ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಪುರುಷರಿಗೆ
WFTW Body: 

ಯೋಬ, ಅಧ್ಯಾಯ 26-31 ರಲ್ಲಿ ಇತರರಿಗೆ ನೆರವಾಗಲು ತಾನು ತನ್ನ ಜೀವನದಲ್ಲಿ ಮಾಡಿದ ಅನೇಕ ಒಳ್ಳೆಯ ಕೆಲಸಗಳ ಪಟ್ಟಿಯನ್ನು ಯೋಬನು ಕೊಡುತ್ತಾನೆ.ನಾವು ಈ ಅಧ್ಯಾಯಗಳನ್ನು ಓದುವಾಗ, ಯೋಬನಿಗೆ ದೇವರು ಮತ್ತು ಅವರ ದಾರಿಗಳ ಬಗ್ಗೆ ಹಾಗೂ ಬೈಬಲ್ ಇಲ್ಲದಿದ್ದ ಹಾಗೂ ಪವಿತ್ರಾತ್ಮನು ಮನುಷ್ಯನೊಳಗೆ ವಾಸಿಸದ ಕಾಲದಲ್ಲಿ ತಾನು ಜೀವಿಸಿದ ಉನ್ನತ ಜೀವನದ ಬಗ್ಗೆ ಅವನಿಗಿದ್ದ ಆಳವಾದ ತಿಳುವಳಿಕೆಯನ್ನು ನೋಡಲು ನಮಗೆ ಆಶ್ಚರ್ಯವಾಗುತ್ತದೆ. ಈ ಅಧ್ಯಾಯಗಳಲ್ಲಿನ ಕೆಲವು ವಿಷಯಗಳನ್ನು ನಾವು ನೋಡುವುದು ಒಳ್ಳೆಯದು. ಏಕೆಂದರೆ, ಅವು ನಾವು ನಾಚಿಕೊಳ್ಳುವಂತೆ ಮಾಡುತ್ತವೆ ಹಾಗೂ ನಾವು ಇನ್ನೂ ಉನ್ನತ ದರ್ಜೆಯ ಜೀವನವನ್ನು ಇಂದು ಜೀವಿಸಲು ನಮಗೆ ಆಹ್ವಾನ ನೀಡುತ್ತವೆ.

ಅವನು ಈ ರೀತಿ ಹೇಳಲು ಆರಂಭಿಸುತ್ತಾನೆ. ಚಿನ್ನಕ್ಕಾಗಿ ಆಳವಾಗಿ ಅಗೆಯಲು ಆದರೆ ಜ್ಞಾನವನ್ನು ಕಂಡುಕೊಳ್ಳದಿರಲು ಮನುಷ್ಯನು ಎಷ್ಟೊಂದು ಮೂರ್ಖನು (27:1,12,13). ಅವನು ಮತ್ತೆ ಈ ರೀತಿ ಹೇಳುತ್ತಾನೆ - "ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವುದೇ ಗ್ರಹಿಕೆ" (28:28) ಸೊಲೊಮನನು 1000 ವರ್ಷಗಳ ನಂತರ ಜ್ಞಾನೋಕ್ತಿಗಳು 9:10 ರಲ್ಲಿ ಇದನ್ನೇ ಹೇಳಿದನು. ಸಂಶಯವಿಲ್ಲದೆ, ಯೋಬನ ಪುಸ್ತಕವನ್ನು ಓದಿದ್ದರಿಂದಲೇ ಅವನಿಗೆ ಆ ತಿಳುವಳಿಕೆ ಬಂದಿರಬೇಕು. ಅಧ್ಯಾಯ 29 ರಲ್ಲಿ ಯೋಬನು ತಾನು ಬಡವರಿಗೆ, ಆನಾಥರಿಗೆ, ವಿಧವೆಯರಿಗೆ, ಕುರುಡ, ಕುಂಟ ಹಾಗೂ ಅಗತ್ಯವಿದ್ದವರಿಗೆ ನೆರವಾಗಿ, ದೇವರೊಡನೆ ಸ್ನೇಹದಿಂದ ಬಾಳಿದ ತನ್ನ ಹಿಂದಿನ ಜೀವನದ ಬಗ್ಗೆ ಹೇಳುತ್ತಾನೆ. ಅಧ್ಯಾಯ (27:1,12,13).ಅಧ್ಯಾಯ 30 ರಲ್ಲಿ ತಾನು ಇಷ್ಟೆಲ್ಲ ಒಳ್ಳೆಯದನ್ನು ಮಾಡಿದ್ದಾಗ್ಯೂ ತಾನು ಈಗ ಕಷ್ಟಪಡುತ್ತಿದ್ದೇನೆ ಹಾಗೂ ದೇವರು ನನ್ನನ್ನು ಇಷ್ಟು ಕೆಳಮಟ್ಟಕ್ಕೆ ತಂದಿದ್ದಾರಲ್ಲ ಎಂದು ದೇವರ ಬಗ್ಗೆ ಅವನು ದೂರುತ್ತಾನೆ.

ಅಧ್ಯಾಯ 31ರಲ್ಲಿ ತನ್ನ ಜೀವನದ ನೀತಿವಂತಿಕೆ ಬಗ್ಗೆ ಅವನು ಮಾತನಾಡುತ್ತಾನೆ.

ಹೆಂಗಸರನ್ನು ತನ್ನ ಕಣ್ಣಿನಿಂದ ಮೋಹಿಸದಿರಲು ಅವನು ಜಾಗರೂಕನಾಗಿದ್ದನು (ವಚನ 1). ಯೇಸುವು ಮತ್ತಾಯ 5 ರಲ್ಲಿಹೇಳಿದ ಈ ಪಾಪದ ಬಗ್ಗೆ ಅವನಿಗೆ 2000 ವರ್ಷಗಳ ಹಿಂದೆಯೇ ಅರಿವಿತ್ತು. ಅವನು ಯಾವುದೇ ತಪ್ಪಿಲ್ಲದೆ, ಸಮಗ್ರತೆಯ ಹಾದಿಯಲ್ಲಿ ನಡೆದಿದ್ದನು (ವಚನ 5,6). ಅವನು ಯಾವತ್ತೂ ತನ್ನ ಹೆಂಡತಿಗೆ ಅಪನಂಬಿಗಸ್ಥನಾಗಿ ನಡೆದಿರಲಿಲ್ಲ(ವಚನ 9-12), ಅವನು ತನ್ನ ಸೇವಕರಿಗೆ ದಯಾವಂತನಾಗಿದ್ದನು (ವಚನ 13-15), ಅವನು ಬಡ ಬಗ್ಗರಿಗೆ ಮತ್ತು ವಿಧವೆಯರಿಗೆ ನೆರವಾಗಿ ಅನಾಥರನ್ನು ತನ್ನ ಮಕ್ಕಳಂತೆ ಬೆಳೆಸಿದ್ದನು (ವಚನ 16-23), ಅವನು ಬಂಗಾರದಲ್ಲಿ ನಂಬಿಕೆಯಿಟ್ಟಿರಲಿಲ್ಲ ಹಾಗೂ ಮೂರ್ತಿ ಆರಾಧಕನಾಗಿರಲಿಲ್ಲ (ವಚನ 24-28), ತನ್ನ ವೈರಿಗಳು ಸೋಲಿಸಲ್ಪಟ್ಟಾಗ ಅವನು ಸಂತೋಷ ಪಡಲಿಲ್ಲ (ವಚನ 29,30). ಅವನು ಅಪರಿಚಿತರಿಗೆ ಶುಶ್ರೂಷೆ ಮಾಡಿದನು (ವಚನ 31,32). ಅವನು ತಪ್ಪು ಮಾಡಿದಾಗಲೆಲ್ಲಾ ಅದನ್ನು ನಿವೇದಿಸಿದನು (ವಚನ 33). ಅವನು ಜನರ ಕೀಳರಿಮೆಯ ಬಗ್ಗೆ ಹೆದರದೆ ಇದ್ದನು (ವಚನ 34, ಅವನು ತನ್ನ ಜಮೀನನ್ನೂ ಚೆನ್ನಾಗಿ ನೋಡಿಕೊಂಡನು (ವಚನ 38-40). ತನಗೆ ಉತ್ತರಿಸಲು ಅವನು ದೇವರನ್ನು ಮೊರೆಯಿಡುತ್ತಾನೆ (ವಚನ 35).

ಯೋಬನು ಎಂಥಹ ದೈವೀಕ ಮನುಷ್ಯನಾಗಿದ್ದನೆಂಬುದನ್ನು ನಾವು ಈ ವಚನಗಳಲ್ಲಿ ಕಾಣಬಹುದು. ಅವನಿಗೆ ತನ್ನ ಜೀವನದ ಅನೇಕ ಕ್ಷೇತ್ರಗಳ ಬಗ್ಗೆ ಅರಿವಿತ್ತು ಹಾಗೂ ಅವನು ಅತ್ಯಂತ ಸಹಾಯಕಾರಿ ವ್ಯಕ್ತಿಯಾಗಿದ್ದನು. ಆದರೂ ಒಂದು ವಿಷಯದ ಬಗ್ಗೆ ಅವನಿಗೆ ಅರಿವಿರಲಿಲ್ಲ: ಅದೇ ಆತ್ಮಿಕ ಗರ್ವ. ತನ್ನ ದೈವಿಕತನದ ಬಗೆಗಿನ ಗರ್ವ. ದೇವರು ಯೋಬನನ್ನು ಪ್ರೀತಿಸಿದರು ಹಾಗೂ ಆವನು ಈ ಭೂಮಿಯನ್ನು ತ್ಯಜಿಸುವುದರ ಮೊದಲು ಅವನಿಗೆ ದೀನತೆಯ ಗುಣವಿರಬೇಕೆಂದು ದೇವರು ನಿಶ್ಚಯಿಸಿದರು. ಆದ್ದರಿಂದ, ಯೋಬನ ಮೇಲಿನ ಅತೀವ ಪ್ರೀತಿಯಿಂದ, ಅವನನ್ನು ದೀನ ಹಾಗೂ ದೈವೀಕನನ್ನಾಗಿ ಮಾಡುವುದಕ್ಕೋಸ್ಕರ, ದೇವರು ಈ ಕಠಿಣ ಕಷ್ಟಗಳನ್ನು ಅವನು ಅನುಭವಿಸುವಂತೆ ಮಾಡಿದರು.

ದೈವೀಕನಾದ ಅಪೋಸ್ತಲ ಪೌಲನು ಗರ್ವಿಷ್ಟನಾಗುವ ಅಪಾಯದಲ್ಲಿದ್ದಾಗ, ದೇವರು ಪೌಲನೂ ಕಷ್ಟವನ್ನು ಅನುಭವಿಸುವಂತೆ ಮಾಡಿದನು. ಅವನಿಗೆ ಅವನ ಶರೀರದಲ್ಲಿ ಸೈತಾನನ ದೂತನಾದ ಮುಳ್ಳನ್ನು ಕೊಟ್ಟನು (2 ಕೊರಿ. 12:7). ಯೋಬನಿಗೂ ಸೈತಾನನ ದೂತನೊಬ್ಬನಿದ್ದನು. ಅವನ್ಯಾಕೆ ಇದ್ದನೆಂದು, ಪೌಲನಿಗೆ ತಿಳಿದಿತ್ತು, ಆದರೆ, ಯೋಬನಿಗೆ ಅದು ತಿಳಿದಿರಲಿಲ್ಲ. ಅದಕ್ಕಾಗಿಯೇ, ಅನೇಕ ದೈವಿಕ ಮನುಷ್ಯರು ದೀನರಾಗಿ ಆ ಮೂಲಕ ತನ್ನ ಕೃಪೆಯನ್ನು ಅವರ ಮೇಲೆ ತಾನು ಸುರಿಸಲು ದೇವರು, ಕಷ್ಟ, ಇತರರು ತಪ್ಪಾಗಿ ತಿಳಿದುಕೊಳ್ಳುವುದು, ವಿರೋಧ ಹಾಗೂ ಸಂಕಟದ ಮೂಲಕ ನಡೆಸುತ್ತಾರೆ, ಯಾಕೆಂದರೆ, ದೇವರು ದೀನರಿಗೆ ಮಾತ್ರ ತನ್ನು ಕೃಪೆಯನ್ನು ಕೊಡುತ್ತಾರೆ. ದೂರಿದಕ್ಕಾಗಿ ನಾವು ಯೋಬನನ್ನು ದೂಷಿಸುವಂತಿಲ್ಲ. ಅವನಿಗೆ ಬೈಬಲ್, ಪವಿತ್ರಾತ್ಮನು ತನ್ನೊಳಗೆ ವಾಸಿಸಿರುವುದು, ಮತ್ತು ಉತ್ತೇಜಿಸುವ ಒಬ್ಬ ಸಹೋದರನಾಗಲಿ ಇರಲಿಲ್ಲ. ಆದರೆ ಪೌಲನು ಎಂದೂ ದೂರಲಿಲ್ಲ, ನಾವೂ ದೂರಬೇಕಾಗಿಲ್ಲ.