ಪ್ರಕಟಣೆ 15:3 ರಲ್ಲಿ ನಾವು ಓದುವುದೇನೆಂದರೆ, ಅವರು ದೇವರ ಸೇವಕನಾದ ಮೋಶೆಯ ಹಾಡನ್ನು ಮತ್ತು ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ, ‘ಸರ್ವಶಕ್ತನಾಗಿರುವ ದೇವರಾದ ಕರ್ತನೇ ನಿನ್ನ ಕ್ರೀಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿದ್ದಾರೆ? ಯಾಕೆಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು’
ಹಳೆಯ ಒಡಂಬಡಿಕೆಯಲ್ಲಿ ಮೋಶೆಯ ಎರಡು ಹಾಡುಗಳ ಬಗ್ಗೆ ಹೇಳಲ್ಪಟ್ಟಿದೆ - ಒಂದು ವಿಮೋಚನಕಾಂಡ 15:1-18, ಇಸ್ರಾಯೇಲ್ಯರೂ ಕೆಂಪು ಸಮುದ್ರವನ್ನು ದಾಟಿಯಾದ ಮೇಲೆ ಫರೋಹ ಮತ್ತು ಅವನ ಸೈನ್ಯವು ಅದರಲ್ಲಿ ಮುಳುಗಿದಾಗ. ಮೋಶೆಯು ಆಗ ಹಾಡಿದ್ದೇನೆಂದರೆ, "ನಾನು ಕರ್ತನಿಗೆ ಈ ಹಾಡನ್ನು ಹಾಡುತ್ತೇನೆ; ಆತನು ಜಯಶಾಲಿಯಾದನು; ಕುದುರೆಯನ್ನೂ (ಕುದುರೆಯ) ಸವಾರರನ್ನು ಸಮುದ್ರದಲ್ಲಿ ದೊಬ್ಬಿದ್ದಾನೆ." ಪ್ರಕ. 6 ರಲ್ಲಿ ಕ್ರಿಸ್ತವಿರೋಧಿಯು ಬಿಳಿ ಕುದುರೆಯ ಮೇಲಿರುವವನೆಂಬುದಾಗಿ ಚಿತ್ರಿಸಲ್ಪಟ್ಟಿದ್ದಾನೆ. ಜಯಶಾಲಿಯಾದವರು ಇಲ್ಲಿ ಕುದುರೆ ಮತ್ತು ಕುದುರೆ ಸವಾರನನ್ನು ದೊಬ್ಬಿದಕ್ಕಾಗಿ ದೇವರನ್ನು ಸ್ತುತಿಸುವುದನ್ನು ನಾವು ಕಾಣುತ್ತೇವೆ.
ಹರ್ಮಗೆದೋನಿನ ಅಂತಿಮ ಯುದ್ಧದಲ್ಲಿ, ಕ್ರಿಸ್ತ ವಿರೋಧಿ ಮತ್ತು ಅವನ ಸೈನ್ಯವು ಇಸ್ರಾಯೇಲಿಗೆ ಬಂದು ಅದರ ಮೇಲೆ ದಾಳಿ ಮಾಡುವುದು. ಆ ಸಮಯದಲ್ಲಿ, ತನ್ನ ಸಂತರೊಡನೆ ಯೇಸುಕ್ರಿಸ್ತನು ಇಳಿದು ಬರುವನು. ಅವನ ಪಾದಗಳು ಓಲಿವ್ ಬೆಟ್ಟದ ಮೇಲೆ ನಿಲ್ಲುವುವು. ಮತ್ತು ಅವನು ಕ್ರೈಸ್ತವಿರೋಧಿಯ ಸೈನ್ಯವನ್ನು ನಾಶಪಡಿಸುವನು. ಸ್ವತ: ಹೋರಾಡದೆ, ದೇವಜನರು ಅದೆಲ್ಲವನ್ನು ನೋಡುವರು ಮತ್ತು ಆ ಜಯದಲ್ಲಿ ಪಾಲುಗಾರರಾಗುವರು.
ಇದೇ ರೀತಿ ಇಂದೂ ನಾವು ನಮ್ಮ ಜಯವನ್ನು ಜಯಿಸಬೇಕು. ನಾವು ಮಾನವೀಯ ಅಸ್ತ್ರಗಳಿಂದ ಯುದ್ಧಗಳನ್ನು ಜಯಿಸುವುದಿಲ್ಲ. ನಾವು ಸುಮ್ಮನಿದ್ದು ದೇವರನ್ನು ನಂಬುತ್ತೇವೆ ಮತ್ತು ದೇವರು ನಮ್ಮ ವೈರಿಗಳನ್ನು ನಾಶಪಡಿಸುತ್ತಾನೆ. ಆದ್ದರಿಂದ, ದೇವರಲ್ಲಿ ನಂಬಿಕೆಯಿರುವವರು, ಇಂದೂ ಮೋಶೆಯ ಹಾಡನ್ನು ಹಾಡಬಹುದು!! ನಮ್ಮ ಜೀವನದ ಹೋರಾಟಗಳಲ್ಲಿ ನಾವು ಮೋಶೆಯ ಹಾಡನ್ನು ಹಾಡಬಹುದು. ನಾವು "ಸುಮ್ಮನಿದ್ದು" ನಮ್ಮ ವೈರಿಗಳಿಗೆ ದೇವರು ಮಾಡುವುದೆಲ್ಲವನ್ನು ನಾವು ನೋಡಬಹುದು.
ಮೋಶೆಯ ಎರಡನೆಯ ಹಾಡು ಧರ್ಮೋ. 31:30 ರಿಂದ 32-43 ತನಕ ಇದೆ. ಅಲ್ಲಿಯೂ ಅವನು ಹಾಡುವುದೇನೆಂದರೆ, "ಓ ಎಲ್ಲಾ ಜನಾಂಗಗಳೇ ಆತನ ಜನರ ಸಂಗಡ ಹರ್ಷಿಸಿರಿ; ಆತನು ತನ್ನ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುತ್ತಾನೆ; ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ತನ್ನ ದೇಶಕ್ಕೋಸ್ಕರವೂ ತನ್ನ ಜನರಿಗೋಸ್ಕರವೂ ಕರುಣೆಯುಳ್ಳವನಾಗಿರುವನು ಎಂಬುದೇ." (ಧರ್ಮೋ. 32:43).
ಈ ಎರಡೂ ಹಾಡುಗಳಲ್ಲಿ ನಾವು ಒಂದು ಸತ್ಯವನ್ನು ನೋಡುತ್ತೇವೆ: ದೇವಜನರು ತಮ್ಮ ವೈರಿಗಳ ಮೇಲೆ ದ್ವೇಷ ಸಾಧಿಸುವುದಿಲ್ಲ. ಅವರು ಹಿಂದೆ ನಿಂತಿರುತ್ತಾರೆ ಮತ್ತು ದೇವರೇ ಅವರಿಗಾಗಿ ಹೋರಾಡುತ್ತಾನೆ ಮತ್ತು ದ್ವೇಷ ಸಾಧಿಸುತ್ತಾನೆ.
ಒಂದು ದಿನ ಮಹಿಮೆಯಲ್ಲಿ ದೇವರ ಕಿನ್ನರಿಗಳೊಂದಿಗೆ ಹಾಡುವಂತೆ, ಈ ಹಾಡನ್ನು ನಾವು ಈಗ ಕಲಿಯಬೇಕಾದ ಅಗತ್ಯವಿದೆ. ನಮ್ಮ ದೈನಂದಿನ ಪರಿಸ್ಥಿತಿಗಳು ನಾವು ಈ ಹಾಡನ್ನು ಕಲಿಯುವ ಹಾಡು ಅಭ್ಯಾಸವಾಗಿವೆ.
ಜಯಶಾಲಿಗಳು ಹಾಡುವುದೇನೆಂದರೆ, ದೇವರ ದಾರಿಗಳು ಪರಿಪೂರ್ಣವಾಗಿವೆ. ಸ್ವರ್ಗದಲ್ಲಿ ನಾವು ಹಾಡುವುದೇನೆಂದರೆ, "ಯೇಸುವು ಎಲ್ಲವನ್ನೂ ಒಳ್ಳೆಯದನ್ನಾಗಿ ಮಾಡಿದ್ದಾನೆ". ಅಂದು(ಆ ದಿನ) ದೇವರು ಭೂಮಿಯಲ್ಲಿ ನಮ್ಮನ್ನು ನಡೆಸಿದ ರೀತಿಯ ಬಗ್ಗೆ ನಾವು ತಿರುಗಿ ನೋಡಿದಾಗ, ನಾವು ಕಂಡುಕೊಳ್ಳುವುದೇನೆಂದರೆ, ಎಲ್ಲವೂ, ಹೌದು ಎಲ್ಲವೂ ನಮ್ಮ ಅತ್ಯುತ್ತಮಕ್ಕಾಗಿಯೇ ದೇವರಿಂದ ಯೋಜಿಸಲ್ಪಟ್ಟಿತ್ತು. ಆದರೆ ನಂಬಿಕೆಯ ಮನುಷ್ಯನ ಆ ದಿನದ ತನಕ ಕಾಯಬೇಕಾಗಿಲ್ಲ. ಆವನು ಅದನ್ನು ಈಗಲೇ ನಂಬುತ್ತಾನೆ ಮತ್ತು ಅದು ಈಗಲೇ ಅವನಿಗೆ ತಿಳಿದಿದೆ. ಅವನು ದೇವರು ಅವನಿಗೆ ಎಲ್ಲವನ್ನೂ ವಿವರಿಸಿ ಭೂಮಿಯಲ್ಲಿ ನಡೆದೆಲ್ಲದರ ಕಾರಣಗಳನ್ನು ವಿವರಿಸಿ ಹೇಳುವ ತನಕ ಕಾಯಬೇಕಾಗಿಲ್ಲ. ಆತನು ಈಗಲೇ ಹಾಡುವುದೇನೆಂದರೆ, "ಕರ್ತನೇ! ನಿನ್ನ ಮಾರ್ಗ(ರೀತಿ)ಗಳು ಪರಿಪೂರ್ಣವಾಗಿವೆ!" ಎಂದು.