WFTW Body: 

ಇಡೀ ಸತ್ಯವೇದದಲ್ಲಿ ಮೆಲ್ಕಿಜೆದೇಕನು ಮೂರು ವಾಕ್ಯಗಳಲ್ಲಿ ಮಾತ್ರ ಕಂಡುಬರುತ್ತಾನೆ ಮತ್ತು ನಮ್ಮ ಕರ್ತನು ಆ ಹೆಸರಿನ ಮೇಲೆ ಮಹಾಯಾಜಕನೆಂದು ಕರೆಯಲ್ಪಟ್ಟನು (ಆದಿ.14:18-20). ಮೆಲ್ಕಿಜೆದೇಕನು ಮಾಡಿರುವಂತ ಬಹು ಆಶ್ಚರ್ಯಕರವಾದ ಸಂಗತಿಯಾದರೂ ಏನು? ಮೆಲ್ಕಿಜೆದೇಕನು ಅಬ್ರಹಾಮನ ಅವಶ್ಯಕತೆಗಳ ಬಗ್ಗೆ ಏನೂ ತಿಳಿಯದಿದ್ದರೂ ಆತನು ಅಬ್ರಹಾಮನ ಮೂರು ಅವಶ್ಯಕತೆಗಳನ್ನು ಪೂರೈಸಿದನು. ಏಕೆಂದರೆ, ದೇವರು ಅವನಿಗೆ ಏನನ್ನು ಹೇಳಿದರೋ ಅದನ್ನೇ ಆತನು ಮಾಡಿದನು.

ಮೊದಲನೆಯದಾಗಿ, ಅವನು ಅಬ್ರಹಾಮನಿಗೆ ಸ್ವಲ್ಪ ಆಹಾರವನ್ನು ತೆಗೆದುಕೊಂಡನು. ಮೆಲ್ಕಿಜೆದೇಕನು ತಿಳುವಳಿಕೆಯುಳ್ಳ ಮನುಷ್ಯನಾಗಿದ್ದನು. ಅವನು ಅತಿ ಆತ್ಮಿಕ ತಪಸ್ವಿಯಾಗಿ ಇರಬೇಕೆಂದು ಯೋಚಿಸುವವರಂತೆ ಇರಲಿಲ್ಲ. ಅವನು ಅಬ್ರಹಾಮನಿಗೆ ಉಪವಾಸವಿದ್ದು ಪ್ರಾರ್ಥಿಸಬೇಕೆಂದು ಹೇಳಲಿಲ್ಲ. ಆದರೆ ಅವನಿಗೆ ಒಳ್ಳೆಯ ಊಟವನ್ನು ಕೊಟ್ಟನು.

ಅನೇಕ ವರ್ಷಗಳ ನಂತರ ಎಲೀಯನು ಕುಗ್ಗಿ ದಣಿದಿರುವಾಗ ದೇವರು ಅದನ್ನೇ ಮಾಡಿದರು. ಒಬ್ಬ ದೇವದೂತನನ್ನು ದೇವರು ಅವನ ಬಳಿಗೆ ಕಳುಹಿಸಿದರು. ಉಪದೇಶದೊಂದಿಗೆ ಅಲ್ಲ, ಆದರೆ, ಸ್ವಲ್ಪ ಪೌಷ್ಟಿಕ ಆಹಾರದೊಂದಿಗೆ. ತುಂಬಾ ಬಳಲಿ ಕುಗ್ಗಿ ಹೋಗಿರುವ ಸಹೋದರ/ಸಹೋದರಿಗೆ ಸ್ವಲ್ಪ ಊಟವನ್ನು ತೆಗೆದುಕೊಂಡು ಹೋಗಲು ನಾವು ಅನುಸರಿಸಬಹುದಾದ ಉದಾಹರಣೆ ಇದಾಗಿದೆ (1 ಅರಸು. 19:5-8).

ಒಬ್ಬ ವಿಶ್ವಾಸಿಯು ಕುಗ್ಗಿ ಹೋಗಿದ್ದರೆ, ಅಥವಾ ಮನಗುಂದಿದ್ದರೆ, ಅವನಿಗೆ ಅವಶ್ಯವಾದದ್ದು ಏನೆಂದರೆ, ಸ್ವಲ್ಪ ಒಳ್ಳೆಯ ಊಟವೇ ಹೊರತು ಉಪದೇಶವಲ್ಲ. ಏಕೆಂದರೆ ಅವನು ಆತ್ಮ ಮತ್ತು ಪ್ರಾಣ ಮಾತ್ರ ಉಳ್ಳವನಲ್ಲ. ಅವನಿಗೆ ಶರೀರವೂ ಇದೆ. ಇದನ್ನು ನಾವು ಮರೆಯಬಾರದು.

ಅವನಿಗೆ ಆಹಾರವನ್ನು ನೀಡಿದ ನಂತರ ಮೆಲ್ಕಿಜೆದೇಕನು ಅಬ್ರಹಾಮನಿಗೆ ಆತ್ಮಿಕವಾಗಿಯೂ ಸಹಾಯ ಮಾಡಿದನು- ಬೋಧನೆಯ ಮೂಲಕ ಅಲ್ಲ. ಆದರೆ, ಎರಡು ಸಂಕ್ಷಿಪ್ತವಾದ ವಾಕ್ಯಗಳಲ್ಲಿ ಅಬ್ರಹಾಮನ ವಿಜಯಕ್ಕಾಗಿ ದೇವರನ್ನು ಸ್ತುತಿಸುವುದರ ಮೂಲಕ.

ಇವನು ಅಬ್ರಾಮನನ್ನು ಆಶೀರ್ವದಿಸಿ - "ಭೂಮಿ-ಆಕಾಶಗಳನ್ನು ನಿರ್ಮಾಣ ಮಾಡಿದ ಮಹೋನ್ನತನಾದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ: ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದಕ್ಕಾಗಿ ಆತನಿಗೆ ಸ್ತೋತ್ರ ಎಂದು ಹೇಳಿದನು" (ಆದಿ. 14:19,20).

“ನಾವು ಮೆಲ್ಕಿಜೆದೇಕನಂತೆ ಬದುಕಲು ಪ್ರಾರಂಭಿಸಿದರೆ ಏನಾಗುತ್ತದೆ ಎಂದು ಯೋಚಿಸಿ. ದೇವರಿಗೆ ಕಿವಿಗೊಡುತ್ತಾ ಮತ್ತು ನಾವು ಪ್ರತಿದಿನ ಏನು ಮಾಡಬೇಕೆಂದು ಆತನಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಯಾರಾದರೂ ಈ ಭೂಮಿಯಲ್ಲಿ ಬದುಕಲು ಇದು ಅತ್ಯಂತ ಉಪಯುಕ್ತ ಮಾರ್ಗವಾಗಿದೆ".

ಅಬ್ರಹಾಮ ಮತ್ತು ಅವನ ಸೇವಕರಿಗೆ ಆಹಾರ ಉಣಿಸಲು ಮೆಲ್ಕಿಜೆದೇಕನು ಬಹುಶ: ಎರಡು ಗಂಟೆಗಳ ಕಾಲ ಕಳೆದಿರಬೇಕು ಮತ್ತು ದೇವರನ್ನು ಸ್ತುತಿಸಲು ಕೇವಲ 15 ಸೆಕೆಂಡುಗಳನ್ನು ಕಳೆದಿರಬೇಕು. ಆದರೆ ಮೆಲ್ಕಿಜೆದೇಕನ ಸಂಕ್ಷಿಪ್ತವಾದ ಸ್ತೋತ್ರದಲ್ಲಿ ಅಬ್ರಹಾಮನು ಎರಡು ವಿಷಯಗಳನ್ನು ಅರಿತುಕೊಂಡನು.

ಮೊದಲನೆಯದಾಗಿ ಅಬ್ರಹಾಮನು ತಾನು ಪರಲೋಕಕ್ಕೂ ಮತ್ತು ಭೂಮಿಗೂ ಒಡೆಯನಾದ ದೇವರಿಗೆ ಸೇರಿದವನೆಂದು ಅರಿತುಕೊಂಡನು. ಅವನು ಆಗ ತಾನೇ ಮರಳಿ ಪಡೆದ ಸೊದೊಮ ರಾಜನ ಸಂಪತ್ತನ್ನು ಇಚ್ಚಿಸದಂತೆ ಅವನನ್ನು ಅದು ಬಿಡುಗಡೆ ಮಾಡಿತು. ಬಹು ಶ್ರೀಮಂತವಾಗಿದ್ದ ಸೊದೊಮಿನ ಸಂಪತ್ತು ಅಧಿಕವಾಗಿದ್ದರೂ ಸಹ ಅಬ್ರಹಾಮನು ಆ ಕೊಳ್ಳೆಯು ತನ್ನ ದೇವರು ಹೊಂದಿರುವ ಪರಲೋಕ ಮತ್ತು ಭೂಮಿಗೆ ಹೋಲಿಸಿದರೆ ನಿಷ್ಪ್ರಯೋಜಕವಾದ ಕಸದಂತಿದೆ ಎಂದು ಕಂಡುಕೊಂಡನು. ತಾನು ಯಾರಿಗೆ ಸೇರಿದವನು ಎಂಬುದನ್ನು ಅಬ್ರಹಾಮನು ಸ್ಪಷ್ಟವಾಗಿ ನೋಡಲು ಅಬ್ರಹಾಮನಿಗೆ ಮೆಲ್ಕಿಜೆದೇಕನು ಸಹಾಯ ಮಾಡಿದನು.

ಇಲ್ಲಿ ಮೆಲ್ಕಿಜೆದೇಕನ ವಿವೇಕವನ್ನು ಗಮನಿಸಿ. ಅವನು ಅಬ್ರಹಾಮನಿಗೆ, "ನೋಡು, ದೇವರು ಹೇಳಿದ್ದಾನೆ ನಿನ್ನಲ್ಲಿ ದುರಾಸೆ ಬೆಳೆಯುತ್ತಿದೆ; ಮತ್ತು ನಾನು ನಿನ್ನನ್ನು ಎಚ್ಚರಿಸಲು ಆತನಿಂದ ಒಂದು ವಾಕ್ಯದೊಂದಿಗೆ ಬಂದಿದ್ದೇನೆ" ಎಂದು ಬೋಧಿಸಲಿಲ್ಲ! ನಿಮಗಾಗಿ "ದೇವರಿಂದ ಒಂದು ವಾಕ್ಯ"ಇದೆ ಎಂದು ಯಾವಾಗಲೂ ಹೇಳಿಕೊಳ್ಳುವ ಸ್ವಯಂ-ನೇಮಿತ ಪ್ರವಾದಿಗಳ ಬಗ್ಗೆ ಎಚ್ಚರದಿಂದಿರಿ! ಅಂತಹ "ಪ್ರವಾದಿಗಳು" ಸುಳ್ಳು ಪ್ರವಾದಿಗಳು. ಮೆಲ್ಕಿಜೆದೇಕನು ಅಬ್ರಹಾಮನ ಗಮನವನ್ನು ಕೊಳ್ಳೆಯ ಸಂಪತ್ತಿನಿಂದ ದೇವರ ಕಡೆಗೆ ತಿರುಗಿಸಿದನು. ಮತ್ತು ಅಬ್ರಹಾಮನ ದೃಷ್ಟಿಯಲ್ಲಿ "ಲೌಕಿಕ ವಸ್ತುಗಳು ಆಶ್ಚರ್ಯಕರವಾಗಿ ಮಂದವಾದವು". ಅದು ಜನರಿಗೆ ಸಹಾಯ ಮಾಡುವ ಮಾರ್ಗವಾಗಿದೆ.

ಎರಡನೆಯದಾಗಿ, ಆ ರಾಜರನ್ನು ಸೋಲಿಸಿದ್ದು ತಾನು ಮತ್ತು ಅವನ 318 ಸೇವಕರಲ್ಲ, ಆದರೆ ದೇವರು ಎಂದು ಅಬ್ರಹಾಮನು ಸ್ಪಷ್ಟವಾಗಿ ಅರ್ಥಮಾಡಿಕೊಂಡನು! ಅದು ಮತ್ತೊಂದು ಪ್ರಕಟನೆ - ಮತ್ತು ಅದು ಅಬ್ರಹಾಮನನ್ನು ಗರ್ವದಿಂದ ರಕ್ಷಿಸಿತು. ಮತ್ತೊಮ್ಮೆ ಮೆಲ್ಕಿಜೆದೇಕನು ಅಬ್ರಹಾಮನ ಗಮನವನ್ನು ಆತನ ವಿಜಯದಿಂದ ದೇವರ ಕಡೆಗೆ ತಿರುಗಿಸುವಲ್ಲಿ ಯಶಸ್ವಿಯಾದನು.

ಒಬ್ಬ ಅತ್ಯುತ್ತಮ ಬೋಧಕನು ನಮ್ಮ ಗಮನವನ್ನು ನಮ್ಮಿಂದ ಮತ್ತು ನಮ್ಮ ಸಾಧನೆಗಳಿಂದ ಕರ್ತನ ಕಡೆಗೆ ತಿರುಗಿಸುವಾತನಾಗಿರುತ್ತಾನೆ.

ಮತ್ತು ನಾವೀಗ ಈ ಕಥೆಯ ಅತ್ಯುತ್ತಮ ಭಾಗಕ್ಕೆ ಬರುತ್ತೇವೆ. ಮೆಲ್ಕಿಜೆದೇಕನು ಅಬ್ರಹಾಮನನ್ನು ಆಶೀರ್ವದಿಸಿದ ನಂತರ ಕಣ್ಮರೆಯಾಗುತ್ತಾನೆ. ಸತ್ಯವೇದದಲ್ಲಿ ಆತನ ಕುರಿತಾಗಿ ನಾವು ಮತ್ತೆ ಓದುವುದಿಲ್ಲ. ಕ್ರಿಸ್ತನ ಪ್ರಕಾರವಾಗಿ ಮಾತ್ರ ಆತನ ಹೆಸರು ಕಂಡುಬರುತ್ತದೆ.

ಮೆಲ್ಕಿಜೆದೇಕನು ಆ ಮುಂಜಾನೆ ತನ್ನ ಗುಡಾರದಲ್ಲಿ ಪ್ರಾರ್ಥಿಸಿದ್ದಿರಬೇಕು. ದೇವರು ಆತನೊಟ್ಟಿಗೆ ಮಾತನಾಡಿ, ಆತನು ಏನು ಮಾಡಬೇಕು ಎಂದು ಹೇಳಿದಾಗ, ಆತನಿಗೆ ಅಬ್ರಹಾಮನ ಕುರಿತಾಗಿ ಗೊತ್ತಿರಲಿಲ್ಲ, ಆದರೆ ಆತನು ದೇವರನ್ನು ಅರಿತಿದ್ದನು ಮತ್ತು ಅಷ್ಟೇ ಅವನಿಗೆ ಸಾಕಾಗಿತ್ತು. ದೇವರು ಆತನಿಗೆ ಏನು ಮಾಡಬೇಕು ಎಂದು ಹೇಳಿದರು ಮತ್ತು ಅನೇಕರಿಗೆ ಆತನನ್ನು ಆಶೀರ್ವಾದದ ನಿಧಿಯನ್ನಾಗಿ ಮಾಡಿದರು.

ಮೆಲ್ಕಿಜೆದೇಕನ ರೀತಿ ಯಾಜಕರಾದ ನಾವು ಎಂತಹ ಸೇವೆಗೆ ಕರೆಯಲ್ಪಟ್ಟಿದ್ದೇವೆ! ನಾವು ಜನರನ್ನು ಶಾರೀರಿಕವಾಗಿ ಮತ್ತು ಆತ್ಮಿಕವಾಗಿ ಆಶೀರ್ವದಿಸಬೇಕು. ನಂತರ ನಾವು ಕೃತಜ್ಞತೆ ಹೇಳಿಸಿಕೊಳ್ಳುವ ಮೊದಲೇ ಕಣ್ಮರೆಯಾಗಬೇಕು!

ನೀವು ಒಬ್ಬ ದೊಡ್ಡ ದೈವಿಕ ಮನುಷ್ಯ ಎಂದು ಜನರು ನಿಮ್ಮ ಬಗ್ಗೆ ಆಲೋಚಿಸಬೇಕು ಎಂದು ಬಯಸುತ್ತೀರಾ ಅಥವಾ ನೀವು ದೇವರನ್ನು ಹೊಂದಿದ್ದೀರಿ ಎಂದು ಜನರು ತಿಳಿದುಕೊಳ್ಳಬೇಕು ಎಂದು ನೀವು ಬಯಸುತ್ತೀರಾ? ಧಾರ್ಮಿಕ ಸೇವೆಗೂ ಮತ್ತು ಆತ್ಮಿಕ ಸೇವೆಗೂ ವ್ಯತ್ಯಾಸವಿದೆ. ಆರೋನನ ಯಾಜಕತ್ವಕ್ಕೂ ಮತ್ತು ಮೆಲ್ಕಿಜೆದೇಕನ ಯಾಜಕತ್ವಕ್ಕೂ ವ್ಯತ್ಯಾಸ ಇದೆ. ಆರೋನನು ನಿರಂತರವಾಗಿ ಜನರ ಎದುರುಗಡೆ ಕಾಣಿಸಿಕೊಂಡನು ಮತ್ತು ಜನರಿಂದ ಗೌರವವನ್ನು ಪಡೆದುಕೊಂಡನು. ಮೆಲ್ಕಿಜೆದೇಕನು ಜನರಿಗೆ ಸೇವೆ ಮಾಡಿದನು ನಂತರ ಕಣ್ಮರೆಯಾದನು!

ತನ್ನ ಈ ಭೂಮಿಯಲ್ಲಿನ ದಿನಗಳಲ್ಲಿ ಯೇಸುವು ಸ್ವತಃ ಈ ರೀತಿಯಾಗಿ ಸೇವೆ ಮಾಡಿದರು. ಜೀವನದ ಹೋರಾಟಗಳಲ್ಲಿ ನಜ್ಜುಗುಜ್ಜಾದ ಜನರ ಭೌತಿಕ ಮತ್ತು ಆತ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಸುತ್ತಾಡಿದರು. ಅವರ ಗುಣಪಡಿಸುವ ಕಾರ್ಯಗಳನ್ನು ಯಾರೂ ಜಾಹೀರಾತುಪಡಿಸುವುದನ್ನು ಅವರು ಬಯಸಲಿಲ್ಲ. ತಾನು ಗುಣಪಡಿಸುವವನು ಎಂದು ಇತರರು ತಿಳಿಯುವುದನ್ನು ಕೂಡ ಅವರು ಎಂದಿಗೂ ಬಯಸಲಿಲ್ಲ. ಅವರು ಎಂದಿಗೂ ರಾಜನಾಗಲು ಬಯಸಲಿಲ್ಲ. ಅವರು ಇತರರ ಸೇವೆ ಮಾಡಲು ಮತ್ತು ಅವರಿಗಾಗಿ ತನ್ನ ಪ್ರಾಣವನ್ನು ಕೊಡಲು ಬಂದರು. ಅವರು ಪ್ರಸಿದ್ಧನಾಗಲು ಬಯಸಲಿಲ್ಲ. ತಮ್ಮ ಪುನರುತ್ಥಾನದ ನಂತರ ಅವರಲ್ಲಿ ಯಾರಿಗಾದರೂ ಕಾಣಿಸಿಕೊಳ್ಳುವ ಮೂಲಕ ತಾನು ದೇವರ ಮಗನೆಂದು ಹೆರೋದ, ಅಥವಾ ಪಿಲಾತ, ಅಥವಾ ಅನ್ನ, ಅಥವಾ ಕಾಯಫನಿಗೆ ಸಾಬೀತುಪಡಿಸಲು ಬಯಸಲಿಲ್ಲ. ತನ್ನ ಪುನರುತ್ಥಾನದ ನಂತರ ಅವರು ಎಂದಿಗೂ ಫರಿಸಾಯರಲ್ಲಿ ಅಥವಾ ಸದ್ದುಕಾಯರಲ್ಲಿ ಒಬ್ಬರಿಗೂ ಕಾಣಿಸಿಕೊಂಡಿಲ್ಲ. ಏಕೆಂದರೆ ಅವರು ಮನುಷ್ಯರ ಮುಂದೆ ತನ್ನನ್ನು ಸಮರ್ಥಿಸಿಕೊಳ್ಳಲು ಬಯಸಲಿಲ್ಲ. ಪುರುಷರ ಅಭಿಪ್ರಾಯಗಳು ಕಸದ ತೊಟ್ಟಿಗೆ ಮಾತ್ರ ಸೂಕ್ತವೆಂದು ಅವರು ತಿಳಿದಿದ್ದರು!

“ನಾವು ಮೆಲ್ಕಿಜೆದೇಕನಂತೆ ಬದುಕಲು ಪ್ರಾರಂಭಿಸಿದರೆ ಏನಾಗುತ್ತದೆ ಎಂದು ಯೋಚಿಸಿ. ದೇವರಿಗೆ ಕಿವಿಗೊಡುತ್ತಾ ಮತ್ತು ನಾವು ಪ್ರತಿದಿನ ಏನು ಮಾಡಬೇಕೆಂದು ಆತನಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಯಾರಾದರೂ ಈ ಭೂಮಿಯಲ್ಲಿ ಬದುಕಲು ಇದು ಅತ್ಯಂತ ಉಪಯುಕ್ತ ಮಾರ್ಗವಾಗಿದೆ".

ನಮ್ಮ ಸಂಪರ್ಕಕ್ಕೆ ಬಂದವರು ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆಶೀರ್ವದಿಸಲ್ಪಡುವ ಅಂತಹ ಜೀವನವನ್ನು ಬದುಕಲು ನಾವು ಕೂಡ ಕರೆಯಲ್ಪಟ್ಟಿಲ್ಲವೇ? ನಾವೆಲ್ಲರೂ ಮೆಲ್ಕಿಜೆದೇಕನ ಪ್ರಕಾರ ಯಾಜಕರಾಗಲು ಕರೆಯಲ್ಪಟ್ಟಿದ್ದೇವೆ.