆ ಬೇಲಿಯನ್ನು ನೋಡಲು ಆಗುವುದಿಲ್ಲ, ಆದರೆ ಆ ಬೇಲಿಗಳು ಇವೆ. ನಾನು ದೈವಿಕ ಜೀವಿತವನ್ನು ಜೀವಿಸಿದರೆ, ನನ್ನ ಸುತ್ತಲೂ ಮೂರು ಬೇಲಿಗಳನ್ನು ದೇವರು ಹಾಕಿರುತ್ತಾನೆ, ಇದು ಒಂದು ದೊಡ್ಡ ಸಮಾಧಾನ ನನಗೆ. ದೇವರ ಅನುಮತಿಯಿಲ್ಲದೇ ಈ ಬೇಲಿಗಳು ತೆರೆಯಲ್ಪಡುವುದಿಲ್ಲ.

ಎಲ್ಲಾ ಶೋಧನೆಗಳಿಗೆ ಯೋಬನ ಪ್ರತಿಕ್ರಿಯೆ ಹೇಗಿತ್ತೆಂದು ಈಗ ನೋಡಿರಿ. ಎಲ್ಲವೂ ನಷ್ಟವಾದ ವಿಷಯ ಅವನಿಗೆ ತಿಳಿಯಿತು. ಅವನ ಆಳುಗಳು ಒಬ್ಬೊಬ್ಬರಾಗಿ ಬಂದು, ಎಲ್ಲವೂ ನಿರ್ಮೂಲವಾದುದನ್ನು ಅವನಿಗೆ ತಿಳಿಸಿದರು. ಆಗ ಯೋಬನು ಎದ್ದು, ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು, ನೆಲದಲ್ಲಿ ಅಡ್ಡಬಿದ್ದು ದೇವರನ್ನು ನಮಸ್ಕರಿಸಿದನು(ಯೋಬನು 1:20). ದೇವಪ್ರೇರಿತ ವಾಕ್ಯದ ಮೊದಲ ಹಾಳೆಯಲ್ಲೇ ನಾವು ನೋಡುವ ಇನ್ನೊಂದು ಸಂಗತಿ ಯಾವುದೆಂದರೆ: ‘ದೈವಿಕ ಮನುಷ್ಯನು ಒಬ್ಬ ಆರಾಧಕನು’ ಎಂದು. ಮೂಲತ: ಒಬ್ಬ ದೈವಿಕ ಮನುಷ್ಯನು ಸತ್ಯವೇದವನ್ನು ತಿಳುಕೊಳ್ಳುವುದಕ್ಕಿಂತ ಹೆಚ್ಚಾಗಿ ಮತ್ತು ಕರ್ತನ ಸೇವೆಯನ್ನು ಮಾಡುವುದಕ್ಕಿಂತ ಹೆಚ್ಚಾಗಿ, ಆರಾಧಿಸುವನಾಗಿರುತ್ತಾನೆ. ನಿನ್ನಲ್ಲಿ ಎಲ್ಲವು ಇದ್ದಾಗಲೂ ಸಹ ನೀನು ಒಬ್ಬ ಆರಾಧಕನಾಗಿ ಇರಬೇಕು ಮತ್ತು ನಿನ್ನಲ್ಲಿರುವ ಎಲ್ಲವೂ ನಷ್ಟವಾದಾಗಲೂ ಸಹ ನೀನು ಒಬ್ಬ ಆರಾಧಕನಾಗಿ ಇರಬೇಕು. ಯೇಸುವು ಹೇಳಿದಂತೆ, "ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ, ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು, ಮತ್ತು ತಂದೆಯು ಇಂಥ ಆರಾಧಕರನ್ನು ಅಪೇಕ್ಷಿಸುತ್ತಾನೆ" (ಯೋಹಾನ 4:24). ದೇವರನ್ನು ಆರಾಧಿಸುವದು ಎಂದರೆ ಸರ್ವಸ್ವವನ್ನೂ ದೇವರಿಗೇ ಒಪ್ಪಿಸುವದು. ಯೋಬನು ಹೀಗೆಂದನು, "ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿ ಹೋಗುವೆನು. ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ". ಅಷ್ಟೆಲ್ಲಾ ನಡೆದರೂ ಯೋಬನು ಪಾಪ ಮಾಡಲಿಲ್ಲ, ದೇವರ ಮೇಲೆ ತಪ್ಪು ಹೊರಿಸಲೂ ಇಲ್ಲ (ಯೋಬನು 1:21). ಯೋಬನು ಇಲ್ಲಿ ಪ್ರಸ್ತಾಪಿಸಿದ ವಿಷಯ ಪ್ರಾಯಶ: ಭೂಮಿಯ ಗರ್ಭದಿಂದ ತಾನು ಬೆತ್ತಲೆಯಾಗಿ ಬಂದದ್ದು ಮತ್ತು ಮುಂದೆ ತಾನು ಅಲ್ಲಿಗೆ ಬೆತ್ತಲೆಯಾಗಿ, ಧೂಳಾಗಿ ಹಿಂದಿರುಗಲಿರುವದು ಇರಬೇಕು. ಅವನು ತನ್ನ ಜೀವಿತದಲ್ಲಿ ಕರ್ತರು ಏನೇ ಅನುಮತಿಸಿದರೂ ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದನು.

ತನ್ನ ಎಲ್ಲಾ ಸೃಷ್ಟಿಯ ಮೇಲೆ ಹಿಡಿತವನ್ನು ಹೊಂದಿರುವಂತ ಸರ್ವಶಕ್ತನಾದ ದೇವರಲ್ಲಿ ನಂಬಿಕೆಯನ್ನು ಇಡುವುದರಿಂದ, ನಾವು ಸಮಸ್ಯೆಗಳನ್ನು ಎದುರಿಸುವಾಗಲೂ, ಹಿಂಸೆಗಳನ್ನು ಎದುರಿಸುವಾಗಲೂ ಮತ್ತು ಶತ್ರುಗಳನ್ನು ಎದುರಿಸುವಾಗಲೂ ಸಹ, ನಮ್ಮ ಹೃದಯದೊಳಗೆ ವಿಶ್ರಾಂತಿಯು ದೊರಕುತ್ತದೆ

ಯೋಬನ ಪುಸ್ತಕವನ್ನು ನಾವು ಓದುವಾಗ, ಆತನ ಮೂರು ಜನ ಸ್ನೇಹಿತರು (ಎಲೀಫಜನು, ಬಿಲ್ದದನು, ಚೋಫರನು) ಯೋಬನನ್ನು ದೂಷಿಸಿದರು. ನಾಲ್ಕನೆಯವನಾದ ಎಲಿಹು ತನ್ನ ದೂಷಣೆಗಳಲ್ಲಿ ಶಾಂತನಾಗಿದ್ದರೂ, ಯೋಬನನ್ನು ದೂಷಿಸಿದನು. ದೂಷಿಸುವಂತದ್ದು ಸೈತಾನನ ಒಂದು ನಡತೆಯಾಗಿದೆ ಮತ್ತು ದೂಷಿಸುವಂತವರು ಸೈತಾನನ ಸಹ ಕೆಲಸಗಾರರಾಗಿದ್ದಾರೆ. ಆದರೆ ನಿಜವಾದ ದೈವಿಕ ಮನುಷ್ಯನು ಆ ದೂಷಣೆಗಳಿಂದ ತನ್ನ ಮೇಲೆ ಪರಿಣಾಮ ಬೀರುವಂತೆ ಮಾಡಿಕೊಳ್ಳುವುದಿಲ್ಲ. ಯಾರು ಆತ್ಮಿಕ ಸೂಕ್ಷ್ಮಗ್ರಹಿಕೆಯನ್ನು ಹೊಂದಿರುತ್ತಾರೋ, ಅವರು ದೈವಿಕ ಮನುಷ್ಯನನ್ನು ಗ್ರಹಿಸಿಕೊಳ್ಳುತ್ತಾರೆ, ಜನರು ದೈವಿಕ ಮನುಷ್ಯ ಬಗ್ಗೆ ಏನೇ ಅಭಿಪ್ರಾಯವನ್ನು ಹೊಂದಿದ್ದರ ಹೊರತಾಗಿಯೂ ಸಹ.

ಸತ್ಯವೇದದ ಮೊದಲ ಪುಸ್ತಕದಲ್ಲಿಯೇ, ನಾವು ಪ್ರಾರಂಭದ ಮಾದರಿಯಾದ ”ಆರೋಗ್ಯ ಮತ್ತು ಐಶ್ವರ್ಯದ ಸುವಾರ್ತೆಯನ್ನು” ನೋಡುತ್ತೇವೆ. ಮೂರು ಬೋದಕರುಗಳು ಯೋಬನಿಗೆ ಹೇಳುತ್ತಾರೆ - ನಿನ್ನ ಆರೋಗ್ಯ ಮತ್ತು ಐಶ್ವರ್ಯವನ್ನು ಕಳೆದುಕೊಂಡಿದ್ದು ಏಕೆಂದರೆ, ನೀನು ದೇವರ ಆಶಿರ್ವಾದವನ್ನು ಕಳೆದುಕೊಂಡಿದ್ದಕ್ಕಾಗಿ ಎಂಬುದಾಗಿ. ಅವರ ಸಂದೇಶ ಏನಾಗಿತ್ತು ಎಂದರೆ, ದೇವರ ಆಶಿರ್ವಾದವು ಯಾವಾಗಲೂ ಅಭಿವೃಧಿ ಮತ್ತು ಆರೋಗ್ಯವನ್ನು ತರುತ್ತದೆ ಎಂಬುದಾಗಿರುತ್ತದೆ. ಇದನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ, ಈ ಆರೋಗ್ಯ ಮತು ಐಶ್ವರ್ಯವುಳ್ಳಂತ ಸುವಾರ್ತೆಯು ದೇವರನ್ನು ಅರಿಯದೇ ಇರುವಂತ ಜನರಿಂದ ಮೊದಲು ಬೋಧಿಸಲ್ಪಟ್ಟಿದೆ. ಇಂದು ಸಹ ಅದೇ ರೀತಿಯಾಗಿದೆ. ಇದನ್ನು ಯಾವಾಗಲೂ ನೆನಪಿಡಿ - ಯೋಬನು ತನ್ನ ಆರೋಗ್ಯವನ್ನು ಮತ್ತು ಐಶ್ವರ್ಯವನ್ನು ದೇವರ ಪರಿಪೂರ್ಣ ಚಿತ್ತದಲ್ಲಿಯೇ ಕಳೆದುಕೊಂಡನು. ಆದರೆ ”ಆರೋಗ್ಯ ಮತ್ತು ಐಶ್ವರ್ಯ”ವನ್ನು ಬೋಧಿಸಿದಂತ ಆ ಮೂರು ಬೋಧಕರುಗಳು ಸಂಪೂರ್ಣವಾಗಿ ದೇವರ ಚಿತ್ತದಿಂದ ಹೊರಗಿದ್ದರು. ದೇವರ ಸ್ಪಷ್ಟ ಮಾತು ಅವರಿಗೆ ಇದಾಗಿತ್ತು- ”ಹಾಗಾದರೆ ಈಗ ಏಳು ಎತ್ತುಗಳೂ ಏಳು ಹೋತಗಳೂ ನಿಮಗೋಸ್ಕರ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಬನ್ನಿರಿ; ಅವುಗಳನ್ನು ನಿಮಗೋಸ್ಕರ ದಹನಬಲಿಯಾಗಿ ಅರ್ಪಿಸಿರಿ: ಮತ್ತು ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥನೆ ಮಾಡುವನು. ಯಾಕೆಂದರೆ ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ಮಾಡದ ಹಾಗೆ ಅವನ ಪ್ರಾರ್ಥನೆಯನ್ನು ಅಂಗೀಕರಿಸುವೆನು. ಯಾಕೆಂದರೆ ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ” (ಯೋಬ 42:8). (ಕೆ.ಜೆ.ವಿ ಬೈಬಲ್)

ದೇವರು ಯೋಬನಿಗೆ ತನ್ನ ಸರ್ವಶಕ್ತ ಬಲವನ್ನು ಮತ್ತು ಎಲ್ಲಾ ಸೃಷ್ಟಿಯ ಮೇಲಿನ ತನ್ನ ಹಿಡಿತವನ್ನು ತೋರಿಸಿದನು. ಅದಕ್ಕಾಗಿ ಎಲ್ಲವನ್ನು ಹೇಳುವ ಅಗತ್ಯವಿತ್ತು ಮತ್ತು ಯೋಬನು ದೀನನಾದನು. ನಾಲ್ಕು ಬೋಧಕರುಗಳು ತಾಸುಗಟ್ಟಲೇ ನೇರವಾಗಿ ಯೋಬನ ಮೇಲೆ ಅಕ್ರಮಣ ಮಾಡಿದರೂ, ಏನೂ ಸಾಧಿಸಲಾಗಲಿಲ್ಲ. ದೇವರಿಂದ ಪರೋಕ್ಷ ವಿಧಾನವು ಕೆಲವೇ ನಿಮಿಷಗಳಲ್ಲಿ ಎಲ್ಲವನ್ನು ಸಾಧಿಸಿತು. ತನ್ನ ಎಲ್ಲಾ ಸೃಷ್ಟಿಯ ಮೇಲೆ ಹಿಡಿತವನ್ನು ಹೊಂದಿರುವಂತ ಸರ್ವಶಕ್ತನಾದ ದೇವರಲ್ಲಿ ನಂಬಿಕೆಯನ್ನು ಇಡುವುದರಿಂದ, ನಾವು ಸಮಸ್ಯೆಗಳನ್ನು ಎದುರಿಸುವಾಗಲೂ, ಹಿಂಸೆಗಳನ್ನು ಎದುರಿಸುವಾಗಲೂ ಮತ್ತು ಶತ್ರುಗಳನ್ನು ಎದುರಿಸುವಾಗಲೂ ಸಹ, ನಮ್ಮ ಹೃದಯದೊಳಗೆ ವಿಶ್ರಾಂತಿಯು ದೊರಕುತ್ತದೆ. ಕರ್ತನು ಯೋಬನಿಗೆ ಈ ರೀತಿಯಾಗಿ ಕೇಳುತ್ತಾರೆ - ”ಸರ್ವಶಕ್ತನ ಸಂಗಡ ಇನ್ನೂ ವಾಧಿಸುತ್ತೀಯೋ?” ಎಂಬುದಾಗಿ (ಯೋಬ:40:2). ಯೋಬನು, ಪ್ರತಿಯೊಂದು ವಾದಕ್ಕೆ ತಕ್ಷಣಕ್ಕೆ ಉತ್ತರಕೊಡುತ್ತಿದ್ದವನು, ಈಗ ಮೌನವನ್ನು ತಾಳಿದನು. ಈಗ ಆತನು ಈ ರೀತಿಯಾಗಿ ಹೇಳುವವನಾದನು - ”ಕರ್ತನೆ, ನಾನು ಏನು ಅಲ್ಲ ಮತ್ತು ನನ್ನಲ್ಲಿ ಹೇಳಲು ಏನು ಉಳಿದಿಲ್ಲ. ನಾನು ಇನ್ನುಮುಂದೆ ಏನು ಮಾತನಾಡುವುದಿಲ್ಲ” ಎಂಬುದಾಗಿ. ಸತ್ಯವೇದವನ್ನು ಪ್ರೇರಣೆಗೊಳಿಸಿದ ಈ ಮೊದಲ ಪುಸ್ತಕವು ನಮಗೆ ಬೋಧಿಸುವುದೇನೆಂದರೆ - ”ನಾವು ಏನು ಅಲ್ಲದವರು” ಎಂಬುದನ್ನು ಗ್ರಹಿಸಿಕೊಂಡು, ದೇವರೇ ನಮ್ಮ ಜೀವಿತದಲ್ಲಿ ಎಲ್ಲವೂ ಆಗಿದ್ದಾನೆ ಎಂಬುದಾಗಿ ತಿಳಿದುಕೊಳ್ಳಬೇಕು ಎಂದು ದೇವರು ಬಯಸುತ್ತಾರೆ ಎಂಬುದಾಗಿ. ನಂತರ ನಮ್ಮ ಜೀವಿತವು ಆತನ ಉದ್ದೇಶಗಳನ್ನು ಪೂರೈಸುತ್ತದೆ ಮತ್ತು ಅಸಂಖ್ಯಾತರಿಗೆ ನಮ್ಮ ಜೀವಿತವು ಆಶಿರ್ವಾದ ದಾಯಕವಾಗಿರುತ್ತದೆ. ದೇವರು ಒಬ್ಬನನ್ನು ಉಪಯೋಗಿಸಿಕೊಳ್ಳುವ ಮೊದಲು, ಆತನನ್ನು ಏನು ಇಲ್ಲದವನನ್ನಾಗಿ ಇಳಿಸುತ್ತಾನೆ.

ಇಲ್ಲಿ ನಾವು ಸತ್ಯವೇದವನ್ನು ಪ್ರೇರಣೆಗೊಳಿಸಿದ ಮೊದಲ ಪುಸ್ತಕದಿಂದ ಕೆಲವು ಮಹಿಮೆಯುಳ್ಳ ಸತ್ಯವನ್ನು ನಾವು ಕಲಿತುಕೊಳ್ಳಬಹುದು :

  • 1. ತನ್ನನ್ನು ಆರಾಧಿಸುವಂತಹ ಒಬ್ಬ ದೈವಿಕ ಮನುಷ್ಯನಿಗಾಗಿ ದೇವರು ಭೂಲೋಕದಲ್ಲಿ ಎಲ್ಲಾ ಕಡೆಯು ನೋಡುತ್ತಿರುತ್ತಾರೆ.
  • 2. ದೈವಿಕ ಮನುಷ್ಯನು ಮತ್ತು ಆತನ ಕುಟುಂಬಗಳು ಸೈತಾನನ ಅಕ್ರಮಣದ ಗುರಿಯಾಗಿದ್ದಾರೆ.
  • 3. ದೇವರ ಅನುಮತಿ ದೊರೆತ ನಂತರವಷ್ಟೇ ಸೈತಾನನು ನಮ್ಮ ಮೇಲೆ ಅಕ್ರಮಣ ಮಾಡಲು ಸಾಧ್ಯ
  • 4. ದೈವಿಕ ಮನುಷ್ಯನು ಒಬ್ಬ ಕಠಿಣ ಹೆಂಡತಿಯನ್ನು ಹೊಂದಬಹುದು. ಆದರೆ ದೇವರು ಆಕೆಯನ್ನು ಬದಲಾಯಿಸುತ್ತಾರೆ.
  • 5. ದೈವಿಕ ಮನುಷ್ಯನು ಧಾರ್ಮಿಕ ಜನರಿಂದ ತಪ್ಪಾಗಿ ಅರ್ಥೈಸಲ್ಪಟ್ಟಿರುತ್ತಾನೆ.
  • 6. ದೈವಿಕ ಮನುಷ್ಯನ ಕಾರ್ಯಗಳನ್ನು ದೇವರು ಮತ್ತು ಸೈತಾನನು, ಇಬ್ಬರು ತುಂಬಾ ಹತ್ತಿರದಿಂದ ಗಮನಿಸುತ್ತಿರುತ್ತಾರೆ.
  • 7. ಪರಿಪೂರ್ಣತೆಗೆ ಮಾರ್ಗವು, ಬಾಧೆ ಪಡುವುದು ಮತ್ತು ತಪ್ಪಾಗಿ ಅರ್ಥೈಸಲ್ಪಟ್ಟಿರುವುದಾಗಿದೆ.
  • 8. ಆರೋಗ್ಯ ಮತ್ತು ಸ್ವಾಸ್ತ್ಯವು ದೇವರ ಆಶಿರ್ವಾದದ ಗುರುತಲ್ಲ.
  • 9. ದೇವರು ನಿಜವಾಗಿಯೂ ಇದ್ದಾನೆ ಎಂಬುದನ್ನು ನಾವು ನೋಡುವಾಗ, ನಮ್ಮನ್ನ ನಾವು ಏನು ಅಲ್ಲದವರಾಗಿ ತಿಳಿದುಕೊಳ್ಳುತ್ತೇವೆ.
  • 10. ದೇವರು ಎಲ್ಲಾ ಸಂಗತಿಗಳನ್ನು ನಮ್ಮ ಒಳ್ಳೇಯದಕ್ಕಾಗಿಯೇ ಯೋಜಿಸಿದ್ದಾನೆ.