ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ Struggling
WFTW Body: 

ಲೂಕ 15 ರಲ್ಲಿನ ಮೂರು ಸಾಮ್ಯಗಳಲ್ಲಿ, ನಾಲ್ಕು ವಿಧವಾದ ಹಿಂಜಾರಿ ಬೀಳುವವರ ಚಿತ್ರಣಗಳನ್ನು ನಾವು ನೋಡಬಹುದು - ಅಂದರೆ, ಕುರಿಯನ್ನು ಕಳೆದುಕೊಂಡದ್ದರ ಚಿತ್ರಣ, ಕಿರಿಯ ಮಗನನ್ನು ಕಳೆದುಕೊಂಡದ್ದರ ಚಿತ್ರಣ, ಹಿರಿಯ ಮಗನನ್ನು ಕಳೆದುಕೊಂಡದ್ದರ ಚಿತ್ರಣ ಮತ್ತು ಪಾವಲಿಯನ್ನು ಕಳೆದುಕೊಂಡದ್ದರ ಚಿತ್ರಣ ಹಾಗೂ ತಂದೆ, ಮಗ, ಪವಿತ್ರಾತ್ಮನ ಅನ್ಯೋನ್ಯತೆಯನ್ನೂ ಸಹ ಕಳೆದು ಕೊಂಡದ್ದರ ಚಿತ್ರಣ.

ಕಳೆದು ಹೋದ ಕುರಿಯು ಒಬ್ಬ ವಿಶ್ವಾಸಿಯ ಚಿತ್ರಣವಾಗಿದ್ದು, ಅದು ಆಕಸ್ಮಿಕವಾಗಿ ದಾರಿ ತಪ್ಪಿರಲೂ ಬಹುದು ಅಥವಾ ಅಸಡ್ಡೆಯಿಂದಲೂ ದಾರಿ ತಪ್ಪಿರ ಬಹುದು. ಕುರುಬನು ದೇವರ ಮಗನಾದ ಯೇಸುವಿನ ಚಿತ್ರಣವಾಗಿದ್ದಾನೆ. ದುಂದುಗಾರ ಮಗನು, ದೇವರ ವಿರುದ್ಧವಾಗಿ ಮತ್ತು ಸಭೆಯ ವಿರುದ್ಧವಾಗಿ ದಂಗೆದ್ದು ಹೋದ ವಿಶ್ವಾಸಿಯ ಚಿತ್ರಣವಾಗಿದ್ದಾನೆ. ಇಲ್ಲಿ ದುಂದುಗಾರ ಮಗನ ತಂದೆಯು, ತಂದೆಯಾದ ದೇವರ ಚಿತ್ರಣವಾಗಿದ್ದಾನೆ. ಮೊದಲನೇ ಪ್ರಕರಣದಲ್ಲಿ ತಂದೆಯು ದುಂದುಗಾರ ಮಗನನ್ನು ಹುಡುಕಿಕೊಂಡು ಹೋಗಲಿಲ್ಲ. ಮಗನು ಹಂದಿಗಳ ಮಟ್ಟಕ್ಕೆ ತಲುಪಿದ ನಂತರ ತನ್ನ ಬಳಿಗೆ ಬರುವುದಕ್ಕಾಗಿ ತಂದೆಯು ಕಾಯ್ದನು. ಯಾರು ಧರ್ಮಶಾಸ್ತ್ರಕ್ಕೆ ಗಂಟು ಬಿದ್ದಿರುವುದರಲ್ಲಿ ಮತ್ತು ಸ್ವ-ನೀತಿವಂತಿಕೆಯಲ್ಲಿ ಮತ್ತು ಗರ್ವದಲ್ಲಿ ಮುಳುಗಿ ಹೋಗಿರುತ್ತಾರೋ, ಅವರ ಚಿತ್ರಣವೇ ಹಿರಿಯ ಮಗನಾಗಿದ್ದಾನೆ.

ಕಳೆದು ಹೋದ ಪಾವಲಿಯನ್ನು ಹುಡುಕುವ ಹೆಂಗಸಿನ ಚಿತ್ರಣ, ಸಭೆಯು ಪವಿತ್ರಾತ್ಮನಿಂದ ತುಂಬಿಸಲ್ಪಡುವುದರ ಚಿತ್ರಣವಾಗಿದೆ. ಆಕೆಯು ದೀಪಾ ಹಚ್ಚಿ ಮನೆಯನ್ನು ಗುಡಿಸಿ ಪಾವಲಿಗಾಗಿ ಹುಡುಕುತ್ತಾಳೆ (ಲೂಕ 15:8) ಮತ್ತು ಪಾವಲಿ ಸಿಗುವವರೆಗೂ ಆಕೆಯು ತುಂಬಾ ಎಚ್ಚರಿಕೆಯಿಂದ ಅದನ್ನು ಹುಡುಕಿದಳು. ಈ ಹೆಂಗಸು ಪಾವಲಿ ಕಳೆದುಕೊಂಡಾಗ, ಆಕೆಯು ಅಸಡ್ಡೆಯುಳ್ಳ ಸಭೆಯ ಚಿತ್ರಣವಾಗಿದ್ದು, ಕೆಲವರು ಹಿಂಜಾರಿ ಹೋಗುವುದಕ್ಕೆ ಈ ಸಭೆಯೇ ಮೂಲ ಕಾರಣವಾಗುವಂತ ಚಿತ್ರಣವನ್ನು ತೋರಿಸುತ್ತದೆ (ಪಾವಲಿ ಕಳೆದು ಹೋದಂತ ಸ್ಥಿತಿಯಲ್ಲಿರುವುದು). ನಂತರ ಆಕೆ ದೀಪಾ ಹಚ್ಚಿ (ಆಕೆಯು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಳು) ಹುಡುಕಲು ಆರಂಭಿಸಿದಳು ಮತ್ತು ಆಕೆಯು ಹಿಂಜಾರಿ ಬಿದ್ದಂತವರನ್ನು ಕಂಡುಹಿಡಿದು, ಅವರನ್ನು ಹಟ್ಟಿಯಲ್ಲಿ (ಸಭೆ) ತಂದು ಕೂಡಿಸಿಟ್ಟಳು. ಅನೇಕ ವಿಶ್ವಾಸಿಗಳು, ಕಳೆದು ಹೋದಂತವರಿಗಾಗಿ ಮತ್ತು ಹಿಂಜಾರಿ ಬಿದ್ದಂತವರಿಗಾಗಿ ಯಾವುದೇ ಭಾರವನ್ನು ಹೊಂದಿಲ್ಲ. ಅವರು ತಮ್ಮಲಿ ಮಾತ್ರ ಆಸಕ್ತಿ ಹೊಂದಿರುತ್ತಾರೆ. ಇಂತಹ ವಿಶ್ವಾಸಿಗಳು ತಂದೆಯಾದ ದೇವರ ಮತ್ತು ದೇವರ ಮಗನ ಮತ್ತು ಪವಿತ್ರಾತ್ಮನ ಜೊತೆ ಸಂಪೂರ್ಣವಾಗಿ ಸಂಬಂಧ ವಿಲ್ಲದವರಾಗಿದ್ದಾರೆ. ಅನೇಕ ವರ್ಷಗಳ ಕಾಲ ನಾನು ಮಾಡಿದ ಪ್ರಾರ್ಥನೆ ಏನಾಗಿತ್ತೆಂದರೆ, ( ಮತ್ತು ನಾನು ನಮ್ಮ ಸಭೆಯ ಸಭಾ ಹಿರಿಯರಿಗೆ ಈ ರೀತಿಯಾಗಿ ಪ್ರಾರ್ಥಿಸುವಂತೆ ಪ್ರೋತ್ಸಾಹಿಸಿದ್ದೇನೆ). ”ಕರ್ತನೇ, ಯಾರಾದರೂ ಈ ಕ್ಷೇತ್ರದಲ್ಲಿ ದೈವಿಕ ಜೀವಿತಕ್ಕಾಗಿ ಹುಡುಕುತ್ತಿದ್ದರೆ, ದಯವಿಟ್ಟು ಅವರನ್ನು ನಮ್ಮ ಬಳಿಗೆ ಕರೆ ತಂದು ನಮ್ಮೊಟ್ಟಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವಂತೆ ಮಾಡು ಅಥವಾ ಅವರೊಟ್ಟಿಗೆ ಸಂಬಂಧ ವೃದ್ದಿಸುವಂತೆ ನಮ್ಮನ್ನು ಅವರ ಕಡೆ ನಡೆಸು ಮತ್ತು ನೀನು ಇವರೆಡರಲ್ಲಿ ಯಾವುದಾದರೂ ಒಂದನ್ನು ಮಾಡದಿದ್ದರೆ, ನಮ್ಮಲ್ಲಿ ಏನು ತಪ್ಪಿದೆ ಎಂದು ನಮಗೆ ತಿಳಿಸು, ಇದನ್ನು ಮೊದಲು ನಾವು ಸರಿ ಮಾಡಿಕೊಳ್ಳುತ್ತೇವೆ, ಇದರ ಮೂಲಕ ನಿನ್ನೊಟ್ಟಿಗೆ ಸೇರಿಕೊಂಡು, ಕಳೆದು ಹೋದದ್ದನ್ನು ಹುಡುಕುತ್ತೇವೆ”. ನೀವು ಈ ರೀತಿಯ ಪ್ರಾರ್ಥನೆ ಮಾಡಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.

ಈ ರೀತಿಯಾದ ಹಟ್ಟಿಯೊಳಗೆ ನಾವು ಕಳೆದುಹೋದ ಕುರಿಗಳನ್ನು ತರುವುದು ತುಂಬಾ ಮುಖ್ಯ. ಒಂದು ಹಟ್ಟಿ 99 ಕುರಿಗಳನ್ನು ಹಿಡಿಸುತ್ತದೆ ಎಂದಿಟ್ಟುಕೊಳ್ಳೋಣ, ಈ ತೊಂಭತ್ತೊಂಬತ್ತು ಕುರಿಗಳು ಪೂರ್ಣ ಖಾಯಿಲೆಗಳಿಂದ ಮತ್ತು ಕಚ್ಚುವ ಹಾಗೂ ಒಂದಕ್ಕೊಂದು ಸೀಳುವಂತ ಸ್ಥಿತಿಯಲ್ಲಿದ್ದರೆ, ಇವುಗಳ ಮಧ್ಯದಲ್ಲಿ ಕಳೆದು ಹೋದ ಕುರಿಯು ಈ ಹಟ್ಟಿಯೊಳಗೆ ಸೇರುವುದಕ್ಕಿಂತ ಅರಣ್ಯದೊಳಗೆ ಸೇರುವುದು ಉತ್ತಮ. ಆದ್ದರಿಂದ ಕುರಿಯ ಹಿಂದೆ ಹೋಗುವಂತ ಸೇವೆಯ ಅಗತ್ಯತೆ ಮಾತ್ರವಲ್ಲದೆ, 99 ಕುರಿಗಳನ್ನು ಆರೋಗ್ಯವುಳ್ಳಂತವುಗಳನ್ನಾಗಿ ಮತ್ತು ಸಮಾಧಾನವುಳ್ಳವುಗಳನ್ನಾಗಿ ಮಾಡುವ ಸೇವೆಯ ಅಗತ್ಯತೆಯು ಸಹ ನಮಗಿದೆ. ಯೇಸು ಹೀಗೆ ಹೇಳಿದ್ದಾರೆ, ”ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಬತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ (ಅದು ಕಳೆದುಹೋದ ಕುರಿಯು) ಪರಲೋಕದಲ್ಲಿ ಸಂತೋಷವುಂಟಾಗುವದು” (ಲೂಕ 15:7). ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಬತ್ತು ಮಂದಿ ನೀತಿವಂತರಿರುವ ಸಭೆಯು! ಎಂತಹ ಅದ್ಬುತ ಸಭೆಯಾಗಿದೆ (ಹಟ್ಟಿ). ಹೇಗಿದು? ಇದು ಏಕೆಂದರೆ, ಅವರು ತಮ್ಮನ್ನು ತಾವು ತೀರ್ಪು ಮಾಡಿಕೊಳ್ಳುತ್ತಿದ್ದಾರೆ ಮತ್ತು ಪ್ರತಿನಿತ್ಯ ಮಾನಸಾಂತರ ಪಡುತ್ತಿದ್ದಾರೆ. ಇದು ಅನೇಕ ವರ್ಷಗಳಿಂದ ನನ್ನ ಹವ್ಯಾಸವಾಗಿದೆ. ಇದರ ಫಲಿತಾಂಶವೇನೆಂದರೆ, ಕಳೆದ ಕೆಲವು ವರುಷಗಳಿಂದ ಪ್ರತಿನಿತ್ಯ ನನ್ನ ಜೀವಿತದಲ್ಲಿ ಕ್ರಿಸ್ತನ ರೀತಿಯಲ್ಲಿ ಇಲ್ಲದ ಕೆಲವು ಅಂಶಗಳನ್ನು ನಾನು ಕಂಡುಕೊಳ್ಳುತ್ತಿದ್ಡೇನೆ ಮತ್ತು ಆದರಿಂದ ಮಾನಸಾಂತರ ಪಡುತ್ತಿದ್ದೇನೆ ಹಾಗೂ ಅದರಿಂದ ನನ್ನನ್ನು ನಾನು ತೊಳೆದುಕೊಳ್ಳುತ್ತಿದ್ದೇನೆ. ನೀವು ಈ ರೀತಿಯಾಗಿದ್ದರೆ, ಇನ್ನೊಬ್ಬರಲ್ಲಿ ತಪ್ಪನ್ನು ಕಂಡುಹಿಡಿಯಲು ನಿಮಗೆ ಸಮಯವೇ ಸಿಗುವುದಿಲ್ಲ - ಏಕೆಂದರೆ ನೀವು ನಿಮ್ಮನ್ನು ನೀವು ತೊಳೆದುಕೊಳ್ಳುವುದರಲ್ಲಿ ಮಗ್ನರಾಗಿರುತ್ತೀರಿ. ನಂತರ ನೀವು ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಶ್ಯವಿಲ್ಲದ ಜನರ ಸಭೆಯನ್ನು ಕಟ್ಟಬಹುದು, ಈ ಸಭೆಯಲ್ಲಿ ಕಳೆದು ಹೋದ ಕುರಿಯು ಬಂದು ಸ್ವಸ್ಥ ಹೊಂದುತ್ತದೆ. ಅದಕ್ಕಾಗಿಯೇ ನಮ್ಮ ಸಭೆಗಳಲ್ಲಿ ನಿರಂತರವಾಗಿ ಮಾನಸಾಂತರದ ಬಗ್ಗೆ ಬೋಧಿಸುತ್ತೇವೆ. ಕ್ರಮೇಣವಾಗಿ, ಕೆಲವು ಸಮಯದ ನಂತರ, ನಾವು ಯಾವ ರೀತಿಯ ಸಭೆಯನ್ನು ಹೊಂದಿರುತ್ತೀವಿ ಎಂದರೆ, ಜನರು ತಮ್ಮನ್ನು ತಾವು ತೀರ್ಪು ಮಾಡಿಕೊಳ್ಳುವಂತಹ ಮತ್ತು ಇನ್ನೊಬ್ಬರನ್ನು ತೀರ್ಪು ಮಾಡದಂತಹ ಸಭೆಯನ್ನು ಹೊಂದಿರುತ್ತೀವಿ.

ಸಭೆಯಲ್ಲಿ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯು ಕರ್ತನ ಸೇವಕರಾಗಿರಬೇಕು ಮತ್ತು ಕಳೆದು ಹೋದಂತವರ ವಿಷಯವಾಗಿ ತಂದೆಯ ಹೃದಯದೊಟ್ಟಿಗೆ ಅನ್ಯೋನ್ಯತೆಯನ್ನು ಹಂಚಿಕೊಳ್ಳಬೇಕು

ಕುರುಬನು ಕುರಿಯನ್ನು ಯಾವಾಗ ಕಳೆದುಕೊಂಡನೋ, ಅದರ ನಷ್ಟ ಕುರುಬನದಾಗಿತ್ತು. ಹೆಂಗಸು ಪಾವಲಿಯನ್ನು ಕಳೆದುಕೊಂಡಾಗ, ಅದರ ನಷ್ಟ ಹೆಂಗಸಿನದಾಗಿತ್ತು ಮತ್ತು ಕಳೆದು ಹೋದ ಮಗನ ಪ್ರಕರಣದಲ್ಲಿ, ನಷ್ಟವು ತಂದೆಯದಾಗಿತ್ತು. ಈ ಎಲ್ಲಾ ಸಾಮ್ಯಗಳಲ್ಲಿ, ಯೇಸು ಏನು ಬೋಧಿಸುತ್ತಿದ್ದಾರೆ ಎಂದರೆ, ಒಬ್ಬ ಮನುಷ್ಯ ಪಾಪ ಮಾಡಿದಾಗ, ದೇವರು ಏನೋ ಒಂದನ್ನು ಕಳೆದುಕೊಳ್ಳುತ್ತಾರೆ. ಸಭೆಯಲ್ಲಿ ನಮ್ಮ ಕೆಲಸ ಏನೆಂದರೆ, ದೇವರು ಕಳೆದುಕೊಂಡಿದ್ದನ್ನು ಹಿಂತಿರುಗಿ ಕರೆದುಕೊಂಡು ಬರುವುದಾಗಿದೆ.

ಒಂದು ಸಂಗತಿ ಏನೆಂದರೆ, ತನ್ನ ತಂದೆಯು ಪ್ರೀತಿಸುತ್ತಾನೆ ಎಂದು ಕಳೆದು ಹೋದ ಮಗನು ಅರಿತಿದ್ದನು. ಅದಕ್ಕಾಗಿಯೇ ಆತನು ಮನೆಗೆ ಬರಲು ನಿರ್ಧರಿಸಿದನು. ಮಗನು ಈ ದಿನ ಹಿಂದಿರುಗಿ ಬರುತ್ತಾನೆ ಎಂದು ತಂದೆಗೆ ಹೇಗೆ ಗೊತ್ತಿತ್ತು? ಏಕೆಂದರೆ ತಂದೆಯು ಪ್ರತಿನಿತ್ಯ ಕಿಟಕಿಯಲ್ಲಿ ಮಗನ ಹಿಂತಿರುಗುವಿಕೆಯನ್ನು ಎದುರು ನೋಡುತ್ತಿದ್ದನು ಮತ್ತು ಒಂದು ದಿನ, ತಂದೆಯು ಮಗನನ್ನು ನೋಡಿ, ಆತನನ್ನು ಸ್ವಾಗತಿಸಲು ಓಡಿ ಬಂದನು. ಹಾಗಿದ್ದರೂ, ಹಿರಿಯ ಮಗನು ತನ್ನ ತಂದೆಯ ಹೃದಯದ ಅಭಿಲಾಷೆಯನ್ನು ಹಂಚಿಕೊಳ್ಳಲಿಲ್ಲ. ಹಿರಿಯ ಮಗನು ತನ್ನ ತಂದೆಗಾಗಿ ಕಷ್ಟಪಟ್ಟು ಕೆಲಸ ಮಾಡಿದನು ಮತು ಆತನಿಗೆ ಯಾವಾಗಲು ವಿಧೇಯನಾದನು (ಲೂಕ 15:28, 29). ಆದರೆ ಕಳೆದು ಹೋದದ್ದರ ವಿಷಯವಾಗಿ ಅಭಿಲಾಷೆಯನ್ನು ಹಿರಿಯ ಮಗನು ಹೊಂದಿರಲಿಲ್ಲ. ಹಿರಿಯ ಮಗನು ತನ್ನ ತಂದೆಯ ಹೃದಯದೊಟ್ಟಿಗೆ ಅನ್ಯೋನ್ಯತೆಯನ್ನು ಹೊಂದಿರಲಿಲ್ಲ. ”ನನ್ನ ಕಿರಿಯ ಸಹೋದರನನ್ನು ನೋಡಿಕೊಂಡು ಬರಲು ಮತ್ತು ಆತನನ್ನು ಕಂಡು ಹಿಡಿಯಲು ಅನುಕೂಲವಾಗುವಂತೆ ನನ್ನನ್ನು ಹೋಗಲು ಬಿಡು” ಎಂದು ಒಂದು ಸಾರಿನೂ ಸಹ ಹಿರಿಯ ಮಗನು ತನ್ನ ತಂದೆಗೆ ಹೇಳಲಿಲ್ಲ.

ಇಲ್ಲಿ ಎರಡು ವಿಧವಾದ ಕ್ರೈಸ್ತ ಕೆಲಸಗಾರರು ಮತ್ತು ಹಿರಿಯರು ಇರುತ್ತಾರೆ. ಒಬ್ಬರು ಈ ಸಾಮ್ಯದಲ್ಲಿ ಹೇಳಿರುವ ಪೂರ್ಣ ಪ್ರೀತಿ ಮತ್ತು ಕರುಣೆಯನ್ನು ಹೊಂದಿದಂತ ತಂದೆಯ ಪ್ರಕಾರ. ಮತ್ತೊಬ್ಬರು ಹಿರಿಯ ಮಗನ ರೀತಿ, ಕಠಿಣ ಮತ್ತು ಬಿರುಸಾದ ಹಾಗೂ ವೃತ್ತಿ ಮರ್ಯಾದೆ ತೋರಿಸುವಂತಿರುವ ಪ್ರಕಾರ. ಈ ಎರಡು ವಿಧದಲ್ಲಿ ಯಾವುದರ ಹಿಂದೆ ನಾವು ಹೋಗಬೇಕು ಎಂದು ನಾವೆಲ್ಲರೂ ಆಯ್ಕೆಯನ್ನು ಮಾಡಿಕೊಳ್ಳಬೇಕು. ಈ ಕಥೆಯಲ್ಲಿನ (ಸಾಮ್ಯ) ಪ್ರಾರಂಭದಲ್ಲಿ, ಹಿರಿಯ ಮಗನು ಮನೆಯ ಒಳಗಡೆ ಇರುತ್ತಾನೆ ಮತ್ತು ಕಿರಿಯ ಮಗನು ಹೊರಗಡೆ ಇರುತ್ತಾನೆ. ಆದರೆ ಕಥೆ ಮುಗಿದಾಗ, ಕಿರಿಯ ಮಗನು ಮನೆಯ ಒಳಗಡೆ ಇರುತ್ತಾನೆ ಮತ್ತು ಹಿರಿಯ ಮಗನು ಮನೆಯ ಹೊರಗಡೆ ಇರುತ್ತಾನೆ. ದೇವರ ರಾಜ್ಯದಲ್ಲಿ ಮೊದಲಿರುವ ಅನೇಕರು ಕೊನೆಯಲ್ಲಿರುತ್ತಾರೆ. ಅನೇಕ ಕ್ರೈಸ್ತರು ದೇವರ ರಾಜ್ಯದ ಹೊರಗಡೆ ಇರುತ್ತಾರೆ. ಏಕೆಂದರೆ ಅವರು ತಂದೆಯ ಹೃದಯದೊಟ್ಟಿಗೆ ಅನ್ಯೋನ್ಯತೆಯನ್ನು ಹೊಂದಿರುವುದಿಲ್ಲ. ಸಭೆಯಲ್ಲಿ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯು ಕರ್ತನ ಸೇವಕರಾಗಿರಬೇಕು ಮತ್ತು ಕಳೆದು ಹೋದಂತವರ ವಿಷಯವಾಗಿ ತಂದೆಯ ಹೃದಯದೊಟ್ಟಿಗೆ ಅನ್ಯೋನ್ಯತೆಯನ್ನು ಹಂಚಿಕೊಳ್ಳಬೇಕು.