ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ Struggling ತಿಳಿಯುವುದು
WFTW Body: 

ನಿಜವಾದ ಕ್ರಿಸ್ತೀಯ ಅನ್ಯೋನ್ಯತೆಗೆ ಬೆಳಕು ಆಧಾರವಾಗಿರಬೇಕು. ದೇವರ ಬೆಳಕಿನಲ್ಲಿ ನಡೆಯಬೇಕೆಂಬ ಇಚ್ಛೆ ನಮ್ಮಲ್ಲಿದ್ದರೆ ಮಾತ್ರ ನಾವು ಇತರ ವಿಶ್ವಾಸಿಗಳೊಂದಿಗೆ ನಿಜವಾದ ಮತ್ತು ಆಳವಾದ ಅನ್ಯೋನ್ಯತೆಯಿಂದ ನಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾವು ಇತರರೊಟ್ಟಿಗೆ ನಾವು ನಾವಾಗಿಯೇ ಇರಲು ಸಿದ್ಧರಿದ್ದು, ಎಲ್ಲಾ ವಿಧವಾದ ವೇಷ ಮತ್ತು ಕಪಟತನವನ್ನು ಬಿಟ್ಟುಬಿಡಬೇಕು. ಕ್ರೈಸ್ತ ವಿಶ್ವಾಸಿಗಳು ಈ ರೀತಿಯಾಗಿಯೇ ಇತರರೊಟ್ಟಿಗೆ ನಡೆಯಬೇಕೆಂಬುದು ದೇವರ ಉದ್ದೇಶವಾಗಿದೆ. ಆದಿ ಸಭೆಯಲ್ಲಿ ಮೊದಲ ಬಾರಿ ದೇವರು ಸಾರ್ವಜನಿಕವಾಗಿ ನ್ಯಾಯತೀರ್ಪುಮಾಡಿದ ಪಾಪ ಕಪಟತನವಾಗಿತ್ತು ಎಂಬುದನ್ನು ನೆನಪಿಡಿರಿ ("ಅಪೋಸ್ತಲರ ಕೃತ್ಯಗಳು 5:1-14" ರಲ್ಲಿ ಅನನೀಯ ಮತ್ತು ಸಫೈರಳ ದೃಷ್ಟಾಂತವನ್ನು ನೋಡಿರಿ).

ಪಾಪದ ನಿಮಿತ್ತವಾಗಿ ನಾವೆಲ್ಲರೂ ನಮ್ಮ ಪರಸ್ಪರ ಸಂಬಂಧಗಳಲ್ಲಿ ಮುಖವಾಡಗಳನ್ನು ಧರಿಸುತ್ತೇವೆ. ನಾವು ನಿಜವಾಗಿಯೂ ಹೇಗಿದ್ದೇವೋ, ಆ ಸಹಜ ಸ್ಥಿತಿಯು ಇತರರಿಗೆ ಎಲ್ಲಿ ಗೊತ್ತಾಗಿ ಬಿಡುತ್ತದೋ ಎಂಬ ಭಯ ಮತ್ತು ಸಂಕೋಚ ನಮ್ಮಲ್ಲಿರುತ್ತದೆ. ಮುಖವಾಡವನ್ನು ಧರಿಸಿರುವ ಜನರೇ ತುಂಬಿರುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ; ಮತ್ತು ಜನರು ಪರಿವರ್ತನೆ ಹೊಂದಿದ ನಂತರವೂ ಸಹ ತಮ್ಮ ಮುಖವಾಡಗಳನ್ನು ಕಳಚುವುದಿಲ್ಲ. ಅವರು ತಮ್ಮ ಮುಖವಾಡದೊಂದಿಗೆ ಸಭೆಗಳಿಗೆ ಹಾಜರಾಗುತ್ತಾರೆ ಮತ್ತು ಇತರ ಜನರೊಂದಿಗೆ ಬೆರೆಯುತ್ತಾರೆ - ಮತ್ತು ಅದನ್ನೇ ಅನ್ಯೋನ್ಯತೆಯೆಂದು ಕರೆಯುತ್ತಾರೆ. ಆದರೆ ಇದೆಲ್ಲವೂ ಒಂದು ನಾಟಕವಾಗಿದೆ. ಆದಾಗ್ಯೂ ಹೆಚ್ಚಿನ ಕ್ರೈಸ್ತರು ಇದರಲ್ಲೇ ತೃಪ್ತಿಗೊಳ್ಳುವಂತೆ ಸೈತಾನನು ಮಾಡಿದ್ದಾನೆ.

"ಲೋಕವು ಒಂಟಿಗರು, ಮಾನಸಿಕ ಒತ್ತಡಕ್ಕೆ ಒಳಗಾದವರು, ಭಯಭೀತರು ಮತ್ತು ಮನೋವ್ಯಥೆಗಳಿಂದ ಬಳಲುವ ಜನರಿಂದ ತುಂಬಿದೆ. ಕ್ರಿಸ್ತನು ಅವರ ಸಮಸ್ಯೆಗಳಿಗೆ ಉತ್ತರವಾಗಿದ್ದಾನೆ. ಆದರೆ ಆ ಉತ್ತರವು ಅವರಿಗೆ ಆತನ ದೇಹವಾದ ಕ್ರೈಸ್ತ ಸಭೆಯ ಮೂಲಕ ಬರಬೇಕು"

ನಮ್ಮಲ್ಲಿ ಯಾರಿಗೂ ಸಹ ನಮ್ಮ ಮುಖವಾಡಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಸಾಧ್ಯ ಎಂಬುದು ನಿಜವೇ ಸರಿ. ನಾವು ಪಾಪಭರಿತ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ ಮತ್ತು ಒಂದು ಅಪರಿಪೂರ್ಣ ಸಭೆಯ ಅನ್ಯೋನ್ಯತೆಯನ್ನು ಹೊಂದಿದ್ದೇವೆ, ಮತ್ತು ಸ್ವತಃ ನಾವೇ ನಮ್ಮ ಮಾಂಸದಿಂದ ಬಂಧಿಸಲ್ಪಟ್ಟಿದ್ದೇವೆ; ಹಾಗಿರುವಾಗ ನಾವು ಇತರರೊಂದಿಗೆ ಸಂಪೂರ್ಣವಾಗಿ ಪ್ರಾಮಾಣಿಕತೆಯಿಂದ ಇರಲು ಸಾಧ್ಯವಿಲ್ಲ ಮತ್ತು ಅದನ್ನು ಒಪ್ಪಲಾಗುವುದಿಲ್ಲ ಕೂಡ. ಸಂಪೂರ್ಣ ಪ್ರಾಮಾಣಿಕತೆಯು ಅಸಾಧ್ಯವಾದ ಸಂಗತಿಯಾಗಿದೆ, ಏಕೆಂದರೆ ನಾವು ಸ್ವತಃ ನಮ್ಮನ್ನೇ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತಿಲ್ಲ. ಅದು ಸೂಕ್ತ ಅಲ್ಲ, ಏಕೆಂದರೆ ಅದು ಇತರರಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.

ನಾವು ಪ್ರಾಮಾಣಿಕವಾಗಬೇಕಾದರೆ ಜ್ಞಾನದ ಅಗತ್ಯವಿದೆ. ಆದರೆ ನಾವು ಯಾವ ರೀತಿ ಇಲ್ಲವಲ್ಲ, ಆ ರೀತಿ ಇದೀವಿ ಎಂದು ಇತರರ ಮುಂದೆ ತೋರ್ಪಡಿಸಿಕೊಳ್ಳಬಾರದು. ಅದು ಕಪಟತನವಾಗಿದೆ - ಮತ್ತು ಕಪಟತನವನ್ನು ಯೇಸುವು ತೀವ್ರವಾಗಿ ಖಂಡಿಸಿದರು.

ಅನೇಕ ಕ್ರೈಸ್ತರು ಇತರರಿಗೆ ಸಹಾಯ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ಕಾಲುವೆಗಳಾಗುವ ಅವಕಾಶವನ್ನು ಕಳೆದುಕೊಳ್ಳುವುದಕ್ಕೆ ಕಾರಣವೇನೆಂದರೆ, ಅದು ಅವರ ಸ್ವ-ನೀತಿಯ ಮತ್ತು ಫರಿಸಾಯತನದ ಮನೋಭಾವವಾಗಿದೆ. ನಮ್ಮ ಮನೋಭಾವವು ಹೇಗಿರಬೇಕು ಎಂದರೆ, ನಮ್ಮ ಸಹ-ವಿಶ್ವಾಸಿಗಳು ಮತ್ತು ಇತರರು ಆರಾಮಾಗಿಮುಜುಗರವಿಲ್ಲದೆ ನಮ್ಮ ಬಳಿಗೆ ಬಂದು, "ತೆರೆದ ಹೃದಯವುಳ್ಳವರಾಗಿ", ತಮ್ಮ ಭಾರವನ್ನು ಇಳಿಸಿಕೊಳ್ಳಬೇಕು. ನಾವು ಅವರನ್ನು ಅನುಕಂಪದಿಂದ ಮತ್ತು ಅರ್ಥಮಾಡಿಕೊಳ್ಳುವಿಕೆಯಿಂದ ಬರಮಾಡಕೊಂಡಿದ್ದೇವೆ ಎಂದು ಅವರಿಗೆ ಅನ್ನಿಸಬೇಕು. ಅವರು ತಮ್ಮ ಮೂಢತನಕ್ಕಾಗಿ ಮತ್ತು ಸೋಲುಗಳಿಗಾಗಿ ನಮ್ಮಿಂದ ತಿರಸ್ಕರಿಸಲ್ಪಡುವುದಿಲ್ಲ ಎಂಬ ಭಾವನೆ ಅವರಲ್ಲಿ ಮೂಡಬೇಕು.

"ಲೋಕವು ಒಂಟಿಗರು, ಮಾನಸಿಕ ಒತ್ತಡಕ್ಕೆ ಒಳಗಾದವರು, ಭಯಭೀತರು ಮತ್ತು ಮನೋವ್ಯಥೆಗಳಿಂದ ಬಳಲುವ ಜನರಿಂದ ತುಂಬಿದೆ. ಕ್ರಿಸ್ತನು ಅವರ ಸಮಸ್ಯೆಗಳಿಗೆ ಉತ್ತರವಾಗಿದ್ದಾನೆ. ಆದರೆ ಆ ಉತ್ತರವು ಅವರಿಗೆ ಆತನ ದೇಹವಾದ ಕ್ರೈಸ್ತ ಸಭೆಯ ಮೂಲಕ ಬರಬೇಕು". ಆದರೆ ಅಯ್ಯೋ, ಕ್ರೈಸ್ತರಲ್ಲಿ ಹೆಚ್ಚಿನವರು ಎಷ್ಟು ಸ್ವ-ನೀತಿವಂತರು ಮತ್ತು ಸತ್ಯಕ್ಕೆ ದೂರವಾದವರು ಆಗಿದ್ದಾರೆಂದರೆ, ಅವರು ಕೊರತೆಯಲ್ಲಿರುವ ಜನರನ್ನು ತಮ್ಮಿಂದ ದೂರ ಓಡುವಂತೆ ಮಾಡುತ್ತಾರೆ.

’ಕೀತ್ ಮಿಲ್ಲರ್’ ಎಂಬವರು "The Taste of New Wine" ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ."ನಮ್ಮ ಆಧುನಿಕ ಕ್ರೈಸ್ತ ಸಭೆಯಲ್ಲಿ ಅನೇಕರು ನೋಡುವುದಕ್ಕೆ ಶುದ್ಧರಂತೆಯೂ, ತಾವು ಪರಿಶುದ್ಧರೆಂದು ಹೇಳಿಕೊಳ್ಳುವವರು, ತಮ್ಮ ಒಳಭಾಗದಲ್ಲಿ ಅಸ್ವಸ್ಥಗೊಂಡಿರುವವರು, ತಮ್ಮ ಬಲಹೀನತೆಯಲ್ಲಿರುವವರು, ಹತಾಶೆಗೊಳಗಾಗಿರುವವರು, ಮತ್ತು ತಮ್ಮ ಸುತ್ತ ನಿಜತ್ವವೇ ಇಲ್ಲದಿರುವವರು, ಇಂತವರುಗಳು ತುಂಬಿದ್ದಾರೆ. ನಮ್ಮ ಅವಿಶ್ವಾಸಿ ಸ್ನೇಹಿತರು ಭಾವಿಸುವುದೇನೆಂದರೆ, ’ತೊಂದರೆಯೇ ಇಲ್ಲದ ಈ ಮೃದು ಜನರ ಗುಂಪು ನನ್ನ ಸಮಸ್ಯೆಗಳನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರರು’; ಅಥವಾ ಹೆಚ್ಚು ತಿಳುವಳಿಕೆಯುಳ್ಳ ಮತ್ತು ಸಾಮಾಜಿಕವಾಗಿ ನಮ್ಮ ಪರಿಚಯಸ್ಥರಾದ ಅನ್ಯಜನರು ನಮ್ಮ ಬಗ್ಗೆ ಅಂದುಕೊಳ್ಳುವುದು ಏನೆಂದರೆ, ’ಕ್ರೈಸ್ತರಾದ ಇವರು ಒಂದೋ ಲೋಕದ ತಿಳುವಳಿಕೆಯೇ ಇಲ್ಲದವರು ಮತ್ತು ಜನರ ಪರಿಸ್ಥಿತಿಯ ಜ್ಞಾನವಿಲ್ಲದವರು, ಇಲ್ಲವೇ ಇವರು ಸಂಪೂರ್ಣ ಕಪಟಿಗಳು’,ಎಂಬುದಾಗಿ."

ನಾವು ಇತರರೊಂದಿಗೆ ವೈಯಕ್ತಿಕವಾಗಿ ಪ್ರಾಮಾಣಿಕವಾದ ಅನ್ಯೋನ್ಯತೆಯನ್ನು ಹೊಂದಿಕೊಳ್ಳುವುದು ಹೇಗೆಂದು ಕಲಿಯುವುದು ಅವಶ್ಯವಾಗಿದೆ - ಮತ್ತು ನಾವೆಲ್ಲರೂ ಇದನ್ನು ಒಬ್ಬ ವ್ಯಕ್ತಿಯಿಂದ ಪ್ರಾರಂಭಿಸಬಹುದು.