ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ಯೆಹೋಶುವ 6:2 ರಲ್ಲಿ, ದೇವರು ಯೆಹೋಶುವನಿಗೆ ಹೀಗೆ ಹೇಳುತ್ತಾರೆ, ”ನೋಡು ನಾನು ಯೆರಿಕೋವನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ” ಎಂಬುದಾಗಿ. ನಾವು ಸೈತಾನನ ವಿರುದ್ದವಾಗಿ ಯುದ್ದಕ್ಕೆ ಹೋಗುವಾಗ, ಇದನ್ನೇ ನಾವು ಗೊತ್ತುಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಅಂದರೆ, ಸೈತಾನನು ಈಗಾಗಲೇ ಕಲ್ವಾರಿಯ ಮೇಲೆ ಸೋಲಲ್ಪಟ್ಟಿದ್ದಾನೆ ಮತ್ತು ದೇವರು ಸೈತಾನನನ್ನು ನಮ್ಮ ಕಾಲುಗಳ ಕೆಳಗೆ ತುಳಿಸಿ ಬಿಡುವನು (ರೋಮ 16:20). ದೇವರು ಯೆಹೋಶುವನಿಗೆ ಈ ರೀತಿಯಾಗಿ ಹೇಳಲಿಲ್ಲ, ”ನಾನು ಯೆರಿಕೋವನ್ನೂ ನಿನ್ನ ಕೈಗೆ ಇನ್ನು ಏಳು ದಿವಸಗಳಲ್ಲಿ ಕೊಡುತ್ತೇನೆ” ಎಂಬುದಾಗಿ. ಇಲ್ಲ. ದೇವರು ಈ ರೀತಿಯಾಗಿ ಹೇಳಿದರು, ”ನಾನು ಯೆರಿಕೋವನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ” ಸುಮ್ಮನೆ ಅದರ ಒಳಗಡೆ ಹೋಗಿ ಅದನ್ನು ವಶಮಾಡಿಕೊ ಎಂದು ಹೇಳಿದರು.

ಎಲ್ಲಾ ಇಸ್ರಾಯೇಲ್ಯರು ಏಳು ದಿವಸಗಳಲ್ಲಿ 13 ಬಾರಿ ಪಟ್ಟಣವನ್ನು ಸುತ್ತಬೇಕಿತ್ತು ಮತ್ತು ಏಳನೇಯ ದಿನದಲ್ಲಿ ಅವರು ಕೊಂಬುಗಳನ್ನು ಊದಬೇಕಿತ್ತು. ಈ ಪಟ್ಟಣವನ್ನು ಸುತ್ತುವಂತದ್ದು ಮತ್ತು ಕೊಂಬು ಊದುವಂತದ್ದು, ಇಂದಿನ ತಾಂತ್ರಿಕತೆಯೊಳಗೆ ಸೇರಿಕೊಂಡು, ಹಿಂದಿನ ಶ್ರೇಷ್ಠತೆಯನ್ನು ಕಳೆದುಕೊಂಡಿದೆ. ಇದನ್ನು ಕೆಲ ವಿಶ್ವಾಸಿಗಳು ಅಂಗೀಕರಿಸಿಕೊಂಡಿದ್ದಾರೆ. ದೇವರು ಈ ಸಂಗತಿಗಳನ್ನು ಆಜ್ಞೆಗೊಳಿಸಿದಾಗ ಮಾತ್ರ ಅವುಗಳಿಗೆ ಒಂದು ಮೌಲ್ಯವಿರುತ್ತದೆ. ನಾವು ಎಲ್ಲೇ ಹೋದರೂ ಕಲ್ವಾರಿಯ ಜಯವನ್ನು ಸ್ಥಾಪಿಸಬೇಕು. ಇದು ನಮ್ಮ ಕರೆಯಾಗಿದೆ. ಸೈತಾನನು ಸೋಲಲ್ಪಟ್ಟಿದ್ದಾನೆ ಎಂದು ಮೊದಲು ನಾವು ಅರಿಕೆ ಮಾಡಬೇಕು. ”ಸೈತಾನನೇ ನೀನು ಕಲ್ವಾರಿಯ ಮೇಲೆ ಸೋಲಲ್ಪಟ್ಟಿದ್ದೀ” ಎಂದು ಸೈತಾನನಿಗೆ ಸಾಕ್ಷಿ ಹೇಳುವ ಮೂಲಕ, ”ಅವರು ಸೈತಾನನನ್ನು ಜಯಿಸಿ, ತಮ್ಮ ಕೊಂಬುಗಳನ್ನು ಊದಿದರು”. (ಪ್ರಕಟನೆ 12:11). ಸೈತಾನನ ಸೋಲನ್ನು ಆತನಿಗೆ ಪದೇ ಪದೇ ನೆನಪಿಸುವುದರಲ್ಲಿ ನನಗೆ ದೊಡ್ಡ ಸಂತೋಷ ಇದೆ. ನನಗೆ ಗೊತ್ತು, ಆತನು ಇದನ್ನು ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲವೆಂದು.

ಒಂದು ಸಲ ನನಗೆ ನೆನಪಿದೆ, ಪ್ರಾರ್ಥನೆಗೊಸ್ಕರವಾಗಿ ಒಬ್ಬ ಹೆಂಗಸನ್ನು ನನ್ನ ಮನೆಗೆ ಕರೆತಂದರು. ನಾನು ಆಕೆಗೆ ಕೇಳಿದೆ, ಕರ್ತನನ್ನು ನಿನ್ನ ರಕ್ಷಕನನ್ನಾಗಿ ಅಂಗೀಕರಿಸು ಮತ್ತು ಸೈತಾನನಿಗೆ ಹೀಗೆ ಹೇಳು, ನೀನು ಕಲ್ವಾರಿಯಲ್ಲಿ ಸೋಲಲ್ಪಟ್ಟಿದ್ದೀ ಎಂಬುದಾಗಿ. ಆಕೆ ತಕ್ಷಣವೇ ಬದಲಾದ ಧ್ವನಿಯಿಂದ ನನ್ನ ಮೇಲೆ ಅರಚಲು ಪ್ರಾರಂಭಿಸಿ ಹೀಗೆ ಹೇಳಿದಳು, ”ನಾನು ಕಲ್ವಾರಿಯಲ್ಲಿ ಸೋತಿಲ್ಲ” ಎಂದು. ನಾನು ನಂತರ ಗ್ರಹಿಸಿಕೊಂಡೇ, ಆಕೆಯ ಒಳಗೆ ದೆವ್ವವಿದೆ, ಅದು ನನಗೆ ಈ ರೀತಿಯಾಗಿ ಹೇಳುತ್ತಿದೆ ಎಂದು. ಆಗ ನಾನು ದೆವ್ವಕ್ಕೆ ಹೇಳಿದೆ, ”ನೀನು ಸುಳ್ಳುಗಾರ, ನೀನು 2000 ವರ್ಷಗಳ ಹಿಂದೆ ಶಿಲುಬೆಯ ಮೇಲೆ ಸೋಲಲ್ಪಟ್ಟಿದ್ದೀ. ಯೇಸುವಿನ ಹೆಸರಲ್ಲಿ ಆಕೆಯನ್ನು ಬಿಟ್ಟು ಹೋಗು” ಎಂದು. ಆಗ ದೆವ್ವ ತಕ್ಷಣ ಬಿಟ್ಟು ಹೋಯಿತು. ನಂತರ ಆಕೆ ಸೈತಾನನಿಗೆ ಹೀಗೆ ಹೇಳಲು ಸಾಧ್ಯವಾಯಿತು, ”ಸೈತಾನನೇ, ನೀನು ಕಲ್ವಾರಿ ಶಿಲುಬೆಯ ಮೇಲೆ ಸೋಲಲ್ಪಟ್ಟಿದ್ದೀ'' ಎಂದು. ಆ ದಿನ ಒಂದು ಸಂಗತಿಯನ್ನು ನಾನು ಕಲಿತುಕೊಂಡೆ, ಅದೇನೆಂದರೆ, ”ತಾನು ಶಿಲುಬೆಯ ಮೇಲೆ ಸೋಲಲ್ಪಟ್ಟಿದ್ದೀನಿ'' ಎಂದು ಯಾರಾದರೂ ನೆನಪು ಮಾಡುವುದು ದೆವ್ವಕ್ಕೆ ಇಷ್ಟವಾಗುವುದಿಲ್ಲ ಮತ್ತು ನನಗೇ ನಾನು ಯಾವಾಗಲೂ ಸೈತಾನನಿಗೆ ಹಾಗೇ ಹೇಳಲು ಧೃಢ ಮನಸ್ಸು ಮಾಡಿಕೊಂಡೆ ಮತ್ತು ಲೋಕದ ಸುತ್ತ ಇರುವ ವಿಶ್ವಾಸಿಗಳಿಗೂ ಸಹ ಸೈತಾನನಿಗೆ ಸತತವಾಗಿ ಆ ರೀತಿ ಹೇಳುವಂತೆ ಬೋಧಿಸುತ್ತೇನೆ.

ನೀನು ಶಿಲುಬೆಯ ಮೇಲೆ ಸೋಲಲ್ಪಟ್ಟಿದ್ದೀ ಎಂದು ಸೈತಾನನಿಗೆ ಎಷ್ಟು ಬಾರಿ ಹೇಳಿದ್ದೀರಿ? ಇವತ್ತೇ ಪ್ರಾರಂಭಿಸಿ. ನೀನು ಶಿಲುಬೆಯ ಮೇಲೆ ಸೋಲಲ್ಪಟ್ಟಿದ್ದೀ ಎಂದು ಯಾವಾಗಲೂ ಸೈತಾನನಿಗೆ ಹೇಳಿ. ಅದನ್ನು ಹೇಳುವುದರಿಂದ ಆತನು ನಿಮ್ಮನ್ನು ದ್ವೇಷಿಸುತ್ತಾನೆ. ಆದರೆ ಸೈತಾನನು ನನ್ನನ್ನು ದ್ವೇಷಿಸುವಾಗ, ನಾನು ಅದನ್ನು ಇಷ್ಟ ಪಡುತ್ತೇನೆ. ಏಕೆಂದರೆ, ನಾನು ಸರಿಯಾದ ಹಳಿಯಲ್ಲಿ ಇದ್ದೀನಿ ಎಂದು ಗೊತ್ತುಮಾಡಿಕೊಂಡಿರುವುದಕ್ಕಾಗಿ. ಸೈತಾನನಿಗೆ ಭಯ ಪಡಬೇಡಿ. ದೇವರ ಬಲದ ಮುಖಾಂತರ ಆತನನ್ನು ನಿಮ್ಮ ಕಾಲುಗಳ ಕೆಳಗೆ ಹಾಕುವುದಕ್ಕೆ ನೀವು ಸಮರ್ಥರಾಗಿದ್ದೀರಿ. ನೀವು ಆತನಿಗೆ ನಿಮ್ಮ ಸಾಕ್ಷಿಯ ವಾಕ್ಯವನ್ನು ಸಾರುವುದರಿಂದ ಇದು ಸಾಧ್ಯವಾಗುತ್ತದೆ. ನಾನು ಇಲ್ಲಿ ನಿಮಗೆ ತಾಂತ್ರಿಕತೆಯನ್ನು ಕಲಿಸುತ್ತಿಲ್ಲ. ನೀವು ನಿಮ್ಮ ಮನಸ್ಸಾಕ್ಷಿಯನ್ನು ಶುದ್ದವಾಗಿಟ್ಟುಕೊಳ್ಳದೇ ಸೈತಾನನ್ನು ತಡೆಯಲು ಹೋದರೆ, ಆತನು ನಿಮ್ಮ ಮೇಲೆ ನಕ್ಕು ಹೀಗೆ ಹೇಳುತ್ತಾನೆ, ”ಯೇಸುವಿನ ಗುರುತು ನನಗುಂಟು, ಪೌಲನನ್ನು ಬಲ್ಲೆನು, ನೀವಾದರೆ ಯಾರು?” (ಅ.ಕೃತ್ಯಗಳು 19:15). ಹಾಗಾಗಿ ಮೊದಲು ದೇವರಿಗೆ ಒಪ್ಪಿಸಿಕೊಟ್ಟು ಒಳಗಾಗಿ ಮತ್ತು ಸೈತಾನನ್ನು ಎದುರಿಸಿ (ಯಾಕೋಬನು 4:7). ”ಸ್ಥಿರ ಚಿತ್ತನಾಗಿರು ಮತ್ತು ಪೂರ್ಣಧೈರ್ಯದಿಂದ ಇರು”. (ಯೆಹೋಶುವ 1:7).

ಯೆಹೋಶುವ ಅಧ್ಯಾಯ 7 ರಲ್ಲಿ ಇಸ್ರೇಲ್ ಕೇನಾನ್ ನಲ್ಲಿ ಮೊದಲ ಬಾರಿ ಸೋಲುವುದನ್ನು ನಾವು ಓದುತ್ತೇವೆ. ಯೆಹೋಶುವನು ದೇವರಿಗೆ, ಇಸ್ರಾಯೇಲ್ ಯಾಕೆ ಸೋಲಲ್ಪಟ್ಟಿತು ಎಂಬುದಾಗಿ ಕೇಳಿದನು. ದೇವರು ಯೆಹೋಶುವನಿಗೆ ಪ್ರತ್ಯುತ್ತರ ವಾಗಿ ಹೀಗೆ ಹೇಳಿದರು, ”ಈ ಪಾಳೆಯದಲ್ಲಿ ಪಾಪವಿದೆ” ಎಂಬುದಾಗಿ. ಒಬ್ಬ ಮನುಷ್ಯನು ನಿಷೇದಿಸಲ್ಪಟ್ಟ ಯಾವುದೋ ಒಂದು ವಸ್ತುವನ್ನು ಕದ್ದಿದ್ದಾನೆ. ದೇವರು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆಂದರೆ ; ''ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ. ಇದೂ ಇದರಲ್ಲಿರುವುದೆಲ್ಲವೂ ಕೇವಲ ಯೆಹೋವನ ಸೊತ್ತೇ. ನೀವಾದರೋ ಯೆಹೋವನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದರಿಬೇಕು. ನೀವು ಅವುಗಳಲ್ಲಿ ಯಾವದನ್ನಾದರೂ ತೆಗೆದುಕೊಂಡರೆ ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ಕೆಟ್ಟೀತು”. (ಯೆಹೋಶುವ 6:17). ಆಕಾನನ್ನು ಹೊರತುಪಡಿಸಿ, ಎಲ್ಲಾ ಇಸ್ರಾಯೇಲ್ಯರು ಆ ಆಜ್ಞೆಗೆ ವಿಧಯರಾದರು (ಯೆಹೋಶುವ 7:20). ಆತನು ಕೊನೆಯದಾಗಿ ಸಿಕ್ಕಿಹಾಕಿಕೊಂಡು, ಎಲ್ಲರ ಮುಂದೆ ಸಾಬೀತು ಆದಾಗ, ಪಾಪ ಮಾಡಿದ್ದೇನೆಂದು ಒಪ್ಪಿಕೊಂಡು, ಗೊಂದಲಕ್ಕೊಳಗಾದನು. ಆತನು ಒಂದು ಮನೆಯಲ್ಲಿ ಸುಂದರವಾದ ಬಾಬೆಲೋನಿಯನ್ ವಸ್ತ್ರಗಳನ್ನು ನೋಡಿ ಆಶೆಯಿಂದ ಅವುಗಳನ್ನು ತೆಗೆದುಕೊಂಡನು (ಶಿನಾರ್ ಎಂಬುದು ಬಾಬೇಲೋನಿನ ಮತ್ತೊಂದು ಪದ). ಆತನು 21ನೇ ವಚನದಲ್ಲಿ ಹೇಳುವುದೇನೆಂದರೆ, ”ನಾನು ಅದನ್ನು ಕಂಡು, ಆಶೆಯಿಂದ ತೆಗೆದುಕೊಂಡೆನು” ಎಂಬುದಾಗಿ. ಶೋಧನೆಯಲ್ಲಿ ೪ ಹಂತಗಳು. ನಾವೂ ಸಹ ಹೀಗೆ ಪಾಪ ಮಾಡುತ್ತೇವೆ - ಮತ್ತು ನಮ್ಮ ಪಾಪವನ್ನು ಮುಚ್ಚಿಡುತ್ತೇವೆ. ನಂತರ ಆಕಾನನು ಕಲ್ಲೆಸತದಿಂದ ಸತ್ತನು.

ಯೆರಿಕೋದಲ್ಲಿನ ಸಮರದ ಸಂದರ್ಭದಲ್ಲಿ ಏನನ್ನೂ ಸಹ ಕಳ್ಳತನ ಮಾಡಿ ತೆಗೆದುಕೊಳ್ಳುವುದಕ್ಕೆ ಅನುಮತಿಯಿಲ್ಲ ಎಂದು ಆಕಾನನು ಕೇಳಿದಾಗ, ಆತನು ಈ ರೀತಿ ಯೋಚಿಸಿರಬಹುದು, ”ಈ ಪಟ್ಟಣಗಳನ್ನು ವಶಪಡಿಸಿಕೊಂಡು, ಈ ದೈತ್ಯ ಸ್ವರೂಪಿಗಳನ್ನು ಕೊಂದ ಮೇಲೆ, ನನಗಾಗಿ ನಾನು ಏನು ಪಡೆದುಕೊಳ್ಳಲು ಆಗುವುದಿಲ್ಲ, ಮುಂದಿನ 20 ವರ್ಷ ನಾನು ಬಡ ಮನುಷ್ಯನಾಗಿರುತ್ತೇನೆ. ಹಾಗಾಗಿ ನನಗಾಗಿ ಬೇಕಾದದ್ದನ್ನು ಸ್ವಲ್ಪವಾದದ್ದನ್ನು ಇಟ್ಟುಕೊಳ್ಳೋಣ”. ಆತನು ಸ್ವಲ್ಪವಾಗಿ ತೆಗೆದುಕೊಂಡ ನಂತರ ಆತನು ಗ್ರಹಿಸಿಕೊಂಡಿದ್ದೇನೆಂದರೆ, ದೇವರು ಯೆರಿಕೋದಲ್ಲಿ ಇಸ್ರಾಯೇಲ್ಯರು ಆಶೆಯುಳ್ಳವರಾ ಎಂದು ನೋಡಲು ಪರೀಕ್ಷೆ ಮಾಡಿದನು. ಯೆಹೋಶುವ 8:2 ರಲ್ಲಿ, ನಾವು ಓದುವುದೇನೆಂದರೆ, ದೇವರು ಜನರಿಗೆ ಹೀಗೆ ಹೇಳಿದರು, ಮುಂದಿನ ದಿನದಿಂದ ತಮಗಾಗಿ ಎಲ್ಲರೂ ಕಾನನ್ ನಲ್ಲಿ ಸಮರದ ಸಂದರ್ಭದಲ್ಲಿ ಎಲ್ಲವನ್ನು ವಶಪಡಿಸಿಕೊಳ್ಳಬಹುದು ಎಂದು! ಆಕಾನನು ಎಂಥ ಮೂಢನಾಗಿದ್ದನು! ಆತನು ಕಾದಿದ್ದರೆ, ಎಲ್ಲಾ ಬಂಗಾರ, ಬೆಳ್ಳಿ ಮತ್ತು ಉಡುಪುಗಳನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ ಅವನು ಎಲ್ಲವನ್ನು ತಪ್ಪಿಸಿಕೊಂಡನು, ಏಕೆಂದರೆ ದೇವರು ಆತನನ್ನು ಪರೀಕ್ಷಿಸಿದಾಗ ಆತನು ಸೋತನು.

ದೇವರು ನಿಮ್ಮನ್ನು ಸಹ ಪರೀಕ್ಷಿಸುತ್ತಾರೆ, ಹೇಗೆಂದರೆ, ನೀವು ಆಶೆಯಿಂದ ಯಾವುದನ್ನಾದರೂ ಎಳೆದುಕೊಂಡಿದ್ದೀರಾ ಎಂಬುದಾಗಿ. ನೀವು ಹಾಗೇ ಮಾಡುವುದಾದರೆ, ನಿಮ್ಮ ಮಿಕ್ಕ ಜೀವಿತದಲ್ಲಿ ದೇವರು ನಿಮಗಾಗಿ ಯೋಜಿಸಿದ ಉತ್ತಮವಾದದ್ದನ್ನು ತಪ್ಪಿಸಿಕೊಳ್ಳುತ್ತೀರಿ. ಇದನ್ನು ಹೊರತುಪಡಿಸಿ, ನೀವು ಮೊದಲು ದೇವರ ರಾಜ್ಯವನ್ನು ಹುಡುಕುವುದಾದರೆ, ಯಾವಾಗಲೂ ನಿಮಗೆ ಅಗತ್ಯೆತೆ ಇರುವುದನ್ನು ದೇವರು ಒದಗಿಸುತ್ತಾನೆ.

ಯೆಹೋಶುವ 8:26 ರಲ್ಲಿ, ಆಕಾನನ್ನು ಕೊಲ್ಲಲ್ಪಟ್ಟ ನಂತರ, ಆಯಿ ಎಂಬ ಪಟ್ಟಣವು ಹೇಗೆ ನಾಶವಾಯಿತು ಎಂಬುದನ್ನು ನೋಡುತ್ತೇವೆ. ನಾವು ಮುಂದಕ್ಕೆ ಹೋಗುವ ಮೊದಲು, ಹಿಂದೆ ತಪ್ಪಿರುವಂತ ಕೆಲ ವಿಷಯಗಳನ್ನು ಸರಿಪಡಿಸಿಕೊಳ್ಳಬೇಕು; ಇಲ್ಲವಾದಲ್ಲಿ, ನಾವು ನಮ್ಮ ಜೀವಿತವನ್ನು ಆಯಿ ಪಟ್ಟಣದ ರೀತಿಯಲ್ಲಿ ಸುಟ್ಟು ಹಾಕಲ್ಪಡುತ್ತೇವೆ. ನಾವು ಇಲ್ಲಿ ನೋಡುತ್ತೇವೆ, ಯೆಹೋಶುವನು ತನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಪಟ್ಟಣದ ಮೇಲೆ ಚಾಚುವುದನ್ನು. ಮೋಶೆಯು ಬೆಟ್ಟದ ತುದಿಯ ಮೇಲೆ ತನ್ನ ಕೈಯನ್ನು ಚಾಚಿದ ಹಾಗೇ ಮತ್ತು ಆತನ ಸೈನಿಕರ ಕೈಯಲ್ಲಿ ಪಟ್ಟಣದಲ್ಲಿರುವವರು ಸಿಕ್ಕಿಬಿದ್ದರು. ಆಗ ಆಯಿ ಎಂಬ ಪಟ್ಟಣವು ಸೋಲಲ್ಪಟ್ಟಿತು. ಈಗ, ನಾವು ಒಂದು ಜಯ ಸಾಧಿಸಿದ ನಂತರ ಎದುರಿಸುವ ದೊಡ್ಡ ಅಪಾಯವೇನೆಂದರೆ, ಸ್ವ-ಸಂತೃಪ್ತಿಯುಳ್ಳವರಾಗುವ ಅಪಾಯವನ್ನು ಎದುರಿಸುತ್ತೀವಿ. ನಾವು ಕ್ರೈಸ್ತ ಜೀವಿತದಲ್ಲಿ ವಿರಾಮಿಸುವುದಕ್ಕೆ ಪ್ರಾರಂಭಿಸಿದಾಗ, ನಾವು ಮೋಸ ಹೋಗುವ ಅಪಾಯದಲ್ಲಿರುತ್ತೇವೆ. ಇದೇ ಯೆಹೋಶುವನಿಗೂ ಸಂಭವಿಸಿತು (ಅಧ್ಯಾಯ 9). ಕೊಲ್ಲಲ್ಪಡಬೇಕಾದ ಕೆಲವು ಗಿಬ್ಯೋನ್ಯರು - ಕಾನಾನ್ಯರು ಬಂದು ಯೆಹೋಶುವನನ್ನು ಭೇಟಿ ಆದರು (ಯೆಹೋಶುವ 9:4). ಅವರು ತೇಪೆ ಹಾಕಿದ ಹಳೇದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು, ಹಳೇ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಗಳನ್ನು ತೆಗೆದುಕೊಂಡು ದೂರದ ಸ್ಥಳದಿಂದ ಬಂದಿದ್ದೇವೆಂದು ಹೇಳಿಕೊಂಡರು (ಯೆಹೋಶುವ 9:5). ಅವರು ಇಸ್ರಾಯೇಲ್ಯರಿಗೂ ಸಹ ಮಿತಿ ಮೀರಿದ ನಮ್ರತೆ ತೋರಿಸುತ್ತಿದ್ದರು. ಜನರು ನಮಗೂ ಹೀಗೆ ಮಿತಿ ಮೀರಿದ ನಮ್ರತೆಯನ್ನು ತೋರಿಸುವಾಗ ನಾವು ಸಹ ದೊಡ್ಡದಾದ ಅಪಾಯದಲ್ಲಿರುತ್ತೇವೆ. ಆಗ ಮೋಸವೆಂಬುದು ತುಂಬಾ ಹತ್ತಿರದಲ್ಲಿರುತ್ತದೆ. ಯೆಹೋಶುವ 2:4 ರಲ್ಲಿ ನಾವು ಓದುವುದೇನೆಂದರೆ ; ”ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ” (ಯೆಹೋಶುವ 9:14). ಯೆಹೋಶುವನು ಅವರನ್ನು ನಂಬಿದನು ಮತ್ತು ಅವರನ್ನು ಕೊಲ್ಲುವುದಿಲ್ಲ ಎಂದು ಅವರೊಟ್ಟಿಗೆ ಒಡಂಬಡಿಕೆಯನ್ನು ಮಾಡಿಕೊಂಡನು. ಮೂರು ದಿನಗಳ ದಿನಗಳ ನಂತರ ಅವರಿಗೆ ಗೊತ್ತಾಗಿದ್ದೇನೆಂದರೆ, ಈ ಜನರು ಕೊಲ್ಲಲ್ಪಡಬೇಕಾದ ಕಾನಾನ್ಯರು ಎಂಬುದಾಗಿ (ವಚನ 16). ಆದರೆ ಅವರೊಟ್ಟಿಗೆ ಆಗಲೇ ಒಡಂಬಡಿಕೆಯನ್ನು ಮಾಡಿಕೊಂಡಿದ್ದರು ಮತ್ತು ಅವರು ಆ ಮಾತನ್ನು ಉಳಿಸಿಕೊಳ್ಳಬೇಕಿತ್ತು.

ಈ ಘಟನೆಯಿಂದ ನಾವು ಕಲಿಯಬಹುದಾದದ್ದು ಏನು? ಇದು ನಮಗೆ ಎಚ್ಚರಿಕೆಯಾಗಿದೆ, ಏಕೆಂದರೆ ನಮ್ಮೊಟ್ಟಿಗೆ ಮಿತಿ ಮೀರಿದ ನಮ್ರತೆ ತೋರಿಸುವವರಿಂದ ಮೋಸ ಹೋಗದ ಹಾಗೆ ಮತ್ತು ಯಾರು ನಮ್ಮ ಸಭೆಗೆ ತಪ್ಪಾದ ಪ್ರೇರಣೆಗಳನ್ನು ಇಟ್ಟುಕೊಂಡು ಬಂದು ಸೇರಿಕೊಳ್ಳುವವರ ವಿಷಯವಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಇಂಥಹ ಪ್ರಕರಣಗಳಲ್ಲಿ ನಾವು ಹೇಗೆ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕೆಂದರೆ, ನಾವು ದೇವರ ಸಲಹೆಯನ್ನು ಹುಡುಕಬೇಕು ಮತ್ತು ನಮ್ಮ ಸ್ವಂತ ಜ್ಞಾನದಲ್ಲಿ ಅವಲಂಬಿತರಾಗಿರಬಾರದು. ವಿಶೇಷವಾಗಿ ನಾವು ದೊಡ್ಡ ಜಯಗಳನ್ನು ಸಾಧಿಸಿದ ತಕ್ಷಣವೇ ಎಚ್ಚರಿಕೆಯಿಂದಿರಬೇಕು. ನಾವು ಸುವಾರ್ತೆಗಳಲ್ಲಿ ಓದುತ್ತೇವೆ, ಅನೇಕ ಅದ್ಬುತವಾದ ಸ್ವಸ್ಥತೆಗಳನ್ನು ಮಾಡಿದ ತಕ್ಷಣವೇ, ತನ್ನ ತಂದೆಗೆ ಎಲ್ಲಾ ಮಹಿಮೆಯನ್ನು ಕೊಡಲು, ಯೇಸು ಅರಣ್ಯಕ್ಕೆ ತೆರಳಿ, ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು(ಲೂಕ 5:15, 16). ಅದು ನಮಗೆ ಒಂದು ಉದಾಹರಣೆ ಆಗಿದೆ. ದೇವರಿಂದ ಸಲಹೆ, ಅಭಿಪ್ರಾಯಗಳನ್ನು ನಾವು ಹುಡುಕದೇ, ಯಾವಾಗ ನಾವು ಅಪಾಯದಲ್ಲಿರುತ್ತೇವೆ ? ನಾವು ಜಯಶಾಲಿಗಳಾದಾಗ. ನಾವು ಸೋಲಲ್ಪಟ್ಟಾಗ ಅಲ್ಲ. ”ನಾವು ಜಯ ಹೊಂದಿದಾಗ ಅಪಾಯದಲ್ಲಿರುತ್ತೇವೆಯೇ ಹೊರತು ಸೋಲಲ್ಪಟ್ಟಾಗ ಅಲ್ಲ. ಸಾಮಾನ್ಯವಾಗಿ ನಾವು ಸೋಲಲ್ಪಟ್ಟಾಗ, ನಾವು ದೇವರಿಗೆ ಹತ್ತಿರವಾಗಿ ಸೆಳೆಯುತ್ತೆವೆ, ಏಕೆಂದರೆ, ನಾವು ಯಾವುದೋ ಒಂದು ಮಾರ್ಗದಲ್ಲಿ ಆತನನ್ನು ನಿರಾಶೆಗೊಳಿಸಿರುತ್ತೀವಿ. ನಾವು ಸ್ವಲ್ಪ ಅವಧಿ ಜಯಶಾಲಿಗಳಾದಾಗ, ನಾವು ಆತ್ಮೀಕ ಗರ್ವಿಗಳಾಗುವ ಅಪಾಯದಲ್ಲಿರುತ್ತೇವೆ.

ಯೆಹೋಶುವ 10ನೇ ಅಧ್ಯಾಯದಲ್ಲಿ, ಐದು ರಾಜರುಗಳು ಗಿಬ್ಯೋನರ ಮೇಲೆ ಅಕ್ರಮಣ ಮಾಡಿದಾಗ, ಗಿಬ್ಯೋನರು ಯೆಹೋಶುವನ ಸಹಾಯವನ್ನು ಹುಡುಕಿದರು, ದೇವರು ಯೆಹೋಶುವನನ್ನು ಪ್ರೋತ್ಸಾಯಿಸಿ ಹೇಳಿದ್ದೇನೆಂದರೆ, ”ಹೆದರಬೇಡ; ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” (ವಚನ 8). ಒಂದು ಮಾತನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು, ”ನಿನ್ನ ಕೈಗೆ ಆಗಲೇ ಒಪ್ಪಿಸಿದ್ದೇನೆ” ಎಂದು ದೇವರು ಹೇಳಿದ ಮಾತನ್ನು. ಜಯವು ಮುಂಚಿತವಾಗಿಯೇ ನಿರ್ಧರಿಸಿದ್ದು, ಅಂದರೆ, ಇನ್ನೂ ಸಮರ ಪ್ರಾರಂಭವಾಗುವ ಮೊದಲೇ ಜಯ ನಿರ್ಧಾರವಾಗಿತ್ತು. ಅದೇ ರೀತಿಯಾಗಿಯೇ ನಾವು ಸೈತಾನನ ವಿರುದ್ದವಾಗಿ ಸಮರಕ್ಕೆ ಹೋಗಬೇಕು. ಸೈತಾನನು ಮತ್ತು ಆತನ ದೆವ್ವಗಳು ನಮ್ಮ ಮುಂದೆ ನಿಲ್ಲಲು ಸಾಮರ್ಥ್ಯ ಹೊಂದಿಲ್ಲ. ನರಕದ ದ್ವಾರಗಳು ಎಂದಿಗೂ ಜೀವವುಳ್ಳ ದೇವರ ಸಭೆಯ ವಿರುದ್ದವಾಗಿ ಮೇಲುಗೈ ಸಾಧಿಸುವುದಿಲ್ಲ. ಯೆಹೋಶುವನು ಅವರ ಮೇಲೆ ಬಂದು, ಅವರನ್ನು ಸೋಲಿಸಿ, ”ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ತನ್ನ ನಾಲಿಗೆಯನ್ನು ಎತ್ತಲಿಲ್ಲ” ಎಂದು ಹೇಳಿದನು. ನಂತರ ಯೆಹೋಶುವನು ಇಸ್ರಾಯೇಲ್ ನ ಗಂಡಸರನ್ನು ಕರೆದು ಹೀಗೆ ಹೇಳುತ್ತಾನೆ, ”ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂಬುದಾಗಿ (ವಚನ 24). ರೋಮ 16:20 ರಲ್ಲಿ ಸತ್ಯವೇದ ಹೀಗೆ ಹೇಳುತ್ತದೆ, ”ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವೆನು” ಎಂಬುದಾಗಿ. ಯೇಸು ಆಗಲೇ ಸೈತಾನನ್ನು ಶಿಲುಬೆಯ ಮೇಲೆ ಸೋಲಿಸಿದ್ದಾನೆ. ಆದರೆ ಸೈತಾನನು ಈಗ ನಮ್ಮ ಕಾಲುಗಳ ಕೆಳಗೆ ಹಾಕಿ ತುಳಿತಕ್ಕೊಳಗಾಗಬೇಕು.