ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ನೀನು ಕಾಲಿಡುವ ಸ್ಥಳವನ್ನೆಲ್ಲಾ ನಿನಗೆ ಕೊಟ್ಟಿದ್ದೇನೆ (ಯೆಹೋಶುವನು 1:3) ಮತ್ತು ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು ಎಂದು ದೇವರು ಯೆಹೋಶುವನಿಗೆ ಹೇಳಿದರು(ಯೆಹೋಶುವನು 1:5). ಇದು ರೋಮಪುರದವರಿಗೆ 6:14 ರಲ್ಲಿ ನಮಗೆ ಕೊಡಲ್ಪಟ್ಟಿರುವ ಹೊಸ ಒಡಂಬಡಿಕೆಯ ವಾಗ್ದಾನವಾದ “ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು, ಏಕೆಂದರೆ ನೀವು ಕೃಪೆಗೆ ಅಧೀನರಾಗಿದ್ದೀರಿ” ಎಂಬುದರ ಸಂಕೇತವಾಗಿದೆ. ಕಾನಾನ್ ದೇಶವು ಹಿಂದಿನ ಕಾಲದಲ್ಲಿ ಹಲವು ರಾಕ್ಷಸರುಗಳಿಂದ ಆಳಲ್ಪಟ್ಟಿತು. ಆದರೆ ಅವರೆಲ್ಲರೂ ಸೋತು ಹೋದರು. ಒಂದೇ ಒಂದು ಪಾಪವು (ಎಷ್ಟೇ ಶಕ್ತಿಯುಳ್ಳದ್ದಾಗಿದ್ದರೂ) ನಮ್ಮ ಮೇಲೆ ಜಯಗಳಿಸಲು ಸಾಧ್ಯವಿಲ್ಲ. ಅದು ನಮಗೆ ದೇವರ ಚಿತ್ತವಾಗಿದೆ. ಆದರೆ ಯೆಹೋಶುವನು ನಿಜವಾಗಿಯೂ ವಿಶಾಲವಾದ ಭೂ ಪ್ರದೇಶದಲ್ಲಿ ತನ್ನ ಕಾಲಿಟ್ಟನು ಮತ್ತು ಆ ಪ್ರದೇಶವನ್ನು ದೇವರ ಹೆಸರಿನಲ್ಲಿ ಪಡೆದುಕೊಂಡನು. ಆನಂತರವೇ ಅದು ಆತನದಾಗಿತ್ತು. ಅದೇ ರೀತಿ ನಮ್ಮೊಂದಿಗೂ ಸಹ. ನಾವು ನಂಬಿಕೆಯಿಂದ ನಮ್ಮ ಜನ್ಮಸಿದ್ದ ಹಕ್ಕನ್ನು ಪಡೆದುಕೊಳ್ಳಬೇಕು. ಒಂದು ವೇಳೆ ನಾವು ದೇವರ ವಾಗ್ದಾನಗಳನ್ನು ನಮ್ಮದಾಗಿ ಹಿಡಿದಿಟ್ಟುಕೊಳ್ಳದಿದ್ದರೆ, ಅವುಗಳು ನಮ್ಮ ಜೀವಿತದಲ್ಲಿ ಎಂದಿಗೂ ನೆರವೇರುವುದಿಲ್ಲ.

ದೇವರು ಯೆಹೋಶುವನಿಗೆ: “ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವುದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ” ಎಂಬುದಾಗಿ ಹೇಳಿದರು (ಯೆಹೋಶುವನು 1:7). “ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು” (ರೋಮಪುರದವರಿಗೆ 6:14) ಎಂಬುದಾಗಿ ದೇವರ ವಾಕ್ಯ ಹೇಳುವುದಾದರೆ, ಇದನ್ನು ನಂಬಿ ಮತ್ತು ಇದನ್ನು ಅರಿಕೆ ಮಾಡಿ. ಬಲಕ್ಕಾಗಲಿ ಅಥವಾ ಎಡಕ್ಕಾಗಲಿ ತಿರುಗಬೇಡಿ. ಇದರ ಅರ್ಥವೇನೆಂದರೆ: ಆ ವಾಗ್ದಾನದ ಅಗಲವನ್ನು ಕಡಿಮೆ ಮಾಡಬೇಡಿ. ಕೆಲವು ಪಾಪಗಳನ್ನು ಮಾತ್ರ ಸೇರಿಸಿಕೊಂಡು ಇದನ್ನು ಕಡಿಮೆ ಮಾಡಬೇಡಿ. ಅದೇ ಸಮಯದಲ್ಲಿ ಆ ವಾಕ್ಯವು ಏನು ಹೇಳಿದಿಯೋ ಅದಕ್ಕಿಂತ ಹೆಚ್ಚಾಗಿ ಅರ್ಥೈಸುವುದನ್ನು ಮಾಡಬೇಡಿ. ಈ ಲೋಕದಲ್ಲಿ ಕ್ರಿಸ್ತನು ಹೇಗೆ ಪರಿಪೂರ್ಣನಾಗಿದ್ದಾನೋ, ಅದೇ ರೀತಿ ನಾವು ಪರಿಪೂರ್ಣರು ಎಂದು ಹೇಳಬೇಡಿ. ನಾವು ಈ ಲೋಕದಲ್ಲಿ ಪಾಪವಿಲ್ಲದ ಪರಿಪೂರ್ಣತೆಯಿಂದಿರಲು ಆಗುವುದಿಲ್ಲ. ಆ ವಾಗ್ದಾನವು ಹೇಳುವಂತದ್ದು ಇದಲ್ಲ. ನಮಗೆ ಗೊತ್ತಿರುವಂತ ಪಾಪಗಳ ಮೇಲೆ ಜಯಿಸುವುದನ್ನು ಮಾತ್ರ (ಮನಸ್ಸಾಕ್ಷಿಗೆ ಗೊತ್ತಿರುವಂತ ಪಾಪ) ಇಲ್ಲಿ ಉಲ್ಲೇಖಿಸಲಾಗಿದೆ. ನಾವು ಪೂರ್ಣವಾಗಿ ಕ್ರಿಸ್ತನ ರೀತಿಯಾಗುವುದು, ಆತನು ಹಿಂತಿರುಗಿ ಬರುವಾಗ ಮಾತ್ರ. 1 ಯೋಹಾನ 3:2 ಅದನ್ನು ತಂಬಾ ಸ್ಪಷ್ಟಪಡಿಸುತ್ತದೆ. ಹಾಗಾಗಿ ಉಪದೇಶದ ಹಿಂದೆ ಹೋಗಬೇಡಿ ಮತ್ತು ಉಪದೇಶದ ವಾಗ್ದಾನಗಳು ಏನು ಹೇಳುತ್ತವೆಯೋ ಅದಕ್ಕಿಂತ ಕಡಿಮೆ ನಂಬಬೇಡಿ.

ಕ್ರಿಸ್ತನ ಹಾಗೇ ಆಗುವುದನ್ನು ಕಾನಾನ್ ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಕ್ಕೆ ಹೋಲಿಸಲಾಗಿದೆ ಅಥವಾ ತುಂಬಾ ಎತ್ತರದ ಪರ್ವತವನ್ನು ಏರುವುದಕ್ಕೆ ಹೋಲಿಸಲಾಗಿದೆ. ನಾವು ಪರಿವರ್ತನೆಗೊಂಡಾಗ, ನಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ನಮ್ಮ ಹಿಂದಿನವುಗಳು ಅಳಿಸಿ ಹೋಗುತ್ತವೆ. ಆದರೆ ನಾವು ಈಗಲೂ ಹಲವು ಪಾಪಗಳಿಗೆ ಗುಲಾಮರಾಗಿದ್ದೇವೆ. ಇದನ್ನು ನಾವು ಪರ್ವತಕ್ಕೆ ಕಾಲಿಡಲು ಬರುತ್ತಿರುವುದಕ್ಕೆ ಹೋಲಿಸಬಹುದು. ನಂತರ ನಾವು ಪರ್ವತವನ್ನು ಏರಲು ಪ್ರಾರಂಭಿಸುತ್ತೇವೆ. ಆ ಪರ್ವತದ ತುದಿಯು ಕ್ರಿಸ್ತನ ಹಾಗೇ ಪರಿಪೂರ್ಣತೆಯುಳ್ಳದ್ದಾಗಿದೆ. ನಾವು ಅಲ್ಲಿಗೆ ತಲುಪುವುದು ಕ್ರಿಸ್ತನು ಹಿಂತಿರುಗಿ ಬರುವಾಗ ಮಾತ್ರ. ಆದರೆ ನಾವು ಸತತವಾಗಿ ಪಾಪದಿಂದ ಸೋಲಲ್ಪಟ್ಟು, ಪರ್ವತಕ್ಕೆ ಕಾಲಿಟ್ಟಲ್ಲಿಯೇ ಜೀವಿಸಬಾರದು. ಇಲ್ಲ. ಸತ್ಯವೇದವು ಹೇಳುತ್ತದೆ. “ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ” (ಇಬ್ರಿಯ 6:1). “ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ದಿಗೆ ತರುವುದಕ್ಕೆ ಪ್ರಯತ್ನಿಸೋಣ” ಎಂಬುದಾಗಿ 2 ಕೊರಿಂಥದವರಿಗೆ 7:1ರಲ್ಲಿ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ.

“ಪರಿಪೂರ್ಣತೆ” ಎಂಬ ಪದಕ್ಕೆ ನಾವು ಭಯಪಡಬೇಕಾಗಿಲ್ಲ. ನಾವು ಇದರ ಹತ್ತಿರ ಓಡಬೇಕು. ಪೌಲನು ತನ್ನ ಜೀವಿತದ ಕೊನೆ ಅವಧಿಯಲ್ಲಿ ಹೀಗೆ ಹೇಳಿದನು - “ಇಷ್ಟರೊಳಗೆ ನಾನು ಬಿರುದನ್ನು ಪಡೆದುಕೊಂಡು ಸಿದ್ದಿಗೆ ಬಂದೆನೆಂದು ಹೇಳುವುದಿಲ್ಲ, ಅದನ್ನು ಹಿಡಿದುಕೊಳ್ಳುವುದಕ್ಕೋಸ್ಕರ ಓಡುತ್ತಾ ಇದ್ದೇನೆ” (ಫಿಲಿಪ್ಪಿಯವರಿಗೆ 3:12-14). ನಮ್ಮಲಿನ ಹಲವರಿಗೆ ಈಗ ದೇವರು ಹೇಳುವುದೇನೆಂದರೆ, “ತುಂಬಾ ದೂರದಲ್ಲಿರುವಂತ ಈ ಪರ್ವತದ ಕಡೆಗೆ ನಿಮ್ಮ ಕಾಲನ್ನಿಟ್ಟಿದ್ದೀರಿ ಮತ್ತು ಇದನ್ನು ಏರಿ. ಮೇಲೆ ಓಡುತ್ತಾ ಇರಿ”. ಆದ್ದರಿಂದ ಎಡಕ್ಕಾಗಿ ಅಥವಾ ಬಲಕ್ಕಾಗಲಿ ತಿರುಗಬೇಡಿ.

“ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ” (ಯೆಹೋಶುವನು 1:8). ನಮ್ಮ ಹೃದಯದಲ್ಲಿ ನಾವು ದೇವರ ವಾಕ್ಯವನ್ನು ಹೊಂದಿರಬೇಕು ಮತ್ತು ಇದನ್ನು ನಮ್ಮ ಬಾಯಲ್ಲಿಯೂ ಸಹ ಹೊಂದಿರಬೇಕಾದ ಅಗತ್ಯತೆ ಇದೆ. ನಮ್ಮ ಬಾಯಿಂದ ದೇವರ ವಾಕ್ಯದ ವಾಗ್ದಾನವನ್ನು ಅರಿಕೆ ಮಾಡಬೇಕು. ಇಂದು ಹಲವು ವಿಶ್ವಾಸಿಗಳಲ್ಲಿ ಸಮಸ್ಯೆ ಏನೆಂದರೆ, ಅವರು ಮೋಹಿಸಿದಂಥ ಸಂಗತಿಗಳನ್ನು ಅರಿಕೆ ಮಾಡುತ್ತಾರೆ. ಅವರು- “ನಾನು ದೊಡ್ಡ ಮನೆಯನ್ನು ಪಡೆಯುತ್ತೇನೆ ಎಂದು ಅರಿಕೆ ಮಾಡುತ್ತಾರೆ, ನಾನು ಒಳ್ಳೆ ಕೆಲಸವನ್ನು ಪಡೆಯುತ್ತೇನೆ ಎಂದು ಅರಿಕೆ ಮಾಡುತ್ತಾರೆ. ನಾನು ಒಳ್ಳೆ ವಾಹನವನ್ನು ಪಡೆಯುತ್ತೇನೆ”!! ಎಂಬುದಾಗಿ ಅರಿಕೆ ಮಾಡುತ್ತಾರೆ. ಇದೆಲ್ಲವನ್ನು ಅರಿಕೆ ಮಾಡುವುದರ ಹೊರತಾಗಿ, “ದೇವರೆ, ನಾನು ಕೋಪದ ಮೇಲೆ ಜಯ ಸಾಧಿಸುತ್ತೇನೆ, ನಾನು ಸಂಪೂರ್ಣವಾಗಿ ನನ್ನ ಕಣ್ಣಿನಿಂದ ಮೋಹಿಸುವುದರ ಮೇಲೆ ಸಂಪೂರ್ಣವಾಗಿ ಜಯ ಸಾಧಿಸುತ್ತೇನೆ. ಹಣವನ್ನು ಪ್ರೀತಿಸುವುದರ ಮೇಲೆ ಜಯ ಸಾಧಿಸುತ್ತೇನೆ” ಎಂಬುದಾಗಿ ದೇವರ ವಾಕ್ಯವನ್ನು ಅರಿಕೆ ಮಾಡಿಕೊಳ್ಳೋಣ. ಈ ಎಲ್ಲಾ ಸಂಗತಿಗಳನ್ನು ನಾವು ನಮ್ಮ ಬಾಯಿಂದ ಅರಿಕೆ ಮಾಡಬೇಕು. ಆದರೆ ದೆವ್ವವು ಇದನ್ನು ನಾವು ಅರಿಕೆ ಮಾಡಬಾರದು ಎಂದು ಬಯಸುತ್ತದೆ. ನಾವು ನಮ್ಮ ಭೌತಿಕ ಸಂಗತಿಗಳನ್ನು ಅರಿಕೆ ಮಾಡುವಂತೆ ಅದು ನಮ್ಮನ್ನು ಮಾಡುತ್ತದೆ.

ಭೌತಿಕ ಸಂಗತಿಗಳಲ್ಲಿ ಆಸಕ್ತಿ ಇರುವಂತ ಜನರೊಟ್ಟಿಗೆ ಸೇರಿ ನೀವು ಸಭೆಯನ್ನು ಕಟ್ಟಲಾಗುವುದಿಲ್ಲ. ದೈವಿಕ ಜೀವಿತದಲ್ಲಿ ಮತ್ತು ಪರಲೋಕದ ಸಂಗತಿಗಳಲ್ಲಿ ಆಸಕ್ತಿ ಇರುವಂತ ಜನರೊಟ್ಟಿಗೆ ಮಾತ್ರ ಸೇರಿ ನೀವು ಸಭೆಯನ್ನು ಕಟ್ಟಬಹುದು. ಇಹಲೋಕದ ಅಭಿವೃದ್ಧಿಯನ್ನು ಪ್ರಸ್ತಾಪಿಸುವುದರಿಂದ, ತಪ್ಪಾದ ಗ್ರಹಿಕೆಯಲ್ಲಿರುವಂತ (ಸರಿ ಇಲ್ಲದಿರುವಂತಹ) ಜನರನ್ನು ನಿಮ್ಮ ಸಭೆಗೆ ಆಕರ್ಷಿಸಬೇಡಿ. ದೇವರ ವಾಕ್ಯವು ನಿಮಗೆ ಮನೆ ಅಥವಾ ವಾಹನವನ್ನು ಆತನು ಕೊಡುತ್ತಾನೆ ಎಂದು ವಾಗ್ದಾನ ಮಾಡಿದೆಯಾ? ಇಲ್ಲ. ನೀವು ಪಾಪವನ್ನು ಜಯಿಸಬೇಕೆಂದು ದೇವರ ವಾಕ್ಯವು ವಾಗ್ದಾನ ಮಾಡುತ್ತದೆ. ಅದು ಖಿನ್ನತೆಗೊಳಗಾದಂತೆ, ನಿರುತ್ಸಾಯಿಗಳಾಗದಂತೆ ಅಥವಾ ಸೋಲದಂತೆ ದಿನದ ೨೪ ಗಂಟೆಯು ಕರ್ತನಲ್ಲಿ ಸಂತೋಷವಾಗಿರುವಂತ - ಯಾವಾಗಲೂ ವಿಜಯಿಯಾಗಿರಲು, ಯಾವಾಗಲೂ ಸಂತೋಷಿಸಲು ಮತ್ತು ಎಲ್ಲಾದರಲ್ಲಿಯೂ ಮತ್ತು ಎಲ್ಲಾ ಜನರಿಗೋಸ್ಕರ ಕೃತಜ್ಞತೆಯುಳ್ಳವರಾಗಿರುವಂತ ಜೀವಿತದಲ್ಲಿ ನಿಮ್ಮನ್ನು ನಡೆಸುತ್ತದೆ. ಸತ್ಯವೇದದ ವಾಗ್ದಾನಗಳಾದ ಇವುಗಳೇ ಹೊಸ ಒಡಂಬಡಿಕೆಯ ಜೀವಿತ (ಜೇನು ಮತ್ತು ಹಾಲಿನೊಟ್ಟಿಗೆ ಹರಿಯುವಂತ ಕಾನಾನ್ ದೇಶ). ಇದನ್ನು ನಂತರ ಅರಿಕೆ ಮಾಡಿ ಮತ್ತು “ದೇವರೆ, ಇಂತಹ ಜೀವಿತವನ್ನು ನನ್ನ ಎಲ್ಲಾ ದಿನಮಾನಗಳಲ್ಲಿ ಜೀವಿಸ ಬಯಸುತ್ತೇನೆ” ಎಂಬುದಾಗಿ ಹೇಳಿ.

ಅಂತಹ ಜೀವಿತವನ್ನು ನಾನು ಜೀವಿಸ ಬಯಸುತ್ತೇನೆ. ನಾನು ಯೌವನಸ್ಥ ಕ್ರೈಸ್ತನಾಗಿದ್ದಾಗ, ಸತ್ಯವೇದವು ನನಗೆ ಕೊಡಲು ಬಯಸುವಂತದ್ದು ಏನು ಎಂಬುದನ್ನು ನಾನು ನೋಡಿದೆನು. ಆದರೆ ನನ್ನ ಸುತ್ತಲಿರುವಂತ ಕ್ರೈಸ್ತ ನಾಯಕರುಗಳನ್ನು ನಾನು ನೋಡಿದಾಗ, ಅವರು ಪಾಪದಿಂದ ಸೋಲಿಸಲ್ಪಟ್ಟಿರುವುದನ್ನು ನೋಡಿದೆನು. ಆದ್ದರಿಂದ ನಾನು ಹೀಗೆ ಹೇಳಿದೆನು, “ದೇವರೆ, ನಾನು ಅವರನ್ನು ತೀರ್ಪು ಮಾಡುವುದಿಲ್ಲ. ಅದು ನನ್ನ ವ್ಯವಹಾರವಲ್ಲ. ಆದರೆ ನಾನು ಅವರನ್ನು ನನ್ನ ಮಾದರಿಗಳೆಂಬಂತೆ ನೋಡುವುದಿಲ್ಲ. ನಾನು ದೇವರ ವಾಕ್ಯವೊಂದನ್ನೇ ನೋಡುತ್ತೇನೆ. ನಾನು ನಿನ್ನ ವಾಗ್ದಾನಗಳನ್ನು ಮಾತ್ರ ನೋಡುತ್ತೇನೆ. ಯೇಸು ಒಬ್ಬನೇ ನನ್ನ ಮಾದರಿ ಎಂಬಂತೆ ನೋಡುತ್ತೇನೆ”. ನಾನು ವಿಶ್ವಾಸಿಯಾಗಿ ಹಲವು ವರ್ಷ ಸೋಲಲ್ಪಟ್ಟೆ, ಆದರೆ ಒಂದು ಸಲ ನಾನು ನನ್ನ ಜನ್ಮಸಿದ್ದ ಹಕ್ಕನ್ನು ಕ್ರಿಸ್ತನಲ್ಲಿ ನೋಡಿದಾಗ, ಅಧ್ಯಾಯಗಳಲ್ಲಿನ ದೇವರ ವಾಗ್ದಾನಗಳನ್ನು ಅರಿಕೆ ಮಾಡುತ್ತಲೇ ಇದ್ದೆ - ನಾನು ಸತತ ಜಯದಲ್ಲಿರುವಂತೆ ಮತ್ತು ಸತತ ಸಂತೋಷದಲ್ಲಿರುವಂತ ಜೀವಿತದಲ್ಲಿರುವಂತೆ ಅದು ನನ್ನನ್ನು ಮಾಡಿತು. ದೇವರು ಕೊನೆಯದಾಗಿ ನನ್ನ ಹೃದಯದ ಬಯಕೆಯನ್ನು ಕೊಟ್ಟನು. ಅದೇ ರೀತಿ ನಾನು ಈಗ ಜೀವಿಸಬೇಕಿದೆ ಮತ್ತು ನನ್ನ ಜೀವಿತದ ಕೊನೆಯವರೆಗೂ ಅದೇ ರೀತಿ ನಾನು ಜೀವಿಸಬೇಕಿದೆ.

ಆದ್ದರಿಂದ ದೇವರ ವಾಗ್ದಾನಗಳು ನಿಮ್ಮ ಬಾಯಲ್ಲಿರಲಿ. ಒಂದು ವೇಳೆ ನೀವು ಈ ಸಂದೇಶವನ್ನು ಬೋಧಿಸಿದರೆ, ಜನಪ್ರಿಯತೆಯನ್ನು ಹುಡುಕುವಂತಹ ಬೋಧಕರುಗಳ ಮಧ್ಯದಲ್ಲಿ ದೇವರಿಗೋಸ್ಕರ ನೀವು ಒಬ್ಬರೇ ಧ್ವನಿಯಾಗಿರುವುದನ್ನು ಸಮಯ ಬಂದಾಗ ಕಂಡುಕೊಳ್ಳಬಹುದು. ನಿರುತ್ಸಾಹಗೊಳ್ಳಬೇಡಿ. ಕೊನೆಯವರೆಗೂ ದೇವರು ನಿಮ್ಮ ಸಂಗಡ ನಿಲ್ಲುತ್ತಾನೆ.

ಯೆಹೋಶುವನು ಹಗಲಿರುಳು ದೇವರ ವಾಕ್ಯವನ್ನು ಧ್ಯಾನಿಸಲು ಆಜ್ಞಾಪಿಸಲ್ಪಟ್ಟನು. ಕ್ರೈಸ್ತನಲ್ಲದವನ ಅಗತ್ಯತೆಗಾಗಿ ನಾವು ಧ್ಯಾನಿಸಬೇಕಾಗಿಲ್ಲ. ಇದಕ್ಕೆ ಧ್ಯಾನಿಸುವುದು ಒಳ್ಳೆಯ ಸಂಗತಿಯಂತೆ ಕಾಣುತ್ತದೆ. ಆದರೆ ಒಂದು ವೇಳೆ ನೀವು ದೇವರ ವಾಕ್ಯವನ್ನು ಹಗಲಿರುಳು ಧ್ಯಾನಿಸದಿದ್ದರೆ, ಆ ಕ್ರೈಸ್ತರಲ್ಲದವರಿಗೆ ನೀವು ಸಹಾಯ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಆತನು ದೇವರ ವಾಕ್ಯವನ್ನು ಹಗಲಿರುಳು ಧ್ಯಾನಿಸಿದರೆ, ದೇವರು ಯೆಹೋಶುವನಿಗೆ ಅಭಿವೃದ್ಧಿ(ಕೃತಾರ್ಥ) ಮತ್ತು ಯಶಸ್ಸು(ಸಫಲ) ಎರಡನ್ನು ವಾಗ್ದಾನ ಮಾಡಿದ್ದನು(ಯೆಹೋಶುವ 1:8). ನಮ್ಮ ಜೀವಿತವು ಪರಲೋಕ ಮತ್ತು ಆತ್ಮೀಕ ಮಾರ್ಗದಲ್ಲಿ ಅಭಿವೃದ್ಧಿ (ಕೃತಾರ್ಥ) ಮತ್ತು ಸಫಲವಾಗುವುದೇ ನಿಜವಾದ “ಕೃತಾರ್ಥವಾದ ಸಂದೇಶವಾಗಿದೆ. ಅಭಿವೃದ್ಧಿ (ಕೃತಾರ್ಥ) ಮತ್ತು ಸಫಲತೆ ಈ ಎರಡು ಸಂಗತಿಗಳನ್ನು ಲೋಕದಲ್ಲಿ ಪ್ರತಿಯೊಬ್ಬರು ಹುಡುಕುವಂತದ್ದಾಗಿದೆ. ಯೊಹೋಶುವನು 1:8ರಲ್ಲಿ ದೇವರು ಹೇಳಿದ ಹಾಗೇ, ಅವರು ಇವುಗಳನ್ನು ಹುಡುಕುವುದಿಲ್ಲ.