"ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು" ಎಂಬುದಾಗಿ ನಾವು ಪ್ರತಿ ದಿನ ಪ್ರಾರ್ಥಿಸಬೇಕೆಂದು ಯೇಸು ಸ್ವಾಮಿ ನಮಗೆ ಕಲಿಸಿದ್ದಾರೆ. ನಾವು ಪ್ರತಿದಿನ ಕ್ಷಮೆಗಾಗಿ ಪ್ರಾರ್ಥಿಸಬೇಕೆಂಬುದು ನಿಮಗೆ ತಿಳಿದಿದೆಯೇ? ನಾವು ಪ್ರತಿದಿನ ಯೇಸುಸ್ವಾಮಿ ನಮಗೆ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಪುನರಾವರ್ತಿಸದಿದ್ದರೂ, ನಾವು ಪ್ರತಿದಿನ ಕನಿಷ್ಠ ಪಕ್ಷ ಕ್ಷಮೆಗಾಗಿ ಪ್ರಾರ್ಥಿಸಬೇಕು ಎಂದು ನಾವು ತಿಳಿದಿರಬೇಕು. ನಾನು ಪ್ರತಿದಿನ "ಕರ್ತನೇ, ನನ್ನ ಪಾಪಗಳನ್ನು ಕ್ಷಮಿಸು" ಎಂದು ಪ್ರಾರ್ಥಿಸುತ್ತೇನೆ. ಕ್ಷಮೆ ನಮಗೆ ಪ್ರತಿದಿನ ಅಗತ್ಯವಾಗಿರುವ ವಿಷಯ ಎಂದು ನಾವು ಹೇಗೆ ತಿಳಿದುಕೊಳ್ಳಬಹುದು? ಏಕೆಂದರೆ ಈ ಪ್ರಾರ್ಥನೆಯ ಹಿಂದಿನ ಸಾಲಿನಲ್ಲಿ "ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು"(ಮತ್ತಾಯ 6:11) ಎಂದು ಇದೆ. ಆದ್ದರಿಂದ, ಇದು ದೈನಂದಿನ ವಿಷಯ. ಕರ್ತನೇ, ನನಗೆ ಇಂದು ನನ್ನ ದೈನಂದಿನ ರೊಟ್ಟಿಯ ಅಗತ್ಯವಿದೆ ಮತ್ತು ನನ್ನ ಮುಂದಿನ ವಿನಂತಿಯೇನೆಂದರೆ, ನೀವು ಇಂದು ನನ್ನ ಪಾಪಗಳನ್ನು ಕ್ಷಮಿಸಿರಿ.
"ಪಾಪದ ಮೇಲೆ ನಾನು ಜಯ ಸಾಧಿಸಿದ್ದೇನೆ ಹಾಗೂ ನಾನು ಪ್ರತಿದಿನ ಪಾಪ ಮಾಡುತ್ತೇನೆ ಎಂದು ಹೇಗೆ ಹೇಳಬಹುದು?" ಎಂದು ನೀವು ಕೇಳಬಹುದು. ನಮ್ಮ ಮನಸ್ಸಾಕ್ಷಿಗೆ ತಿಳಿದಿರುವ ಪಾಪಗಳನ್ನು ಜಯಿಸುವುದು ಮತ್ತು ನಮಗೆ ತಿಳಿದಿಲ್ಲದ ಕ್ಷೇತ್ರಗಳಲ್ಲಿ ಅರಿವಿಲ್ಲದೆ ಪಾಪ ಮಾಡುವುದರ ನಡುವೆ ವ್ಯತ್ಯಾಸವಿದೆ. ನಾವು ನಿಜವಾಗಿ ನಮ್ಮ ಜೀವಿತದ ಬಗ್ಗೆ ಸುಮಾರು ಹತ್ತು ಪ್ರತಿಶತ ಮಾತ್ರ ತಿಳಿದಿದ್ದೇವೆ. ನಾವು ಮಂಜುಗಡ್ಡೆಯ ತುದಿಯನ್ನು ಮಾತ್ರ ಕಾಣುವಂತೆ, ನಮ್ಮ ಜೀವಿತದಲ್ಲಿ ಪಾಪದ ಮೇಲ್ಭಾಗವನ್ನು ಮಾತ್ರ ಕಾಣಬಹುದು. ನಮ್ಮ ಜೀವಿತದಲ್ಲಿ ಪಾಪ ಮತ್ತು ಕ್ರಿಸ್ತನಿಗೆ ವಿರುದ್ಧವಾದ ವಿಷಯಗಳ ಬಗ್ಗೆ ನಮಗೆ ಅರಿವಿಲ್ಲದ ಹಲವು ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿಯೂ ಸಹ ದೇವರು ನಮ್ಮನ್ನು ಕ್ಷಮಿಸಲಿ ಎಂದು ನಾವು ಪ್ರಾರ್ಥಿಸಬೇಕು.
ಇದೇ ಪ್ರತಿದಿನ ಕ್ಷಮಾಪಣೆಯನ್ನು ಕೇಳುವುದರ ಅರ್ಥವಾಗಿದೆ. ನಾವು ಅಪೊಸ್ತಲ ಪೌಲನು ಮಾಡಿದಂತೆ, ಗೊತ್ತಿದ್ದು ಮಾಡುವ ಪಾಪದ ಮೇಲೆ ಸಂಪೂರ್ಣ ಜಯದಲ್ಲಿ ಜೀವಿಸಬಹುದು. 1 ಕೊರಿಂಥ 4:4ರಲ್ಲಿ ಪೌಲನು ಹೀಗೆ ಹೇಳುತ್ತಾನೆ, "ನನ್ನ ವಿರುದ್ಧವಾಗಿ ನನಗೆ ಗೊತ್ತಿರುವಂತದ್ದು ಯಾವುದು ಇಲ್ಲ". ಬೇರೆ ರೀತಿಯಲ್ಲಿ ಹೇಳುವುದಾದರೆ ಪೌಲನು ಹೀಗೆ ಹೇಳುತ್ತಿದ್ದಾನೆ, "ನಾನು ನನಗೆ ಗೊತ್ತಿರುವ ಪಾಪದ ಮೇಲೆ ಪೂರ್ಣ ಜಯದಲ್ಲಿ ಜೀವಿಸುತ್ತಿದ್ದೇನೆ " ಎಂದು. ನಾನು ನನ್ನ ಜೀವಿತದಲ್ಲಿ ನನಗೆ ತಿಳಿಯದೆ ಇರುವ ಪಾಪಗಳ ಬಗ್ಗೆ ನನಗೆ ಅರಿವು ಇಲ್ಲ. ಆದರೆ ಅದು, ನಾನು ಸಂಪೂರ್ಣವಾಗಿ ಪಾಪ ಮುಕ್ತನಾಗಿದ್ದೇನೆ ಅಥವಾ ಅಪರಾಧ ಮನೋಭಾವದಿಂದ ಬಿಡುಗಡೆ ಹೊಂದಿದ್ದೇನೆ ಎಂದು ಅರ್ಥವಲ್ಲ. ನನ್ನನ್ನು ಪರೀಕ್ಷಿಸುವವನು ಕರ್ತನು ತಾನೇ ಆಗಿದ್ದಾನೆ. ಆತನಿಗೆ ನಾನು ಉತ್ತರ ಕೊಡಬೇಕಾಗಿದೆ. ನನ್ನ ಜೀವಿತದ ಅನೇಕ ಕ್ಷೇತ್ರಗಳನ್ನು ನಾನೇ ನನ್ನ ಬಗ್ಗೆ ನೋಡದ ನನ್ನ ಜೀವಿತದ ಅನೇಕ ಕ್ಷೇತ್ರಗಳನ್ನು ಆತನು ನೋಡುವವನಾಗಿದ್ದಾನೆ. ಆದ್ದರಿಂದ, ಪಾಪಮುಕ್ತನಾಗಿದ್ದೇನೆಂದು ನಾನು ಅಜಾಗರೂಕತೆಯಿಂದ ಹೇಳಬಾರದು. ನನ್ನನ್ನು ಕ್ಷಮಿಸಿ ಎಂದು ನಾನು ದೇವರೊಡನೆ ಕೇಳಿಕೊಳ್ಳಬೇಕು. ಆತನು ಹಿಂದೆ ನನ್ನ ಜೀವಿತದ ಅನೇಕ ಕ್ಷೇತ್ರಗಳಲ್ಲಿ ನನಗೆ ತಿಳಿಯದೆ ಇದ್ದ ಅನೇಕ ಪಾಪಗಳ ಬಗ್ಗೆ ಬೆಳಕು ಕೊಡುವಾಗ ನಾನು ಆ ಕ್ಷೇತ್ರಗಳ ಬಗ್ಗೆ ಅಥವಾ ಪಾಪಗಳ ವಿಷಯವಾಗಿ ಜಯವನ್ನು ಪಡೆಯಲು ಹಾರೈಸಬಹುದಾಗಿದೆ. ಇದೇ ಶುದ್ಧೀಕರಣವಾಗಿದೆ.
ನಾವು ಸಹ ಇಹಲೋಕದ ವಸ್ತುಗಳು, ಪುರುಷರು, ಸ್ತ್ರೀಯರು, ಪರಿಸಾಯರು, ಧಾರ್ಮಿಕ ಕಪಟಿಗಳು ಮತ್ತು ಶತ್ರುಗಳ ಪರವಾಗಿ ಕ್ರಿಸ್ತ ಯೇಸುವಿನಲ್ಲಿರುವ ಮನೋಭಾವವನ್ನು ಹೊಂದಿರಬೇಕು.
"ನನ್ನನ್ನು ಹಿಂಬಾಲಿಸು" ಎಂಬ ಒಂದು ಸರಳವಾದ ಆಜ್ಞೆಯನ್ನು ಕರ್ತನು ನಮಗೆ ಕೊಡುತ್ತಾನೆ. ನಂತರ ಹಂತ ಹಂತವಾಗಿ ಶುದ್ಧೀಕರಣ ಹೊಂದುವ ಅದ್ಭುತವಾದ ಜೀವಿತದ ಮಾರ್ಗವನ್ನು ಕರ್ತನು ನಮಗೆ ತೋರಿಸುತ್ತಾನೆ. ಜ್ಞಾನೋಕ್ತಿ 4: 18, ಹೀಗೆ ಹೇಳುತ್ತದೆ, "ನೀತಿವಂತರ ಮಾರ್ಗವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ". ನಾವು ಹೊಸದಾಗಿ ಹುಟ್ಟಿದ್ದರೆ, ಯೇಸುಕ್ರಿಸ್ತನ ನೀತಿಯನ್ನು ನಾವು ಪಡೆದವರಾಗಿ ನೀತಿವಂತರೆಂದು ಕರೆಯಲ್ಪಟ್ಟವರಾಗುತ್ತೇವೆ. ಪರಿವರ್ತನೆಯ ಗಳಿಗೆಯು ಹೇಗಿರುತ್ತದೆಂದರೆ, ಸೂರ್ಯನು ಮೇಲೆ ಮೇಲೆ ಏರುತ್ತಾ ಕತ್ತಲನ್ನು ಹೊಡೆದೋಡಿಸಿದಂತೆ. ಸೂರ್ಯನು ಮಧ್ಯಾಹ್ನ ಹೊತ್ತಿನಲ್ಲಿ ಅತಿ ಹೆಚ್ಚಾಗಿ ಪ್ರಕಾಶಿಸುತ್ತಾನೆ. ಅದೇ ರೀತಿಯಾಗಿ ನಾವು ನೀತಿವಂತರಾಗಿದ್ದರೆ, ಪ್ರಾಯೋಗಿಕವಾಗಿ ಪ್ರತಿದಿನ ನಮ್ಮ ಜೀವಿತದ ಎಲ್ಲಾ ಹಂತದಲ್ಲೂ ಹೆಚ್ಚು ಹೆಚ್ಚಾಗಿ ಬೆಳವಣಿಗೆ ಹೊಂದುತ್ತಾ ಹೋಗಬೇಕು. ಸೂರ್ಯನು(ನಮ್ಮ ಜೀವಿತದ ನೀತಿಯ ಸೂರ್ಯನು) ಯಾವಾಗಲೂ ನಮ್ಮ ಜೀವಿತದ ಎಲ್ಲಾ ದಿನಗಳಲ್ಲೂ ಪ್ರಕಾಶವಾಗಿ ಕಾಣುವಂತಿರಬೇಕು. ಅದು ಹೆಚ್ಚು ಹೆಚ್ಚು ಪ್ರಕಾಶಮಯವಾಗಬೇಕು. ನಮ್ಮ ಜೀವಿತದಲ್ಲಿ ಸೂರ್ಯನು ದಿಗಂತದಲ್ಲೇ ಇರಬಾರದು. ಅದು ಪ್ರಕಾಶಮಾನದಲ್ಲಿ ಹೆಚ್ಚಬೇಕು. ನೀತಿವಂತನ ಮಾರ್ಗವು ಕರ್ತನು ಬರುವವರೆಗೂ ಹೆಚ್ಚು ಹೆಚ್ಚು ಪ್ರಕಾಶಮಾನವಾಗುತ್ತಲೇ ಇರುತ್ತದೆ. ನಂತರ ಆತನು(ಕ್ರಿಸ್ತನು) ಬಂದ ಮೇಲೆ ನಾವು ಆತನಂತೆ ಆಗುತ್ತೇವೆ.
ಅವನು ಬಂದಾಗ ಮಾತ್ರ ನಾವು ಸಂಪೂರ್ಣವಾಗಿ ಅವನಂತೆಯೇ ಆಗುವೆವು, ಆದರೆ ಇಂದು ನಾವು ಆತನಂತೆಯೇ ನಡೆಯಬಹುದು. 1 ಯೋಹಾನ 3:2 ರಲ್ಲಿ ಹೇಳಿದಂತೆ, "ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ, ಮುಂದೆ ನಾವು ಏನಾಗುವೆವು ಅದು ಇನ್ನೂ ಪ್ರತ್ಯಕ್ಷವಾಗಿಲ್ಲ. ಆದರೆ ಆತನು ಪ್ರತ್ಯಕ್ಷನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು, ಯಾಕೆಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು".1 ಯೋಹಾನ 3:2 ರಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ. ನಾವು ಈಗಾಗಲೇ ದೇವರ ಮಕ್ಕಳಾಗಿದ್ದೇವೆ, ಆದರೆ ನಾವು ಏನಾಗಲಿದ್ದೇವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದೆ ನಾವು ಏನಾಗುವೆವು ? ನಾವು ಸಂಪೂರ್ಣವಾಗಿ ಯೇಸುವಿನಂತೆ ಆಗುವೆವು. ನಮ್ಮ ಎಲ್ಲಾ ಆಲೋಚನೆಗಳು, ಮಾತುಗಳು, ಕಾರ್ಯಗಳು, ಮನೋಧೋರಣೆಗಳು, ಉದ್ದೇಶಗಳು, ನಮ್ಮ ಆಂತರಿಕ ಜೀವಿತದ ಪ್ರತಿಯೊಂದು ಕ್ಷೇತ್ರ ಮತ್ತು ನಮ್ಮ ಪ್ರಜ್ಞಾಹೀನ (ಅರಿವಿಲ್ಲದ) ಜೀವಿತ ಸೇರಿದಂತೆ ನಮ್ಮ ಸಂಪೂರ್ಣ ವ್ಯಕ್ತಿತ್ವವು ಯೇಸುವಿನಂತೆ ಇರುತ್ತದೆ.
ಇದು ಯಾವಾಗ ಸಂಭವಿಸುತ್ತದೆ? ಯೇಸು ಪುನ: (ತಿರುಗಿ) ಬರುವಾಗ, ಮತ್ತು ನಾವು ಅವನನ್ನು ಆತನಿರುವ ಪ್ರಕಾರವೇ ನೋಡುವೆವು. ಆದರೆ ಆ ದಿನದವರೆಗೂ ನಾವು ಏನು ಮಾಡಬೇಕು? 1 ಯೋಹಾನ 3:3 ರಲ್ಲಿ ಹೇಳುವ ಪ್ರಕಾರ ಸಂಪೂರ್ಣವಾಗಿ ಯೇಸುವಿನಂತೆ ಆಗುವಿರಿ ಎಂಬ ಭರವಸೆಯನ್ನು ನೀವು ಹೊಂದಿದ್ದರೆ, ನೀವು ಆತನ ಶುದ್ಧತೆಯ ಗುಣಮಟ್ಟವನ್ನು ತಲುಪುವವರೆಗೆ ಪ್ರತಿದಿನ ನಿಮ್ಮನ್ನು ಶುದ್ಧೀಕರಿಸುತ್ತೀರಿ. ಸ್ವಲ್ಪ ಮುಂಚಿತವಾಗಿ ಬರೆಯಲ್ಪಟ್ಟ 1 ಯೋಹಾನ 2:6 ಕ್ಕೆ ಇದು ಹೋಲುತ್ತದೆ. ನಾನು ಕ್ರೈಸ್ತನೆಂದು ಹೇಳಿದರೆ, ಕ್ರಿಸ್ತನು ಜೀವಿಸಿದಂತೆಯೇ ನಾನು ಜೀವಿಸಬೇಕು ಮತ್ತು ಅವನು ನಡೆದ ಹಾಗೆಯೇ ನಾನು ನಡೆಯಬೇಕು ಎಂದು ಹೇಳಲಾಗಿದೆ. ತದನಂತರವೇ ಒಂದು ದಿನ ನಾನು ಆತನಂತೆ ಆಗುವೆನು.
1 ಯೋಹಾನ 2:6 ಮತ್ತು 1 ಯೋಹಾನ 3:2 ರ ನಡುವೆ ವ್ಯತ್ಯಾಸವಿದೆ. 1 ಯೋಹಾನ 2:6 ರ ಸಂದೇಶ ಏನೆಂದರೆ ಯೇಸು ಜೀವಿಸಿದ ತತ್ವಗಳ ಪ್ರಕಾರವೇ ನಾವು ನಡೆಯಬೇಕು ಮತ್ತು ಆತನನ್ನು ಅನುಸರಿಸಬೇಕು. ಲೌಕಿಕ ವಸ್ತುಗಳು, ಪುರುಷರು, ಮಹಿಳೆಯರು, ಪರಿಸಾಯರು, ಧಾರ್ಮಿಕ ಕಪಟಿಗಳು ಮತ್ತು ಶತ್ರುಗಳ ಬಗ್ಗೆ ಯೇಸು ಹೊಂದಿದ್ದ ಅದೇ ಮನೋಭಾವವನ್ನು ನಾವು ಹೊಂದಿರಬೇಕು. ಉದಾಹರಣೆಗೆ, ಯೇಸು ತನ್ನನ್ನು ಶಿಲುಬೆಗೇರಿಸಿದ ಶತ್ರುಗಳಿಗಾಗಿ ಪ್ರಾರ್ಥಿಸಿದನು. "ತಂದೆಯೇ, ಅವರನ್ನು ಕ್ಷಮಿಸು ಯಾಕೆಂದರೆ ತಾವು ಏನು ಮಾಡುತ್ತೇವೆ ಎಂದು ಅವರು ಅರಿಯರು."
ಕರ್ತನಾದ ಯೇಸುವು ನಡೆದಂತೆಯೇ ನಾವು ಸಹ ನಡೆಯಲು ಪವಿತ್ರಾತ್ಮರು ನಮ್ಮನ್ನು ಬಲಪಡಿಸುತ್ತಾರೆ. ಆದರೆ ಅದು ನಮಗೆ ತಿಳಿದಿರುವ ಕ್ಷೇತ್ರದಲ್ಲಿ ಮಾತ್ರ. ಅದು ಕೇವಲ ನಮ್ಮ ಸಂಪೂರ್ಣ ಜೀವಿತದ ಶೇಕಡ 10ರಷ್ಟು ಮಾತ್ರವಾಗಿದೆ. ಉಳಿದ ಶೇಕಡ 90ರಷ್ಟು ಜೀವಿತ ನಮಗೆ ತಿಳಿಯದಿರುವುದಾಗಿದೆ. ದೇವರು ನಮಗೆ ತಿಳಿಯದಿರುವ ಕ್ಷೇತ್ರಗಳನ್ನು ಹೆಚ್ಚಾಗಿ ಪ್ರಕಟಪಡಿಸುತ್ತಾರೆ. ಏಕೆಂದರೆ ನಾವು ಈ ಎಲ್ಲಾ ಕ್ಷೇತ್ರಗಳಲ್ಲಿ ಜಯಶಾಲಿಗಳಾಗಿ ಹೆಚ್ಚು ಹೆಚ್ಚಾಗಿ ಶುದ್ಧೀಕರಿಸಲ್ಪಡುತ್ತಿರಬೇಕು ಎಂಬುದಾಗಿದೆ. ದೇವರು ನಮ್ಮನ್ನು ಪಾಪಗಳಿಂದ ಶುದ್ಧೀಕರಿಸುತ್ತಾರೆ (1 ಯೋಹಾನ 1:7). ಆದರೆ ನಾವು ಸಹ ಪವಿತ್ರಾತ್ಮರ ಬಲದಿಂದ ಸಕಲ ಪಾಪಗಳಿಂದ ಬಿಡುಗಡೆ ಹೊಂದಿ ನಮ್ಮನ್ನು ಶುದ್ಧೀಕರಿಸಿಕೊಳ್ಳಲು ತವಕಿಸಬೇಕಾಗಿದೆ (1 ಯೋಹಾನ 3:3).