WFTW Body: 

ಪ್ರವಾದನೆ ಸೇವೆಯ ಬಗ್ಗೆ ನಾನು ನಿಮಗೆ ಕೆಲವೊಂದು ವಿಷಯಗಳನ್ನು ತೋರಿಸಲು ಇಷ್ಟಪಡುತ್ತೇನೆ. ಪ್ರವಾದನೆ ನುಡಿಯಬೇಕೆಂದು ಎಲೀಷನು ದೇವರನ್ನು ವಿಚಾರಿಸಲು ಪ್ರಯತ್ನಿಸುತ್ತಿರುವಾಗ, ವಾದ್ಯವನ್ನು ನುಡಿಸಲು ಒಬ್ಬ ವಾದ್ಯಗಾರನಿಗೆ ಕೇಳಿಕೊಂಡನು( 2 ಅರಸು 3:15). ವಾದ್ಯಗಾರನು ವಾದ್ಯವನ್ನು ನುಡಿಸಿದಂತೆ ಕರ್ತನ ಹಸ್ತ(ಆತ್ಮ) ಆತನ ಮೇಲೆ ಬರುತ್ತಿತ್ತು, ಮತ್ತು ಆತನು ಬಲವಾಗಿ ಪ್ರವಾದಿಸಿದನು.

ಭಾನುವಾರ ಮುಂಜಾನೆಯ ಆರಾಧನೆ ಮತ್ತು ಸ್ತೋತ್ರವನ್ನರ್ಪಿಸುವ ಸಮಯಗಳಲ್ಲಿ, ಕರ್ತನ ಹಸ್ತವು ನನ್ನ ಮೇಲೆ ಬಂದು ನಾನು ಆಲಯಕ್ಕೆ ಬರುವ ಮುನ್ನ ಇಲ್ಲದೇ ಇರುವ ವಾಕ್ಯವನ್ನು ನನಗೆ ದಯಪಾಲಿಸಿದ ಅನೇಕ ಸಮಯಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ಆ ಅಭಿಷೇಕ ಹೊಂದಿದ ಸಂಗೀತದಲ್ಲಿ(ವಾದ್ಯಗಳ ಸ್ವರಗಳಲ್ಲಿ) ಒಂದು ಬಲವಿತ್ತು, ಅದು ಎಲೀಷನ ಮೇಲೆ ಪ್ರವಾದನೆಯ ಆತ್ಮವನ್ನು ತಂದಿತು.

ಕೆಲವೊಂದು ಸಮಯದಲ್ಲಿ ಒಬ್ಬ ಪ್ರವಾದಿಗೂ ಸಂಗೀತಗಾರರಿಂದ ಸಹಾಯಬೇಕಾಗುತ್ತದೆ. ಆದುದರಿಂದಲೇ ಸಂಗೀತದ ನಾಯಕತ್ವವನ್ನುವಹಿಸುವವರು ಅಭಿಷೇಕ ಹೊಂದಿರುವುದು ಬಹಳ ಅವಶ್ಯವಾಗಿದೆ. ಅವರು ಕೇವಲ ಒಳ್ಳೆ ವಾದ್ಯಗಾರರಾಗಿರಬಾರದು. ಅವರು ಒಳ್ಳೆ ಮನಸ್ಸಾಕ್ಷಿಯನ್ನು ಮತ್ತು ಅಭಿಷೇಕವನ್ನು ಹೊಂದಿರಬೇಕು. ದಾವೀದನು ಹಾಡುವವರನ್ನು, ವಾದ್ಯಗಾರರನ್ನು ನೇಮಿಸಿದನು, ಮತ್ತು ಅವರು ಅಭಿಷೇಕವನ್ನು ಹೊಂದಿರಲೇಬೇಕಾಗಿತ್ತು. ಆಸಾಫನಂತಹ ಕೆಲವು ಸಂಗೀತ-ನಾಯಕರುಗಳು ಹನ್ನೆರಡು ಅದ್ಭುತವಾದ ಕೀರ್ತನೆಗಳನ್ನು ಬರೆದರು (ಕೀರ್ತನೆಗಳು 50: 73-83). ಈ ಸಂಗೀತಗಾರರಲ್ಲಿ ಇಬ್ಬರನ್ನು - ಹೇಮಾನನು ಮತ್ತು ಯೆದುತೂನ್ ಜ್ಞಾನಿಗಳೆಂದು(ಅಥವಾ ಪ್ರವಾದಿಗಳೆಂದು) ಕರೆದರು.

ಅಭಿಷೇಕ ಹೊಂದಿದ ಪ್ರವಾದಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಲು, ದೇವರಿಗೆ ಅಭಿಷೇಕ ಹೊಂದಿದ ಸಂಗೀತಗಾರರ ಅಗತ್ಯತೆಯಿದೆ. ಈ ರೀತಿಯಾಗಿ ಸಭೆಯು ಕಟ್ಟಲ್ಪಡುವದು. ನಿಮ್ಮಲ್ಲಿ ಕೆಲವರಿಗೆ ಪ್ರವಾದಿಯ ಕರೆಯಿಲ್ಲದಿರಬಹುದು, ಆದರೆ ನೀವು ಸಂಗೀತಗಾರರಾಗಿ ಕರೆಯಲ್ಪಟ್ಟಿರಬಹುದು. ಹಾಗಿದ್ದಲ್ಲಿ ಅಭಿಷೇಕ ಹೊಂದಿದ ಸಂಗೀತಗಾರರಾಗಿರಿ. ನನಗನಿಸುತ್ತೆ, ವಾದ್ಯವನ್ನು ನುಡುಸುವವನು ಲೋಕದ ರೀತಿಯಲ್ಲಿ ಸಂಗೀತವನ್ನು ನುಡಿಸಲು ಪ್ರಯತ್ನಿಸಿದ್ದರೆ, ಎಲೀಷನು ಅದರಿಂದ ಪ್ರೇರೆಪಿಸಲ್ಪಡುತ್ತಿದ್ದಿಲ್ಲ. ಇಲ್ಲ. ಆ ಸಂಗೀತದಲ್ಲಿ ಏನೋ ಸ್ವರ್ಗದಂತ: ಪ್ರಭಾವವಿತ್ತು.

ಸ್ವರ್ಗೀಯವಾದ ಮತ್ತು ಲೌಖಿಕವಾದ ಸಂಗೀತವೆಂಬುದಿದೆ ಹಾಗು ನೀವು ಅದನ್ನು ಕೇಳಿದಾಕ್ಷಣ ಇದು ಸ್ವರ್ಗೀಯ ಸಂಗೀತವೇ ಎಂದು ಗ್ರಹಿಸಬಹುದು, ಏಕೆಂದರೆ ಅದು ನಿಮ್ಮ ಆತ್ಮವನ್ನು ದೇವರ ಆರಾಧನೆಗೆ ಮೇಲಕ್ಕೆ ಎತ್ತುತ್ತದೆ. ಕೆಲವು ಸಂಗೀತಗಳು ಸಂಗೀತಗಾರರನ್ನು ಮೆಚ್ಚಿಸುವಂತೆ ಮಾಡುತ್ತದೆ! ಜನರು ದೇವರನ್ನು ಆರಾಧಿಸಲಿಕ್ಕೆ ಮುನ್ನಡೆಸಲು ಮತ್ತು ಪ್ರವಾದನೆಯ ಆತ್ಮವನ್ನು ಕೂಟಕ್ಕೆ ತರುವವರು ನೀವಾಗಿದ್ದರೆ ನೀವು ಅಭಿಷೇಕಿಸಲ್ಪಟ್ಟ ಸಂಗೀತಗಾರರಾಗಿದ್ದಿರಾ.

2ಪೂರ್ವಕಾಲವೃತ್ತಾಂತ 20 , ಈ ಹಳೆಯ ಒಡಂಬಡಿಕೆಯ ಅಧ್ಯಾಯದಲ್ಲಿ ಒಂದು ಅದ್ಭುತವಾದ ಕಥೆಯನ್ನು ಓದುತ್ತೇವೆ, ಇದು ದೇವರಿಗೆ ಸ್ತೋತ್ರ ಮಾಡುವದರಲ್ಲಿರುವ ಬಲದ ಬಗ್ಗೆ ವಿವರಿಸುತ್ತದೆ. ಅನೇಕ ಪಾಠಗಳನ್ನ ನಾವಿಲ್ಲಿ ಕಲಿಯಬಹುದು. ಅರಸನಾದ ಯೆಹೋಷಾಫಾಟನ ವಿರುದ್ಧವಾಗಿ ಯುದ್ಧಮಾಡಲು ಅಪಾರ ವೈರಿಗಳ ಸಮೂಹವು ಅವನನ್ನು ಸುತ್ತುವರೆದಿತ್ತು.ಯೆಹೋಷಾಫಾಟನು ಹಿಂದೆ ಒಂದು ಸಾರಿ ಅಹಾಬನ ಜೊತೆಗೆ ಮಾಡಿಕೊಂಡಿದ್ದ ರಾಜಿಯಿಂದ ಪಾಠ ಕಲಿತಿದ್ದನು, ಆದ್ದರಿಂದ ಈಗ ದೇವರನ್ನು ವಿಚಾರಿಸಲು ನಿರ್ಧರಿಸುತ್ತಾನೆ. ಆತನು ದೇವರಲ್ಲಿ ನಂಬಿಕೆಯ ಇಡುವ ವಿಷಯದ ಬಗ್ಗೆ ಒಂದು ಉತ್ತಮವಾದ ಪ್ರಾರ್ಥನೆಯನ್ನು ಮಾಡುತ್ತಾನೆ - ಅವನ ತಂದೆಯಾದ ಆಸನು ಮಾಡಿದ ಪ್ರಾರ್ಥನೆಯ ಗುಣಮಟ್ಟದಲ್ಲಿಯೇ ಈತನ ಪ್ರಾರ್ಥನೆ ಇರುತ್ತದೆ (2ಪೂರ್ವಕಾಲವೃತ್ತಾಂತ 14:11) . ಇಲ್ಲಿ ಗಮನಿಸಬೇಕು ಯಾವ ರೀತಿಯಲ್ಲಿ ಯೆಹೋಷಾಫಾಟನು ತನಗೂ ಹಾಗು ದೇವರಿಗೂ ಏಳು ವಿಷಯಗಳ ಬಗ್ಗೆ ಜ್ಞಾಪಕ ಮಾಡಿಕೊಡುತ್ತಾನೆ ಮತ್ತು ಅವೆಲ್ಲವುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾನೆ:

  • 1. ದೇವರ ಸಂಪೂರ್ಣ ಸರ್ವಾಧಿಕಾರ (2ಪೂರ್ವಕಾಲವೃತ್ತಾಂತ 20 : 6).
  • 2. ಹಿಂದಿನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ದೇವರು ಏನು ಮಾಡಿದ್ದನು (2ಪೂರ್ವಕಾಲವೃತ್ತಾಂತ 20 : 7).
  • 3. ದೇವರ ವಾಗ್ದಾನಗಳು (2ಪೂರ್ವಕಾಲವೃತ್ತಾಂತ 20 : 8,9).
  • 4. ಇಸ್ರಾಯೇಲ್ಯವು ದೇವರ ಸ್ವಾಸ್ತ್ಯವಾಗಿತ್ತು(ಸಂಪತ್ತಾಗಿತ್ತು) (2ಪೂರ್ವಕಾಲವೃತ್ತಾಂತ 20 : 8,9).
  • 5. ತಮ್ಮ ಸಂಪೂರ್ಣ ನಿರ್ಬಲಾವಸ್ಥೆ (2ಪೂರ್ವಕಾಲವೃತ್ತಾಂತ 20 :12).
  • 6. ತಮ್ಮ ಸಂಪೂರ್ಣ ಜ್ಞಾನಹೀನ ಸ್ಥಿತಿ (2ಪೂರ್ವಕಾಲವೃತ್ತಾಂತ 20 : 12).
  • 7. ದೇವರ ಮೇಲೆ ತಮ್ಮ ಸಂಪೂರ್ಣ ಅವಲಂಬನೆ (2ಪೂರ್ವಕಾಲವೃತ್ತಾಂತ 20 : 12).
  • ದೇವರು ಕೂಡಲೆ, ಒಂದು ಸಂದೇಶವನ್ನು ಒಬ್ಬ ಪ್ರವಾದಿಯ ಮೂಲಕ ಕಳುಹಿಸುತ್ತಾನೆ ಅದೇನೆಂದರೆ- "ಹೇದರಬೇಡಿರಿ, ಕಳವಳಗೊಳ್ಳಬೇಡಿರಿ.
    ಯುದ್ಧವು ನಿಮ್ಮದಲ್ಲ ದೇವರದ್ದಾಗಿದೆ. ಹೋಗಿ ವೈರಿಗಳನ್ನು ಎದುರಿಸಿರಿ. ಯೆಹೋವನು ನಿಮ್ಮ ಸಂಗಡ ಇರುವನು"(2ಪೂರ್ವಕಾಲವೃತ್ತಾಂತ 20 : 15-17).

    ಆದ್ದರಿಂದ ಯೆಹೋಷಾಫಾಟನು ಯುದ್ಧದಲ್ಲಿ ಸಂಗೀತಗಾರರನ್ನು ಎಲ್ಲಾ ಸೈನಿಕರಿಗಿಂತ ಮುಂದಿನ ಸಾಲಿನಲ್ಲಿ ಕಳುಹಿಸುತ್ತಾನೆ! ಈ ಸಂಗೀತಗಾರರು ಕರ್ತನನ್ನು ಸ್ತೋತ್ರಪದಗಳಿಂದ ಕೊಂಡಾಡುತ್ತಿರುವಾಗ, ಕರ್ತನು ಯಹೂದ ಕುಲದ ಎಲ್ಲಾ ವೈರಿಗಳನ್ನು ಸೋಲಿಸಿದನು. ವೈರಿಗಳ ಸ್ವತ್ತಿನಿಂದ ಯಹೂದ ಶ್ರೀಮಂತವಾಯಿತು. ಈ ಕಥೆಯು ಜಯದ ಮಾರ್ಗವನ್ನು ತೋರಿಸುತ್ತದೆ. ಅದು ಹೇಗೆಂದರೆ: ವೈರಿಗಳು(ಸಮಸ್ಯೆಗಳು) ನಮ್ಮ ಮುಂದೆ ಇನ್ನೂ ಇರುವಾಗಲೇ ದೇವರು ಸಾರ್ವಭೌಮನೆಂದು ಮತ್ತು ಆತನ ವಾಗ್ದಾನಗಳನ್ನು ನಂಬಿಕೆಯಿಂದ ಅರಿಕೆಮಾಡುತ್ತಿರಲಾಗಿ ಮತ್ತು ಪರಿಸ್ಥಿತಿಗಳ ಬೆಳವಣಿಗೆಯ ಮುನ್ನವೆ ಕರ್ತನಿಗೆ ಸ್ತೋತ್ರಸಲ್ಲಿಸುವುದರಿಂದ ಕರ್ತನಲ್ಲಿ ಜಯವು ದೊರಕುತ್ತದೆ. ನಮ್ಮ ನಂಬಿಕೆಯು ಸ್ತೋತ್ರದ ಮೂಲಕ ಅರಿಕೆ ಮಾಡಲಾಗುತ್ತದೆ. "ಅವರು ಆತನ ವಾಕ್ಯವನ್ನು ನಂಬಿದರು- ಮತ್ತು ಆತನಿಗೆ ಸ್ತೋತ್ರಸಲ್ಲಿಸಿದರು" (ಕೀರ್ತನೆ.106:12). ಇದನ್ನು ಇನ್ನೊಂದು ಅರ್ಥದಲ್ಲಿ ಹೇಳಬೇಕಾದರೆ: ನಾವು ದೇವರ ಸ್ತೋತ್ರಪದಗಳನ್ನು ಹಾಡದೇ ಹೋದಾಗ, ಆತನ ವಾಕ್ಯದಲ್ಲಿ ನಂಬಿಕೆಯಿಲ್ಲವೆಂಬುದನ್ನು ಪ್ರಮಾಣಿಕರಿಸುತ್ತದೆ.