ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಯೂದನು ಬರೆದ ಪತ್ರಿಕೆಯ ೧೧ನೇಯ ವಚನದಲ್ಲಿ ಕಾಯಿನನ ಮಾರ್ಗವನ್ನು ಹಿಡಿದವರು ಎಂದು ಹೇಳುವಾಗ, ಇವರು ಯಾರು? ಇವರು ತಮ್ಮ ಸಹೋದರರಿಗೆ ಒಳ್ಳೆಯದನ್ನು ಬಯಸದೇ ಇರುವವರು. ಕಾಯಿನನ ಮುಖ್ಯ ತಪ್ಪು ಏನಾಗಿತ್ತೆಂದರೆ ತನ್ನ ಸಹೋದರ ಹೇಬೆಲನಿಗೆ ಒಳ್ಳೆಯದನ್ನು ಬಯಸಲಿಲ್ಲ, ಇದನ್ನು ಆದಿಕಾಂಡ 4:7 ರಲ್ಲಿ ಓದುತ್ತೇವೆ. ನಾವೂ ಕೂಡ ಇದರ ವಿಷಯದಲ್ಲಿ ನಮ್ಮನ್ನು ಪರೀಕ್ಷಿಸಿ ಕೊಳ್ಳೋಣ.

ನೀನು ನಿಜವಾಗಿಯೂ ನಿನ್ನ ಸಹೋದರ, ಸಹೋದರಿಯರ ಮತ್ತು ಅವರ ಕುಟುಂಬದ ಬಗ್ಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೀಯಾ? ಇನ್ನುಳಿದ ಬೇರೆ ಸಭೆಗಳಲ್ಲಿರುವ ಸಹೋದರರ ಬಗ್ಗೆಯೂ ಕೂಡ ನಿಮ್ಮ ಭಾವನೆ ಇದೇ ರೀತಿಯಾಗಿದೆಯಾ? ಇನ್ನು ಸ್ವಲ್ಪವಾಗಿ ನಮ್ಮ ಕ್ಷೇತ್ರವನ್ನು ಹೆಚ್ಚಿಸೋಣ ಅದು ಹೇಗೆಂದರೆ- ನಿಮಗೆ ಪರಿಚಯ ಇರುವ ಜನರು, ನಿಮ್ಮ ಸಂಬಂಧಿಗಳು, ನಿಮ್ಮ ವೈರಿಗಳು ಮತ್ತು ನಿಮಗೆ ಯಾವುದೋ ಒಂದು ರೀತಿಯಲ್ಲಿ ಹಾನಿ ಮಾಡಿರುವವರ ಬಗ್ಗೆ ನೀವು ಒಳ್ಳೆಯದನ್ನು ಬಯಸುವವರಾಗಿದ್ದಿರಾ?

ಇನ್ನೊಬ್ಬರಿಗೆ ಅವರ ಜೀವಿತದಲ್ಲಿ ಏನಾದರೂ ಒಳ್ಳೆಯದಾದಲ್ಲಿ ನಿಮ್ಮ ಮನಸ್ಸಿನಲ್ಲಿ ಇದರ ಪ್ರತಿಕ್ರಿಯೆ ಸಂತೋಷದಿಂದ ತುಂಬುತ್ತದೆಯಾ ಅಥವಾ ಮನಸ್ಸು ಕಳವಳಗೊಂಡಿರುತ್ತದೆಯಾ? ಇದೇ ರೀತಿಯಲ್ಲಿ ಇನ್ನೊಬ್ಬರ ಜೀವಿತದಲ್ಲಿ, ಅವರ ಕುಟುಂಬದಲ್ಲಿ ಏನಾದರೂ ಹಾನಿ ಸಂಭವಿಸಿದರೆ ನಿಮ್ಮ ಮನಸ್ಸಿನಲ್ಲಿ ಅಸಂತೋಷ ವಾಗಿದೆಯಾ ಅಥವಾ ಸಂತೋಷ ಬಂದಿದೆಯಾ?

ಇಂತಹ ಭಾವನೆಗಳು ಏನು ಪ್ರಕಟಿಸುತ್ತವೆ? ಅದೇನೆಂದರೆ ಆದಾಮನ ಗುಣಲಕ್ಷಣಗಳು ನಿಮ್ಮಲ್ಲಿ ಇನ್ನೂ ಜೀವಿತವಾಗಿವೆ. ನೀವು ನಿಮ್ಮಲ್ಲಿ ಪ್ರಾಮಾಣಿಕರಾಗಿದ್ದರೆ, ಕಾಯಿನನ ಮಾರ್ಗದಲ್ಲಿ ನಡಿಯುತ್ತಾ ಇದ್ದಿರಾ ಅಥವಾ ಇಲ್ಲವೋ ಇದು ಬೇಗನೆ ತಿಳುವಳಿಕೆಗೆ ಬರುವದು. ಪಾಪಮಯವಾದ ಆದಾಮನ ಜೀವಿತ ನಿಮ್ಮಲ್ಲಿ ಕಂಡ ತಕ್ಷಣವೇ ಅದನ್ನು ಸಾಯಿಸಬೇಕು(ತೆಗೆದು ಹಾಕಬೇಕು). ನಿಮ್ಮಲ್ಲಿ ಪವಿತ್ರಾತ್ಮದ ಬೆಂಕಿ ಮತ್ತು ಅಭಿಷೇಕ ಯಾವಾಗಲೂ ನೆಲೆಗೊಳ್ಳಬೇಕೆಂದರೆ ಇದನ್ನು ಮಾಡುವದು ಬಹಳ ಅವಷ್ಯ.

ಗೋದಿಯ ಕಾಳು ಭೂಮಿಯ ಮೇಲೆ ಬಿದ್ದು ಸಂಪೂರ್ಣವಾಗಿ ಸತ್ತಾಗ ಮಾತ್ರ ಬಹಳ ಅಲಕೊಡುತ್ತದೆ. ಒಬ್ಬನು ತನ್ನಲ್ಲಿ ಸಂಪೂರ್ಣವಾಗಿ ಸಾಯುವಾಗ, ಎಂಥದೇ ವಿಷಯಕ್ಕೆ, ಯಾರು ಏನೇ ಮಾಡಿದರು ಅಥವಾ ಮಾಡದೆಯಿದ್ದರೂ ಅಸಮಾಧಾನ ಮಾಡಿಕೊಳ್ಳುವದಿಲ್ಲ. ಆತನು ಎಲ್ಲರಿಗೂ ಒಳ್ಳೆಯದನ್ನೆ ಬಯಸುತ್ತಾನೆ. ಆತನು ಯಾವುದೇ ವಿಷಯಕ್ಕೂ ಸಿಟ್ಟುಗೊಳ್ಳುವದಿಲ್ಲ ಮತ್ತು ಜಗಳಕ್ಕೆ ಇಳಿಯುವದಿಲ್ಲ. ತನ್ನ ಮೇಲೆ ಕನಿಕರ ಪಟ್ಟು, ತನಗಾಗಿ ಕಣ್ಣೀರು ಸುರಿಸುವದಿಲ್ಲ. ಏಕೆಂದರೆ ಸಂಪೂರ್ಣವಾಗಿ ಸತ್ತಿರುವ ವ್ಯಕ್ತಿ, ತನ್ನ ಸ್ವಂತ ಸಮಾಧಿಯಲ್ಲಿರುವಾಗ ಅಳುವುದು ಹೇಗೆ!!

ಆದಿಕಾಂಡ 4:6 ರಲ್ಲಿ ಹೇಳುವ ಪ್ರಕಾರ ಕಾಯಿನನ ಮುಖವು ಕೋಪದಿಂದ ಆತನ ತಮ್ಮನ ಮೇಲೆ ಒಳ್ಳೆಯ ವಿಚಾರ ಇಲ್ಲದಿರುವದರಿಂದ ಕಳೆಗುಂದಿತ್ತು. ಹೆಚ್ಚಾಗಿ ನಾವೂ ಕೂಡ ನಮ್ಮ ಹೃದಯದಲ್ಲಿರುವ ವಿಚಾರಗಳು ನಮ್ಮ ಮುಖದ ಮೇಲೆ ತೋರಿಸುತ್ತವೆ ಇದು ನಮಗೆ ತಿಳಿಯದಿರಬಹುದು. ನೀವು ಒಳ್ಳೆಯದನ್ನೆ ಇನ್ನೊಬ್ಬರಿಗೆ ಬಯಸಿದಾಗ ನಿಮ್ಮ ಮುಖ ದೇವರ ಸಂತೋಷದಿಂದ ಹೊಳೆಯುವದು.

ಬಹಳ ವಿಶ್ವಾಸಿಗಳು ಕಾಯಿನನ ಮಾರ್ಗದಲ್ಲಿ ನಡೆಯುತ್ತಾ ಇದ್ದಾರೆ. ಇವರ ಕಪಟವಾದ ನಗು ಮತ್ತು ದೇವರಿಗೆ ಸ್ತೋತ್ರ ಹೇಳುವ ತುಟಿಗಳ ಕೆಳಗೆ ತಮ್ಮ ಸಹೋದರರ ವಿರುದ್ಧ ಕೆಟ್ಟದಾದ ಅಭಿಪ್ರಾಯ(ಮನೋಭಾವ) ಹೊಂದಿರುತ್ತಾರೆ.

ಜನರು ನಿಮ್ಮ ವಿರುದ್ಧ ತಿರುಗಿ ಕೇಡು ಮಾಡುವಾಗ, ದೇವರು ಅಂಥವರನ್ನು ಉಪಯೋಗಿಸಿ ನಿಮ್ಮ ಹೃದಯದಲ್ಲಿ ಏನಿದೆ ಎಂದು ತಿಳಿಸುತ್ತಾನೆ. ನೀವು ಅವರನ್ನು ಪ್ರೀತಿಸದಿದ್ದರೆ ದೇವರ ಗುಣಲಕ್ಷಣಗಳಲ್ಲಿ ನೀವು ಪಾಲು ಹೊಂದಿಲ್ಲ ಎಂದರ್ಥವಾಗುತ್ತದೆ. ಏಕೆಂದರೆ ದೇವರ ಗುಣಲಕ್ಷಣಗಳಲ್ಲಿ ತನ್ನ ವೈರಿಗಳನ್ನೂ ಕೂಡ ಪ್ರೀತಿಸುವುದಾಗಿದೆ. ಯೇಸು ಇಸ್ಕರಿಯೂತ ಯೂದನಿಗೂ ಕೂಡ ಒಳ್ಳೆಯದನ್ನೆ ಬಯಸಿದನು.

ದೇವರು ಎಲ್ಲರಿಗೂ ಹೆಚ್ಚಾದ ಒಳ್ಳೆಯದನ್ನೆ ಬಯಸುತ್ತಾನೆ. ಸುವಾರ್ತೆಯೆನೆಂದರೆ ನಾವೂ ಕೂಡ ಈ ಗುಣದಲ್ಲಿ ಪಾಲು ಹೊಂದ ಬೇಕೆನ್ನುವದೆ ಆಗಿದೆ.