ನಮ್ಮ ಆರ್ಥಿಕ ನೀತಿ
ದೇವರ ನಿಜವಾದ (ಶುದ್ದ) ಸೇವೆಯಲ್ಲಿ ಹಣವನ್ನು ಉಪಯೋಗಿಸಿಕೊಳ್ಳಬಹುದು. ಆದರೆ ಅದು ಎಂದೂ ಹಣದ ಮೇಲೆಯೇ ಅವಲಂಬಿತವಾಗಿರುವುದಿಲ್ಲ. ಅದು ಕೇವಲ ಪವಿತ್ರಾತ್ಮನ ಶಕ್ತಿಯ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಎಲ್ಲಿ ಯಾವುದೇ ಸೇವೆಯು ಹಣದ ಮೇಲೆ ಅವಲಂಬಿತವಾಗಿದ್ದರೆ, ಅದು ನಿಜವಾದ (ಶುದ್ದವಾದ) ದೇವರ ಸೇವೆಯಲ್ಲ.
ಯೇಸುಸ್ವಾಮಿಯ ಸೇವೆಯು ಕೇವಲ ಪವಿತ್ರಾತ್ಮನ ಮೇಲೆ ಮಾತ್ರ ಅವಲಂಬಿತವಾಗಿತ್ತು. ಅವರು ತಮ್ಮ ಹಿಂಬಾಲಕರಿಂದ ಕಾಣಿಕೆಯನ್ನು ತಮ್ಮ ಸೇವೆಗೋಸ್ಕರ ಸ್ವೀಕರಿಸಿದರು (ಲೂಕ 8:2,3). ಆದರೆ ಅವರು ಯಾರಿಂದಲೂ ಯಾವ ಸಮಯದಲ್ಲಿಯೂ ಹಣವನ್ನು ಕೇಳಲಿಲ್ಲ ಮತ್ತು ತಮ್ಮ ತಂದೆಗೆ ಹೊರತು ತಮ್ಮ ಹಣದ ಅವಶ್ಯಕತೆಯನ್ನು ಮತ್ತೆ ಯಾರಿಗೂ ಗೊತ್ತಾಗುವ ಹಾಗೇ ಮಾಡಲಿಲ್ಲ. ದೇವರನ್ನು ಗೌರವಿಸುವ ಯಾವುದೇ ಸೇವೆಯು, ಇಂದಿಗೂ ಸಹ ಹೀಗೆಯೇ ಕೆಲಸ ಮಾಡುತ್ತದೆ.
ಭೂಮಿಯ ಮೇಲೆ ಯೇಸುವು ಮೊದಲ ‘’ಕ್ರಿಸ್ತನ ದೇಹ’’ ವಾಗಿದ್ದರು. ಈ ದಿನ ಸಭೆಯಲ್ಲಿ ನಾವು ಆತ್ಮೀಕ ‘’ಕ್ರಿಸ್ತನ ದೇಹ’’ ಎಂದು ಕರೆಯಲ್ಪಡುತ್ತೇವೆ. ಯೇಸುವು ತಾವೇ ತಮ್ಮ ಭೂಲೋಕದ ಜೀವಿತದ ಸಮಯದಲ್ಲಿ, ಹಣಕಾಸಿನ ವಿಷಯವಾಗಿ ನಮಗೆ ತೋರಿಸಿದ ಉದಾಹರಣೆಯನ್ನೇ ಹಿಂಬಾಲಿಸುವುದನ್ನು ನಾವು ಹುಡುಕಬೇಕು.
ಆದುದರಿಂದ ಈ ನಾಲ್ಕು ದಶಕಗಳಿಂದ ನಾವು ಸಭೆಯಾಗಿ ಅಸ್ತಿತ್ವದಲ್ಲಿರುವಾಗ (1975 ರಿಂದ) ನಾವು ಯಾರನ್ನು ನಮ್ಮ ಅಗತ್ಯತೆಗಳಿಗಾಗಿ ಹಣವನ್ನು ಕೇಳಿಲ್ಲ ಮತ್ತು ನಮ್ಮ ಅಗತ್ಯತೆಗಳನ್ನು ಸೂಕ್ಷ್ಮವಾಗಿ ಸೂಚಿಸುವಂತ ಪ್ರಾರ್ಥನಾ ಪತ್ರವನ್ನು ನಾವು ಎಲ್ಲಿಯೂ ಕಳಿಸಿಲ್ಲ. ಬೆಂಗಳೂರಿನಲ್ಲಿರುವ ನಮ್ಮ ಸಭೆಯಲ್ಲಿ ಎಂದಿಗೂ ಕಾಣಿಕೆಯನ್ನು ತೆಗೆದುಕೊಂಡಿಲ್ಲ ಅಥವಾ ನಮ್ಮ ಮೂಲಕ ಭಾರತ ಮತ್ತು ವಿದೇಶಗಳಲ್ಲಿ ದೇವರು ಸ್ಥಾಪಿಸಿರುವ ಹಲವು ಸಭೆಗಳಲ್ಲಿನ ಯಾವುದರಲ್ಲಿಯೂ ಸಹ ಕಾಣಿಕೆಯನ್ನು ತೆಗೆದುಕೊಂಡಿಲ್ಲ. ನಾವು ನಮ್ಮ ಸಭೆಗಳಲ್ಲಿ ಒಂದು ಸ್ಥಳದಲ್ಲಿ ಕಾಣಿಕೆ ಪೆಟ್ಟಿಗೆಯನ್ನು ಇಡುತ್ತೇವೆ. ಯಾರ್ಯಾರು ಹಣವನ್ನು ದೇವರ ಕೆಲಸಕ್ಕಾಗಿ ರಹಸ್ಯವಾಗಿ, ಯಥಾರ್ಥವಾಗಿ ಮತ್ತು ಸ್ವ-ಇಚ್ಛೆಯಿಂದ ಕೊಡಲು ಇಚ್ಚಿಸುವವರೋ ಅಂಥವರಿಗೋಸ್ಕರ ಕಾಣಿಕೆ ಪೆಟ್ಟಿಗೆ ಇಟ್ಟಿರುತ್ತೇವೆ.
ಭಾರತದ ಬೇರೆ ಬೇರೆ ಭಾಗಗಳಲ್ಲಿ ನಾವು ಏರ್ಪಡಿಸುವ ವಾರ್ಷಿಕ ಮೂರು ದಿನದ ಸಮ್ಮೇಳನಗಳಲ್ಲಿ ಭಾಗವಹಿಸುವ ಎಲ್ಲರಿಗೂ ಊಟ ಮತ್ತು ವಸತಿಯನ್ನು ಉಚಿತವಾಗಿ ಕೊಡುತ್ತೇವೆ. ನಮ್ಮ ಸಭೆಗಳಲ್ಲಿನ ಎಲ್ಲಾ ಹಿರಿಯರು ತಮ್ಮ ಜೀವನಕ್ಕೆ ಬೇಕಾದ ಹಣವನ್ನು ಇಹ ಲೋಕದಲ್ಲಿನ ಕೆಲಸ ಮಾಡಿ ತಮ್ಮನ್ನು ತಾವು ಬೆಂಬಲಿಸಿಕೊಳ್ಳುತ್ತಾರೆ. (ಅಪೋಸ್ತಲನಾದ ಪೌಲನು ಮಾಡಿದ ಹಾಗೆ) ಮತ್ತು ಯಾರೂ ಸಹ ಸಭೆಗಳಿಂದ ತಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಿಲ್ಲ. ನಮ್ಮ ಜಾಲತಾಣದಲ್ಲಿರುವ ಪುಸ್ತಕಗಳು, ವಿಡಿಯೋಗಳು ಮತ್ತು ಧ್ವನಿವರ್ಧಕ ಸಂದೇಶಗಳನ್ನು ಪ್ರಪಂಚದ ಯಾವುದೇ ಜಾಗದಲ್ಲಿರುವ ಜನರು ಉಚಿತವಾಗಿ ತೆಗೆದುಕೊಳ್ಳಬಹುದು ಮತ್ತು ಇತರರಿಗೆ ಹಂಚಬಹುದು. ನಾವು ದೇವರಿಂದ ಎಲ್ಲವನ್ನು ಉಚಿತವಾಗಿ ಪಡೆದಿದ್ದೇವೆ ಮತ್ತು ಅದನ್ನೇ ಉಚಿತವಾಗಿ ಇತರರಿಗೆ ಹಂಚುತ್ತೇವೆ.
ನಾವು ಮಾಡುವ ಎಲ್ಲಾ ದೇವರ ಕಾರ್ಯಕ್ಕೆ ನಿಶ್ಚಯವಾಗಿ ತುಂಬಾ ಹಣ ಬೇಕಾಗುತ್ತದೆ ಮತ್ತು ನಮ್ಮ ಸಭೆಗಳಲ್ಲಿ ಯಾವ ಕೋಟ್ಯಾಧಿಪತಿಗಳು ಧನ ಸಹಾಯ ಮಾಡಲು ಇಲ್ಲ. ಭಾರತ ಒಂದು ಬಡ ದೇಶವಾಗಿರಬಹುದು. ಆದರೆ ನಾವು ಮೊದಲು ದೇವರ ರಾಜ್ಯಕ್ಕೋಸ್ಕರ ಪ್ರಯತ್ನಿಸಿದೆವು ಮತ್ತು ದೇವರು ಎಲ್ಲಾ ಸಮಯಗಳಲ್ಲಿ, ನಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಆದುದರಿಂದ ನಾವು ದೇವರ ಸೇವೆಯನ್ನು ಪ್ರಾರಂಭಿಸಿದಾಗಿನಿಂದ ಎಂದಿಗೂ ಸಾಲದಲ್ಲಿಲ್ಲ. ನಾವು ಸಭಾಂಗಣವನ್ನು ಕಟ್ಟಲು ಎಂದಿಗೂ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿಲ್ಲ ಅಥವಾ ಗಿರವಿ ಇಟ್ಟಿಲ್ಲ. ನಮಗಿಂತ ಭಿನ್ನವಾದ ರೀತಿಯಲ್ಲಿ ದೇವರ ಸೇವೆ ಮಾಡುವವರನ್ನು ನಾವು ತೀರ್ಪುಮಾಡುವುದಿಲ್ಲ. ಆದರೆ ಇದೇ ಮಾರ್ಗದಲ್ಲಿ ದೇವರು ನಮ್ಮನ್ನು ನಡೆಸಿದರು. ಇಹ ಲೋಕದ ಮೊದಲ ‘’ಕ್ರಿಸ್ತನ ದೇಹವಾದ’’ ಯೇಸುವಿನ ಮಾದರಿಯನ್ನು ಅನುಸರಿಸಲು ನಾವು ಪ್ರಯತ್ನಿಸಿದ್ದೇವೆ.
ಮತ್ತು ನಮಗೆ ಜನರು “ದೇವರ ಕೆಲಸಕ್ಕೆ ನಾವು ಸಹಾಯ ಮಾಡಬಹುದೆ?” ಎಂದು ಕೇಳಿದರೆ, ಮೊದಲು ಈ ಕೆಳಕಂಡ ಪರಿಶೀಲನಾ ಪಟ್ಟಿಯನ್ನು ಓದಿ ಎಂದು ಹೇಳುತ್ತೇವೆ.
ದೇವರ ಕೆಲಸಕ್ಕೆ ಸಹಾಯ ಮಾಡುವುದು ಒಂದು ವಿಶೇಷ ಗೌರವ ಮತ್ತು ಭಾಗ್ಯ. ಆದರೆ ಹೊಸದಾಗಿ ಹುಟ್ಟಿದವರಿಗೆ ಮಾತ್ರ ಆ ಭಾಗ್ಯ ಕೊಡಲ್ಪಟ್ಟಿದೆ (3 ಯೋಹಾನ 7).
ದೇವರ ಕಾರ್ಯಕ್ಕೆ ನೀವು ಹಣ ಕೊಡುವುದರಿಂದ ನಿಮ್ಮ ಕುಟುಂಬದ ಮೇಲೆ ಹೊರೆ ಬೀಳುವುದೇ? ನೀವು ಮೊದಲು ನಿಮ್ಮ ಕುಟುಂಬದ ಅವಶ್ಯಕತೆಯನ್ನು ನೋಡಿಕೊಳ್ಳಬೇಕು (1 ತಿಮೋತಿ 5:8) ನಮ್ಮ ಪರಲೋಕದ ತಂದೆಯು ತುಂಬಾ ಶ್ರೀಮಂತರು (ಪ್ರಪಂಚದ ಯಾವುದೇ ಶ್ರೀಮಂತ ತಂದೆಯ ಹಾಗೇ) ಮತ್ತು ಯಾರೂ ಕೂಡ ಕಷ್ಟ ಪಡುವುದು ಅಥವಾ ಹಸಿವಿನಿಂದಿರುವುದು ಆತನಿಗೆ ಇಷ್ಟವಿಲ್ಲ. ಅದರಲ್ಲೂ ದೇವರ ಕಾರ್ಯಕ್ಕೆ ಹಣ ಕೊಟ್ಟು ಕಷ್ಟದಲ್ಲಿ ಬೀಳುವುದು ದೇವರಿಗೆ ಇಷ್ಟವಿಲ್ಲ.
ಹಾಗಿದ್ದರೆ, ಮೊದಲು ನಿಮ್ಮ ಸಾಲವನ್ನು ತೀರಿಸಿ. ನಾವು ಎಲ್ಲಾ ಸಾಲದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ಬಾಳಬೇಕೆಂದು ದೇವರು ಆಶಿಸುತ್ತಾರೆ. ನಾವು ಮೊದಲು ಕೈಸರನಿಗೆ ಸೇರಬೇಕಾದದ್ದನ್ನು ಕೈಸರನಿಗೆ ಕೊಡಬೇಕು. ಆನಂತರ ದೇವರಿಗೆ ಸೇರ ಬೇಕಾದದ್ದನ್ನು ದೇವರಿಗೆ ಕೊಡಬೇಕು. ಏಕೆಂದರೆ ನಾವು ಕೈಸರನ ಹಣವನ್ನು ಅಥವಾ ಬೇರೆಯವರ ಹಣವನ್ನು ದೇವರಿಗೆ ಕೊಟ್ಟರೆ ಅದು ದೇವರಿಗೆ ಮೆಚ್ಚಿಗೆಯಾಗುವುದಿಲ್ಲ (ಮತ್ತಾಯ 22:21, ರೋಮಪುರದವರಿಗೆ 13:8).
(ಟಿಪ್ಪಣಿ – ಮನೆ ಕಟ್ಟಲು ತೆಗೆದುಕೊಂಡ ಸಾಲವು, “ಸಾಲ”ದಂತಿರುವುದಿಲ್ಲ (ಈ ವಾಕ್ಯಗಳಲ್ಲಿನ ಅರ್ಥದ ಮೇರೆಗೆ) ಏಕೆಂದರೆ ನೀವು ತೆಗೆದುಕೊಂಡ ಸಾಲಕ್ಕೆ ಸಮಾನವಾಗಿ ಬೆಲೆಬಾಳುವ ಆಸ್ತಿ ನಿಮ್ಮ ಮನೆಯಾಗಿದೆ. ಅದೇ ಕಾರಣದಿಂದ ವಾಹನ ತೆಗೆದುಕೊಳ್ಳಲು ತೆಗೆದುಕೊಂಡ ಸಾಲವು “ಸಾಲ”ದಂತಿರುವುದಿಲ್ಲ – ಸಾಲ ತೆಗೆದುಕೊಂಡ ಬೆಲೆಗೆ ಸರಿ ಸಮಾನವಾಗಿ ವಿಮೆಯನ್ನು ಪಾವತಿಸಿದ್ದ ಪಕ್ಷದಲ್ಲಿ).
ಯಾರನ್ನಾದರೂ ನೋಯಿಸಿ ಅವರ ಹತ್ತಿರ ಕ್ಷಮೆ ಕೇಳದೆ ಇದ್ದರೆ ದೇವರು ನಿಮ್ಮ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ (ಮತ್ತಾಯ 5:23,24).
ದೇವರು ಒತ್ತಾಯದಿಂದ ಕೊಡುವವರನ್ನು ಇಷ್ಟಪಡುವುದಿಲ್ಲ, ಆದರೆ ಸಂತೋಷದಿಂದ ಕೊಡುವವರನ್ನು ಇಷ್ಟಪಡುತ್ತಾರೆ. ಯಾರ್ಯಾರು ಒತ್ತಡಕ್ಕೊಳಪಟ್ಟು ಕಾಣಿಕೆ ಕೊಡುವರೋ, ಒಂದು ಕರ್ತವ್ಯ ಮಾಡುವ ರೀತಿಯಲ್ಲಿಯೋ, ಮನಸ್ಸಾಕ್ಷಿಗೆ ಸಮಾಧಾನವಾಗಲೆಂದು ಕೊಡುವರೋ ಅಥವಾ ಆತನಿಂದ ಏನಾದರೂ ಪ್ರತಿಫಲ ಸಿಗುತ್ತದೆ ಎಂದು ಕೊಡುವರೋ, ಇಂತಹವರಿಂದ ದೇವರು ಕಾಣಿಕೆಯನ್ನು ಬಯಸುವುದಿಲ್ಲ (2 ಕೋರಿಂಥದವರಿಗೆ 9:7).
ಈ ಪರಿಶೀಲನಾ ಪಟ್ಟಿಯನ್ನು ಓದುವಾಗ ದಯವಿಟ್ಟು ನಮ್ಮನ್ನು ಸಹಿಸಿಕೊಳ್ಳಿ. ಆರ್ಥಿಕ ವಿಷಯದಲ್ಲಿ ನಾವು ಯೇಸುವಿನ ಮಾದರಿಯನ್ನು ಬೋಧಿಸಿ ಮತ್ತು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ.
Christian Fellowship Church
#69-71, Paradise Enclave, Bellahalli
(Behind Supertech Micasa Apartment)
Kannur Post
Bangalore Urban
Bangalore - 562149
Karnataka
India