ಝಾಕ್ ಪೂನನ್ ರವರ ಬಗ್ಗೆ:-
ಝಾಕ್ ಪೂನನ್ ರವರು ಈ ಹಿಂದೆ ಒಬ್ಬ ನೌಕಾ ಅಧಿಕಾರಿಯಾಗಿದ್ದು, ಕಳೆದ ೪೦ ವರ್ಷಗಳಲ್ಲಿ ಒಬ್ಬ ಸತ್ಯವೇದದ ಭೋಧಕರಾಗಿಯೂ ಮತ್ತು ಹಲವಾರು ಸಭೆಗಳ ಜವಾಬ್ದಾರಿಯನ್ನು ಹೊತ್ತುಕೊಂಡ ಸಭಾಹಿರಿಯರಾಗಿಯೂ ಕರ್ತನ ಸೇವೆಯನ್ನು ಮಾಡುತ್ತಿದ್ದಾರೆ.
ಇವರು ಆಂಗ್ಲ ಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಮತ್ತು ಈ ಪುಸ್ತಕಗಳು ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ. ಭಾರತ ಮತ್ತು ಇತರ ದೇಶಗಳಲ್ಲಿ ಇವರು ಮಾಡಿದ ಪ್ರಸಂಗಗಳು- ಧ್ವನಿ (ಆಡಿಯೋ) ಮತ್ತು ವೀಡಿಯೋ ಸಿ.ಡಿ.ಗಳಲ್ಲಿ ಲಭ್ಯವಿದೆ.
ಕ್ರೈಸ್ತ ಅನ್ಯೋನ್ಯತಾ ಸಭೆಯ ಇತರ ಹಿರಿಯರಂತೆ , ಝಾಕ್ ಪೂನನ್ ರವರೂ ಕೂಡ ತಮ್ಮ ಸೇವೆಗೆ ಯಾವುದೇ ರೀತಿಯ ಸಂಬಳವನ್ನು ಪಡೆಯದೆ, ತಮ್ಮ ಮತ್ತು ತಮ್ಮ ಕುಟುಂಬದ ಅವಶ್ಯಕತೆಗಳನ್ನು ‘ಗುಡಾರ ಕಟ್ಟುವುದರ’ ಮೂಲಕ (ಸ್ವಂತ ದುಡಿಮೆಯಿಂದ) ಪೂರೈಸುತ್ತಾ ಬಂದಿದ್ದಾರೆ. ಅವರ ಸಿ.ಡಿ., ಪುಸ್ತಕ ಹಾಗು ಕ್ಯಾಸೆಟ್ ಗಳು - ಕ್ರೈಸ್ತ ಅನ್ಯೋನ್ಯತಾ ಕೇಂದ್ರದಿಂದ ಪ್ರಕಾಶಿಸಲ್ಪಟ್ಟರೂ ಇದರಿಂದ ಅವರು ಯಾವುದೇ ರೀತಿಯ ಗೌರವ ಧನವನ್ನು ಪಡೆಯುವುದಿಲ್ಲ.