WFTW Body: 

ಇಸ್ರಾಯೇಲ್ ರಾಷ್ಟ್ರದ ಚರಿತ್ರೆಯುದ್ದಕ್ಕೂ ದೇವರು ಅವರ ಮೇಲೆ ತನ್ನ ಬಹುಕಾಲ ಬಾಳುವ ಪ್ರೀತಿಯನ್ನು ಚಿತ್ರಿಸಲು ಪ್ರಯತ್ನಿಸಿದರು. ದೇವರು ಅವರನ್ನು ತನ್ನ ಶಾಶ್ವತ ಪ್ರೇಮದಿಂದ ಪ್ರೀತಿಸಿದರು (ಯೆರೆಮೀಯನು 31:3 ; ಧರ್ಮೋ. 4:37). ದೇವರು ಅವರಿಗೆ ಹೇಳಿದ್ದೇನೆಂದರೆ, ದೇವರು ಅವರಿಂದ ಉತ್ತರವಾಗಿ ಅವರ ಪ್ರೀತಿಯನ್ನು ಬಯಸಿದರು. (ಧರ್ಮೋ. 6:5 ).ಆದರೆ ಅವರು ನಮ್ಮ ಹಾಗೆಯೇ ಇದ್ದವರಾದ್ದರಿಂದ, ಅವರು ಪದೇ ಪದೇ ದೇವರ ಪ್ರೀತಿಯ ಬಗ್ಗೆ ಸಂದೇಹ ಪಟ್ಟರು. ಆದಾಗ್ಯೂ ದೇವರು ಅವರನ್ನು ಪ್ರೀತಿಸುವುದನ್ನು ಮುಂದುವರಿಸಿದರು. ದೇವರು ತಮ್ಮನ್ನು ಮರೆತ್ತಿದ್ದಾರೆ ಎಂದವರು ದೂರಿದಾಗ, ಯೆಶಾಯನು 49:15 ರಲ್ಲಿ ದೇವರು ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ" ಎಂಬ ಸೌಮ್ಯ ಮಾತುಗಳಲ್ಲಿ ಉತ್ತರಿಸಿದರು. ತನ್ನ ದೊಡ್ಡ ಮಕ್ಕಳ ಬಗ್ಗೆ ಒಬ್ಬ ತಾಯಿಯು ಯಾವಾಗಲೂ ಯೋಚಿಸಲಿಕ್ಕಿಲ್ಲ. ಆದರೆ ಮೊಲೆಯುಣಿಸುವ ಒಂದು ಮಗುವಿದ್ದರೆ, ಅದರ ಬಗ್ಗೆ ತಾನು ಚಿಂತಿಸದೇ ಇರುವ ಕ್ಷಣಗಳು ಬಹುಶ: ಇರಲಿಕ್ಕಿಲ್ಲ. ಅವಳು ಮಲಗಲು ಹೋಗುವಾಗ, ಅವಳ ಕೊನೆಯ ಯೋಚನೆ ಅವಳ ಪಕ್ಕ ಮಲಗುವ ಆ ಮಗುವಿನ ಬಗ್ಗೆಯಾಗಿರುತ್ತದೆ. ಅವಳಿಗೆ ರಾತ್ರಿ ಎಚ್ಚರಿಕೆಯಾದಾಗ ಅವಳು ಎಲ್ಲಾ ಸರಿಯಾಗಿದೆಯೋ ಎಂದು ಮತ್ತೆ ಆ ಮಗುವಿನ ಕಡೆ ನೋಡುತ್ತಾಳೆ. ಅವಳು ಬೆಳಿಗ್ಗೆ ಎದ್ದಾಗ ಅವಳ ಪ್ರಥಮ ಯೋಚನೆ ಹಾಲುಣಿಸುವ ಆ ಮಗುವಿನ ಬಗ್ಗೆ. ತನ್ನ ಕಂದನ ಬಗ್ಗೆ ಒಬ್ಬ ತಾಯಿಯ ಮಮತೆ ಅಂಥದ್ದು. ಅದೇ ರೀತಿ ತನ್ನವರ ಬಗ್ಗೆ ತಾನು ಮಮತೆಯುಳ್ಳುವನಾಗಿದ್ದೇನೆಂದು ದೇವರು ಹೇಳುತ್ತಾರೆ.

ಹೊಶೇಯ ಪ್ರವಾದಿಯ ಪುಸ್ತಕವೂ ಇದನ್ನು ಒತ್ತಿ ಹೇಳುತ್ತದೆ. ಹೊಶೇಯನು ತನ್ನ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ನೋವುಭರಿತ ಅನುಭವಗಳು, ಇಸ್ರಾಯೇಲಿಗೆ ದೇವರಿಗಿದ್ದ ಮನೋಭಾವನೆಯ ದೃಷ್ಟಾಂತವಾಗಿದೆ. ಅಪನಂಬಿಗಸ್ಥ ಹೆಂಡತಿಯ ಮೇಲೆ ನಂಬಿಗಸ್ಥ ಗಂಡನ ಪ್ರೀತಿಯು ಇರುವಂತೆ, ತನ್ನ ಪ್ರೀತಿ ಇರುತ್ತದೆ ಎಂದು ದೇವರು ಹೇಳುತ್ತಾರೆ. ಮೊಂಡುತನದ ವಧುವಿಗೆ ದೈವಿಕ ಪ್ರಿಯಕರನ ಅಗಾಧ ನಂಬಿಗಸ್ಥತೆಯ ಸತ್ಯವನ್ನು ತೋರಿಸಲು ದೇವರು ಪರಮಗೀತದ ಪುಸ್ತಕವನ್ನು ಬೈಬಲಿನಲ್ಲಿ ಸೇರಿಸಿದ್ದಾರೆ.

ನಮ್ಮ ನಂಬಿಕೆಯು ಈ ಸತ್ಯದ ಮೇಲೆ ಭದ್ರವಾಗಿ ತಳವೂರಬೇಕಾಗಿದೆ - ನಮ್ಮೊಡನೆ ದೇವರ ವ್ಯವಹಾರಗಳು ಪ್ರೀತಿಯ ಮೇಲೆ ಹೊಂದಿಕೊಂಡಿವೆ. ಚೆಫನ್ಯನು 3:17 ನ "ತನ್ನ ಪ್ರೀತಿಯಲ್ಲಿ ಮುಣುಗಿ ಮೌನವಾಗಿರುವನು" ಎಂಬ ಮಾತುಗಳು ಈ ರೀತಿಯಾಗಿ ಅನುವಾದಿಸಲ್ಪಟ್ಟಿವೆ: "ಅವನು ಮೌನವಾಗಿ ಪ್ರೀತಿಯಿಂದ ನಿನಗಾಗಿ ಯೋಜಿಸುತ್ತಿದ್ದಾನೆ". ನಮ್ಮ ಜೀವನವನ್ನು ಪ್ರವೇಶಿಸುವ ಪ್ರತಿಯೊಂದೂ ದೇವರು ನಮಗಾಗಿ ಮೌನವಾಗಿ ಯೋಜಿಸುವ ಹೃದಯದಿಂದ ಬರುತ್ತೆದೆಂಬುದನ್ನು ನಾವು ಮನಗಾಣುತ್ತೇವೆಯೇ? ನನ್ನ ಹಾಗೂ ನಿನ್ನ ಜೀವನದಲ್ಲಿ ಬಂದ ಪ್ರತಿಯೊಂದು ಕಷ್ಟ ಹಾಗೂ ಸಮಸ್ಯೆಯನ್ನು ನಮ್ಮ ಅಂತಿಮ ಒಳಿತಿಗಾಗಿ ಯೋಜಿಸಲಾಗಿತ್ತು. ನಮ್ಮ ಯೋಜನೆಗಳನ್ನು ದೇವರು ನಾಶ ಮಾಡುವಾಗ, ನಾವು ದೇವರ ಅತ್ಯುತ್ತಮವಾದುದನ್ನು ಕಳಕೊಳ್ಳುವುದರಿಂದ ನಮ್ಮನ್ನು ತಪ್ಪಿಸುವುದಕ್ಕೋಸ್ಕರ. ಅದನ್ನು ನಾವು ಜಗತ್ತಿನಲ್ಲಿ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾರೆವು. ಆದರೆ, ದ್ವಿತೀಯ ಕಾರಣಗಳಿಲ್ಲ, ಎಲ್ಲವೂ ಪ್ರೀತಿಮಯ ದೇವರ ಕೈಗಳಿಂದಲೇ ಬರುವುದು ಎಂದು ನಾವು ಗುರುತಿಸುವುದಾದರೆ, ಅದು ನಮ್ಮನ್ನು ಸ್ವಾಭಾವಿಕವಾಗಿ ಪೀಡಿಸುವ ಎಲ್ಲಾ ಚಿಂತೆಗಳನ್ನು, ಭಯಗಳನ್ನು ಹಾಗೂ ಕಠಿಣ ಯೋಚನೆಗಳನ್ನು ಅದು ತೆಗೆದುಬಿಡುವುದು. ವಿಶ್ವಾಸಿಗಳು ಈ ಸತ್ಯದ ಮೇಲೆ ಭದ್ರವಾಗಿ ತಳವೂರದೇ ಇರುವುದರಿಂದಲೇ, ಈ ಎಲ್ಲಾ ಚಿಂತೆಗಳು ಅವರ ಮನಸ್ಸಿನಲ್ಲಿ ಏಳುತ್ತವೆ ಹಾಗೂ ಅವರು ಬೈಬಲ್ ಉಲ್ಲೇಖಿಸುವ "ಅರ್ಥೈಸಿಕೊಳ್ಳಲಾಗದ ದೇವರ ಪ್ರೀತಿಗೆ" ಹಾಗೂ "ವರ್ಣಿಸಲಾಗದ ಮತ್ತು ಮಹಿಮೆಯಿಂದ ಕೂಡಿದ ಆನಂದ"ಕ್ಕೆ ಅವರು ಅಪರಿಚಿತರಾಗಿದ್ದಾರೆ

ಯೇಸುವಿನ ಸೇವಾಕಾರ್ಯವು ಅನೇಕ ಸಲ, ಆತನ ಕಾಲದಲ್ಲಿ ಗ್ರಂಥಗಳನ್ನು ಚೆನ್ನಾಗಿ ಅರಿತಿದ್ದ ಧಾರ್ಮಿಕ ಜನರಲ್ಲಿ ದೇವರ ಬಗೆಗಿದ್ದ ತಪ್ಪು ಕಲ್ಪನೆಗಳನ್ನು ಸರಿಪಡಿಸುವುದಾಗಿತ್ತು. ಯೇಸುವು- ರೋಗಿಗಳನ್ನು ಗುಣಪಡಿಸುವಿಕೆ, ಅಳುತ್ತಿರುವವರಿಗೆ ಅವನ ಸಾಂತ್ವನಭರಿತ ಮಾತುಗಳು, ಪಾಪದಿಂದ ಭಾರವಾದವರಿಗೆ ಅವನ ಪ್ರೀತಿಯ ಆಮಂತ್ರಣ, ತನ್ನ ಶಿಷ್ಯರಲ್ಲಿ ಅವನ ತಾಳ್ಮೆ ಹಾಗೂ ಕೊನೆಗೆ ಶಿಲುಬೆಯ ಮೇಲೆ ಅವನ ಮರಣ, ಎಲ್ಲವೂ ದೇವರ ಹೃದಯದ ಪ್ರೀತಿಯ ಸ್ವಭಾವವನ್ನು ತೋರಿಸಿತು. ತನ್ನ ಸ್ವರ್ಗೀಯ ತಂದೆಯು ಅವರನ್ನು ಪ್ರೀತಿಸುತ್ತಾನೆ ಹಾಗೂ ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾನೆಂದು ಅದೆಷ್ಟು ಸಲ ಯೇಸುವು ತನ್ನ ಶಿಷ್ಯರಿಗೆ ಒತ್ತಿ ಹೇಳಿದನು.

ತನ್ನ ತಂದೆಯನ್ನು ನಂಬದಿರುವದಕ್ಕೆ ಅದೆಷ್ಟು ಸಲ ಯೇಸುವು ಅವರನ್ನು ಗದರಿಸಿದನು.
ತಮ್ಮ ಮಕ್ಕಳಿಗೆ ಬೇಕಾದನ್ನು ಒದಗಿಸಿಕೊಡುವುದು ಪ್ರಾಪಂಚಿಕ ತಂದೆಯವರಿಗೆ ತಿಳಿದಿರುವುದಾದರೆ, ಅವರ ಪ್ರೀತಿಯ ಸ್ವರ್ಗೀಯ ತಂದೆಗೆ ಅದು ತಿಳಿದಿರಲಿಕ್ಕಿಲ್ಲ. (ಮತ್ತಾಯನು 7:9-11) ತನ್ನ ಮೊಂಡುತನದ ಹಾಗೂ ಎದುರುಬೀಳುವ ಮಕ್ಕಳ ಕಡೆಗೆ ದೇವರ ಶ್ರೇಷ್ಟವಾದ ಕ್ಷಮಿಸುವ ಪ್ರೀತಿಯನ್ನು ತೋರಿಸುವುದು ದುಂದುಗಾರ ಮಗನ ಸಾಮ್ಯದ ಉದ್ದೇಶವಾಗಿತ್ತು. ತನ್ನ ಎದುರಿಸಲಸಾದ್ಯ ತರ್ಕ, ಸಾಮ್ಯ ಹಾಗೂ ವೈಯಕ್ತಿಕ ಉದಾಹರಣೆಗಳಿಂದ ಯೇಸುವು ತನ್ನ ಜನಾಂಗದಲ್ಲಿ ದೇವರ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಪ್ರಯತ್ನಿಸಿದನು. ಕ್ರೂಜೆಗೆ ಹೋಗುವ ಮೊದಲು, ತನ್ನ ಅಂತಿಮ ಪ್ರಾರ್ಥನೆಯಲ್ಲಿ, ಜಗತ್ತು ದೇವರ ಪ್ರೀತಿಯನ್ನು ತಿಳಿದುಕೊಳ್ಳಲಿ ಎಂದು ಅವನು ಪ್ರಾರ್ಥಿಸಿದನು (ಯೋಹಾನನು 17:23) ನಿತ್ಯಕ್ಕೂ ಇರುವ ದೇವರ ವಾಕ್ಯದಲ್ಲಿ ಹಾಗೂ ಎಂದಿಗೂ ಬದಲಾಗದ ನಮ್ಮ ಮೇಲಿನ ಆತನ ಪ್ರೀತಿ - ಈ ಸತ್ಯಗಳ ಮೇಲಿನ ಭರವಸೆಗಳನ್ನು ದೇವರು ಆಳವಾಗಿ ಹಾಗೂ ನಿತ್ಯಕ್ಕೂ ನಮ್ಮ ಹೃದಯದಲ್ಲಿ ಅಚ್ಚೊತ್ತಲಿ. ಏಕೆಂದರೆ, ದೇವರ ಮೇಲಿನ ನಂಬಿಕೆಯು ಈ ನೆಲದಲ್ಲಿ ಅಲ್ಲದೆ, ಬೇರೆ ಯಾವುದರಲ್ಲೂ ಬೆಳೆಯುವುದಿಲ್ಲ.