WFTW Body: 

ಹೊಸ ಒಡಂಬಡಿಕೆಯ ಕೆಳಗಿರುವ ನಿಜವಾದ ದೇವರ ಸೇವಕನು ಯಾರು ಎಂಬುದಾಗಿ ಸತ್ಯವೇದದಲ್ಲಿನ ಮೂರು ವಚನಗಳು ನಮಗೆ ತಿಳಿಸಲ್ಪಟ್ಟಿದೆ. ಈ ಮೂರು ವಚನಗಳನ್ನು ನಾವು ಮೊದಲಿನ ಅಭಿಪ್ರಾಯಗಳನ್ನು ಇಟ್ಟುಕೊಳ್ಳದೇ ಓದಿದಾಗ ಮತ್ತು ಇಂದಿನ ದಿನಮಾನಗಳಲ್ಲಿ ನಾವು ತಿಳುಕೊಳ್ಳಲು ಬಯಸುವಾಗ, ನಾವೆಲ್ಲರೂ ದೇವರ ಸೇವಕರು ಎಂಬುದಾಗಿ ಗೊತ್ತಾಗುತ್ತದೆ. ಹಳೆ ಒಡಂಬಡಿಕೆಯ ಕೆಳಗೆ, ಕೇವಲ ಲೇವಿಯರು ಮಾತ್ರ ದೇವರ ಸೇವಕರಾಗಬೇಕಾಗಿತ್ತು. ಆಗ ಅವರು ಯಾವುದೇ ಇಹಲೋಕದ ಕೆಲಸಗಳನ್ನು ಮಾಡುವಂತಿರಲಿಲ್ಲ ಮತ್ತು ಅವರು ಇಸ್ರಾಯೇಲಿನ ಬೇರೆ ಕುಲದವರು ನೀಡುವಂತ ದಶಮಾಂಶವನ್ನು ತೆಗೆದುಕೊಳ್ಳಬೇಕಿತ್ತು. ಬಾಬೇಲೋನಿನ ಕ್ರೈಸ್ತತ್ವವು ಇಂದು ಬೋಧಿಸುವುದೇನೆಂದರೆ, ಹೊಸ ಒಡಂಬಡಿಕೆಯ ಕೆಳಗೂ ಸಹ, ಯಾರು ತಮ್ಮ ಲೌಕಿಕ ಕೆಲಸಗಳನ್ನು ಬಿಟ್ಟುಕೊಡುತ್ತಾರೋ, ಅವರು ದೇವರ ಸೇವಕರಾಗಬಹುದು ಮತ್ತು ಅವರು ಬೇರೆ ಕ್ರೈಸ್ತರು ಕೊಡುವಂತ ದಶಮಾಂಶದ ಸಹಾಯದಿಂದ ಜೀವಿಸಬಹುದು ಎಂಬುದಾಗಿ. ಆದರೆ ಇದು ಮನುಷ್ಯನ ಸಂಪ್ರದಾಯವುಳ್ಳ ಬೋಧನೆಯೇ ಹೊರತು, ಸತ್ಯವೇದದ ಬೋಧನೆಯಲ್ಲ.

1. ಪಾಪದಿಂದ ಬಿಡುಗಡೆ ಹೊಂದುವುದು.

”ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ದರಾಗುವದೇ ನಿಮಗೆ ಫಲ” (ರೋಮ 6:22).

ದೇವರ ಸೇವಕರಾಗುವುದಕ್ಕೆ ಬೇಕಾಗಿರುವ ಮೊದಲ ಅಗತ್ಯತೆಯು ಪಾಪದಿಂದ ಬಿಡುಗಡೆ ಹೊಂದುವುದಾಗಿದೆ. ಪಾಪದಿಂದ ಬಿಡುಗಡೆ ಹೊಂದುವುದಕ್ಕಿಂತ ಇಹಲೋಕದ ಕೆಲಸವನ್ನು ಬಿಡುವುದು ತುಂಬಾ ಸುಲಭವಾಗಿದೆ. ಯೇಸು ಇಹಲೋಕದ ಕೆಲಸವನ್ನು ಮಾಡಿದರು. ಹಾಗಿದ್ದರೂ ಅವರು ದೇವರ ಸೇವಕರಾದರು.

ಕೋಪ ಮಾಡಿಕೊಳ್ಳುವಂತ ಮತ್ತು ತನ್ನ ಶಾಂತತೆಯನ್ನು ಕಳೆದುಕೊಳ್ಳುವಂತ ಒಬ್ಬ ಮನುಷ್ಯನು ದೇವರ ಸೇವಕನಾಗಲಾರನು. ಆತನು ಬೋಧಕನಾಗಿರಬಹುದು ಅಥವಾ ಮುಖ್ಯ ಪಾಸ್ಟರ್ ಆಗಿರಲೂ ಬಹುದು, ಆದರೆ ಆತನು ದೇವರ ಸೇವಕನಾಗಲಾರನು. ಅನೇಕ ಪಾಸ್ಟರ್ ಗಳು ಅನ್ಯ ಭಾಷೆಗಳ ಮುಖೇನ ಜೋರಾದ ಧ್ವನಿಯಲ್ಲಿ ದೇವರಿಗೆ ಸ್ತೋತ್ರವನ್ನು ಭಾನುವಾರ ಬೆಳಗ್ಗೆ ಮಾಡುತ್ತಾರೆ ಮತ್ತು ಅದೇ ದಿನ ಮಧ್ಯಾಹ್ನ ತಮ್ಮ ಸ್ವಂತ ಭಾಷೆಯಲ್ಲಿ ತಮ್ಮ ಹೆಂಡತಿಯರಿಗೆ ಕೋಪದಿಂದ ಕೂಗಾಡುತ್ತಾರೆ. ನಾವು ಅನ್ಯ ಭಾಷೆಗಳಲ್ಲಿ ಮಾತನಾಡಿದರೆ ಮಾತ್ರ ಪವಿತ್ರಾತ್ಮನು ಅದನ್ನು ನಿಯಂತ್ರಿಸಲು ಸಾಮಾರ್ಥ್ಯವುಳ್ಳವನಾಗಿದ್ದಾನಾ, ಆದರೆ ನಮ್ಮ ಮಾತೃ ಭಾಷೆಯಲ್ಲಿ ನಾವು ಮಾತನಾಡಿದರೆ ಅದನ್ನು ನಿಯಂತ್ರಿಸಲು ಪವಿತ್ರಾತ್ಮನ ಕೈಯಲ್ಲಿ ಆಗುವುದಿಲ್ಲವಾ? ಇದು ಮೋಸಕರ. ನಾನು ಅನ್ಯ ಭಾಷೆಯಲ್ಲಿ ಕಳೆದ ೨೨ ವರುಷಗಳಿಂದಲೂ ಮಾತನಾಡುತ್ತಿದ್ದೇನೆ, ಅದಕ್ಕಾಗಿ ದೇವರಿಗೆ ಸ್ತೋತ್ರ. ಅದು ನನ್ನ ಭಕ್ತಿಯನ್ನು ವೃದ್ದಿ ಮಾಡಿತು ಮತ್ತು ಖಿನ್ನತೆ, ಮಂಕುತನ, ನಿರುತ್ಸಾಹದಿಂದ ನನ್ನನ್ನು ಸಂಪೂರ್ಣವಾಗಿ ಈ ಎಲ್ಲಾ ವರುಷಗಳಲ್ಲಿ ಬಿಡುಗಡೆ ಮಾಡಿತು. ಆದರೆ ನಾನು ನನ್ನ ಹೆಂಡತಿಗೆ, ನನ್ನ ಸಹೋದರರಿಗೆ, ಗುರುತಿಲ್ಲದವರಿಗೆ ಮತ್ತು ಭಿಕ್ಷುಕರಿಗೆ ಮಾತೃ ಭಾಷೆಯಲ್ಲಿ ಮಾತನಾಡಿದಾಗ ನನ್ನ ಮಾತೃ ಭಾಷೆಯನ್ನು ಸಹ ಪವಿತ್ರಾತ್ಮನು ನಿಯಂತ್ರಣ ಮಾಡಿದನು.

ಒಂದು ಹೆಣ್ಣನ್ನು ತನ್ನ ಕಣ್ಣಿನಲ್ಲಿ ಮೋಹಿಸುವಂತವನು ಸುವಾರ್ತೆಯನ್ನು ಸಾರುವ ಬೋಧಕನಾಗುವುದಿಲ್ಲ ಮತ್ತು ದೇವರ ಸೇವಕನೂ ಆಗುವುದಿಲ್ಲ. ಯಾರು ಪಾಪದಿಂದ ದೂರ ಇರುವ ಸಂಬಂಧ ತನ್ನ ಕಣ್ಣನ್ನು ಕಿತ್ತೊಗೆಯಲು ಉಗ್ರವಾದ ಮನಸ್ಸುಳ್ಳವರಾಗಿರುತ್ತಾರೋ, ಅವರು ನಿಜವಾದ ದೇವರ ಸೇವಕರಾಗುತ್ತಾರೆ. ನೀವು ನಿಮ್ಮ ಕಣ್ಣಿನಲ್ಲಿ ಪಾಪ ಮಾಡಿದ್ದಕ್ಕಾಗಿ, ರಾತ್ರಿ ಸಮಯದಲ್ಲಿ ದಿಂಬಿನ ಮೇಲೆ ಕೊನೆ ಬಾರಿ ಯಾವಾಗ ಅತ್ತಿದ್ದು? ನೀವು ಈ ವಿಷಯವನ್ನು ತುಂಬಾ ಸರಳವಾಗಿ ತೆಗೆದುಕೊಂಡರೆ, ನೀವು ಸ್ವಲ್ಪ ಸ್ವಲ್ಪವೇ ನಿಮ್ಮೊಳಗೆ ಹಿಂಜಾರಿ ಬೀಳುತ್ತೀರಿ, ಒಂದು ದಿನ ಸಾರ್ವಜನಿಕವಾಗಿ ಬಿದ್ದು ಹೋಗುತ್ತೀರಿ.

ಒಬ್ಬ ವ್ಯಕ್ತಿ ಹೆಚ್ಚು ಹಣವನ್ನು ಮಾಡುವ ಸಂಬಂಧ ಸುಳ್ಳು ಹೇಳಿದರೆ ಅಥವಾ ತನಗಾಗಿ ಗೌರವವನ್ನು ಸಂಪಾದಿಸಿಕೊಳ್ಳಲು ಬಯಸುವವನು ನಿಜವಾಗಿಯೂ ಸೈತಾನನ ಸೇವಕನಾಗಿದ್ದಾನೆ - ಸೈತಾನನು ಎಲ್ಲಾ ಸುಳ್ಳುಗಳ ತಂದೆಯಾಗಿದ್ದಾನೆ. ಆತನು ದೇವರ ಸೇವಕನಾಗಲಾರನು.

ಪ್ರಾಮಾಣಿಕತೆಯುಳ್ಳಂತ ವಿಶ್ವಾಸಿಗಳಿಗೆ ದೊಡ್ಡ ನಿರಿಕ್ಷೆ ಇದೆ. ಆದರೆ ಪ್ರಾಮಾಣಿಕತೆ ಇಲ್ಲದ ಕಪಟಿಗಳಿಗೆ ನಿರೀಕ್ಷೆಯಿಲ್ಲ

ಯಾರು ತನ್ನ ಎಲ್ಲಾ ಶತ್ರುಗಳನ್ನು ಪ್ರೀತಿಸಲು ಕಷ್ಟಪಡುತ್ತಾನೋ ಅಥವಾ ತನಗೆ ನೋವು ಮಾಡಿದವರಿಗೆ ಒಳ್ಳೇಯದನ್ನು ಮಾಡಲು ಆತನಿಗೆ ಆಗುವುದಿಲ್ಲವೋ, ಆತನು ಸುವಾರ್ತೆ ಸಾರಲು ಅನರ್ಹನು. ನಿಮ್ಮ ಹೃದಯದಲ್ಲಿ ಯಾರದಾದರೂ ವಿರುದ್ದ ಸ್ವಲ್ಪವಾದರೂ ಹಗೆತನ ಅಥವಾ ಕ್ಷಮಿಸದೇ ಇರುವಂತ ನಡವಳಿಕೆ ಇದ್ದರೆ, ನೀವು ಮಾಡಬೇಕಾಗಿರುವ ಒಳ್ಳೇ ಕೆಲಸವೇನೆಂದೆರೆ, ನಿಮ್ಮ ಬಾಯನ್ನು ಮುಚ್ಚಿಕ್ಕೊಂಡಿರುವುದು. ಮೊದಲು ಮನೆಗೆ ಹೋಗಿ, ಮಾನಸಾಂತರ ಪಡಿ (ದೇವರ ಕಡೆಗೆ ತಿರುಗಿಕೊಳ್ಳಿ) ಮತ್ತು ಆ ಎಲ್ಲಾ ಕೆಟ್ಟತನದಿಂದ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಳೆದುಕೊಳ್ಳಿ. ಇಲ್ಲವಾದಲ್ಲಿ ನೀವು ದೇವರ ಸೇವಕನಾಗಲು ಆಗುವುದಿಲ್ಲ.

2. ಹಣದಿಂದ ಮೇಲಿನ ಪ್ರೀತಿಯಿಂದ ಬಿಡುಗಡೆ ಹೊಂದುವುದು

”ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರ ಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ” (ಲೂಕ 16:13).

ದೇವರ ಸೇವಕನಾಗುವುದಕ್ಕೆ ಬೇಕಾಗಿರುವ ಎರಡನೆಯ ಅಗತ್ಯತೆಯು ಧನದ ಮೇಲಿನ ಪ್ರೀತಿಯಿಂದ (ಹಣ ಮತ್ತು ಎಲ್ಲಾ ಭೌತಿಕ ಸಂಗತಿಗಳು) ಬಿಡುಗಡೆ ಹೊಂದುವುದಾಗಿದೆ. ಮತ್ತೊಮ್ಮೆ, ಹಣದಿಂದ ಬಿಡುಗಡೆಯಾಗುವುದಕ್ಕಿಂತ ಲೌಕಿಕ ಕೆಲಸವನ್ನು ಬಿಡುವುದು ಸುಲಭದ ಕೆಲಸವಾಗಿದೆ. ನೀವು ಯಾವುದನ್ನು ಸೇವೆ ಮಾಡಬೇಕು ಎಂದು ನೀವೇ ಆಯ್ಕೆ ಮಾಡಿಕೊಳ್ಳಬೇಕು - ದೇವರನ್ನೋ ಅಥವಾ ಧನವನ್ನೋ ಎಂಬುದಾಗಿ. ಅನೇಕ ”ಪೂರ್ಣವಧಿ ಕೆಲಸಗಾರರು” ದೇವರನ್ನೂ ಮತ್ತು ಧನವನ್ನೂ ಸೇವೆ ಮಾಡುವುದನ್ನು ಹುಡುಕುತ್ತಾರೆ. ”ದೇವರ ಸೇವಕರುಗಳು” ಎಂದು ಕರೆಯಲ್ಪಟ್ಟವರು ತಮ್ಮ ಲೌಕಿಕ ಕೆಲಸದಲ್ಲಿ ಗಳಿಸುವುದಕ್ಕಿಂತ ಇಂದು ಹೆಚ್ಚು ಹಣವನ್ನು ಗಳಿಸುತ್ತಿದ್ದಾರೆ. ಯಾರಾದರೂ ಇಹಲೋಕದ ನೆಮ್ಮದಿ, ಹಣ ಮತ್ತು ಭೌತಿಕ ಸಂಗತಿಗಳನ್ನು ದೇವರ ಸೇವೆ ಮಾಡುವ ವಿಷಯದಲ್ಲಿ ತ್ಯಾಗ ಮಾಡದಿದ್ದರೆ, ಅವರು ನಿಜವಾಗಿಯೂ ದೇವರ ಸೇವೆ ಮಾಡಲಾಗುವುದಿಲ್ಲ. ಯಾವುದೇ ವಿಶ್ವಾಸಿಯು ದೇವರ ಸೇವಕನಾಗಬಹುದು - ಆದರೆ ಆತನು ಹಣವನ್ನು ಪ್ರೀತಿಸುವುದರಿಂದ ಮೊದಲು ಬಿಡುಗಡೆ ಹೊಂದಬೇಕು. ನಿಜವಾಗಿಯೂ, ನೀವು ಮೇಲ್ಕಂಡ ವಾಕ್ಯವನ್ನು ಎಚ್ಚರಿಕೆಯಿಂದ ಓದುವುದಾದರೆ, ನೀವು ದೇವರ ಸೇವಕರುಗಳಾಗಬೇಕೆಂದಿದ್ದರೆ, ಹಣವನ್ನು ತಿರಸ್ಕರಿಸಿ, ಅದನ್ನು ಹಗೆ ಮಾಡಬೇಕು ಎಂದು ಯೇಸು ಹೇಳಿರುವುದನ್ನು ಕಂಡುಕೊಳ್ಳುತ್ತೇವೆ. ಹಣದ ಕಡೆಗೆ ನಿಮ್ಮ ನಡವಳಿಕೆಯು ಯೇಸು ಬಯಸುವ ರೀತಿ ಇರಬೇಕು ಎಂದು ನೀವು ದೇವರ ಎದುರಿಗೆ ಹೇಳುವುದಾದರೆ, ನೀವು ದೇವರ ಸೇವಕನಾಗುವುದಕ್ಕೆ ಅರ್ಹವಾಗುತ್ತೀರ. ಇಲ್ಲವಾದಲ್ಲಿ ನೀವು ಅರ್ಹರಾಗುವುದಿಲ್ಲ. ಯೇಸು ಸ್ವಾಮಿಯು ಇಲ್ಲಿ ಇಟ್ಟಿರುವಂತ ಗುಣಮಟ್ಟಕ್ಕೆ ಎಷ್ಟು ಜನ ಪೂರ್ಣಕಾಲಿಕ ಸೇವಕರು ಅರ್ಹತೆ ಹೊಂದುತ್ತಾರೆ? ಕೆಲವೇ ಕೆಲವು ಮಂದಿ ಮಾತ್ರ.

ನಾವು ಯಾರಿಗೆ ಸೇವೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆಂದರೆ, ನಾವು ದೇವರಿಗೆ ವಿಧೇಯರಾಗುತ್ತೇವೋ ಅಥವಾ ಹಣಕ್ಕೆ ವಿಧೇಯರಾಗುತ್ತೇವೋ ಎಂಬುದನ್ನು ಗಮನಿಸುವ ಮುಖೇನ. ನಮ್ಮ ಜೀವಿತದ ಪ್ರಾಧಾನ್ಯತೆ ದೇವರಾಗಿದ್ದಾನೋ ಅಥವಾ ಹಣವಾಗಿದೆಯಾ? ಯಾರು ಕೂಡ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರರು. ಹಣ ನಿಮ್ಮನ್ನು ಕರೆದಾಗ, ಅದಕ್ಕೇ ನೀವು ತಕ್ಷಣಕ್ಕೆ ಪ್ರತಿಕ್ರಯಿಸಿದರೆ, ಆಗ ನೀವು ಹಣದ ಸೇವಕನಾಗುತ್ತೀರಿ.

ಯಾಕೆ ಅನೇಕ ಬೋಧಕರುಗಳು ಐಶ್ವರ್ಯವಂತ ವಿಶ್ವಾಸಿಗಳು ಇರುವಂತ ಮತ್ತು ನೆಮ್ಮದಿಯಾಗಿರುವಂತ ಸ್ಥಳಗಳಿಗೆ ಹೋಗುತ್ತಾರೆ? ಎಷ್ಟು ಜನಕ್ಕೆ ಸತತವಾಗಿ ಬಡ ವಿಶ್ವಾಸಿಗಳ ಬಳಿ ಹೋಗಲು ಮತ್ತು ಅವರನ್ನು ನಂಬಿಕೆಯಲ್ಲಿ ಬೆಳೆಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಇಂತಹವರುಗಳು ದೇವರ ನಿಜವಾದ ಸೇವಕರುಗಳು.

ಯಾರು ಹಣವನ್ನು ಸೇವೆ ಮಾಡುತ್ತಾರೋ, ಅವರು ದೇವರಿಗೆ ಅಪ್ರಯೋಜಕರು ಎಂಬುದಾಗಿ ಸೈತಾನನು ಅರಿತಿದ್ದಾನೆ ಮತ್ತು ಸೈತಾನನು ಅಂಥಹ ಬೋಧಕರುಗಳನ್ನು ಬಿಟ್ಟು ಬಿಡುತ್ತಾನೆ. ಸೈತಾನನು ನಿಮಗೆ ಮಾಡುವಂತ ದೊಡ್ಡ ಅಪಮಾನ ಯಾವುದೆಂದರೆ ನಿಮ್ಮನ್ನು ಒಂಟಿಯಾಗಿ ಬಿಟ್ಟು ಬಿಡೋದು ಮತ್ತು ಲೋಕದ ಜನರಿಂದ ಹಾಗೂ ಮತಭ್ರಷ್ಟ ಕ್ರೈಸ್ತತ್ವದ ಲೋಕದ ನಾಯಕರುಗಳಿಂದ ನೀವು ಗೌರವವನ್ನು ಸಂಪಾದಿಸುವಂತೆ ಅನುಮತಿಸುವುದಾಗಿದೆ.

ದೇವರ ಸೇವಕನು ಯಾವಾಗಲೂ ಯೋಚಿಸುವುದೇನೆಂದರೆ, ಆತ್ಮಗಳನ್ನು ಗೆಲ್ಲುವುದು ಹೇಗೆ ಮತ್ತು ಸಭೆಗಳನ್ನು ಕಟ್ಟುವುದು ಹೇಗೆ ಎಂದು. ಅದನ್ನೇ ಆತನು ರಾತ್ರಿಯಲ್ಲಿಯೂ ಸಹ ಕನಸು ಕಾಣುತ್ತಾನೆ. ಹಣದ ಸೇವಕನು ರಾತ್ರಿ ಮತ್ತು ಹಗಲು ಯೋಚಿಸುವುದೇನೆಂದರೆ, ಹೆಚ್ಚು ಹಣ ಮಾಡುವುದು ಹೇಗೆಂದು. ನಮ್ಮ ”ಒಳಪ್ರಜ್ನೆಯನ್ನು” ನಾವು ಮೂರ್ಖ ಮಾಡಲಾಗುವುದಿಲ್ಲ. ಏಕೆಂದರೆ, ಅದಕ್ಕೆ ಗೊತ್ತಿದೆ, ಎಲ್ಲರಿಗಿಂತ ಹೆಚ್ಚಾಗಿ ನಾವು ಏನನ್ನು ಬಯಸುತ್ತಿದ್ದೀವಿ ಎಂದು. ನಾವು ಹಣವನ್ನು ಪ್ರೀತಿ ಮಾಡುತ್ತಿದ್ದರೆ, ಪ್ರಾಮಾಣಿಕರಾಗಿರೋಣ ಮತ್ತು ದೇವರಿಗೆ ಈ ರೀತಿಯಾಗಿ ಹೇಳೋಣ, ನಮ್ಮನ್ನು ಇದರಿಂದ ಬಿಡುಗಡೆ ಮಾಡು ಎಂಬುದಾಗಿ. ಪ್ರಾಮಾಣಿಕತೆಯುಳ್ಳಂತ ವಿಶ್ವಾಸಿಗಳಿಗೆ ದೊಡ್ಡ ನಿರಿಕ್ಷೆ ಇದೆ. ಆದರೆ ಪ್ರಾಮಾಣಿಕತೆ ಇಲ್ಲದ ಕಪಟಿಗಳಿಗೆ ನಿರೀಕ್ಷೆಯಿಲ್ಲ.

ಈ ದಿನಮಾನಗಳಲ್ಲಿ ಅನೇಕ ”ಅದ್ಬುತ ಕಾರ್ಯಗಳನ್ನು ಒಳಗೊಂಡ ಕಾರ್ಯಕ್ರಮಗಳ” ಬಗ್ಗೆ ಕೇಳುತ್ತಿದ್ದೀವಿ. ಆದರೆ ನಾನು ಇನ್ನೂ ಸಹ ನೋಡಲು ಕಾಯುತ್ತಿರುವುದೇನೆಂದರೆ, ”ಜನರ ಬಳಿ ಹಣವನ್ನು ಕೇಳದೆ” ಇರುವಂತ ಕಾರ್ಯಕ್ರಮ ಜರುಗುವುದನ್ನು ನೋಡಲು!! ಯೇಸು ಮತ್ತು ಆತನ ಅಪೊಸ್ತಲರು ತಮ್ಮ ತಮ್ಮ ಕೂಟಗಳಲ್ಲಿ ಜನರಿಂದ ಕಾಣಿಕೆಯನ್ನು ಎತ್ತಲಿಲ್ಲ. ಹಾಗಿದ್ದರೂ, ಕುರುಡ, ಮೂರ್ಖ ವಿಶ್ವಾಸಿಗಳು ಇಂದು ನಾಚಿಕೆ ಇಲ್ಲದೇ ಹಣ ಕೇಳುವಂತ ಬೋಧಕರುಗಳಿಗೆ ಮರುಳಾಗುತ್ತಾರೆ ಮತ್ತು ಅವರನ್ನು ದೇವರ ದೊಡ್ಡ ಸೇವಕರುಗಳು ಎಂದು ನೆನಸುತ್ತಾರೆ. ಕ್ರಿಸ್ತನ ನ್ಯಾಯ ತೀರ್ಪಿನ ಕುರ್ಚಿಯಲ್ಲಿ ಸ್ಪಷ್ಟವಾದ ಬೆಳಕಿನಿಂದ ಪ್ರಕಟಗೊಳ್ಳುವುದೇನೆಂದರೆ, ಇಂತಹ ಬೋಧಕರುಗಳು ತಮ್ಮನ್ನು ತಾವು ಸೇವೆ ಮಾಡಿಕೊಳ್ಳುತ್ತಿದ್ದಾರೆ ಹೊರತು, ದೇವರನ್ನು ಅಲ್ಲ ಎಂಬುದಾಗಿ.

ವಿಶ್ವಾಸಿಗಳು ಒಂದು ಗೆರೆಯನ್ನು ಎಳೆಯುತ್ತಾರೆ, ಯಾರು ಸಿದ್ಧಾಂತಗಳಲ್ಲಿ ಸುವಾರ್ತಿಕತೆಯನ್ನು ಹೊಂದಿರುತ್ತಾರೋ ಅವರಿಂದ ಉದಾರಿಗಳನ್ನು ಬೇರ್ಪಡಿಸಿ ಗೆರೆಯನ್ನು ಎಳೆದಿರುತ್ತಾರೆ. ಆದರೆ ಇಂತಹ ಪ್ರಕರಣದಲ್ಲಿ, ಸೈತಾನನು ಮತ್ತು ಆತನ ಎಲ್ಲಾ ದೆವ್ವಗಳು ”ಸುವಾರ್ತಿಕತೆಯ” ಕಡೆ ಇರುತ್ತವೆ. ಏಕೆಂದರೆ ಅವರೆಲ್ಲರೂ ಸಿದ್ದಾಂತಗಳಲ್ಲಿನ ಸುವಾರ್ತಿಕತೆಯನ್ನು ಹೊಂದಿರುತ್ತಾರೆ (ಯಾಕೋಬ 2:19)!! ಆದರೆ ದೇವರು, ಯಾರು ತನ್ನನ್ನು ಪ್ರೀತಿಸುತ್ತಾರೋ ಮತ್ತು ಯಾರು ಧನವನ್ನು ಪ್ರೀತಿಸುತ್ತಾರೋ, ಅವರುಗಳನ್ನು ಬೇರ್ಪಡಿಸಲು ಗೆರೆ ಎಳೆಯುತ್ತಾರೆ. ಆಗ ನಾವು ಕಂಡುಕೊಳ್ಳುವುದೇನೆಂದರೆ, ಸೈತಾನನು ಮತ್ತು ಆತನ ಎಲ್ಲಾ ದೆವ್ವಗಳು ಹಣವನ್ನು ಪ್ರೀತಿಸುವವರ ಮಧ್ಯದಲ್ಲಿ ಇರುತ್ತವೆ ಎಂಬುದಾಗಿ.

ನಾವು ನಮ್ಮ ಅಗತ್ಯತೆಗಳ ಹಿಂದೆ ಹೋಗದೆ, ಮೊದಲು ದೇವರ ರಾಜ್ಯವನ್ನು ಹುಡುಕುವುದಾದರೆ, ನಮ್ಮ ಇಹಲೋಕದ ಜೀವಿತಕ್ಕೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಸಹ ದೇವರು ಒದಗಿಸುತ್ತಾರೆ. ನನ್ನ ಕ್ರೈಸ್ತ ಅನುಭವದ ಎಲ್ಲಾ ವರುಷಗಳಲ್ಲೂ ಸಹ ಇದು ನಿಜವೆಂದು ನಾನು ಕಂಡುಕೊಂಡಿದ್ದೇನೆ. ಪರಲೋಕ ಮತ್ತು ಲೋಕ ಅಳಿದು ಹೋಗುತ್ತವೆ, ಆದರೆ ದೇವರ ವಾಕ್ಯವು ಎಂದಿಗೂ ಅಳಿದು ಹೋಗುವುದಿಲ್ಲ. ಯಾರು ದೇವರ ರಾಜ್ಯವನ್ನು ಮೊದಲು ಹುಡುಕುತ್ತಾರೋ, ಅವರಿಗೆ ಬೇಕಾದ ಎಲ್ಲಾ ಅಗತ್ಯತೆಗಳು ಪೂರೈಸಲ್ಪಡುವುದು ಎಂಬುವಂತ ಸತ್ಯದಲ್ಲಿ ನಾವು ಜೀವಿಸಬೇಕು ಹಾಗೂ ನಾವ್ಯಾರೂ ಸಹ, ಸತತವಾಗಿ ನಮ್ಮ ಕ್ರೈಸ್ತ ಜೀವಿತದ ಎಲ್ಲಾ ಸಮಯದಲ್ಲಿಯೂ ದೇವರ ರಾಜ್ಯವನ್ನು ಹುಡುಕಿದೆವು ಎಂದು ಸಾಕ್ಷಿಕರಿಸಲಾಗದಿದ್ದರೂ, ನಾವು ನಿಶ್ಚಯವಾಗಿ ಈ ರೀತಿ ಸಾಕ್ಷಿ ಹೇಳಲು ಸಮರ್ಥರಾಗಬೇಕು - ನಾವು ಹಣದ ಹಿಂದೆ ಹೋಗಲಿಲ್ಲ ಎಂಬುದಾಗಿ. ನಾವು ಬೋಧಕರಾಗಿದ್ದರೆ, ಅಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕೊಸ್ಕರ ಬೋಧನೆ ಮಾಡಲು ಹೋಗಲಿಲ್ಲ, ನಾವು ಐಶ್ವರ್ಯವಂತರನ್ನು ಮೆಚ್ಚಿಸಲು ಹೋಗಲಿಲ್ಲ, ನಾವು ಬಡವರನ್ನು ಅಲಕ್ಷ್ಯ ಮಾಡಲಿಲ್ಲ, ನಾವು ಕಾಣಿಕೆಯನ್ನು ತೆಗೆದುಕೊಳ್ಳುವುದರಲ್ಲಿ ಆಸಕ್ತಿಯನ್ನು ಹೊಂದಿಲ್ಲ, ನಮ್ಮ ಆರ್ಥಿಕತೆಯ ಅಗತ್ಯತೆಯನ್ನು ಜನರು ಅರಿಯಬೇಕೆಂದು ಅಲ್ಲಿಗೆ ಹೋಗಲಿಲ್ಲ ಮತ್ತು ಜನರು ನಮಗೆ ಹಣವನ್ನು ಕೊಡಬೇಕು ಎಂಬ ನಿರೀಕ್ಷೆಯು ನಮ್ಮಲಿಲ್ಲ ಎಂಬ ಸಾಕ್ಷಿಯನ್ನು ಹೊಂದಿರಬೇಕು. ಪೌಲನು ಇಂತಹ ಜೀವಿತವನ್ನು ಜೀವಿಸಿ, ಈ ರೀತಿಯ ಸಾಕ್ಷಿ ಹೇಳಲು ಅರ್ಹನಾಗಿದ್ದನು. ತಾನು ದೇವರ ಸೇವೆ ಮಾಡಿದ ರೀತಿಯಲ್ಲಿ, ತಾವೂ ಸಹ ದೇವರನ್ನು ಸೇವೆ ಮಾಡುತ್ತಿದ್ದೇವೆ ಎಂದು ಹೇಳಿ ಹಣವನ್ನು ಪ್ರೀತಿಸುವಂತ ಬೋಧಕರುಗಳನ್ನು ತನ್ನ ಸಮಯದಲ್ಲಿ ಅವರ ಮುಖವಾಡವನ್ನು ಹೊರಗೆ ತೋರಿಸಲು ಬಂದೆ ಎಂದು ಪೌಲನು ಹೇಳಿದನು (2 ಕೊರಿಂಥ 11:10-13).

ನಮ್ಮ ದಿನಮಾನಗಳಲ್ಲಿಯೂ ಸಹ, ಪೌಲನ ರೀತಿ, ಕ್ರೈಸ್ತತ್ವದಲ್ಲಿ ಹಣವನ್ನು ಪ್ರೀತಿಸುವಂತವರನ್ನು ಕಂಡುಕೊಂಡು, ಅವರ ಮುಖವಾಡವನ್ನು ಹೊರಗಡೆ ತೋರಿಸುವಂತಹ ಸಾಕ್ಷಿಯ ಜೀವಿತವನ್ನು ಹೊಂದುವುದರ ಬಹುದೊಡ್ಡ ಅಗತ್ಯತೆ ಇದೆ. ನಮಗೆ ಚೆನ್ನಾಗಿ ಗೊತ್ತು, ಸೈತಾನನು ನಮ್ಮನ್ನು ಮತ್ತು ನಮ್ಮ ಸೇವೆಯನ್ನು ಏಕೆ ಹಗೆ ಮಾಡುತ್ತಾನೆ ಎಂಬುದಾಗಿ. ಸೈತಾನನು ನಮ್ಮನ್ನು, ವಿರುದ್ಧ ಅಭಿಪ್ರಾಯ ಹೊಂದಿರುವವರು, ಕ್ರಿಸ್ತ ವಿರೋಧಿಗಳು, ಉಗ್ರಗಾಮಿಗಳು, ಸುಳ್ಳು ಪ್ರವಾದಿಗಳು ಎಂಬುವಂತ ಹೆಸರುಗಳಿಂದ ಕರೆಯುವಂತೆ, ವಿಶ್ವಾಸಿಗಳನ್ನು (ಅವರು ನಮ್ಮ ಕೂಟಗಳಿಗೆ ಬಂದು ನಮ್ಮ ಸಂದೇಶವನ್ನು ಕೇಳದೇ ಇರುವವರನ್ನು) ಸೈತಾನನು ಸಿದ್ದ ಮಾಡುತ್ತಾನೆ. ಇದು ಏಕೆಂದರೆ, ನಾವು ಸೈತಾನನ ರಾಜ್ಯವನ್ನು ಯಾವುದರಿಂದ ತೊಂದರೆಗೆ ಒಳಪಡಿಸುತ್ತಿದ್ದೀವಿ ಎಂದರೆ, ಪೂರ್ಣ ಕಾಲಿಕ ಸೇವಕರಾದಂತವರು ಹಣವನ್ನು ಪ್ರೀತಿಸುತ್ತಿದ್ದಾರೆ ಎಂಬುದನ್ನು ಮತ್ತು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಿರುವವರು ಸೈತಾನನ ಸೇವಕರುಗಳಾಗಿದ್ದಾರೆ ಎಂಬುದನ್ನು ಹೊರ ತೋರಿಸುತ್ತಿರುವ ಕಾರಣದಿಂದಾಗಿ (2 ಕೊರಿಂಥ 11:15, ಹಿಂದಿನ ವಚನಗಳಾದ 10-13 ನ್ನು ನೋಡಿ)

ನಾವು ಧನವನ್ನೂ ಉಪಯೋಗಿಸುವುದರಲ್ಲಿ ನಂಬಿಗಸ್ತರಾಗಿಲ್ಲವಾದರೆ, ನಮಗೆ ಆತನ ರಾಜ್ಯದ ನಿಜವಾದ ಧನವನ್ನು ಯಾರೂ ಕೊಟ್ಟಾರೂ (ಲೂಕ 16:11). ನಾವು ದೇವರ ವಾಕ್ಯದ ಮೇಲಿನ ಪ್ರಕಟಣೆಯ ಘೋರ ಕೊರತೆಯನ್ನು ನೋಡುವಾಗ ಮತ್ತು ಇಂದಿನ ಬೋಧಕರುಗಳ ಬೇಸರ ತರಿಸುವಂತ ಬೋಧನೆಗಳನ್ನು ನೋಡುವಾಗ, ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದೇನೆಂದರೆ, ಈ ಎಲ್ಲದಕ್ಕೆ ಮೂಲ ಕಾರಣ - ಈ ಬೋಧಕರುಗಳು ಹಣದ ವಿಷಯದಲ್ಲಿ ನಂಬಿಗಸ್ತರಾಗಿಲ್ಲದಿರುವುದಾಗಿದೆ.

3. ಮನುಷ್ಯನನ್ನು ಮೆಚ್ಚಿಸುವುದರಿಂದ ಬಿಡುಗಡೆ ಹೊಂದುವುದು.

”ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ” (ಗಲಾತ್ಯ 1:10).

ದೇವರ ಸೇವಕನಾಗುವುದಕ್ಕೆ ಬೇಕಾಗಿರುವ ಮೂರನೇಯ ಅಗತ್ಯತೆಯು ಮನುಷ್ಯನನ್ನು ಮೆಚ್ಚಿಸುವುದರಿಂದ ಬಿಡುಗಡೆ ಹೊಂದುವುದಾಗಿದೆ. ಮತ್ತೊಮ್ಮೆ, ಮನುಷ್ಯನನ್ನು ಮೆಚ್ಚಿಸುವುದರಿಂದ ಬಿಡುಗಡೆ ಹೊಂದುವುದಕ್ಕಿಂತ ಲೌಕಿಕ ಕೆಲಸವನ್ನು ಬಿಡುವುದು ತುಂಬಾ ಸಲೀಸಾಗಿದೆ. ನಾವು ದೇವರ ವಾಕ್ಯವನ್ನು ಮನುಷ್ಯನನ್ನು ಮೆಚ್ಚಿಸುವ ಸಲುವಾಗಿ ಬೋಧಿಸಿದರೆ, ನಾವು ಮನುಷ್ಯರ ಸೇವಕರುಗಳಾಗುತ್ತೇವೆ ಹೊರತು, ದೇವರ ಸೇವಕರಾಗೋದಿಲ್ಲ. ಒಬ್ಬ ಬೋಧಕನು, ಮುಂದಿನ ವರ್ಷವೂ ಸಹ, ವರ್ಚಸ್ಸು ದೊರಕುವಂತ ಸ್ಥಳದಲ್ಲಿ ಹೆಚ್ಚು ಹಣ ಮಾಡುವ ಉದ್ದೇಶದಿಂದ ಮತ್ತು ಅಲ್ಲಿನ ಜನರಿಂದ ಗೌರವವನ್ನು ಸಂಪಾದಿಸಿಕೊಳ್ಳಲು ಅಲ್ಲಿಂದ ಆಹ್ವಾನವನ್ನು ಮತ್ತೊಮ್ಮೆ ಬಯಸಿದರೆ, ಆತನು ತನ್ನ ಸಂದೇಶವನ್ನು ಸ್ವಲ್ಪ ಸರಳೀಕರಿಸಿ, ಜನರಿಗೆ ನೋವಾಗದಂತೆ ಬೋಧನೆ ಮಾಡುವಂತ ಶೋಧನೆಗೆ ಒಳಗಾಗುತ್ತಾನೆ. ಆಗ ಆತನು ಮನುಷ್ಯನ ಸೇವಕನಾಗುತ್ತಾನೆ. ನೀವು ಮನುಷ್ಯನನ್ನು ಮೆಚ್ಚಿಸಲು ಸಾರ್ವಜನಿಕವಾಗಿ ಪ್ರಾರ್ಥನೆ ಮಾಡುವುದಾದಲ್ಲಿ, ನೀವು ಮನುಷ್ಯರ ಅಭಿಪ್ರಾಯಗಳನ್ನು ಆರಾಧಿಸುತ್ತೀರೇ ಹೊರತು ಜೀವವುಳ್ಳಂತ ದೇವರನ್ನು ಅಲ್ಲ. ದೇವರು ಅಂತಹ ಪ್ರಾರ್ಥನೆಗಳನ್ನು ಕೇಳುವುದಿಲ್ಲ. ಏಕೆಂದರೆ, ಈ ರೀತಿ ಮಾಡುವುದರಿಂದ ಅವರು ಮನುಷ್ಯರಿಗೆ ತ್ಯಾಗ, ಬಲಿಗಳನ್ನು ಅರ್ಪಿಸುವವರಾಗಿರುತ್ತಾರೆ ಹೊರತು ದೇವರಿಗಲ್ಲ. ಅದೇ ರೀತಿಯಲ್ಲಿ, ನಾವು ಧರಿಸುವಂತಹ ಉಡುಪಿನ ವಿಚಾರದಲ್ಲಿ, ನಾವು ಜನರೊಟ್ಟಿಗೆ ಮಾತನಾಡುವಂತ ವಿಧದಲ್ಲಿ ಮತ್ತು ನಾವು ನಡೆಯುವಂತ ವಿಧದಲ್ಲಿಯೂ ಸಹ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ಈ ಯಾವುದೇ ಸಂಗತಿಗಳು ಮತ್ತು ನಮ್ಮ ”ಪವಿತ್ರತೆ” ಅಥವಾ ”ದೀನತೆ” ಯಿಂದ ಮನುಷ್ಯರನ್ನು ಮೆಚ್ಚಿಸುವುದಾದಲ್ಲಿ, ನಾವು ಮನುಷ್ಯರ ಸೇವಕರಾಗುತ್ತೀವಿ, ದೇವರ ಸೇವಕರಾಗುವುದಿಲ್ಲ. ನೀವು ನಿಮ್ಮ ಹೆಂಡತಿ/ಗಂಡನನ್ನು ಮೆಚ್ಚಿಸುವುದಕ್ಕೆ ಹೊರಟರೂ, ನೀವು ದೇವರನ್ನು ಮೆಚ್ಚಿಸಲು ಆಗುವುದಿಲ್ಲ.

ನೀವು ದೇವರನ್ನು ಹೆಚ್ಚು ಮೆಚ್ಚಿಸಿದ ಹಾಗೇ, ನೀವು ಕ್ರೈಸ್ತತ್ವದಲ್ಲಿನ ಧಾರ್ಮಿಕ ನಾಯಕರುಗಳಿಂದ ಮತ್ತು ದೇವರನ್ನು ಅರಿತಿಲ್ಲದವರಿಂದ ಕೆಟ್ಟ ಹೆಸರುಗಳನ್ನು ಕರೆಸಿಕೊಳ್ಳುತ್ತೀರಿ. ಯೇಸು ”ದೆವ್ವಗಳ ಸ್ನೇಹಿತ” ಎಂಬುದಾಗಿ ಕರೆಯಲ್ಪಟ್ಟನು. ತನ್ನ ಶಿಷ್ಯಂದಿರು ಇನ್ನೂ ಎಷ್ಟೋ ಇಂತಹ ಹೆಸರುಗಳಿಂದ ಕರೆಯಲ್ಪಡುತ್ತಾರೆ ಅಲ್ಲವೇ - ಏಕೆಂದರೆ ಅವರು ಯಾವುದೇ ಪೋಪ್ ಗಳನ್ನು ಮೆಚ್ಚಿಸಲು ಹೋಗುವುದಿಲ್ಲ ಅಥವಾ ಆರ್ಕ್ ಬಿಷಪ್ ಅಥವಾ ಮುಖ್ಯ ಪಾಸ್ಟರ್ ಗಳನ್ನು ಅಥವಾ ಲೋಕದ ಯಾವುದೇ ಮನುಷ್ಯನನ್ನು ಮೆಚ್ಚಿಸಲು ಹೋಗುವುದಿಲ್ಲ.