WFTW Body: 

"ನಾನು ಯೆಹೂದದ ಮೇಲೂ, ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಯೇಷಗೊಳಿಸಿ ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮ ಮಾಡುವೆನು; ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆ ಪೂಜಿಸುವವರನ್ನೂ ಯೆಹೋವನ ಭಕ್ತರೆಂದು ಪ್ರತಿಜ್ಞೆ ಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ ಧ್ವಂಸಪಡಿಸುವೆನು" ಎಂದು ಚೆಫನ್ಯ 1:4,5ರಲ್ಲಿ ದೇವರು ಹೇಳಿದ್ದಾನೆ. ಕಾನಾನೇಯರು ಇಸ್ರೇಲ್‌ನ್ನು ಅವರ (ಕೆಳ) ಮಟ್ಟಕ್ಕೆ ಕೆಳಗೆ ಎಳೆಯುವಲ್ಲಿ ಯಶಸ್ವಿಯಾದರು. ಕಾನಾನೇಯರಿಗೆ ನಿಜವಾದ ದೇವರನ್ನು ತೋರಿಸಲು ಇಸ್ರೇಲ್ ಕಾನಾನೇಗೆ ತೆರಳಿತು, ಆದರೆ ಅವರು ಇಸ್ರೇಲ್‌ನ್ನು ಅವರ ಮಟ್ಟಕ್ಕೆ ಕೆಳಗೆ ಎಳೆದರು.

ಒಂದು ವೇಳೆ ನೀವು ಮೇಜಿನ ಮೇಲೆ ನಿಂತು, ಮೇಜಿನ ಕೆಳಗೆ ನಿಂತಿರುವ ವ್ಯಕ್ತಿಯನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತೀರಿ, ಎಂದೆಣಿಸಿಕೊಳ್ಳಿ. ಆದರೆ ಆತನು ನಿಮ್ಮನ್ನು ಕೆಳಗೆಳೆಯಲು ಪ್ರಯತ್ನಿಸಿದರೆ, ನಿಮ್ಮನ್ನು ಕೆಳಗೆ ಎಳೆಯುವುದು ಆತನಿಗೆ ಸುಲಭವಾಗುವುದಿಲ್ಲವೇ? ಇದೇ ಯೆಹೂದಗೆ ಆಗಿದ್ದು. ಕಾನಾನೇಯರೊಡನೆ ಯಾವುದೇ ರೀತಿಯ ವ್ಯವಹಾರ ಮಾಡದಬಾರದೆಂದು ದೇವರು ಯೆಹೂದಗೆ ಎಚ್ಚರಿಸಿದ್ದನು; ಆದರೆ ಅದನ್ನವರು ಕೇಳಲಿಲ್ಲ. ಇದರ ಫಲಿತಾಂಶವೇನಾಯಿತು? ಕಾನಾನೇಯರು ಯೆಹೋವನನ್ನು ಆರಾಧಿಸುವಂತೆ ಯೆಹೂದ ಮಾಡಲಿಲ್ಲ. ಆದರೆ ಕಾನಾನೇಯರು ಯೆಹೂದವನ್ನು ಅವರ ಮಟ್ಟಕ್ಕೆ ಕೆಳಗೆ ಎಳೆದರು ಮತ್ತು ಯೆಹೂದವು ಬಾಳ, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಆರಾಧಿಸಲು ಪ್ರಾರಂಭಿಸಿತು.

"ದೀನತೆಯನ್ನು ಬೆನ್ನಟ್ಟು. ನಿನ್ನ ಮುಖವನ್ನು ದಿನನಿತ್ಯವೂ ಧೂಳಿನಲ್ಲಿಡು. ಎಂದಿಗೂ ನಿನ್ನನ್ನು ಇನ್ನೊಬ್ಬರೊಡನೆ ಹೋಲಿಸಿಕೊಳ್ಳಬೇಡ. ನಿನ್ನನ್ನು ಯೇಸುವಿನೊಂದಿಗೆ ಮಾತ್ರ ಹೋಲಿಸಿಕೋ". ಕ್ರೈಸ್ತ ಸಭೆಯು ತನ್ನ ಆರಾಧನೆಯಲ್ಲಿ "ಭಾರತೀಯತೆ"ಯನ್ನು ಅಳವಡಿಸಲು ಪ್ರಯತ್ನಿಸುವಾಗ, ಇದೇ ರೀತಿ ಆಗುತ್ತದೆ. ಅನೇಕ ಸಲ ಅವರು ವಿಗ್ರಹರಾಧಕರಾಗಿ ಅಕ್ರೈಸ್ತರಂತಾಗುತ್ತಾರೆ. ಒಬ್ಬ “ಕ್ರೈಸ್ತ" ಯಾಜಕನು (ಪೂಜಾರಿಯು) ಬರೆದ ಒಂದು ಪುಸ್ತಕವನ್ನು ನಾನು ನೋಡಿದೆ. ಆ ಪುಸ್ತಕದ ಮುಖಪುಟದಲ್ಲಿ ಏಳು ಹೆಡೆಯುಳ್ಳ ಹಾವಿನ ಕೆಳಗೆ ಯೇಸು ಕೂತಿರುವ ಒಂದು ಚಿತ್ರವಿತ್ತು. ಆ ಹಾವು ಪವಿತ್ರಾತ್ಮನ ಏಳು ಸ್ವರೂಪಗಳನ್ನು ಸೂಚಿಸುವ ಸಂಕೇತವಾಗಿತ್ತು!! ಇದೇ “ಭಾರತೀಯತೆಯ” ಫಲಿತಾಂಶ. ಬೇರೆ ಸಭೆಗಳಲ್ಲಿ ಪ್ರಾಪಂಚಿಕತೆಯು ಕ್ರೈಸ್ತರನ್ನು ಕೆಳಗೆ ಎಳೆಯುತ್ತಿರಬಹುದು.

ಯಾವಾಗ ವಿಶ್ವಾಸಿಯು ಅವಿಶ್ವಾಸಿಯನ್ನು ಮದುವೆಯಾಗುತ್ತಾನೋ, ಆಗಲೂ ಇದೇ ರೀತಿ ಆಗುತ್ತದೆ. ಅವಿಶ್ವಾಸಿಯು ಅವನ/ಅವಳ ಮಟ್ಟಕ್ಕೆ ವಿಶ್ವಾಸಿಯನ್ನು ಕೆಳಗೆ ಎಳೆಯುತ್ತಾರೆ. ಮದುವೆ ಸಮಯದಲ್ಲಿ ವರದಕ್ಷಿಣೆ ಕೇಳುವುದು, ಹಲವು ಕ್ರೈಸ್ತರ ಸಂಪ್ರದಾಯವಾಗಿದ್ದು, ಅದು ಅಕ್ರೈಸ್ತ ಜೀವನ ಕ್ರಮವಾಗಿದೆ. ದೇವರು ವರದಕ್ಷಿಣೆಯನ್ನು ದ್ವೇಷಿಸುತ್ತಾನೆ. ಏಕೆಂದರೆ, ಇದು ಹೆಣ್ಣನ್ನು ವ್ಯಾಪಾರದಲ್ಲಿ ಮಾರುವ ವಸ್ತುವೆಂಬಂತೆ ತೋರಿಸುತ್ತದೆ. ಪ್ರವಾದಿಗಳು ಇಂತಹ ವಿಷಯಗಳ ವಿರುದ್ಧ ಎದ್ದು ನಿಂತರು ಮತ್ತು ಇಸ್ರೇಲ್‌ನ ಧಾರ್ಮಿಕ ನಾಯಕರು ಇದಕ್ಕೋಸ್ಕರ ಅವರನ್ನು ದ್ವೇಷಿಸಿದರು. ಇಂದೂ ಸಹ ಈ ರೀತಿ ನಡೆಯುತ್ತದೆ. ಇಂದು ಭಾರತದಲ್ಲಿ ವರದಕ್ಷಿಣೆಯ ವಿರೋಧವಾಗಿ ಧೈರ್ಯದಿಂದ ನಿಲ್ಲುವಂತಹ ಸಭೆಗಳಿಲ್ಲ. ಕ್ರೈಸ್ತರು ಪ್ರಪಂಚದ ಮಟ್ಟಕ್ಕೆ ಇಳಿಯಲ್ಪಟ್ಟಿದ್ದಾರೆ. ಅವರು ಯೇಸುವಿನ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರು ಸುತ್ತಮುತ್ತಲಿನ ಪ್ರಾಪಂಚಿಕತೆಯಿಂದ ಜೀವಿಸುತ್ತಾರೆ.

“ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ ರಾಜವಂಶದವರನ್ನೂ ವಿದೇಶ ವಸ್ತ್ರಧಾರಿಗಳೆಲ್ಲರನ್ನೂ ದಂಡಿಸುವೆನು. ಹೊಸ್ತಿಲಹಾರಿ ನುಗ್ಗಿ ಮೋಸ ಹಿಂಸೆಗಳಿಂದ ದೋಚಿದ್ದನ್ನು ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು” (ಚೆಫನ್ಯ 1:8.9). ಜನ ನಾಯಕರು ಅನ್ಯ ಜನಾಂಗದವರ (ಅಕ್ರೈಸ್ತರ) ಸಂಪ್ರದಾಯಗಳನ್ನು ಅನುಸರಿಸಿ, ಹಣವನ್ನು ಪ್ರೀತಿಸಿ ತಮ್ಮ ಮನೆಗಳನ್ನು ಅದರಿಂದ ತುಂಬಿಸಿರುತ್ತಾರೆ. ಹಳೆ ಒಡಂಬಡಿಕೆಯ ಪ್ರವಾದಿಗಳು ದೈವ ಜನರ ನಾಯಕರ ಮತ್ತು ಅವರು ಹಣವನ್ನು ಪ್ರೀತಿಸುವುದರ ವಿರುದ್ಧವಾಗಿ ಯಾವಾಗಲೂ ಮಾತನಾಡುತ್ತಿದ್ದರು. ಏಕೆಂದರೆ, ಪ್ರಾಥಮಿಕವಾಗಿ ಅವರೇ ತಪ್ಪು ದಾರಿ ಹಿಡಿದ್ದರು. ಹಾಗಾಗಿ, ಆ ನಾಯಕರು ಪ್ರವಾದಿಗಳನ್ನು “ಧರ್ಮದ್ರೋಹಿಗಳು” ಎಂದು ಕರೆದರು ಮತ್ತು ಅವರನ್ನು ಹಿಂಸಿಸಿದರು. ಒಂದು ವೇಳೆ ದೇವರು ಇಂದು ಸಭೆಗಳಿಗೆ ಪ್ರವಾದಿಯನ್ನು ಕಳುಹಿಸಿದರೆ, ಆತನು ಸಹ ಪಾಸ್ಟರ್‌ಗಳ ಮತ್ತು ಬಿಷಪ್‌ಗಳ (ದೇವರನ್ನು ಪ್ರೀತಿಸುವುದರಲ್ಲಿ) ರಾಜಿ ಮಾಡುವಿಕೆಯ ವಿರುದ್ಧವಾಗಿ ಮತ್ತು ಅವರಿಗಿರುವ ಹಣದ ಪ್ರೀತಿಯ ವಿರುದ್ಧವಾಗಿ ಅವನು ಮಾತನಾಡುತ್ತಾನೆ. ಆಗ ಈ ಪಾಸ್ಟರ್‌ಗಳು ಇಂತಹ ಪ್ರವಾದಿಯನ್ನು “ಧರ್ಮದ್ರೋಹಿ” ಎಂದು ಕರೆಯುತ್ತಾರೆ, ಹಾಗೂ ಅಂಥವನು ತಮ್ಮ ವೇದಿಕೆಗೆ ಅವರು ಬರಲು ಅವರು ಬಿಡೋದಿಲ್ಲ. ಜೊತೆಗೆ ಅವರು ಆತನನ್ನು ಹಿಂಸಿಸುತ್ತಾರೆ. ಹಳೆ ಒಡಂಬಂಡಿಕೆಯಲ್ಲಿ ಪ್ರತಿಯೊಬ್ಬ ಪ್ರವಾದಿಯು ಹಿಂಸಿಸಲ್ಪಟ್ಟನು. ಯಾರೂ ಹಿಂಸೆಯಿಂದ ತಪ್ಪಿಸಿಕೊಂಡಿಲ್ಲ. ಸ್ತೆಫನನು ಯೆಹೂದ್ಯ ನಾಯಕರಿಗೆ "ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ?”(ಅಪೊಸ್ತಲರ ಕೃತ್ಯಗಳು 7:52) ಎಂದು ಕೇಳಿದನು. ಆಗ ಅವರು ಒಬ್ಬನನ್ನೂ ಹೆಸರಿಸಲಿಲ್ಲ. ಎಲ್ಲಾ ಪ್ರವಾದಿಗಳೂ ಯಾಕಾಗಿ ಹಿಂಸಿಸಲ್ಪಟ್ಟರು. ಏಕೆಂದರೆ ಅವರು ಜನ ನಾಯಕರ ಪಾಪವನ್ನು ತೋರಿಸಿಕೊಟ್ಟರು.

ಯೇಸು ಬೋಧಿಸುವಾಗ, ಕುಡುಕರ ಮತ್ತು ವ್ಯಭಿಚಾರಿಗಳ ಮತ್ತು ಕೊಲೆಗಾರರ ಅಥವಾ ಆತನ ದಿನಗಳಲ್ಲಿ ತೆರಿಗೆ ವಂಚಿಸುವವರ ವಿರುದ್ಧವಾಗಿ ಆತನು ಬೋಧಿಸಿದ್ದನ್ನು ನಾವು ನೋಡಬಹುದಾ? ಇಲ್ಲ. ಆತನು ಅವರ ವಿರುದ್ಧವಾಗಿ ಎಂದಿಗೂ ಮಾತನಾಡಿಲ್ಲ. “ನಾನು ಅಂತಹ ಪಾಪಿಗಳನ್ನು ಹುಡುಕಲು ಮತ್ತು ಅವರನ್ನು ರಕ್ಷಿಸುವುದಕ್ಕೋಸ್ಕರ ಬಂದೆನು” ಎಂಬುದಾಗಿ ಆತನು ಹೇಳಿದನು. ಆದರೆ ಸತ್ಯವೇದವನ್ನು ಕೈಯಲ್ಲಿ ಹಿಡಿದುಕೊಂಡು, ಸಭಾ ಮಂದಿರಗಳಲ್ಲಿ ಬೋಧಿಸಿ, ಹಣವನ್ನು ಪ್ರೀತಿಸಿ ಕಪಟಿ ಜೀವಿತವನ್ನು ಜೀವಿಸುವ ಧಾರ್ಮಿಕ ನಾಯಕರನ್ನು ಯೇಸು ಉಗ್ರವಾಗಿ ಖಂಡಿಸಿದನು. ಹಾಗಾಗಿ, ಅವರು ಆತನನ್ನು ಕೊಂದರು. ನೀವು ಈ ನಿಜವಾದ ಯೇಸುವನ್ನು ಮತ್ತು ಸತ್ಯವಾದ ಪ್ರವಾದಿಗಳನ್ನು ಹಿಂಬಾಲಿಸುತ್ತಿರೋ ಅಥವಾ ಒಬ್ಬ ಸುಳ್ಳು ಪ್ರವಾದಿಯನ್ನು ಮತ್ತು ಲೋಕದ ಕ್ರೈಸ್ತ ನಾಯಕರೊಂದಿಗೆ ಸ್ನೇಹದಿಂದಿರುವಂತ “ಮತ್ತೊಬ್ಬ ಯೇಸುವನ್ನು” ಹಿಂಬಾಲಿಸಿ, ಅವರೊಡನೆ ಔತಣ ಮಾಡುತ್ತೀರೋ? ದೇವರು ಮೊದಲು ನಾಯಕರನ್ನು ನ್ಯಾಯತೀರ್ಪಿಗೆ ಒಳಪಡಿಸುವರು.

“ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು” (ಚೆಫನ್ಯ 1:12). ಇಂದು ಸಭೆಗಳಲ್ಲಿಯೂ ಸಹ ಅನೇಕ ನಾಯಕರು ಸುಖ ಭೋಗಿಗಳಾಗಿ ಜೀವಿಸುತ್ತಿದ್ದಾರೆ, ಅವರು ತಮ್ಮ ಬೋಧನೆಯಿಂದ ಶ್ರೀಮಂತರಾದವರು ಮತ್ತು ದೇವರ ಆಜ್ಞೆಗಳಿಗೆ ಅಸಡ್ಡೆ ತೋರುವವರಾಗಿದ್ದಾರೆ. ಅವರು ತಮ್ಮ ಬಿರುದುಗಳನ್ನು ಮತ್ತು “ನಿರ್ದೇಶಕ”, “ಮುಖ್ಯ ಪಾಸ್ಟರ್” “ಬಿಷಪ್” ಎಂಬಿತ್ಯಾದಿ ಸ್ಥಾನಗಳನ್ನು ಪ್ರೀತಿಸುವವರಾಗಿದ್ದಾರೆ. ದೇವರು ಇವೆಲ್ಲವನ್ನು ಎಲ್ಲರಿಗೂ ಬಹಿರಂಗಪಡಿಸುವವರಾಗಿದ್ದಾರೆ.

ಸಭೆಯು ಆತ್ಮಿಕವಾಗಿ ಕೀಳ್ಮಟ್ಟಕ್ಕೆ ಇಳಿಯುವಾಗ, ಅದು ಆರಾಮದಾಯಕ ಮತ್ತು ಸುಖಭೋಗದ ಜೀವಿತೆಡೆಗೆ ನಡೆಯುತ್ತಿದೆ, ದೈವಿಕ ಜೀವಿತದಲ್ಲಿ ಸಡಿಲತೆಯನ್ನು ಅವಳಸಿಕೊಂಡಿದೆ ಮತ್ತು ಜನರ ಅಗತ್ಯಗಳೆಡೆ ಕಾಳಜಿಯಿಲ್ಲದಿದ್ದು ಪ್ರಾರ್ಥನಾರಹಿತ ಮಾರ್ಗದಲ್ಲಿ ಸಾಗುತ್ತಿದೆ ಎಂದರ್ಥ. ಹಲವಾರು ಯುವಜನರು ದೇವರ ಸೇವೆಯನ್ನು ಹುರುಪಿನಿಂದ, ತ್ಯಾಗದಿಂದ, ಪ್ರಾರ್ಥನೆಯಿಂದ ಮತ್ತು ದೇವರ ವಾಕ್ಯವನ್ನು ಗಂಭೀರವಾಗಿ ಅಭ್ಯಾಸ ಮಾಡುವುದರಿಂದ ಪ್ರಾರಂಭಿಸುತ್ತಾರೆ. ಆದರೆ 30 ವರ್ಷಗಳ ನಂತರ, “ಶ್ರೀಮಂತಿಕೆಯ ಮೋಸತನದಿಂದ ಉಸಿರುಗಟ್ಟಿದಂತಾಗಿ ಅವರು ಆತ್ಮಿಕ ಜೀವನದಲ್ಲಿ ತಣ್ಣಗಾಗಿರುತ್ತಾರೆ.” ಒಂದು ವೇಳೆ ನೀವು ಈ ಶಾರೀರಿಕ ದುರಾಶೆಗಳ ವಿರುದ್ಧವಾಗಿ ನಂಬಿಕೆಯಿಂದ ಹೋರಾಡದಿದ್ದರೆ ಮತ್ತು ಕ್ರೈಸ್ತತ್ವದಲ್ಲಿನ ಭ್ರಷ್ಟಾಚಾರದ ವಿರುದ್ಧವಾಗಿ ನಿಲ್ಲದಿದ್ದರೆ, ನೀವೂ ನಿಮ್ಮ ಸುತ್ತಲಿರುವ ಭ್ರಷ್ಟ ನಾಯಕರ ಹಾಗೆ ಆಗುತ್ತೀರಿ. ನೀವು ಭಾನುವಾರ ಬೆಳಗ್ಗೆ ವೃತ್ತಿನಿರತ ಬೋಧಕರಾಗಿ ಉಪದೇಶಿಸಬಹುದು, ಹೆಚ್ಚು ಹೆಚ್ಚು ಹಣವನ್ನು ಸಂಗ್ರಹಿಸಬಹುದು, ಸುಖಭೋಗ ಜೀವಿಸಬಹುದು ಮತ್ತು ನೀವು ಮಹಾ ಶ್ರದ್ಧೆಯಿಂದ ಪ್ರಾರಂಭಿಸಿದ್ದರೂ, ನಿಮ್ಮ ಮೇಲೆ ಅಭಿಷೇಕ ಇರುವುದಿಲ್ಲ. ಇದು ಚೆಫನ್ಯನ ಸಮಯದಲ್ಲಿ ಆಗಿದೆ ಮತ್ತು ಇಂದು ಸಹ ಇದು ಆಗುತ್ತಿದೆ.

ಯಾರು ಪಾಪ ಮಾಡುತ್ತಾರೋ ಅವರು “ದಾರಿಯನ್ನು ಹುಡುಕುವ ಕುರುಡರಂತೆ” (ಚೆಫನ್ಯ 1:17) ಎಂದು ದೇವರು ವಿವರಿಸಿದ್ದಾರೆ. ನಾಯಕರೇ ಕುರುಡರಾಗಿರುವಾಗ, ಅವರ ಹಿಂಬಾಲಕರೂ ಹಳ್ಳದಲ್ಲಿ ಬೀಳುವುದನ್ನು ನಾವು ನಿರೀಕ್ಷಿಸಬಹುದು.

ನಂತರ ಚೆಫನ್ಯ - “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ” (ಚೆಫನ್ಯ 2:3) ಎಂದು ಹೇಳುತ್ತಾನೆ. ಎಂತಹ ಮಾತಿದು! "ಇನ್ನೂ ಹೆಚ್ಚಾಗಿ ದೀನರಾಗಬಯಸಿರಿ." ದೇವರು ದೀನರನ್ನು ಆಶೀರ್ವದಿಸುತ್ತಾನೆ ಎಂಬುದನ್ನು ಚೆಫನ್ಯನು ಅರ್ಥಮಾಡಿಕೊಂಡಿದ್ದನು. ಒಂದು ಕಡೆ ಬಾಬೆಲ್‌ನ ಅಹಂಕಾರ ಹಾಗೂ ಇನ್ನೊಂದೆಡೆ ಯೆರುಸಲೇಮಿನಲ್ಲಿ ಉಳಿದಂತಹ ಜನರ ಸ್ವಲ್ಪ ದೀನತೆಯಿತ್ತು.

ಕಾಯಿನ ಮತ್ತು ಹೇಬೇಲನ ಸಮಯದಿಂದ ಮನುಷ್ಯಕುಲದಲ್ಲಿ ಬಾಬೆಲ್ ಮತ್ತು ಯೆರೂಸಲೇಮ್ ಎಂಬ ಎರಡು ರೀತಿಯ ತೊರೆಗಳನ್ನು ನಾವು ಗಮನಿಸಬಹುದು. ಬಾಬೆಲ್ ಒಂದು ಭ್ರಷ್ಟ, ಧಾರ್ಮಿಕ ಪದ್ಧತಿಯಾದರೆ, ಯೆರೂಸಲೇಮ್ ದೇವರ ನಿಜವಾದ ಸಭೆಯಾಗಿದೆ. ಈ ಸಭೆಯು ಪವಾಡಗಳಿಂದಾಗಲಿ, ಸಂಕೇತಗಳಿಂದಾಗಲಿ, ಅದ್ಭುತಗಳಿಂದಾಗಲಿ ಗುರುತಿಸಲ್ಪಟ್ಟಿಲ್ಲ. ಆದರೆ ದೀನತೆಯಿಂದ ಗುರುತಿಸಲ್ಪಟ್ಟಿದೆ. ಯೆರೂಸಲೇಮಿನವರು ಹೆಚ್ಚು ಹೆಚ್ಚು ದೀನತೆಯನ್ನು ಕಂಡುಕೊಳ್ಳುವುದರಲ್ಲಿ ಎಂದಿಗೂ ದಣಿದಿರುವುದಿಲ್ಲ.

ಉಳಿದವರ ಗುಂಪಿಗೆ ಸೇರಿದವರು ಎದುರಿಸುವ ಅಪಾಯಗಳೇನು? ಅದೇನೆಂದರೆ, ತಮ್ಮನ್ನೇ ಬೇರೆ ಸಭೆಗಳಿಗೆ ಹೋಲಿಸಿಕೊಳ್ಳುವುದು ಮತ್ತು ತಮ್ಮ ಶ್ರೇಷ್ಠತೆಯಲ್ಲಿ ಮಹಿಮೆ ಹೊಂದುವುದು. ನೀವು ಈ ರೀತಿಯಾಗಿ ಯೋಚಿಸುವುದೇ ಸೈತಾನನಿಗೆ ಬೇಕಾಗಿರುವುದು. ಏಕೆಂದರೆ, ಆತನಿಗೆ ಏನು ಗೊತ್ತೆಂದರೆ, ನೀವು ಆ ರೀತಿ ಯೋಚಿಸಲು ಪ್ರಾರಂಭಿಸಿದ ಕ್ಷಣವೇ ದೇವರು ನಿಮ್ಮ ಶತ್ರುವಾಗುತ್ತಾನೆ ಮತ್ತು ನೀವು ಯಾರ ಬಗ್ಗೆ ತಾತ್ಸಾರ ಮಾಡುತ್ತಿದ್ದಿರೋ, ಅವರಂತೆಯೇ ನೀವೂ ಆಗುತ್ತೀರಿ. ಈ ಉಳಿದವರು ಹೇಗೆ ಬಾಬೆಲಿನ ಭಾಗವಾಗಬಹುದೆಂಬುದನ್ನು ನೀವೇ ನೋಡಬಹುದು. ಹಾಗಾಗಿ ದೀನತೆಯನ್ನು ಬೆನ್ನಟ್ಟಿ ಹೋಗಿ. ನಿಮ್ಮ ಮುಖವನ್ನು ಯಾವಾಗಲೂ ಧೂಳಿನಲ್ಲಿಡಿ. ನಿಮ್ಮನ್ನು ನೀವು ಎಂದಿಗೂ ಮತ್ತೊಬ್ಬರೊಡನೆ ಹೋಲಿಸಿಕೊಳ್ಳಬೇಡಿ. ಯೇಸುವಿನೊಡನೆ ಮಾತ್ರ ನಿಮ್ಮನ್ನು ನೀವು ಹೋಲಿಸಿಕೊಳ್ಳಿರಿ. ಇಂದು ಉಳಿದ ದೈವ ಜನರಿಗೆ ಸೇರಿದ ಪ್ರತಿಯೊಬ್ಬರಿಗೂ ನಾನು ಕೊಡುವ ಸಲಹೆ ಇದೇ ಆಗಿದೆ.