WFTW Body: 

ನಮ್ಮ ಹಿಂದಿನ ಪಾಪಗಳ ಕ್ಷಮಾಪಣೆಯು ನಮ್ಮ ಮೊದಲ ಹಾಗೂ ನಿರಂತರವಾದ ಅಗತ್ಯತೆಯಾಗಿದೆ. ನಮ್ಮ ಪಾಪಗಳಿಗಾಗಿ ಪೂರ್ತಿ ದಂಡನೆಯು ಪಾವತಿಸುವ ವರೆಗೂ ನಮ್ಮ ಪಾಪಗಳ ಅಪರಾಧವು ದೇವರಿಂದ ಯಾವ ಮಾರ್ಗವಾಗಿಯೂ ತೆಗೆದು ಹಾಕಲ್ಪಡುವುದಿಲ್ಲ. ”ರಕ್ತಧಾರೆಯಿಲ್ಲದೆ ಪಾಪ ಪರಿಹಾರ ಉಂಟಾಗುವುದಿಲ್ಲ” (ಇಬ್ರಿಯ 9:22).

ಕಲ್ವಾರಿ ಶಿಲುಬೆಯ ಮೇಲೆ ಕ್ರಿಸ್ತನು ರಕ್ತವನ್ನು ಸುರಿಸಿದಾಗ, ಪ್ರತಿಯೊಬ್ಬರು ಮಾಡಿದಂತ ಪಾಪಕ್ಕೆ ಕ್ಷಮಾಪಣೆಯನ್ನು ಕೊಂಡುಕೊಳ್ಳಲಾಗಿದೆ. ಆದರೆ ನಾವು ಆ ಕ್ಷಮಾಪಣೆಯನ್ನು ಸ್ವೀಕರಿಸಿಕೊಂಡಾಗ ಮಾತ್ರ, ಅದು ನಮ್ಮದಾಗುತ್ತದೆ. ಕ್ರಿಸ್ತನ ರಕ್ತದ ಮುಖಾಂತರ ನಮ್ಮ ಎಲ್ಲಾ ಪಾಪಗಳಿಗೂ ಕ್ಷಮಾಪಣೆಯನ್ನು ನಾವು ಹೊಂದಿಕೊಳ್ಳಬಹುದು, ನಾವು ಯಥಾರ್ಥವಾಗಿ ನಮ್ಮ ಪಾಪಗಳಿಂದ ತಿರುಗಿಕೊಂಡರೆ (ಮಾನಸಾಂತರಪಟ್ಟರೆ), ಆತನಲ್ಲಿ ಭರವಸೆ ಇಟ್ಟರೆ, ಮತ್ತು ಆತನು ಕೊಡುವಂತ ಕ್ಷಮಾಪಣೆಯನ್ನು ನಾವು ಸ್ವೀಕರಿಸಿಕೊಂಡರೆ, ಆ ಕ್ಷಮಾಪಣೆಯು ನಮ್ಮದಾಗುತ್ತದೆ.

ಕ್ರಿಸ್ತನ ರಕ್ತವು ನಮ್ಮನ್ನು ನೀತಿಕರಿಸುತ್ತದೆ (ರೋಮ 5:9). ಇದು ಕ್ಷಮಿಸಲ್ಪಡುವುದಕ್ಕಿಂತ ಹೆಚ್ಚಿನದಾದದ್ದು. ನಮ್ಮ ಇಡೀ ಜೀವಿತದಲ್ಲಿ ನಾವು ಪಾಪವನ್ನೇ ಮಾಡಿಲ್ಲ ಎಂಬುವ ರೀತಿಯಲ್ಲಿ ನಾವು ನೀತಿವಂತರು ಎಂದು ಘೋಷಿಸಲ್ಪಟ್ಟ ಹಾಗೆ. ದೇವರ ವಾಗ್ದಾನವು ಈ ರೀತಿಯಾಗಿದೆ - ”ಆತನು ನಮ್ಮ ಪಾಪಗಳನ್ನು ಎಂದಿಗೂ ತನ್ನ ನೆನಪಿಗೆ ತರುವುದಿಲ್ಲ” (ಇಬ್ರಿಯ 8:12). ಅದರ ಅರ್ಥ, ನಾವು ಪಾಪವನ್ನೇ ಮಾಡಿಲ್ಲ ಎಂಬುವ ರೀತಿಯಲ್ಲಿ ದೇವರು ನಮ್ಮನ್ನು ನೋಡುತ್ತಾರೆ. ನೀತಿಕರಿಸಲ್ಪಡುವುದು ಎಂಬುದರ ಅರ್ಥ ಇದೇ ಆಗಿದೆ. ಕ್ರಿಸ್ತನ ರಕ್ತದ ಬಲವು ಇದೇ ಆಗಿದೆ. ಅನೇಕ ವಿಶ್ವಾಸಿಗಳು ತಮ್ಮ ಹಿಂದಿನ ಜೀವಿತಗಳ ಸಲುವಾಗಿ ನಿರಂತರವಾಗಿ ಖಂಡನೆಯಲ್ಲಿ (ಅಪರಾಧ ಮನೋಭಾವ) ಜೀವಿಸುತ್ತಿರುತ್ತಾರೆ, ಏಕೆಂದರೆ ಕ್ರಿಸ್ತನ ರಕ್ತದ ಮುಖಾಂತರ ದೇವರು ನಮ್ಮನ್ನು ನೀತಿಕರಿಸಿದ್ದಾನೆ ಎಂಬ ಸತ್ಯವನ್ನು ಸೈತಾನನು ನಮ್ಮಿಂದ ಮರೆಮಾಡಿರುತ್ತಾನೆ.

ಕ್ರಿಸ್ತನ ರಕ್ತದ ಮುಖಾಂತರ ನೀವು ಬಿಡುಗಡೆಯನ್ನು ಹೊಂದಿದ್ದೀರಿ (1 ಪೇತ್ರ 1:18). ಅದರ ಅರ್ಥ, ನಾವು ಪಾಪದಲ್ಲಿನ ದಾಸತ್ವದ ಮಾರುಕಟ್ಟೆಯಿಂದ ಕೊಂಡುಕೊಳ್ಳಲ್ಪಟ್ಟಿದ್ದೇವೆ. ಕ್ರಿಸ್ತನ ರಕ್ತವು ಶಿಲುಬೆಯಲ್ಲಿ ಸುರಿಸಲ್ಪಟ್ಟಾಗ, ದೇವರ ಪವಿತ್ರವಾದ ನಿಯಮದ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅತಿ ಹೆಚ್ಚು ಬೆಲೆಯನ್ನು ಕೊಟ್ಟು ದೇವರು ನಮ್ಮನ್ನು ಕೊಂಡು ಕೊಂಡಿದ್ದಾನೆ, ಹಾಗಾಗಿ ನಾವು ಬಿಡುಗಡೆ ಹೊಂದಿದವರಾಗಿದ್ದೀವಿ ಮತ್ತು ಇನ್ನುಮುಂದೆ ನಾವು ದಾಸತ್ವದಲ್ಲಿ ಇರುವುದಿಲ್ಲ. ನಾವು ಬಿಡುಗಡೆ ಹೊಂದುವುದಕ್ಕಾಗಿ ಹುಟ್ಟಿದವರಾಗಿದ್ದೇವೆ. ನಾವು ಸೈತಾನನಿಗಾಗಲಿ ಅಥವಾ ಮಾನವರಿಗಾಗಲಿ ಅಥವಾ ಖಂಡನೆಗಾಗಲಿ ಅಥವಾ ಅಪರಾಧದ ಮನೋಭಾವನೆಗಾಗಲಿ ಅಥವಾ ಪಾಪದ ಭಯಕ್ಕಾಗಲಿ ದಾಸರಾಗುವ ಅಗತ್ಯತೆ ಇಲ್ಲ.

ಕ್ರಿಸ್ತನ ರಕ್ತದ ಮೂಲಕ, ದೇವರ ಸಮ್ಮುಖದೊಳಗೆ ನಾವು ಸೇರಿದ್ದೇವೆ (ಎಫೆಸ 2:13). ದೇವರು ಬೆಳಕಿನಲ್ಲಿ ಜೀವಿಸುವವನಾಗಿರುವುದರಿಂದ ಯಾರು ಸಹ ಆತನ ಹತ್ತಿರ ಸುಳಿಯಲು ಆಗೋದಿಲ್ಲ. ಆತನ ಸಮ್ಮುಖದೊಳಗೆ ನಾವು ಸೇರಬೇಕು ಎಂದಾದಲ್ಲಿ ಅದಕ್ಕೆ ಒಂದು ಮಾರ್ಗವಿದೆ - ನಮ್ಮ ಜೀವಿತದ ಕೊನೆಯವರೆಗೂ ರಕ್ತದ ಮೂಲಕ ಆತನ ಸಾನಿಧ್ಯದೊಳಗೆ ನಾವು ಪ್ರವೇಶವನ್ನು ಹೊಂದಬಹುದು. ನಾವು ಎಷ್ಟೇ ಸಂತರಾಗಿದ್ದರೂ ಸಹ, ಕ್ರಿಸ್ತನ ರಕ್ತದ ಮೂಲಕವೇ ಯಾವಾಗಲೂ ದೇವರ ಸಮ್ಮುಖಕ್ಕೆ ನಾವು ಪ್ರವೇಶವನ್ನು ಹೊಂದಬಹುದು. ಅನೇಕ ವಿಶ್ವಾಸಿಗಳು, ತಾವು ಅರಿವನ್ನು ಹೊಂದಿರುವಂತ ಪಾಪದ ಮೇಲೆ ಜಯವನ್ನು ಪಡೆದುಕೊಂಡ ನಂತರ, ಇದನ್ನು ಬೇಗ ಮರೆತು ಹೋಗುತ್ತಾರೆ ಮತ್ತು ಫರಿಸಾಯರಾಗಿ ಕೊನೆಗಾಣುತ್ತಾರೆ.

ಕಲ್ವಾರಿ ಶಿಲುಬೆಯಲ್ಲಿ ರಕ್ತವು ಸುರಿಯುವ ಮುಖಾಂತರ, ಕ್ರಿಸ್ತನು ದೇವರೊಟ್ಟಿಗೆ ಸಮಾಧಾನವನ್ನು ಉಂಟು ಮಾಡಿದ್ದಾನೆ (ಕೊಲಸ್ಸೆ 1:20). ದೇವರು ನಮಗೆ ಈಗ ಶತ್ರುವಾಗಿಲ್ಲ. ಈ ಒಂದು ಸತ್ಯವು ನಮ್ಮ ಮನಸ್ಸಿನಲ್ಲಿ ಧೃಢವಾಗಿ ನೆಲೆಗೊಳ್ಳಬೇಕು. ಅನೇಕ ವಿಶ್ವಾಸಿಗಳು, ದೇವರು ತಮ್ಮೊಟ್ಟಿಗೆ ಸತತವಾದಂತ ಅಸಂತೋಷದಿಂದ ಇದ್ದಾರೆ ಮತ್ತು ನಮ್ಮ ವಿಷಯವಾಗಿ ಮುಖವನ್ನು ಗಂಟಿಕ್ಕಿಕೊಂಡಿರುತ್ತಾರೆ ಎಂಬ ಭಾವನೆಯಲ್ಲಿ ಜೀವಿಸುತ್ತಿರುತ್ತಾರೆ. ಇದು ಸೈತಾನನ ಸುಳ್ಳಾಗಿದೆ, ವಿಶ್ವಾಸಿಗಳನ್ನು ಖಂಡನೆಯೊಳಗೆ ತರುವುದಕ್ಕೆ ಹೇಳುವಂತ ಸುಳ್ಳು ಇದಾಗಿದೆ ಮತ್ತು ಅವರ ಆತ್ಮೀಕ ಬೆಳವಣಿಗೆಗೆ ಅಡ್ಡಿ ಮಾಡುವಂತದ್ದಾಗಿದೆ. ಕ್ರಿಸ್ತನ ರಕ್ತದ ಮುಖಾಂತರ, ಈಗ ನಾವು ದೇವರ ಸ್ನೇಹಿತರಾಗಿದ್ದೇವೆ. ನಾವು ಇದನ್ನು ನಂಬುವವರೆಗೂ, ನಾವು ಆತ್ಮೀಕವಾಗಿ ಬೆಳವಣಿಗೆಯನ್ನು ಹೊಂದುವುದಿಲ್ಲ.

ನಾವು ಬೆಳಕಿನಲ್ಲಿ ನಡೆಯುವಾಗ, ಕ್ರಿಸ್ತನ ರಕ್ತವು ಎಲ್ಲಾ ಪಾಪಗಳಿಂದ ನಮ್ಮನ್ನು ಸತತವಾಗಿ ತೊಳೆಯುತ್ತದೆ (1 ಯೋಹಾನ 1:7). ಬೆಳಕಿನಲ್ಲಿ ನಡೆಯುವುದು ಎಂದರೆ, ನಮಗೆ ಅರಿವಿರುವಂತ ಎಲ್ಲಾ ಪಾಪಗಳ ಮೇಲೆ ಜಯದಲ್ಲಿ ನಡೆಯುವುದು ಎಂಬುದಾಗಿ. ಆದರೆ ನಮಗೆ ಅರಿವಿರುವಂತ ಪಾಪಗಳ ಮೇಲೆ ನಾವು ಜಯದಲ್ಲಿ ಜೀವಿಸುವಾಗ, ನಮ್ಮ ಅರಿವಿಗೆ ಬಾರದೇ ಇರುವಂತ ಇನ್ನೂ ಅನೇಕ ಪಾಪಗಳು ನಮ್ಮಲ್ಲಿ ಇರುತ್ತವೆ. ಅದಕ್ಕಾಗಿ ಯೋಹಾನನು ಮುಂದುವರೆದು ಈ ರೀತಿಯಾಗಿ ಹೇಳುತ್ತಾನೆ, ”ನಮ್ಮಲ್ಲಿ ಪಾಪವಿಲ್ಲ ಎಂದು ನಾವು ಹೇಳುವುದಾದರೆ, ನಮ್ಮನ್ನು ನಾವು ಮೋಸ ಪಡಿಸಿಕೊಳ್ಳುತ್ತೇವೆ” (1 ಯೋಹಾನ 1:8).

ನಾವು ಮಾಂಸವನ್ನು ಹೊಂದಿರುವುದರಿಂದ, ನಮ್ಮ ಅರಿವಿಗೆ ಬಾರದೇ ಇರುವಂತ ರೀತಿಯಲ್ಲಿ ಪಾಪ ಮಾಡುತ್ತಿರುತ್ತೀವಿ ಎಂಬುದಾಗಿ ಅಲ್ಲ, ಆದರೆ ನಾವು ಅನೇಕ ವರುಷಗಳ ಕಾಲ ಅರಿವಿಗೆ ಬಂದಂತ ಸ್ವಾರ್ಥತೆಯಲ್ಲಿ ಜೀವಿಸುತ್ತಿರುತ್ತೀವಿ, ನಮ್ಮ ಪರಿವರ್ತನೆಯ ಹಿಂದಿನ ಮತ್ತು ಮುಂದಿನ ಎರಡು ಜೀವಿತಗಳಲ್ಲಿ. ಯೇಸು ಸಹ ನಾವು ಹೊಂದಿದಂತಹ ಮಾಂಸವನ್ನೇ ಹೊಂದಿದ್ದರು. ಆದರೆ ಯೇಸು ಎಂದಿಗೂ ಸ್ವಾರ್ಥ ಜೀವಿತದಲ್ಲಿ ಜೀವಿಸಲಿಲ್ಲ, ತಮಗೆ ಅರಿವಿಗೆ ಬಾರದಂತ ಕ್ಷೇತ್ರದಲ್ಲಿ ಒಂದು ಬಾರಿಯೂ ಸಹ ಯೇಸು ಪಾಪ ಮಾಡಲಿಲ್ಲ. ಆತನಲ್ಲಿ ಪಾಪವೇ ಇರಲಿಲ್ಲ (1 ಯೋಹಾನ 3:5).

ನಮ್ಮ ಅರಿವಿಗೆ ಬಾರದೇ ಇರುವಂತ ಪಾಪಗಳು (ಅಂದರೆ ಪ್ರಾಥಮಿಕವಾಗಿ ಶೇಕಡವಾರು 90 ರಷ್ಟು ಸಂಪೂರ್ಣ ಪಾಪಗಳು) ಸತತವಾಗಿ ಕ್ರಿಸ್ತನ ರಕ್ತದಿಂದ ತೊಳೆಯಲ್ಪಡುತ್ತಿರುತ್ತದೆ, ಹಾಗಾಗಿ ನಾವು ತಂದೆಯೊಟ್ಟಿಗೆ ಸತತವಾದಂತಹ ಮತ್ತು ಮುರಿಯಲ್ಪಡದೇ ಇರುವಂತಹ ಅನ್ಯೋನ್ಯತೆಯನ್ನು ಹೊಂದಿಕೊಳ್ಳಬಹುದು.

ಕ್ರಿಸ್ತನ ರಕ್ತದ ಮುಖಾಂತರ, ಸೈತಾನನ್ನು ಮತ್ತು ಆತನ ದೂರುಗಳನ್ನು ನಾವು ಜಯಗಳಿಸುತ್ತೇವೆ (ಪ್ರಕಟನೆ 12:11). ಸೈತಾನನು ನಮ್ಮ ದೇವರ ಮುಂದೆ, ಬೇರೆ ಮಾನವರ ಮುಂದೆ ಮತ್ತು ಸ್ವತ: ನಮ್ಮೊಳಗೆ ನಮ್ಮನ್ನೇ ಸತತವಾಗಿ ದೂರುತ್ತಿರುತ್ತಾನೆ. ಆದರೆ, ನಾವು ಕ್ಷಮಿಸಲ್ಪಟ್ಟಿದ್ದೇವೆ, ನೀತಿಕರಿಸಲ್ಪಟ್ಟಿದ್ದೇವೆ, ಬಿಡುಗಡೆ ಹೊಂದಿದ್ದೇವೆ, ದೇವರ ಹತ್ತಿರ ನಾವು ಕರೆದೊಯಲ್ಪಟ್ಟಿದ್ದೇವೆ, ದೇವರೊಟ್ಟಿಗಿನ ಸಮಾಧಾನಕ್ಕೆ ನಾವು ಕರೆದೊಯ್ಯಲ್ಪಟ್ಟಿದ್ದೇವೆ ಮತ್ತು ಕ್ರಿಸ್ತನ ರಕ್ತದ ಮುಖಾಂತರ ನಾವು ತೊಳೆಯಲ್ಪಟ್ಟಿದ್ದೇವೆ ಎಂಬುದನ್ನು ಅರಿಕೆ ಮಾಡುವುದರಿಂದ ಸೈತಾನನ ದೂರುಗಳನ್ನು ನಾವು ಜಯಗಳಿಸಬಹುದು. ಸೈತಾನನು ನಮ್ಮ ಮೇಲೆ ಇನ್ನು ಮುಂದೆ ಎಂದಿಗೂ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ.

ನಮ್ಮಲ್ಲಿ ಪ್ರತಿಯೊಬ್ಬರು ಅರಿವಿಗೆ ಬಾರದೇ ಪ್ರತಿನಿತ್ಯ ಪಾಪ ಮಾಡುತ್ತಿರುತ್ತೇವೆ ಮತ್ತು ಅನೇಕ ವಿಶ್ವಾಸಿಗಳು ಅರಿವಿಗೆ ಬಂದು ಸಹ ಪಾಪವನ್ನು ಮಾಡುತ್ತಿರುತ್ತಾರೆ, ಅದಕ್ಕಾಗಿ ನಾವು ಪ್ರತಿದಿನ ತೊಳೆಯಲ್ಪಡುವುದಕ್ಕಾಗಿ ಕ್ರಿಸ್ತನ ರಕ್ತದ ಅಗತ್ಯತೆ ನಮಗಿದೆ.