WFTW Body: 

ಯೇಸು ಸ್ವಾಮಿಗೆ ಸಂಬಂಧಿಸಿದಂತೆ, ಸಿಮೆಯೋನನು ಪ್ರವಾದಿಸಿ, ಹೀಗೆ ಹೇಳಿದನು - ”ಆತನು ಒಂದು ಪ್ರಮಾಣವನ್ನು ಸ್ಥಾಪಿಸುವುದರಿಂದಾಗಿ, ಅನೇಕರು ಆತನ ವಿರುದ್ಧವಾಗಿ ತಿರುಗಿ ಬಿದ್ದು, ಆಕ್ರಮಣ ಮಾಡುವರು. ಹೀಗಿರುವಾಗ ಆತನು ಅವರ ಹೃದಯದ ರಹಸ್ಯ ಆಲೋಚನೆಗಳನ್ನು ತೋರ್ಪಡಿಸುವನು” (ಲೂಕ 2:35 ರ ವಿವರಣೆ).

ಯೇಸು, ಉನ್ನತ ಮಟ್ಟವುಳ್ಳಂತ ಜೀವಿತದ ಗುಣಮಟ್ಟವನ್ನು ಬೋಧಿಸಿದ್ದಕ್ಕಾಗಿ, ಜನರು ಆತನನ್ನು ಟೀಕೆ ಮಾಡಿ, ಆತನ ಮೇಲೆ ಆಕ್ರಮಣ ಮಾಡಿದರು. ಜನರು ಒಂದನ್ನು ಗ್ರಹಿಸಿಕೊಳ್ಳಲಿಲ್ಲ. ಅದೇನೆಂದರೆ, ಅವರು ಮಾಡುವಂತ ಕಾರ್ಯ ಮತ್ತು ಮಾತನಾಡುವಂತ ಮಾತಿನಿಂದ ತಮ್ಮ ಸ್ವಂತ ಭ್ರಷ್ಟ ಹೃದಯದ ಒಳಭಾಗವನ್ನು ಯೇಸು ಪ್ರಕಟ ಪಡಿಸುತ್ತಿದ್ದಾರೆ ಎಂಬುದಾಗಿ - ಯೇಸು ಅವರ ಮಧ್ಯದಲ್ಲಿ ಬರದೇ ಇದ್ದಿದ್ದರೆ, ಇದು ಸಾದ್ಯವಾಗುತ್ತಿರಲಿಲ್ಲ.

ಯೇಸು ಕೆಪೆರ್ನೌಮಿಯದಲ್ಲಿನ ಸಭೆಯಲ್ಲಿ ಬೋಧಿಸುವಾಗ, ಒಬ್ಬ ದೆವ್ವ ಹಿಡಿದಂತ ಮನುಷ್ಯನು ಅಳುವುದಕ್ಕೆ ಪ್ರಾರಂಭಿಸಿದನು. ಆ ಕೆಪೆರ್ನೌಮಿಯದ ಸಭೆಯಲ್ಲಿ ಹಿಂದಿನ ಹಲವು ವರ್ಷಗಳಲ್ಲಿ ಫರಿಸಾಯರು ಬೋಧಿಸುವಾಗ ಆ ಮನುಷ್ಯನಲ್ಲಿನ ದೆವ್ವವು ಸಮಾಧಾನ ಮತ್ತು ಮೌನವಾಗಿತ್ತು. ಆದರೆ ಯೇಸು ಬಂದು ಬೋಧಿಸಿದ ಆ ಕ್ಷಣ, ಆ ಮನುಷ್ಯನ ಒಳಭಾಗದ ನಿಜ ಸ್ಥಿತಿಯು ತೋರಲ್ಪಟ್ಟಿತು (ಮಾರ್ಕ 1 : 21-27)

ಯಾವಾಗಲಾದರೂ ಯೇಸು ಜನರ ಮಧ್ಯದಲ್ಲಿ ಬರುವಾಗ, ಜನರ ಒಳಭಾಗದ ಸ್ಥಿತಿಯು ಮತ್ತು ನಡವಳಿಕೆಯು ಹೊರ ತೋರುತ್ತಿತ್ತು.

ಸಭೆಯಲ್ಲಿನ ಎಲ್ಲಾ ಧಾರ್ಮಿಕ ಆಡಳಿತಾಧಿಕಾರಿಗಳು ಜನರ ಕಣ್ಣಿನಲ್ಲಿ ಪವಿತ್ರರಾಗಿ ಕಾಣಿಸಿಕೊಂಡಿದ್ದರು. ಆದರೆ ಯೇಸು ಅವರ ಮಧ್ಯದಲ್ಲಿ ಬಂದಾಗ, ಅವರ ವಂಚನೆಯುಳ್ಳಂತ ಹೊರ ತೋರಿಕೆಯು ಬೆತ್ತಲಾಯಿತು ಮತ್ತು ಅವರು ಕಪಟಿಗಳಾಗಿ ಹಾಗೂ ಮೋಸಗಾರರಾಗಿ ತೋರಲ್ಪಟ್ಟರು.

ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಹೆಂಗಸ್ಸಿಗೆ ಕಲ್ಲಿನಿಂದ ಹೊಡೆದು ಕೊಲ್ಲಬೇಕೆಂದುಕೊಂಡಿದ್ದ ಫರಿಸಾಯರ ಗುಂಪಿನ ಮಧ್ಯದೊಳಗೆ ಯೇಸು ಒಂದು ಸಲ ಬಂದಾಗ, ಆ ಫರಿಸಾಯರ ಹೃದಯದ ಒಳಭಾಗದ ನಡವಳಿಕೆಯು ತಕ್ಷಣವೇ ತೋರಿಬಂತು(ಯೋಹಾನ 8:3-11). ಅವರು ಯೇಸುವನ್ನು ದೂರಲು ಮತ್ತು ಆತನ ಮೇಲೆ ತಪ್ಪು ಹೊರಿಸಲು ಯಾವುದಾದರೂ ಕಾರಣವನ್ನು ಹುಡುಕುತ್ತಿದ್ದರು (ಯೋಹಾನ 8:6). ಆದರೆ ಯೇಸು ಅವರಿಗೆ ಹೇಳಿದ್ದೇನೆಂದರೆ, ಯಾರು ಪಾಪವನ್ನೇ ಮಾಡಿಲ್ಲವೋ ಅವರು ಮುಂದೆ ಬಂದು ಕಲ್ಲು ಹೊಡೆಯಲಿ. ತಕ್ಷಣವೇ ಅವರ ಹೃದಯದ ಒಳಭಾಗವು ಹೊರ ತೋರಲ್ಪಟ್ಟಿತು ಮತ್ತು ಅವರು ಒಬ್ಬಬ್ಬರೇ ಹಿಂದೆ ಸರಿದು, ನಡೆದು ಹೋದರು, ”ಹಿರಿಯರಿಂದ ಪ್ರಾರಂಭಿಸಿ ಎಲ್ಲರೂ”!! ಹಿರಿಯ ಫರಿಸಾಯರು ಯಾವಾಗಲೂ ದೊಡ್ಡ ಕಪಟಿಗಳಾಗಿದ್ದಾರೆ!!

ಎಷ್ಟು ಬೇಗ ಯೇಸು ಅವರ ಮಧ್ಯದಲ್ಲಿ ಬಂದರೋ, ಆಗ ದೇವರು ಒಬ್ಬ ಹೆಂಗಸ್ಸಿನ ಪಾಪವನ್ನು ಉಪಯೋಗಿಸಿಕೊಂಡು, ಅವಳನ್ನು ದೂರಿದಂತವರ ಕೆಟ್ಟತನವನ್ನು ಹೊರ ತೋರಿಸಿದರು.

ಇವತ್ತು ನಮ್ಮ ಹೃದಯಕ್ಕೆ ಯೇಸು ಮಾತನಾಡಿದಂತ ಮಾತನ್ನು ನಾವು ಲಕ್ಷ್ಯಕ್ಕೆ ತೆಗೆದುಕೊಳ್ಳದಿದ್ದರೆ, ಅಂದರೆ ”ಇನ್ನೊಬ್ಬರನ್ನು ತೀರ್ಪು ಮಾಡಬೇಡಿ. ಯಾರು ಪಾಪರಹಿತವಾಗಿದ್ದರೋ ಅವರೇ ಬಂದು ಮೊದಲು ಕಲ್ಲು ಹೊಡೆಯಲಿ” ಎಂಬ ಮಾತನ್ನು ನಾವು ಲಕ್ಷ್ಯಕ್ಕೆ ತೆಗೆದುಕೊಳ್ಳದಿದ್ದರೆ, ಕೊನೆಯಲ್ಲಿ ನಾವೂ ಫರಿಸಾಯರ ಗುಂಪಿನೊಟ್ಟಿಗೆ ಕೊನೆಗಾಣುತ್ತೇವೆ ಮತ್ತು ನಿತ್ಯತ್ವದ ಯೇಸುವಿನ ಸಮ್ಮುಖದಿಂದ ನಾವು ತೈಜಿಸಲ್ಪಡುತ್ತೇವೆ. ಎಲ್ಲಾ ನ್ಯಾಯ ತೀರ್ಪನ್ನು ದೇವರಿಗೆ ಬಿಡುವುದು ಯಾವಾಗಲೂ ಉತ್ತಮ ಸಂಗತಿಯಾಗಿದೆ. ದೇವರೊಬ್ಬನೇ ಸರಿಯಾಗಿ, ನ್ಯಾಯವಾಗಿ ತೀರ್ಪು ಮಾಡುವಾತನಾಗಿದ್ದಾನೆ.

ಪಿಲಾತನು ಯಾರಿಗೂ ಭಯ ಪಡದಂತ ಎಲ್ಲಾ ಬಲವನ್ನು ಹೊಂದಿದಂತ ಆಡಳಿತಗಾರನಂತೆ ಕಾಣುತ್ತಿದ್ದನು ಮತ್ತು ಯಾರ ಅಭಿಪ್ರಾಯಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯೇಸು ಆತನ ಎದುರಿಗೆ ನಿಂತಾಗ, ಆತನ ಬಳಿ ಮಾತನಾಡಿದಾಗ, ಪಿಲಾತನು ತಾನು ನಿಜವಾಗಿ ಏನಾಗಿದ್ದನೋ, ಅದು ಹೊರ ತೋರಲ್ಪಟ್ಟಿತು. ಯೇಸು ಮುಗ್ಧನು ಎಂದು ಆತನು ಅರಿತಿದ್ದರೂ ಸಹ, ಆತನನ್ನು ಶಿಲುಬೆಗೇರಿಸಲು ಜನರಿಗೆ ಒಪ್ಪಿಸಿಕೊಟ್ಟನು. ಇದರಿಂದಾಗಿ ತಾನು ಜನರ ಅಭಿಪ್ರಾಯಕ್ಕೆ ಭಯ ಪಡುವುದಿಲ್ಲ ಎಂಬ ಮನಸ್ಥಿತಿಯು ಸುಳ್ಳು ಎಂಬುದನ್ನು ಆತನು ಮುಚ್ಚಿ ಹಾಕಿದನು.

ಈ ಎಲ್ಲಾ ಪ್ರಕರಣಗಳಲ್ಲಿ ನಾವು ನೋಡಬಹುದಾದದ್ದೇನೆಂದರೆ, ಯೇಸುವಿನ ಬಗೆಗಿರುವ ಜನರ ವಿರೋಧಗಳೇ, ಜನರಲ್ಲಿನ ಸ್ವಂತ ಒಳಭಾಗದ ಸ್ಥಿತಿಯನ್ನು ಪ್ರಕಟಗೊಳಿಸಿದವು - ಇದರಿಂದ ಮೇಲೆ ತಿಳಿಸಿದ ಸಿಮೆಯೋನನ ಪ್ರವಾದನೆಯು ಪೂರೈಸಲ್ಪಟ್ಟಿತು.

ಮೊದಲ ಕ್ರಿಸ್ತನ ದೇಹವು (ಯೇಸುವು ತಾನೇ) ಪೂರೈಸಲ್ಪಟ್ಟ ಮೊದಲ ಸೇವೆಯನ್ನೇ, ಇಂದು ಕ್ರಿಸ್ತನ ದೇಹದ ಸದಸ್ಯರಾದ ನಾವು ಪೂರೈಸಬೇಕು.

ಇಂದು ಪ್ರಾಪಂಚಿಕ ಕ್ರೈಸ್ತರು, ಯೇಸು ಬೋಧಿಸಿದ ಉನ್ನತ ಮಟ್ಟವುಳ್ಳಂತ ಜೀವಿತದ ಬೋಧನೆಯನ್ನೇ ನಾವು ಸಾರುವುದಕ್ಕಾಗಿ ನಮ್ಮನ್ನು ಟೀಕಿಸುತ್ತಾರೆ. ಆ ಟೀಕೆಗಳು ಒಂದನ್ನು ಗ್ರಹಿಸಿಕೊಳ್ಳುವುದಿಲ್ಲ, ಅದೇನೆಂದರೆ, ಅವರು ತಮ್ಮ ಸ್ವಂತ ಹೃದಯದ ಪ್ರಾಪಂಚಿಕತೆ ನಿಜವಾಗಿಯೂ ಪ್ರಕಟಗೊಳ್ಳುತ್ತಿದೆ ಎಂಬುದಾಗಿ. ನಾವು ಹೊಸ ಒಡಂಬಡಿಕೆಯ ಗುಣಮಟ್ಟವನ್ನು ಅವರ ಮಧ್ಯ ಬಂದು ಸಾರದೇ ಇದ್ದಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ.

ಒಂದು ಉದಾಹರಣೆಯನ್ನು ಕೊಡಲು ಇಚ್ಛಿಸುತ್ತೆನೆ - ನಾವು ಸಾರುವುದೇನೆಂದರೆ, ”ಯೇಸು ಮತ್ತು ಅಪೋಸ್ತಲರು ಹಣದ ವಿಷಯಗಳಲ್ಲಿ ನಮ್ಮ ಮಾದರಿಯಾಗಿದ್ದಾರೆ. ಅವರ ಬಗ್ಗೆ ಪರಲೋಕದ ಘನತೆ ಇದೆ ಮತ್ತು ಅವರು ತಮ್ಮ ಸ್ವಂತ ಅಗತ್ಯತೆಗಾಗಲಿ ಅಥವಾ ಅವರ ಸೇವೆಗಾಗಲಿ ಯಾರ ಬಳಿಯೂ ಹಣವನ್ನು ಒಂದು ಬಾರಿಯೂ ಕೇಳಲಿಲ್ಲ. ಅವರು ವಿಶ್ವಾಸಿಗಳ ಬಳಿ ಕೇಳಿದ್ದೇನೆಂದರೆ, ಬಡವರಿಗೆ ಸಹಾಯಿಸುವಂತೆ ಕೇಳಿಕೊಂಡರು”.

ನಾವು ಸಾರುವಂತ ದೇವರ ವಾಕ್ಯದ ಗುಣಮಟ್ಟವನ್ನು ಪ್ರಾಪಂಚಿಕ ಬೋಧಕರುಗಳು ಮತ್ತು ಪಾಸ್ಟರ್ ಗಳು ತಕ್ಷಣವೇ ಪ್ರಶ್ನಿಸುತ್ತಾರೆ ಹಾಗೂ ಹಳೆ ಒಡಂಬಡಿಕೆಯ ಕೆಳಗಿರುವ ಲೇವಿಯರ ಉದಾಹರಣೆಯನ್ನು ಉಲ್ಲೇಖಿಸುತ್ತಾರೆ. ಹೀಗಾಗಿ ”ಅವರ ಹೃದಯದಲ್ಲಿನ ರಹಸ್ಯ ಆಲೋಚನೆಗಳು ಬಯಲಿಗೆ ಬರುತ್ತವೆ” - ಅದು ಈ ರೀತಿಯಾಗಿ : (1) ಹಣದ ವಿಷಯಗಳಲ್ಲಿ ಈ ಹೊಸ ಒಡಂಬಡಿಕೆಯ ಗುಣಮಟ್ಟವನ್ನು ಅವರು ಅಲಕ್ಷ್ಯ ಮಾಡುತ್ತಾರೆ; (2 )ದೇವರು ಅವರಿಗೆ ಅವಶ್ಯವಿರುವಂತ ಎಲ್ಲವನ್ನೂ ಒದಗಿಸಲು ಸಾಮಾರ್ಥ್ಯವುಳ್ಳವನಾಗಿದ್ದಾನೆ ಎಂಬುವುದರಲ್ಲಿ ಅವರು ಅಪನಂಬಿಕೆಯುಳ್ಳವರಾಗಿದ್ದಾರೆ; ಮತ್ತು (3) ಹಳೆ ಒಡಂಬಡಿಕೆಯು ಮುಗಿದ ಅಧ್ಯಾಯವಾಗಿದೆ ಎಂಬ ನಿಜಾಂಶವನ್ನು ಅವರು ತಿರಸ್ಕಾರ ಮಾಡುತ್ತಾರೆ ಮತ್ತು ಯೇಸು ಹಾಗೂ ಆತನ ಅಪೋಸ್ತಲರು ಪ್ರಸ್ತುತ ನಮ್ಮ ಮಾದರಿಗಳಾಗಿದ್ದಾರೆ, ಲೇವಿಯರಲ್ಲ ಎಂಬುದನ್ನು ಸಹ ತಿರಸ್ಕಾರ ಮಾಡುತ್ತಾರೆ (ಇಬ್ರಿಯ : 8:7-13; 12:1,2; 1 ಕೊರಿಂಥ 11:1; ಪಿಲಿಪ್ಪಿ 3:17).

ಮತ್ತು ಇದು ಕೇವಲ ಒಂದು ಉದಾಹರಣೆಯಾಗಿದೆ. ಈ ರೀತಿಯ ಇನ್ನೂ ಅನೇಕ ಉದಾಹರಣೆಗಳಿವೆ.

ನಮ್ಮ ದಿನದಲ್ಲಿನ ಬೋಧಕರುಗಳು ಮತ್ತು ಧಾರ್ಮಿಕ ನಾಯಕರುಗಳಿಂದ ನಾವು ವಿರೋಧಿಸಲ್ಪಟ್ಟರೆ, ನಾವು ಆಶ್ಚರ್ಯಪಡಬೇಕಾಗಿಲ್ಲ (ಯೇಸು ತಾನೇ ವಿರೋಧಿಸಲ್ಪಟ್ಟ ಹಾಗೇ). 20 ಶತಮಾನಗಳ ಹಿಂದಿನ ಮೊದಲ ಕ್ರಿಸ್ತನ (ಯೇಸು) ದೇಹದ ಸೇವೆಯು ಹಿಂದೆ ಪೂರೈಸಲ್ಪಟ್ಟ ಹಾಗೇ, ಅದೇ ಸೇವೆಯನ್ನು ನಾವೂ ಹೊತ್ತು ಸಾಗಬೇಕು ಮತ್ತು ಅದರ ಫಲಿತಾಂಶ ಕೂಡ ಅದೇ ಆಗಿರುತ್ತದೆ: ನಮ್ಮ ಸಂದೇಶಕ್ಕೆ ಜನರ ವಿರೋಧವನ್ನು ದೇವರು ಉಪಯೋಗಿಸುತ್ತಾರೆ, ಕಾರಣ ಅವರ ಹೃದಯದಲ್ಲಿನ ಪ್ರಾಪಂಚಿಕತೆಯು ಬಯಲಿಗೆ ಬರುವ ಸಲುವಾಗಿ.

ಕೆಲವೊಮ್ಮೆ ದೇವರು ತನ್ನ ಜನರ ಸಂಕಟಗಳನ್ನು ಉಪಯೋಗಿಸುತ್ತಾರೆ, ಏಕೆಂದರೆ ಬೇರೆಯವರ ಹೃದಯದ ಒಳಗಿನ ಸ್ಥಿತಿಯನ್ನು ಬಯಲು ಮಾಡಲು.

ಯೇಸು ಸ್ವಾಮಿ ಸಂಕಟ ಪಡುವಾಗ, ಶಿಲುಬೆಯಲ್ಲಿ ನೇತುಹಾಕಲ್ಪಟ್ಟಾಗ, ಅನೇಕ ಜನರ ಹೃದಯದ ಆಲೋಚನೆಗಳು ಬಯಲುಗೊಂಡವು. ದಾರಿಹೋಕರರು ಆತನ ಮೇಲೆ ಉಗುಳಿದರು - ಮತ್ತು ಅವರ ಹೃದಯದಲ್ಲಿನ ಭ್ರಷ್ಟತ್ವವು ಪ್ರಕಟಗೊಂಡಿತು. ಮತ್ತೊಂದು ಕಡೆ, ಒಬ್ಬ ರೋಮನ್ ಸೈನಿಕನ ಹೃದಯದ ಒಳಗಿನ ಯಥಾರ್ಥತೆಯು ಸಹ ಪ್ರಕಟಗೊಂಡಿತು, ಅದು, ಯೇಸು ದೇವರ ಮಗನು ಎಂದು ಆ ರೋಮನ್ ಸೈನಿಕನು ಘೋಷಿಸಿದಾಗ. ಶಿಲುಬೆಗೇರಿಸಲ್ಪಟ್ಟ ಒಬ್ಬ ಕಳ್ಳನ ಹೃದಯದ ಒಳಭಾಗದಲ್ಲಿನ ಭ್ರಷ್ಟತ್ವವು ಪ್ರಕಟಗೊಂಡಿತು ಮತ್ತು ಆತನು ನರಕಕ್ಕೆ ಹೋದನು; ಇನ್ನೊಂದು ಕಡೆ ಶಿಲುಬೆಗೇರಿಸಲ್ಪಟ್ಟ ಮತ್ತೊಬ್ಬ ಕಳ್ಳನ ಹೃದಯದ ಒಳಭಾಗದಲ್ಲಿ ನಿಜವಾದ ಮಾನಸಾಂತರವು ಪ್ರಕಟಗೊಂಡಿತು ಮತ್ತು ಆತನು ಪರಲೋಕಕ್ಕೆ ಪ್ರವೇಶಿಸಿದನು.

ಫರಿಸಾಯತ್ವಕ್ಕೆ ದೊಡ್ಡ ಔಷಧ ಕರುಣೆಯಾಗಿದೆ. ”ದೇವರು ನಿಮಗೆ ಕರುಣೆಯನ್ನು ತೋರಿಸಿದ ಪ್ರಕಾರ, ನೀವು ಮತ್ತೊಬ್ಬರಿಗೆ ಕರುಣೆಯನ್ನು ತೋರಿಸಿರಿ”

ಮಾರ್ಕ 3:2 ರಲ್ಲಿ ನಾವು ಓದುವುದೇನೆಂದರೆ, ಒಂದು ದಿನ ಯೇಸು ಸಭೆಗೆ ಬಂದಾಗ, ಆತನ ಶತ್ರುಗಳು ತುಂಬಾ ಕೋಪಗೊಂಡಿದ್ದರು ಹಾಗೂ ಆತನನ್ನು ಟೀಕಿಸಲು, ಆತನ ಮೇಲೆ ತಪ್ಪು ಹೊರಿಸಲು ಏನಾದರೊಂದನ್ನು ಕಂಡುಹಿಡಿಯಲು ”ಆತನನ್ನು ಹತ್ತಿರದಿಂದ ನೋಡಿದರು”. ಆಧುನಿಕ ದಿನದ ಫರಿಸಾಯರು ಸಹ ಒಬ್ಬ ಪ್ರಾಮಾಣಿಕ ವಿಶ್ವಾಸಿಯನ್ನು ತುಂಬಾ ಹತ್ತಿರದಿಂದ ನೋಡುತ್ತಿರುತ್ತಾರೆ, ಆತನ ಮೇಲೆ ಏನಾದರೊಂದು ತಪ್ಪುಹೊರಿಸುವ ಸಲುವಾಗಿ

ಯಾರಾದರೊಟ್ಟಿಗೆ ನೀವು ಹೆಚ್ಚು ಕೋಪವುಳ್ಳವರಾಗಿರಬಹುದು ಅಥವಾ ಆತನ ಮೇಲೆ ಹೊಟ್ಟೆ ಕಿಚ್ಚುಳ್ಳವರಾಗಿರಬಹುದು, ಆತನಲ್ಲಿ ಏನಾದರೂ ತಪ್ಪನ್ನು ಹುಡುಕುವ ಸಲುವಾಗಿ, ಆತನ ಜೀವಿತವನ್ನು ತುಂಬಾ ಹತ್ತಿರದಿಂದ ನೀವು ನೋಡುತ್ತಿರಬಹುದು, ವಾಸ್ತವವಾಗಿ ಅಲ್ಪ ತಪ್ಪು ಆತನ ಜೀವಿತದಲ್ಲಿ ಅಥವಾ ಆತನ ಮನೆಯಲ್ಲಿ ಅಥವಾ ಆತನ ಕುಟುಂಬದಲ್ಲಿ (ಎಲ್ಲಾ ಜನರಲ್ಲಿರುವಂತೆ) ಇರಲೂ ಬಹುದು. ”ಆದರೆ ಕರ್ತನ ಸೇವಕರ ಜೀವಿತದಲ್ಲಿನ ಆ ಅಲ್ಪ ತಪ್ಪುಗಳನ್ನು ಸಹ ದೇವರು ಉಪಯೋಗಿಸುತ್ತಾರೆ, ಕಾರಣ ಇವರನ್ನು ತೀರ್ಪು ಮಾಡುವಂತವರ (ನಿಮ್ಮ) ಕೆಟ್ಟತನವನ್ನು ಬಯಲು ಮಾಡುವ ಸಲುವಾಗಿ''.

ಕರ್ತನು ಹೀಗೆ ಹೇಳಿದ್ದಾನೆ, ”ನನ್ನ ಜನರಲ್ಲಿ ದುಷ್ಟರು ಕಂಡು ಬಂದಿದ್ದಾರೆ; ಬೇಡರು ಹೊಂಚುವ ಹಾಗೆ ಹೊಂಚು ಹಾಕುತ್ತಾರೆ; ಬೋನೊಡ್ಡಿ ಮನುಷ್ಯರನ್ನು ಹಿಡಿಯುತ್ತಾರೆ. ನಾನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ? ಇದು ಯೆಹೋವನಾದ ನನ್ನ ಮಾತು” (ಯೆರೆಮೀಯ 5:26, 29).

ಒಂದೇ ಸಮಯದಲ್ಲಿ, ಫರಿಸಾಯರು, ”ಆತನ ಮಾತಿನಲ್ಲಿ ಏನಾದರೂ ಕಂಡುಹಿಡಿದು, ಆತನ ಮೇಲೆ ತಪ್ಪು ಹೊರಿಸಬೇಕೆಂದು, ಹೊಂಚಿನೋಡುತ್ತಿದ್ದರು'' (ಲೂಕ 11:24 - ಕೆ.ಜೆ.ವಿ). ಮತ್ತೊಂದು ಸಂದರ್ಭದಲ್ಲಿ, ”ಅವರು ಆತನನ್ನು ಆತನ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು” (ಮಾರ್ಕ 12:13 - ಕೆ.ಜೆ.ವಿ).

ಈ ಫರಿಸಾಯರ ಸಂತತಿಯು ”ಮತ್ತೊಬ್ಬರನ್ನು ತುಂಬಾ ಹತ್ತಿರದಿಂದ ನೋಡುತ್ತಿರುತ್ತಾರೆ” ಮತ್ತು ಪ್ರಶ್ನೆಗಳಿಂದ ದೇವರ ಸೇವಕರನ್ನು ಸುರಿಮಳೆಗೈಯುತ್ತಾರೆ (ಅವರನ್ನು ಹಿಡಿದು ಹಾಕಲು) ಇಂದಿನ ಕ್ರೈಸ್ತತ್ವದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾಗಿ ನಾವು ”ಸರ್ಪದಂತೆ ಜಾಣರಾಗಿರಬೇಕು”, ಅವರ ಮಧ್ಯದಲ್ಲಿ ಹಾದು ಹೋಗುವಾಗ ”ತೋಳಗಳ ಮಧ್ಯದಲ್ಲಿ ಕುರಿಗಳಂತೆ” ನಾವು ಇರುತ್ತೇವೆ (ಮತ್ತಾಯ 10:16).

ಯಾರಾದರೂ ಮೊದಲ ದರ್ಜೆಯ ಫರಿಸಾಯನಾಗಲು ತಕ್ಷಣದ ಮಾರ್ಗವೇನೆಂದರೆ, ”ಮತ್ತೊಬ್ಬರ ಜೀವಿತವನ್ನು ತುಂಬಾ ಹತ್ತಿರದಿಂದ ನೋಡುವುದಾಗಿದೆ”. ಫರಿಸಾಯರಾಗುವುದರಿಂದ ನೀವು ತಪ್ಪಿಸಿಕೊಳ್ಳಬೇಕಾ, ಒಳ್ಳೆ ಉದ್ದೇಶದಿಂದ ಮಾಡದೇ ಇರುವಂತ ಹವ್ಯಾಸವನ್ನು ಒಂದೇ ಸಲಕ್ಕೆ ಬಿಟ್ಟುಬಿಡಿರಿ, ಜನರಿಗೆ ಸಹಾಯಿಸಲು ಮುಂದಾಗಿರಿ, ಆದರೆ ಕೇವಲ ಅವರಲ್ಲಿ ತಪ್ಪನ್ನು ಕಂಡು ಹಿಡಿಯುವಂತ ಹವ್ಯಾಸವನ್ನು ಮಾತ್ರ ಬಿಟ್ಟುಬಿಡಿರಿ

ಫರಿಸಾಯತ್ವಕ್ಕೆ ದೊಡ್ಡ ಔಷಧ ಕರುಣೆಯಾಗಿದೆ. ”ದೇವರು ನಿಮಗೆ ಕರುಣೆಯನ್ನು ತೋರಿಸಿದ ಪ್ರಕಾರ, ನೀವು ಮತ್ತೊಬ್ಬರಿಗೆ ಕರುಣೆಯನ್ನು ತೋರಿಸಿರಿ”

ಯೇಸು ಇಹಲೋಕದಲ್ಲಿ ನಡೆಯಲ್ಪಟ್ಟಾಗ, ಆತನ ಜೀವಿತದ ಮುಖಾಂತರ ದೇವರ ಪ್ರೀತಿ ಮತ್ತು ಕರುಣೆ ಹಾಗು ಒಳ್ಳೇತನವು ಹೊರಹೊಮ್ಮಿತು.

ಇಂದು, ನಾವು ಕೂಡ ಪವಿತ್ರಾತ್ಮನಿಂದ ತುಂಬಿಸಲ್ಪಡುತ್ತೇವೆ (ಕ್ರಿಸ್ತನ ಆತ್ಮ), ಇದರಿಂದ, ಅದೇ ಪ್ರೀತಿ, ಅದೇ ಕರುಣೆ ಮತ್ತು ಅದೇ ಒಳ್ಳೆತನವು ನಮ್ಮ ಜೀವಿತದ ಮುಖಾಂತರ ಹೊರಹೊಮ್ಮುತ್ತದೆ (ರೋಮ 5:5 ರಲ್ಲಿ ವಾಗ್ದಾನ ಮಾಡಲ್ಪಟ್ಟ ಮೇರೆಗೆ).

ಅದರಂತೆಯೇ ಆಗಲಿ. ಆಮೆನ್.