ಶಿಷ್ಯತ್ವದ ಮೂರನೇ ಷರತ್ತನ್ನು ಲೂಕ 14:33 ರಲ್ಲಿ ಕಾಣಬಹುದಾಗಿದೆ: "ನಿಮ್ಮಲ್ಲಿ ಯಾವನಾದರೂ (ಮತ್ತೊಂದು ಪರಿಪೂರ್ಣವಾದ ಹೇಳಿಕೆ) ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು"
ಪ್ರಾಯೋಗಿಕವಾಗಿ ಈ ಹೇಳಿಕೆಯ ಅರ್ಥವೇನು? ನಾವು ಅದನ್ನು ಅರ್ಥಮಾಡಿಕೊಳ್ಳಬೇಕು. ಇದರರ್ಥ ನಾವು ಸನ್ಯಾಸಿಗಳಾಗಬೇಕು ಅಥವಾ ಸನ್ಯಾಸಿಗಳಾಗಿ ಎಲ್ಲವನ್ನೂ ತೊರೆದು ಕಾಡಿಗೆ ಹೋಗಿ ಅಲ್ಲಿ ವಾಸಿಸಬೇಕೆಂದೇ? ಇಲ್ಲ. "ಸ್ವತ್ತುಗಳು" ಎಂಬುದಾಗಿ ನಾವು ನೋಡುವಾಗ, ಅವು ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವಂತವುಗಳಾಗಿವೆ. ನನ್ನನ್ನು ಹತೋಟಿಯಲ್ಲಿ ಇಡುವಂತದ್ದೇ ನನ್ನ ಸ್ವತ್ತು (ನನ್ನಲ್ಲಿರುವಂತದ್ದು) ಆಗಿರುತ್ತದೆ. ನನ್ನ ಮನೆ ನನ್ನ ಸ್ವತ್ತು ಆಗಿದ್ದಲ್ಲಿ, ನಾನು ಅದನ್ನು ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದೇನೆ, ಏಕೆಂದರೆ ಅದು ನನ್ನದು. ನಾನು ಅದನ್ನು ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವುದರಿಂದ, ಅದು ನನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿದೆ. ಇದು, ನೀವು ಹೊಂದಿರುವ ದುಬಾರಿ ಬೆಲೆಯ ಕಾರು ಆಗಿರಬಹುದು ಅಥವಾ ಬಹಳ ಬೆಲೆಬಾಳುವ ಷೇರುಗಳು ಕೂಡ ಆಗಿರಬಹುದು; ನೀವು ಅವುಗಳನ್ನು ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿರುವುದರಿಂದ, ಅವು ನಿಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿವೆ, ಏಕೆಂದರೆ ನಿಮ್ಮ ಮನಸ್ಸು ಆ ವಿಷಯಗಳ ಮೇಲೆ ತುಂಬಾ ಕೇಂದ್ರೀಕೃತಗೊಂಡಿದೆ. ನಿಮ್ಮ ಮನಸ್ಸು ನಿಮ್ಮ ಮನೆಯಲ್ಲಿ ಇರುವ ನಿಷ್ಪ್ರಯೋಜಕ ವಸ್ತುಗಳ ಮೇಲೆ ಅಲ್ಲ, ಆದರೆ ಈ ಅಮೂಲ್ಯ ಸ್ವತ್ತುಗಳ ಮೇಲಿದೆ.
ಹಾಗಾದರೆ, ನಾವು ಆತನ ಶಿಷ್ಯರಾಗಬೇಕಾದರೆ "ನಮಗಿರುವದನ್ನೆಲ್ಲಾ ಬಿಟ್ಟುಬಿಡಬೇಕು" ಎಂಬ ಮಾತಿನ ಅರ್ಥವೇನು? ನನ್ನ ಬಳಿ ಇರುವ ಎಲ್ಲವನ್ನೂ ನಾನು ಮಾರಾಟ ಮಾಡಬೇಕೇ? ಮಾರ್ಕ 10 ರಲ್ಲಿ ಯೇಸುವಿನ ಬಳಿಗೆ ಪ್ರತ್ಯೇಕವಾಗಿ ಒಬ್ಬ ಯೌವನಸ್ಥನು ಬಂದನು, ಯೇಸು ಅವನಿಗೆ ತನ್ನಲ್ಲಿದ್ದ ಎಲ್ಲವನ್ನೂ ಮಾರಲು ಹೇಳಿದರು, ಆದರೆ ಯೇಸು ಎಲ್ಲರಿಗೂ ಆ ಆಜ್ಞೆಯನ್ನು ಕೊಡಲಿಲ್ಲ. ಉದಾಹರಣೆಗೆ, ಜಕ್ಕಾಯನು, ಲೂಕ 19 ರಲ್ಲಿ ಯೇಸುವಿಗೆ, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ತೆಗೆದುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ವಾಪಸ್ಸು ಕೊಡುತ್ತೇನೆ ಎಂದು ಹೇಳಿದನು. ಇದನ್ನು ಕೇಳಿ ಯೇಸು - ಈ ಹೊತ್ತು "ಈ ಮನೆಗೆ ರಕ್ಷಣೆಯಾಯಿತು"ಎಂದರು. ಆ ಶ್ರೀಮಂತ ಯೌವನಸ್ಥನಿಗೆ ಹೇಳಿದಂತೆ ಯೇಸು ಎಲ್ಲವನ್ನೂ ತ್ಯಾಗ ಮಾಡಬೇಕೆಂದು ಜಕ್ಕಾಯನಿಗೆ ಬೇಡಿಕೆ ಇಡಲಿಲ್ಲ. ಮರಿಯಳು, ಮಾರ್ಥಳು ಮತ್ತು ಲಾಜರನ ಮನೆಯಲ್ಲಿ, ಅವರು ಏನನ್ನಾದರೂ ಬಿಟ್ಟುಬಿಡಬೇಕೆಂದು ಯೇಸು ಬೇಡಿಕೆ ಇಡಲಿಲ್ಲ. ಹೀಗೆ, ಆತನು ಎಲ್ಲರಿಗೂ ತಮಗಿರುವದನ್ನೆಲ್ಲಾ ಮಾರಾಟ ಮಾಡಬೇಕು ಎಂದು ಹೇಳುವುದಿಲ್ಲ.
ಹಣದ ಮೇಲಿನ ಪ್ರೀತಿಯು ಕ್ಯಾನ್ಸರ್ ರೋಗವಿದ್ದಂತೆ: ಕೆಲವು ಸಂದರ್ಭಗಳಲ್ಲಿ ದೇಹದಲ್ಲಿ ಕ್ಯಾನ್ಸರ್ ಎಷ್ಟಾಗಿ ಹರಡಿರುತ್ತದೆಯೆಂದರೆ, ದೇಹದ ಒಂದು ಅಂಗವನ್ನೇ ತೆಗೆಯುವ ಮೂಲಕ ಮಾತ್ರವೇ ಕ್ಯಾನ್ಸರಿನಿಂದ ಗುಣಹೊಂದಲು ಸಾಧ್ಯ ಎಂದು ವೈದ್ಯರು ಹೇಳುತ್ತಾರೆ. ಒಂದು ವೇಳೆ ನಮ್ಮ ದೇಹದ ಕೆಲ ಒಳ ಅಂಗವು ಕ್ಯಾನ್ಸರ್ ಗೆ ತುತ್ತಾಗಿರಬಹುದು. ಆಗ ವೈದ್ಯರು ಹೀಗೆನ್ನುತ್ತಾರೆ. "ಆ ಅಂಗವನ್ನೇ ನಾವು ಸಂಪೂರ್ಣವಾಗಿ ತೆಗೆದುಹಾಕಬೇಕಾಗುತ್ತದೆ, ಬೇರೆ ಯಾವ ಮಾರ್ಗವೂ ಇಲ್ಲ. ಇಲ್ಲದಿದ್ದರೆ ನೀನು ಸಾಯುತ್ತೀ"ಎಂದು. ಆದರೆ ಬೇರೆ ಪ್ರಕರಣಗಳಲ್ಲಿ, ಕ್ಯಾನ್ಸರ್ ಬಹಳವಾಗಿ ಹರಡಿಲ್ಲವಾದಲ್ಲಿ ದೇಹದ ಆ ಅಂಗದ ಸ್ವಲ್ಪ ಭಾಗವನ್ನು ಮಾತ್ರ ತೆಗೆಯಬೇಕಾಗುತ್ತದೆ. ಹಣದಾಸೆಯು ಕ್ಯಾನ್ಸರ್ ರೋಗವಿದ್ದಂತೆ. ಐಶ್ವರ್ಯವಂತನಾದ ಯುವಕನ ವಿಷಯದಲ್ಲಿ ನೋಡುವುದಾದರೆ, ಕರ್ತನು ಆತನಿಗೆ, "ನಿನಗಿರುವುದನ್ನೆಲ್ಲ ಮಾರಿ ಬಡವರಿಗೆ ಕೊಟ್ಟುಬಿಡು"ಎಂದು ಹೇಳಬೇಕಾಯಿತು. ಏಕೆಂದರೆ, ಆತನಲ್ಲಿ, ಹಣವೆಂಬ ಕ್ಯಾನ್ಸರ್ ಬಹಳವಾಗಿ ಬೆಳೆದಿತ್ತು. ಆದರೆ, ಬೇರೆಯವರ ಪ್ರಕರಣದಲ್ಲಿ, ಉದಾರಹಣೆಗೆ ಜಕ್ಕಾಯನ ವಿಷಯದಲ್ಲಿ ನೋಡುವುದಾದರೆ, ಅದು (ಕ್ಯಾನ್ಸರ್) ಸ್ವಲ್ಪವಾಗಿಯೇ ಹರಡಿತ್ತು. ಮತ್ತು ಮರಿಯಳು ಹಾಗೂ ಮಾರ್ಥಳ ಪ್ರಕರಣದಲ್ಲಿಯೂ ಕೂಡ ಸ್ವಲ್ಪ ಕಡಿಮೆಯೇ ಇತ್ತು. ಹೀಗಿರಲಾಗಿ, ಕರ್ತನು ಎಲ್ಲರಿಗೂ ಒಂದೇ ರೀತಿಯ ಆಜ್ಞೆಯನ್ನು ಕೊಡಲಿಲ್ಲ. ಹಣದ ಮೇಲಿನ ಪ್ರೀತಿಯು ಎಷ್ಟರ ಮಟ್ಟಿಗೆ ನಿನ್ನ ಮೇಲೆ ಹಿಡಿತ ಸಾಧಿಸಿದೆ, ಕ್ಯಾನ್ಸರ್ ನಿನ್ನಲ್ಲಿ ಎಷ್ಟಾಗಿ ಹರಡಿದೆ ಎಂಬುದರೆ ಮೇಲೆ ಇದು ಅವಲಂಬಿತವಾಗಿರುತ್ತದೆ. ಇದರ ಆಧಾರದ ಮೇರೆಗೆ ಕರ್ತನು ನಿಮ್ಮಲ್ಲಿರುವಂತದ್ದನ್ನು ನೀವು ಎಷ್ಟು ಬಿಟ್ಟುಕೊಡಬೇಕು ಅಥವಾ ಎಷ್ಟು ಮಾರಾಟ ಮಾಡಬೇಕು ಎಂದು ಹೇಳುತ್ತಾರೆ.
ಇದು ಶಿಷ್ಯತ್ವದ ಮೂರನೇ ಷರತ್ತು. ನಾನು ಲೋಕದ ಎಲ್ಲಾ ವಸ್ತುಗಳಿಗಿಂತ ಹೆಚ್ಚಾಗಿ ಯೇಸುಸ್ವಾಮಿಯನ್ನು ಪ್ರೀತಿಸಬೇಕು
ಅಬ್ರಹಾಮ ಮತ್ತು ಇಸಾಕನ ದೃಷ್ಟಾಂತದಿಂದ, ನಮಗಿರುವುದನ್ನು ಬಿಟ್ಟುಬಿಡುವುದು ಎಂಬ ಮಾತಿನ ಅರ್ಥವನ್ನು ನಾವು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಬ್ರಹಾಮನು ಇಸಾಕನನ್ನು ತನ್ನ ಸ್ವಂತದ್ದನ್ನಾಗಿ ತನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಂಡಿದ್ದನು. ಆತನು ಇಸಾಕನನ್ನು ಪ್ರೀತಿಸಿದನು, ಮತ್ತು ಆತನನ್ನು ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದನು. ಇಸಾಕನು ಆತನ ಹೃದಯದ ಬಹು ಪ್ರಿಯನಾಗಿದ್ದನು ಮತ್ತು ಅವನು ತನ್ನ ಹೆಂಡತಿ ಸಾರಾಳಿಗಿಂತ ಹೆಚ್ಚಾಗಿ ಇಸಾಕನ ಬಗ್ಗೆ ಹೆಚ್ಚು ಕಾಳಜಿ ವಹಿಸಿದನು. ಅಬ್ರಹಾಮನ ಹೃದಯದಲ್ಲಿ ಇಸಾಕನು ಸಣ್ಣ ವಿಗ್ರಹವಾಗಿದ್ದನ್ನು ದೇವರು ನೋಡಿದರು, ಈ ಇಸಾಕನು ಅಬ್ರಹಾಮನಿಗೆ ದೇವರಾಗಿಬಿಟ್ಟಿದ್ದನು. ಅವನನ್ನು ಅತೀ ಹೆಚ್ಚಾಗಿ ಪ್ರೀತಿಸಿದನು ಮತ್ತು ಇಸಾಕನನ್ನು ಹಿಡಿದಿಟ್ಟುಕೊಳ್ಳುವಂತ ವಿಗ್ರಹಾರಾಧನೆಯಂತ ಮನೋಭಾವದಿಂದ ಅಬ್ರಹಾಮನನ್ನು ಪ್ರತ್ಯೇಕಿಸಲು ದೇವರು ಬಯಸಿದರು. ಹೀಗಿರಲಾಗಿ, ದೇವರು ಅಬ್ರಹಾಮನಿಗೆ, ಇಸಾಕನನ್ನು ಮೊರೀಯ ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ಕೊಲ್ಲಲು (ಬಲಿಯನ್ನಾಗಿ ಅರ್ಪಿಸಲು) ಹೇಳಿದರು ಮತ್ತು ಅಬ್ರಹಾಮನು ದೇವರಿಗೆ ವಿಧೇಯನಾದನು. ಈ ವಿಷಯದ ಬಗ್ಗೆ ಯೋಚಿಸಲು ದೇವರು ಆತನಿಗೆ ಮೂರು ದಿನಗಳ ಕಾಲಾವಕಾಶ ಕೊಟ್ಟರು. ಹೀಗೆ, ಅವನು ಮೂರು ದಿನಗಳ ಕಾಲ ನಡೆದು ಮೊರೀಯ ಬೆಟ್ಟವನ್ನು ತಲುಪಿದನು. ಆಗ ಅವನು ದೇವರಿಗೆ, "ಹೌದು ಕರ್ತನೇ, ನಾನು ನಿನ್ನನ್ನು ಆರಾಧಿಸುತ್ತೇನೆ. ಇಸಾಕನನ್ನು ನಾನು ನಿನಗೆ ಅರ್ಪಿಸುತ್ತೇನೆ" ಎಂದು ಹೇಳಿದನು. ಆದರೆ ಆತನು ತನ್ನ ಕೈಯಲ್ಲಿ ಕತ್ತಿ ಹಿಡಿದು ಇಸಾಕನನ್ನು ವಧಿಸುವಷ್ಟರಲ್ಲಿ ದೇವರು ಅಬ್ರಹಾಮನನ್ನು ತಡೆದರು ಮತ್ತು ಇಸಾಕನನ್ನು ಮನೆಗೆ ಕರೆದುಕೊಂಡು ಹೋಗಲು ಹೇಳಿದರು. ಅಂದಿನಿಂದ ಅಬ್ರಹಾಮನು ಇಸಾಕನನ್ನು ತನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಲಿಲ್ಲ, ಆದರೆ ಆತನನ್ನು ಹೊಂದಿಕೊಂಡಿದ್ದನು, ಇಸಾಕನು ಆತನ ಮನೆಯಲ್ಲಿಯೇ, ಆತನ ಮಗನಾಗಿಯೇ ಇದ್ದರೂ ಅಬ್ರಹಾಮನು ಆತನನ್ನು ಅಂಟಿಕೊಂಡಿರಲಿಲ್ಲ, ಇದು ನಮಗಿರುವುದನ್ನೆಲ್ಲಾ ಬಿಟ್ಟುಬಿಡುವುದೆಂದರೇನು ಎಂಬುದಕ್ಕೆ ಒಂದು ಸುಂದರವಾದ ಚಿತ್ರಣವಾಗಿದೆ.
ನಿಮ್ಮ ಜೀವನದಲ್ಲಿ ನಿಮಗೆ ಅತ್ಯಂತ ಬೆಲೆಬಾಳುವಂಥವುಗಳಾಗಿರುವ (ಲೌಕಿಕ ವಸ್ತುಗಳು, ಭೌತಿಕ ವಸ್ತುಗಳು) ಬಗ್ಗೆ ಯೋಚಿಸಿ. ನಿಮಗೆ ಅತಿ ಮುಖ್ಯವಾದ ಹಾಗೂ ಅತಿ ಬೆಲೆಬಾಳುವ ವಸ್ತುಗಳು ಯಾವುವು ಮತ್ತು ನೀವು ಯಾವ ಬೆಲೆಬಾಳುವ ವಸ್ತುಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತೀರಿ? ಬಹುಷ: ನೀವು ಅವುಗಳ ಒಂದು ಪಟ್ಟಿಯನ್ನು ಮಾಡಬೇಕು. ಇವೆಲ್ಲವೂ ನಿಮಗಿರುವಂತವುಗಳಾಗಿವೆ. ನೀವು ನಿಜವಾಗಿಯೂ ಶಿಷ್ಯರಾಗಲು ಬಯಸುವುದಾದರೆ, ನೀವು ಪ್ರಾಮಾಣಿಕರಾಗಿರಬೇಕು. ನಿಜವಾಗಿಯೂ ನಿಮಗಿರುವವುಗಳನ್ನು ಬಿಡದೇ ಹಿಡಿದಿಟ್ಟುಕೊಂಡಿರುವುದರ ಬಗ್ಗೆ ನೀವು ಪ್ರಾಮಾಣಿಕರಾಗಿರಬೇಕು ಮತ್ತು ಆ ವಸ್ತುಗಳನ್ನು ಬಿಡದೇ ಹಿಡಿದಿಟ್ಟುಕೊಳ್ಳುವ ನಿಮ್ಮ ಮನೋಭಾವವನ್ನು ನೀವು ಬಿಟ್ಟುಬಿಡಲು ಸಿದ್ಧರಿದ್ದೀರಾ ಎಂದು ನೀವು ನಿರ್ಧರಿಸಬೇಕು.
ನೀವು ಏನನ್ನಾದರೂ ಬಿಗಿಯಾಗಿ ಹಿಡಿದಾಗ ಅದು ನಿಮ್ಮ ಹತೋಟಿಯಲ್ಲಿರುತ್ತದೆ. ಉದಾಹರಣೆಗೆ ನಾನು ನನ್ನ ಕೈಯಲ್ಲಿ ಒಂದು ಪೆನ್ನನ್ನು ಬಿಗಿಯಾಗಿ ಹಿಡಿದುಕೊಂಡರೆ, ಅದು ನನ್ನ ಹತೋಟಿಯಲ್ಲಿರುತ್ತದೆ. ಅದು, ನಿಮ್ಮ ಮನೆಯಾಗಿರಬದು ಅಥವಾ ಬ್ಯಾಂಕ್ ಖಾತೆಯಾಗಿರಬಹುದು, ಷೇರುಗಳಾಗಿರಬಹುದು, ಕಾರು, ಆಸ್ತಿ ಅಥವಾ ಜಮೀನಿನಂತೆ (ರಿಯಲ್ ಎಸ್ಟೇಟ್) ಬೆಲೆಬಾಳುವ ಯಾವುದಾದರೂ ಆಗಿರಬಹುದು. ಅದನ್ನು ನೀವು ಹೊಂದಿರುವುದೆಂದರೆ ನಿಮ್ಮ ಅಂಗೈಯನ್ನು ತೆರೆದಿಟ್ಟುಕೊಂಡಿರುವುದು. ಅದು ಇನ್ನೂ ಅಲ್ಲೇ ಇರುತ್ತದೆ. ನೀವು ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ. ಆದರೆ ಈಗ ನೀವು ಹೇಳುವುದೇನೆಂದರೆ, "ಕರ್ತರೇ, ಇದು ನನ್ನದಲ್ಲ ಎಂದು ನಾನು ಗ್ರಹಿಸುತ್ತೇನೆ. ಇದು ನಿಮ್ಮದು. ನೀವು ಇದನ್ನು ನನಗೆ ಕೊಟ್ಟಿದ್ದೀರಿ ಮತ್ತು ನಾನು ಅದನ್ನು ನೋಡಿಕೊಳ್ಳುತ್ತಿದ್ದೇನೆ ಅಷ್ಟೆ. ನಾನು ಅದನ್ನು ನಂಬಿಗಸ್ತಿಕೆಯಿಂದ ಬಳಸಲು ಬಯಸುತ್ತೇನೆ. ಆದರೆ ನಾನು ಅದರ ವಿಷಯವಾಗಿ ನನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಮನೋಭಾವವನ್ನು ಹೊಂದಿಕೊಳ್ಳಲು ಬಯಸುವುದಿಲ್ಲ. ಇದು ನನ್ನನ್ನು ತನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಂಡಿಲ್ಲ, ಇವುಗಳನ್ನು ನಾನು ಹೊಂದಿದ್ದೇನೆ ಅಷ್ಟೇ, ಇವುಗಳನ್ನು ಹೊಂದಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಬಯಸುತ್ತೇನೆ"
ಇದು "ಹೊಂದಿಕೊಂಡಿರುವ" ಮತ್ತು "ತನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವುದರ"ನಡುವಿನ ವ್ಯತ್ಯಾಸವಾಗಿದೆ. ನಾನು ನನ್ನ ಬಳಿ ಇರುವಂತ ಎಲ್ಲವನ್ನು ಬಿಟ್ಟುಬಿಡಬೇಕು ಎಂದು ಯೇಸು ಹೇಳುತ್ತಾರೆ. ದೇವರು ನನಗೆ ಹಿಂತಿರುಗಿ ಕೊಡುವಂತ ಅನೇಕ ವಸ್ತುಗಳನ್ನು ನಾನು ಹೊಂದಿಕೊಳ್ಳಬಹುದು ಮತ್ತು ನಾನು ಅವುಗಳನ್ನು ಬಳಸಲುಬಹುದು, ಆದರೆ ಇನ್ನು ಮುಂದೆ ನಾನು ಅವುಗಳನ್ನು ನನ್ನ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವುದಿಲ್ಲ.
ಇದು ಶಿಷ್ಯತ್ವದ ಮೂರನೇ ಷರತ್ತು: ನಾನು ಲೋಕದ ಎಲ್ಲಾ ವಸ್ತುಗಳಿಗಿಂತ ಹೆಚ್ಚಾಗಿ ಯೇಸು ಸ್ವಾಮಿಯನ್ನು ಪ್ರೀತಿಸಬೇಕು.