ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ
WFTW Body: 

”ನನ್ನನ್ನು ಹಿಂಬಾಲಿಸಿ” ಎಂದು ಯೇಸು ಹೇಳಿದ್ದಾರೆ (ಲೂಕ 9:23)

”ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವೂ ನನ್ನನ್ನು ಅನುಸರಿಸುವವರಾಗಿರಿ” ಎಂದು ಪೌಲನು ಹೇಳಿದ್ದಾನೆ (1 ಕೊರಿಂಥ 11:1 ; ಪಿಲಿಪ್ಪಿ 3:17)

ಅಪೊಸ್ತಲನಾದ ಪೌಲನ ಈ ಮಾತುಗಳಲ್ಲಿ, ಪ್ರತಿಯೊಬ್ಬ ದೈವಿಕ ಬೋಧಕನು ತಾನು ಯಾರಿಗೆ ಬೋಧಕನಾಗಿದ್ದಾನೋ, ಅವರಿಗೆ ಪೌಲನು ಹೇಳಿದಂತ ಮಾತುಗಳನ್ನು ಆಡಬೇಕೆಂದು ಪವಿತ್ರಾತ್ಮನು ನಿರೀಕ್ಷಿಸುತ್ತಾನೆ ಎಂಬುದಾಗಿ ನಾವು ನೋಡುತ್ತೇವೆ.

ಅನೇಕ ಬೋಧಕರುಗಳು ಹೀಗೆ ಹೇಳಿದ್ದಾರೆ, ”ನನ್ನನ್ನು ಹಿಂಬಾಲಿಸಬೇಡಿ, ಆದರೆ ಕ್ರಿಸ್ತನನ್ನು ಹಿಂಬಾಲಿಸಿ” ಎಂಬುದಾಗಿ. ಇದು ದೀನತೆಯುಳ್ಳಂತ ಮಾತು ಎಂದು ಹೊರಗೆ ತೋರುತ್ತದೆ. ಆದರೆ ಇದು ಕೇವಲ ತಮ್ಮ ಸೋತ ಜೀವತವನ್ನು ಮುಚ್ಚಿಕೊಳ್ಳುವುದಕ್ಕೆ ತಪ್ಪಿಸಿಕೊಳ್ಳುವ ಮಾರ್ಗ ಅಷ್ಟೆ; ಮತ್ತು ಇದು ಪವಿತ್ರಾತ್ಮನ ಬೋಧನೆಗೆ ವಿರುದ್ದವಾಗಿ ತೋರುತ್ತದೆ,

”ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ, ನೀವೂ ನನ್ನನ್ನು ಅನುಸರಿಸುವವರಾಗಿರಿ” ಎಂದು ಯಾವ ಬೋಧಕರು ಹೇಳುತ್ತಾರೋ ಅಂತಹ ಬೋಧಕರುಗಳನ್ನು ನಾನು ಗೌರವಿಸುತ್ತೇನೆ ಮತ್ತು ಹಿಂಬಾಲಿಸುತ್ತೇನೆ. ಇಂತಹ ಬೋಧಕರುಗಳು ಈ ನಮ್ಮ ದಿನಮಾನಗಳಲ್ಲಿ ಕಡಿಮೆ ಇದ್ದಾರೆ ಎಂದು ಹೇಳಲು ಬೇಸರ ವಾಗುತ್ತದೆ.

ಪೌಲನ ಪರಿವರ್ತನೆಗೆ ಮುಂಚೆ, ಆತನು ಸಂಪೂರ್ಣ ಸೋಲನ್ನು ಅನುಭವಿಸಿದ್ದನು. ಪೌಲನು ಪರಿಪೂರ್ಣನಾಗಿಲ್ಲದೇ ಇದ್ದರೂ ಸಹ, ನಂತರ ದೇವರು ಆತನನ್ನು ಬದಲಿಸಿದರು ಮತ್ತು ಹಿಂಬಾಲಿಸುವಂತ ಮತ್ತೊಬ್ಬರಿಗೆ ದೊಡ್ಡ ಮಾದರಿಯನ್ನಾಗಿ ಮಾಡಿದರು, (ಪಿಲಿಪ್ಪಿ 3:12-14 ನೋಡಿ). (ಲೊಕದಲ್ಲಿರುವಂತ ಶ್ರೇಷ್ಟ ಕ್ರೈಸ್ತನು ಪರಿಪೂರ್ಣನಲ್ಲ, ಆದರೆ ಪರಿಪೂರ್ಣತೆಯನ್ನು ಗುರಿ ಮಾಡಿಕೊಂಡು ಓಡುತ್ತಿರುತ್ತಾನೆ).

ಹಾಗಾಗಿ, ನಿಮ್ಮ ಪೂರ್ವದಲ್ಲಿ ನೀವು ಪೂರ್ಣ ಸೋಲು ಅನುಭವಿಸಿದವರಾಗಿದ್ದರೆ, ಹಿಂಬಾಲಿಸುವಂತ ಮತ್ತೊಬ್ಬರಿಗೆ ದೇವರು ನಿಮ್ಮನ್ನು ಮಾದರಿಯನ್ನಾಗಿ ಮಾಡುತ್ತಾನೆ. ನಾನು ಒಬ್ಬ ಬೋಧಕನನ್ನು ಮಾದರಿಯನ್ನಾಗಿ ಹಿಂಬಾಲಿಸುವ ಮತ್ತು ಗೌರವಿಸುವ ಮುನ್ನ, ಪ್ರಾಥಮಿಕವಾಗಿ ಆತನಲ್ಲಿ ಏಳು ಗುಣಲಕ್ಷಣಗಳನ್ನು ನೋಡುತ್ತೇನೆ :

1. ಆತನು ದೀನನಾಗಿರಬೇಕು, ಕೈಗೆ ಸಿಗುವಂತಿರಬೇಕು.

ಯೇಸು ದೀನನಾಗಿದ್ದರು ಮತ್ತು ಸುಲಭವಾಗಿ ಮತ್ತೊಬ್ಬರಿಗೆ ಸಂಧಿಸಲು ಸಿಗುತ್ತಿದ್ದರು (ಮತ್ತಾಯ 11:29). ಜನರು ಆತನನ್ನು ಸುಲಭವಾಗಿ ಯಾವ ಸಮಯದಲ್ಲಿಯಾದರೂ ತಲುಪಬಹುದಿತ್ತು. ನೆಕೊದೇಮನು ಯೇಸುವಿನ ಮನೆಯಲ್ಲಿ ಆತನನ್ನು ”ಮಧ್ಯರಾತ್ರಿಯಲ್ಲಿಯೂ ಸಹ” ಭೇಟಿಯಾಗಬಹುದಿತ್ತು. ಮತ್ತು ಯಾರು ಬೇಕಾದರೂ ಸಾರ್ವಜನಿಕ ಸ್ಥಳಗಳಲ್ಲಿ ಯಾವ ಸಮಯದಲ್ಲಿ ಬೇಕಾದರೂ ಯೇಸುವಿನ ಜೊತೆ ಮಾತನಾಡಬಹುದಿತ್ತು. ಯೇಸುವಿನ ದೀನತೆಯು ಬಡವರಿಗೆ ಸುವಾರ್ತೆಯನ್ನು ಸಾರಲು ಅಭಿಲಾಶೆಯನ್ನು ಕೊಟ್ಟಿತು (ಲೂಕ 4:18 ರಲ್ಲಿ ನಾವು ಓದುವ ಹಾಗೇ). ಪೌಲನು ಸಹ ದೀನವುಳ್ಳ ಮನುಷ್ಯನಾಗಿದ್ದುಕೊಂಡು, ತಕ್ಷಣವೇ ತನ್ನ ತಪ್ಪುಗಳನ್ನು ಅರಿಕೆ ಮಾಡಿ, ಬೇರೆಯವರ ಬಳಿ ಕ್ಷಮೆ ಕೇಳುತ್ತಿದ್ದನು (ಅ.ಕೃತ್ಯಗಳು 23:1-5). ಯಾರು ಬಡವ ಮತ್ತು ಶ್ರೀಮಂತ ಎಂದು ತಾರತಮ್ಯ ಮಾಡದೇ ಇರುತ್ತಾರೋ, ಅಂಥಹ ಬೋಧಕರುಗಳನ್ನು ಮಾತ್ರ ನಾನು ಹಿಂಬಾಲಿಸುತ್ತೇನೆ. ತಮ್ಮ ಬಗ್ಗೆ ”ಶ್ರೇಷ್ಠನೆಂಬ ವಯ್ಯಾರ” ಇಲ್ಲದೇ ಇರುವಂತ, ಯಾರು ತಕ್ಷಣವೇ ತಮ್ಮ ತಪ್ಪುಗಳಿಗಾಗಿ ಕ್ಷಮೆ ಕೇಳುತ್ತಾರೋ ಮತ್ತು ಯಾರು ಒಬ್ಬ ಸಾಮಾನ್ಯ ಸಹೋದರರಾಗಿ ಉಳಿದುಕೊಳ್ಳುತ್ತಾರೋ ಅಂಥವರನ್ನು ನಾನು ಹಿಂಬಾಲಿಸಲು ಇಚ್ಛಿಸುತ್ತೇನೆ.

2. ಆತನು ತನಗಾಗಿ ಅಥವಾ ತನ್ನ ಸೇವೆಗಾಗಿ ಯಾರ ಬಳಿಯೂ ಹಣವನ್ನು ಕೇಳದೇ, ಸರಳ ಜೀವನ ವಿಧಾನವನ್ನು ಹೊಂದಿರಬೇಕು.

ಯಾರು ತನಗಿಂತ ಹೆಚ್ಚು ಉಳ್ಳವರಾಗಿದ್ದರೋ, ಅಂಥವರಿಂದ ಪೌಲನು ಉಚಿತ ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದನು (ಪಿಲಿಪ್ಪ 4:16-18). ಮತ್ತು ಆತನಿಗಿಂತ ಬಡವನಾಗಿರುವವರಿಂದ ಸ್ವೀಕರಿಸುತ್ತಿರಲಿಲ್ಲ. ಯೇಸು ಎಂದಿಗೂ ತನಗಾಗಲಿ ಅಥವಾ ತನ್ನ ಸೇವೆಗಾಗಲಿ ಯಾರ ಬಳಿಯೂ ಹಣವನ್ನು ಕೇಳಲಿಲ್ಲ. ಮತ್ತು ಆತನು ಉಡುಗೊರೆಗಳನ್ನು ತನಗಿಂತ ಹೆಚ್ಚು ಉಳ್ಳವರಿಂದ ಮಾತ್ರ ಸ್ವೀಕರಿಸಿಕೊಳ್ಳುತ್ತಿದ್ದನು (ಲೂಕ 8:3). ಯೇಸು ಮತ್ತು ಪೌಲನು ಸರಳ ಜೀವನ ವಿಧಾನ ವನ್ನು ಅಳವಡಿಸಿಕೊಂಡಿದ್ದರು. ಯೇಸು ಮತ್ತು ಪೌಲನು, ಹಣ ಹಾಗೂ ಭೌತಿಕ ಸಂಗತಿಗಳ ಕಡೆಗೆ ಹೊಂದಿದಂತ ಈ ನಡುವಳಿಕೆಯನ್ನು ಯಾರು ಹೊಂದಿರುತ್ತಾರೋ, ಅಂಥಹ ಬೋಧಕರುಗಳನ್ನು ನಾನು ಹಿಂಬಾಲಿಸಲು ಇಚ್ಛಿಸುತ್ತೇನೆ.

3. ಆತನು ದೈವಿಕ ಮನುಷ್ಯನು ಎಂಬ ಸಾಕ್ಷಿಯನ್ನು ಹೊಂದಿರಬೇಕು. ಆತನು ದೈವಿಕನು ಎಂಬುದಾಗಿ ಚಿರಪರಿಚಿತನಿರಬೇಕು.

ನೀತಿಯುಳ್ಳಂತ ಪ್ರಾಮಾಣಿಕ ಮನುಷ್ಯನಾಗಿದ್ದುಕೊಂಡು, ಪವಿತ್ರತೆಗಾಗಿ ಅಭಿಲಾಷೆಯನ್ನು ಹೊಂದಿರಬೇಕು - ಯಾವುದರಲ್ಲಿಯೂ ತನ್ನ ಸ್ವಾರ್ಥವನ್ನು ಹುಡುಕುವವನಾಗಿರಬಾರದು ಹಾಗೂ ತನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು (ಯಾಕೋಬ 1:26, ಎಫೆಸ 4:26-31). ಯಾರು ಸೋತಿರುತ್ತಾರೋ ಅಂಥವರ ವಿಷಯವಾಗಿ ಕರುಣೆಯನ್ನು ಹೊಂದಿರಬೇಕು ಮತ್ತು ತನ್ನ ಪ್ರಾರ್ಥನೆಗಾಗಿ, ಉಪವಾಸ ಮತ್ತು ಕೊಡುವಿಕೆಗಾಗಿ ಹೆಮ್ಮೆ ಪಟ್ಟುಕೊಳ್ಳುವಂತಿರಬಾರದು. (ಮತ್ತಾಯ 6:1-18). ಆತನು ಎಲ್ಲಾ ವೃದ್ಧ, ಯೌವನಸ್ಥ ಮತ್ತು ಸ್ತ್ರೀಯರ ಕಡೆಗೆ ಪೂರ್ಣ ಪರಿಶುದ್ಧತೆಯನ್ನು ಇಟ್ಟುಕೊಂಡಿರುವ ಸಾಕ್ಷಿಯನ್ನು ಹೊಂದಿರಬೇಕು (1 ತಿಮೊಥೆ 5:2). ಅವರ ಜೀವಿತದಲ್ಲಿ ದೈವಿಕತೆಯ ಸುಂಗಧ ವಾಸನೆಯನ್ನು ಹೊಂದಿರುವಂತ ಬೋಧಕರನ್ನು ಮಾತ್ರ ನಾನು ಹಿಂಬಾಲಿಸಲು ಇಚ್ಛಿಸುತ್ತೇನೆ.

4. ಆತನು ತನ್ನ ಮಕ್ಕಳನ್ನು ದೈವಿಕತೆಯ ಮಾರ್ಗದಲ್ಲಿ ಬೆಳಸಿರಬೇಕು. ಆತನು ಕ್ರಿಸ್ತನನ್ನು ಹಿಂಬಾಲಿಸಿರುವಂತೆ, ತನ್ನ ಮಕ್ಕಳು ಸಹ ಅದೇ ರೀತಿ ಕ್ರಿಸ್ತನನ್ನು ಹಿಂಬಾಲಿಸುತ್ತಿರಬೇಕು.

ಪವಿತ್ರಾತ್ಮನು ಹೀಗೆ ಹೇಳುತ್ತಾನೆ, ಮೊದಲು ತನ್ನ ಸ್ವಂತ ಮಕ್ಕಳನ್ನು ದೈವಿಕತೆಗೆ ನಡೆಸದೇ, ಸಭೆಯಲ್ಲಿ ನಾಯಕನಾಗಿರಲು ಸಾಧ್ಯವಿಲ್ಲ ಎಂಬುದಾಗಿ (1 ತಿಮೊಥೆ 3:4,5; ತೀತ 1:6). ಬೇರೆಯವರಿಗಿಂತ ಹೆಚ್ಚಾಗಿ ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ತಿಳಿದಿರುತ್ತಾರೆ, ಏಕೆಂದರೆ ಮನೆಯಲ್ಲಿ ಎಲ್ಲಾ ಸಮಯ ನಮ್ಮನ್ನು ನೋಡುತ್ತಿರುತ್ತಾರೆ ಮತ್ತು ನಾವು ದೈವಿಕ ಜೀವಿತದಲ್ಲಿ ನಡೆಯುವುದನ್ನು ಅವರು ನಮ್ಮ ಮನೆಯಲ್ಲಿ ನೋಡುವಾಗ, ಅವರು ಸಹ ಕರ್ತನನ್ನು ಪೂರ್ಣ ಹೃದಯದಿಂದ ಹಿಂಬಾಲಿಸುತ್ತಾರೆ. ಯಾರು ತಮ್ಮ ಮಕ್ಕಳನ್ನು ದೈವಿಕತೆ ಮತ್ತು ದೀನತೆ ಹಾಗೂ ಎಲ್ಲಾ ಜನರಿಗೂ ಗೌರವ ಕೊಟ್ಟು ಮಾತಾಡುವಂತ ರೀತಿಯಲ್ಲಿ ಬೆಳಸಿರುತ್ತಾರೋ, ಅಂಥ ಬೋದಕರನ್ನು ಮಾತ್ರ ನಾನು ಹಿಂಬಾಲಿಸಲು ಇಚ್ಛಿಸುತ್ತೇನೆ.

ಇಂದಿನ ಕ್ರೈಸ್ತತ್ವದಲ್ಲಿನ ರಾಜಿ ಮತ್ತು ಲೋಕತ್ವದ ಸ್ವಭಾವದಲ್ಲಿ, ಜೀವಿತದ ಗುಣಮಟ್ಟವನ್ನು ಏರಿಸಲು ಮತ್ತು ಸೇವೆಯನ್ನು ಉನ್ನತವಾಗಿ ಸಭೆಯಲ್ಲಿ ಏರಿಸಲು ನಾವು ಕರೆಯಲ್ಪಟ್ಟಿದ್ದೇವೆ

5. ಆತನು ದೇವರ ಪೂರ್ತಿ ಆಲೋಚನೆಗಳನ್ನು ಭಯ ಪಡದೇ ಬೋದಿಸುವವನಾಗಿರಬೇಕು.

ಆತನು ಯಾವುದೇ ಮನುಷ್ಯನನ್ನು ಮೆಚ್ಚಿಸದೇ, ಹೊಸ ಒಡಂಬಡಿಕೆಯಲ್ಲಿ ಬರೆಯಲ್ಪಟ್ಟಿರುವ ಪ್ರತಿ ಆಜ್ಞೆ ಮತ್ತು ಪ್ರತಿ ವಾಗ್ದಾನ ಹಾಗೂ ಎಲ್ಲವನ್ನು ಸಾರುವಂತವನಾಗಿರಬೇಕು (ಅ.ಕೃತ್ಯಗಳು 2:27; ಗಲಾತ್ಯ 1:10). ಆತನು ಯೇಸುವಿನಂತೆ ಮತ್ತು ಪೌಲನಂತೆ ಸತತವಾಗಿ ಪವಿತ್ರಾತ್ಮನಿಂದ ನಿಜವಾಗಿಯೂ ಅಭಿಷೇಕಿಸಲ್ಪಟ್ಟಿದ್ದರೆ, ನಂತರ, ಆತನ ಸಂದೇಶವು ಯಾವಾಗಲೂ ಸವಾಲುಳ್ಳದ್ದಾಗಿರುತ್ತದೆ ಮತ್ತು ಪ್ರೋತ್ಸಾಹದಾಯಕವಾಗಿರುತ್ತದೆ. ಯಾರು ತಾವು ಮಾತಾನಾಡುವಾಗ ಅವರು ದೇವರಿಂದ ಅಭಿಷೇಕಿಸಲ್ಪಟ್ಟಿದ್ದಾರೆ ಎಂಬುದನ್ನು ನಾನು ಗ್ರಹಿಸುತ್ತೇನೋ, ಅಂಥವರನ್ನು ಮಾತ್ರ ನಾನು ಹಿಂಬಾಲಿಸುತ್ತೇನೆ.

6. ಆತನು ಕ್ರಿಸ್ತನ ದೇಹವನ್ನು ತೋರಿಸುವಂತ ರೀತಿಯಲ್ಲಿ ಸ್ಥಳೀಯ ಸಭೆಗಳನ್ನು ಕಟ್ಟುವುದರಲ್ಲಿ ಅಭಿಲಾಷೆ ಹೊಂದಿರಬೇಕು.

ಯೇಸು ಕೇವಲ ಜನರನ್ನು ರಕ್ಷಿಸಲು ಮಾತ್ರ ಈ ಲೋಕಕ್ಕೆ ಬರಲಿಲ್ಲ, ಆದರೆ ತನ್ನ ಸಭೆಯನ್ನು ಕಟ್ಟಲು ಸಹ ಬಂದನು. ಆ ದೇಹವು ಆತನ ಜೀವಿತವನ್ನು ಪ್ರಚುರಪಡಿಸುತ್ತದೆ (ಮತ್ತಾಯ 16:18). ಅದೇ ರೀತಿ, ಪೌಲನ ಅಭಿಲಾಷೆಯು ಈ ರೀತಿಯಾಗಿ ಎಲ್ಲಾ ಕಡೆಯೂ ಸ್ಥಳೀಯ ಸಭೆಗಳನ್ನು ಕಟ್ಟುವುದಾಗಿತ್ತು, ಅದು ಕ್ರಿಸ್ತನ ದೇಹದ ಕಾರ್ಯಮುಖವಾಗಿತ್ತು (ಎಫೆಸ 4:15, 16). ಮತ್ತು ಆತನು ಕೊನೆಯವರೆಗೂ ಕಷ್ಟಪಟ್ಟು ಕೆಲಸ ಮಾಡಿದನು ( ಕೊಲಸ್ಸೆ 1:28,29). ಕ್ರಿಸ್ತನ ದೇಹವನ್ನು ಹೊರಸೂಸುವಂತೆ ಸ್ಥಳೀಯ ಸಭೆಗಳನ್ನು ಯಾರು ಕಟ್ಟುತ್ತಾರೋ ಅಂಥಹ ಬೋಧಕರುಗಳನ್ನು ಮಾತ್ರ ನಾನು ಹಿಂಬಾಲಿಸುತ್ತೇನೆ.

7. ಆತನು, ತನ್ನ ದ್ಯೇಯದೃಷ್ಠಿ ಮತ್ತು ತನ್ನ ಆತ್ಮವನ್ನೇ ಹೊಂದಿರುವಂತ ಕೆಲವು ಸಹ ಕೆಲಸಗಾರರನ್ನಾದರೂ ಎಬ್ಬಿಸಿರಬೇಕು.

ಒಬ್ಬ ದೈವಿಕ ಬೋಧಕನು ಯಾವಾಗಲೂ ಕರ್ತನ ಸಾಕ್ಷಿಯನ್ನು ಶುದ್ಧತೆಯಲ್ಲಿ ಹಿಡಿದಿಟ್ಟುಕೊಳ್ಳುವುದರ ಬಗ್ಗೆ ಮುಂದಿನ ಜನಾಂಗದಲ್ಲಿ ಕಾಳಜಿ ವಹಿಸುತ್ತಾನೆ. ಯೇಸು, ತನ್ನಂತೇ ಆತ್ಮ ಮತ್ತು ತನ್ನ ಗುಣಮಟ್ಟವನ್ನು ಮೈಗೂಡಿಸಿಕೊಂಡಂತ 11 ಶಿಷ್ಯಂದಿರನ್ನು, ತನ್ನ ಕಾರ್ಯಗಳನ್ನು ಹೊತ್ತು ಸಾಗಲು ಎಬ್ಬಿಸಿದನು. ಪೌಲನು ತಿಮೊಥೆ ಮತ್ತು ತೀತನನ್ನು ಎಬ್ಬಿಸಿದನು, ಇವರು ಸಹ ಅದೇ ದೀನವುಳ್ಳ ಆತ್ಮ ಮತ್ತು ಸ್ವಾರ್ಥತೆಯಿಲ್ಲದಂತ ಆತ್ಮದಲ್ಲಿ ಜೀವಿಸುತ್ತಿರುವವರಾಗಿದ್ದರು, ಇವರು ತನ್ನ ಕಾರ್ಯಗಳನ್ನು ಹೊತ್ತುಕ್ಕೊಂಡು ಸಾಗುವುದಕ್ಕಾಗಿ ಅವರನ್ನು ಪೌಲನು ಎಬ್ಬಿಸಿದನು (ಪಿಲಿಪ್ಪಿ 2:19-21; 2 ಕೋರಿಂಥ 7:13-15). ಯಾರು ಕೆಲವು ಸಹ ಕೆಲಸಗಾರರನ್ನಾದರೂ ಎಬ್ಬಿಸಿರುತ್ತಾರೋ ಮತ್ತು ಮೇಲೆ ಪಟ್ಟಿ ಮಾಡಿದಂಥ ಗುಣಮಟ್ಟಗಳನ್ನು ಹೊಂದಿಕೊಂಡಿರುತ್ತಾರೋ, ಅಂಥಹ ಬೋಧಕರುಗಳನ್ನು ನಾನು ಹಿಂಬಾಲಿಸಲು ಇಚ್ಛಿಸುತ್ತೇನೆ.

ನೀವು ದೇವರಿಂದ ಬೋಧಕನೆಂದು ಕರೆಯಲ್ಪಟ್ಟಿದ್ದರೆ, ನೀವು ತಪ್ಪದೇ ಪ್ರಾರ್ಥನೆ ಮಾಡಬೇಕು, ಸತತವಾಗಿ ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡಬೇಕು ಮತ್ತು ಮೇಲೆ ಪಟ್ಟಿ ಮಾಡಿದಂತ ಎಲ್ಲಾ ಗುಣಮಟ್ಟಗಳನ್ನು ಹೊಂದಿಕೊಳ್ಳಬೇಕು. ಹೀಗೆ, ಮತ್ತೊಬ್ಬರು ನಿಮ್ಮನ್ನು ಹಿಂಬಾಲಿಸುವಂತೆ ನೀವು ಮಾದರಿಯಾಗಿರಬೇಕು.

ಇಂದಿನ ಕ್ರೈಸ್ತತ್ವದಲ್ಲಿನ ರಾಜಿ ಮತ್ತು ಲೋಕತ್ವದ ಸ್ವಭಾವದಲ್ಲಿ, ಜೀವಿತದ ಗುಣಮಟ್ಟವನ್ನು ಏರಿಸಲು ಮತ್ತು ಸೇವೆಯನ್ನು ಉನ್ನತವಾಗಿ ಸಭೆಯಲ್ಲಿ ಏರಿಸಲು ನಾವು ಕರೆಯಲ್ಪಟ್ಟಿದ್ದೇವೆ. ನಾವು ಇದನ್ನು ಮಾಡುವಂತೆ ದೇವರು ನಮಗೆ ಸಹಾಯಿಸಲಿ. ಆಮೆನ್.