WFTW Body: 

ನಮ್ಮ ಕಾಯಿಲೆಯು ನಾವು ಈ ಭೂಮಿಯಲ್ಲಿನ ನಮ್ಮ ಪ್ರಯಾಣವನ್ನು ಮುಗಿಸುವ ಮುನ್ನ, ನಮ್ಮ ಆತ್ಮಿಕ ಶಿಕ್ಷಣದಲ್ಲಿ ನಾವು ಪದವೀಧರರಾಗಲು ನಾವು ಕಲಿಯಬೇಕಾದ ಕೋರ್ಸ್ ಗಳಲ್ಲಿ ಕಾಯಿಲೆಯು ಒಂದು ಕೋರ್ಸ್ ಆಗಿದೆ. ನಮ್ಮ ಮುಂದೋಟಗಾರನಾದ ಯೇಸು ಕೂಡ ಈ ಕೋರ್ಸ್ ನಲ್ಲಿ ಪದವಿಯನ್ನು ಪಡೆದಿದ್ದಾರೆ. ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ನಾವು ಸತ್ಯವೇದವನ್ನು ನೋಡೋಣ:

ಯೆಶಾಯ53:3 ಹೇಳುತ್ತದೆ. "ಅವನು ಮನುಷ್ಯರಿಂದ ಕಡೆಗಣಿಸಲ್ಪಟ್ಟನು ಮತ್ತು ತಿರಸ್ಕರಿಸಲ್ಪಟ್ಟನು ಸಂಕಷ್ಟಪಡುವ ಮನುಷ್ಯನಾಗಿ, ಕಾಯಿಲೆಯೆಂದರೆ ಏನೆಂದು ತಿಳಿದಿದ್ದವನಾಗಿದ್ದನು". (ಹಾಲ್ಮನ್ ಕ್ರಿಶ್ಚಿಯನ್ ಸ್ಟ್ಯಾಂಡರ್ಡ್ ಬೈಬಲ್).

ಈ ಭೂಮಿಯ ಮೇಲಿನ ಶಾಪದಿಂದಾಗಿ ಮನುಷ್ಯನಿಗೆ ಕಾಯಿಲೆ ಬರುತ್ತದೆ. ಪರಿಣಾಮವಾಗಿ, ನಾವು ಸಹ ಬೆವರು ಮತ್ತು ಮುಳ್ಳು, ಇತ್ಯಾದಿಗಳಿಂದ ನೋಯಿಸಲ್ಪಡುತ್ತೇವೆ, (ಆದಿ. 3:17-19 ನೋಡಿ). ಯೇಸುವು ಈ ಶಾಪಗ್ರಸ್ತ ಭೂಮಿಗೆ ಬಂದಾಗ, ಅವರ ದೇಹವೂ ಬೆವರಿತು ಮತ್ತು ಮುಳ್ಳುಗಳಿಂದ ಘಾಸಿಗೊಂಡಿತು ಮತ್ತು ಅವರು ಕೆಲವೊಮ್ಮೆ ಅಸ್ವಸ್ಥನಾದರು. ಯೇಸುವಿಗೆ "ಕಾಯಿಲೆಯ ಪರಿಚಯವಿತ್ತು”. ಅಂದರೆ ಆತನು “ವ್ಯಾಧಿಪೀಡಿತನು”ಎಂದು ಸತ್ಯವೇದವು ಹೇಳುತ್ತದೆ. (ಯೆಶಾ. 53:3 - ಆಂಪ್ಲಿಫೈಡ್ ಬೈಬಲ್ - ಅಕ್ಷರಶಃ ಅನುವಾದ). (*ಕೆಳಗಿನ ಟಿಪ್ಪಣಿ ನೋಡಿ)

ನಾವು ದೈಹಿಕವಾಗಿ ಅನುಭವಿಸುವ ಎಲ್ಲವನ್ನೂ ಅನುಭವಿಸುವುದಕ್ಕಾಗಿ ಯೇಸುವೂ ಕಾಯಿಲೆಯನ್ನು ಅನುಭವಿಸಬೇಕಾಗಿತ್ತು. ಅಂತಹ ಸಂಕಟವು ಆತನ ಪ್ರಾಪಂಚಿಕ ಶಿಕ್ಷಣದ ಭಾಗವಾಗಿತ್ತು (ಇಬ್ರಿ.5:8). ನಾವು ತೀವ್ರವಾಗಿ ಶೋಧನೆಗೆ ಒಳಗಾದಾಗ ಯೇಸುವೂ ಸಹ ನಮ್ಮಂತೆ ಎಲ್ಲಾ ಅಂಶಗಳಲ್ಲಿ ಶೋಧನೆಗೆ ಒಳಗಾದನೆಂದು ತಿಳಿಯುವುದು ನಮಗೆ ಹೇಗೆ ಸಾಂತ್ವನವಾಗಿದೆಯೋ, ಅದೇ ರೀತಿ ನಾವು ಕಾಯಿಲೆಗೆ ಒಳಗಾದಾಗ ಯೇಸುವು ಕೂಡ ಕಾಯಿಲೆಗೊಳಗಾದರು ಎಂಬುದು ನಮಗೆ ಒಂದು ದೊಡ್ಡ ಸಮಾಧಾನವಾಗಿದೆ (ಇಬ್ರಿ.4:15).

ಆದ್ದರಿಂದ, ನಮ್ಮ ಆತ್ಮಿಕ ಶಿಕ್ಷಣದ ಭಾಗವಾಗಿ ನಾವು ಕಾಯಿಲೆಗೊಳಗಾಗುವುದನ್ನು ಮತ್ತು ಆ ಮೂಲಕ "ಕಷ್ಟವನ್ನು ಅರಿತವರಾಗುವುದನ್ನು" ದೇವರು ನಮಗೆ ಅನುಮತಿಸುತ್ತಾರೆ. ಮತ್ತು ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ, “ಆತನು ಜಯಿಸಿದಂತೆ ನಾವೂ ಜಯಿಸುವುದನ್ನು” ಕರ್ತರು ಬಯಸುತ್ತಾರೆ. ನಾವು ಕಾಯಿಲೆಯಿಂದಿರುವಾಗ ಯಾವುದೇ ರೀತಿಯ ಸ್ವ-ಕರುಣೆಯನ್ನು ಹೊಂದದಿರಲು ಸಹಾನುಭೂತಿಯನ್ನು ಪಡೆಯದಿರಲು ಯಾರ ಮೇಲೂ ಯಾವುದೇ ಬೇಡಿಕೆಗಳನ್ನು ಇಡದಿರಲು, ಗೊಣಗಾಡದಿರಲು, ಎಲ್ಲಾ ಸಮಯದಲ್ಲೂ ಹರ್ಷಚಿತ್ತದಿಂದ ಇರಲು ಕರ್ತನನ್ನು ಯಾವಾಗಲೂ ಸ್ತುತಿಸುತ್ತಾ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತಾ ಇರಬೇಕೆಂದು ಕರ್ತರು ಬಯಸುತ್ತಾರೆ (ಪ್ರಕ. 3:21).ಭೂಮಿಯ ಮೇಲಿನ ಎಲ್ಲಾ ದಿನವೂ ನಾವು ಹಾಗೆ ಬದುಕೋಣ. ಅದಕ್ಕೆ ಅವರ ಕೃಪೆಯೇ ಸಾಕು.

ಕರ್ತರಿಗೆ ಸ್ತೋತ್ರ. ಏಕೆಂದರೆ ಮುಂದೋಟಗಾರನಾಗಿರುವ ನಮ್ಮ ಕರ್ತರು ನಮ್ಮ ಶೋಧನೆಗಳಿಗೆ ಮಾತ್ರವಲ್ಲದೆ ನಮ್ಮ ಕಾಯಿಲೆಗಳ ಬಗ್ಗೆಯೂ ಸಹಾನುಭೂತಿ ತೋರಿಸಬಲ್ಲರು

ಯೇಸುವು ಸಹ ಕೆಲವೊಮ್ಮೆ ಅಸ್ವಸ್ಥರಾದರು ಎಂಬ ಅಂಶವು, ಅನಾರೋಗ್ಯವು ಯಾವಾಗಲೂ ಪಾಪದಿಂದ ಬರುವುದಿಲ್ಲ ಎಂಬುದನ್ನು ನಿರ್ಣಾಯಕವಾಗಿ ಸಾಬೀತುಪಡಿಸುತ್ತದೆ. ಏಕೆಂದರೆ ಯೇಸುವು ಪಾಪರಹಿತರಾಗಿದ್ದರು. ಕರ್ತರಿಗೆ ಸ್ತೋತ್ರ. ಏಕೆಂದರೆ ಮುಂದೋಟಗಾರನಾಗಿರುವ ನಮ್ಮ ಕರ್ತರು ನಮ್ಮ ಶೋಧನೆಗಳಿಗೆ ಮಾತ್ರವಲ್ಲದೆ ನಮ್ಮ ಕಾಯಿಲೆಗಳ ಬಗ್ಗೆಯೂ ಸಹಾನುಭೂತಿ ತೋರಿಸಬಲ್ಲರು! ಪೌಲ ಮತ್ತು ಅವನ ಜೊತೆ ಕೆಲಸಗಾರರಾದ ತಿಮೊಥೆಯ, ಎಪಾಫ್ರೋದಿತ ಮತ್ತು ತ್ರೋಫಿಮ ಸಹ ಭೂಮಿಯ ಮೇಲಿನ ಅವರ ಆತ್ಮಿಕ ಶಿಕ್ಷಣದಲ್ಲಿನ "ಕಾಯಿಲೆಯ ಕೋರ್ಸ್”ನಲ್ಲಿ ಪದವಿ ಪಡೆದರು. (2 ಕೊರಿ. 12:7-9; 1 ತಿಮೊ. 5:23; ಫಿಲಿ.2:27; 2 ತಿಮೊ.4:20).

ದೇವರು ಪೌಲನನ್ನು ಗಲಾತ್ಯದಲ್ಲಿ ಒಮ್ಮೆ ಅನಾರೋಗ್ಯದ ಮೂಲಕ ತಡೆದರು. ಏಕೆಂದರೆ ಪೌಲನು ಅಲ್ಲಿ ಸುವಾರ್ತೆಯನ್ನು ಸಾರುವುದು ಮತ್ತು ಸಭೆಯನ್ನು ನೆಡುವುದು ದೇವರ ಯೋಜನೆಯಾಗಿತ್ತು. ಪೌಲನು ಆರಂಭದಲ್ಲಿ ಗಲಾತ್ಯದ ಮೂಲಕ ಏಷ್ಯಾ ಮೈನರ್ ಗೆ ಹೋಗಲು ಯೋಜಿಸುತ್ತಿದ್ದ. ಅವನು ಗಲಾತ್ಯದಿಂದ ಹೋಗದಂತೆ “ಪವಿತ್ರಾತ್ಮದಿಂದ ನಿರ್ಬಂಧಿಸಲ್ಪಟ್ಟಿದ್ದಾನೆ”ಎಂದು ನಾವು ಓದುತ್ತೇವೆ. (ಅ. ಕೃ. 16:6). ಆತ್ಮದ ಈ ನಿರ್ಬಂಧವು ನಡೆದದ್ದು ಪವಾಡದ ಮೂಲಕ ಅಲ್ಲ, ಆದರೆ ಪೌಲನು ಗಲಾತ್ಯದಲ್ಲಿ ಅನಾರೋಗ್ಯಕ್ಕೆ ಒಳಗಾಗುವುದನ್ನು ದೇವರು ಅನುಮತಿಸುವುದರ ಮೂಲಕ ಅವನು ಏಷ್ಯಾ ಮೈನರ್ ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಗಲಾತ್ಯದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಅವರು ಗಲಾತ್ಯದಲ್ಲಿ ತಂಗಿದ್ದ ಕಾರಣವನ್ನು ಪೌಲನು ಹೇಳುವುದನ್ನು ನಾವು ಸ್ಪಷ್ಟವಾಗಿ ನೋಡುತ್ತೇವೆ. (ಗಲಾ.4:14,15)!

ನಾವು (ಕೆಲವೊಮ್ಮೆ) ರೋಗಿಗಳಾಗಲು ದೇವರು ಅನುಮತಿಸುವ ಇನ್ನೊಂದು ಕಾರಣವೆಂದರೆ ನಾವು ಪ್ರಪಂಚದಲ್ಲಿರುವ ಇನ್ನೊಬ್ಬರಿಗೆ ನಾವು ಸಹಾನುಭೂತಿ ತೋರಬೇಕು ಎಂಬ ಕಾರಣದಿಂದ. ಇಲ್ಲದಿದ್ದಲ್ಲಿ ಜಗತ್ತಿನಲ್ಲಿ ಅನೇಕರು ಏನನ್ನು ಅನುಭವಿಸುತ್ತಾರೆ ಎಂಬುದರ ಬಗ್ಗೆ ನಮಗೆ ಏನೂ ಅರಿವು ಇರಲಾರದು.

ಆದರೆ ದೇವರು ತನ್ನ ಕರುಣೆಯಿಂದ ನಮ್ಮನ್ನು ಗುಣಪಡಿಸುತ್ತಾನೆ (ಫಿಲಿ. 2:25-27). ದೇವರು ಯೇಸುವಿನ ಬಗ್ಗೆ ಕಾಳಜಿ ವಹಿಸಿದಂತೆ, ನಮ್ಮ ಬಗ್ಗೆ ಕೂಡ ಕಾಳಜಿ ವಹಿಸುತ್ತಾರೆ. ಆದ್ದರಿಂದ ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಗುಣಪಡಿಸುವಿಕೆಗಾಗಿ ಕೇಳಬಹುದು.

ಆದರೆ ಪಾಪದಿಂದ ಸಂಪೂರ್ಣ ಬಿಡುಗಡೆಯನ್ನು ಹೊಂದುವಂತೆ ನಾವು ಅನಾರೋಗ್ಯದಿಂದ ಸಂಪೂರ್ಣ ಬಿಡುಗಡೆಯನ್ನು ಹೊಂದಲು ಸಾಧ್ಯವಿಲ್ಲ.

ಯೇಸು ನಮ್ಮ ಸಂಪೂರ್ಣ ವ್ಯಕ್ತಿ ಅಂದರೆ, ಆತ್ಮ, ಪ್ರಾಣ ಮತ್ತು ಶರೀರದ ವಿಮೋಚನೆಗಾಗಿ ಮರಣಹೊಂದಿದರೇ? ಹೌದು. ಖಂಡಿತವಾಗಿಯೂ.

ಆದರೆ ನಾವು ವಾಸ್ತವಿಕತೆಯನ್ನು ಎದುರಿಸಬೇಕು ಮತ್ತು ಭ್ರಮೆ ಮತ್ತು ಭ್ರಾಂತಿಯ (ತಪ್ಪಾದ ಕಲ್ಪನೆಯ) ಜಗತ್ತಿನಲ್ಲಿ ಬದುಕಬಾರದು.

ಕ್ರಿಸ್ತನ ವಿಮೋಚನೆಯ ಪರಿಣಾಮವು ಹೊಸದಾಗಿ ಹುಟ್ಟಿದ ವ್ಯಕ್ತಿಯ ಆತ್ಮದಲ್ಲಿ ಮಾತ್ರ ಪ್ರಾರಂಭವಾಗಿದೆ. ಮತ್ತೆ, ನಮ್ಮ ಆತ್ಮದಲ್ಲಿ, ನಾವು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದೇವೆ ಮತ್ತು ಹೊಸ ಸೃಷ್ಟಿಯಾಗಿ ಮಾಡಲ್ಪಟ್ಟಿದ್ದೇವೆ (ಎಫೆ 2:1-6; 2 ಕೊರಿ.5:17).

ಆದರೆ ನಮ್ಮ ಪ್ರಾಣವನ್ನು (ಮನಸ್ಸು, ಭಾವನೆ ಮತ್ತು ಇಚ್ಛೆ) ಮತ್ತು ಶರೀರವನ್ನು ಇನ್ನೂ ಹೊಸದಾಗಿ ಮಾಡಲಾಗಿಲ್ಲ. ಆ ಎರಡು ಕ್ಷೇತ್ರಗಳಲ್ಲಿ ಶಿಲುಬೆಯ ಮೇಲೆ ಕ್ರಿಸ್ತನ ಕೆಲಸದ ಸಂಪೂರ್ಣ ಪ್ರಯೋಜನವನ್ನು ನಾವು ಇನ್ನೂ ಪಡೆಯಬೇಕಾಗಿದೆ. ನಾವು ನಮ್ಮ ಮೌಲ್ಯಗಳನ್ನು ಪ್ರಪಂಚದ ದೃಷ್ಟಿಕೋನದಿಂದ ದೇವರ ದೃಷ್ಟಿಕೋನಕ್ಕೆ ಬದಲಾಯಿಸಲು ದೇವರಿಗೆ ಅನುಮತಿಸಿದರೆ ನಿಧಾನವಾಗಿ ಮತ್ತು ಹಂತಹಂತವಾಗಿ ನಾವು ನಮ್ಮ ಮನಸ್ಸನ್ನು ನವೀಕರಿಸಬಹುದು (ರೋಮ.12:2).

ಕ್ರಿಸ್ತನು ಹಿಂದಿರುಗುವಾಗ ಮಾತ್ರ ನಮ್ಮ ದೇಹವು ರೂಪಾಂತರಗೊಳ್ಳುತ್ತದೆ (ಫಿಲಿ. 3:21 ಅದನ್ನು ಸ್ಪಷ್ಟವಾಗಿ ಹೇಳುತ್ತದೆ). ಕ್ರಿಸ್ತನು ಹಿಂದಿರುಗುವಾಗ, ನಮ್ಮ ದೇಹವು ಪೂರ್ಣ ಪುನರುತ್ಥಾನದ ಜೀವನವನ್ನು ಆನಂದಿಸುತ್ತದೆ. ಆವಾಗ ಯಾವುದೇ ಕಾಯಿಲೆ ಮತ್ತು ಸಾವು ಇರುವುದಿಲ್ಲ. ಆದರೆ ದೇವರು ಈಗಲೂ ನಮಗೆ ತನ್ನ ಕರುಣೆಯಿಂದ ಸ್ವಲ್ಪಮಟ್ಟಿಗೆ ಮುಂದಣ ಯುಗದ ಬಲವನ್ನು ನಾವು ರುಚಿಸುವುನ್ನು, ಅಂದರೆ ಆತನು ದೈವಿಕವಾಗಿ ನಮ್ಮನ್ನು ಗುಣಪಡಿಸುವ ಬಲದ ರುಚಿಯನ್ನು ನಾವು ಅನುಭವಿಸುವಂತೆ ಆತನು ಅನುಮತಿಸುತ್ತಾನೆ. ಅನೇಕ ವಿಶ್ವಾಸಿಗಳು ತಮ್ಮ ಕಾಯಿಲೆಗಳಿಂದ ದೈವಿಕವಾದ ಗುಣಪಡಿಸುವಿಕೆಯನ್ನು ಅನುಭವಿಸಿದ್ದಾರೆ. ಮತ್ತು ಇದಕ್ಕಾಗಿಯೇ ದೇವರು ಕ್ರಿಸ್ತನ ದೇಹದಲ್ಲಿ ಕೆಲವರಿಗೆ ಗುಣಪಡಿಸುವ ಮತ್ತು ಅದ್ಭುತವಾದ ಉಡುಗೊರೆಗಳನ್ನು ನೀಡಿದ್ದಾರೆ.

ಆದರೆ ದೇಹವನ್ನು ಸಂಪೂರ್ಣವಾಗಿ ಗುಣಪಡಿಸುವುದು ದೇವರ ಸಾರ್ವಭೌಮ ಚಿತ್ತದಲ್ಲಿದೆ ಮತ್ತು ಯಾರನ್ನು ಗುಣಪಡಿಸಬೇಕು ಎಂದು ನಾವು ಅವರಿಗೆ ನಿರ್ದೇಶಿಸಲು ಸಾಧ್ಯವಿಲ್ಲ. ಅಥವಾ ನಾವು ಬಯಸಿದಾಗ ನಮ್ಮ ಹಕ್ಕಿನಂತೆ ನಾವು ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ನಾವು ಮಾನಸಾಂತರ, ಪಾಪದ ಅರಿಕೆ ಮತ್ತು ಕ್ರಿಸ್ತನ ಮರಣದಲ್ಲಿನ ನಂಬಿಕೆಯ ಮೂಲಕ ನಮ್ಮ ಎಲ್ಲಾ ಪಾಪಗಳ ಸಂಪೂರ್ಣ ಕ್ಷಮೆಯನ್ನು ಪಡೆಯಬಹುದು. ಆದರೆ ನಾವು ಗುಣಪಡಿಸುವಿಕೆಯನ್ನು ಆ ರೀತಿಯಾಗಿ ನಮ್ಮ ಹಕ್ಕು ಎಂದು ಹೇಳಲು ಸಾಧ್ಯವಿಲ್ಲ.

ನಾವು ಉಪಶಮನವನ್ನು (ಗುಣ ಹೊಂದುವುದನ್ನು) ನಮ್ಮ ಹಕ್ಕು ಎಂದು ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ನಾವು ರಕ್ಷಣೆ ಹೊಂದಿದಾಗ ನಮ್ಮ ಶರೀರಗಳಲ್ಲಿನ ಶಾಪದ ಪರಿಣಾಮವು ತೆಗೆದು ಹಾಕಲ್ಪಟ್ಟಿಲ್ಲ. ಇದಕ್ಕೆ ಸ್ಪಷ್ಟವಾದ ಪುರಾವೆ ಎಂದರೆ, ವಿಶ್ವಾಸಿಗಳು ಗುಣ ಹೊಂದುವುದಕ್ಕೆ ಜನರು ಎಷ್ಟೋ ಪ್ರಾರ್ಥನೆಯನ್ನು ಮಾಡಿದರೂ ವಿಶ್ವಾಸಿಗಳು ಅಂತಿಮವಾಗಿ ಸಾಯುತ್ತಾರೆ. ಬೆವರು, ದೈಹಿಕ ಬಳಲಿಕೆ ಮತ್ತು ನಿದ್ರೆಯಂತೆ, ಕಾಯಿಲೆ ಮತ್ತು ಮರಣವು ಭೂಮಿಯಲ್ಲಿನ ಶಾಪದ ಪರಿಣಾಮಗಳಾಗಿವೆ. ಕ್ರಿಸ್ತನು ಹಿಂದಿರುಗಿ ಬರುವವರೆಗೆ ಇವೆಲ್ಲವೂ ನಮ್ಮ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಆತ್ಮಗಳೂ ಈ ಶಾಪದಿಂದ ವಿಮೋಚನೆಗೊಂಡರೂ (ಗಲಾತ್ಯ 3:13,14), ನಮ್ಮ ಶರೀರವು ಧೂಳು ಆಗಿರುವುದರಿಂದ ಅದು ಭೂಮಿಯ ಧೂಳಿನ ಮೇಲಿನ ಶಾಪದಿಂದ ಪ್ರಭಾವಿತಗೊಂಡಿದೆ.

ಯೆಶಾಯ 53:5 ಹೇಳುವಂತೆ ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು ಎಂಬುದರ ಬಗ್ಗೆ ನಾವೇನು ಹೇಳೋಣ? ಈ ವಚನಕ್ಕೆ ನಮ್ಮದೇ ಆದ ವ್ಯಾಖ್ಯಾನವನ್ನು ನಾವು ಕೊಡುವ ಬದಲಾಗಿ ಹೊಸ ಒಡಂಬಡಿಕೆಯಲ್ಲಿ ಪವಿತ್ರಾತ್ಮನೇ ಸ್ವತ: ಕೊಡುವ ವ್ಯಾಖ್ಯಾನವನ್ನು ನಾವು ನೋಡೋಣ:

1 ಪೇತ್ರ 2:24ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ. "ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು. ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು".

ಈ ವಚನದಿಂದ ಸ್ಫಟಿಕದ ಹಾಗೆ ಸ್ಪಷ್ಟವಾಗುವುದು ಏನೆಂದರೆ, ಇಲ್ಲಿ ಉಲ್ಲೇಖಿಸಲಪಟ್ಟ, ಗುಣಪಡಿಸುವಿಕೆಯು "ಪಾಪದ ಉಪಶಮನ" ಮತ್ತು "ಆರೋಗ್ಯ"ವನ್ನು "ನೀತಿಯ ಜೀವಿತದ" ಪರಿಣಾಮವಾಗಿ ನಾವು ಪಡೆಯುತ್ತೇವೆ ಎಂಬುದು. ಇದು ಇನ್ನೂ ಪ್ರತಿಪಾದಿಸಲ್ಪಟ್ಟಿರುವುದು ಈ ವಚನ ಇರುವ ಸಂದರ್ಭದಿಂದ. ಇದು ಪಾಪ ಮಾಡದ ಯೇಸುವಿನ ಬಗ್ಗೆ ಮಾತನಾಡುತ್ತದೆ.

ಯೆಶಾಯ 53:4ರಲ್ಲಿ, "ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು"ಎಂದು ಹೇಳಿರುವಂತದ್ದರ ಬಗ್ಗೆ ಏನು, ಇದು ಮತ್ತಾಯ 8:16,17 ರಲ್ಲಿಯೂ ಸಹ ಉಲ್ಲೇಖಿಸಲ್ಪಟ್ಟಿದೆ: "ಸಾಯಂಕಾಲವಾದಾಗ ದೆವ್ವಗಳು ಹಿಡಿದಿದ್ದ ಬಹಳ ಜನರನ್ನು ಅವರು ಆತನ ಬಳಿಗೆ ತಂದರು; ಮತ್ತು ಆತನು ತನ್ನ ಮಾತಿನಿಂದ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥವಾಗಿದ್ದವರೆಲ್ಲರನ್ನೂ ಸ್ವಸ್ಥ ಮಾಡಿದನು. ಹೀಗೆ ಆತನು ತಾನೇ ನಮ್ಮ ಬಲಹೀನತೆಗಳನ್ನು ತಕ್ಕೊಂಡು ರೋಗಗಳನ್ನು ಹೊತ್ತನು ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು"

ಯೇಸುವಿನ ಸೇವೆಯ ಆರಂಭದಲ್ಲಿಯೇ ಈ ಪ್ರವಾದನೆಯು ನೆರವೇರಿತು ಎಂಬುದು ಈ ಭಾಗದಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಆನೇಕರು ಹೇಳಿಕೊಳ್ಳುವ ಪ್ರಕಾರ ಯೇಸು ಶಿಲುಬೆಯಲ್ಲಿ ಮರಣ ಹೊಂದಿದ ನಂತರ ಇದು ನೆರವೇರಿಲ್ಲ. ಯೇಸು ಅಸ್ವಸ್ಥಗೊಂಡವರನ್ನು ಸ್ವಸ್ಥ ಪಡಿಸಿದ ನಂತರ ಈ ಪ್ರವಾದನೆಯು ನೆರವೇರಿದೆ. ಯೇಸು ಎಲ್ಲಾ ನಮ್ಮ ಕಾಯಿಲೆಗಳನ್ನು ಶಿಲುಬೆಯ ಮೇಲೆ ತೆಗೆದುಕೊಂಡರು ಎಂಬುದು ವಾಗ್ದಾನವಲ್ಲ.

ಹಾಗಾಗಿ ನಾವು ಕಾಯಿಲೆಯಲ್ಲಿ ಬಿದ್ದಾಗ ಏನು ಮಾಡಬೇಕು? ಪೌಲನ ಮಾದರಿಯನ್ನು ನಾವೆಲ್ಲರೂ ಹಿಂಬಾಲಿಸೋಣ. "ಶರೀರದಲ್ಲಿರುವ ಮುಳ್ಳನ್ನು" ತನ್ನಿಂದ ಸ್ವಸ್ಥಪಡಿಸುವಂತೆ ಆತನು ಪ್ರಾರ್ಥಿಸಿದನು. ದೇವರು ಪೌಲನಿಗೆ, ಆ ಮುಳ್ಳು ತೆಗೆಯಲ್ಪಡುವುದಿಲ್ಲ, ಆದರೆ ಅದನ್ನು ಜಯಿಸಲು ದೇವರ ಕೃಪೆಯನ್ನು ಪಡೆದುಕೊಳ್ಳುತ್ತಿ ಎಂದು ಹೇಳಿದ್ದನ್ನು ಆತನು ಕೊನೆಯದಾಗಿ ಕೇಳಿಸಿಕೊಂಡನು (2 ಕೊರಿಂಥ 12 : 7-9). ಎಪಪ್ರೋದೀತನ ಪ್ರಕರಣದಲ್ಲಿ ಪೌಲನು ಪ್ರಾರ್ಥಿಸುತ್ತಲೇ ಇದ್ದನು, ಆದರೆ ದೇವರು ಅವನನ್ನು ಕರುಣಿಸಿ ಸ್ವಸ್ಥಪಡಿಸಿದರು (ಫಿಲಿಪ್ಪಿ 2:27). ತ್ರೊಫಿಮನ ಪ್ರಕರಣದಲ್ಲಿ, ಪೌಲನ ಪ್ರಾರ್ಥನೆಯ ಹೊರತಾಗಿಯೂ, ಆತನು ಗುಣ ಹೊಂದಲಿಲ್ಲ (2 ತಿಮೊಥೆ 4:20). ತಿಮೊಥೆಯನ ಪ್ರಕರಣದಲ್ಲಿ, ಪೌಲನು ಆತನಿಗಾಗಿ ಅನೇಕ ಬಾರಿ ಪ್ರಾರ್ಥಿಸಿರಬಹುದು. ಆದರೆ ತಿಮೊಥೆಯನು ಹೊಟ್ಟೆಯ ಅಸ್ವಸ್ಥತೆಯಿಂದ ಬಳಲಿದನು. ಹಾಗಾಗಿ ಪೌಲನು ಕೊನೆಗೆ ಆತನಿಗೆ ದ್ರಾಕ್ಷರಸವನ್ನು ಔಷಧವನ್ನಾಗಿ ತೆಗೆದುಕೋ ಎಂದು ಹೇಳಿದನು (1 ತಿಮೊಥೆ 5:23).

ಹಾಗಾಗಿ ಪ್ರತಿಯೊಂದು ಕಾಯಿಲೆಯ ಸ್ವಸ್ಥತೆಗಾಗಿ ನಾವು ಯಾವಾಗಲೂ ಈ ರೀತಿ ಪ್ರಾರ್ಥಿಸಬೇಕು - ಇದು ಸ್ವಸ್ಥಹೊಂದುವುದು ದೇವರ ಚಿತ್ತವಿಲ್ಲದಿದ್ದಲ್ಲಿ, ನಮಗೆ ಆತನು ಕೃಪೆಯನ್ನು ಕೊಡಬೇಕು ಎಂದು. ಇವೆರೆಡರಲ್ಲಿ ನಮಗೆ ಯಾವುದು ಉತ್ತಮವೋ ಅದನ್ನು ಆತನು ನಿರ್ಧರಿಸಲಿ.

ಇದು ಸಮತೋಲನದ ಸತ್ಯವೇದ ಬೋಧನೆಯಾಗಿದೆ. ನಾವು ಸತ್ಯವನ್ನು ಪ್ರೀತಿಸುವುದಾದಲ್ಲಿ, ಪ್ರತಿಯೊಂದು ಕ್ರೈಸ್ತ ಪಂಗಡದಲ್ಲಿ, ಕಾಯಿಲೆಗೆ ಸಂಬಂಧಿಸಿದ ಅವರ ತತ್ವ ಸಿದ್ಧಾಂತಗಳು ಏನೇ ಇದ್ದರೂ ಸಹ, ಅಲ್ಲಿ ಕಾಯಿಲೆಗೆ ಒಳಗಾದ ವಿಶ್ವಾಸಿಗಳು ಇದ್ದಾರೆ ಎಂದು ನಾವು ಗಮನಿಸುತ್ತೇವೆ. ಆದರೆ ಅನೇಕರು ಈ ವಾಸ್ತವಕ್ಕೆ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತಾರೆ ಏಕೆಂದರೆ ಅವರು ಪೂರ್ವಾಗ್ರಹ ಪೀಡಿತರಾಗಿರುತ್ತಾರೆ.

ಕೇಳಲು ಕಿವಿಯುಳ್ಳವನು ಕೇಳಲಿ.

*ಸೂಚನೆ : "ಚೋಲಿ" ಎಂಬ ಇಬ್ರಿಯ ಪದವು ಯೆಶಾಯ 53:3 ರಲ್ಲಿ "ಸಂಕಟ" ಎಂದು ಅನುವಾದಗೊಂಡಿದೆ (ಅನೇಕ ಇಂಗ್ಲೀಷ್ ಅನುವಾದದಲ್ಲಿ) ಇದರ ನಿಜವಾದ ಅರ್ಥ "ಬಲಹೀನತೆ" ಅಥವಾ "ಕಾಯಿಲೆ" ಎಂಬುದಾಗಿದೆ. ಇದೇ ಪದವು ಧರ್ಮೋಪದೇಶಕಾಂಡ 7:15; ಧರ್ಮೋಪದೇಶಕಾಂಡ 28:61 ಮತ್ತು ಯೆಶಾಯ 1:5 ರಲ್ಲಿ "ಕಾಯಿಲೆ" ಅಥವಾ "ರೋಗ" ಎಂದು ಸರಿಯಾಗಿ ಅನುವಾದಗೊಂಡಿದೆ. ಆದರೆ ಯೇಸು ಎಂದಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ಅನೇಕ ಅನುವಾದಕರು ಬಹುಶ: ನಂಬದೇ ಹೋದದರಿಂದ, ಯೆಶಾಯ 53:3 ರಲ್ಲಿ ನಿಖರವಾಗಿ ಈ ಪದವನ್ನು ಅನುವಾದಿಸಿಲ್ಲ. ಇದರ ಹೊರತಾಗಿ, ಅವರು ತಮ್ಮದೇ ಸ್ವಂತ ಅಭಿಪ್ರಾಯವನ್ನು ಉಪಯೋಗಿಸಿ, ಇಬ್ರಿಯ ಪದವನ್ನು "ಸಂಕಟ" ಅಥವಾ "ಕಷ್ಟ" ಎಂದು ಅನುವಾದಿಸಿದ್ದಾರೆ!! ಕೇವಲ ಹೋಲ್ಮನ್ ಬೈಬಲ್ ಮತ್ತು ಆಂಪ್ಲಿಫೈಡ್ ಬೈಬಲ್ (ಮೇಲೆ ಉಲ್ಲೇಖಿಸಲಾಗಿದೆ) ಮಾತ್ರ ಇಬ್ರಿಯ ಪದವನ್ನು "ಕಾಯಿಲೆ" ಅಥವಾ "ರೋಗ" ಎಂದು ಸರಿಯಾಗಿ ಅನುವಾದಿಸುವಂತ ಧೈರ್ಯ ಮಾಡಿದ್ದಾರೆ. ಇಬ್ರಿಯ ಪದವಾದ "ಚೋಲಿ"ಯು "ಕಾಯಿಲೆ" ಎಂದು ಅರ್ಥೈಸಿರುವುದಕ್ಕೆ ಸ್ಪಷ್ಟವಾದ ರುಜುವಾತು, ಇದೇ ಪದವನ್ನು ಮುಂದಿನ ವಚನದಲ್ಲಿ (ಯೆಶಾಯ 53:4)ಉಪಯೋಗಿಸಿರುವುದನ್ನು ನಾವು ನೋಡುವಾಗ ಸಿಗುತ್ತದೆ. ಇಬ್ರಿಯ ಪದದಲ್ಲಿ, ಇದು "ಸಂಕಟ" ಎಂದು ಅನುವಾದಗೊಂಡಿದೆ. ಆದರೆ ಈ ವಚನದ ಉಲ್ಲೇಖವು ಹೊಸ ಒಡಂಬಡಿಕೆಯ ಮತ್ತಾಯ 8:17 ರಲ್ಲಿ "ಅಸ್ತೇನಿಯ" (ಗ್ರೀಕ್) ಎಂದು ಅನುವಾದಗೊಂಡಿದೆ, ಅದರ ಅರ್ಥ ರೋಗ/ಬಲಹೀನತೆಎಂಬುದಾಗಿ.