WFTW Body: 

1. ದೇವರಿಗಾಗಿ ಬೆಂಕಿಯುಳ್ಳವರಾಗಿರಿ :

ಪೌಲನು ತಿಮೊಥೆಯನಿಗೆ ಈ ರೀತಿಯಾಗಿ ಬರೆಯುತ್ತಾನೆ : ”ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟಿದರ ಮೂಲಕ ನಿನಗೆ ದೊರಕಿದ ದೇವರ ಕೃಪಾವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡಿಕೊಡುತ್ತೇನೆ. ದೇವರು ನಮಗೆ ಕೊಟ್ಟಿರುವ ಆತ್ಮವು ಹೇಡಿತನದ ಆತ್ಮವಲ್ಲ” (1 ತಿಮೊಥೆ 1:6). ಪೌಲನು ತಿಮೊಥೆಯನಿಗೆ, ದೇವರ ಕೃಪಾವರವು ಪ್ರಜ್ವಲಿಸಬೇಕು ಮತ್ತು ಅದನ್ನು ಪ್ರತಿಸಲ ಹೊಸದಾಗಿ ಹಚ್ಚಿ, ಯಾವಾಗಲೂ ಹೊತ್ತಿ ಉರಿಸುತ್ತಿರಬೇಕು ಎಂದು ಹೇಳಿದನು. ಇದರಿಂದ ನಾವು ಕಲಿಯುವುದೇನೆಂದರೆ, ಯೇಸು ನಮ್ಮನ್ನು ಪವಿತ್ರಾತ್ಮನಲ್ಲಿ ಮತ್ತು ಬೆಂಕಿಯಲ್ಲಿ ದೀಕ್ಷಾಸ್ನಾನ ಮಾಡಿಸಿದ್ದರೂ ಸಹ (ಮತ್ತಾಯ 3:11), ಆ ಬೆಂಕಿಯು ಯಾವಾಗಲೂ, ಎಲ್ಲಾ ಸಮಯದಲ್ಲಿ ಹೊತ್ತಿ ಉರಿಯಲು ನಾವು ಏನಾದರೂ ಮಾಡಬೇಕು. ದೇವರು ಬೆಂಕಿಯನ್ನು ಪ್ರಜ್ವಲಿಸುವಂತೆ ಮಾಡುತ್ತಾರೆ. ನಾವು ಅದಕ್ಕೆ ಯಾವಾಗಲೂ ಇಂಧನವನ್ನು ಒದಗಿಸುತ್ತಿರಬೇಕು - ನಮ್ಮ ಜೀವಿತವನ್ನು ದೇವರ ಚಿತ್ತಕ್ಕಾಗಿ ಎಲ್ಲಾ ಸಮಯದಲ್ಲಿಯೂ ಶರಣು ಮಾಡಬೇಕು. , ಈ ರೀತಿ ಕಲ್ಪಿಸಿಕೊಳ್ಳಬೇಡಿ - ”ಒಂದು ಬಾರಿ ಅಭಿಷೇಕಿಸಲ್ಪಟ್ಟರೆ, ಯಾವಾಗಲೂ ಅಭಿಷೇಕಿಸಲ್ಪಟ್ಟ ಹಾಗೇ” ಎಂಬುದಾಗಿ, ಏಕೆಂದರೆ ದೇವರು ನಿಮ್ಮನ್ನು ಅಭಿಷೇಕಿಸಿರಬಹುದು, ಅದಕ್ಕೆ ಈ ರೀತಿಯಾಗಿ ಹೇಳುತ್ತೀರಿ. ಅದು ಯಾವ ರೀತಿ ಹೇಳಿದ ಹಾಗೇ ಎಂದರೆ, ”ಒಂದು ಬಾರಿ ರಕ್ಷಣೆ ಹೊಂದಿದರೆ, ಯಾವಾಗಲೂ ರಕ್ಷಣೆ ಹೊಂದಿದ ಹಾಗೇ” ಎಂಬುದಾಗಿ, ಇದು ತಪ್ಪು ತಿಳುವಳಿಯಾಗಿದೆ. ಜನರು ನಿಜವಾಗಿಯೂ ದೇವರಿಂದ ಅಭಿಷೇಕಿಸಲ್ಪಟ್ಟು, ಒಂದು ವರ್ಷದ ನಂತರ ಆತ್ಮೀಕವಾಗಿ ಸತ್ತಂತ ರೀತಿಯಲ್ಲಿರುವಂತವರನ್ನು ನಾನು ನೋಡಿದ್ದೇನೆ. ಅವರಿಂದ ಬೆಂಕಿಯು ಹೊರಟು ಹೋಗಿರುತ್ತದೆ, ಲೋಕದ ಆಸಕ್ತಿಗಳು ಮತ್ತು ಅಹಂಕಾರವು ಒಳಗೆ ಬಂದು ಬೆಂಕಿಯನ್ನು ತೆಗೆದು ಹಾಕಿರುತ್ತವೆ. ಜನರು ಈಗ ಹಣದ ಹಿಂದೆ ಮತ್ತು ನೆಮ್ಮದಿಯ ಜೀವಿತ ಹಿಂದೆ ಓಡುತ್ತಿದ್ದಾರೆ, ಹಾಗಾಗಿ ದೇವರ ಬೆಂಕಿಯನ್ನು ಕಳೆದುಕೊಂಡಿದ್ದಾರೆ. ಇದು ದೇವರ ರಾಜ್ಯಕ್ಕೆ ದೊಡ್ಡ ನಷ್ಟ ಮತ್ತು ದು:ಖದ ಸಂಗತಿ ಕೂಡ. ಹಾಗಾಗಿ ಪೌಲನು ತಿಮೊಥೆಯನಿಗೆ ಈ ರೀತಿಯಾಗಿ ಹೇಳುತ್ತಾನೆ - ನಿನ್ನ ಮೇಲೆ ಬರುವಂತ ಬೆಂಕಿಯನ್ನು ಹೊಸದಾಗಿ ಇಡು, ಹೊತ್ತಿ ಉರಿಯುವಂತೆ ಮಾಡು ಎಂಬುದಾಗಿ. ಅದನ್ನು ನೀವು ಹೊತ್ತಿ ಉರಿಯುವಂತೆ ಮಾಡಲಿಲ್ಲ ಎಂದರೆ ಅದು ಆರಿ ಹೋಗುತ್ತದೆ. ಶುದ್ಧ ಮನಸ್ಸಾಕ್ಷಿಯಿಂದ, ದೇವರ ವಾಕ್ಯವನ್ನು ಓದುವುದರಿಂದ, ನಿಮ್ಮನ್ನು ನೀವು ತಗ್ಗಿಸಿಕೊಳ್ಳುವುದರಿಂದ, ದೇವರನ್ನು ಮನ:ಪೂರ್ವಕವಾಗಿ ಹುಡುಕುವುದರಿಂದ, ಹಣವನ್ನು ಪ್ರೀತಿಸದಿರುವುದರಿಂದ ಮತ್ತು ಮತ್ತೊಬ್ಬರೊಟ್ಟಿಗೆ ವಾಗ್ವಾದ ಮಾಡದಿರುವುದರಿಂದ ಮತ್ತು ಬೆಂಕಿಯನ್ನು ಆರಿಸುವಂತ ಯಾವುದರಿಂದಲೇ ಆಗಲಿ ದೂರವಿರುವ ಮೂಲಕ ನಿಮ್ಮಲ್ಲಿರುವ ಬೆಂಕಿಯನ್ನು ಹೊತ್ತಿ ಉರಿಸಿ.

2. ಹೃದಯಪೂರ್ವಕ ವಿಶ್ವಾಸಿಗಳೊಟ್ಟಿಗೆ ಅನ್ಯೋನ್ಯತೆಯನ್ನು ಹುಡುಕಿ :

ಪೌಲನು ತಿಮೊಥೆಯನಿಗೆ 2 ತಿಮೊಥೆ 2:22 ರಲ್ಲಿ ಹೀಗೆ ಹೇಳಿದ್ದಾನೆ : ”ನೀನು ಯೌವನದ ಇಚ್ಚೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸ ಪಡು”. ಮತ್ತೊಂದು ಪದದಲ್ಲಿ, ಪ್ರಾಥಮಿಕವಾಗಿ ಯಾರು ಶುದ್ಧತೆಯನ್ನು ಹುಡುಕುತ್ತಿರುತ್ತಾರೋ, ಅಂಥವರೊಟ್ಟಿಗೆ ನಾವು ಅನ್ಯೋನ್ಯತೆಯನ್ನು ಹುಡುಕಬೇಕು. ನಾವು ಪಾಪದಿಂದ ದೂರವಿರುವಂತೆ ಅದು ನಮಗೆ ಸಹಾಯಿಸುತ್ತದೆ. ಯಾರು ತಮ್ಮ ಹೃದಯದ ತುಂಬಾ ಶುದ್ಧತೆಯನ್ನು ಬಯಸುತ್ತಾರೋ ಅಂಥವರು ನಮಗೆ ಉತ್ತಮ ಸ್ನೇಹಿತರಾಗಿರಬೇಕು ಇಹಲೋಕದಲ್ಲಿ. ಅನೇಕ ವಿಶ್ವಾಸಿಗಳು ಕೆಳಮಟ್ಟದಲ್ಲಿದ್ದಾರೆ ಮತ್ತು ದೈವಿಕತೆಯಲ್ಲಿ ಆಸಕ್ತಿಯನ್ನು ಹೊಂದಿಲ್ಲ. ಆದರೆ ನಾವು ನಮ್ಮ ಸಮಯವನ್ನು ಯಾರು ಪವಿತ್ರ ಜೀವಿತವನ್ನು ಜೀವಿಸಲು ಹುಡುಕುತ್ತಿರುತ್ತಾರೋ ಅಂಥವರೊಟ್ಟಿಗೆ ಕಳೆಯಬೇಕು. ನಮಗೆ ಹೇಗೆ ಗೊತ್ತಾಗಬೇಕು, ಒಬ್ಬರು ಶುದ್ಧ ಹೃದಯವನ್ನು ಹೊಂದಿದ್ದಾರೆ ಎಂಬುದಾಗಿ? ಜನರು ತಮ್ಮ ಹೃದಯದಲ್ಲಿ ತುಂಬಿರುವಂತದ್ದನ್ನೇ ಬಾಯಲ್ಲಿ ಮಾತನಾಡುತ್ತಾರೆ ಎಂಬುದಾಗಿ ಯೇಸು ಹೇಳಿದ್ದಾರೆ (ಮತ್ತಾಯ 12:34). ಒಬ್ಬ ಮನುಷ್ಯನು ಯಾವುದರ ಬಗ್ಗೆ ಮಾತನಾಡಲು ಪ್ರೀತಿಸುತ್ತಾನೆ ಎಂಬುವುದರಿಂದ ಆತನ ಹೃದಯ ಯಾವುದರಿಂದ ತುಂಬಿದೆ ಎಂಬುದಾಗಿ ನಾವು ಅರಿತಿದ್ದೇವೆ. ಒಬ್ಬಾತನು ಯಾವಾಗಲೂ ಹಣದ ಬಗ್ಗೆ ಮತ್ತು ಭೌತಿಕ ಸಂಗತಿಗಳ ಬಗ್ಗೆ ಮಾತನಾಡುತ್ತಾನೆ ಎಂದಾದಲ್ಲಿ, ಆತನ ಹೃದಯ ಹಣದ ಆಲೋಚನೆಗಳಿಂದ ತುಂಬಿಕೊಂಡಿದೆ ಎಂಬುದಾಗಿ ಅರ್ಥ. ಮತ್ತೊಂದು ಕಡೆ, ಒಬ್ಬ ಮನುಷ್ಯನು ಕರ್ತನ ಬಗ್ಗೆ ಮಾತನಾಡಲು ಬಯಸುತ್ತಾನೆ ಎಂದಾದಲ್ಲಿ, ಆತನ ಹೃದಯ ಯಾವುದರಿಂದ ತುಂಬಲ್ಪಟ್ಟಿದೆ ಎಂಬುದನ್ನು ನೀವು ಅರಿಯಬೇಕು. ಯಾರು ಯೇಸುವಿನ ರೀತಿಯಲ್ಲಿ ಇರಲು ಬಯಕೆಯನ್ನು ಹೊಂದಿರುತ್ತಾರೋ, ಅಂಥವರ ಜೊತೆ ನಾನು ಅನ್ಯೋನ್ಯತೆಯನ್ನು ಬಯಸುತ್ತೇನೆ. ನಾವು ಯೇಸುವನ್ನು ಪ್ರೀತಿಸುವಾಗ, ಆತನ ಬಗ್ಗೆ ಮಾತನಾಡಲು ಪ್ರೀತಿಸುತ್ತೇವೆ. ಕರ್ತನಿಗಾಗಿ ಇರುವಂತ ಪರಿಣಾಮಕಾರಿ ಸೇವೆಯ ರಹಸ್ಯ ಇದಾಗಿದೆ.

3. ದೇವರ ಗುಣಮಟ್ಟಗಳನ್ನು ಎತ್ತಿ ಹಿಡಿಯಿರಿ :

ಪೌಲನು ತಿಮೊಥೆಯನಿಗೆ ಈ ರೀತಿಯಾಗಿ ಎಚ್ಚರಿಸುತ್ತಾನೆ : ”ನನ್ನಿಂದ ಕೇಳಿದ ಸ್ವಸ್ಥ ವಾಕ್ಯಗಳ ಕ್ರಮವನ್ನು ಬಿಗಿಯಾಗಿ ಹಿಡಿದುಕೋ" (2 ತಿಮೊಥೆ 1:13). ನಮ್ಮ ಈ ದಿನಮಾನದಲ್ಲಿನ ಎಲ್ಲಾ ಕ್ರೈಸ್ತ ಪ್ರಸಂಗಿಗಳಿಗೆ ಎಂಥಹ ದೊಡ್ಡ ಎಚ್ಚರಿಕೆಯ ಅಗತ್ಯೆತೆ ಇದು. ನಿಮ್ಮ ಸಭೆಗೆ ಹೆಚ್ಚು ಜನರನ್ನು ತರುವ ಸಲುವಾಗಿ ಸತ್ಯವೇದದಲ್ಲಿನ ಕ್ರಮಗಳನ್ನು ನೀವು ಕೆಳಮಟ್ಟಕ್ಕೆ ಇಳಿಸಬೇಡಿ. ನೀವು ಕಡಿಮೆ ಗುಣಮಟ್ಟವನ್ನು ಹೊಂದಿಕೊಂಡು ಹೆಚ್ಚು ಜನರನ್ನು ನಿಮ್ಮ ಸಭೆಯಲ್ಲಿ ಹೊಂದಿರುವುದಕ್ಕಿಂತ ಉನ್ನತ ಗುಣಮಟ್ಟವನ್ನು ಹೊಂದಿಕೊಂಡು ಕಡಿಮೆ ಜನರನ್ನು ನಿಮ್ಮ ಸಭೆಯಲ್ಲಿ ಹೊಂದಿರುವುದು ದೇವರ ಕಣ್ಣಿನಲ್ಲಿ ಉತ್ತಮ ಸಭೆಯಾಗಿದೆ. ಸಭೆಯಲ್ಲಿ 300 ರಾಜಿಯಾಗುವಂತ ವಿಶ್ವಾಸಿಗಳು ಇರುವುದಕ್ಕಿಂತ 3 ಶಿಷ್ಯಂದಿರನ್ನು ಹೊಂದಿರುವುದು ಉತ್ತಮವಾಗಿದೆ. ಮೂರು ಹೃದಯಪೂರ್ವಕ ಶಿಷ್ಯಂದಿರು ಕ್ರಿಸ್ತನಿಗಾಗಿ ಒಂದು ಗ್ರಾಮವನ್ನು ಪ್ರಭಾವ ಸೆಳೆಯಬಹುದು, 300 ಜನ ರಾಜಿಯಾಗುವ ವಿಶ್ವಾಸಿಗಳಿಗಿಂತ. ಈ ಒಂದು ಭಾರವನ್ನು ದೇವರ ಪ್ರತಿಯೊಬ್ಬ ಸೇವಕನು ತನ್ನ ನಂತರದ ಸಂತತಿಗಾಗಿ ಹೊಂದಿರಬೇಕು. ಕ್ರೈಸ್ತ ಇತಿಹಾಸದಲ್ಲಿ, ಎರಡನೇ ಸಂತತಿಯು ಗುಣಮಟ್ಟವನ್ನು ಕೆಳಗೆ ಇಳಿಸುವಂತದ್ದನ್ನು ನಾವು ಕಂಡುಕೊಳ್ಳುತ್ತೀವಿ, ಏಕೆಂದರೆ ಅವರು ತಮ್ಮ ಸಂಸ್ಥಾಪಕನು ಹೊಂದಿದಂತ ಅದೇ ದೃಷ್ಠಿಕೋನವನ್ನು ಹೊಂದಿರುವುದಿಲ್ಲ. ಇಂದಿನ ದೊಡ್ಡ ಗುಂಪುಳ್ಳ ಸಭೆಗಳನ್ನು ಇಂದು ಅವರ ಸಂಸ್ಥಾಪಕರುಗಳ ದಿನದೊಟ್ಟಿಗೆ ಹೋಲಿಸಿ ನೋಡಿರಿ. ಆ ದೊಡ್ಡ ಗುಂಪಿನ ಸಂಸ್ಥಾಪಕರು ಇಂದು ಇಹಲೋಕಕ್ಕೆ ಬರುವುದಾದರೆ, ಅವರು ತಾವು ಸ್ಥಾಪಿಸಿದಂತಹ ಗುಂಪನ್ನು ಸೇರುವುದಿಲ್ಲ. - ಏಕೆಂದರೆ ಈ ಸಂಸ್ಥಾಪಕನು ಎತ್ತಿ ಹಿಡಿದಂತ ಮತ್ತು ಸಾರಿದಂತದ್ದನ್ನು ಕೆಳಮಟ್ಟಕೆ ಇಳಿಸಿರುವ ಸಲುವಾಗಿ. ಹೊರಗಡೆ ಸಿದ್ಧಾಂತವೆಂಬ ರೂಪ ಇರಬಹುದು, ಆದರೆ ಬಲ ಮತ್ತು ಅಭಿಷೇಕ ಹೊರಟು ಹೋಗಿದೆ. ಜೀವಿತ ಹೊರಟು ಹೋಗಿದೆ ಮತ್ತು ದೇವರ ತಿಳುವಳಿಕೆಯು ಹೊರಟು ಹೋಗಿದೆ. ನಾವು ಈ ಗುಣಮಟ್ಟಗಳನ್ನು ನಮ್ಮಲ್ಲಿ ವಾಸ ಮಾಡುವಂತ ಪವಿತ್ರಾತ್ಮನ ಮೂಲಕ ಕಾಪಾಡಿಕೊಳ್ಳಬೇಕು, ಏಕೆಂದರೆ ಇದು ಪವಿತ್ರ ನಿಧಿಯಾಗಿದೆ.