ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ದೇವರು ಆದಾಮನನ್ನು ಉಂಟು ಮಾಡಿದ ಸಂದರ್ಭದಲ್ಲಿ ಆತನಿಗೆ ಜೀವ ಬಂದಾಗ, ತನ್ನ ಕಣ್ಣನ್ನು ತೆರೆದು, ಯಾರನ್ನು ಮೊದಲ ಬಾರಿ ನೋಡಿದನು? ದೇವರನ್ನು! ಆತನು ದೇವರನ್ನು ಭೇಟಿಯಾದನು. ದೇವರೊಟ್ಟಿಗೆ ಮಾತನಾಡಿದನು. ಆಗ ಆತನಿಗೆ ಹೆಂಡತಿ ಇರಲಿಲ್ಲ. ಅಲ್ಲಿ ಆದಾಮ ಮತ್ತು ದೇವರು ಮಾತ್ರ ಇದ್ದರು. ಎಷ್ಟೋ ಸಮಯದ ನಂತರ ಆತನು ಹೆಂಡತಿಯನ್ನು ಪಡೆದನು. ಹಾಗಾಗಿ, ದೇವರು ಇದರ ಮುಖಾಂತರ ಆದಾಮನಿಗೆ ಏನನ್ನು ಕಲಿಸಲು ಪ್ರಯತ್ನಿಸುತ್ತಿದ್ದರು? ದೇವರು ಆದಾಮನಿಗೆ ಒಂದು ಸರಳ ಪಾಠವನ್ನು ಕಲಿಸಲು ಪ್ರಯತ್ನಿಸುತ್ತಿದ್ದರು. ಅದೇನೆಂದರೆ, ”ಎಲ್ಲಾ ಸಮಯದಲ್ಲಿ ನಾನು ನಿನ್ನ ಜೀವಿತದಲ್ಲಿ ಮೊದಲಿಗನಾಗಿರಬೇಕು. ನೀನು ಹೆಂಡತಿಯನ್ನು ನೋಡುವ ಮೊದಲು ನನ್ನನ್ನು ನೋಡಬೇಕು. ನಿನ್ನ ಹೆಂಡತಿಗೆ ಕೊಡುವ ಬೆಲೆಗಿಂತ ಹೆಚ್ಚಾಗಿ, ನನಗೆ ಬೆಲೆಯನ್ನು ಕೊಡಬೇಕು” ಎಂದು. ಅದಕ್ಕಾಗಿ ದೇವರು ಆದಾಮನನ್ನು ಮಾತ್ರ ಉಂಟು ಮಾಡಿದನು ಮತ್ತು ಹೆಂಡತಿಯ ಸೃಷ್ಟಿಯಾಗುವುದಕ್ಕಿಂತ ಮುಂಚೆ ಆದಾಮನು ದೇವರೊಟ್ಟಿಗೆ ಅನ್ಯೋನ್ಯತೆಯನ್ನು ಮಾಡಬೇಕಾಗಿತ್ತು.

ಇದರಿಂದ ನಾವು ಕಲಿಯುವುದೇನು? ಅದೇನೆಂದರೆ, ನೀಮ್ಮ ಜೀವನದುದ್ದಕ್ಕೂ, ನೀವು ಮದುವೆಯಾಗಿ 50 ವರ್ಷಗಳು ಅಥವಾ 75 ವರ್ಷಗಳು ಕಳೆದರೂ ಸಹ, ಪ್ರತಿನಿತ್ಯದ ಜೀವಿತದಲ್ಲಿ ಯಾವಾಗಲೂ ದೇವರು ಮೊದಲಿಗನಾಗಿರಬೇಕು. ಅನೇಕ ಜನರು ಪರಸ್ವರ ಪ್ರೀತಿಯಲ್ಲಿ ಬಿದ್ದಾಗ, ಮೊದಲ ಸ್ಥಾನವನ್ನು ತಮ್ಮ ಹೆಂಡತಿಗೆ ನೀಡಿರುತ್ತಾರೆ. ಇನ್ನೂ ಕೆಲವು ಪ್ರಕ್ರರಣಗಳಲ್ಲಿ ಪೋಷಕರು ಮೊದಲಿಗರಾಗಿರುತ್ತಾರೆ. ಆದರೆ ಇದರ ಬಗ್ಗೆ ನಾನು ಮುಂದೆ ಹೇಳುತ್ತೇನೆ. ಈಗ ಹವ್ವಳ ಸೃಷ್ಠಿಯ ಬಗ್ಗೆ ಮಾತನಾಡುತ್ತೇನೆ. ದೇವರು ಆದಾಮನನ್ನು ನಿದ್ರೆಗೆ ಜಾರಿಸಿದನು. ಸತ್ಯವೇದದಲ್ಲಿ ಗಾಢ ನಿದ್ರೆ ಎಂದು ಇಲ್ಲಿ ಉಲ್ಲೇಖಿಸಲ್ಪಟ್ಟಿದೆ (ಆದಿಕಾಂಡ 2:21).ಹಾಗಾಗಿ ಆತನಿಗೆ ನಿದ್ದೆಯಿಂದ ಎದ್ದೇಳಲು ಸಹ ಸಾಧ್ಯವಿರಲಿಲ್ಲ. ನಂತರ ದೇವರು ಆದಾಮನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ, ತಾನು ಮನುಷ್ಯನಿಂದ ತೆಗೆದಿದ್ದ ಎಲುಬನಿಂದ ಆಕೆಯನ್ನು ಸೃಷ್ಟಿ ಮಾಡಿದನು. ಆಕೆಗೆ ಜೀವ ಬಂದಾಗ, ಆಕೆಯ ಕಣ್ಣುಗಳು ತೆರೆಯಲ್ಪಟ್ಟವು, ಆಕೆ ಮೊದಲು ಯಾರನ್ನು ನೋಡಿದಳು? ಆದಾಮನನ್ನು ಅಲ್ಲ.

ಆದಾಮನನ ಸೃಷ್ಟಿಯ ಬಗ್ಗೆ ಹವ್ವಳಿಗೆ ಗೊತ್ತಿರಲಿಲ್ಲ. ತಾನು ಒಬ್ಬಳೇ, ಮನುಷ್ಯಳಾಗಿ ಹುಟ್ಟಿದ್ದೇನೆ ಎಂದು ಆಕೆ ಅಂದುಕೊಂಡಳು. ಆಕೆಗೆ ಆದಾಮನ ಬಗ್ಗೆ ಏನು ತಿಳಿದಿದ್ದಿಲ್ಲ. ಆಕೆಯ ಕಣ್ಣು ತೆರೆಯಲ್ಪಟ್ಟಾಗ, ಆಕೆಯು ದೇವರನ್ನು ನೋಡಿದಳು. ಆದಾಮನು ಉಂಟು ಮಾಡಲ್ಪಟ್ಟಾಗ ಆತನು ದೇವರನ್ನು ಮಾತ್ರ ನೋಡಿದ ಹಾಗೇ. ಆದಾಮನು ಆ ತೋಟದಲ್ಲಿ ಎಲ್ಲೋ ಒಂದು ಕಡೆ ಗಾಢವಾದ ನಿದ್ರೆಯಲ್ಲಿದ್ದನು. ಆತನಿಗೂ ಸಹ ಆಕೆಯ ಸೃಷ್ಟಿಯ ಬಗ್ಗೆ ತಿಳಿದಿರಲಿಲ್ಲ. ಅದೇ ರೀತಿ ಆಕೆಗೂ ಸಹ ಆತನ ಸೃಷ್ಟಿಯ ಬಗ್ಗೆ ತಿಳಿದಿರಲಿಲ್ಲ. ಆಕೆಯು ಮೊದಲು ದೇವರನ್ನು ಭೇಟಿಯಾದಳು. ದೇವರೇ, ಆಕೆಯ ಬಳಿ ಮೊದಲು ಮಾತನಾಡಿದ್ದು. ಎಷ್ಟೋ ಸಮಯದ ನಂತರ, ಆಕೆಯನ್ನು ದೇವರು ಆದಾಮನ ಬಳಿಗೆ ಕರೆದುಕೊಂಡು ಬಂದನು. ಹಾಗಾಗಿ, ದೇವರು ಹವ್ವಳಿಗೆ ಕಲಿಸಲು ಪ್ರಯತ್ನಿಸಿದ್ದಾದರೂ ಏನು? ಅದೇ ಪಾಠವನ್ನೇ ದೇವರು ಆದಾಮನಿಗೂ ಕಲಿಸಲು ಪ್ರಯತ್ನಿಸಿದ್ದು. ”ನಾನು ನಿನ್ನ ಜೀವಿತದಲ್ಲಿ ಮೊದಲಿಗನಾಗಿರಬೇಕು. ನೀನು ನಿನ್ನ ಗಂಡನ ಜೊತೆ ಅನ್ಯೋನ್ಯತೆ ಮಾಡುವ ಮೊದಲು, ನನ್ನ ಜೊತೆ ಅನ್ಯೋನ್ಯತೆ ಮಾಡಬೇಕು” ಎಂದು.

ಶ್ರೇಷ್ಠ ಮದುವೆಗಳಿಗಾಗಿ ದೇವರ ಯೋಜನೆಗಳನ್ನು ನೀವು ಅರ್ಥ ಮಾಡಿಕೊಂಡಿರಾ? ಆದಾಮನು ಹವ್ವಳ ಜೊತೆ ಅನ್ಯೋನ್ಯತೆ ಮಾಡುವ ಮುಂಚೆ, ದೇವರ ಜೋತೆ ಅನ್ಯೋನ್ಯತೆ ಮಾಡಬೇಕಾಗಿತ್ತು. ಅದೇ ರೀತಿ ಹವ್ವಳು ಸಹ ಆದಾಮನ ಜೊತೆ ಅನ್ಯೋನ್ಯತೆ ಮಾಡುವ ಮುಂಚೆ, ದೇವರ ಜೊತೆ ಅನ್ಯೋನ್ಯತೆ ಮಾಡಬೇಕಿತ್ತು. ಇದೆಲ್ಲವೂ ಸತ್ಯವೇದದಲ್ಲಿ ಬರೆದಿದೆ. ದೇವರು ಪ್ರಾರಂಭದಿಂದಲೂ ಮದುವೆಯು ಈ ರೀತಿಯಾಗಿಯೇ ಇರಬೇಕು ಎಂದು ಉದ್ದೇಶಿಸಿದ್ದನು. ದೇವರು ತಾನೇ, ಗಂಡ ಮತ್ತು ಹೆಂಡತಿಯ ಮಧ್ಯದಲ್ಲಿ ಇರುವಾಗ, ಪ್ರತಿಯೊಬ್ಬ ವ್ಯಕ್ತಿಯು ಮತ್ತು ಮದುವೆಯಲ್ಲಿನ ಸಹಭಾಗಿಗಳು ತಮ್ಮ ವೈಯುಕ್ತಿಕ ಜೀವಿತದಲ್ಲಿ ದೇವರನ್ನು ಮೊದಲು ಇಡುವುದನ್ನು ಕಲಿಯಬೇಕು. ಹೀಗಿದ್ದಾಗ, ಏನಾಗುತ್ತದೆ ಎಂದು ನಿಮಗೆ ಗೊತ್ತ? ಅವರು ಒಟ್ಟಾಗಿ ಅಂಟಿಕೊಂಡಿರುತ್ತಾರೆ. ದೇವರು ಇಡೀ ಸೃಷ್ಟಿಯಲ್ಲಿ ಒಟ್ಟಾಗಿ ಕಟ್ಟುವ ಬಹುದೊಡ್ಡ ಶಕ್ತಿಯಾಗಿದ್ದಾನೆ. ದೇವರು ಇಬ್ಬರು ವ್ಯಕ್ತಿಗಳನ್ನು ಒಟ್ಟಾಗಿ ಕಟ್ಟಲ್ಪಟ್ಟಾಗ, ಅವರನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸೈತಾನ, ದೆವ್ವಗಳು, ಪರಿಸ್ಥಿತಿಗಳು, ಆಸ್ತಿ, ಇಡೀ ಲೋಕ, ಸಾವು ಸಹ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ.

ಜನರನ್ನು ಒಟ್ಟಾಗಿ ಕಟ್ಟಲು ದೇವರು ಇರದಿದ್ದಾಗ, ಜನರು ಬೇರೆ ಶಕ್ತಿಗಳಿಂದ ಕಟ್ಟಲ್ಪಟ್ಟವರಾಗಿರುತ್ತಾರೆ. ಬೇರೆ ಶಕ್ತಿಗಳು ಅಷ್ಟು ಬಲವುಳ್ಳದ್ದಾಗಿರುವುದಿಲ್ಲ. ಅಂಟಿಕೊಳ್ಳುವುದೆಂದು ಕರೆಯಲ್ಪಡುವ ಫೆವಿಕಲ್ ಬಗ್ಗೆ ಇರುವ ಜಾಹಿರಾತನ್ನು ನೀವು ನೋಡಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಅದರಲ್ಲಿ ಒಂದು ಜಾಹಿರಾತನ್ನು ನಾನು ನೋಡಿದ್ದೀನಿ. ಈ ಫೆವಿಕಲ್ ಡಬ್ಬಗಳಲ್ಲಿ ಈ ಅಂಟಿಕೊಳ್ಳುವ ಚಿತ್ರವು ಇರುತ್ತದೆ. ಎರಡು ವಸ್ತುಗಳು ಒಟ್ಟಾಗಿ ಅಂಟಿಕೊಂಡಿರುವಂತ ಚಿತ್ರ ಮತ್ತು ಆ ಚಿತ್ರದಲ್ಲಿ ಪ್ರತಿಯೊಂದು ಕಡೆಯು ಆನೆಯೂ ಎಳೆಯುತ್ತಿರುತ್ತದೆ. ಆದರೆ ಆನೆಯು ಆ ಒಟ್ಟಾಗಿ ಅಂಟಿಕೊಂಡಿರುವಂತ ವಸ್ತುಗಳನ್ನು ಬೇರ್ಪಡಿಸಲಾಗುವುದಿಲ್ಲ. ಗಂಡ ಮತ್ತು ಹೆಂಡತಿ ದೇವರಿಂದ ಒಟ್ಟಾಗಿ ಅಂಟಿಕೊಂಡಾಗ, ಆ ಫೆವಿಕಲ್ ಗಿಂತಲೂ ಅತಿ ಬಲಶಾಲಿಯಾಗಿರುತ್ತದೆ. ಯಾವ ಆನೆಯು ಸಹ ಅವರನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಯಾವ ದೆವ್ವಗಳು ಸಹ ಅವರನ್ನು ಬೇರ್ಪಡಿಸಲಾಗುವುದಿಲ್ಲ. ಯಾವ ಮನುಷ್ಯನು ಸಹ ಅವರನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರು ತಮ್ಮ ಮಧ್ಯದಲ್ಲಿ ದೇವರನ್ನು ಹೊಂದಿರಲೇಬೇಕು. ದೇವರು ಫೆವಿಕಲ್ ಹಾಗೂ ಫೆವಿಸ್ಟಿಕ್ ಗಳಿಗಿಂತ ದೊಡ್ಡದಾಗಿ ಕಟ್ಟುವಾತನಾಗಿದ್ದಾನೆ. ಗಂಡ ಮತ್ತು ಹೆಂಡತಿ ಮಧ್ಯದಲ್ಲಿ ದೇವರು ಇದ್ದರೆ, ಆತನು ನಿಮ್ಮನ್ನು ಒಟ್ಟಾಗಿ ಕಟ್ಟುತ್ತಾನೆ, ಅದು ಯಾವ ರೀತಿಯೆಂದರೆ, ಯಾವುದು ಸಹ ನಿಮ್ಮನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ.

ಹಾಗಾಗಿ, ನೀವು ಬಹಳ ಎಚ್ಚರಿಕೆಯಿಂದ ಇದ್ದು, ನಿಮ್ಮ ಮಧ್ಯದಲ್ಲಿ ಪ್ರವೇಶಿಸುವಂತೆ ಯಾವುದಕ್ಕೂ ಅನುಮತಿಸಬಾರದು. ಗಂಡ ಮತ್ತು ಹೆಂಡತಿಯೇ ಆಗಲಿ, ಅಥವಾ ಹೆಂಡತಿ ಮತ್ತು ಗಂಡನೆ ಆಗಲಿ, ದೇವರ ಹೊರತು ನಿಮ್ಮ ಮಧ್ಯದಲ್ಲಿ ಯಾರು ಇರಬಾರದು. ಯೌವನಸ್ಥರ ಅನೇಕ ಮದುವೆಗಳಲ್ಲಿ ಕಟ್ಟುವಂತದ್ದರ ಬಲ ಏನಾಗಿದೆ? ಇದು ಎಲ್ಲಾ ಕಡೆ ಇರುವ ನೋಡಲು ಚೆನ್ನಾಗಿ ಇರುವಂತದ್ದು. ಒಬ್ಬ ಹುಡುಗ ಹುಡುಗಿಯನ್ನು ಇಷ್ಟಪಡುತ್ತಾನೆ, ಏಕೆಂದರೆ ಆಕೆಯು ನೋಡಲು ಚೆನ್ನಾಗಿರುತ್ತಾಳೆ. ಪ್ರಸ್ತುತ ಚೆನ್ನಾಗಿ ಕಾಣುವಂತದ್ದು ಮದುವೆಗಳನ್ನು 50 ವರ್ಷಗಳ ತನಕ ಹಿಡಿದಿಡಲು ಸಾಧ್ಯವಾಗುವುದಿಲ್ಲ. ಈ ಮದುವೆಗಳನ್ನು ನೀವು ನೋಡಿರಿ, ಯಾರೋ ಚೆನ್ನಾಗಿ ಕಾಣುತ್ತಾರೆ ಎಂದು ಅವರನ್ನು ಮದುವೆ ಯಾಗುತ್ತಾರೆ ಮತ್ತು 3 ತಿಂಗಳು ಆದ ನಂತರ ಅವರು ಒಬ್ಬರಿಗೊಬ್ಬರು ಜಗಳವಾಡುತ್ತಾರೆ. ಇದು ಅವರನ್ನು ಹಿಡಿದಿಡಲು ಸಾಧ್ಯವಾಗುವುದಿಲ್ಲ. ನಾವು ಈ ಚೆನ್ನಾಗಿ ಕಾಣುವಂತದರ ವಿರುಧ್ದವಾಗಿಲ್ಲ. ನೀವು ಚೆನ್ನಾಗಿ ಕಾಣುವಂತ ಹುಡುಗಿಯನ್ನೇ ಮದುವೆ ಯಾಗಬಹುದು. ಆದರೆ ಇದು ಪ್ರಮುಖ ಅಂಶವಲ್ಲ. ಇದು ಮದುವೆಯನ್ನು ಒಟ್ಟಾಗಿ ಹಿಡಿದಿಡಲು ಸಹಾಯಿಸುವುದಿಲ್ಲ. ಅನೇಕ ಹುಡುಗಿಯರು ಹುಡುಗನನ್ನು ಏನಿಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ? ಒಳ್ಳೆ ಕೆಲಸ, ಒಳ್ಳೆ ಕುಟುಂಬ, ಹೆಚ್ಚು ಹಣ, ಇವುಗಳನ್ನು ಹುಡುಗಿಯರು ಹುಡುಗನಲ್ಲಿ ನೋಡುತ್ತಾರೆ. ಇವುಗಳು ಮದುವೆಯನ್ನು ಒಟ್ಟಾಗಿ ಹಿಡಿದಿಡಲು ಸಾಧ್ಯವಾಗುತ್ತದೆ ಎಂದು ನೀವು ನೆನೆಸುತ್ತೀರಾ? ಇಲ್ಲ! ಕೆಲವು ಹುಡುಗರು ವರದಕ್ಷಿಣೆ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕೆ ಹುಡುಗಿಯರನ್ನು ಮದುವೆಯಾಗುತ್ತಾರೆ. ಇದು ಸಹ ಮದುವೆಯನ್ನು ಒಟ್ಟಾಗಿ ಹಿಡಿದಿಡುವುದಿಲ್ಲ. ಇದು ಆಸಾಧ್ಯ.

ದೇವರು ಪ್ರಾರಂಭದಲ್ಲಿ ಮಾಡಿದ ರೀತಿಯಲ್ಲಿಯೇ, ಇಂದು ಸಹ ಮದುವೆಗಳು ಒಟ್ಟಾಗಿ ಹಿಡಿದಿಡಲು ಸಾಧ್ಯ. ಯಾರ ಜೀವಿತದಲ್ಲಿ ದೇವರು ಮೊದಲಿಗನಾಗಿದ್ದು, ದೇವರೊಟ್ಟಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೋ, ಆಗ ಅವರ ನಡುವಿನ ಸಂಬಂಧವು ವೈಯುಕ್ತಿಕ ಸಂಬಂಧಕ್ಕಿಂತ ದೊಡ್ಡದಾಗಿರುತ್ತದೆ. ಮತ್ತೊಂದು ಪದದಲ್ಲಿ, ನೀವು ಗಂಡನಾಗಿದ್ದರೆ, ನಿಮ್ಮ ಹೆಂಡತಿಯ ಪ್ರೀತಿಯಲ್ಲಿ ಮೊದಲಿಗನಾಗಿರಲು ಬಯಸಬೇಡಿ. ಆಕೆಯ ಪ್ರೀತಿಯಲ್ಲಿ ದೇವರು ಮೊದಲಿಗನಾಗಿರಬೇಕು. ನೀವು ಹೆಂಡತಿಯಾಗಿದ್ದರೆ, ನಿಮ್ಮ ಗಂಡನ ಪ್ರೀತಿಯಲ್ಲಿ ದೇವರು ಮೊದಲಿಗನಾಗಿರಬೇಕು ಮತ್ತು ನೀವು ಎರಡನೇಯವರಾಗಿರಬೇಕು. ಯಾರು ದೇವರನ್ನು ಮೊದಲಿಗಿಟ್ಟು, ಬೆಳಕಿನಲ್ಲಿ ನಡೆಯುತ್ತಾರೋ, ಸತ್ಯವೇದ 1 ಯೋಹಾನ 1:7ರಲ್ಲಿ ಹೇಳುವ ಹಾಗೇ, ”ಆತನು ಬೆಳಕಿನಲ್ಲಿರುವಂತೆಯೇ, ನಾವು ಬೆಳಕಿನಲ್ಲಿ ನಡೆದರೆ”, ಅವರು ಒಬ್ಬರಿಗೊಬ್ಬರು ಅನ್ಯೋನ್ಯತೆಯನ್ನು ಹೊಂದಿರುತ್ತಾರೆ ಮತ್ತು ಇಬ್ಬರು ಒಟ್ಟಾಗಿ ಸೇರಲ್ಪಟ್ಟಿರುತ್ತಾರೆ.

ನಿಮ್ಮ ಪ್ರತಿಯೊಂದು ಸ್ಥಿತಿಯಲ್ಲಿ ದೇವರನ್ನು ಮೊದಲು ಇಡಿ, ಬೆಳಕಿನಲ್ಲಿ ನಡೆಯಿರಿ, ನಿಮ್ಮನ್ನು ನೀವು ತೀರ್ಪು ಮಾಡಿಕೊಳ್ಳಿರಿ. ಹೀಗಾದಾಗ ನಿಮ್ಮ ಮತ್ತು ನಿಮ್ಮ ಮದುವೆ ಸಹಪಾಠಿಯ ಮಧ್ಯದಲ್ಲಿ ಬಲವಾದ ಕಟ್ಟುವಿಕೆ ಇರುತ್ತದೆ. ಅದನ್ನು ಯಾರು ಸಹ ನಾಶಗೊಳಿಸಲಾಗುವುದಿಲ್ಲ

ಈಗ ಗಂಡ ಮತ್ತು ಹೆಂಡತಿಯ ನಡುವೆ ಬರುವಂಹ ಸಂಗತಿಗಳೇನು? ಅದು ಪೋಷಕರಾಗಿರಬಹುದು. ಆದಿಕಾಂಡ 2:24 ರಲ್ಲಿ ಹೇಳುವುದೇನೆಂದರೆ, ”ಈ ಕಾರಣದಿಂದ, ಪುರುಷನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು” ಎಂದು. ಆಗ ಮಾತ್ರ ಅವರಿಬ್ಬರು ಒಂದೇ ಶರೀರವಾಗಲು ಸಾಧ್ಯ. ಈ ವಚನ ಏನು ಹೇಳುತ್ತದೆ ಎಂದು ಮತ್ತೊಮ್ಮೆ ನೋಡಿ: ನೀವು ಒಂದನ್ನು ಬಿಟ್ಟರೆ, ಮತ್ತೊಂದನ್ನು ಸೇರಿಕೊಳ್ಳಲು ಸಾಧ್ಯ. ನೀವು ಬಿಡದೇ ಸೇರಿಕೊಳ್ಳಲು ಪ್ರಯತ್ನಿಸಿದರೆ, ನೀವು ಒಂದಾಗಿರಲು ಆಗುವುದಿಲ್ಲ. ಇದು ವಿಸ್ಮಯಕರವಲ್ಲವ? ಈ ಲೋಕದೊಳಗೆ ಪಾಪವು ಬರುವುದಕ್ಕಿಂತ ಮೊದಲು ಸತ್ಯವೇದದಲ್ಲಿ ಕೊಡಲ್ಪಟ್ಟಿರುವ ಆಜ್ಞೆ ಯಾವುದೆಂದರೆ, ನಿಮ್ಮ ತಂದೆ ಮತ್ತು ತಾಯಿಯನ್ನು ಬಿಡಬೇಕು ಎಂಬುದಾಗಿ. ಯಾರು ಮದುವೆಯಾಗಿದ್ದೀರೋ, ನಾನು ಅವರನ್ನು ಕೇಳುತ್ತೇನೆ, ನೀವು ನಿಮ್ಮ ತಂದೆ ಮತ್ತು ತಾಯಿಯನ್ನು ಬಿಟ್ಟಿದ್ದೀರಾ? ನಾನು ದೈಹಿಕವಾಗಿ ಹೇಳುತ್ತಿಲ್ಲ. ನೀವು ಅವರ ಬಗ್ಗೆ ಕಾಳಜಿ ವಹಿಸಬೇಕು, ಸಾಯುವ ತನಕ ಅವರನ್ನು ನೋಡಿಕೊಳ್ಳಬೇಕು. ನಾವು ಅದನ್ನು ಮಾಡಲೇಬೇಕು. ನಾವು ನಮ್ಮ ಪೋಷಕರನ್ನು ಗೌರವಿಸಬೇಕು. ಆದರೆ ನಿಮ್ಮ ಮದುವೆ ಜೀವಿತ ಮತ್ತು ನಿಮ್ಮ ಮಧ್ಯ ಬರಲು ಅವರನ್ನು ಬಿಡಬೇಡಿ. ಅವರನ್ನು ನೀವು ಭಾವಾನಾತ್ಮಕವಾಗಿ ಬಿಡಬೇಕು. ಅವರು ನಿಮ್ಮನ್ನು ಅನೇಕ ವರ್ಷಗಳಿಂದ ನಿಮ್ಮನ್ನು ಬೆಳಸಿ, ಪೋಷಿಸಿರುತ್ತಾರೆ. ಅದು ಒಳ್ಳೆದು. ಆದರೆ ನೀವು ಈಗ ಮದುವೆ ಯಾಗಿದ್ದೀರಿ. ನೀವು ಅವರನ್ನು ಬಿಡಬೇಕು. ಏಕೆಂದರೆ, ಅನೇಕ ಗಂಡಂದಿರು ತಮ್ಮ ಪೋಷಕರ ಜೊತೆಗಿನ ಭಾವನಾತ್ಮಕ ನಂಟನ್ನು ಬಿಟ್ಟಿಲ್ಲ. ಹಾಗಾಗಿ ಅವರ ಮದುವೆ ಜೀವಿತದಲ್ಲಿ ಗೊಂದಲಗಳಿರುತ್ತವೆ. ಅನೇಕ ಹೆಂಡತಿಯರು ಸಹ ತಮ್ಮ ಪೋಷಕರೊಟ್ಟಿಗಿನ ಭಾವಾನಾತ್ಮಕ ನಂಟನ್ನು ಬಿಟ್ಟಿಲ್ಲ. ಹಾಗಾಗಿ ಅವರು ತಮ್ಮ ಗಂಡಂದಿರೊಟ್ಟಿಗೆ ಒಗ್ಗಟ್ಟಿನಿಂದ ಕೂಡಿರುವುದಿಲ್ಲ. ಇದು ಒಂದು ದುರಂತ.

ದೇವರು ಮೊದಲಿಗನಾಗಿರುವುದಿಲ್ಲ ಮತ್ತು ಗಂಡ-ಹಂಡತಿಯರ ಮಧ್ಯದಲ್ಲಿ ಪೋಷಕರು ಇರುತ್ತಾರೆ, ಅವರ ಜೀವಿತದಲ್ಲಿ ಮೂಗು ತೂರಿಸುತ್ತಿರುತ್ತಾರೆ. ಕೆಲವೊಮ್ಮೆ ಕೆಲಸ, ಅದು ನಿಮಗೆ ಬಹಳ ಮುಖ್ಯವಾಗಿರಬಹುದು ಮತ್ತು ಮದುವೆಗಳ ಮಧ್ಯದಲ್ಲಿ ಬರಬಹುದು. ದೇವರನ್ನು ಹೊರತು ಪಡಿಸಿ ಎಲ್ಲವೂ, ಅದು ಹಣವಾಗಿರಬಹುದು, ಅನೇಕ ಸಂಗತಿಗಳಲ್ಲಿ ನೀವು ಹೊಕ್ಕಿರಬಹುದು, ಗಂಡ ಮತ್ತು ಹೆಂಡತಿಯ ನಡುವೆ ನಿಮ್ಮ ಮಕ್ಕಳು ಬರಬಹುದು. ಇದು ಭಾರತದಲ್ಲಿ ಹೆಚ್ಚು ನಡೆಯುವಂತದ್ದು. ಆದರೆ ಇದು ಇನ್ನೆಂದಿಗೂ ಇರಬಾರದು. ಸಂತೋಷವುಳ್ಳ ಮದುವೆಗೆ ಉತ್ತರ ಏನು? ಇದಕ್ಕೆ ಮೊದಲ ಉತ್ತರವೇನೆಂದರೆ, ನಿಮ್ಮ ಪ್ರತಿಯೊಂದು ಸ್ಥಿತಿಯಲ್ಲಿ ದೇವರನ್ನು ಮೊದಲು ಇಡಿ, ಬೆಳಕಿನಲ್ಲಿ ನಡೆಯಿರಿ, ನಿಮ್ಮನ್ನು ನೀವು ತೀರ್ಪು ಮಾಡಿಕೊಳ್ಳಿರಿ. ಹೀಗಾದಾಗ ನಿಮ್ಮ ಮತ್ತು ನಿಮ್ಮ ಮದುವೆ ಸಂಗಾತಿಯ ಮಧ್ಯದಲ್ಲಿ ಬಲವಾದ ಕಟ್ಟುವಿಕೆ ಇರುತ್ತದೆ. ಅದನ್ನು ಯಾರು ಸಹ ನಾಶಗೊಳಿಸಲಾಗುವುದಿಲ್ಲ.