ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ಜೆಕರ್ಯನು ಆಶೀರ್ವದಿಸಲ್ಪಟ್ಟಂತ ಸೇವೆಯನ್ನು ಹೊಂದಿದ್ದನು, ಅಂದರೆ ನಿರುತ್ಸಾಹಗೊಂಡಂತ ಜನರನ್ನು ಪ್ರೋತ್ಸಾಹ ಪಡಿಸುತ್ತಿದ್ದನು. ಯಹೂದ್ಯರು, ತಮ್ಮ ತಂದೆಗಳು ಆಳಾಗಿದ್ದಂತಹ ಸ್ಥಳವಾದ ಬಾಬೆಲೋನಿಯನ್ ನಿಂದ ಆಗ ತಾನೇ ಬಂದಂತವರಾಗಿದ್ದರು ಮತ್ತು ಅವರು ಬಡವರಾಗಿದ್ದರು, ಭಯಪಡುವವರಾಗಿದ್ದರು ಮತ್ತು ನಿರುತ್ಸಾಹಗೊಂಡಿದ್ದರು. ಅವರು ಮನುಷ್ಯರಿಂದ ತುಂಬಾ ಹೊಡೆತಕ್ಕೆ ಒಳಗಾಗಿದ್ದರು. ಅವರು 2000 ವರ್ಷಗಳಿಗಿಂತ ಮುಂಚಿನ ತಮ್ಮ ತಂದೆಗಳ ರೀತಿ ಸುಸಂಸ್ಕೃತರಾಗಿರಲಿಲ್ಲ, ಸಂಸ್ಕಾರದಿಂದ ಕೂಡಿದವರಾಗಿರಲಿಲ್ಲ ಅಥವಾ ಐಶ್ವರ್ಯವಂತರಾಗಿರಲಿಲ್ಲ.

ಜೆಕರ್ಯ 2:5 ರಲ್ಲಿ, ದೇವರು ಅವರಿಗೆ ಈ ರೀತಿಯಾಗಿ ಹೇಳಿದರು, ”ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾಗಿಯಾಗಿರುವೆನು” (ಕೆ.ಜೆ.ವಿ.ಭಾಷಾಂತರ) . ಸಭೆಯು ಲೋಕದ ಮತ್ತು ಧಾರ್ಮಿಕ ಗುಂಪಿಗೆ ಸೇರಿದ ಯಾವ ಗೋಡೆಯನ್ನು ಹೊಂದಿರಲಿಲ್ಲ. ಸಿದ್ದಾಂತಗಳ ಹೇಳಿಕೆಯನ್ನು ಹಾಡುವುದರಿಂದ ನೀವು ಒಳಗೆ ಬರಲು ಆಗುವುದಿಲ್ಲ. ಒಬ್ಬನು ನಿಜವಾದ ಸಭೆಯ ಭಾಗವಾಗಬೇಕಾದರೆ ಪ್ರತಿಯೊಬ್ಬರು ಬೆಂಕಿಯ ಗೋಡೆಯ ಮೂಲಕವೇ ಹಾದುಬರಬೇಕಿತ್ತು. ಆ ಬೆಂಕಿಯು ಒಬ್ಬ ಮನುಷ್ಯನಲ್ಲಿನ ಲೋಕದ ಎಲ್ಲಾ ಮಹತ್ವಾಕಾಂಕ್ಷೆಗಳನ್ನು ಸುಡುತ್ತದೆ ಮತ್ತು ತನಗಾಗಿ ಜೀವಿಸುವಂತ ಬಯಕೆಯನ್ನು ಸಹ ಸುಡುತ್ತದೆ. ನಂತರ ಮಾತ್ರವೇ ಒಬ್ಬನು ಕ್ರಿಸ್ತನ ದೇಹದ ಭಾಗವಾಗಿರಲು ಸಾಧ್ಯ.

ಬೆಂಕಿಯ ಗೋಡೆಯಿಂದ ಸುತ್ತುವರೆದಂತ ಪಟ್ಟಣದ ಚಿತ್ರಣವನ್ನು ನೋಡುವುದಾದರೆ, ನೀವು ಆ ಪಟ್ಟಣಕ್ಕೆ ಹೇಗೆ ಪ್ರವೇಶ ಮಾಡುತ್ತೀರಿ? ಆ ಬೆಂಕಿಯ ಗೋಡೆಯ ಮೂಲಕ ಹಾದು ಹೋಗುವುದರಿಂದ ಮಾತ್ರ ನೀವು ಆ ಪಟ್ಟಣವನ್ನು ಪ್ರವೇಶಿಸಬಹುದು. ನೀವು ಆ ಬೆಂಕಿಯ ಗೋಡೆಯ ಮೂಲಕ ಹಾದುಹೋಗುವುದರಿಂದ, ಎಲ್ಲವೂ ಸುಡಲ್ಪಡುತ್ತದೆ, ಅದು ದೇವರಿಂದಲೇ ಸುಟ್ಟು ಹಾಕಲ್ಪಡುತ್ತದೆ. ಬೆಂಕಿಯ ಮೂಲಕ ಹೋಗುವಂತದ್ದು ಮಾತ್ರ ಸುಡಲ್ಪಡುತ್ತದೆ, ಹೋಗದೇ ಇರುವಂತದ್ದು ಸುಡಲ್ಪಡುವುದಿಲ್ಲ. ”ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ” (ಇಬ್ರಿಯ 12:29). ”ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು” (ಯೆಶಾಯ 33: 14).

ನಾನು, ಈ ಬೆಂಕಿಯ ಗೋಡೆಯೊಳಗೆ ಸೇರಿದಂತ ಪೂರ್ಣ ಹೃದಯವುಳ್ಳ ದೇವರ ಜನರ ಜೊತೆ ಮತ್ತು ಯಾರ ಮಧ್ಯದಲ್ಲಿ ದೇವರ ಮಹಿಮೆ ಇರುತ್ತದೋ, ಅಂತವರ ಜೊತೆ ಸೇರಲು ಇಚ್ಛೆ ಪಡುತ್ತೇನೆ

ಪ್ರಸಂಗಿಗಳು, ಹಲವಾರು ವರುಷಗಳಿಂದ, ಆ ಅಗ್ನಿಗೆ ನೀರನ್ನು ಹಾಕುವ ಮೂಲಕ, ಅದನ್ನು ಆರಿಸಿದ್ದಾರೆ, ಹೀಗಾಗಿ, ಇನ್ನೂ ಸಹ ಲೋಕದ ಆಲೋಚನೆಗಳನ್ನೂ, ಅವರ ಲೋಕದ ಮಹತ್ವಾಕಾಂಕ್ಷೆಗಳನ್ನೂ ಮತ್ತು ಲೋಕದ ಮೇಲಿನ ಪ್ರೀತಿಯನ್ನೂ ಹೊಂದಿ, ಇತ್ತೀಚೆಗೆ ಯಾರು ಬೇಕಾದರೂ ಸಭೆಗೆ ಹೋಗಬಹುದು ಮತ್ತು ಆ ಸಭೆಗೆ ಸೇರ ಬಹುದು. ದೇವರು ಇಂತಹ ಸಭೆಯಲ್ಲಿ ಇರುವುದಿಲ್ಲ ಎಂಬುದಾಗಿ ನೀವು ನಿಶ್ಚಯಪಡಿಸಿಕೊಳ್ಳಬೇಕು. ಏಕೆಂದರೆ ಆತನು ಎಲ್ಲಿಯೇ ನೆಲಿಸಿದರೂ, ಆ ಸಭೆಯ ಸುತ್ತಾ ಬೆಂಕಿಯ ಗೋಡೆಯಾಗಿರುತ್ತಾನೆ.

ಮತ್ತು ನಂತರ ದೇವರು ಹೀಗೆ ಹೇಳುತ್ತಾ ಹೋಗುತ್ತಾರೆ, ”ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು" (ಕೆ.ಜೆ.ವಿ ಭಾಷಾಂತರ) (ಜೆಕರ್ಯ 2:5). ನಿಮ್ಮ ಸಭೆಯಲ್ಲಿ ದೇವರ ಮಹಿಮೆ ಇರಬೇಕು ಎಂಬುದಾಗಿ ನೀವು ಇಚ್ಛಿಸುವುದಾದರೆ, ನಿಮ್ಮ ಸಭೆಯ ಸುತ್ತಲೂ ದೇವರು ಬೆಂಕಿಯ ಗೋಡೆಯಾಗಿರಲು ಅನುಮತಿಸಬೇಕು. ಈ ಎರಡೂ ಒಟ್ಟಾಗಿ ಹೋಗುತ್ತವೆ. ದೇವರ ಗುಣಮಟ್ಟವು ತುಂಬಾ ಉನ್ನತವೂ ಎಂದು ಹೇಳಿ, ಆ ಬೆಂಕಿಯ ಮೇಲೆ ನೀರನ್ನು ಹಾಕುವುದಾದರೆ, ದೇವರ ಮಹಿಮೆಯು ನಿಮ್ಮ ಸಭೆಯಲ್ಲಿ ಇರುವುದಿಲ್ಲ. ಸಭೆಯ ಸುತ್ತಾ ಬೆಂಕಿಯ ಗೋಡೆ ಇಲ್ಲವಾದಾಗ, ಮಹಿಮೆ ಸಹ ಹೊರಟು ಹೋಗುತ್ತದೆ. ಸಿದ್ಧಾಂತ ತುಂಬಾ ಮುಖ್ಯ. ಆದರೆ ಯಾವುದೇ ಸಿದ್ಧಾಂತವೂ ಬೆಂಕಿಯ ಗೋಡೆಯಾಗಿರಲು ಸಾಧ್ಯವಿಲ್ಲ. ದೇವರೇ ಬೆಂಕಿಯ ಗೋಡೆಯಾಗಿರಬೇಕು. ಸಭೆಯಲ್ಲಿ ತುಂಬಾ ಮುಖ್ಯವಾದ ಸಂಗತಿಯು ಸರಿಯಾದ ಸಿದ್ಧಾಂತವಲ್ಲ, ಆದರೆ ದೇವರ ಮಹಿಮೆಯಾಗಿದೆ. ದೇವರ ಮಹಿಮೆ ಇರುವುದಾದರೆ, ಸರಿಯಾದ ಸಿದ್ಧಾಂತವೂ ಮಹಿಮೆಯನ್ನು ಹಿಂಬಾಲಿಸುತ್ತದೆ. ದೇವರ ಮಹಿಮೆ ಅಲ್ಲಿರದಿದ್ದರೆ, ನೀತಿಯುಳ್ಳ ಸಿದ್ಧಾಂತವು ಪ್ರಯೋಜನಕ್ಕೆ ಬಾರದಾಗಿರುತ್ತದೆ.

”ಬಾಬೆಲೋನ್ ನಿಂದ ಹೋರ ಬನ್ನಿರಿ, ಯೆರೂಸಲೇಮಿಗೆ ಓಡಿ ಹೋಗಿರಿ'' (ಜೆಕರ್ಯ 2:6). ಇದು ಎಂತಹ ವಾಕ್ಯ! ಇಂದು ಸಹ ಈ ವಾಕ್ಯವನ್ನು ದೇವರ ಜನರಿಗೆ ಸಾರಬೇಕು! ಪ್ರತಿ ವಿಶ್ವಾಸಿಯು ಬಾಬೇಲೋನ್ ನಿಂದ ಹೊರ ಬರುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ದೇವರು, ಯಾರ ಕೊಳಪಟ್ಟಿಯನ್ನು ಹಿಡಿದು, ಹೊರಗೆ ತರುವುದಿಲ್ಲ. ಒಂದು ಜವಬ್ದಾರಿ ಏನೆಂದರೆ, ಹೊರಬರುವುದು ವೈಯುಕ್ತಿಕ ವಿಚಾರವಾಗಿದೆ. ನೀವು ಆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮಗೆ ವೈಯುಕ್ತಿಕವಾಗಿ ಮಾತಾನಾಡುತ್ತೇನೆ, ದೇವರಿಗೆ ಸನ್ಮಾನಿಸದೇ ಇರುವಂತ ಹಾಗೂ ಆತನ ವಾಕ್ಯವನ್ನು ಸನ್ಮಾನಿಸದೇ ಇರುವಂತ ಯಾವುದೇ ಧಾರ್ಮಿಕ ಪದ್ಧತಿಗೆ ಭಾಗವಾಗಲು ನನಗೆ ಇಚ್ಛೆಯಿಲ್ಲ. ನಾನು, ಈ ಬೆಂಕಿಯ ಗೋಡೆಯೊಳಗೆ ಸೇರಿದಂತ ಪೂರ್ಣ ಹೃದಯವುಳ್ಳ ದೇವರ ಜನರ ಜೊತೆ ಮತ್ತು ಯಾರ ಮಧ್ಯದಲ್ಲಿ ದೇವರ ಮಹಿಮೆ ಇರುತ್ತದೋ, ಅಂತವರ ಜೊತೆ ಸೇರಲು ಇಚ್ಛೆ ಪಡುತ್ತೇನೆ.

ನೀವು ಸಭೆಯನ್ನು ಕಟ್ಟಲು ಬಯಸುತ್ತಿದ್ದರೆ, ಈ ರೀತಿಯ ಸಭೆಯನ್ನು ಕಟ್ಟಿ. ಬೇರೆ ಯಾವುದೇ ರೀತಿಯ ಸಭೆಯು ಪ್ರಯೋಜನಕ್ಕೆ ಬಾರದು. ನೀವು ಈ ರೀತಿಯ ಸಭೆಯನ್ನು ಕಟ್ಟಲು ಬೆಲೆಯನ್ನು ತೆತ್ತಬೇಕು. ನೀವು ಎಲ್ಲೋ ನೋಡಿದ ಮಾದರಿಯನ್ನು ಅನುಕರಣೆ ಮಾಡಿ, ಪ್ರಯತ್ನಿಸಿ ಸಭೆಯನ್ನು ಕಟ್ಟಲು ಆಗುವುದಿಲ್ಲ. ದೇವರಿಗೆ ಮೆಚ್ಚಿಗೆಯಾಗುವಂತ ರೀತಿಯಲ್ಲಿ ಸಭೆಯನ್ನು ಕಟ್ಟುವುದಕ್ಕಿಂತ ಮುಂಚೆ, ದೇವರು ಎಲ್ಲವನ್ನು ಸುಡಬೇಕು, ಅದು ಮೊದಲು ನಿಮ್ಮ ಜೀವಿತದಲ್ಲಿ ಸುಡಲ್ಪಡಬೇಕು. ನಿಮ್ಮಲ್ಲಿರುವ ಲೋಕದ ಪ್ರತಿ ಮಹತ್ವಾಕಾಂಕ್ಷೆಗಳು ಸುಡಲ್ಪಟ್ಟಿವೆಯಾ ಎಂದು ನಿಶ್ಚಯಪಡಿಸಿಕೊಳ್ಳಿ. ದೇವರು ಪ್ರೀತಿಸದೇ ಇರುವಂತ ಯಾವುದನ್ನೂ ಸಹ ನೀವೂ ಪ್ರೀತಿಸುತ್ತಿಲ್ಲವಾ ಎಂದು ನಿಶ್ವಯಪಡಿಸಿಕೊಳ್ಳಿ ಮತ್ತು ದೇವರು ದ್ವೇಷಿಸುವಂತ ಪ್ರತಿಯೊಂದನ್ನು ಸಹ ನೀವೂ ದ್ವೇಷಿಸುತ್ತಿದ್ದೀರಾ ಎಂದು ನಿಶ್ಚಯಪಡಿಸಿಕೊಳ್ಳಿ. ನಂತರ ನೀವು, ದೇವರು ತನ್ನ ಸಭೆಯನ್ನು ಕಟ್ಟಲು ಉಪಯೋಗಿಸುವಂತ ದೇವರ ಪುರುಷ/ಸ್ತ್ರೀ ಆಗುತ್ತೀರಿ.