ಪಿಲಿಪ್ಪಿ 3ನೇ ಅಧ್ಯಾಯದಲ್ಲಿ, ನಾವು ದೇವರ ಪರಿಪೂರ್ಣ ಉದ್ದೇಶವನ್ನು ಹೊಂದಲು, ನಮ್ಮ ಮನಸ್ಸಿನ ನಡವಳಿಕೆ ಯಾವ ರೀತಿ ಇರಬೇಕೆಂಬುದನ್ನು ಪೌಲನು ವಿವರಿಸಿದ್ದಾನೆ. ಪೌಲನು ನಮಗೆ ಈ ರೀತಿಯಾಗಿ ಹೇಳುತ್ತಾನೆ - ನಾವು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ನಮ್ಮ ಮುಂದಿಟ್ಟಿರುವ ಸಂಗತಿಗಳನ್ನು ನೋಡುವವರಾಗಿರಬೇಕು. ಪ್ರತಿಯೊಂದು ಶೋಧನೆ ಇರುವಾಗಲೂ ಸಹ, ಪೌಲನು ಹಿಂದಕ್ಕೆ ನೋಡುವುದನ್ನು ನಿರಾಕರಿಸಿದನು. ಅ.ಕೃತ್ಯಗಳು 20:23, 24 ರಲ್ಲಿ ಆತನು ಹೀಗೆ ಹೇಳುತ್ತಾನೆ, ತನಗಾಗಿ ಸಂಕಟಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂಬ ತಿಳುವಳಿಕೆಯನ್ನು ಪೌಲನು ಹೊಂದಿದ್ದರೂ ಸಹ, ಆತನು ಕದಲದೇ ಇದ್ದನು. ಈ ಸಂಕಟಗಳ, ಹಿಂಸೆಗಳ ಯಾವುದೇ ಭಯವು, ದೇವರ ಗುರಿಯನ್ನು ಮುಟ್ಟುವುದಕ್ಕೆ ಒತ್ತುಕೊಡಬೇಕೆನ್ನುವ ಆತನ ಸಂಕಲ್ಪವನ್ನು ಅಲುಗಾಡಿಸಲಿಲ್ಲ. ಮತ್ತೊಮ್ಮೆ, ಅ.ಕೃತ್ಯಗಳು 26:19 ರಲ್ಲಿ, ಮೂವತ್ತು ವರುಷಗಳ ಮುಂಚೆ ತಾನು ಕರ್ತನಿಂದ ಪಡೆದುಕೊಂಡ ದರ್ಶನಕ್ಕೆ ಅವಿಧೇಯನಾಗದೆ ಇರುವುದಾಗಿ ಪೌಲನು ರಾಜನಾದ ಅಗ್ರಿಪ್ಪರಾಜನಿಗೆ ಸಾಕ್ಷಿಕರಿಸಿದನು ಮತ್ತು ಪೌಲನು ತನ್ನ ಕಡೆಯ ಪತ್ರಿಕೆಯಲ್ಲಿ, ತಾನು ಒಳ್ಳೇ ಹೋರಾಟವನ್ನು ಹೋರಾಡಿರುವುದಾಗಿ ಹಾಗೂ ತನ್ನ ಓಟವನ್ನು ಮುಗಿಸಿರುವುದಾಗಿ ಸಾಕ್ಷಿಕರಿಸುತ್ತಾನೆ (2 ತಿಮೊಥೆ 4:7) (ಕೆ.ಜೆ.ವಿ ಭಾಷಾಂತರ). ಇಲ್ಲಿ ಒಬ್ಬ ಮನುಷ್ಯನು ತನ್ನ ಪ್ರಾರಂಭದ ದಿನದಿಂದಲೂ ಕಡೆಯ ದಿನದವರೆಗೂ ದೇವರ ಉದ್ದೇಶದ ಮಾರ್ಗವನ್ನು ಹಿಡಿದು ಪಟ್ಟು ಬಿಡದೆ ಹಿಂಬಾಲಿಸಿದನು. ಬಿಟ್ಟುಕೊಡಬೇಕೆಂಬ ಮತ್ತು ಹಿಂದಕ್ಕೆ ತಿರುಗಿಕೊಳ್ಳಬೇಕೆಂಬ ಪ್ರಚೋದನೆಯು ಲೆಕ್ಕವಿಲ್ಲದಷ್ಠಿದ್ದರ ಹೊರತಾಗಿಯೂ, ಘೋರ ಹಿಂಸೆಗಳ ಹೊರತಾಗಿಯೂ, ತೆಗಳಿಕೆ ಮತ್ತು ದೂಷಣೆಗಳ ಹೊರತಾಗಿಯೂ ಹಾಗೂ ಈ ಎಲ್ಲಾ ಸಮಸ್ಯೆಗಳಿದ್ದರೂ ಸಹ, ಪೌಲನು ತನ್ನ ಓಟಕ್ಕೆ ನಂಬಿಗಸ್ಥಿಕೆಯನ್ನು ಹಿಡಿದುಕೊಂಡಿದ್ದನು, ಆತನ ದೃಷ್ಠಿಯು ಗುರಿಯ ಮೇಲೆ ನೆಟ್ಟಿತ್ತು. ನಾವು ಸಹ ನಮ್ಮ ಜೀವಿತದ ಕೊನೆಯವರೆಗೂ ಆ ರೀತಿಯಾಗಿರುವುದು ಆಶೀರ್ವಾದದಾಯಕವಾಗಿದೆ, ಹೀಗಾದಲ್ಲಿ, ನಾವು ಸಹ ಇಂತಹ ಸಾಕ್ಷಿಯನ್ನು ಹೊಂದಬಹುದು.
ನಾವು ಹಿಂದೆ ತಿರುಗಿ ನೋಡುವಂತೆ ಎಷ್ಟೋ ಬಾರಿ ಶೋಧಿಸಲ್ಪಡುತ್ತೇವೆ! ನಮ್ಮ ಹಿಂದಿನ ಸೋಲುಗಳು ನಮ್ಮನ್ನು ನಿರುತ್ಸಾಹಗೊಳಿಸಲಿಕ್ಕೆ ಮಾರ್ಗವಾಗಿವೆ ಮತ್ತು ಸೋಲು ಸಂಭವಿಸಿದಾಗ, ಅಷ್ಟೇ ಬೇಗ ಸೈತಾನನು ಬಂದು ನಮ್ಮ ಕಿವಿಯಲ್ಲಿ ಸುಳ್ಳುಗಳನ್ನು ಊದಲು ಪ್ರಾರಂಭಿಸುತ್ತಾನೆ, ಯಾವ ರೀತಿ ಎಂದರೆ, ನಮಗಾಗಿ ದೇವರು ಇನ್ನುಮುಂದೆ ಉಪಯೋಗಕ್ಕೆ ಬಾರನು ಎಂಬುವ ರೀತಿಯಲ್ಲಿ. ಒಂದು ವಿಷಯ ನನಗೆ ಯಾವಾಗಲೂ ದೊಡ್ಡ ಪ್ರೋತ್ಸಾಹವನ್ನು ಕೊಡುತ್ತದೆ, ಅದು ಯಾವುದೇದಂರೆ, ಒಂದು ಕತ್ತೆಯೂ ಸಹ ನಮ್ಮ ಕರ್ತನಾದ ಯೇಸುವಿಗೆ ಅಗತ್ಯವಿದೆ ಎಂಬುದಾಗಿ (ಮತ್ತಾಯ 21:2,3). ಕರ್ತನಾದ ಯೇಸುವಿಗೆ ತನ್ನ ಉದ್ದಾರಕನ ಕಾರ್ಯಕ್ರಮಗಳನ್ನು ಪೂರೈಸಲು ಕತ್ತೆಯ ಅಗತ್ಯತೆ ಇತ್ತು ಎಂದಾದಲ್ಲಿ ಮತ್ತು ಒಂದು ಸಂದರ್ಭದಲ್ಲಿ ದೇವರು ಕತ್ತೆಯ ಮೂಲಕ ಮಾತಾನಾಡಿದನು ಎಂದಾದಲ್ಲಿ (ಅರಣ್ಯಕಾಂಡ 22:28), ನಮ್ಮೆಲ್ಲರಿಗೂ ಒಂದು ನಿರೀಕ್ಷೆ ಇದೆ ಎಂದಾಯಿತು. ಹಿಂದಿನ ದಿನಗಳಲ್ಲಿ ಏನೇ ಬರೆದಿದ್ದರೂ ಮತ್ತು ಬಾಳಾಮನ ಕತ್ತೆಯ ಕಥೆಯಲ್ಲಿಯೂ ಸಹ, ಅದು ನಮ್ಮ ಪ್ರೋತ್ಸಾಹಕ್ಕಾಗಿ ಬರೆಯಲ್ಪಟ್ಟಿದೆ (ರೋಮ : 15:4). ಕತ್ತೆಯ ಹಾಗೇ ನಾನೂ ದಡ್ಡನು ಎಂದು ನೀವು ಭಾವಿಸುವುದಾದರೆ ಮತ್ತು ನೀವು ಹತ್ತು ಸಾವಿರ ಬಾರಿ ತಪ್ಪುಗಳನ್ನು ಮಾಡಿದ್ದರೂ; ಕರ್ತನಿಗೆ ನಿಮ್ಮ ಅಗತ್ಯತೆ ಇದೆ ಹಾಗೂ ಆತನು ನಿಮ್ಮನ್ನು ಆರಿಸಿಕೊಂಡಾಗ, ನಿಮ್ಮ ಮೂಲಕವೂ ಆತನು ಮಾತನಾಡುತ್ತಾನೆ.
ಅದೇ ಸತ್ಯವೇದ ನಮಗೆ ಹೇಳುವುದೇನೆಂದರೆ, ಅತೀ ಜರೂರಿರುವ ನಮ್ಮ ಅಗತ್ಯತೆಗಳು ಏನಿದ್ದರೂ, ನಾಳೆಯ ಬಗ್ಗೆ ಚಿಂತೆ ಮಾಡಬೇಡಿ, ಹಿಂದಿನವುಗಳನ್ನು ನೋಡಬೇಡಿ. ನಾವು ನಮ್ಮ ಎಲ್ಲಾ ಹಿಂದಿನ ದಿನಗಳನ್ನು ಕೊನೆಗಾಣಿಸುವ ಅಗತ್ಯತೆ ಇದೆ ಮತ್ತು ಇವತ್ತನ್ನು ಎದುರಿಸಬೇಕು, ಅದರಂತೆ ಭವಿಷ್ಯದ ಬಗ್ಗೆ ಕರ್ತನಲ್ಲಿ ಭರವಸವಿಡಬೇಕು. ಒಂದು ವೇಳೆ ನಾಳೆ ನೀವು ಸೋತರೆ, ಹತಾಶೆಯು ನಿಮ್ಮ ಮೇಲೆ ಎಗರದಂತೆ ನೋಡಿಕೊಳ್ಳಿ. ಕರ್ತನಿಗೆ ಹೋಗಿ ನಿಮ್ಮ ವಿಫಲತೆಗಳನ್ನು, ಸೋಲುಗಳನ್ನು ಅರಿಕೆ ಮಾಡಿ ಮತ್ತು ಆತನ ರಕ್ತದಲ್ಲಿ ನಿಮ್ಮ ಪಾಪವನ್ನು ತೊಳೆದುಕೊಳ್ಳಿ. ಮತ್ತೊಮ್ಮೆ ಜಯಕ್ಕೆ ಒತ್ತು ಕೊಡಿ. ಅದರಂತೆ ನೀವು ಮತ್ತೊಮ್ಮೆ ಸೋತರೆ, ಮಗದೊಮ್ಮೆ ಅದೇ ಸಂಗತಿಯನ್ನು ಹೋಗಿ ಮಾಡಿರಿ. ನಿಮ್ಮನ್ನು ನೀವು ಹತಾಶೆಗೆ ತಳ್ಳಿಕೊಳ್ಳಬೇಡಿ. ಹಿಂದಿನವುಗಳನ್ನು ನೋಡದೇ, ಅದಕ್ಕೆ ಪಶ್ಚಾತಾಪಡದೆ, ವಿಫಲತೆ, ಸೋಲುಗಳನ್ನು ನಿರಾಕರಿಸುತ್ತೀನಿ ಎಂಬ ಧೃಢ ನಿಶ್ಚಯ ಮಾಡಿಕೊಳ್ಳಿ. ಚಲ್ಲಿ ಹೋದಂತ ಹಾಲಿನ ವಿಷಯವಾಗಿ ಅಳುವುದು ವ್ಯರ್ಥವಾಗಿದೆ. ಆದರೆ ಗರ್ವದಿಂದ ನೋಡುವುದನ್ನು ಸಹ ನಿರಾಕರಿಸಿ, ಅದು ನಿಮ್ಮ ಆತ್ಮವನ್ನು ನಾಶ ಮಾಡುತ್ತದೆ. ಹಾಗಾಗಿ ನಾಳೆ ನಿಮ್ಮನ್ನು ದೇವರು ಅದ್ಬುತ ಮಾರ್ಗದಲ್ಲಿ ಉಪಯೋಗಿಸಬಹುದು, ಅದನ್ನು ಮರೆಯುವಂತೆ ಕೃಪೆಯನ್ನು ಹುಡುಕಿ. ಸ್ವಾರ್ಥ ಗುಂಪಿನಲ್ಲಿ ಸೇರಿಕೊಳ್ಳಬೇಡಿ. ಜಯಕ್ಕೆ ಒತ್ತು ಕೊಡಿ. ನಿರುತ್ಸಾಹ ಒಂದು ಕಡೆ, ಮತ್ತೊಂದು ಕಡೆ ಗರ್ವ, ಇವೆರೆಡು ಸಮನಾಗಿ ಅರ್ಥೈಸಲ್ಪಡುತ್ತವೆ, ಇವುಗಳನ್ನು ಸೈತಾನನು ನಮ್ಮ ಮಾರ್ಗಗಳಲ್ಲಿ ಉಪಯೋಗಿಸುವ ಮೂಲಕ, ನಮ್ಮ ಪರಿಣಾಮಕಾರಿತನವನ್ನು ಕಳ್ಳತನ ಮಾಡುತ್ತಾನೆ.
ಎಫೆಸ 5:15, 16 ರಲ್ಲಿ ನಮಗೆ ಈ ರೀತಿಯಾಗಿ ಹೇಳಲ್ಪಟ್ಟಿದೆ, ”ಆದಕಾರಣ, ನೀವು ನಡೆದುಕೊಳ್ಳುವ ರೀತಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ದಿನಗಳು ಕೆಟ್ಟವುಗಳಾಗಿರುವುದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿಸಿಕೊಳ್ಳಿರಿ”. ಇದರ ಅರ್ಥವೇನೆಂದರೆ, ನಮ್ಮ ಮಾರ್ಗದಲ್ಲಿ ಬರುವಂತ ಪ್ರತಿಯೊಂದು ಅವಕಾಶಗಳನ್ನು ಬಾಚಿಕೊಳ್ಳಬೇಕು ಮತ್ತು ಅದನ್ನು ದೇವರ ಮಹಿಮೆಗೆ ತಿರುಗಿಸಬೇಕು (1 ಕೊರಿಂಥ 15:58). ನಮ್ಮಲ್ಲಿ ಪ್ರತಿಯೊಬ್ಬರು ಕೇವಲ ಸಂಕ್ಷಿಪ್ತವಾದ ಜೀವಿತವನ್ನು ಹೊಂದಿದ್ದೇವೆ ಮತ್ತು ಆ ಜೀವಿತದ ಪ್ರತಿಯೊಂದು ದಿನವು ದೇವರಿಗೆ ಲೆಕ್ಕವುಳ್ಳವುಗಳಾಗಿವೆ. ಆದರೆ, ಛಲದಿಂದ ಆತನನ್ನು ನಾವು ನೋಡುವಾಗ ಮಾತ್ರ ಅದು ಸಾಧ್ಯವಾಗುತ್ತದೆ. ನಾವು ಎಷ್ಟು ಭಾರವಾದ ಕಲಹ, ವಿರೋಧಗಳನ್ನು ಎದುರಿಸಲು ಕರೆಯಲ್ಪಟ್ಟಿದ್ದೇವೋ, ಅದು ದೊಡ್ಡ ವಿಷಯವೇ ಅಲ್ಲ, ಆದರೆ ಈ ಮನಸ್ಸಿನ ನಡವಳಿಕೆಯನ್ನು ಸರಿಯಾಗಿ ನಿರ್ವಹಿಸಿಕೊಳ್ಳೋಣ. ಅದರಂತೆ ಮತ್ತೊಬ್ಬ ವಿಶ್ವಾಸಿಗಳ ಕಡೆ ನೋಡುವುದನ್ನು ಸಹ ತಿರಸ್ಕರಿಸೋಣ ಮತ್ತು ನಮ್ಮ ಹೆಚ್ಚಿನದನ್ನು ಅಥವಾ ನಮ್ಮ ಯಶಸ್ಸಿನ ಅಳತೆಗಳನ್ನು ಅವರ ವಿರುದ್ದವಾಗಿ ಹೋಲಿಸಿಕೊಳ್ಳುವುದನ್ನು ಸಹ ತಿರಸ್ಕರಿಸೋಣ, ಇವುಗಳು ಸಹ ನಮ್ಮನ್ನು ನಿರುತ್ಸಾಹಕ್ಕೆ ಮತ್ತು ಗರ್ವಕ್ಕೆ ಮುನ್ನೆಡುಸುತ್ತವೆ (ಯೋಹಾನ 21:20-22; 2 ಕೊರಿಂಥ 10:12).ನಾವು ನೇರವಾಗಿ ನೋಡುವವರಾಗಿರಬೇಕು ಮತ್ತು ಬೇರೆ ದಿಕ್ಕಿನ ಕಡೆಗೆ ನೋಡುವವರಾಗಿರಬಾರದು (ಜ್ಞಾನೋಕ್ತಿಗಳು 4:25).
ದೇವರ ಹೃದಯಕ್ಕೆ ಹತ್ತಿರವಾದಂತ ಮನುಷ್ಯನು ದೇವರ ಪ್ರತಿಯೊಂದು ಚಿತ್ತವನ್ನು ನೆರವೇರಿಸಲು ಇಚ್ಛೆಯುಳ್ಳವನಾಗಿರುತ್ತಾನೆ
ಅಪೋಸ್ತಲನಾದ ಪೌಲನು ತನ್ನ ಪರಿವರ್ತನೆಗಿಂತ ಮುಂಚೆ, ಆತನ ಧಾರ್ಮಿಕತೆಯ ಬಗ್ಗೆ ಪರಿಪೂರ್ಣ ಹೃದಯವುಳ್ಳವನಾಗಿದ್ದನು (ಅ.ಕೃತ್ಯಗಳು 22:3 , 4). ನಾವು ಈ ದಿನ ಹೊಂದಿದಂತೆ, ಆತನದು ದುರ್ಬಲ, ಪುಕ್ಕಲುತನದ ನಂಬಿಕೆಯಾಗಿರಲಿಲ್ಲ. ಆತನು ಪರಿವರ್ತನೆಗೊಂಡಾಗ, ಆತನು ಭಕ್ತಿಯಲ್ಲಿ ಅದೇ ಸಮನಾದ ಪರಿಪೂರ್ಣ ಹೃದಯವನ್ನು ಕ್ರಿಸ್ತನ ಕಡೆಗೆ ಹೊಂದಿದ್ದನು. ಒಂದೇ ಒಂದು ವ್ಯತ್ಯಾಸವೇನೆಂದರೆ, ಈಗ ಆತನು ತನ್ನ ಮನಸ್ಸನ್ನು ಪರಲೋಕದ ಮೇಲೆ ನೆಟ್ಟಿದ್ದನು ಮತ್ತು ಇಹಲೋಕದ ಸಂಗತಿಗಳ ಮೇಲೆ ನೆಟ್ಟಿರಲಿಲ್ಲ. ಪುನರುತ್ಥಾನಗೊಂಡ ನಮ್ಮ ಕರ್ತನಾದ ಯೇಸುವು ನಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಪೌಲನು, ನಿಶ್ಚಯವಾಗಿ ಉಗುರು ಬೆಚ್ಚಗಿರುವ ಸ್ವಭಾವಕ್ಕೆ ಯಾವುದೇ ಪ್ರಶಂಸೆಯನ್ನು ಹೊಂದಿರಲ್ಲಿಲ್ಲ (ಪ್ರಕಟನೆ 3:16). ದೇವರು ತನ್ನ ಜನರಲ್ಲಿ ಸಂಪೂರ್ಣತೆಯನ್ನು ನೋಡುತ್ತಾನೆ, ಯಾರು ಆತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು, ಶರಣಾಗಿರುತ್ತಾರೋ, ಅಂಥವರು ಇಹಲೋಕದ ಮೇಲೆ ಆತನ ಉದ್ದೇಶಗಳನ್ನು ನೆರವೇರಿಸುತ್ತಾರೆ. ನಮ್ಮಲ್ಲಿ ಅನೇಕರು, ನಾವು ಕ್ರೈಸ್ತತ್ವದಲ್ಲಿರುವ ಮೇರೆಗೆ ನಮ್ಮ ಅಧ್ಯಯನಗಳಲ್ಲಿ ಅರ್ಧ ಹೃದಯವುಳ್ಳವುರಾಗಿದ್ದೇವೆ, ನಾವು ಆತ್ಮೀಕ ಶಾಲೆಯ ಪ್ರಾಥಮಿಕ ಹಂತವನ್ನೇ ಉತ್ತೀರ್ಣಗೊಂಡಿರುವುದಿಲ್ಲ ಅಥವಾ ಮತ್ತೊಮ್ಮೆ, ಅನೇಕ ವಿಶ್ವಾಸಿಗಳು ಇಂದು ದೇವರ ಸೇವೆಯಲ್ಲಿ ಇರುವಂತೆ, ಒಬ್ಬ ಮನುಷ್ಯ ತನ್ನ ಕೆಲಸದಲ್ಲಿ ಅರ್ಧ ಹೃದಯವನ್ನು ಇರಿಸಿಕೊಂಡರೆ, ತುಂಬಾ ಹಿಂದೆಯೇ ಆತನು ದೇವರು ಕೊಟ್ಟಂತ ಸೇವೆಯನ್ನು ಕಳೆದುಕೊಳ್ಳುತ್ತಾನೆ. ಅನೇಕ ಕ್ರೈಸ್ತರು ಪರಿಪೂರ್ಣ ಹೃದಯವಂತಿಕೆಯನ್ನು ಹೇರಳವಾಗಿ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಹೊಂದಿದ್ದಾರೆ. ಆದರೆ, ಅಯ್ಯೋ, ಧಾರ್ಮಿಕ ಚಟುವಟಿಕೆಗಳಲ್ಲಿ ಹೇಗೆ ವಿರಳವಾಗಿ ಕಂಡುಬರುತ್ತದೆ! ನಾವು ಈ ರೀತಿಯಾಗಿ ಹೇಳಿಸಲ್ಪಟ್ಟಿದ್ದೇವೆ, ರಾಜನಾದ ಹಿಜ್ಕೀಯನು ಹೃದಯ ಪೂರ್ವಕವಾಗಿ ಕೆಲಸ ಮಾಡಿದಾಗ, ಆತನು ಅಭಿವೃದ್ಧಿ ಹೊಂದಿದನು (2 ಪೂರ್ವಕಾಲವೃತ್ತಾಂತ 31:21). ಆದರೆ ಆತನ ಜೀವಿತದಲ್ಲಿ ಒಂದು ದಿನ ಬರುತ್ತದೆ, ”ಮುಂಚೆ ಇದ್ದ ಸಂಗತಿಗಳನ್ನು” ಮರೆತುಬಿಟ್ಟು, ಆತನು ವಿಶ್ರಮಿಸಿದನು. ಆ ದಿನ ಆತನು ದುರಂತವಾಗಿ ದೇವರಿಗೆ ನಿಷ್ಪ್ರಯೋಜಕನಾದನು.
ಯೇಸು ತನ್ನ ಮಾದರಿಯಿಂದ ಮತ್ತು ಮಾತಿನಿಂದ ನಮಗೆ ಒತ್ತಿ ಹೇಳುವುದೇನೆಂದರೆ, ಯಾರು ಆತನನ್ನು ಹಿಂಬಾಲಿಸುತ್ತಾರೋ, ಅವರು ತಮ್ಮ ದೃಷ್ಟಿಯನ್ನು ಗುರಿಯ ಮೇಲೆ ನೆಡಬೇಕು. ಆತನು ಎಚ್ಚರಿಸಿದ್ದೇನೆಂದರೆ, ”ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು ಹೇಳಿದನು” (ಲೂಕ: 9:62). ಯೇಸು ತಾನೇ ”ತನ್ನ ಮುಖವನ್ನು ಧೃಡವಾಗಿರಿಸಿಕೊಂಡು” ತನ್ನ ತಂದೆಯಿಂದ ಸೂಚಿಸಲ್ಪಟ್ಟ ಮೇರೆಗಿನ ದಿಕ್ಕಿನಲ್ಲಿಯೇ ಹೋಗುತ್ತಿದ್ದರು (51ನೇ ವಚನ). ”ಯೇಸು, ತನ್ನ ತಂದೆಯ ಕೆಲಸದ ವಿಷಯವಾಗಿ” ವಿಶ್ರಮಿಸದೇ ಇರುವಂತಹ ನಡವಳಿಕೆಯನ್ನು ಹೊಂದಿದ್ದರು ಮತ್ತು ಯೇಸು ಇಚ್ಛಿಸಿದ್ದೇನೆಂದರೆ, ಯಾವುದೇ ಹಿಂಬಾಲಕರುಗಳು ಇದೇ ಸಮನಾದ ದಿಕ್ಕಿನಲ್ಲಿ ನೋಡುವುದಕ್ಕೆ ಮನಸ್ಸಿಲ್ಲದೇ ಇರಬಾರದು ಮತ್ತು ಅದೇ ಹಾದಿಯಲ್ಲಿ ಸಾಗಬೇಕು. ಯೇಸು ಕ್ರಿಸ್ತನ ಶಿಷ್ಯಂದಿರು ತಮ್ಮ ಜೀವಿತದಲ್ಲಿ ಒಂದೇ ಮಹತ್ವಾಕಾಂಕ್ಷೆಯನ್ನು ಹೊಂದಿರಬೇಕು, ಅರ್ಥಾತ್, ದೇವರ ಚಿತ್ತವನ್ನು ಮಾಡುವುದು ಮತ್ತು ಆತನನ್ನು ಮಹಿಮೆ ಪಡಿಸುವುದು. ಜೀವಿತದಲ್ಲಿ ಪ್ರತಿಯೊಂದು - ಹಣ, ಸ್ಥಾನ, ಮದುವೆ, ನೌಕರಿ ಮತ್ತು ಉಳಿದೆಲ್ಲವೂ ದೇವರ ಚಿತ್ತದಲ್ಲಿಯೇ ನೆಲೆಸಿರಬೇಕು. ಎಲ್ಲವೂ ದೇವರ ಉದ್ದೇಶದಲ್ಲಿಯೇ ವಿಶ್ರಮಿಸಿಕೊಳ್ಳುತ್ತವೆ. ನಾವು ಈ ರೀತಿಯ ಮನಸ್ಸಿನ ನಡವಳಿಕೆಯನ್ನು ಅಳವಡಿಸಿಕೊಂಡಾಗ, ನಾವು ರೋಮ 8:28 ರಲ್ಲಿರುವ ವಾಗ್ದಾನವನ್ನು ಪಡೆದುಕೊಳ್ಳಬಹುದು. ”ಯಾರು ದೇವರನ್ನು ಪ್ರೀತಿಸುತ್ತಾರೋ ಮತ್ತು ಆತನ ಉದ್ದೇಶಕ್ಕೆ ನಿಂತಿರುತ್ತಾರೋ, ಅಂಥವರ ಜೀವಿತದಲ್ಲಿ ಸಂಭವಿಸುವ ಎಲ್ಲಾ ಸಂಗತಿಗಳು ಅವರ ಅನುಕೂಲಕರಕ್ಕಾಗಿಯೇ ಏರ್ಪಡುತ್ತವೆ”.
ನಾವು ಈ ವಿಷಯಗಳನ್ನು ಚೆನ್ನಾಗಿ ನೆರವೇರಿಸಬೇಕೆಂದರೆ, ಒಂದು ವಿಷಯವನ್ನು ನೆನಪಿಡಬೇಕು, ಅದು ಯಾವುದೆಂದರೆ, ಈ ಲೋಕದಲ್ಲಿ ”ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” (1 ಯೋಹಾನ 2:17). ಮಿಕ್ಕ ಎಲ್ಲವೂ ನಶಿಸಿ ಹೋಗುತ್ತವೆ. ದೇವರ ಚಿತ್ತ ಮಾಡುವುದನ್ನು ನಮ್ಮ ಮಹತ್ವಕಾಂಕ್ಷೆಯನ್ನಾಗಿ ಇರಿಸಿಕೊಳ್ಳೋಣ. ಇದು ಯೇಸುವಿಗೆ ಇದ್ದ ಹಾಗೇ, ದೇವರ ಚಿತ್ತವನ್ನು ಮಾಡುವುದು ನಮ್ಮ ಆಹಾರ ಮತ್ತು ಪಾನೀಯವಾಗಿರಬೇಕು (ಯೋಹಾನ 4:34). ದೇವರ ಹೃದಯಕ್ಕೆ ಹತ್ತಿರವಾದಂತ ಮನುಷ್ಯನು ದೇವರ ಪ್ರತಿಯೊಂದು ಚಿತ್ತವನ್ನು ನೆರವೇರಿಸಲು ಇಚ್ಛೆಯುಳ್ಳವನಾಗಿರುತ್ತಾನೆ. ಇಂತಹ ಒಬ್ಬ ಮನುಷ್ಯನು ದೇವರ ದೃಷ್ಠಿಯಲ್ಲಿ ತನ್ನ ಸಕಾಲದವರಿಗೆ ಪರಿಣಾಮಕಾರಿಯಾಗಿ ಸೇವೆ ಮಾಡುತ್ತಾನೆ (ಅ.ಕೃತ್ಯಗಳು 13:22, 36). ದೇವರು ಇಂತಹ ಪುರುಷ ಮತ್ತು ಸ್ತ್ರೀಯನ್ನು ಇಂದು ಲೋಕದಲ್ಲಿ ಹುಡುಕುತ್ತಿದ್ದಾರೆ.