ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ದೇವರು ಸಭೆಯಲ್ಲಿ “ಪರರಿಗೆ ಸಹಾಯ ಮಾಡುವವರನ್ನು" ಕೊಟ್ಟಿದ್ದಾನೆ

“ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ. ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನೂ ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ ಪರರಿಗೆ ಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನೂ ವಿವಿಧ ವಾಣಿಗಳನ್ನಾಡುವ ವರವನ್ನೂ ಅವರವರಿಗೆ ಕೊಟ್ಟಿದ್ದಾನೆ”. (ಕೊರಿಂಥದವರಿಗೆ 12:27,28)

ಈ ಮೇಲ್ಕಂಡ ವಾಕ್ಯಗಳಲ್ಲಿ ಪ್ರಸ್ತಾಪಿಸಲ್ಪಟ್ಟಂತ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಭೆಯನ್ನು ಕಟ್ಟಲು ಸಹಾಯಕವಾಗುವಂತೆ, ತನಗೆ ದೇವರು ಕೊಟ್ಟಿರುವಂತಹ ಕೆಲವು ಅಸಾಧಾರಣ ಸಾಮರ್ಥ್ಯದೊಟ್ಟಿಗೆ ಸಜ್ಜುಗೊಂಡಿದ್ದಾನೆ. ಅವರುಗಳಲ್ಲಿ ಕೆಲವರು ಅಪೊಸ್ತಲರು ಮತ್ತು ಪ್ರವಾದಿಗಳು ಹಾಗೂ ಅವರೊಟ್ಟಿಗೆ ಕೆಲವರು ಮಹಾತ್ಕಾರ್ಯ ಮಾಡುವ ಶಕ್ತಿಯನ್ನೂ ಮತ್ತು ನಾನಾ ರೋಗಗಳನ್ನು ವಾಸಿಮಾಡುವ ವರವನ್ನು ಹೊಂದಿರುತ್ತಾರೆ. ಈ ವರಗಳು ಸ್ಪಷ್ಟವಾಗಿ ಅಸಾಧಾರಣ ಸಾಮರ್ಥ್ಯವುಳ್ಳಂತವುಗಳಾಗಿದ್ದು, ಅವುಗಳನ್ನು ದೇವರೇ ಅವರಿಗೆ ಕೊಟ್ಟಿರುವಾತನಾಗಿದ್ದಾನೆ.

ಈ ವಾಕ್ಯದಲ್ಲಿ ಉಪದೇಶಕರಾಗಿರಬಹುದು, ಪರರಿಗೆ ಸಹಾಯ ಮಾಡುವ ಗುಣ ಮತ್ತು ಕಾರ್ಯಗಳನ್ನು ನಿರ್ವಹಿಸುವ ಜ್ಞಾನ, ಹೀಗೆ ಇವುಗಳ ವಿಷಯವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಇದರ ಪರಿಣಾಮವಾಗಿ ಜನರು ಕೆಲವು ಸಹಜವಾದ ಸಾಮರ್ಥ್ಯದೊಂದಿಗೆ ಮಾತ್ರವಲ್ಲದೇ, ಕೆಲವು ಅಸಾಧಾರಣವಾದ ಸಾಮಾರ್ಥ್ಯದೊಟ್ಟಿಗೆ, ಅವರು ತಮ್ಮ ಕೆಲಸವನ್ನು ಕ್ರಿಸ್ತನ ದೇಹದಲ್ಲಿ ನಿರ್ವಹಿಸುವ ಸಲುವಾಗಿ ದೇವರಿಂದ ಸಜ್ಜುಗೊಂಡಿರುವುದು ನಿಜ ಸಂಗತಿಯಾಗಿದೆ.

ಉದಾಹರಣೆಗಾಗಿ ಇದನ್ನು ಪರಿಗಣಿಸಿ, “ಪರ ಸಹಾಯ ಮಾಡುವ ಗುಣವಿರುವವರು” ಎಂದು ಕರೆಸಿಕೊಳ್ಳುವವರನ್ನು ದೇವರು ಸಭೆಯಲ್ಲಿ ನೇಮಿಸಿದ್ದಾನೆ.

ಈ ಜನಗಳು ಸ್ವ-ಇಚ್ಛೆಯಿಂದ ಮಹಡಿಯನ್ನು ಗುಡಿಸುವವರು ಅಥವಾ ಶೌಚಾಲಯವನ್ನು ಹಾಗೂ ಇನ್ನಿತರೆಗಳನ್ನು ಸ್ವಚ್ಛಗೊಳಿಸುವವರಲ್ಲ. ಇಂತಹ ಕೆಳಮಟ್ಟದ ಕಾರ್ಯಗಳನ್ನು ಮಾಡಲು ಯಾರು ಮನಸ್ಸುಳ್ಳವರಾಗಿರುತ್ತಾರೋ, ಅಂತವರು ಪ್ರತಿಯೊಂದು ಸಭೆಯಲ್ಲಿ ನಮಗೆ ಅವಶ್ಯವಿದೆ. ಆದರೆ ಇಂತಹ ಕೆಲಸಗಳು ಯಾರಿಂದ ಬೇಕಾದರೂ ಆಗುತ್ತದೆ ಮತ್ತು ಇದಕ್ಕೆ ಯಾವುದೇ ಅಸಾಧಾರಣ ಶಕ್ತಿಯ ಅವಶ್ಯವಿರುವುದಿಲ್ಲ. ಆದರೆ ಈ ಮೇಲ್ಕಂಡ ವಚನದಲ್ಲಿ “ಪರ ಸಹಾಯ ಮಾಡುವಂಥ ಗುಣವನ್ನು” ಪ್ರಸ್ತಾಪಿಸಿರುವಂತೆ, ಜನರು ಈ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದು, ಇದು ಮತ್ತೊಬ್ಬರಿಗೆ ಸಹಾಯ ಮಾಡಲು ದೇವರಿಂದ ಕೊಡಲ್ಪಟ್ಟಿರುತ್ತದೆ. ಇಂತಹ ಜನರು ಪ್ರತಿಯೊಂದು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಗತ್ಯತೆಯಿದೆ. ನಾವೆಲ್ಲರೂ ಇಂತಹ ಸೇವೆಗಾಗಿ ದೇವರಿಂದ ಸಜ್ಜುಗೊಳ್ಳಲು ಹಂಬಲಿಸಬೇಕು.

ಇಂತಹ “ಪರ ಸಹಾಯ ಮಾಡುವಂತ ಗುಣವಿರುವವರು” ಯಾರೆಂದರೆ - ಬಲಹೀನರಿಗೆ ಮತ್ತು ಸಭೆಗಳಲ್ಲಿ ಕಂಗಾಲಾಗಿರುವವರಿಗೆ “ಆತ್ಮೀಕವಾಗಿ ಅಸರೆ ಮತ್ತು ನೆರವನ್ನು ನೀಡುವವರಾಗಿದ್ದಾರೆ”. ಪವಿತ್ರಾತ್ಮನು ಸಹಾಯಕನೆಂದು ಕರೆಯಲ್ಪಡುತ್ತಾನೆ (ಯೋಹಾನ :14:16) ಆತನು ತನ್ನ ಸಹಾಯ ಎಂಬ ಕೆಲಸವನ್ನು ಅದೃಶ್ಯನಾಗಿ ನಮಗೆ ಮಾಡುತ್ತಾನೆ. ಕ್ರಿಸ್ತನ ದೇಹದಲ್ಲಿ “ಪರ ಸಹಾಯ ಮಾಡುವಂಥದ್ದು” ಸಹ ಪ್ರಧಾನ ಸಹಾಯಕನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪವಿತ್ರಾತ್ಮನು ಮೌನವಾಗಿ ಮತ್ತು ಹಿಂಬದಿಯಲ್ಲಿ ಮಾಡುತ್ತಾನೆ. ಯಾವುದೇ ತೋರಿಸುವಿಕೆಯಿಲ್ಲದೇ ಅಥವಾ ಆಡಂಬರವಿಲ್ಲದೇ ಮಾಡುತ್ತಾನೆ ಮತ್ತು ಯಾವುದೇ ರೀತಿಯಾಗಿ ಕಾಣಿಸಿಕೊಳ್ಳುವುದನ್ನು ಅಥವಾ ಗುರುತಿಸಲ್ಪಡುವಿಕೆಯನ್ನು ಹುಡುಕುವುದಿಲ್ಲ. ಅವರು ಸಹೋದರರಾಗಿರಬಹುದು ಅಥವಾ ಸಹೋದರಿಯರಾಗಿರಬಹುದು.

ಇಂತಹ ವಿಶ್ವಾಸಿಗಳು ದೇವರಿಂದ ಕೊಡಲ್ಪಟ್ಟಂತಹ ಅನನ್ಯ ವರವಾಗಿದ್ದು, (ಅನನ್ಯ ಅಂದರೆ ರೋಗಿಗಳನ್ನು ವಾಸಿ ಮಾಡುವ ರೀತಿ) - ಇಂತಹ ವಿಶ್ವಾಸಿಗಳು, ಸಭೆಯಲ್ಲಿ ಯಾರು ಅನುಮಾನಗಳು ಮತ್ತು ಭಯಗಳೊಟ್ಟಿಗೆ ಹೊರಾಡುತ್ತಿರುತ್ತಾರೋ ಮತ್ತು ಹೇಳಿಕೊಳ್ಳಲಾರದಂಥ ಸ್ಥಿತಿಯಲ್ಲಿ ಬಳಲುತ್ತಿರುವಂತ ಜನರ ಕಡೆಗೆ ಸೂಕ್ಷತೆಯುಳ್ಳವರಾಗಿರುತ್ತಾರೆ. ಅವರು ಸಹಾಯ ಮಾಡಬೇಕೆಂಬ ಆಹ್ವಾನಕ್ಕೆ ಕಾಯುವುದಿಲ್ಲ. ಆದರೆ ಆತ್ಮನಿಂದ ನಡೆಸಲ್ಪಡುತ್ತಾರೆ. ಅವರು ಸುಮ್ಮನೆ ಹಾಗೇ ಹೋಗಿ ಕಷ್ಟಪಡುತ್ತಿರುವಂತಹ ಜನರನ್ನು ಸೇರಿಕೊಳ್ಳುತ್ತಾರೆ ಮತ್ತು ಆ ಜನರನ್ನು ಪ್ರೋತ್ಸಾಹದ ಮತ್ತು ನಂಬಿಕೆಯ ನುಡಿಯಿಂದ ಸಹಾಯಿಸುತ್ತಾರೆ. “ಅವರು ತಮಗೆ ತಾವೇ ಯಾರ ಮೇಲೂ ಒತ್ತಡ ಹೇರುವುದಿಲ್ಲ”. ಆದರೆ ಅವರು ಪ್ರತಿನಿತ್ಯ ದೇವರಿಂದ ಕೇಳಿಸಿಕೊಳ್ಳುತ್ತಾರೆ ಮತ್ತು ”ಅವರು ಬಳಲಿ ಹೋದವರನ್ನು ಮಾತುಗಳಿಂದ ಸುಧಾರಿಸುತ್ತಾರೆ (ಯೆಶಾಯ 50:4).

ಇಂತಹ ವರವುಳ್ಳ ಜನರು ನಮ್ಮ ಈ ದಿನಗಳಲ್ಲಿ ಹೆಚ್ಚಿನ ಅಗತ್ಯತೆಯಲ್ಲಿದ್ದಾರೆ. ಏಕೆಂದರೆ ಪ್ರತಿಯೊಂದು ಸಭೆಗಳಲ್ಲಿ ನಿರುತ್ಸಾಹಗೊಂಡಂತವರು, ಮಂಕಾದಂತವರುಗಳು, ಚಿಂತೆಗೀಡಾದವರು ಮತ್ತು ಜೀವಿತದ ಹೋರಾಟಗಳಲ್ಲಿ ನಿತ್ರಾಣಗೊಂಡಿರುವಂತವರುಗಳು ತುಂಬಾ ಜನ ಇರುತ್ತಾರೆ. ಅವರ ಬಳಿಗೆ ಹೋಗಿ, ಅವರನ್ನು ಪ್ರೋತ್ಸಾಯಿಸುವ ಅವಶ್ಯವಿದೆ. ಆದ್ದರಿಂದ, ಅನೇಕ ಸಹೋದರರು ಮತ್ತು ಸಹೋದರಿಯರು ಈ ವರಕ್ಕಾಗಿ ದೇವರನ್ನು ಹುಡುಕಬೇಕು. ಇದರಿಂದ ಅವರು ಕ್ರಿಸ್ತನ ದೇಹವನ್ನು ಆಶೀರ್ವದಿಸಲು ಸಾಧ್ಯವಿದೆ. ಈ ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ, ಸದ್ದಿಲ್ಲದೇ ಮತ್ತು ಮೌನವಾಗಿ, ಅವರು ಪ್ರತಿನಿತ್ಯ ದೇವರಿಂದ ಕೇಳಿಸಿಕೊಳ್ಳುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಮತ್ತು ಅವರು ಧೀನತೆಗಾಗಿ ಮತ್ತು ಅಸಾಧಾರಣವಾಗಿ ಸಜ್ಜುಗೊಳ್ಳುವುದಕ್ಕಾಗಿ ದೇವರನ್ನು ಹುಡುಕಬೇಕು,.

ಕೊರಿಂಥ ಸಭೆಯಲ್ಲಿ, ಸ್ತೆಫನನು ಮತ್ತು ಆತನ ಮನೆಯವರು ಈ ವರವನ್ನು ಹೊಂದಿದ್ದರು. ಅವರು “ದೇವ ಜನರಿಗೆ ಸೇವೆ ಮಾಡುವುದಕ್ಕಾಗಿ ಕೈ ಹಾಕಿದರೆಂದು ನೀವು ಬಲ್ಲಿರಷ್ಟೇ.” (1 ಕೊರಿಂಥದವರಿಗೆ 16:15 - ಸರಳ ಭಾಷಾಂತರ)

ಇಲ್ಲಿರುವಂತಹ ಸೇವೆಯನ್ನು ನೀವೆಲ್ಲರೂ ಬಯಸಬೇಕು. ನಿಮ್ಮ ಸಭೆಯಲ್ಲಿ ದೇವರು ನಿಮ್ಮನ್ನು “ಪರರಿಗೆ ಸಹಾಯ ಮಾಡುವಂತೆ” ದೇವರು ನಿಮ್ಮನ್ನು ಸಜ್ಜುಗೊಳಿಸಲಿ.

“ಸಹೋದರರೇ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಸಹಾಯ ಮಾಡಿರಿ”. (1 ಥೆಸಲೋನಿಕದವರಿಗೆ 5:14)

“ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಸಹಾಯ ಮಾಡಬೇಕು ಮತ್ತು ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು ಅಂದನು”. (ಅಪೊಸ್ತಲರ ಕೃತ್ಯಗಳು 23:35).