ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮಹಿಳೆಯರಿಗೆ Struggling
WFTW Body: 

ರೂತಳ ಮದುವೆಯ ಕಥೆಯು ಒಂದು ಆಸಕ್ತಿಕರವಾದ ಕಥೆಯಾಗಿದೆ. ಆಗ ಇಸ್ರಾಯೇಲಿನಲ್ಲಿ ಬರಗಾಲವಿತ್ತು. ಹಾಗಾಗಿ ಎಲಿಮಲೇಕನು ಮತ್ತು ಆತನ ಹೆಂಡತಿಯಾದ ನೊವೊಮಿಯು, ತಮ್ಮ ಇಬ್ಬರು ಮಕ್ಕಳೊಂದಿಗೆ ಮೋವಾಬ್ ದೇಶಕ್ಕೆ ತೆರಳಿದರು. ಈ ಇಬ್ಬರು ಮಕ್ಕಳು ಅಲ್ಲಿ ಬೆಳೆದು, ದೇವರ ನಿಯಮವನ್ನು ಉಲ್ಲಂಘಿಸಿ, ಮೋವಾಬ್ ಸ್ತ್ರೀಯನ್ನು ಮದುವೆಯಾದರು. ನಂತರ ಎಲಿಮಲೇಕನು ಸತ್ತನು ಮತ್ತು ಇಬ್ಬರು ಮಕ್ಕಳು ಸಹ ಸತ್ತರು. ನೊವೊಮಿಯು ದಯೆಯುಳ್ಳಂತ ಹೆಂಗಸಾಗಿದ್ದಳು. ನಂತರ ಆಕೆಯ ಇಬ್ಬರು ಸೊಸೆಯಂದಿರಾದ ರೂತಳು ಮತ್ತು ಒರ್ಫಾಳಿಗೆ, ನಿಮ್ಮ ಸ್ವಂತ ದೇಶಕ್ಕೆ ಹಿಂತಿರುಗಿ ಹೋಗಿ, ಹೊಸ ಗಂಡಂದಿರನ್ನು ಕಂಡುಕೊಳ್ಳುವಂತೆ ಹೇಳಿದಳು (ರೂತಳು ೧: ೮). ರೂತಳೂ ಮತ್ತು ಒರ್ಫಾಳೂ ಈ ಮಾತನ್ನು ಕೇಳಿದಾಗ ದು:ಖಭರಿತರಾದರು (ರೂತಳು 1:14). ಒರ್ಫಾಳು ತನ್ನ ಅತ್ತೆಗೆ ಮುತ್ತಿಟ್ಟು ಹೀಗೆ ಹೇಳಿದಳು, ”ಹೋಗಿಬರುತ್ತೇನೆ, ಅಮ್ಮ. ನಾನು ನನ್ನ ಮನೆಗೆ ಹಿಂದಿರುಗಿ ಹೋಗಿ, ಮತ್ತೊಬ್ಬ ಗಂಡನನ್ನು ಕಂಡುಕೊಳ್ಳಬೇಕು. ನಾನು ನನ್ನ ಸ್ವಂತ ಜೀವಿತವನ್ನು ನೋಡಿಕೊಳ್ಳಬೇಕು”. ”ಆದರೆ ರೂತಳು ನೊವೊಮಿಯನ್ನು ಗಟ್ಟಿಯಾಗಿ ಹಚ್ಚಿಕೊಂಡಿದ್ದಳು. ಆಕೆಯು ನೊವೊಮಿಯಿಂದ ನಿಜವಾದ ದೇವರ ಬಗ್ಗೆ ಏನೋ ಒಂದನ್ನು ಕಲಿತುಕೊಂಡಿದ್ದಳು ಮತ್ತು ಆಕೆಯು ಗಂಡನನ್ನು ಬಯಸುವುದಕ್ಕಿಂತ ಹೆಚ್ಚಾಗಿ ನಿಜವಾದ ದೇವರನ್ನು ಆರಾಧಿಸಲು, ಸೇವೆ ಮಾಡಲು ಇಚ್ಚಿಸಿದ್ದಳು. ಒರ್ಫಾಳಿಗೆ ಗಂಡ ಮಾತ್ರ ಸಾಕಿತ್ತು. ಅಲ್ಲಿ ಕವಲೊಡೆದ (ಮುಳ್ಳು) ದಾರಿ ಇದ್ದದ್ದರಿಂದ ಒರ್ಫಾಳು ತಪ್ಪು ದಾರಿ ಹಿಡಿದಳು. ರೂತಳು ಸರಿಯದ ತಿರುಗುವಿಕೆಯನ್ನು ತೆಗೆದುಕೊಂಡಳು, ಅದು ನಿತ್ಯತ್ವಕ್ಕಾಗಿ ಎಲ್ಲಾ ವತ್ಯಾಸವನ್ನು ಮಾಡಿತು. ಒರ್ಫಾಳ ಬಗ್ಗೆ ಮತ್ತೊಮ್ಮೆ ನಾವು ಸತ್ಯವೇದದಲ್ಲಿ ಕೇಳುವುದಿಲ್ಲ. ಈ ದಿನ ಆಕೆ ಎಲ್ಲಿಯೇ ಇದ್ದರೂ, ನಿಸ್ಸಂಶಯವಾಗಿ ಆಕೆಯು ತನ್ನ ಆಯ್ಕೆಯಿಂದಾಗಿ ಪಶ್ಚತಾಪಪಟ್ಟಿರುತ್ತಾಳೆ.

ನೊವೊಮಿಯು ಬೋವಜನೆಂಬ ಒಬ್ಬ ಧನವಂತನಾದ ಹತ್ತಿರ ಸಂಬಂಧಿಯನ್ನು ಹೊಂದಿದ್ದಳು (ರೂತಳು 2:1). ಇಸ್ರಾಯೇಲ್ ನಲ್ಲಿ ಒಂದು ನಿಯಮವಿತ್ತು, ಅದೇನೆಂದರೆ, ಒಬ್ಬ ವಿವಾಹಿತನು ಸತ್ತರೆ, ಆತನ ಹತ್ತಿರದ ಸಂಬಂಧಿಯು ಆ ವಿಧವೆಯನ್ನು ಮದುವೆಯಾಗಬೇಕು ಮತ್ತು ಸತ್ತಂತ ಮನುಷ್ಯನ ಹೆಸರಿನಲ್ಲಿ ಮಕ್ಕಳನು ಎಬ್ಬಿಸಬೇಕು ಎಂಬುದಾಗಿ (ಧರ್ಮೋಪದೇಶಕಾಂಡ 25:5-9). ಹಾಗಾಗಿ ನೊವೊಮಿಯು ಹೀಗೆ ಯೋಚಿಸಿದಳು, ”ಒಳ್ಳೇದು, ಬೋವಜನು ನನ್ನ ಹತ್ತಿರದ ಸಂಬಂಧಿಯು ಮತ್ತು ಆತನು ಇನ್ನೂ ಒಬ್ಬಂಟಿಗನಾಗಿದ್ದಾನೆ. ಹಾಗಿದ್ದಲ್ಲಿ ಆತನು ರೂತಳನ್ನು ಮದುವೆಯಾಗಬಹುದು”. ಆದರೆ ರೂತಳಿಗೆ ಆ ನಿಯಮದ ಬಗ್ಗೆ ಗೊತ್ತಿರಲಿಲ್ಲ (ಮೋವಾಬ್ ದೇಶದವಳಾಗಿ) ಮತ್ತು ನೊವೊಮಿ ಆಕೆಗೆ ಎಂದಿಗೂ ಈ ನಿಯಮವನ್ನು ಹೇಳಿರಲಿಲ್ಲ, ಏಕೆಂದರೆ ಈ ರೀತಿಯಾಗಿ ಆಕೆಯ ನಿರೀಕ್ಷೆಯು ಗರಿಗೆದರದಿರಲೆಂದು. ಹೇಗಿದ್ದರೂ ರೂತಳು, ಮತ್ತೊಮ್ಮೆ ಮದುವೆ ಆಗುವುದರಲ್ಲಿ ಆಸಕ್ತಿಯನ್ನು ಹೊಂದಿರಲಿಲ್ಲ. ಆಕೆಯು ಇಸ್ರಾಯೇಲಿಗೆ ಗಂಡನನ್ನು ಹುಡುಕಿಕೊಂಡು ಬಂದಿರಲಿಲ್ಲ. ಆಕೆಯು ನಿಜವಾದ ದೇವರನ್ನು ಹುಡುಕಿಕೊಂಡು ಬಂದಿದ್ದಳು. ಒರ್ಪಾಳು ಮೋವಾಬ್ ಗೆ ಗಂಡನನ್ನು ನೋಡಲು ಹೋದಳು. ಆದರೆ ರೂತಳು ಮೊದಲು ದೇವರನ್ನು ಹುಡುಕಿದ್ದಕ್ಕಾಗಿ, ಆಕೆ ದೇವರನ್ನು ಮಾತ್ರ ಕಂಡಕೊಳ್ಳಲಿಲ್ಲ, ಆದರೆ ಒಳ್ಳೆಯ ಗಂಡನನ್ನು ಸಹ ಪಡೆದುಕೊಂಡಳು ಮತ್ತು ಮುಂದಿನ ಭವಿಷ್ಯಕ್ಕಾಗಿ ಒಳ್ಳೆಯ ಆಸ್ತಿ ಸಹ ದೊರಕಿತು. ''ಯಾರು ದೇವರನ್ನು ಸನ್ಮಾನಿಸುತ್ತಾರೋ, ಅವರನ್ನು ದೇವರು ನಿಶ್ಚಯವಾಗಿ ಸನ್ಮಾನಿಸುತ್ತಾರೆ". ಯಾರು ಮೊದಲು ದೇವರ ರಾಜ್ಯವನ್ನು ಹುಡುಕುತ್ತಾರೋ, ಈ ಇಹಲೋಕದ ಜೀವಿತಕ್ಕಾಗಿ ಬೇಕಾಗಿರುವ ಅವಶ್ಯಕತೆಗಳನ್ನು ದೇವರು ನಿಶ್ಚಯವಾಗಿ ಪೂರೈಸುತ್ತಾರೆ, ಅದಕ್ಕಾಗಿ ಹುಡುಕದೇ ಇದ್ದರೂ, ಅವಶ್ಯವಿರುವಂತದ್ದು ಸಿಗುತ್ತದೆ. ಅಂಥಹ ಸಂಗತಿಗಳು ಅವರ ತೊಡೆ ಮೇಲೆ ಬಂದು ಬೀಳುತ್ತವೆ.

ನೊವೊಮಿ ಮತ್ತು ರೂತಳು, ಇಬ್ಬರು ಬಡವರಾಗಿದ್ದರೂ ಸಹ ರೂತಳು ಕಷ್ಟಪಟ್ಟು ಕೆಲಸ ಮಾಡುವಂತ ಹುಡುಗಿಯಾಗಿದ್ದಳು, ತನ್ನ ದೈನಂದಿನ ಅಗತ್ಯತೆಗಳಿಗಾಗಿ (ಊಟ, ಬಟ್ಟೆ) ಕೆಳಮಟ್ಟದ ಕೆಲಸಗಳನ್ನು ಮಾಡಲು ಸಹ ನಾಚಿಕೆ ಪಡುತ್ತಿರಲಿಲ್ಲ. ಒಂದು ದಿನ ರೂತಳು ತನ್ನ ಅತ್ತೆಗೆ, ಧನವಂತರು ಪೈರನ್ನು (ದವಸ, ಧಾನ್ಯ) ಬೆಳೆಯುವಂತ ಸ್ಥಳದಲ್ಲಿ ಬಿಟ್ಟು ಉಳಿದಂತ ಪೈರನ್ನು ಹೋಗಿ ತರುತ್ತೇನೆ ಎಂದು ಹೇಳಿದಳು. ದೇವರು ಇಸ್ರಾಯೇಲಿನಲ್ಲಿ ಒಂದು ನಿಯಮವನ್ನು ಮಾಡಿದ್ದರು, ಅದೇನೆಂದರೆ ”ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಕೊಯ್ಯಬಾರದು; ಮತ್ತು ಕೊಯ್ದಾಗ ಹಕ್ಕಲಾಯಬಾರದು. ದ್ರಾಕ್ಷೆಯ ತೋಟಗಳಲ್ಲಿಯೂ ಹಕ್ಕಲಾಯಕೂಡದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಪರದೇಶಿಗಳಿಗೂ ಬಿಟ್ಟುಬಿಡಬೇಕು” (ಯಾಜಕಕಾಂಡ 19:9,10). ರೂತಳು ಬಿಟ್ಟು ಉಳಿದಂತ ಪೈರನ್ನು ಎತ್ತಿಕೊಳ್ಳಲು ತೆರಳಿದಳು. ಬಡ ಹುಡುಗಿಯಾಗಿದ್ದುಕೊಂಡು, ತನ್ನನ್ನು ಮತ್ತು ತನ್ನ ಅತ್ತೆಯನ್ನು ನೋಡಿಕೊಳ್ಳಲು ಆಕೆಯ ಕೈಲಾದದ್ದನ್ನು ಮಾಡುತ್ತಿದ್ದಳು.

ಸರ್ವಶಕ್ತನಾದ ದೇವರು ಆಕೆಯನ್ನು ಅದ್ಭುತವಾಗಿ ಬೋವಜನ ಜಾಗಕ್ಕೆ ನಡೆಸಿದನು. ದೇವರು ತನ್ನ ಸರ್ವಶಕ್ತಿಕೆಯಲ್ಲಿ, ಎಲ್ಲಾ ನಿತ್ಯತ್ವಕ್ಕೂ ಅವರಿಬ್ಬರು ಗಂಡ ಮತ್ತು ಹೆಂಡತಿಯಾಗಿರಬೇಕು ಎಂದು ತಾನೇ ಮಾಡಿದಂತ ಯೋಜನೆಯಿಂದ, ಹೇಗೆ ಇಬ್ಬರನ್ನು ಒಟ್ಟಾಗಿ ಸೇರಿಸದನೆಂದು ನೋಡುವುದು ನಿಜಕ್ಕೂ ಅದ್ಭುತವಾದದ್ದಾಗಿದೆ. ಬೋವಜನು, ಪೈರನ್ನು ಆಯ್ದುಕೊಳ್ಳುತ್ತಿದ್ದ ಆ ಸ್ತ್ರೀಯನ್ನು ನೋಡಿ, ಯಾರು ಈಕೆ ಎಂದು ಕೆಲಸಗಾರರಲ್ಲಿ ಕೇಳಿದನು. ಆಕೆಯು ಮೋವಾಬ್ ದೇಶದ ಸ್ತ್ರೀ ನೊವೊಮಿಯೊಟ್ಟಿಗೆ ಬಂದಿದ್ದಾಳೆ ಎಂಬುದಾಗಿ ಆ ಕೆಲಸಗಾರರು ಪ್ರತಿಕ್ರಿಯಿಸಿದರು. ಬೋವಜನು ತುಂಬಾ ದಯವಂತನು ಮತ್ತು ದೈವಿಕ ಮನುಷ್ಯನಾಗಿದ್ದನು. ಆತನ ಕಾಳಜಿ ಏನಾಗಿತ್ತೆಂದರೆ, ರೂತಳು ಯಾವ ಪುರಷರಿಂದಲೂ ಉಪದ್ರವಕ್ಕೆ ಒಳಗಾಗಬಾರದು ಎಂಬುದಾಗಿತ್ತು ಮತ್ತು ಯಾವುದೇ ಬೇರೆ ಜಾಗಕ್ಕೆ ಹೋಗಿ ಪೈರನ್ನು ಆಯ್ದುಕೊಳ್ಳಬೇಡ, ಅದು ತುಂಬಾ ಅಪಾಯ ಎಂದು ಆಕೆಗೆ ಹೇಳಿದನು. ಆತನು, ಆಕೆಗೆ ನೋವು ಮಾಡದಂತೆ ತನ್ನ ಸೇವಕರಿಗೆ ಹೇಳಿದನು. ರೂತಳಿಗೆ ಇದು ತೀರಾ ಮನಮುಟ್ಟಿತು, ಆಕೆಯು ಮುಖವನ್ನು ಬಗ್ಗಿಸಿಕೊಂಡು, ನಿರ್ಲಕ್ಷ್ಯಕ್ಕೆ ಒಳಗಾದ ಮೋವಾಬ್ ದೇಶದವಳಾದ ನನ್ನ ಬಗ್ಗೆ ಯಾಕೆ ಈ ರೀತಿಯ ದಯೆ ತೋರಿಸಿದ್ದಾನೆ ಎಂಬುದಾಗಿ ಬೋವಜನಲ್ಲಿ ಕೇಳಿದಳು. ಆಕೆಯು ತನ್ನ ಅತ್ತೆಗೆ ಎಲ್ಲದರಲ್ಲಿ ತೋರಿಸುವಂತ ದಯೆ ಮತ್ತು ಆಕೆಯು ತನ್ನ ಹಳೆಯ ಮೋವಾಬ್ ದೇಶದ ವಿಗ್ರಹಗಳನ್ನು ಮರೆತುಬಿಟ್ಟು, ನಿಜ ದೇವರನ್ನು ಹಿಂಬಾಲಿಸುವುದನ್ನು ಆರಿಸಿಕೊಂಡದ್ದರ ಬಗ್ಗೆ ಕೇಳಿಸಿಕೊಂಡೆನು ಎಂದು ಆಕೆಗೆ ಬೋವಾಜನು ಪ್ರತಿಕ್ರಿಯಿಸಿದನು. ಆಕೆಯು ಎತ್ತಿಕೊಳ್ಳಲು ಸುಲಭವಾಗುವಂತೆ, ಕೆಲವು ಪೈರನ್ನು, ಹಣ್ಣನ್ನು ಕೈ ತುಂಬಾ ಉದುರಿಸುವಂತೆ ತನ್ನ ಸೇವಕರಿಗೆ ಬೋವಾಜನು ಹೇಳಿದನು.

ಬೋವಾಜನಂತ ಗಂಡನನ್ನು ಹೊಂದಿಕೊಳ್ಳುವಂತೆ ದೇವರು ಆ ಹುಡುಗಿಯನ್ನು ಏಕೆ ಎತ್ತಿಕೊಂಡನು ಮತ್ತು ದಾವೀದನ ಪೂರ್ವಜಳಾಗುವಂತೆ ಹಾಗೂ ನಮ್ಮ ಕರ್ತನ ವಂಶಾವಳಿಯ ಸಾಲಿಗೆ ಆಕೆಯು ಸೇರುವಂತೆ, ದೇವರು ಆಕೆಯನ್ನು ಯಾಕೆ ಎತ್ತಿಕೊಂಡರು? ಮೊದಲನೆಯದಾಗಿ, ರೂತಳು ದೀನತೆಯುಳ್ಳ ಹುಡುಗಿಯಾಗಿದ್ದಳು, ತನ್ನ ಬಗ್ಗೆ ಅತೀ ಉನ್ನತವಾಗಿ ಯೋಚಿಸುತ್ತಿರಲಿಲ್ಲ. ಆಕೆಯು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು ಮತ್ತು ವಿನಯಶೀಲಳಾಗಿದ್ದಳು ಹಾಗೂ ಧೃಢ ನಂಬಿಕೆಯುಳ್ಳಂತ ಸ್ತ್ರೀಯಾಗಿದ್ದಳು. ಆಕೆಯು ದೇವರನ್ನು ಹಿಂಬಾಲಿಸುವ ಸಲುವಾಗಿ, ತನ್ನ ಮನೆಯನ್ನು ಮರೆತಿದ್ದಳು ಮತ್ತು ತನ್ನ ಸಂಬಂಧಿಕರನ್ನು ಮರೆತಿದ್ದಳು ಹಾಗೂ ತನ್ನ ಅತ್ತೆಯನ್ನು ಗೌರವದಿಂದ, ದಯೆಯಿಂದ ಮತ್ತು ಪ್ರೀತಿಯಿಂದ ಕಾಣುತ್ತಿದ್ದಳು. ಇಂದು ಸಹ ಯೌವನಸ್ಥ ಹುಡುಗಿಯರಲ್ಲಿ ದೇವರು ಈ ಗುಣಲಕ್ಷಣಗಳನ್ನು ನೋಡುತ್ತಾನೆ.

ಇನ್ನೊಬ್ಬರಿಂದ ನಿರ್ಲಕ್ಷ್ಯಕ್ಕೆ ಒಳಗಾದಂತಹ ತನ್ನ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಅವರಿಗಾಗಿ ಉತ್ತಮ ಮದುವೆ ಸಂಗಾತಿಯನ್ನು ಹುಡುಕುತ್ತಾನೆ ಎಂದು ಈ ಕಥೆಯು ನಮಗೆ ತೋರಿಸುತ್ತದೆ

ರೂತಳು ಮನೆಗೆ ಬಂದಾಗ, ಆಕೆಯ ಆತ್ತೆಯು, ಎಲ್ಲಿ ಆಯ್ದುಕೊಂಡು ಬಂದೆ ಎಂಬುದಾಗಿ ಕೇಳಿದಾಗ, ಆಯ್ದುಕೊಂಡು ಬಂದ ಸ್ಥಳವನ್ನು ರೂತಳು ಹೇಳಿದಳು. ನೊವೊಮಿ ಇದನ್ನು ಕೇಳಿದಾಗ, ತಾನು ಪ್ರಯತ್ನಿಸಿ, ಭದ್ರತೆಯನ್ನು ಒದಗಿಸುವುದಾಗಿ ಮತ್ತು ಬೋವಾಜನು ಹತ್ತಿರದ ಸಂಬಂಧಿ ಎಂಬುದಾಗಿ ರೂತಳಿಗೆ ಹೇಳಿದಳು. ನೊವೊಮಿಯು ರೂತಳಿಗೆ ದೇವರ ನಿಯಮದ ಬಗ್ಗೆ ವಿವರಿಸಿರಬಹುದು, ಅಂದರೆ ಹತ್ತಿರದ ಸಂಬಂಧಿಯು ವಿಧವೆಯ ಆಸ್ತಿಯನ್ನು ಕೊಂಡುಕೊಳ್ಳಬಹುದು ಮತ್ತು ಆಕೆಯನ್ನು ವಿವಾಹವಾಗಬಹುದು ಎಂಬ ದೇವರ ನಿಯಮದಲ್ಲಿನ ಆದೇಶವನ್ನು ವಿವರಿಸಿರಬಹುದು. ಬೋವಾಜನು ನೊವೊಮಿಯನ್ನು ಭೇಟಿಯಾದಾಗ, ಆತನು ಹತ್ತಿರದ ಸಂಬಂಧಿಯಾಗಿದ್ದರಿಂದ ರೂತಳನ್ನು ಪಡೆದುಕೊಂಡು, ಮದುವೆಯಾಗುವಂತೆ ನೊವೊಮಿಯು ಆತನನ್ನು ಕೋರಿಕೊಂಡಿದ್ದಳು ರೂತಳು 3:8). ಬೋವಾಜನು ಈ ವಿಷಯವನ್ನು ಕೇಳಿ ಸಂತೋಷಪಟ್ಟನು, ಏಕೆಂದರೆ, ರೂತಳು ಲಕ್ಷಣವಾಗಿರುವಂತ, ಯೌವನಸ್ಥ ಪುರುಷರನ್ನು ಮದುವೆಯಾಗಲು ಆರಿಸಿಕೊಳ್ಳಲಿಲ್ಲ ಎಂಬುದಕ್ಕಾಗಿ. ಬೋವಾಜನು ಹೆಚ್ಚು ವಯಸ್ಸುಳ್ಳವನಾಗಿದ್ದನು ಮತ್ತು ಯೌವನಸ್ಥ ಹುಡುಗಿಯರಿಗೆ ಹೆಚ್ಚಾಗಿ ವಯಸ್ಸಾದಂತ ಪುರುಷರು ಆಕರ್ಷಿತರಾಗುವುದಿಲ್ಲ. ಆದರೆ ಬೋವಾಜನು ಹೇಳಿದ್ದೇನೆಂದರೆ, ಮತ್ತೊಬ್ಬನು ತನಗಿಂತ ಹತ್ತಿರದ ಸಂಬಂಧಿ ಇದ್ದಾನೆ ಎಂಬುದಾಗಿ. ಒಬ್ಬ ನೀತಿಯುಳ್ಳ ಮನುಷ್ಯನಾಗಿ, ಬೋವಾಜನು ಹೀಗೆ ಹೇಳುತ್ತಾನೆ, ನನ್ನ ಸಮೀಪ ಸಂಬಂಧಿಯನ್ನು ಮದುವೆಯಾಗುವಂತೆ ರೂತಳನ್ನು ಮೊದಲು ಕೇಳುವೆನು ಎಂಬುದಾಗಿ (ರೂತಳು 3:12,13).

ಮಾರನೆಯ ದಿನದಲ್ಲಿ ಬೋವಾಜನು ಪ್ರಾಮಾಣಿಕವಾಗಿ ಹತ್ತಿರದ ಸಂಬಂಧಿಯ ಊರ ಬಾಗಿಲಿಗೆ ಹೋಗಿ, ನೊವೊಮಿಯ ಆಸ್ತಿಯನ್ನು ಕೊಂಡುಕೊಳ್ಳುವ ಮತ್ತು ಆಕೆಯ ಹತ್ತಿರದ ಸಂಬಂಧಿಯಾಗಿ ರೂತಳನ್ನು ಮದುವೆಯಾಗುವ ಸಂಬಂಧ ಸಮೀಪ ಬಂಧುವಿನಲ್ಲಿ ಕೇಳಿದನು (ರೂತಳು 4:3). ಆ ಸಮೀಪ ಬಂಧುವು ಪ್ರಾಮಾಣಿಕವಾಗಿ ಹೇಳಿದ್ದೇನೆಂದರೆ, ”ಹೌದು, ನಾನು ಆ ಆಸ್ತಿಯನ್ನು ಕೊಂಡುಕೊಳ್ಳುತ್ತೇನೆ” ಎಂಬುದಾಗಿ. ಆದರೆ ಬೋವಾಜನು, ರೂತಳನ್ನು ಮದುವೆಯಾಗಿ, ಸತ್ತುಹೋದ ಆಕೆಯ ಗಂಡನ ಹೆಸರಿನಲ್ಲೇ ಉಳಿಯುವಂತೆ, ಆಕೆಯಲ್ಲಿ ಮಕ್ಕಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದನು. ಆ ಸಮೀಪ ಬಂಧುವು ಇದನ್ನು ಕೇಳಿದಾಗ, ಆ ಪ್ರಸ್ತಾಪಕ್ಕೆ ಹಿಂಜರಿದು, ನಾನು ಇದನ್ನು ಮಾಡಲು ಆಗುವುದಿಲ್ಲ ಎಂಬುದಾಗಿ ಹೇಳಿದನು. ಆಕೆಯ ಮಕ್ಕಳು ನಂತರದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಮಕ್ಕಳೊಂದಿಗೆ ಪಡೆದುಕೊಳ್ಳಬಹುದು ಎಂಬುದಾಗಿ ಯೋಚಿಸಿದನು ಮತ್ತು ಆ ಜಟಿಲ ಸಮಸ್ಯೆಯು ಆತನಿಗೆ ಬೇಡವಾಗಿತ್ತು! ಹಾಗಾಗಿ ಆ ಆಸ್ತಿಯನ್ನು ಕೊಂಡುಕೊಳ್ಳಲು ಆತನು ಹಿಂದೇಟು ಹಾಕಿದನು. ಆದಕಾರಣ, ಬೋವಾಜನು ಆ ಆಸ್ತಿಯನ್ನು ಕೊಂಡುಕೊಳ್ಳಲು ಮತ್ತು ರೂತಳನ್ನು ಮದುವೆಯಾಗಲು ಮೊದಲ ಸಾಲಿನಲ್ಲಿ ಇದ್ದನು. ಬೋವಾಜನು ಅದನ್ನು ಮಾಡಲು ಸಿದ್ದನಾಗಿ ಒಪ್ಪಿದನು. ಮೋವಾಬ್ಯಳ ಹುಡುಗಿಯನ್ನು ಮದುವೆಯಾಗಲು ಪ್ರಮುಖ ಮನುಷ್ಯನಾದ ಬೋವಾಜನು ಧೃಢ ಹೆಜ್ಜೆಯನ್ನು ಇಟ್ಟನು. ಆದರೆ ಆತನು ಕೆಲವೊಂದು ಪ್ರಶಂಸಿಸುವಂತ ಗುಣಲಕ್ಷಣಗಳನ್ನು ರೂತಳಲ್ಲಿ ನೋಡಿದ್ದನು ಮತ್ತು ಅನಾಗರಿಕ ಕುಟುಂಬದಿಂದ ಬಂದ ಆಕೆಯನ್ನು ಬೋವಾಜನು ಗೌರವಿಸುತ್ತಿದ್ದನು. ಅಕ್ರೈಸ್ತ ಕುಟುಂಬದಿಂದ ಬಂದು ರಕ್ಷಣೆ ಹೊಂದಿದಂತ ಹೆಣ್ಣು ಮಕ್ಕಳನ್ನು ಮದುವೆಯಾಗಲು ಕ್ರೈಸ್ತ ಕುಟುಂಬದ ಹುಡುಗರು ಬಹಳ ಹಿಂದೇಟು ಹಾಕುತ್ತಾರೆ. ಆದರೆ ಅನೇಕ ಪ್ರಕರಣಗಳಲ್ಲಿ, ಇಂಥಹ ಹುಡುಗಿಯರು ಬಲವುಳ್ಳಂತ ಕ್ರೈಸ್ತರಾಗಿರುತ್ತಾರೆ ಮತ್ತು ವಿಶ್ವಾಸಿ ಕುಟುಂಬಗಳಿಂದ ಹುಟ್ಟಿದಂತವರಿಗಿಂತ ಹೆಚ್ಚು ದೈವಿಕತೆಯನ್ನು ಹೊಂದಿರುತ್ತಾರೆ.

ಬೋವಾಜನು ರೂತಳನ್ನು ಮದುವೆಯಾದನು ಮತ್ತು ಓಬೇದನೆಂದು ಕರೆಯಲ್ಪಡುವ ಮಗನನ್ನು ಹೊಂದುವ ಮೂಲಕ, ಜೆಸ್ಸಿಯ ತಂದೆಯಾದನು, ಜೆಸ್ಸಿಯನು ದಾವೀದನ ತಂದೆಯಾಗಿದ್ದನು (ರೂತಳು 4:17). ಹೀಗಾಗಿ ದೇವರು, ಅನಾಗರಿಕತೆ ಹಿನ್ನಲೆಯಿಂದ ಬಂದಂತಹ ಸ್ತ್ರೀಯನ್ನು ನಿಷಿದ್ದ ರಕ್ತ ಸಂಬಂಧಿಗಳೊಡನೆ ಕೂಡಿಕೊಳ್ಳುವಂತೆ ಗೌರವಿಸಿದರು.ರೂತಳಲ್ಲಿ ನಾವು ಏನನ್ನು ಕಲಿಯಬಹುದು, 1 ಸಮುವೇಲ 2:30 ರಲ್ಲಿನ ಸತ್ಯ ಆಕೆಯ ಬಾಳಲ್ಲಿ ನಿಜವಾಗಿತ್ತು, ಆ ವಚನ ಹೀಗೆ ಹೇಳುತ್ತೇ - ”ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು” ಎಂಬುದಾಗಿ. ದೇವರಲ್ಲಿ ಪಕ್ಷಪಾತವಿಲ್ಲ. ಇನ್ನೊಬ್ಬರಿಂದ ನಿರ್ಲಕ್ಷ್ಯಕ್ಕೆ ಒಳಗಾದಂತಹ ತನ್ನ ಮಕ್ಕಳ ಬಗ್ಗೆ ದೇವರು ಕಾಳಜಿ ವಹಿಸುವ ಮೂಲಕ, ಅವರಿಗಾಗಿ ಉತ್ತಮ ಮದುವೆ ಸಂಗಾತಿಯನ್ನು ಹುಡುಕುತ್ತಾನೆ ಎಂದು ಈ ಕಥೆಯು ನಮಗೆ ತೋರಿಸುತ್ತದೆ. ಇಹಲೋಕದ ಇಂತಹ ವಿಷಯಗಳಿಗಾಗಿಯೂ ಸಹ ಕರ್ತನಲ್ಲಿ ನಾವು ಭರವಸವಿಡಬೇಕು. ದೇವರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ನಮ್ಮ ಇಹಲೋಕದ ಎಲ್ಲಾ ಅಗತ್ಯತೆಗಳನ್ನು ದೇವರು ಪೂರೈಸುತ್ತಾರೆ, ಅವು ಏನಾಗಿದ್ದರೂ ಪರವಾಗಿಲ್ಲ, ಅವುಗಳನ್ನು ಪೂರೈಸುತ್ತಾರೆ.