ಪ್ರವಾದನೆಯ ಸೇವಾಕಾರ್ಯದ ಬಗ್ಗೆ ನಿಮಗೆ ನಾನು ತೋರಿಸಬಯಸುತ್ತೇನೆ. 1 ಅರಸು 3:15 ರಲ್ಲಿ ಎಲೀಷನು ಪ್ರವಾದನೆ ಮಾಡುವುದರ ಬಗ್ಗೆ, ದೇವರ ಚಿತ್ತವನ್ನು ತಿಳಿಯಬಯಸಿದಾಗ ಯಾರಾದರೂ ಕಿನ್ನರಿ ಹಾಡುವಂತೆ ಹೇಳಿದನು. ಸಂಗೀತಗಾರನು ಆಡಿದಂತೆ, ಕರ್ತನ ಹಸ್ತ (ಕೈ/ಆತ್ಮ) ಎಲೀಷನ ಮೇಲೆ ಬಂತು ಮತ್ತು ಅವನು ಬಲವಾಗಿ ಪ್ರವಾದಿಸಿದನು. ದೈವೀಕ ಸಂಗೀತದ ಬೆಲೆಯನ್ನು ನಾವು ಅಲ್ಲಿ ನೋಡುತ್ತೇವೆ.
ಭಾನುವರ ಬೆಳಗ್ಗಿನ ಆರಾಧನೆ ಮತ್ತು ಸ್ತುತಿಯ ಸಮಯದಲ್ಲಿ ಕರ್ತನ ಕೈ ನನ್ನ ಮೇಲೆ ಬಂದು, ನಾನು ಸಭಾ-ಕೂಟಕ್ಕೆ ಬರುವ ಮೊದಲು ನನ್ನಲ್ಲಿರದ ವಾಕ್ಯವೊಂದನ್ನು ಕರ್ತನು ನನಗೆ ನೀಡಿದ ನನ್ನ ಜೀವನದ ಅನೇಕ ಸಂದರ್ಭಗಳ ಬಗ್ಗೆ ನಾನು ಯೋಚಿಸಲು ಸಾಧ್ಯ. ಎಲೀಷನ ಮೇಲೆ ಪ್ರವಾದನೆಯ ಆತ್ಮವನ್ನು ತಂದ ಆ ಅಭಿಷೇಕ ಹೊಂದಿದ ಸಂಗೀತದಲ್ಲಿ ಬಲವಿತ್ತು.
ಒಬ್ಬ ಪ್ರವಾದಿಗೆ ಕೂಡ ಕೆಲವು ಸಲ ಸಂಗೀತಗಾರರ ನೆರವು ಬೇಕು. ಆದುದರಿಂದ ಸಂಗೀತವನ್ನು ಮುನ್ನಡೆಸುವವರು ಅಭಿಷೇಕ ಹೊಂದಿರಬೇಕು. ಅವರು ಕೇವಲ ಉತ್ತಮ ಸಂಗೀತಗಾರರಾಗಿರಬಾರದು. ಅವರು ಅಭಿಷೇಕ ಹೊಂದಿದವರಾಗಿದ್ದು, ಒಳ್ಳೆಯ ಆತ್ಮಸಾಕ್ಷಿ ಇದ್ದವರಾಗಿರಬೇಕು. ದಾವೀದನು ಹಾಡುಗಾರರನ್ನು ಮತ್ತು ಸಂಗೀತಗಾರರನ್ನು ನೇಮಿಸಿದನು ಮತ್ತು ಅವರು ಅಭಿಷೇಕ ಹೊಂದಿದವರಾಗಿರಬೇಕಿತ್ತು. ಅಸಾಫನಂತಹ ಕೆಲವು ಸಂಗೀತ-ನಾಯಕರುಗಳು ಹನ್ನೆರಡು ಕೀರ್ತನೆಗಳನ್ನು ಬರೆದರು ಅವನ ಸಂಗೀತಗಾರರಲ್ಲಿ ಇಬ್ಬರು ದಾರ್ಶನಿಕರು (ಪ್ರವಾದಿಗಳು) ಎಂದು ಕರೆಯಲ್ಪಟ್ಟಿದ್ದರು - ಹೆಮಾನ್ (1 ಪೂ.ವೃ. 25:5). ಮತ್ತು ಯೆದೂತೂನ (2, ಪೂ.ವೃ. 35:15).
ಆದ್ದರಿಂದ ಅಭಿಷೇಕ ಹೊಂದಿದ ಪ್ರವಾದಿಗಳಿಗೆ ನೆರವಾಗಲು ದೇವರಿಗೆ ಅಭಿಷೇಕ ಹೊಂದಿದ ಸಂಗೀತಗಾರ ಅಗತ್ಯವಿದೆ. ಈ ರೀತಿ ಸಭೆಯು ಕಟ್ಟಲ್ಪಡುತ್ತದೆ. ನಿಮ್ಮಲ್ಲಿ ಕೆಲವರು ಪ್ರವಾದಿಗಳಾಗಲು ಕರೆಯಲ್ಪಟ್ಟಿರಲಿಕ್ಕಿಲ್ಲ ಆದರೆ, ನೀವು ಸಂಗೀತಗಾರರಾಗಲು ಕರೆಯಲ್ಪಟ್ಟಿರಬಹುದು. ನೀವು ಅಭಿಷೇಕ ಹೊಂದಿದ ಸಂಗೀತಗಾರರಾಗಿರಿ.
ಕಿನ್ನರಿಗಾರನು ಅಂದು ಯಾವುದೇ ಪ್ರಾಪಂಚಿಕ ರೀತಿಯ ಸಂಗೀತವನ್ನು ಅನುಕರಿಸಲು ಪ್ರಯತ್ನಿಸಿದ್ದರೆ ಎಲೀಷನು ಪ್ರೇರೇಪಿಸಲ್ಪಡುತ್ತಿದ್ದನೆಂದು ನನಗನ್ನಿಸುವುದಿಲ್ಲ, ಇಲ್ಲ. ಆ ಸಂಗೀತದ ಬಗ್ಗೆ ಏನೋ ಸ್ವರ್ಗೀಯವಾದುದಿತ್ತು. ಪ್ರಾಪಂಚಿಕವಾದ ಮತ್ತು ಸ್ವರ್ಗೀಯವಾದ ಸಂಗೀತವೆಂಬುದಿದೆ. ಸ್ವರ್ಗೀಯವಾದ ಸಂಗೀತವನ್ನು ನೀನು ಗ್ರಹಿಸಿಕೊಳ್ಳಬಹುದು. ಏಕೆಂದರೆ, ನೀನು ದೇವರನ್ನು ಆರಾಧಿಸುವಂತೆ ಅದು ನಿನ್ನ ಆತ್ಮವನ್ನು ಎತ್ತುತ್ತದೆ. ಕೆಲವು ರೀತಿಯ ಸಂಗೀತ ನೀವು ಕೇವಲ ಸಂಗೀತಗಾರರನ್ನು ಮೆಚ್ಚುವಂತೆ ಮಾಡುತ್ತದೆ. ಸಭಾ-ಕೂಟದಲ್ಲಿ ಪ್ರವಾದನೆಯ ಆತ್ಮವನ್ನು ತರಿಸುವುದಾದರೆ ಮತ್ತು ದೇವರನ್ನು ಆರಾಧಿಸಲು ಜನರನ್ನು ಮುನ್ನಡೆಸುವುದಾದರೆ ನೀನೊಬ್ಬ ಅಭಿಷೇಕಿಸಲ್ಪಟ್ಟ ಸಂಗೀತಗಾರ.