ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಯೋಹಾನನ ಸುವಾರ್ತೆಯಲ್ಲಿ ಯೇಸುವು ಪವಿತ್ರಾತ್ಮನ ಮೂಲಕ ಸಾಧ್ಯವಿರುವ ಅತ್ಮಿಕ ಬೆಳವಣಿಗೆಯ ಮೂರು ಮಟ್ಟಗಳನ್ನು ವಿವರಿಸಲು ನೀರಿನ ಚಿಹ್ನೆಯನ್ನು ಬಳಸಿದ್ದಾನೆ.

1. ಯೋಹಾನ 3:5 ರಲ್ಲಿ ಯೇಸುವು "ನೀರಿನಿಂದಲೂ ಆತ್ಮನಿಂದಲೂ ಹುಟ್ಟುವುದರ" ಬಗ್ಗೆ ಹೇಳುತ್ತಾನೆ. ಇದು "ರಕ್ಷಣಾ ಪಾತ್ರೆ"ಯಾಗಿದೆ.( ಕೀರ್ತನೆ 116:13 ). ಇದು ಕ್ರಿಸ್ತೀಯ ಜೀವಿತದ ಪ್ರಾರಂಭವಾಗಿದೆ. ಈ ನೀರಿನ ಪಾತ್ರೆಯಿಂದ ನಾವು ಶುದ್ದೀಕರಿಸಲ್ಪಟ್ಟು ದೇವರ ಮಕ್ಕಳಾಗಿ ಆತನ ರಾಜ್ಯಕ್ಕೆ ಪ್ರವೇಶಿಸುತ್ತೇವೆ.

2. ಯೋಹಾನ 4:14 ರಲ್ಲಿ ಯೇಸುವು ಈ ಪಾತ್ರೆಯು "ಉಕ್ಕುವ ಒರತೆ"ಯಾಗುವುದರ ಬಗ್ಗೆ ಹೇಳುತ್ತಾನೆ. ಇದು ಪವಿತ್ರಾತ್ಮನಲ್ಲಿ ಇನ್ನೂ ಆಳವಾದ ಜೀವಿತವಾಗಿದೆ. ಇಲ್ಲಿ ನಮ್ಮ ಆಂತರ್ಯದ ಹಂಬಲವು ನೀಗಿಸಲ್ಪಟ್ಟು ನಾವು ನಿರಂತರವಾದ ಜಯದಲ್ಲಿಯೂ ಆನಂದದಲ್ಲಿಯೂ ಯಾವ ಕೊರತೆಯಿಲ್ಲದೆ ಜೀವಿಸುತ್ತೇವೆ. ತನ್ನ ಮನೆಯಲ್ಲಿ ಬಾವಿ ಇರುವ ಮನುಷ್ಯನು ನಗರಪಾಲಿಕೆ ಕೊಡುವ ನೀರಿನ ಮೇಲೆ ಅವಲಂಬಿಸಿರುವುದಿಲ್ಲ. ಬೇರೆ ಯಾವನೂ ಈ ನೀರನ್ನು ನಿಲ್ಲಿಸಲಾರನು. ಯಾಕೆಂದರೆ ಇದು ಅವನ ಮನೆಯ ಆವರಣದಲ್ಲಿದೆ. ನಿರಂತರವಾದ ಸಮೃದ್ಧಿಯ ರಹಸ್ಯವನ್ನು ತಿಳಿದವನು ಹೀಗೆ ಜೀವಿಸುತ್ತಾನೆ. ಅವನ ಆನಂದವನ್ನೂ, ಶಾಂತಿಯನ್ನೂ ಮತ್ತು ಜಯವನ್ನು ಯಾರೂ ಕಸಿದುಕೊಳ್ಳಲಾರರು ( ಯೋಹಾನ 16: 22).

3. ಯೋಹಾನ 7:38 ರಲ್ಲಿ ಯೇಸುವು ಮುಂದುವರಿದು, ಈ ಬಾವಿಯು ವಿಶ್ವಾಸಿಯ ಮೂಲಕ ಹೊಳೆಯಾಗಿ, ಮತ್ತು "ಜೀವಕರವಾದ ನೀರಿನ ಹೊಳೆಗಳಾಗಿ ಹರಿಯುವವು" ಎಂದು ಹೇಳಿದನು. ಇದು ಇತರರಿಗೆ ಹರಿಯುವ ಸಮೃದ್ಧಿಯ ಚಿತ್ರವಾಗಿದೆ. ಇಂಥಹ ವ್ಯಕ್ತಿಯು ಇತರರ ಬಾಯಾರಿಕೆಯನ್ನು ನೀಗಿಸುವಂಥವನಾಗಿರುತ್ತಾನೆ. ಬಾವಿಯು ನಮ್ಮ ಬಾಯಾರಿಕೆಯನ್ನು ನೀಗಿಸುವುದಾದರೆ, ಜೀವಕರವಾದ ಹೊಳೆಗಳು ನಾವು ಹೋದಲ್ಲೆಲ್ಲಾ ಜನರಿಗೆ ಆಶೀರ್ವಾದ ನಿಧಿಯಾಗುವಂತೆ ಮಾಡುತ್ತದೆ.

ದೇವರು ಅಬ್ರಹಾಮನನ್ನು ಹೀಗೆ ಆಶೀರ್ವದಿಸಿದನು "ನಾನು ನಿನ್ನನ್ನು ಆಶೀರ್ವದಿಸಿ........ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು ಎಂದು ಹೇಳಿದನು" ( ಆದಿ. 12:2 3). ಈ ಆಶೀರ್ವಾದವು ಈಗ ಪವಿತ್ರಾತ್ಮನ ಮೂಲಕ ನಮ್ಮದಾಗಬಹುದು ( ಗಲಾತ್ಯ. 3:14) . ಈ ರೀತಿಯಾಗಿ ನಮ್ಮಿಂದ ಜೀವಕರವಾದ ಹೊಳೆಗಳು ಹರಿಯುವ ಹಾಗೆ ದೇವರು ನಮ್ಮನ್ನು ಆಶೀರ್ವದಿಸಿದರೆ, ಅನೇಕ ಕುಟುಂಬಗಳು ನಮ್ಮ ದೇಶದಲ್ಲಿಯೂ, ಇತರ ದೇಶಗಳಲ್ಲಿಯೂ ಆಶೀರ್ವದಿಸಲ್ಪಡುವವು.

ಸುವಾರ್ತೆಯ ಶುಭ ಸಂದೇಶವೇನೆಂದರೆ ನಾವು ನಮ್ಮ ಪಾಪದಿಂದ ರಕ್ಷಿಸಲ್ಪಟ್ಟು ಇತರರಿಗೆ ಆಶಿರ್ವಾದನಿಧಿಯಾಗಿರಬಹುದು. ಈಗ ನಾವು ಜೀವಕರವಾದ ಹೊಳೆಗಳನ್ನು ನಿರಂತರವಾಗಿ ಹೊಂದಿಕೊಂಡು, ನಾವು ಸಂಧಿಸುವ ಪ್ರತಿ ಕುಟಂಬಕ್ಕೆ ಆಶೀರ್ವಾದನಿಧಿಯಾಗಬಹುದು. ದೇವರು ಹೇಗೆ ನಮಗೆ ಕರುಣೆ ತೋರಿಸಿದನೋ ಹಾಗೆಯೇ ನಾವು ಇತರರಿಗೆ ಕರುಣೆ ತೋರಿಸುವವರಾಗುತ್ತೇವೆ. ದೇವರು ನಮ್ಮನ್ನು ಬಿಡುಗಡೆ ಮಾಡಿದಂತೆ ನಾವೂ ಇತರರನ್ನು ಬಿಡುಗಡೆ ಮಾಡಬಹುದು. ನಮ್ಮನ್ನು ದೇವರು ಆಶೀರ್ವದಿಸಿದ ಹಾಗೆ ಇತರರನ್ನು ನಾವು ಆಶೀರ್ವದಿಸಬಹುದು. ನಮಗೆ ದೇವರು ಹೇಗೆ ಉಚಿತವಾಗಿ ಕೊಟ್ಟಿದ್ದಾನೋ, ಹಾಗೆಯೇ ನಾವೂ ಸಹ ಇತರರಿಗೆ ಉಚಿತವಾಗಿ ಕೊಡಬಹುದು. ದೇವರ ಹಾಗೆ ನಾವೂ ಸಹ ದೊಡ್ಡಮನಸ್ಸುಳ್ಳವರಾಗಿರಬಹುದು.

ಎ.ಡಬ್ಲ್ಯೂ. ಟೋಜರ್ ರವರು "ಆತ್ಮೀಕ ಬಲದ ಐದು ನಿರ್ಣಯಗಳು" ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ:

"ನಿಮ್ಮ ಆತ್ಮೀಕ ಬೆಳವಣಿಗೆಯ ಬಗ್ಗೆ ನೀವು ಗಂಭೀರವಾಗಿದ್ದರೆ, ಹೊಸ ಆನಂದ, ಹೊಸ ಬಲ, ಹೊಸ ಜೀವ ಪಡೆದುಕೊಳ್ಳಬೇಕಿದ್ದರೆ ನಿಮ್ಮ ಜೀವಿತದಲ್ಲಿ ನೀವು ಕೆಲವು ಖಂಡಿತವಾದ ನಿರ್ಣಯಗಳನ್ನು ಮಾಡಿ ಅವುಗಳನ್ನು ನಿರಂತರವಾಗಿ ಪಾಲಿಸಬೇಕು.

ಒಂದು ನಿರ್ಣಯವೇನೆಂದರೆ: ಒಬ್ಬನಿಗೆ ನೋವುಂಟು ಮಾಡುವ ಯಾವುದೇ ವಿಷಯವನ್ನು ಇನ್ನೊಬ್ಬನಿಗೆ ಎಂದಿಗೂ ಹೇಳದಿರಿ.

'ಪ್ರೀತಿಯು ಅನೇಕ ಪಾಪಗಳನ್ನು ಮುಚ್ಚುತ್ತದೆ'( 1 ಪೇತ್ರ 4:8) . ಚಾಡಿಕೋರರಿಗೆ ದೇವರ ದಯೆ ದೊರಕದು. ದೇವರ ಇನ್ನೊಬ್ಬ ಮಗನ ತಪ್ಪು ನಿನಗೆ ಗೊತ್ತಿದ್ದರೆ ಅದು ಅವನ ಹೆಸರನ್ನು ಹಾಳುಮಾಡುವಂತದ್ದಾಗಿದ್ದರೆ ಅದನ್ನು ನಿತ್ಯವಾಗಿ ಹುಗಿದು(ಹೂತು)ಬಿಡು. ದೇವರು ಅದನ್ನು ನೋಡಿಕೊಳ್ಳುವನು. ನೀವು ಮಾಡುವ ತೀರ್ಪಿಗೆ ಸರಿಯಾಗಿ ತೀರ್ಪಾಗುವದು' ( ಮತ್ತಾಯ 7:2 )". ದೇವರು ನಿಮಗೆ ಒಳ್ಳೇದನ್ನು ಮಾಡಲು ನೀವು ಬಯಸಿದರೆ, ನೀವು ದೇವರ ಇತರ ಮಕ್ಕಳಿಗೆ ಒಳಿತನ್ನು ಮಾಡಬೇಕು. ನಮ್ಮ ತಂದೆಯ ನಿಯಮವೇನೆಂದರೆ, ಮೇಜಿನ ಸುತ್ತಲೂ ಕುಳಿತಿರುವ ಆತನ ಇತರ ಮಕ್ಕಳ ಬಗ್ಗೆ ನೀನು ಇನ್ನೊಬ್ಬರಿಗೆ ಹೇಳದಿರುವುದು ಅವರು ಯಾವುದೇ ಪಂಗಡದವರು, ದೇಶದವರು, ಯಾವುದೇ ಹಿನ್ನೆಲೆಯಿಂದ ಬಂದವರಾಗಿರಬಹುದು (ಪರಿಶುದ್ಧತೆಯ ಸೌಂದರ್ಯ ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ).

'ಒಬ್ಬನ ಹೆಸರು ಹಾಳು ಮಾಡುವ ಯಾವ ವಿಷಯವಿದ್ದರೂ ಅದನ್ನು ಇತರರಿಗೆ ಹೇಳದಿರುವುದು'- ಈ ನಿರ್ಣಯವನ್ನು ಇಂದು, ಈ ವರ್ಷವಿಡೀ ಮತ್ತು ಎಂದೆಂದಿಗೂ ಪಾಲಿಸುವುದಾದರೆ ನಮಗೆ ಒಳಿತಾಗುವುದು. ಹಿಂದಿನ ವರ್ಷಗಳಲ್ಲಿ ಈ ನಿರ್ಣಯವನ್ನು ಮಾಡಿ ಜೀವಿಸುವವರು, ತಮ್ಮ ಪ್ರತಿ ನಿತ್ಯದ ಸಂಭಾಷಣೆಯಲ್ಲಿ ತುಚ್ಛವಾದದನ್ನು ನಿರಾಕರಿಸಿ ಇತರರಿಗೆ ಪ್ರಯೋಜನಕಾರಿಯಾಗುವ ಮಾತನ್ನೇ ಆಡಿದ್ದರಿಂದ, ದೇವರು ಅವರನ್ನು ತನ್ನ ಬಾಯಿಯನ್ನಾಗಿ ಮಾಡಿದ್ದಾನೆ ( ಯೆರೆಮೀಯ 15:19) .

ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿ ಅವರನ್ನು ಬಿಡುಗಡೆ ಮಾಡಿದರೆ, ಈ ವರ್ಷ ಮಾತ್ರವಲ್ಲ, ಪ್ರತೀ ವರ್ಷವೂ ನಾವು ಆನಂದಭರಿತವಾಗಿ ಜೀವಿಸಲು ಸಾಧ್ಯ. ಆ ಹಗೆತನಗಳನ್ನು ಸಂಪೂರ್ಣವಾಗಿ ಹೂಣಿಡಿರಿ. ಎಲ್ಲರಿಗೂ ಕರುಣೆಯನ್ನು ತೋರಿಸಿ