ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ನಾನು ಒಬ್ಬ ಯೌವನಸ್ತನ ಬಗ್ಗೆ ಓದುವಾಗ, ಆತನು ಕ್ರಿಸ್ತ ವಿಶ್ವಾಸಿಯಾಗಿ ಬದಲಾವಣೆ ಹೊಂದಿದ್ದ; ಆದರೆ ಇನ್ನೂ ಕರ್ತನಿಗೆ ತನ್ನ ಸಂಪೂರ್ಣ ಹೃದಯ ಕೊಟ್ಟಿರಲಿಲ್ಲ. ಒಂದು ದಿನ ಆತನು, ತಾನು ಸತ್ತು ಪರಲೋಕಕ್ಕೆ ಹೋಗುವ ಕನಸು ಕಂಡನು. ಅಲ್ಲಿ ಆತನ ಜೀವನ ಚರಿತ್ರೆ(ಪುಸ್ತಕ)ಯ ಮೇಲೆ "ಕ್ಷಮಾಪಣೆ" (ಕ್ಷಮೆ) ಎಂಬುದಾಗಿ ಬರೆದಿತ್ತು. ಆತನು ತನ್ನ ಕ್ಷಮೆಯನ್ನು ನೋಡಿ ತುಂಬಾ ಆನಂದಪಟ್ಟನು; ಆದರೆ ಕೆಲವು ಬೇರೆ ವಿಶ್ವಾಸಿಗಳನ್ನು ನೋಡಿದಾಗ ಅವರ ಮೇಲೆಯಿರುವ ಮಹಿಮೆಯ ತೇಜಸ್ಸು(ಹೊಳಪು) ತುಂಬಾ ವಿಶೇಷವಾಗಿತ್ತು. ಅವರು ಯಾರಾಗಿದ್ದರೆಂದರೆ, ಭೂಮಿಯ ಮೇಲೆ ಕ್ರಿಸ್ತನಿಗಾಗಿ ಬಲಿಯಾದವರು (ರಕ್ತಸಾಕ್ಷಿಗಳಾದವರು). ಇವರು ದೇವರು ಮತ್ತು ಆತನ ಸಭೆಗೆ ತಮ್ಮಲ್ಲಿರುವದೆಲ್ಲಾ ಕೊಟ್ಟಿರುವವರಾಗಿದ್ದರು. ಹಣ, ಸ್ಥಾನ, ಮಾನ ಮತ್ತು ಜಗತ್ತು, ಬೆಲೆಕಟ್ಟುವಂಥದ್ದೆಲ್ಲವನ್ನು ತ್ಯಾಗ ಮಾಡಿರುವವರಾಗಿದ್ದರು.

ಇವನು ಅವರ ಆ ಹೊಳಪನ್ನು ನೋಡಿ ತನ್ನ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಪಟ್ಟನು. ಆಗ ಯೇಸು ಅವನ ಕನಸಿನಲ್ಲಿ ಬಂದು ಅವನಿಗೆ- “ನೀನು ಇವರಿಗಿಂತ ಕಡಿಮೆಯಾಗಿ ಕಾಣಲು ಕಾರಣವೇನೆಂದರೆ- ನೀನು ಭೂಮಿಯಲ್ಲಿ ಇರುವಾಗ ಕೇವಲ ನಿನಗೋಸ್ಕರ ನಿನ್ನ ಸ್ವಾರ್ಥಕ್ಕೋಸ್ಕರ ಬದುಕಿದಿ; ಆದರೆ ಇವರು ತಮ್ಮ ಸ್ವಾರ್ಥಕ್ಕೋಸ್ಕರ ಬದುಕಲಿಲ್ಲ” ಎಂದನು. ಇದನ್ನು ಕೇಳಿ ಅವನಿಗೆ, ತನ್ನ ಸಂಪೂರ್ಣ ನಿತ್ಯಜೀವಿತವನ್ನು, ಕೇವಲ ತನ್ನ ಸ್ವಾರ್ಥಕ್ಕಾಗಿ ಬದುಕಿರುವ ನೆನಪುಗಳೊಂದಿಗೆ ಕಳೆಯಬೇಕೆಂದು ತಿಳಿದು ತುಂಬಾ ದುಃಖವಾಗಿ ಮನಸ್ಸಿನಲ್ಲಿ ನೊಂದುಕೊಂಡು ಕರ್ತನಲ್ಲಿ ಇನ್ನೊಂದು ಅವಕಾಶಕ್ಕೋಸ್ಕರ ಬೇಡುತ್ತಾನೆ. ಆದರೆ ಕರ್ತನು - ಸತ್ತ ಮೇಲೆ ಮನುಷ್ಯನಿಗೆ ಎರಡನೇ ಅವಕಾಶವಿಲ್ಲವೆಂದು ಹೇಳುತ್ತಾನೆ. ಇದಾದ ಮೇಲೆ ಅವನು ತಕ್ಷಣವೇ ಕನಸ್ಸಿನಿಂದ ಎಚ್ಚರಗೊಳ್ಳುತ್ತಾನೆ, ಇದು ಕೇವಲ ಕನಸ್ಸು ಮತ್ತು ತಾನು ಜೀವಂತನಾಗಿರುವದನ್ನುಕಂಡು ತುಂಬಾ ಸಂತೋಷ ಪಡುತ್ತಾನೆ. ತನ್ನ ಮನಸ್ಸಿನಲ್ಲಿ ಇನ್ನು ಮೇಲೆ ಬದುಕಿದರೆ ಸಂಪೂರ್ಣವಾಗಿ ಕರ್ತನಿಗಾಗಿ ಎಂದು ನಿರ್ಧಾರ ಮಾಡಿಕೊಳ್ಳುತ್ತಾನೆ ಮತ್ತು ಮುಂದೆ ದೇವರ ಒಬ್ಬ ದೊಡ್ಡ ಸೇವಕನಾಗುತ್ತಾನೆ.

ಅನೇಕ ವರುಷಗಳಿಂದ ಸಭೆಯಿಂದ ನಿಮಗೆ ಸಿಕ್ಕಿರುವ ಆತ್ಮೀಕವಾದ ಆಹಾರಕ್ಕೆ ಬೆಲೆಕೊಟ್ಟಿರುವದಾದರೆ, ನಿಜವಾಗಿಯೂ ನೀವು ಸಭೆಯನ್ನು ಹೆಚ್ಚಾಗಿ ಮೆಚ್ಚುತ್ತೀರಿ. ನಿಮ್ಮನ್ನು ಒಂದು ಹೊತ್ತಿನ ಊಟಕ್ಕೆ ಕರೆದಿರುವವರ ಬಗ್ಗೆ ನೀವು ಎಷ್ಟು ಉಪಕಾರ ತಿಳಿಸುತ್ತೀರಿ? ಹಾಗಿದ್ದಾಗ ವರುಷದಿಂದ ವರುಷಕ್ಕೆ ನಿಮಗೆ ಆತ್ಮೀಕ ಆಹಾರ ಕೊಟ್ಟಿರುವ ಸಭೆಯ ಬಗ್ಗೆ ನೀವು ಎಷ್ಟು ಉಪಕಾರ ಹೊಂದಿರಬೇಕು?!

ಈ ವಿಷಯವನ್ನು ನಾವು ಇನ್ನೊಂದು ರೀತಿಯಲ್ಲಿ ತಿಳುಕೊಳ್ಳೋಣ. ಒಂದು ವೇಳೆ ಒಬ್ಬರು ನಿಮ್ಮ ಮಕ್ಕಳನ್ನು ಅಪಾಯವಾಗದಂತೆ ನೋಡಿಕೊಳ್ಳುತ್ತಾರೆ; ಕಾಳಜಿ ಮಾಡುತ್ತಾರೆ; ಕಾಯಿಲೆಯಲ್ಲಿರುವಾಗ ಆರೈಕೆಮಾಡುತ್ತಾರೆ; ಮನಸ್ಸು ನೊಂದಿರುವಾಗ ಪ್ರೋತ್ಸಾಹಿಸುತ್ತಾರೆ; ಮತ್ತು ಅವರ ವಿದ್ಯಾಭ್ಯಾಸದಲ್ಲಿ ಸಹಾಯಮಾಡಿ ಅವರ ಶಾಲೆಯಲ್ಲಿ ಒಳ್ಳೆಯ ಅಂಕಗಳನ್ನು(ಮಾರ್ಕ್ಸ) ಹೊಂದುವಂತೆ ಮಾಡುತ್ತಾರೆ. ಹೀಗೆ ಆ ಮನುಷ್ಯನು ಒಂದೆರಡು ದಿವಸಕ್ಕೆ ಮಾತ್ರ ಮಾಡದೇ ಅನೇಕ ವರುಷದಿಂದ ಮಾಡುತ್ತಿದ್ದರೆ, ಅಂಥವನಿಗೆ ನೀವು ಉಪಕಾರಿಯಾಗಿ(ಕೃತಜ್ಞತೆಯುಳ್ಳವರಾಗಿ) ಇರುತ್ತಿರಲಿಲ್ಲವೇ? ಹಾಗಿದ್ದರೆ ನಿಮ್ಮ ಮಕ್ಕಳನ್ನು ಕಾಪಾಡಿರುವ ಈ ಸಭೆಯ ಬಗ್ಗೆ ನೀವು ಇಷ್ಟಾದರೂ ಕೃತಜ್ಞರಾಗಿದ್ದೀರಾ? ಅನೇಕ ವಿಶ್ವಾಸಿಗಳು ಆತ್ಮೀಕತೆಯಲ್ಲಿ ಬೆಳೆಯದೇಯಿರಲು ಒಂದು ಕಾರಣವೇನೆಂದರೆ, ಸಭೆಯಲ್ಲಿ ಪಡೆದುಕೊಂಡಿರುವಂಥವುಗಳಿಗೆ ಅವರು ಕೃತಜ್ಞರಾಗಿಲ್ಲ. ಸಭೆಯಿಂದ ಪೂರ್ತಿಯಾಗಿ ಬಿದ್ದುಹೋದ ಜನರನ್ನು ನೋಡುವಾಗ, ಇವರು ಸಭೆಯಿಂದ ಎಲ್ಲವನ್ನೂ ಹಣವಿಲ್ಲದೆ ಅನೇಕ ವರುಷಗಳಿಂದ ಪುಕ್ಕಟೆಯಾಗಿ ಹೊಂದಿದ್ದರೂ ಕೃತಜ್ಞಹೀನರಾಗಿದ್ದರು.(ಉಪಕಾರ ನೆನಸದವರಾಗಿದ್ದರು).

ಲೂಕ 17:15 ರಲ್ಲಿ ಗುಣವಾದ ಹತ್ತು ಮಂದಿ ಕುಷ್ಠರೋಗಿಗಳನ್ನು ನೋಡುತ್ತೇವೆ. ಆದರೆ ಅದರಲ್ಲಿ ಒಬ್ಬನು ಮಾತ್ರ ಹಿಂದಿರುಗಿ ಹೋಗಿ ಕರ್ತನಾದ ಯೇಸುವನ್ನು ಸ್ತುತಿಸಿದನು. ಆ ಹತ್ತು ರೋಗಿಗಳು ಅಗತ್ಯತೆಯಿದ್ದಾಗ ಧ್ವನಿಯೆತ್ತಿ ಕರುಣೆ ಹೊಂದಲಿಕ್ಕೆ ಕೂಗಿದರು. ಗುಣವಾದ ನಂತರ ಒಂಬತ್ತು ಜನ ಸಂಪೂರ್ಣವಾಗಿ ಉಪಕಾರಸ್ತುತಿ ಮಾಡಲು ವಿಫಲರಾದರು, ಅದರಲ್ಲಿ ಒಬ್ಬ ಮಾತ್ರ ದೇವರಿಗೆ ಸ್ತುತಿಸಲಿಕ್ಕೆ, ಉಪಕಾರ(ಕೃತಜ್ಞತೆ) ಹೇಳಲಿಕ್ಕೆ ಧ್ವನಿ ಎತ್ತಿದನು. ಆ ಸಮಯದಲ್ಲಿ ಇನ್ನೂ ಅನೇಕ ಜನರು ಯೇಸುವಿನಿಂದ ಗುಣ ಹೊಂದಿದ್ದರೂ ಆತನಿಗೆ ಉಪಕಾರ(ಕೃತಜ್ಞತೆ) ಸಲ್ಲಿಸಲಿಕ್ಕೆ ಬರಲಿಲ್ಲ. ಆದರೆ ಈ ಸಮಾರ್ಯದವನು ಹಿಂತಿರುಗಿ ಬಂದು ಕರ್ತನಿಗೆ ಕೃತ್ಯಜ್ಞತೆಯನ್ನು ಸಲ್ಲಿಸಿದನು. ಈ ಮನುಷ್ಯನು ಕರ್ತನಿಗೆ ಹೀಗೆ ಹೇಳಿರಬಹುದು, "ಕರ್ತನೇ, ನೀನು ಮುಟ್ಟಿದ್ದರಿಂದ ನನ್ನ ಜೀವನದಲ್ಲಿ ಇಂದು ಎಂಥಾ ಬದಲಾವಣೆಯಾಗಿದೆ; ನಾನು ಯೆರುಸಲೇಮ್ ಪಟ್ಟಣದೊಳಗೆ ಮತ್ತು ನನ್ನ ಕುಟುಂಬ ಹತ್ತಿರ ಈಗ ಹೋಗ ಬಲ್ಲೆ. ನನ್ನ ಜೀವನದಲ್ಲಿ ಆನಂದವನ್ನು ನೀನು ತಂದಿರುವೆ. ನೀನು ಕೊಟ್ಟಿರುವ ಈ ಆಶೀರ್ವಾದವನ್ನು ನಾನೆಂದೂ ಹಗುರವಾಗಿ(ಕಡಿಮೆಯಾಗಿ) ತಿಳಿದುಕೊಳ್ಳುವದಿಲ್ಲ. ನಾನು ನಿನ್ನ ಋಣ(ಹಂಗಿನಲ್ಲಿ)ದಲ್ಲಿದ್ದೇನೆ; ಮತ್ತು ನನ್ನ ಮನಸ್ಸಿನಾಳದಿಂದ ನೀನು ಮಾಡಿದ ಎಲ್ಲಾ ಆಶೀರ್ವಾದಗಳಿಗೆ ಕೃತಜ್ಞತೆಯುಳ್ಳವನಾಗಿದ್ದೇನೆ"! ಯೇಸು ಇವನ ಕೃತಜ್ಞತೆಯ ಮನಸ್ಸು ನೋಡಿ ಮೆಚ್ಚಿದನು.

ಇದಾದ ಮೇಲೆ ಯೇಸು ಅವನಿಗೆ ಇನ್ನೂ ಹೆಚ್ಚಿನ ಆಶೀರ್ವಾದವನ್ನು ಅನುಗ್ರಹಿಸಿದನು. ಅದೇನೆಂದರೆ ‘ನಿನ್ನ ಈ ನಂಬಿಕೆಯಿಂದ ನಿನಗೆ ರಕ್ಷಣೆಯಾಯಿತು’ ಎಂದು ಹೇಳಿದನು. ಈ ಗುಣವಾದ ಕುಷ್ಠರೋಗಿಯು ಕೇವಲ ರೋಗವಾಸಿ ಹೊಂದದೇ ಇನ್ನೂ ಹೆಚ್ಚಾದದ್ದನ್ನು ಹೊಂದಿದನು. ಅವನಿಗೆ ಈಗಾಗಲೇ ರೋಗದಿಂದ ವಾಸಿಯಾಗಿತ್ತು. ಆದರೆ ಆತನಿಗಿದ್ದ ಆ ಕೃತಜ್ಞತೆಯ ಭಾವನೆಯಿಂದ ಅವನಿಗೆ ರಕ್ಷಣೆ ಕೂಡ ದೊರಕಿತು. ನನಗೆ ಸಂಪೂರ್ಣ ನಂಬಿಕೆಯಿದೆ, ಈ ಸಮಾರ್ಯದವನನ್ನು ನಾನು ಪರಲೋಕದಲ್ಲಿ ಭೇಟಿಯಾಗುತ್ತೇನೆಂದು. ಆದರೆ ಆ ಒಂಬತ್ತು ಜನರಲ್ಲಿ ಒಬ್ಬರನ್ನಾದರೂ ನಾನು ಭೇಟಿಯಾಗುವೆನೆಂಬ ಭರವಸೆ ನನಗಿಲ್ಲ. ನೀವು ದೇವರ ಬಳಿಗೆ ತಿರುಗಿ ಬಂದು ಕೃತಜ್ಞತೆ ಹೇಳುವಾಗ ಇನ್ನುಳಿದವರಿಗಿಂತ ಹೆಚ್ಚಿನದಾದದ್ದನ್ನು ಪಡೆದುಕೊಳ್ಳುತ್ತೀರಾ.

ಕರ್ತನು ಸಭೆಯ ಮಧ್ಯದಲ್ಲಿ ಇದ್ದಾನೆ ಮತ್ತು ಈ ಭೂಮಿ ಮೇಲಿರುವ ಸಭೆಯೇ ಆತನ ದೇಹವಾಗಿದೆ. ನಾವು ಈಗ ಕರ್ತನಿಗೆ ಯಾವ ರೀತಿಯಲ್ಲಿ ಕೃತಜ್ಞತೆ ತೋರಿಸಬಹುದೆಂದರೆ- ಆತನ ದೇಹವಾದ ಸಭೆಗೆ ಕೃತಜ್ಞತೆ ತೋರಿಸುವದರಿಂದಲೇ.

ಕರ್ತನ ಸಭೆಗೆ ಬೆಲೆ ಅಥವಾ ಕೃತಜ್ಞತೆ ತೋರಿಸದಿದ್ದರೆ, ಇದು ಸಭೆಗೆ ಅಲ್ಲ ನಿಮಗೇ ನಷ್ಟ ಉಂಟಾಗುತ್ತದೆ. ದೇವರು, ಸಭೆಗೆ ಬೆಲೆ ಕೊಟ್ಟಿರುವ ಮತ್ತು ಸಭೆಯಿಂದ ಪಡೆದಿರುವುದೆಲ್ಲದಕ್ಕೂ ಕೃತಜ್ಞತೆ ಸಲ್ಲಿಸಿರುವ ಪ್ರತಿಯೊಬ್ಬರನ್ನು ಹೇರಳವಾಗಿ(ಹೆಚ್ಚಾಗಿ) ಆಶೀರ್ವದಿಸಿದ್ದಾನೆ.