ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಹೊಸ ಒಡಂಬಡಿಕೆಯು ದೇವರು ಮನುಷ್ಯನೊಂದಿಗೆ ಮಾಡಿಕೊಂಡಿರುವ ಒಂದು ಒಪ್ಪಂದವಾಗಿದ್ದು, ಅದಕ್ಕೆ "ಯೇಸುವಿನ ರಕ್ತದಿಂದ ಸಹಿ ಹಾಕಲಾಗಿದೆ" (ಇಬ್ರಿಯರಿಗೆ 13:20 - Living Bible). ಈಗ ನಾವು ಅದಕ್ಕೆ ನಮ್ಮ ಸ್ವಾರ್ಥ-ಜೀವಿತದ ರಕ್ತದಿಂದ ಸಹಿ ಹಾಕಬೇಕು. ದೇವರೊಂದಿಗೆ ಆ ಒಪ್ಪಂದವನ್ನು ಮಾಡಿಕೊಳ್ಳಲು ಇದೊಂದೇ ಮಾರ್ಗವಾಗಿದೆ. ಅನೇಕ ಜನರು ಸ್ವಾರ್ಥ-ಜೀವಿತದ ರಕ್ತದಿಂದ ಹಸ್ತಾಕ್ಷರವನ್ನು ಹಾಕದೇ ಇರುವುದರಿಂದ, ತೃಪ್ತಿಕರವಾದ ಕ್ರಿಸ್ತೀಯ ಜೀವಿತವನ್ನು ಜೀವಿಸಲು ಅವರಿಗೆ ಸಾಧ್ಯವಾಗುವುದೇ ಇಲ್ಲ.

ಯೇಸುವು ತನ್ನ ತಂದೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ತಾನು ಜೀವಿತವಿಡೀ ಒಂದು ಸಲವೂ ತನ್ನ ದೇಹವನ್ನು ತನ್ನ ಸ್ವಚಿತ್ತವನ್ನು ಪೂರೈಸುವುದಕ್ಕಾಗಿ ಬಳಸುವುದಿಲ್ಲ, ಎಂಬುದಾಗಿತ್ತು (ಇಬ್ರಿಯರಿಗೆ 10:5 ff). ಆತನು ತನ್ನ ಸ್ವಚಿತ್ತವನ್ನು ಮರಣಕ್ಕೆ ಒಪ್ಪಿಸಿಕೊಟ್ಟನು ಮತ್ತು ಆ ಒಪ್ಪಂದಕ್ಕೆ ಸ್ವಚಿತ್ತದ ಮರಣದ "ರಕ್ತ"ದಿಂದ (ಶಿಲುಬೆಯ ಮರಣ) ಸಹಿ ಹಾಕಲ್ಪಟ್ಟಿತ್ತು. ಈಗ ನಾವು ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗುವ ಕರೆಯನ್ನು ಪಡೆದಿದ್ದೇವೆ. ಈ ಹಾದಿಯಲ್ಲಿ ನಡೆಯುವಾಗ ಯಾವುದೇ ಪ್ರಯಾಸವಿರುವುದಿಲ್ಲ. ಅದಕ್ಕೆ ಬದಲಾಗಿ ನೀವು ಜೀವಿಸಬಹುದಾದ ಅತ್ಯಂತ ಸಂತೋಷಕರ (ಸುಗಮ) ಜೀವನಕ್ಕೆ ಇದು ನಿಮ್ಮನ್ನು ನಡೆಸುತ್ತದೆ. ನಾವು ದೀಕ್ಷಾಸ್ನಾನದಲ್ಲಿ ಮತ್ತು ರೊಟ್ಟಿಯನ್ನು ಮುರಿಯುವಾಗ ಈ ಒಡಂಬಡಿಕೆ ಮಾಡಿಕೊಂಡಿದ್ದೇವೆಂದು ಸಾಕ್ಷೀಕರಿಸುತ್ತೇವೆ.

==============
’ನೀವು ಯೇಸುವಿನ ಅನ್ಯೋನ್ಯತೆಯಲ್ಲಿ ಮಾಡಲು ಸಾಧ್ಯವಿಲ್ಲವಾದ ಯಾವುದೇ ಕಾರ್ಯವು ಪಾಪವಾಗಿದೆ,’
=============

ಲೂಕನು 5:38'ರಲ್ಲಿ ಯೇಸುವು ’ಹೊಸ ದ್ರಾಕ್ಷಾರಸ’ ಎಂದು ಪ್ರಸ್ತಾಪಿಸಿದ ಮಾತು, ನಾವು ಹೊಸ ಒಡಂಬಡಿಕೆಯ ಅಡಿಯಲ್ಲಿ ಪಡೆಯಬಹುದಾದ ದೇವರ ಜೀವದ ಕುರಿತಾಗಿ ಹೇಳುತ್ತದೆ. ’ಹಳೇ ದ್ರಾಕ್ಷಾರಸ’ವು ಧರ್ಮಶಾಸ್ತ್ರವನ್ನು ಅನುಸರಿಸುವಂತ ಜೀವಿತವನ್ನು ಸೂಚಿಸುತ್ತದೆ - ಅಂದರೆ, ನಿಯಮ-ನಿಬಂಧನೆಗಳ ಜೀವಿತ. ಏದೆನ್ ತೋಟದ ’ಎರಡು ಮರಗಳು’ ಸಹ ಎರಡು ಒಡಂಬಡಿಕೆಗಳಿಂದ ಉಂಟಾಗುವ ಜೀವಿತದ ಚಿತ್ರಣವಾಗಿವೆ. ಅನೇಕ ನಿಯಮ-ನಿಬಂಧನೆಗಳ ಜೀವಿತವು (ಇದು ಸ್ವ-ಕಲ್ಪಿತ ಧಾರ್ಮಿಕ ಗುಂಪುಗಳಲ್ಲಿ ಕಾಣಿಸುತ್ತದೆ) ಪಾಪವನ್ನು ತಡೆಗಟ್ಟಿದರೂ (ಅಲ್ಲಿ ಮೇಲ್ನೋಟಕ್ಕೆ ನೀತಿವಂತಿಕೆಯು ಕಾಣಿಸುತ್ತದೆ) ಮರಣಕ್ಕೆ ನಡೆಸುತ್ತದೆ; ಇದಕ್ಕಾಗಿಯೇ ದೇವರು ಏದೆನ್ ತೋಟದಲ್ಲಿ ಆದಾಮನಿಗೆ ಒಳ್ಳೇದು ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಬಗ್ಗೆ ಎಚ್ಚರಿಸಿದರು. ನಿಜವಾದ ಕ್ರೈಸ್ತ ಜೀವಿತವು ನಮ್ಮ ಹೃದಯದಲ್ಲಿ ಯೇಸುವಿನ ಜೀವವನ್ನು ಪಡೆಯುವುದರ ಮೂಲಕ ಉತ್ಪತ್ತಿಯಾಗುತ್ತದೆ, ಮತ್ತು ಯಾವ ಸಂಗತಿಗಳು ಹೊಲಸು ಮತ್ತು ಬೇರೆ ಯಾವ ಸಂಗತಿಗಳು ಶುದ್ಧವಾದವುಗಳು ಎಂಬುದಾಗಿ ಅದು ನಮ್ಮನ್ನು ಎಚ್ಚರಿಸುತ್ತದೆ. ನಮಗೆ ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ, ಆದರೆ ನಾವು ಕೆಲವು ಸಂಗತಿಗಳಿಂದ ದೂರವಿರುವುದು ಯಾವುದೋ ನಿಯಮಗಳ ನಿಮಿತ್ತವಾಗಿ ಅಲ್ಲ ("ಇದನ್ನು ಹಿಡಿಯಬೇಡ, ಇದನ್ನು ಮುಟ್ಟಬೇಡ" - ಕೊಲೊ. 2:21), ಅಥವಾ ಬೇರೆ ಜನರನ್ನು ಮೆಚ್ಚಿಸುವುದಕ್ಕಾಗಿಯೂ ಅಲ್ಲ.

’ಹೊಸ ಬುದ್ದಲಿ’ಯು ’ಕ್ರಿಸ್ತನ ದೇಹದ’ ಬಗ್ಗೆ ಮಾತನಾಡುತ್ತದೆ; ನಾವು ನಮ್ಮ ದೇಹವನ್ನು ಪ್ರತಿ ದಿನ ಯೇಸುವಿಗೆ ಒಂದು ಸಜೀವ ಯಜ್ಞವಾಗಿ ಒಪ್ಪಿಸಿ, ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸುವಂತೆ ಬೇಡಿಕೊಂಡು, ಯೇಸುವಿನ ಇಹಲೋಕದ ಜೀವಿತದ ದಿನಗಳಲ್ಲಿ ಪವಿತ್ರಾತ್ಮನು ಆತನ ಶರೀರದಲ್ಲಿ ಮಾಡಿದ ಕಾರ್ಯವನ್ನೇ ನಮ್ಮಲ್ಲಿಯೂ ಮಾಡುವಂತೆ ಕೇಳಿಕೊಂಡಾಗ, ಕ್ರಿಸ್ತನ ದೇಹವು ಕಟ್ಟಲ್ಪಡುತ್ತದೆ. ನಾವು ಹೀಗೆ ಮಾಡಿದರೆ ಇದೇ ದಾರಿಯಲ್ಲಿ ನಡೆಯುತ್ತಿರುವ ಇತರರೊಂದಿಗೆ ನಾವು ಒಂದಾಗುತ್ತೇವೆ. ಹೀಗೆ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗಿ, ಅಂದರೆ ಕ್ರೈಸ್ತಸಭೆಯಾಗಿ ಮಾಡಲ್ಪಡುತ್ತೇವೆ, ಮತ್ತು ಅಲ್ಲಿ ಕ್ರಿಸ್ತನು ಒಬ್ಬರನ್ನೊಬ್ಬರು ಅಭಿವೃದ್ಧಿ ಪಡಿಸುವುದಕ್ಕೆ ಅಗತ್ಯವಾದ ಕೃಪಾವರಗಳನ್ನು ನಮಗೆ ನೀಡಿ ನಮ್ಮನ್ನು ಸಜ್ಜುಗೊಳಿಸುತ್ತಾನೆ.

ಈ ರೀತಿಯಾಗಿ ಸೈತಾನನು ನಮ್ಮ ಕಾಲುಗಳ ಕೆಳಗೆ ಹಾಕಲ್ಪಟ್ಟು ತುಳಿಯಲ್ಪಡುವನು (ರೋಮಾ. 16:20). ನಮ್ಮನ್ನು ದೂಷಿಸಲು ಮತ್ತು ನಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಉಂಟುಮಾಡಲು ನಾವು ಸೈತಾನನಿಗೆ ಅವಕಾಶವನ್ನು ಕೊಟ್ಟಾಗ, ಅವನು ನಮ್ಮ ತಲೆಯ ಮೇಲೆ ಕೂತುಕೊಳ್ಳುತ್ತಾನೆ. ಆದರೆ ಅವನಿಗಾಗಿ ನೇಮಿಸಲ್ಪಟ್ಟ ಸ್ಥಳವಾದರೋ ನಮ್ಮ ಕಾಲುಗಳ ಕೆಳಗಿದೆ.

ಪಾಪವು ಈ ರೀತಿಯಾಗಿ ವ್ಯಾಖ್ಯಾನಿಸಲ್ಪಟ್ಟಿದೆ (ರೋಮಾ. 3:23ರಲ್ಲಿ): ’ದೇವರ ಮಹಿಮೆಯನ್ನು ಕಳೆದುಕೊಳ್ಳುವುದು’ ಎಂದು ಮತ್ತು ದೇವರ ಮಹಿಮೆಯು ಯೇಸುವಿನ ಜೀವಿತದಲ್ಲಿ ತೋರಿಬರುತ್ತದೆ. ಹಾಗಾಗಿ ’ನಾವು ಯೇಸುವಿನ ಅನ್ಯೋನ್ಯತೆಯಲ್ಲಿ ಮಾಡಲು ಸಾಧ್ಯವಿಲ್ಲವಾದ ಯಾವುದೇ ಕಾರ್ಯವು ಪಾಪವಾಗಿದೆ,’ ಎಂಬುದನ್ನು ನೆನಪಿಟ್ಟುಕೊಳ್ಳಿರಿ.

ಹಳೆಯ ಒಡಂಬಡಿಕೆಯ ಅಡಿಯಲ್ಲಿ, ಪಾಪವನ್ನು ಮುಚ್ಚಲು ಮಾತ್ರ ಸಾಧ್ಯವಾಗಿತ್ತು (ಹೋರಿಗಳ ಮತ್ತು ಹೋತಗಳ ರಕ್ತದ ಮೂಲಕ), ಆದರೆ ಅದು ತೆಗೆದುಹಾಕಲ್ಪಡುತ್ತಿರಲಿಲ್ಲ (ಕೀರ್ತನೆಗಳು 32:1,2). ಪಾಪವನ್ನು ಶುದ್ಧೀಕರಿಸಲು ಅಥವಾ ಅಳಿಸಿಹಾಕಲು ಸಾಧ್ಯವಿರಲಿಲ್ಲ. ವರ್ಷದಿಂದ ವರ್ಷಕ್ಕೆ ಪಾಪಗಳನ್ನು ಜ್ಞಾಪಿಸಿಕೊಳ್ಳಲಾಗುತ್ತಿತ್ತು (ಇಬ್ರಿಯರಿಗೆ 10:3,4). ಆದಾಗ್ಯೂ ಹೊಸ ಒಡಂಬಡಿಕೆಯ ಅಡಿಯಲ್ಲಿ ನಮ್ಮ ಎಲ್ಲಾ ಪಾಪಗಳು ಯೇಸುವಿನ ರಕ್ತದ ಮೂಲಕ ಶುದ್ಧೀಕರಿಸಲ್ಪಡುವುದು ಮಾತ್ರವಲ್ಲದೇ, ದೇವರು ಅವುಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲವೆಂದು ವಾಗ್ದಾನ ಮಾಡಿದ್ದಾರೆ (ಇಬ್ರಿಯರಿಗೆ 8:12). ಎರಡು ಒಡಂಬಡಿಕೆಗಳ ನಡುವಿನ ಈ ವ್ಯತ್ಯಾಸವನ್ನು ನೀವು ಅರ್ಥ ಮಾಡಿಕೊಳ್ಳಬೇಕು.