ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಆತ್ಮಿಕ ಬೆಳವಣಿಗೆ :

ಎಫೆಸ 4:3, 13 ರಲ್ಲಿ ಪೌಲನು ಕ್ರಿಸ್ತನ ದೇಹದಲ್ಲಿನ ಐಕ್ಯತೆಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತಾನೆ. ಆತನು ಹೇಳುವುದೇನೆಂದರೆ, ವಿಶ್ವಾಸಿಗಳಾಗಿ ನಾವೆಲ್ಲರೂ ''ನಂಬಿಕೆಯ ಐಕ್ಯತೆಯನ್ನು ತಲುಪುವವರೆಗೂ, ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳಬೇಕು...''. ವಿಶ್ವಾಸಿಗಳಾಗಿ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡದ (ನಾವು ಇನ್ನೊಬ್ಬರೊಡನೆ ಒಪ್ಪಿಕೊಳ್ಳದ) ಅನೇಕ ಕ್ಷೇತ್ರಗಳಿರಬಹುದು. ಕ್ರಿಸ್ತನು ಬಂದು ತನ್ನ ಸಭೆಯನ್ನು ತೆಗೆದುಕೊಂಡು ಹೋಗುವುದಕ್ಕಿಂತ ಮುಂಚೆ ಸಭೆಯು ಸಂಕಟಗಳನ್ನು ಎದುರಿಸಬೇಕು ಎಂಬ ನನ್ನ ಅಭಿಪ್ರಾಯವನ್ನು ನೀವು ಒಪ್ಪದೇ ಇರಬಹುದು. ಸಂಕಟಗಳಿಗಿಂತ ಮುಂಚೆಯೇ ಕ್ರಿಸ್ತನು ಬರುತ್ತಾನೆ ಎಂದು ನೀವು ಭಾವಿಸಬಹುದು. ಈ ರೀತಿಯಾಗಿ ಅನೇಕ ಅಭಿಪ್ರಾಯಗಳಲ್ಲಿ ನಾವು ವಿಭಿನ್ನರಾಗಿರಬಹುದು. ನಂಬಿಕೆಯ ಎಲ್ಲಾ ವಿಷಯಗಳಲ್ಲಿ ನಾವು ಐಕ್ಯತೆಯನ್ನು ಇನ್ನೂ ತಲುಪಿಲ್ಲ. ಆದರೆ ನಾವು ಅದನ್ನು ತಲುಪುವವರೆಗೆ, ಆತ್ಮದಲ್ಲಿ ಐಕ್ಯತೆಯಿಂದ ಇರಬೇಕು. ನಾವು ಆತ್ಮದಲ್ಲಿ ಐಕ್ಯರಾಗುವುದಕ್ಕೆ ನಂಬಿಕೆಯ ಎಲ್ಲಾ ವಿಷಯಗಳಲ್ಲಿ ಐಕ್ಯರಾಗುವವರೆಗೆ ಕಾಯಬೇಕಾದ ಅವಶ್ಯಕತೆಯಿಲ್ಲ.

''ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ ತನಕ'' ಕ್ರಮೇಣವಾಗಿ ಬೆಳೆಯುತ್ತಿರಬೇಕು (ಎಫೆಸ 4:13). ನಾವು ಮೊದಲು ಬೆಳೆಯಬೇಕು ಮತ್ತು ಈ ಪರಿಪೂರ್ಣತೆಯೆಡೆಗೆ ಬೆಳೆಯಲು ನಾವು ಇತರರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆಯಾಗಿರಬೇಕು. ''ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು'' (ಎಫೆಸ 4:14).

ನಾವು ವಿವೇಚನೆಯಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ವಂಚನೆಗೆ ಮತ್ತು ಸುಳ್ಳು ಬೋಧನೆಗಳಿಗೆ ನಾವು ಒಳಗಾಗಲು ದೇವರು ಅನುಮತಿಸುತ್ತಾನೆ. ಇಲ್ಲವಾದಲ್ಲಿ ನಮ್ಮ ವಿವೇಚನೆಯು ಬೆಳೆಯುವುದಿಲ್ಲ. ಅದಕ್ಕಾಗಿ ದೇವರು ಅನೇಕ ವಂಚನೆಗಾರರು ಮತ್ತು ಸುಳ್ಳು ಪ್ರವಾದಿಗಳು ಕ್ರೈಸ್ತ ಸಾಮ್ರಾಜ್ಯದಲ್ಲಿ (ಸಭೆಯಲ್ಲಿ) ಇರುವಂತೆ ಅನುಮತಿಸುತ್ತಾನೆ. ಇದರಿಂದಾಗಿ ಯಾರ ಆತ್ಮವು ಸರಿಯಾಗಿದೆ ಮತ್ತು ಯಾರ ಆತ್ಮವು ಸರಿಯಾಗಿಲ್ಲ ಎಂಬುದನ್ನು ವಿವೇಚಿಸಲು ನಾವು ಸಾಮಥ್ರ್ಯವುಳ್ಳವರಾಗುತ್ತೇವೆ. ನಾವು ಮತ್ತೊಬ್ಬರನ್ನು ತೀರ್ಪು ಮಾಡಬೇಕಾದ ಅವಶ್ಯಕತೆ ಇಲ್ಲ. ನಾವು ವಿವೇಚಿಸುವವರಾಗಬೇಕು. ಆಗ ನಮ್ಮ ಆತ್ಮಿಕ ವಿವೇಚನೆಯು ಬೆಳೆಯುತ್ತದೆ. ಎಫೆಸ 4:15 ರಲ್ಲಿ, ಪೌಲನು ನಮಗೆ ಒತ್ತಾಯಿಸುವುದೇನೆಂದರೆ, - ''ಪ್ರೀತಿಯಿಂದ ಸತ್ಯವನ್ನನುಸರಿಸುತ್ತಾ ಬೆಳೆಯಬೇಕು'' ಎಂಬುದಾಗಿ. ಸತ್ಯ ಮತ್ತು ಪ್ರೀತಿ ಇವುಗಳ ನಡುವಿರುವ ಸಮತೋಲನವನ್ನು ಗುರುತಿಸಿ. ನಾವು ಸತ್ಯವನ್ನು ಮಾತನಾಡಬೇಕಾ? ಹೌದು. ಯಾವಾಗಲೂ. ಆದರೆ ನಾವು ಇಷ್ಟಬಂದ ಹಾಗೇ ಯಾವುದೇ ವಿಧದಲ್ಲಿ ಸತ್ಯವನ್ನು ಮಾತನಾಡಲು ಅನುಮತಿಸಲ್ಪಟ್ಟಿದ್ದೇವಾ? ಇಲ್ಲ. ನಾವು ಸತ್ಯವನ್ನು ಪ್ರೀತಿಯಲ್ಲಿ ಮಾತನಾಡಬೇಕು. ನೀವು ಪ್ರೀತಿಯಲ್ಲಿ ಸತ್ಯವನ್ನು ಮಾತನಾಡಲು ಆಗುತ್ತಿಲ್ಲವೆಂದರೆ, ನೀವು ಜನರನ್ನು ಪ್ರೀತಿಸುವಂತ ಸ್ಥಳಕ್ಕೆ ತಲುಪುವವರೆಗೆ ಜನರಿಗೆ ಸತ್ಯವನ್ನು ಹೇಳಬೇಡಿ. ಪ್ರೀತಿಯು ಹಲಗೆ ಇದ್ದ ಹಾಗೇ, ನೀವು ಸತ್ಯವೆಂಬ ಲೇಖನಿಯನ್ನು ಅದರ ಮೇಲೆ ಬರೆಯಲು ಉಪಯೋಗಿಸಬೇಕು. ಬರೆಯಲು ಹಲಗೆಯಿಲ್ಲದೇ ನೀವು ಸತ್ಯವನ್ನು ಬರೆಯಲು ಪ್ರಯತ್ನಿಸಿದರೆ, ನೀವು ಗಾಳಿಯಲ್ಲಿ ಬರೆಯುತ್ತಿರುತ್ತೀರಿ ಅಷ್ಟೇ. ನೀವು ಏನನ್ನು ಬರೆಯುತ್ತಿದ್ದೀರಿ ಎಂಬುದನ್ನು ಯಾರು ಕೂಡ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ವೇದಿಕೆಯಲ್ಲಿ (ಸಾರ್ವಜನಿಕವಾಗಿ) ಮತ್ತು ಖಾಸಗಿ ಸಂಭಾಷಣೆಯಲ್ಲಿ ಯಾವಾಗಲೂ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುವಂತದ್ದರಿಂದ ನಾವು ''ಶಿರಸ್ಸಾದ ಕ್ರಿಸ್ತನೊಳಗೆ ಎಲ್ಲಾ ಅಂಶಗಳೊಳಗೆ ಬೆಳೆಯುತ್ತೇವೆ''.

ಅನ್ಯೋನತೆ :

ಎಫೆಸ 4:16ರಲ್ಲಿ, ಪೌಲನು ಮಾತನಾಡುವುದೇನೆಂದರೆ - ''ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ''.

ಇಲ್ಲಿ ಜೋಡಣೆ ಎಂಬ ಪದವು ಅನ್ಯೋನ್ಯತೆ ಎಂಬುದಕ್ಕೆ ಹೋಲಿಸಿ ಮಾತನಾಡಿರುವಂತದ್ದಾಗಿದೆ. ಕೇವಲ ಒಂದು ತೋಳಿನಲ್ಲಿ ಎಷ್ಟು ಜೋಡಣೆ ಇದೆ ಎಂಬುದನ್ನು ಪರಿಗಣಿಸಿ. ಭುಜದಲ್ಲಿ ಜೋಡಣೆ ಇದೆ, ಮೊಣಕೈಯಲ್ಲಿ ಜೋಡಣೆ ಇದೆ, ಮಣಿಕಟ್ಟಿನಲ್ಲಿ ಒಂದು ಜೋಡಣೆ ಇದೆ ಮತ್ತು ಪ್ರತಿಯೊಂದು ಬೆರಳಿನಲ್ಲಿ ಮೂರು ಜೋಡಣೆ ಇದೆ. ಕಡೇ ಪಕ್ಷ 17 ಜೋಡಣೆಗಳಿವೆ. ಈ ಜೋಡಣೆಗಳು ನಿಮ್ಮ ತೋಳು ಆರಾಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನೀವು ಬಲವಾದ ಮೇಲಿನ ತೋಳನ್ನು ಮತ್ತು ಬಲವಾದ ಕೆಳಗಿನ ತೋಳನ್ನ ಹೊಂದಿದ್ದು ನಿಮ್ಮ ಮೊಣಕೈ ಬಿಗಿಯಾಗಿದ್ದರೆ, ಆ ತೋಳಿನಿಂದ ನೀವು ಏನು ಮಾಡಲಿಕ್ಕೆ ಸಾಧ್ಯ? ಏನು ಇಲ್ಲ. ಕೇವಲ ಬಲವು ನಿಮ್ಮ ತೋಳನ್ನು ಉಪಯೋಗಕಾರಿಯನ್ನಾಗಿ ಮಾಡುವುದಿಲ್ಲ. ಇದು ಜೋಡಣೆಗಳಿಂದ ಕಾರ್ಯನಿರ್ವಹಿಸುತ್ತಿರುತ್ತವೆ. ಕ್ರಿಸ್ತನ ದೇಹದೊಳಗೆ ಇದರ ಅನ್ವಯಿಸುವಿಕೆಯನ್ನು ಪರಿಗಣಿಸೋಣ. ಕ್ರಿಸ್ತನ ದೇಹದಲ್ಲಿ ಒಬ್ಬ ಒಳ್ಳೆಯ ಸಹೋದರ, ಅಂದರೆ ಬಲವಾದ ಮೇಲಿನ ತೋಳು ಮತ್ತು ಇನ್ನೂಬ್ಬ ಒಳ್ಳೆಯ ಸಹೋದರ ಅಂದರೆ ಬಲವಾದ ಕೆಳಗಿನ ತೋಳು ಇರುತ್ತಾರೆ. ಆದರೆ ಇಬ್ಬರು ಒಟ್ಟಾಗಿ ಅನ್ಯೋನ್ಯತೆಯಿಂದಿರಲು ಆಗುವುದಿಲ್ಲ. ಇಂದು ಕ್ರಿಸ್ತನ ದೇಹದಲ್ಲಿ (ಸಭೆಯಲ್ಲಿ) ಇದೊಂದು ದುರಂತವಾಗಿದೆ. ಮಾನವನ ದೇಹದಲ್ಲಿ, ಸಂಧಿವಾತ ಖಾಯಿಲೆ ಇದ್ದರೆ, ಅದು ತುಂಬಾ ನೋವು ತರುತ್ತಿರುತ್ತದೆ. ಅನೇಕ ಸ್ಥಳೀಯ ಸಭೆಗಳು ಸಂಧಿವಾತ ಖಾಯಿಲೆಯನ್ನು ಹೊಂದಿವೆ. ನಮ್ಮ ಜೋಡಣೆಗಳು ಸರಿಯಾಗಿ ಕಾರ್ಯನಿರ್ವಹಿಸಿದಾಗ, ಅಲ್ಲಿ ಶಬ್ದವಿರುವುದಿಲ್ಲ. ಆದರೆ ದೇಹವು ಸಂಧಿವಾತ ಖಾಯಿಲೆಯನ್ನು ಹೊಂದಿದಾಗ, ಶಬ್ದ ಉಂಟು ಮಾಡುತ್ತದೆ ಮತ್ತು ಪ್ರತಿಯೊಂದು ಕ್ಷಣವು ದೇಹದಿಂದ ಅನಾರೋಗ್ಯಕರ ಶಬ್ದವೇ ಬರುತ್ತಿರುತ್ತದೆ. ಕೆಲವು ವಿಶ್ವಾಸಿಗಳ ಮಧ್ಯೆ ಏನನ್ನು ಅವರು ''ಅನ್ಯೋನ್ಯತೆ''ಯೆಂದು ಕರೆಯುತ್ತಾರೋ ಅದು ಕೇವಲ ಶಬ್ದವಾಗಿದೆ. ಆದರೆ ಜೋಡಣೆಯು ಚೆನ್ನಾಗಿ ಕಾರ್ಯನಿರ್ವಹಿಸಿದಾಗ, ಅಲ್ಲಿ ಶಬ್ದವೇ ಇರುವುದಿಲ್ಲ. ಇತರರೊಟ್ಟಿಗೆ ನಮ್ಮ ಅನ್ಯೋನ್ಯತೆಯು ಹೀಗಿರಬೇಕು. ನಿಮ್ಮ ಅನ್ಯೋನ್ಯತೆಯು ಮತ್ತೊಬ್ಬರೊಟ್ಟಿಗೆ ಹಾಗಿಲ್ಲವಾದರೆ, ಆ ಸಂಧಿವಾತ ಖಾಯಿಲೆಗಾಗಿ ಕೆಲವು ಮಾತ್ರೆಗಳನ್ನು ನೀವು ಪಡೆದುಕೊಳ್ಳಬೇಕು. ನಿಮ್ಮ ''ಸ್ವಾರ್ಥ ಜೀವಿತಕ್ಕೆ''ಸಾಯಬೇಕು, ಆಗ ನೀವು ಸ್ವಸ್ಥ ಹೊಂದುತ್ತೀರಿ ಮತ್ತು ಮತ್ತೊಬ್ಬರೊಟ್ಟಿಗೆ ನಿಮ್ಮ ಅನ್ಯೋನ್ಯತೆಯು ಅದ್ಭುತವಾಗಿರುತ್ತದೆ. ಕ್ರಿಸ್ತನ ದೇಹದಲ್ಲಿ ದೇವರ ಚಿತ್ತ ಇದೇ ಆಗಿದೆ.

,