ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮಹಿಳೆಯರಿಗೆ
WFTW Body: 

ನಾವು ಆದಿಕಾಂಡದ ಎರಡನೇ ಅಧ್ಯಾಯದಲ್ಲಿ ಓದುವುದೇನೆಂದರೆ, ಆದಾಮನು ದೇವರ ಬಳಿ ಹೋಗಿ "ಕರ್ತನೇ ನಾನು ಒಂಟಿಯಾಗಿದ್ದೇನೆ. ದಯವಿಟ್ಟು ನನಗೆ ಹೆಂಡತಿಯೊಬ್ಬಳನ್ನು ಕೊಡಬಲ್ಲೆಯಾ?" ಎಂದು ಹೇಳಿದ್ದಲ್ಲ. ದೇವರು ಮನುಷ್ಯನನ್ನು ನೋಡಿದಾಗ, ಆದಿ. 2:18ರಲ್ಲಿ, "ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು" ಎಂದು ದೇವರೇ ಹೇಳಿದ್ದು ಬಹಳ ಆಸಕ್ತಿಯುಳ್ಳದ್ದಲ್ಲವೇ?

ಆದಾಮ ಮತ್ತು ಹವ್ವಳನ್ನು ದೇವರು ಒಂದೇ ಸಲ ಒಂದೇ ಹೊತ್ತಿನಲ್ಲಿ ಸೃಷ್ಟಿಸಲಿಲ್ಲವೇಕೆ? ಅವನದನ್ನು ಬಹು ಸುಲಭವಾಗಿ ಮಾಡಬಹುದಾಗಿತ್ತು. ಅವನು ಭೂಮಿಯಿಂದ ಮಣ್ಣನ್ನು ತಗೆದುಕೊಂಡನೆಂದು ಹೇಳಲ್ಪಟ್ಟಿದೆ; ಅದೇ ರೀತಿ, ಅವರು ತಮ್ಮ ಕಣ್ಣುಗಳನ್ನು ತೆರೆದೊಡನೆಯೇ, ಅವರು ಪರಸ್ಪರ ಒಬ್ಬರನ್ನೊಬ್ಬರು ನೋಡುವಂತೆ, ಅವನು ಹವ್ವಳನ್ನೂ ಸೃಷ್ಟಿಸಬಹುದಾಗಿತ್ತು. ಮತ್ತು ಅವರಿಬ್ಬರೊಳಗೆ, ಜೀವದ ಶ್ವಾಸವನ್ನು ಊದಬಹುದಾಗಿತ್ತು. ಅವನೇಕೆ ಆದಾಮನನ್ನು ಮಾತ್ರ ಮೊದಲು ಸೃಷ್ಟಿಸಿ, ಸ್ವಲ್ಪ ಸಮಯದ ನಂತರ, ಅವನನ್ನು ನಿದ್ರೆಗೊಳಪಡಿಸಿ, ಅವನ ಪಕ್ಕೆಯ ಎಲುಬನ್ನು ಹೊರಗೆಳೆದು, ಸ್ತ್ರೀಯನ್ನು ಸೃಷ್ಟಿಸಿದನು? ಅದಕ್ಕೊಂದು ಕಾರಣವಿದೆ. ಆದಾಮ ಮತ್ತು ಹವ್ವರಿಗೆ ದೇವರು ಹೇಳಲು ಪ್ರಯತ್ನಿಸುವುದರಲ್ಲಿ ಆತ್ಮಿಕವಾದುದೆಂಬುದಿದೆ. ಆದೇನೆಂದರೆ- ಅವರಿಬ್ಬರೂ ಹೇಗೆ ಒಂದಾಗಬಹುದೆಂಬುದರ ರಹಸ್ಯ. ಆ ರಹಸ್ಯ ಏನಾಗಿತ್ತು?

ದೇವರು ಅದಾಮನನ್ನು ಸೃಷ್ಟಿಸಿ ಅವನು ತನ್ನ ಕಣ್ಣುಗಳನ್ನು ತೆರೆದಾಗ, ಅವನಿಗೆ ಕೂಡಲೇ ಜೀವ ಬಂತು. ಅವನು ಮೊದಲಿಗೆ ನೋಡಿದ್ದು ಯಾರನ್ನು? ನಿಮಗದರ ಉತ್ತರ ತಿಳಿದಿದೆ. ದೇವರು! ಅವನು ದೇವರನ್ನು ಸಂಧಿಸಿದನು. ಅವನು ದೇವರೊಡನೆ ಮಾತನಾಡಿದನು. ಆಗ ಅವನಿಗೆ ಹೆಂಡತಿಯಿರಲಿಲ್ಲ. ಕೇವಲ ಅವನು ಮತ್ತು ದೇವರು ಮಾತ್ರ. ಅವನಿಗೆ ಹೆಂಡತಿ ಸಿಕ್ಕಿದ್ದು, ಅದರ ನಂತರವೇ.

ಇದರಿಂದ, ಆದಾಮನಿಗೆ ದೇವರು ಏನನ್ನು ಕಲಿಸಲು ಪ್ರಯತ್ನಿಸುತ್ತಿದ್ದರು? ’ನಿನ್ನ ಜೀವಮಾನಕಾಲವೆಲ್ಲಾ ನಾನು ನಿನ್ನ ಜೀವನದಲ್ಲಿ ಮೊದಲಿಗನಾಗಿರಬೇಕು. ನೀನು ನಿನ್ನ ಹೆಂಡತಿಯನ್ನು ನೋಡುವ ಮೊದಲು ನನ್ನನ್ನು ನೋಡಬೇಕು. ನಿನ್ನ ಹೆಂಡತಿ ಬೆಲೆಯುಳ್ಳವಳು ಎಂದು ತಿಳಿಯುವ ಮೊದಲು ನಾನು ಬೆಲೆಯುಳ್ಳವನೆಂದು ನೀನು ತಿಳಿದುಕೊಳ್ಳಬೇಕು’. ಅದಕ್ಕಾಗಿಯೇ ಅವನು ಆದಾಮನನ್ನು ಸೃಷ್ಟಿಸಿ, ಅವನ ಹೆಂಡತಿ ಅಸ್ತಿತ್ವದಲ್ಲಿರುವ ಮೊದಲೇ, ಅವನೊಡನೆ ಅನ್ಯೋನ್ಯತೆಯಿಂದಿದ್ದನು. ಇದರಿಂದ ನಾವೇನನ್ನು ಕಲಿಯಬಹುದು? ನಿನ್ನ ಜೀವನವಿಡೀ, ನೀನು 50 ಅಥವಾ 75 ವರ್ಷ ವಿವಾಹವಾಗಿದ್ದರೂ, ಪ್ರತಿದಿನ ದೇವರು ನಿನಗೆ ಪ್ರಥಮವಾಗಿರಬೇಕು (ಮೊದಲಿಗನಾಗಿರಬೇಕು). ಅನೇಕ ಜನರು, ತಾವು ಮೊದಲು ಪ್ರೀತಿಸಿ ಮದುವೆಯಾಗಿದ್ದರೆ, ಅಂಥವರು ತಮ್ಮ ಜೀವನದಲ್ಲಿ ಪ್ರಥಮವಾಗಿ ಹೆಂಡತಿಯರೊಡನೆ ತಮ್ಮ ಜೀವನವನ್ನು ಆರಂಭಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ, ಮತ್ತೆ ಕೆಲವರಿಗೆ ಹೆತ್ತವರು ಪ್ರಥಮವಾಗಿರುತ್ತಾರೆ.

ಹವ್ವಳ ಸೃಷ್ಟಿಯನ್ನು ನಾವು ಪರಿಗಣಿಸೋಣ. ದೇವರು ಆದಾಮನನ್ನು ನಿದ್ರೆಗೊಳಪಡಿಸಿದನು ಎಂದು ಹೇಳಲ್ಪಟ್ಟಿದೆ. ವಚನ 21ರಲ್ಲಿ ಹೇಳಿದಂತೆ, ಅದೂ ಗಾಢವಾದ ನಿದ್ರೆ. ಯಾಕೆಂದರೆ ಅವನಿಗೆ ಎದ್ದೇಳಲೂ/ಎಚ್ಚರವಾಗಿರಲೂ ಆಗಲಿಲ್ಲ. ದೇವರು ಅವನ ಪಕ್ಕೆಯ ಎಲುಬೊಂದನ್ನು ಹೊರತೆಗೆದು (ಆದಿಕಾಂಡ 2:21), ಅದನ್ನು ಮಾಂಸದಿಂದ ಮುಚ್ಚಿ, ಆ ಪಕ್ಕೆಯ ಎಲುಬಿನಿಂದ ಅವನು ಸ್ತ್ರೀಯನ್ನು ಸೃಷ್ಟಿಸಿದನು. ಆ ಎಲುಬಿನಿಂದ ದೇವರು ಹವ್ವಳನ್ನು ಸೃಷ್ಟಿಸಿ, ಶ್ವಾಸವನ್ನು ಊದಿದಾಗ ಅವಳಿಗೆ ಜೀವ ಬಂತು ಮತ್ತು ಅವಳ ಕಣ್ಣುಗಳು ತೆರೆಯಲ್ಪಟ್ಟವು. ಅವಳು ಮೊಟ್ಟ ಮೊದಲಾಗಿ ನೋಡಿದ್ದು ಯಾರನ್ನು? ಆದಾಮನನ್ನಲ್ಲ. ಅವಳಿಗೆ ಆದಾಮನ ಅಸ್ತಿತ್ವದ ಬಗ್ಗೆ ತಿಳಿದೇ ಇರಲಿಲ್ಲ. ಅವಳೊಬ್ಬಳೇ ಮನುಷ್ಯ ಸೃಷ್ಟಿಯೆಂದು ಅವಳು ಯೋಚಿಸಿದಳು. ಅವಳಿಗೆ ಆದಾಮನ ಬಗ್ಗೆ ಏನೊಂದೂ ತಿಳಿದಿರಲಿಲ್ಲ. ಅವಳ ಕಣ್ಣುಗಳು ತೆರೆಯಲ್ಪಟ್ಟವು ಮತ್ತು ಅವಳು ದೇವರನ್ನು ನೋಡಿದಳು. ಆದಾಮನನ್ನು ಸೃಷ್ಟಿಸಿದ ರೀತಿಯಲ್ಲೇ. ತೋಟದಲ್ಲಿ ಬೇರೆಲ್ಲೋ ಆದಾಮನು ಗಾಢವಾದ ನಿದ್ರೆಯಲ್ಲಿದ್ದನು. ಅವನಿಗೆ ಅವಳ ಅಸ್ತಿತ್ವದ ಬಗ್ಗೆ ಮತ್ತು ಅವಳಿಗೆ ಅವನ ಅಸ್ತಿತ್ವದ ಬಗ್ಗೆ ಅರಿವಿರಲಿಲ್ಲ. ಅವಳು ದೇವರನ್ನು ಸಂಧಿಸಿದಳು. ದೇವರೇ ಅವಳೊಡನೆ ಮೊದಲು ಮಾತಾಡಿದ್ದು ಮತ್ತು ತುಂಬಾ ನಂತರವೇ ದೇವರು ಅವಳನ್ನು ಆದಾಮನಲ್ಲಿಗೆ ತಂದಿದ್ದು.

ಅದರಿಂದ, ಹವ್ವಳಿಗೆ ದೇವರೇನು ಕಲಿಸಲು ಪ್ರಯತ್ನಿಸುತ್ತಿದ್ದರು? ಆದಾಮನಿಗೆ ಕಲಿಸಲು ಪ್ರಯತ್ನಿಸುತ್ತಿದ್ದ ಪಾಠವನ್ನೇ. "ನಿನ್ನ ಜೀವನದಲ್ಲಿ ನಾನು ಮೊದಲಿಗನಾಗಿರಬೇಕು. ನೀನು ನಿನ್ನ ಗಂಡನೊಡನೆ ಅನ್ಯೋನ್ಯತೆಯಿಂದಿರುವ ಮೊದಲು, ನೀನು ನನ್ನೊಡನೆ ಅನ್ಯೋನ್ಯತೆಯಿಂದಿರಬೇಕು". ಶ್ರೇಷ್ಟವಾದ ಮದುವೆಗೆ/ದಾಂಪತ್ಯಕ್ಕೆ ದೇವರ ಯೋಜನೆಯೇನೆಂದು ನಿನಗೆ ಈಗ ಅರ್ಥವಾಗುತ್ತಿದೆಯೋ? ಆದಾಮನು ಹವ್ವಳ ಜೊತೆ ಆನ್ಯೋನ್ಯತೆಯಿಂದಿರುವ ಮೊದಲು ದೇವರೊಡನೆ ಅನ್ಯೋನ್ಯತೆಯಿಂದಿರಬೇಕಾಗಿತ್ತು. ಹವ್ವಳು ಆದಾಮನೊಡನೆ ಅನ್ಯೋನ್ಯತೆಯಿಂದಿರುವ ಮೊದಲು ದೇವರೊಡನೆ ಅನ್ಯೋನ್ಯತೆಯಿಂದಿರಬೇಕಾಗಿತ್ತು. ಅದೆಲ್ಲವೂ ಅಲ್ಲಿ ಬರೆದಿದೆ. ಆದಿಯಿಂದಲೂ ದೇವರು ಯೋಜಿಸಿದ್ದು ಇದನ್ನೇ.

ದೇವರೇ ಪತಿ ಮತ್ತು ಪತ್ನಿಯ ನಡುವೆ ಇರುವಾಗ, ಮತ್ತು ದಾಂಪತ್ಯದ ಪ್ರತಿಯೊಬ್ಬ ವ್ಯಕ್ತಿಯು ಮತ್ತು ಪಾಲುದಾರನು/ಳು ತನ್ನ ವೈಯಕ್ತಿಕ ಜೀವನದಲ್ಲಿ ದೇವರನ್ನು ಮೊದಲಾಗಿಸಲು ಕಂಡುಕೊಂಡಾಗ, ಏನಾಗುತ್ತದೆಯೆಂದು ನಿನಗೆ ತಿಳಿದಿದೆಯೇ? ಅವರು ಜೊತೆಯಾಗಿ ಒಂದಾಗಿಸಲ್ಪಡುವರು. ಈ ವಿಶ್ವದಲ್ಲಿ ಒಂದಾಗಿರಿಸುವ/ಒಟ್ಟಾಗಿರಿಸುವ ಬೃಹತ್ ಶಕ್ತಿಯೆಂದರೆ ದೇವರೊಬ್ಬರೇ. ಅವನು ಇಬ್ಬರನ್ನು ಒಟ್ಟಾಗಿ ಹಿಡಿದಿರಿಸಿದಾಗ, ಅವರನ್ನು ಪ್ರತ್ಯೇಕಿಸುವುದು ಯಾರಿಂದಲೂ ಅಸಾಧ್ಯವಾದುದು. ಸೈತಾನ, ದೆವ್ವಗಳು ಇಡೀ ಜಗತ್ತು, ಸನ್ನಿವೇಶಗಳು, ಬಡತನ, ಸಾವು ಕೂಡ ಅವರನ್ನು ಪ್ರತ್ಯೇಕಿಸದು.

ಜನರನ್ನು ಜೊತೆಯಾಗಿರಿಸಲು/ಒಂದಾಗಿರಿಸಲು ದೇವರಿಲ್ಲದಿದ್ದರೆ, ಜನರು ಬೇರೆ ಬಲಗಳಿಂದ ಒಂದಾಗಿರಿಸಲ್ಪಡುತ್ತಾರೆ. ಇತರ ಬಲಗಳು ದೇವರಷ್ಟು ಬಲಶಾಲಿಯಾಗಿಲ್ಲ/ಶಕ್ತಿಶಾಲಿಯಾಗಿಲ್ಲ. ಫ಼ೆವಿಕೊಲ್ ಎಂಬ ಅಂಟುವಸ್ತುವಿನ ಜಾಹೀರಾತನ್ನು ನೀವು ನೋಡಿದ್ದೀರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ನಾನು ನೋಡಿದ ಜಾಹೀರಾತಿನಲ್ಲಿ, ಈ ಫ಼ೆವಿಕೊಲಿನ ಬಾಟಲಿಗಳಲ್ಲಿ ಚಿತ್ರೀಕರಿಸಿರಿಸಿರುವುದೇನೆಂದರೆ, ಎರಡು ವಸ್ತುಗಳು ಅಂಟಿಸಲ್ಪಟ್ಟಿದ್ದು, ಎರಡು ಬದಿಗಳಲ್ಲಿ ಎರಡು ಆನೆಗಳು ಅವನ್ನು ಎಳೆಯಲು ಪ್ರಯತ್ನಿಸುವುದು. ಆದರೆ ಅವು ಅವನ್ನು ಪ್ರತ್ಯೇಕಿಸಲಾಗುವುದಿಲ್ಲ. ಗಂಡ ಮತ್ತು ಹೆಂಡತಿಯರು ದೇವರಿಂದ ಜೊತೆಯಾಗಿ ಒಟ್ಟಾಗಿರಿಸಲ್ಪಟ್ಟಾಗ, ಅದು ಅದರಿಂದಲೂ ಶ್ರೇಷ್ಟವಾದುದು. ಯಾವ ಆನೆಯೂ ಅವರನ್ನು ಪ್ರತ್ಯೇಕಿಸದು. ಯಾವ ದೆವ್ವಗಳೂ ಅವರನ್ನು ಪ್ರತ್ಯೇಕಿಸಲಾರರು. ಆದರೆ ಅವರಿಬ್ಬರ ಮಧ್ಯೆ ದೇವರಿರಬೇಕು. ದೇವರು ಫ಼ೆವಿಕೊಲಿಗಿಂತ, ಅರಲ್ ಡೈಟ್ ಅಥವಾ ಯಾವುದೇ ಶ್ರೇಷ್ಟವಾದ ಅಂಟಿಗಿಂತ ಶ್ರೇಷ್ಟನು. ಒಬ್ಬ ಗಂಡ ಮತ್ತು ಹೆಂಡತಿಯ ಮಧ್ಯೆ ದೇವರು ಅವರನ್ನು ಎಷ್ಟೊಂದು ದೄಢವಾಗಿ ಒಟ್ಟಾಗಿಸುವನೆಂದರೆ, ಯಾವುದೊಂದೂ ಅವರನ್ನು ಪ್ರತ್ಯೇಕಿಸದು.

ಹಾಗೆ ಗಂಡ ಮತ್ತು ಹೆಂಡತಿಯರ ನಡುವೆ ಅಥವಾ ಹೆಂಡತಿ ಮತ್ತು ಗಂಡನ ನಡುವೆ ದೇವರಲ್ಲದೆ ಬೇರೇನೂ ಮಧ್ಯೆ ಬಾರದಂತೆ, ನಾವು ಜಾಗರೂಕರಾಗಿರಬೇಕು. ಅನೇಕ ಯುವಜನರಲ್ಲಿನ ಮದುವೆಗಳಲ್ಲಿ ಅವರನ್ನು ಒಂದಾಗಿರಿಸುವ ಶಕ್ತಿ ಯಾವುದು? ಅನೇಕ ಸಲ ಅದು ಒಳ್ಳೆಯ ನೋಟ ಅಥವಾ ಸುಂದರತೆ. ಒಬ್ಬ ಹುಡುಗಿ ಸುಂದರವಾಗಿದ್ದಾಳೆಂದು ಒಬ್ಬ ಹುಡುಗ ಮದುವೆಯಾಗುತ್ತಾನೆ. ಒಳ್ಳೆಯ ನೋಟ, ಅಥವಾ ಸುಂದರತೆ ಒಂದು ಮದುವೆಯನ್ನು 50 ವರ್ಷಗಳ ಕಾಲ ಒಟ್ಟಾಗಿರಿಸದು. ಒಳ್ಳೆಯ ನೋಟಕ್ಕಾಗಿ, ಮದುವೆಯಾಗಿ, ಮೂರು ತಿಂಗಳುಗಳ ನಂತರ ಜಗಳವಾಡುವ ಜನರ ಮದುವೆಗಳನ್ನು ನೋಡಿ. ಅದು ಆಗದು. ನಾವು ಒಳ್ಳೆಯ ನೋಟದ ವಿರುದ್ಧವಲ್ಲ. ಸುಂದರವಾಗಿರುವ ಹುಡುಗಿಯನ್ನು ಮದುವೆಯಾಗು. ಆದರೆ ಅದು ಪ್ರಮುಖವಾದುದಲ್ಲ. ಅದು ಯಾವ ಮದುವೆಯನ್ನೂ/ದಾಂಪತ್ಯವನ್ನೂ ಒಂದಾಗಿರಿಸದು. ಯಾತಕ್ಕಾಗಿ ಅನೇಕ ಹುಡುಗಿಯರು ಒಬ್ಬ ಹುಡುಗನನ್ನು ಆರಿಸುತ್ತಾರೆ? ಒಳ್ಳೆಯ ಕೆಲಸ, ಒಳ್ಳೆಯ ಕುಟುಂಬ, ತುಂಬಾ ಹಣ ಇವೇ ಮುಂತಾದಕ್ಕಾಗಿ. ಅವೆಲ್ಲವು ಮದುವೆಯನ್ನು/ದಾಂಪತ್ಯವನ್ನು ಒಂದಾಗಿರಿಸುವುತ್ತವೆ ಎಂದು ನೀವು ಯೋಚಿಸುತ್ತೀರ? ಎಂದಿಗೂ ಇಲ್ಲ. ಕೆಲವು ಹುಡುಗರು ಹುಡುಗಿಯರನ್ನು ತುಂಬಾ ವರದಕ್ಷಿಣೆಗಾಗಿ ಮದುವೆಯಾಗುತ್ತಾರೆ. ಆದರೆ, ಅದು ಮದುವೆಯನ್ನು ಒಂದಾಗಿರಿಸುವುದಿಲ್ಲ. ಅದು ಅಸಾಧ್ಯ.

ಆದಿಯಿಂದಲೂ ಮದುವೆ/ದಾಂಪತ್ಯವನ್ನು ಒಂದಾಗಿರಿಸುವುದರಕ್ಕೆ ದೇವರು ತೋರಿಸಿಕೊಟ್ಟ ಮಾರ್ಗವೆಂದರೆ ಕರ್ತನನ್ನು ತಮ್ಮ ಜೀವನದಲ್ಲಿ ಮೊದಲಾಗಿರಿಸುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯು ದೇವರೊಡನೆ ಸಂಬಂಧವನ್ನಿಟ್ಟುಕೊಂಡಿರುವುದು. ಈ ಸಂಬಂಧವು ತಮ್ಮ ನಡುವಿನ ಸಂಬಂಧಕ್ಕಿಂತಲೂ ಶೇಷ್ಟವಾದುದ್ದಾಗಿರಬೇಕು. ಇನ್ನೊಂದರ್ಥದಲ್ಲಿ, ನೀನೊಬ್ಬ ಗಂಡನಾಗಿದ್ದರೆ, ನಿನ್ನ ಹೆಂಡತಿಯು ನಿನ್ನ ಪ್ರೀತಿಯಲ್ಲಿ ಪ್ರಥಮವಾಗಿರಬಾರದು. ನಿನ್ನ ಪ್ರೀತಿಯಲ್ಲಿ ಕರ್ತನು ಪ್ರಥಮನಾಗಿರಬೇಕು. ನೀನೊಬ್ಬ ಹೆಂಡತಿಯಾಗಿದ್ದರೆ, ನಿನ್ನ ಗಂಡನ ಪ್ರೀತಿಯಲ್ಲಿ ಕರ್ತನು ಪ್ರಥಮನಾಗಿರಬೇಕು ಮತ್ತು ನೀನು ದ್ವಿತೀಯಳಾಗಿರಬೇಕು. ಕರ್ತನನ್ನು ಪ್ರಥಮವಾಗಿರಿಸುವವರು, ಮತ್ತು ಬೆಳಕಿನಲ್ಲಿ ನಡೆಯಬೇಕು. ಸತ್ಯವೇದದ1 ಯೋಹಾನ 1:7ರಲ್ಲಿ ಹೇಳುವಂತೆ, "ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ..." ಮತ್ತು ಇಬ್ಬರೂ ಒಂದಾಗಿರಿಸಲ್ಪಡುತ್ತಾರೆ.

ಈಗ ಗಂಡ-ಹೆಂಡತಿಯರ ಮಧ್ಯೆ ಬರುವ ವಿಷಯಗಳಾವುವು? ಅದು ಹೆತ್ತವರಾಗಿರಬಹುದು. ಆದಿಕಾಂಡ 2:24 ಹೇಳುವುದೇನೆಂದರೆ, "ಒಬ್ಬ ಮನುಷ್ಯನು ತನ್ನ ತಂದೆ-ತಾಯಿಯನ್ನು ಬಿಡಬೇಕು. ಆಗ ಮಾತ್ರ ಅವರು ಒಂದೇ ಶರೀರವಾಗಿರುವರು". ಈ ವಾಕ್ಯದಲ್ಲಿ ಹೇಳಿರುವುದನ್ನು ಗಮನಿಸಿ: ನೀನು ಒಂದನ್ನು ಬಿಟ್ಟಾಗ ಮಾತ್ರ ಮತ್ತೊಂದರೊಡನೆ ಸೇರಿಕೊಳ್ಳಬಹುದು/ಒಂದಾಗಬಹುದು. ನೀನು ಬಿಟ್ಟುಬಿಡದೆ ಒಂದಾಗಲು/ಸೇರಲು ಪ್ರಯತ್ನಿಸಿದಾಗ, ನೀನೆಂದಿಗೂ ಒಂದಾಗಲಾರೆ/ಸೇರಲಾರೆ. ಅದು ಆಶ್ಚರ್ಯಕರವಾದುದಲ್ಲವೇ?

ಸತ್ಯವೇದದಲ್ಲಿ ಆ ಒಂದು ಆಜ್ಞೆಯು ಪಾಪವು ಈ ಜಗತ್ತಿನಲ್ಲಿ ಬರುವ ಮೊದಲು ನಮಗಾಗಿ/ನಮಗೆ ಕೊಡಲ್ಪಟ್ಟಿತು. ನಿನ್ನ ತಂದೆ ಮತ್ತು ತಾಯಿಯನ್ನು ಬಿಟ್ಟುಬಿಡು. ಮದುವೆಯಾದವರಲ್ಲಿ ನಾನು ಕೇಳಬಯಸುತ್ತೇನೆ. ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟಿದ್ದೀಯ? ನಾನು ಭೌತಿಕವಾಗಿ ಕೇಳುತ್ತಿಲ್ಲ. ಅವರು ಸಾಯುವ ದಿನದ ತನಕ ನೀನವರ ಆರೈಕೆ ಮಾಡು. ನಾವದನ್ನು ಮಾಡಲೇಬೇಕು. ನಾವು ನಮ್ಮ ತಂದೆ-ತಾಯಿಯರನ್ನು ಗೌರವಿಸಬೇಕು. ಆದರೆ ನಿನ್ನ ಮತ್ತು ನಿನ್ನ ದಾಂಪತ್ಯ ಜೀವನದ ಮಧ್ಯೆ ಅವರನ್ನು ಬರಬಿಡಬೇಡ. ಭಾವನಾತ್ಮಕವಾಗಿ ನೀನವರನ್ನು ಬಿಟ್ಟುಬಿಡಬೇಕು. ಇಷ್ಟು ವರ್ಷಗಳ ಕಾಲ ಅವರು ನಿನ್ನನ್ನು ಸಾಕೆ ಸಲಹಿದ್ದು ನಿಜ. ಆದರೆ ನೀನೀಗ ಮದುವೆಯಾಗಿದ್ದರಿಂದ, ನೀನವರನ್ನು ಬಿಟ್ಟುಬಿಡಬೇಕು. ಅನೇಕ ಗಂಡಂದಿರು ತಮ್ಮ ಪೋಷಕರಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುವುದನ್ನು ಬಿಡದಿರುವುದರಿಂದ ಅವರ ವೈವಾಹಿಕ ಜೀವನದಲ್ಲಿ ಗೊಂದಲವಿದೆ. ಹಲವಾರು ಹೆಂಡತಿಯರು ತಮ್ಮ ಪೋಷಕರಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುವುದನ್ನು ಬಿಟ್ಟಿಲ್ಲ; ಅದರಿಂದಲೇ ಅವರು ತಮ್ಮ ಗಂಡಂದಿರೊಡನೆ ಒಂದಾಗಿಲ್ಲ.

ಇದೊಂದು ದುರಂತ. ಕರ್ತನು ಪ್ರಥಮವಾಗಿರದೆ ಸತಿಪತಿಯರ ಮಧ್ಯೆ ಪೋಷಕರಿದ್ದು (ತಂದೆ-ತಾಯಿಯರಿದ್ದು) ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಕೆಲವು ಸಲ ಬಹುಶ ನಿನ್ನ ಕೆಲಸ ನಿನಗೆ ಪ್ರಾಮುಖ್ಯವಾದುದು. ಆದರೆ, ದೇವರನ್ನು ಹೊರತುಪಡಿಸಿ, ಬೇರೇನೂ - ಹಣವಾಗಿರಬಹುದು ಅಥವಾ ಹಲವಾರು ವಿಷಯಗಳಲ್ಲಿ ತೊಡಗಿಸಿಕೊಂಡಿರುವುದು, ಅಥವಾ ಗಂಡ-ಹೆಂಡತಿಯರ ಮಧ್ಯೆ ಬರುವ ಮಕ್ಕಳಾಗಿರಬಹುದು. ಆದರೆ ಎಂದಿಗೂ ಹಾಗಾಗಬಾರದು.

ಸಂತೋಷದಾಯಕ ಮದುವೆಗೆ ಉತ್ತರವೇನು? ಪ್ರತಿಯೊಂದು ಪರಿಸ್ಥಿತಿಯಲ್ಲಿ ದೇವರನ್ನು ಮೊದಲಾಗಿಸಿ, ಬೆಳಕಿನಲ್ಲಿ ನಡೆ ಮತ್ತು ನೀನು ನಿನ್ನ ಬಗ್ಗೆನೇ ನ್ಯಾಯತೀರ್ಪು ಕೊಡು. ಮತ್ತು ನಿನ್ನ ಮತ್ತು ನಿನ್ನ ವೈವಾಹಿಕ ಪಾಲುದಾರನ ಮಧ್ಯೆ/ನಡುವೆ ನಿಮ್ಮನ್ನು ಒಂದಾಗಿಸುವ ಮತ್ತು ಯಾರೂ ನಾಶಪಡಿಸಲಾಗದ ಬಲವನ್ನು ನೀನು ಕಂಡುಕೊಳ್ಳುವಿ.