ಗಲಾತ್ಯ 5:1ರಲ್ಲಿ ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿಸಲು ಬಂದನು ಎಂದು ಪೌಲನು ಹೇಳುತ್ತಾನೆ. ಆದ್ದರಿಂದ ನಮ್ಮನ್ನು ತಿರುಗಿ ಧರ್ಮಶಾಸ್ತ್ರದ(ಆಜ್ಞೆಗಳ/ನಿಯಮಗಳ) ದಾಸ್ಯತ್ವಕ್ಕೆ ಕೊಂಡೊಯ್ಯಲು ನಾವು ಅನುವು ಮಾಡಿಕೊಡಬಾರದು. ನಾವೆಂದಿಗೂ ಯಾವುದೇ ಪಂಗಡದ ಅಥವಾ ಸಭೆಯ ಸಂಪ್ರದಾಯಗಳ ಗುಲಾಮರಾಗಿರಬಾರದು. ಜೊತೆಗೆ, ನಮ್ಮ ಈ ಸ್ವತಂತ್ರವನ್ನು ಪಾಪ ಮಾಡುವುದಕ್ಕಾಗಿಯೂ ನಾವು ದುರುಪಯೋಗಪಡಿಸಿಕೊಳ್ಳಬಾರದು(ಗಲಾತ್ಯ5:13). ಅನೇಕ ಕ್ರೈಸ್ತರು ಕೃಪೆ ಮತ್ತು ಕ್ರಿಸ್ತನಲ್ಲಿರುವ ಸ್ವತಂತ್ರವನ್ನು ತಪ್ಪಾಗಿ ಅರ್ಥೈಸಿ (ತಿಳಿದುಕೊಂಡು) ಧರ್ಮಶಾಸ್ತ್ರಕ್ಕೆ ಅಧೀನರಾಗಿ ಬದುಕುವ ಜೀವಿತಕ್ಕಿಂತಲೂ ಕೆಳಮಟ್ಟದ (ಕೀಳಾದ) ಶರೀರಭಾವದ ಆಶೆಗಳಿಗೆ ದಾಸರಾಗಿ ಜೀವಿಸುತ್ತಾರೆ. ಧರ್ಮಶಾಸ್ತ್ರದ ಅಧೀನತೆಯಿಂದ ಬಿಡುಗಡೆ ಹೊಂದಬೇಕೆಂದರೆ ನಾವು ಪವಿತ್ರಾತ್ಮನಿಂದ ನಡೆಸಲ್ಪಡಬೇಕು. ಇಲ್ಲದಿದ್ದರೆ ಆಜ್ಞೆಗಳಿಂದ ಬದುಕುವ ಜೀವನ ಮಟ್ಟದಿಂದ ಕೆಳಗೆ ಕುಸಿದು ಪಾಪದ ಜೀವನ ನಡೆಸುತ್ತೇವೆ. ಆದರೆ ಪವಿತ್ರಾತ್ಮನಿಂದ ನಡೆಸಲ್ಪಡುವಾಗ ಶರೀರಭಾವದ ದುರಾಶೆಗಳಿಂದ ನಡೆಸುವ ಜೀವಿತಕ್ಕೆ ನಾವು ಇಳಿಯಲ್ಪಡುವುದಿಲ್ಲ. ಈ ಜೀವಿತ ಜೀವಿಸುವವರು ಮಾತ್ರ ಆಜ್ಞೆಗಳ ಅಧೀನತೆಯಿಂದ ಸ್ವತಂತ್ರರಾಗಿದ್ದಾರೆ (ಗಲಾತ್ಯ 5:16,18).
ಆದ್ದರಿಂದ ಒಬ್ಬ ವಿಶ್ವಾಸಿಯು ತನ್ನ ಜೀವಿತವನ್ನು 3 ಮಟ್ಟಗಳಲ್ಲಿ ಜೀವಿಸಬಹುದು.
ಜೀವಿತದ ಈ ಮೂರು ಮಟ್ಟಗಳನ್ನು, ಒಂದು ಕಟ್ಟಡದ ಮೂರು ಅಂತಸ್ತುಗಳ/ಮಹಡಿಗಳ ಹಾಗೆ ನೋಡಿರಿ. ಒಂದು ವೇಳೆ ಮೂರನೆಯ ಅಂತಸ್ತಿನಲ್ಲಿ(ಪವಿತ್ರಾತ್ಮನಿಂದ ನಡಿಸಲ್ಪಡುವದು) ನೀವು ವಾಸವಾಗಿರದೆ ಎರಡನೆಯ ಅಂತಸ್ತನ್ನೂ(ಶಾಸ್ತ್ರದ ಆಜ್ಞೆಗಳಿಂದ ನಡೆಸಲ್ಪಡುವದನ್ನು) ಕೆಡವಿದ್ದರೆ, ನೀವು ಮೊದಲನೆಯ ಅಂತಸ್ತಿಗೆ(ಶರೀರಭಾವಾಧೀನರಾಗಿ ನಡೆಸಲ್ಪಡುವದು) ಬಂದಿಳಿಯುತ್ತೀರಿ. ಯೇಸು ಆಜ್ಞೆಗಳನ್ನು ತೆಗೆದುಹಾಕಿದ್ದುದರಿಂದ ನಾನು ಆಜ್ಞೆಗಳ ಅನುಸಾರವಾಗಿ ಜೀವಿಸುವದಿಲ್ಲವೆಂದು ಹೇಳಿದರೆ ಪವಿತ್ರಾತ್ಮನಿಂದ ನಡೆಸಲ್ಪಡುವುದನ್ನು ನೀವು ಕಲಿಯಬೇಕು. ಇಲ್ಲದಿದ್ದರೆ ಶರೀರಭಾವದಿಂದ ನಡೆಸುವ ಜೀವಿತಕ್ಕೆ ನೀವು ಇಳಿಯಲ್ಪಡುತ್ತೀರಿ. ಇದು ಅನೇಕ ವಿಶ್ವಾಸಿಗಳ ಜೀವಿತದಲ್ಲಿ ಉಂಟಾಗಿದೆ. ಅವರು ಧರ್ಮಶಾಸ್ತ್ರದ ಆಜ್ಞೆಗಳಿಗೆ ಅಧೀನರಲ್ಲವೆಂದು ಗಲಾತ್ಯದ ಪತ್ರಿಕೆಯಿಂದ ಓದಿ ತಿಳಿದುಕೊಳ್ಳುತ್ತಾರೆ ಆದರೆ ವರು ಪವಿತ್ರಾತ್ಮನಿಂದ ನಡೆಸಲ್ಪಡುವವರಾಗುವದಿಲ್ಲ. ಇದರ ಪರಿಣಾಮ ಅವರು ಶರೀರಭಾವದಿಂದ ಬದುಕುವವರಾಗುತ್ತಾರೆ. ಆದ್ದರಿಂದ ಇವತ್ತಿನ ಕ್ರಿಸ್ತೀಯ ನಾಯಕರು ಆಗಿನ ಕಾಲದಲ್ಲಿ ಆಜ್ಞೆಗಳ ಅಧೀನತೆಯಲ್ಲಿದ್ದ ಜನರು ಜೀವಿಸಿದ ಜೀವಿತಕ್ಕಿಂತ ಕೆಳಮಟ್ಟದ ಕೆಲಸಗಳನ್ನು ಮಾಡುವವರಾಗಿದ್ದಾರೆ. ಅನೇಕ ಕ್ರಿಸ್ತ ವಿಶ್ವಾಸಿಗಳು ಆಜ್ಞೆಗಳ ಅಧೀನರಾಗಿರದೆ, ತಾವು ಕೃಪೆಯ ಅಧೀನರಾಗಿದ್ದೇವೆಂದು ಹೇಳುತ್ತಾಇದ್ದರೂ ತಮ್ಮ ಶರೀರಾಭಿಲಾಷೆಗಳಿಂದ ಜೀವಿಸುವದು ಹೇಗೆ? ಏಕೆಂದರೆ ಅವರು ಧರ್ಮಶಾಸ್ತ್ರದ ಆಜ್ಞೆಗಳನ್ನು ತಮ್ಮಿಂದ ಅಗಲಿಸಿದ್ದಾರೆ. ಗಲಾತ್ಯ 5:18ರಲ್ಲಿ ಹೇಳುವ ಪ್ರಕಾರ ಪವಿತ್ರಾತ್ಮನಿಂದ ನಡೆಸಲ್ಪಡುವದಾದರೇ ಮಾತ್ರ ಧರ್ಮಶಾಸ್ತ್ರದ ನೇಮನಿಷ್ಟೆಗಳಿಗೆ ಅಧೀನರಲ್ಲವೆಂಬುದಾಗಿ ಹೇಳಲಾಗುತ್ತದೆ.
ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ ಇರುವ ಸಂದೇಶವು ಧರ್ಮಶಾಸ್ತ್ರದ "ಆಜ್ಞೆಗಳನ್ನು ಎಸೆದುಬಿಡು" ಎಂದಲ್ಲ. ಆದರೆ, "ಪವಿತ್ರಾತ್ಮನಿಂದ ನೀವು ನಡಿಸಲ್ಪಡುವದಾದರೆ ನಿಮಗೆ ಆಜ್ಞೆಗಳ ಅವಶ್ಯಕತೆಯಿಲ್ಲ''. ಎಂಬುದಾಗಿದೆ. ಗಲಾತ್ಯ 5:19-21ರಲ್ಲಿ ಪವಿತ್ರಾತ್ಮನು ನಮಗೆ ಶರೀರಭಾವದ ಕರ್ಮಗಳ ಬಗ್ಗೆ ತಿಳಿಸುತ್ತಾನೆ. ಅವುಗಳಲ್ಲಿ ಜಾರತ್ವ, ಬಂಡುತನ, ನಾಚಿಕೆಗೇಡಿತನ, ವಿಗ್ರಹರಾಧನೆ(ಜನರನ್ನು ಮತ್ತು ಹಣವನ್ನು ಪೂಜಿಸುವದು), ಹಗೆತನ, ಜಗಳ, ಸಿಟ್ಟು, ವೈಮನಸ್ಸು ಇನ್ನೂ ಮುಂತಾದವುಗಳು. ಇವು ಕೇವಲ ಅನ್ಯಜನರಲ್ಲಿ ಮಾತ್ರ ಕಾಣಸಿಗುತ್ತದೆಂದು ಅಂದುಕೊಂಡಿದ್ದೀರಾ? ಇಲ್ಲ. ವಿಶ್ವಾಸಿಗಳೆಂದು ತಮ್ಮನ್ನು ಹೇಳಿಕೊಳ್ಳುವರು ಕೂಡ ಇಂಥವುಗಳಲ್ಲಿ ಭಾಗಿಯಾಗಿದ್ದಾರೆ. ಏಕೆಂದರೆ ಇಂಥವರು, ಪವಿತ್ರಾತ್ಮನಿಂದ ನಡೆಸಲ್ಪಡುವ ಜೀವಿತವನ್ನು ಪಡೆಯುವ ಮೊದಲೇ ಧರ್ಮಶಾಸ್ತ್ರದ ಆಜ್ಞೆಗಳಿಂದ ತಮ್ಮನ್ನ್ನು ಬೇರ್ಪಡಿಸಿಕೊಂಡವರಾಗಿದ್ದಾರೆ. ಇಂಥವರು ಪರಲೋಕ ರಾಜ್ಯಕ್ಕೆ ಬಾಧ್ಯಸ್ತರಲ್ಲ (ಗಲಾತ್ಯ 5:21). ಇದರ ವಿರುದ್ಧವಾಗಿ ಪವಿತ್ರಾತ್ಮನಿಂದ ನಡಿಸಲ್ಪಡುವದರಿಂದ ಆತ್ಮನ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ಧೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಇಂಥವುಗಳು ಪ್ರಕಟವಾಗುತ್ತವೆ (ಗಲಾತ್ಯ 5:22,23). ಹಾಗಿದ್ದಲ್ಲಿ ಪವಿತ್ರಾತ್ಮನಿಂದ ಬದುಕುವದಾದರೆ ಆತನಿಂದ ನಡೆಸ್ಪಡುವವರಾಗೋಣ.