WFTW Body: 

ದೇವರ ವಾಕ್ಯವು ”ರಕ್ಷಣೆ” ಯ ಬಗ್ಗೆ ಮೂರು ಕಾಲಗಳಲ್ಲಿ ಮಾತನಾಡುತ್ತದೆ - ಭೂತಕಾಲ (ಎಫೆಸ 2:8), ವರ್ತಮಾನ ಕಾಲ (ಫಿಲಿಪ್ಪಿ 2:12), ಮತ್ತು ಭವಿಷ್ಯತ್ ಕಾಲ (ರೋಮ 13:11) - ಅಥವಾ ಬೇರೆ ಪದಗಳಲ್ಲಿ, ನೀತೀಕರಣ, ಶುದ್ಧೀಕರಣ ಮತ್ತು ಮಹಿಮೆಪಡಿಸುವಿಕೆ. ರಕ್ಷಣೆಯ ಹಂತಗಳು, ಅಸ್ತಿವಾರ ಹಾಗೂ ಮೇಲಿನ ಕಟ್ಟಡ ಇವುಗಳಾಗಿವೆ. ಅಸ್ತಿವಾರವು ಪಾಪದ ಕ್ಷಮಾಪಣೆ ಮತ್ತು ನೀತೀಕರಣ ಇವುಗಳನ್ನು ಒಳಗೊಂಡಿದೆ.

ನೀತೀಕರಿಸಲ್ಪಡುವುದು ಎಂದರೆ ನಾವು ಪಾಪ ಕ್ಷಮಾಪಣೆಯನ್ನು ಪಡೆಯುವುದು ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನದ್ದಾಗಿದೆ. ಇದರ ಜೊತೆಗೆ, ಕ್ರಿಸ್ತನ ಮರಣ-ಪುನರುತ್ಥಾನ-ಏರಲ್ಪಡುವಿಕೆ ಇವುಗಳ ಅಧಾರದ ಮೇಲೆ ನಾವು ದೇವರ ಕಣ್ಣಿನಲ್ಲಿ ನೀತಿವಂತರು, ಎಂಬ ಘೋಷಣೆಯೂ ಅದರಲ್ಲಿ ಸೇರಿದೆ. ಇದು ನಮ್ಮ ಪುಣ್ಯಕಾರ್ಯಗಳ ನಿಮಿತ್ತದಿಂದ ಆಗಿಲ್ಲ (ಎಫೆಸ 2:8,9), ಏಕೆಂದರೆ ನಮ್ಮ ಧರ್ಮ ಕಾರ್ಯಗಳೆಲ್ಲವೂ ದೇವರ ಕಣ್ಣಿನಲ್ಲಿ ಹೊಲೆಯ ಬಟ್ಟೆಯಂತಿವೆ (ಯೆಶಾಯ 64:6). ನಾವು ಕ್ರಿಸ್ತನ ನೀತಿಯನ್ನು ಧರಿಸಿಕೊಂಡವರಾಗಿದ್ದೇವೆ (ಗಲಾತ್ಯ 3:27). ಕ್ಷಮಿಸಲ್ಪಡುವಿಕೆ ಹಾಗೂ ನೀತೀಕರಣಕ್ಕೆ ಇರುವಂತ ಷರತ್ತುಗಳು ಯಾವುವೆಂದರೆ, ಮಾನಸಾಂತರ ಮತ್ತು ನಂಬಿಕೆ ಇವುಗಳು (ಅ.ಕೃತ್ಯಗಳು 20:21).

ನಿಜವಾದ ಮಾನಸಾಂತರವು ಹಿಂದಿರುಗಿಸುವಂತ ಫಲವನ್ನು ನಮ್ಮಲ್ಲಿ ತರಬೇಕು - ಅಂದರೆ ನಾವು ಅನ್ಯಾಯವಾಗಿ ಹೊಂದಿರುವ ಹಣವನ್ನು, ವಸ್ತುಗಳನ್ನು ಮತ್ತು ಬಾಕಿ ಇರುವಂತ ತೆರಿಗೆಗಳನ್ನು (ಅಂದರೆ ಮತ್ತೊಬ್ಬರಿಗೆ ಸೇರಿರುವಂತದ್ದು) ಹಿಂದಿರುಗಿಸುವುದಾಗಿದೆ, ಮತ್ತು ನಾವು ಯಾರಿಗೆ ತಪ್ಪನ್ನು ಎಸಗಿದ್ದೇವೋ ಅವರಿಂದ ಕ್ಷಮೆ ಕೇಳುವಂತದ್ದು, ಅದು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ (ಲೂಕ 19:8,9). ದೇವರು ನಮ್ಮನ್ನು ಕ್ಷಮಿಸುವಾಗ ನಾವೂ ಸಹ ಇತರರನ್ನು ಅದೇ ರೀತಿಯಲ್ಲಿ ಕ್ಷಮಿಸಬೇಕೆಂದು ಅವರು ಆದೇಶಿಸಿದ್ದಾರೆ. ನಾವು ಇದನ್ನು ಮಾಡಲು ವಿಫಲರಾದರೆ, ದೇವರು ತನ್ನ ಕ್ಷಮಾಪಣೆಯನ್ನು ಹಿಂತೆಗೆದುಕೊಳ್ಳುತ್ತಾರೆ (ಮತ್ತಾಯ 18:23-35). ಮಾನಸಾಂತರ ಮತ್ತು ನಂಬಿಕೆಯು ನೀರಿನಲ್ಲಿ ಮುಳುಗಿಸುವ ದೀಕ್ಷಾಸ್ನಾನಕ್ಕೆ ಮುನ್ನಡೆಸಬೇಕು; ನಾವು ಇದರ ಮುಖಾಂತರ ದೇವರಿಗೆ, ಮನುಷ್ಯರಿಗೆ ಮತ್ತು ದೆವ್ವಗಳಿಗೆ ಸಾರ್ವಜನಿಕವಾಗಿ ಸಾಕ್ಷೀಕರಿಸುವುದು ಏನೆಂದರೆ, ನಮ್ಮ ಹಳೆ ಮನುಷ್ಯನು ನಿಜಕ್ಕೂ ಸತ್ತು ಹೂಣಲ್ಪಟ್ಟಿದ್ದಾನೆ ಎಂಬುದಾಗಿ (ರೋಮ 6:4,6). ಇದರ ನಂತರ ನಾವು ಪವಿತ್ರಾತ್ಮನ ಸ್ನಾನವನ್ನು ಸ್ವೀಕರಿಸಬಹುದು, ಮತ್ತು ಇದರಿಂದಾಗಿ ನಾವು ನಮ್ಮ ಜೀವನ ಮತ್ತು ನಮ್ಮ ತುಟಿಗಳ ಮೂಲಕ ಕ್ರಿಸ್ತನ ಸಾಕ್ಷಿಗಳಾಗಿ ನಿಲ್ಲುವುದಕ್ಕೆ ಬಲವನ್ನು ಹೊಂದುತ್ತೇವೆ (ಅ.ಕೃತ್ಯಗಳು 1:8). ಪವಿತ್ರಾತ್ಮನಲ್ಲಿನ ಸ್ನಾನವು ಒಂದು ವಾಗ್ದಾನವಾಗಿದ್ದು, ಇದನ್ನು ಎಲ್ಲಾ ದೇವರ ಮಕ್ಕಳು ನಂಬಿಕೆಯಿಂದ ಸ್ವೀಕರಿಸಿಕೊಳ್ಳಬಹುದಾಗಿದೆ (ಮತ್ತಾಯ 3:11; ಲೂಕ 11:13). ಪ್ರತಿಯೊಬ್ಬ ಶಿಷ್ಯನೂ ಹೊಂದಿರುವ ಸೌಭಾಗ್ಯವೇನೆಂದರೆ, ತಾನು ನಿಜಕ್ಕೂ ದೇವರ ಮಗನಾಗಿದ್ದೇನೆ ಎಂಬುದಕ್ಕೆ ಪವಿತ್ರಾತ್ಮನಿಂದ ಸಾಕ್ಷಿ ಪಡೆಯುವಂತದ್ದು (ರೋಮ 8:16) ಮತ್ತು ಅದಲ್ಲದೆ, ಪವಿತ್ರಾತ್ಮ ವರವನ್ನು ಸ್ವೀಕರಿಸಿಕೊಂಡಿದ್ದೇನೆ ಎಂಬ ನಿಶ್ಚಿತತೆಯನ್ನು ಅರಿತುಕೊಂಡಿರುವಂತದ್ದು (ಅ.ಕೃತ್ಯಗಳು 19:2).

ಶುದ್ಧೀಕರಣವು ಕಟ್ಟಡದ ಮೇಲಿನ ಭಾಗವಾಗಿದೆ. ’ಶುದ್ಧೀಕರಣ’ದ ಕಾರ್ಯವಿಧಾನವು (ಇದರ ಅರ್ಥ, ಪಾಪದಿಂದ ಮತ್ತು ಲೋಕದಿಂದ ’ಪ್ರತ್ಯೇಕಿಸಲ್ಪಡುವುದು’ ಎಂಬುದಾಗಿ) ಹೊಸ ಹುಟ್ಟಿನಿಂದ ಪ್ರಾರಂಭವಾಗುತ್ತದೆ (1 ಕೊರಿಂಥ 1:2) ಮತ್ತು ಅದು ನಮ್ಮ ಜೀವನದ ಉದ್ದಕ್ಕೂ ಮುಂದುವರೆಯಬೇಕು (1 ಥೆಸಲೋನಿಕ 5:23,24). ಈ ಕಾರ್ಯವನ್ನು ದೇವರು ನಮ್ಮಲ್ಲಿ ಆರಂಭಿಸುವದು, ತನ್ನ ಆಜ್ಞೆಗಳನ್ನು ಪವಿತ್ರಾತ್ಮನ ಮುಖಾಂತರ ನಮ್ಮ ಹೃದಯದಲ್ಲಿಯೂ ಮತ್ತು ಮನಸ್ಸಿನಲ್ಲಿಯೂ ಬರೆಯುವ ಮೂಲಕ; ಆದರೆ ನಾವು ನಿರ್ವಹಿಸಬೇಕಾದ ಇನ್ನೊಂದು ಭಾಗವೂ ಇರುತ್ತದೆ, ಅದು ಬಹು ಹೆಚ್ಚಿನ ಮನೋಭೀತಿಯಿಂದ ನಡುಗುವವರಾಗಿ ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುವಂಥದ್ದು (ಫಿಲಿಪ್ಪಿ 2:12,13). ನಾವು ಪವಿತ್ರಾತ್ಮನ ಬಲದಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವವರಾಗಿರಬೇಕು (ರೋಮ 8:13). ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು, ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸಬೇಕು (2 ಕೊರಿಂಥ 7:1).

ಪವಿತ್ರಾತ್ಮನೊಟ್ಟಿಗೆ ಈ ಒಂದು ಕಾರ್ಯದಲ್ಲಿ ಸಹಕರಿಸುವಂತ ಒಬ್ಬ ಶಿಷ್ಯನು ಅತ್ಯಾಸಕ್ತಿಯಿಂದಲೂ ಮತ್ತು ಮನ:ಪೂರ್ವಕವಾಗಿಯೂ ಇದ್ದಲ್ಲಿ, ಶುದ್ಧೀಕರಣದ ಕಾರ್ಯವು ಆತನ ಜೀವಿತದಲ್ಲಿ ತುಂಬಾ ವೇಗವಾಗಿ ಸಾಗುತ್ತದೆ. ಯಾರು ಆತ್ಮನ ಮುನ್ನಡೆಸುವಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲವೋ, ಅಂಥವರ ಜೀವಿತದಲ್ಲಿ ಈ ಕಾರ್ಯವು ತುಂಬಾ ನಿಧಾನವಾಗಿ ಮತ್ತು ಕುಂಟುತ್ತಾ ಸಾಗುತ್ತದೆ. ಶುದ್ಧೀಕರಣಕ್ಕಾಗಿ ಪೂರ್ಣಹೃದಯ ನಮ್ಮಲ್ಲಿದೆಯೋ ಇಲ್ಲವೋ ಎಂಬುದು ಶೋಧನೆಯ ಸಮಯಗಳಲ್ಲಿ ನಿಜವಾಗಿಯೂ ಪರೀಕ್ಷೆಗೆ ಒಳಪಡುತ್ತದೆ. ಪವಿತ್ರರಾಗಲು ನಮ್ಮ ಹೃದಯದಲ್ಲಿ ಧರ್ಮಶಾಸ್ತ್ರದ ನೀತಿಯು ತುಂಬಿಸಲ್ಪಡಬೇಕು - ಮತ್ತು ಹಳೆ ಒಡಂಬಡಿಕೆಯಲ್ಲಿ ಇದ್ದಂತೆ ಕೇವಲ ಹೊರಗಡೆ ಇರುವದಲ್ಲ (ರೋಮ 8:4). ಮತ್ತಾಯ 5:17-48ರಲ್ಲಿ ಯೇಸು ಇದನ್ನೇ ಒತ್ತಿ ಹೇಳಿದ್ದಾರೆ. ಯೇಸುವು ತಿಳಿಸಿದಂತೆ, ಧರ್ಮಶಾಸ್ತ್ರದ ಅವಶ್ಯ ಬೇಡಿಕೆಯ ಸಾರಾಂಶ, ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು ಮತ್ತು ನಮ್ಮ ನೆರೆಯವನನ್ನು ನಮ್ಮಂತೆಯೇ ಪ್ರೀತಿಸಬೇಕು ಎಂಬುದೇ (ಮತ್ತಾಯ 22:36-40). ದೇವರು ನಮ್ಮ ಹೃದಯಗಳಲ್ಲಿ ಪ್ರೀತಿಯ ನಿಯಮವನ್ನು ಬರೆಯಲು ಇಚ್ಛಿಸುತ್ತಾರೆ, ಏಕೆಂದರೆ ಅದು ಆತನ ದೈವ ಸ್ವಭಾವವಾಗಿದೆ (ಇಬ್ರಿಯ 8:10; 2 ಪೇತ್ರ 1:4). ಇದು ಹೊರಗಡೆ ಪ್ರಕಟವಾಗುವದು ಹೇಗೆಂದರೆ, ನಮಗೆ ಗೊತ್ತಿರುವಂತ ಪಾಪದ ಮೇಲೆ ಜಯವನ್ನು ಸಾಧಿಸುವುದಾಗಿದೆ ಮತ್ತು ಯೇಸುವಿನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಾಗಿದೆ (ಯೋಹಾನ 14:15).

ಯೇಸುವು ಶಿಷ್ಯತ್ವಕ್ಕಾಗಿ ಇರಿಸಿದ ಷರತ್ತುಗಳನ್ನು ಮೊದಲು ಪೂರೈಸದೇ, ಇಂತಹ ಜೀವನಕ್ಕೆ ಪ್ರವೇಶ ಹೊಂದುವುದು ಆಸಾಧ್ಯವಾಗಿದೆ (ಲೂಕ 14:26-33). ಇದರ ಮುಖ್ಯಾಂಶ ಏನೆಂದರೆ, ನಮ್ಮ ಎಲ್ಲಾ ಸಂಬಂಧಿಕರಿಗೂ ಹಾಗೂ ನಮ್ಮ ಸ್ವಾರ್ಥ ಜೀವಿತಕ್ಕೂ ಮೇಲಾಗಿ, ಕರ್ತನಿಗೆ ಮೊದಲ ಸ್ಥಾನ ನೀಡುವುದು ಮತ್ತು ನಮ್ಮ ಎಲ್ಲಾ ಸ್ವತ್ತು ಮತ್ತು ಐಶ್ವರ್ಯದ ಸೆಳೆತದಿಂದ ದೂರವಾಗುವುದು. ನಾವು ಮೊದಲು ಈ ಒಂದು ಇಕ್ಕಟ್ಟಾದ ಬಾಗಿಲಿನ ಒಳಕ್ಕೆ ಹೋಗಬೇಕು. ನಂತರ ಶುದ್ಧೀಕರಣವೆಂಬ ಇಕ್ಕಟ್ಟಾದ ಮಾರ್ಗ ಸಿಗುತ್ತದೆ. ಯಾರು ಪರಿಶುದ್ಧತೆಯನ್ನು ಹೊಂದಲು ಪ್ರಯತ್ನಿಸುವುದಿಲ್ಲವೋ, ಅವರು ಕರ್ತನನ್ನು ನೋಡುವುದಿಲ್ಲ (ಇಬ್ರಿಯ 12:14).

ನಮ್ಮ ಮನಸ್ಸಾಕ್ಷಿಯಲ್ಲಿ ಯಾವಾಗಲೂ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿದೆ (ಇಬ್ರಿಯ 7:19; 9:9,14), ಆದರೆ ನಾವು ಯೇಸುವಿನ ಹಿಂತಿರುಗುವಿಕೆಯಲ್ಲಿನ ನಮ್ಮ ಮಹಿಮಾ ಶರೀರವನ್ನು ಹೊಂದುವವರೆಗೂ ಪಾಪವಿಲ್ಲದೇ ಪರಿಪೂರ್ಣರಾಗಿ ನಾವು ಇರಲು ಸಾಧ್ಯವಿಲ್ಲ (1 ಯೋಹಾನ 3:2). ಆಗ ಮಾತ್ರವೇ ನಾವು ಆತನ ರೀತಿಯಲ್ಲಿ ಆಗುತ್ತೇವೆ. ಆದರೆ ಆತನು ನಡೆದಂತೆ ನಾವು ನಡೆಯಬೇಕು (ಜೀವಿಸಬೇಕು) (1 ಯೋಹಾನ 2:6). ನಾವು ಈ ಒಂದು ಭ್ರಷ್ಟ ಶರೀರವನ್ನು ಎಲ್ಲಿಯವರೆಗೆ ಹೊಂದಿರುತ್ತೇವೋ, ನಾವು ಎಷ್ಟೇ ಶುದ್ಧೀಕರಿಸಿಕೊಂಡರೂ, ನಮಗೆ ಗೊತ್ತಿಲ್ಲದೇ ಇರುವಂತ ಪಾಪಗಳನ್ನು ನಾವು ಕಂಡುಕೊಳ್ಳುತ್ತಲೇ ಇರುತ್ತೇವೆ (1 ಯೋಹಾನ 1:8). ಆದರೆ ನಾವು ನಮ್ಮ ಮನಸ್ಸಾಕ್ಷಿಯಲ್ಲಿ ಪರಿಪೂರ್ಣರಾಗಿರಬಹುದು (ಅ.ಕೃತ್ಯಗಳು 24:16) ಮತ್ತು ಈಗಲೂ ಸಹ ಮನಸ್ಸಾಕ್ಷಿಗೆ ಗೊತ್ತಾಗುವಂತ ಪಾಪಗಳಿಂದ ನಾವು ಬಿಡುಗಡೆಯನ್ನು ಹೊಂದಬಹುದು (1 ಯೋಹಾನ 2:1a), ನಾವು ಪೂರ್ಣ ಹೃದಯವುಳ್ಳವರಾಗಿದ್ದರೆ ಇದು ಸಾಧ್ಯವಿದೆ (1 ಕೊರಿಂಥ 4:4).

ನಾವು ಈ ರೀತಿಯಾಗಿ ಕ್ರಿಸ್ತನ ಬರೋಣಕ್ಕಾಗಿ ಮತ್ತು ನಮ್ಮ ಮಹಿಮೆಪಡಿಸುವಿಕೆಗಾಗಿ ಕಾಯುತ್ತೇವೆ - ಅದು ನಮ್ಮ ರಕ್ಷಣೆಯ ಕೊನೆಯ ಭಾಗವಾಗಿದೆ; ಆಗ ನಾವು ಪಾಪವಿಲ್ಲದ ಪರಿಪೂರ್ಣತೆಯನ್ನು ಹೊಂದುತ್ತೇವೆ (ರೋಮ. 8:23; ಫಿಲಿಪ್ಪಿ. 3:21)).