ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ಪುರುಷರಿಗೆ
WFTW Body: 

ಕ್ರಿಸ್ತನ ಸಭೆಯಲ್ಲಿ ಯಾರೂ ‘ಅತೀ ಅವಶ್ಯಕ’ ರಲ್ಲ. ನಾವು ಇಲ್ಲದೆಯೇ ದೇವರ ಕೆಲಸವು ಸುಲಭವಾಗಿ ಸಾಗುತ್ತದೆ. ನಿಜವಾಗಿ, ತಾವು ಅತ್ಯವಶ್ಯಕರೆಂದು ಆಲೋಚಿಸಿಕೊಳ್ಳುವವರು ಇಲ್ಲದೆಯೇ, (ದೇವರ ಕೆಲಸವು) ಉತ್ತಮವಾಗಿ ಸಭೆಯು ಸಾಗಬಲ್ಲದು! ನಾವು ನಿರಂತರವಾಗಿ ಈ ನಿಜಾಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾರಾದರೂ ತನ್ನನ್ನು ‘ಅತ್ಯವಶ್ಯಕ’ವಾದವರೆಂದು ಆಲೋಚಿಸಿಕೊಂಡಿರುತ್ತಾನೋ, ಅಂಥವರ ಆತ್ಮವನ್ನು ದೀನವಾಗಿಸಲು ಒಂದು ನಿಯಮದ ಬಗ್ಗೆ ಒಂದು ಸಲ ಓದಿದ್ದೆ. ಆತನು ಒಂದು ಬಕೇಟನ್ನು ನೀರಿನಿಂದ ತುಂಬಿಸಿ ತನ್ನ ಕೈಯನ್ನು ಮಣಿಕಟ್ಟಿನವರೆಗೆ ಮುಳುಗಿಸಿ ನಂತರ ಹೊರಗೆ ತೆಗೆದ ನಂತರ, ಆ ನೀರಿನ ಅಳತೆ ಆತನು ಹೋದನಂತರವೂ ಅಷ್ಟೇ ಇರುವಂಥದ್ದಾಗಿದೆ!! ನಮಗಿರುವ ವರಗಳು ಸಭೆಗೆ ಉಪಯೋಗಕರವಾಗಿದೆ; ಆದರೆ ಯಾರೂ ಅತ್ಯವಶ್ಯಕವಲ್ಲ.

ನಮಗೆ ದೇವರು ಯಾವುದೇ ಸಮಯದಲ್ಲಿ ಕರೆದಾಗ ಮರೆಯಲ್ಲಿ ಹಿಂದಕ್ಕೆ ಸರಿಯಲು ಮನಸ್ಸುಳ್ಳವರಾಗಿರಬೇಕು. ಆದರೆ ‘ತನಗಾಗಿ ಬದುಕುವ’ (ಸ್ವಕೇಂದ್ರೀಕೃತಗೊಂಡ ಕ್ರೈಸ್ತನು) ಕ್ರೈಸ್ತ ಸೇವಕನು ಇದನ್ನು  ಎಂದಿಗೂ ಸ್ವೀಕರಿಸುವುದಿಲ್ಲ. ಆತನ ಸ್ಥಾನವನ್ನು ಸಾಧ್ಯವಾಗುವವರೆಗೆ ಹೆಚ್ಚಿನ ಕಾಲ ಉಳಿಸಿಕೊಳ್ಳಲು ಬಯಸುತ್ತಾನೆ. ಇಂತಹ ಅನೇಕ ‘ಕ್ರೈಸ್ತ ನಾಯಕರು’ ದೇವರ ಕಾರ್ಯವನ್ನು ಅಡ್ಡಿಮಾಡಿ, ಇಂದು ಅವರ ‘ಸಿಂಹಾಸನದಲ್ಲಿ’ ಕೊಳೆತುಹೋಗುತ್ತಿದ್ದಾರೆ. ಅವರ ಸ್ಥಾನವನ್ನು ಬೇರೆಯವರು ತೆಗೆದುಕೊಳ್ಳುವಂತೆ ತೆರೆಯ ಹಿಂದೆ ಮರೆಯಾಗಿ ಇರುವುದೆಂದರೇನು ಎಂಬುದು ಅವರಿಗೆ ಗೊತ್ತಿಲ್ಲ. ಉತ್ತರಾಧಿಕಾರಿ ಇಲ್ಲದೆಯೇ ಯಶಸ್ಸು ವಿಫಲ ಎಂಬುದನ್ನು ಬಹುಶಃ ನೀವು ಕೇಳಿರಬಹುದು. ಯೇಸು ಇದನ್ನು ಅರಿತಿದ್ದನು. ಮತ್ತು ಆತನ ಕಾರ್ಯವನ್ನು ಸಾಗಿಸಲು ಜನರಿಗೆ ತರಬೇತು ಕೊಡುತ್ತಿದ್ದನು. ೩ ೧/೨ (ಮೂರುವರೆ) ವರ್ಷ, ಆತನ ಕಾರ್ಯಗಳಲ್ಲಿ ಇತರರು ನಾಯಕತ್ವ ತೆಗೆದುಕೊಳ್ಳಲೆಂದು ಆತನು ಜನರಿಗೆ ತರಬೇತು ನೀಡುತ್ತಿದ್ದನು. ನಾವು ಅನುಸರಿಸಲು ಎಂಥಾ ಉಧಾಹರಣೆ ಇದು!

  

ಕೆಲಸವನ್ನು ಸಾಗಿಸಲು, ಜನರಿಗೆ ತರಬೇತು ನೀಡುವುದರ ಅವಶ್ಯಕತೆಯನ್ನು ಪೌಲನು ಗುರುತಿಸಿಕೊಂಡಿದ್ದನು (ತಿಳಿದಿದ್ದನು). ೨ ತಿಮೋಥಿ ೨:೨ ರಲ್ಲಿ , ಪೌಲನು ತಿಮೋಥಿಗೆ ‘ನೀನು ನನ್ನಿಂದ ಅನೇಕ ಸಾಕ್ಷಿಗಳ ಮುಂದೆ ಕೇಳಿದ ಉಪದೇಶವನ್ನು, ಇತರರಿಗೆ ಬೋಧಿಸ-ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು” ಎಂದು ಹೇಳಿದನು. ಪೌಲನು “ನೀನು ಈ ಸಂಪತ್ತನ್ನು ಇನ್ನೊಬ್ಬರಿಗೆ ಒಪ್ಪಿಸಿತ್ತೇನೆ ಎಂಬುದಾಗಿ ಭರವಸೆ ಕೊಡು. ನಿನಗಿಂತ ಕಿರಿಯರು ಮುಂದೆ ಬರಲು ಎಂದಿಗೂ ಅಡ್ಡಿಮಾಡಬೇಡ”, ಎಂಬುದಾಗಿ ಹೇಳಿದ್ದು, ಪರಿಣಾಮಕಾರಿಯಾಗಿತ್ತು. ವ್ಯವಹಾರ ಮಾಡುವವರು ಸಹ ‘ಉತ್ತರಾಧಿಕಾರಿಯಿಲ್ಲದೆ ಯಶಸ್ಸು ವಿಫಲವಾದದ್ದು’  ಎಂಬ ಮೂಲತತ್ವವನ್ನು ಅರಿತಿದ್ದಾರೆ. ಆದರೆ ತುಂಬಾ ಕ್ರೈಸ್ತನಾಯಕರು ಇದನ್ನು ತಿಳಿದಿಲ್ಲ. ನಿಜವಾಗಿಯೂ, ‘ಬೆಳಕಿಗೆ ಸಂಭಂದಿಸಿದವರಿಗಿಂತ, ಲೋಕಕ್ಕೆ ಸಂಬಂಧಿಸಿದವರು ಅವರ ತಲೆಮಾರಿನಲ್ಲಿ ಜ್ಞಾನಿಗಳಾಗಿದ್ದಾರೆ!!

  

ಇದು ನಿಜಕ್ಕೂ ಸ್ವಕೇಂದ್ರೀಕೃತವಾಗಿರುವುದಲ್ಲದೇ ಮತ್ತೇನೂ ಇಲ್ಲ. ಈ ಸ್ವಕೇಂದ್ರೀಕೃತವಾಗಿರುವಂಥದ್ದು- ಒಬ್ಬ ಮನುಷ್ಯನು ತಾನು ಏನು ಮಾಡುತ್ತಾನೋ ಅದಕ್ಕಿಂತ ಉತ್ತಮವಾಗಿ ಮಾಡಬಲ್ಲ ಯಾರೋ ಒಬ್ಬ ಕಿರಿಯರ ಮೇಲೆ ಹೊಟ್ಟೆಕಿಚ್ಚು ಪಡುವಂತೆ ಮಾಡುತ್ತದೆ. ‘ದೇವರು ಹೇಬೇಲನನ್ನು ಸ್ವೀಕರಿಸಿದನು’ ಎಂಬ ನಿಜಾಂಶದ ಬಗ್ಗೆ ಕಾಯಿನನು ಹೊಟ್ಟೆಕಿಚ್ಚು ಪಟ್ಟನು. ಒಂದುವೇಳೆ ಹೇಬೇಲನು ಹಿರಿಯವನಾಗಿದ್ದರೆ, ಇದನ್ನು ಅವನು ಸಹಿಸಿಕೊಳ್ಳಬಹುದಾಗಿತ್ತು. ತನ್ನ ‘ತಮ್ಮನು’ ತನಗಿಂತ ಉತ್ತಮ ಎಂಬ ಸತ್ಯವು , ಆತನನ್ನು ಸಾಕಷ್ಟು ಘೋರವನ್ನಾಗಿ ಮಾಡಿತು; ಮತ್ತು  ಅವನು ಹೇಬೆಲನನ್ನು ಕೊಂದನು.

 

ಯೋಸೇಫ ಮತ್ತು ಆತನ ಸಹೋದರರ ವಿಷಯದಲ್ಲಿ ಸಹ ಇದನ್ನು ನೋಡಬಹುದು; ಯೋಸೇಫನು ದೈವೀಕ ಪ್ರಕಟಣೆಗಳನ್ನು ಹೊಂದಿದನು. ಮತ್ತು ಅದು ಆತನ ಹತ್ತು  ಹಿರಿಯ ಸಹೋದರರು ಆತನ ಮೇಲೆ ಅಸೂಯೆ ಪಟ್ಟು ಆತನನ್ನು ಕೊಲ್ಲಲು ಪ್ರಯತ್ನಿಸುವಂತೆ ಮಾಡಿತು.

   

ರಾಜನಾದ ಸೌಲನು ತನಗಿಂತ ಚಿಕ್ಕವನಾದ ದಾವೀದನ ಮೇಲೆ ಅಸೂಯೆ ಪಟ್ಟನು. ಯಾಕೆಂದರೆ, ಒಬ್ಬ ಸ್ತ್ರೀಯು, ‘ಸೌಲನು ಸಾವಿರ ಮಂದಿಯನ್ನು ಕೊಂದನು; ಆದರೆ ದಾವೀದನು ಹತ್ತು ಸಾವಿರ ಮಂದಿಯನ್ನು ಕೊಂದನು’ ಎಂದು ಹಾಡಿದಳು. ಆ ದಿನದಿಂದ ಸೌಲನು, ದಾವೀದನನ್ನು ಕೊಲ್ಲಬೇಕೆಂದು ನಿಶ್ಚಯಿಸಿಕೊಂಡನು. ಅಯ್ಯೋ, ಮಾನವ ಚರಿತ್ರೆಯಲ್ಲಿ - ಅದರಲ್ಲೂ ಕ್ರೈಸ್ತ ಸಭೆಯ ಚರಿತ್ರೆಯಲ್ಲಿಕೂಡ ಈ ವಿಧವಾದ ಮತ್ತಷ್ಟು ಕಥೆಗಳಿರುವುದನ್ನು ನಾವು ನೋಡುತ್ತೇವೆ! ಅಂತೆಯೇ, ಹಿರಿಯ ಫರಿಸಾಯರು, ನಜರೇತಿನ ಕಿರಿಯವನಾಗಿದ್ದ ಯೇಸುವಿನ ಜನಪ್ರಿಯತೆಗಾಗಿ ಹೊಟ್ಟೆಕಿಚ್ಚುಪಟ್ಟರು ಮತ್ತು ಯಾವುದೇ ವಿಧದಲ್ಲಿಯಾದರೂ ಆತನನ್ನು ಕೊಲ್ಲಲು ನಿಶ್ಚಯಿಸಿಕೊಂಡರು.

   

ಇನ್ನೊಂದು ಕಡೆ ಹೊಸ ಒಡಂಬಡಿಕೆಯಲ್ಲಿ ಬಾರ್ನಬ ಎಂಬ ಮನುಷ್ಯನ ಬಗ್ಗೆ ನೋಡುವುದು ಎಷ್ಟೊಂದು ಉಲ್ಲಾಸಕರವಾಗಿದೆ. ಪೌಲನನ್ನು ಯಾರೂ ಅಂಗೀಕರಿಸದೆ ಇದ್ದಾಗ, ಬಾರ್ನಬ ಒಬ್ಬ ಹಿರಿಯ ಪರಿವಾರದವನಾಗಿದ್ದು, ಹೊಸದಾಗಿ ಪರಿವರ್ತನೆಗೊಂಡಿದ್ದ ಪೌಲನನ್ನು ಕರಕೊಂಡು ಹೋದನು. ಪೌಲನನ್ನು ಅಂತಿಯೋಕ್ಯ ಸಭೆಗೆ ಕರೆತಂದು ಆತನನ್ನು ಪ್ರೋತ್ಸಾಹಿಸಿದನು. ಅಪೋಸ್ತಲರ ಕೃತ್ಯಗಳು ೧೩ನೇ ಅಧ್ಯಾಯದಲ್ಲಿ ಬಾರ್ನಬ ಮತ್ತು ಪೌಲನು ಒಟ್ಟಾಗಿ ಸೇರಿ ಸುವಾರ್ತೆ ಸಾರುವ ನಿಮಿತ್ತವಾಗಿ ಹೋಗುವುದನ್ನು ನೋಡುತ್ತೇವೆ. ಆದರೆ ಬಾರ್ನಬನು, ತನಗಿಂತ ಕಿರಿಯವನಾಗಿದ್ದ ಪೌಲನು ದೊಡ್ಡ ಕಾರ್ಯಕ್ಕಾಗಿ ದೇವರಿಂದ ಕರೆಯಲ್ಪಟ್ಟಿದ್ದಾನೆ ಎಂದು ನೋಡಿದಾಗ, ತನ್ನ ಹೆಜ್ಜೆಯನ್ನು ಹಿಂದಕ್ಕೆ ಇಡಲು ಮನಸ್ಸುಮಾಡಿ, ದೀನತೆಯಿಂದ ಮರೆಯಾದನು. ಅಪೊಸ್ತಲರ ಕೃತ್ಯಗಳಲ್ಲಿ,‘ಬಾರ್ನಬ ಮತ್ತು ಪೌಲನು’ ಎಂಬುದಾಗಿ ಇದ್ದು , ಈಗ ‘ಪೌಲನು ಮತ್ತು ಬಾರ್ನಬ’ ಎಂದು ಇರುವುದನ್ನು ಗಮನಿಸಬಹುದು. ಈ ರೀತಿಯಾಗಿ ಹಿಂದಕ್ಕೆ ಹೋಗಿ, ಇತರರನ್ನು ಗೌರವಿಸಲ್ಪಡುವಂತೆ ಮಾಡುವವರು ಬಹಳ ಕಡಿಮೆ ಜನರು ಇರುವುದರಿಂದ, ಇಂದಿನ ಕ್ರೈಸ್ತ ಸಭೆಯು ಯಾತನೆ ಪಡುತ್ತಿದೆ. ಪ್ರಾಮುಖ್ಯತೆ ಇಲ್ಲದ ವಿಷಯಗಳಿಗಾಗಿ ನಾವು ಹಿಂದಕ್ಕೆ ಹೆಜ್ಜೆ ಇಡಲು ಮನಸ್ಸುಳ್ಳವರಾಗಿದ್ದೇವೆ. ಉಧಾಹರಣೆಗೆ, ಯಾವಾಗಲಾದರೂ ನಾವು ಬಾಗಿಲಿನ ಮುಖಾಂತರ ಹೋಗುವಾಗ, ನಾವು ಹಿಂದಕ್ಕೆ ಹೋಗಿ ಬೇರೆಯವರನ್ನು ಮೊದಲು ಹೋಗುವಂತೆ ಅವಕಾಶ ನೀಡುತ್ತೇವೆ. ಆದರೆ ಕ್ರೈಸ್ತ ಸಭೆಯಲ್ಲಿ ಸ್ಥಾನ ಮತ್ತು ನಾಯಕತ್ವದ ಸಂಗತಿಗಳು ಬಂದಾಗ, ಹಿಂದಕ್ಕೆ ಹೋಗಲು ನಾವು ಸಿದ್ಧರಾಗಿರುವುದಿಲ್ಲ. ನಮ್ಮ ಸ್ವಾರ್ಥವು ಎಷ್ಟೋ ಮೋಸಕರವಾದದ್ದು. ಬೆಲೆ ಇಲ್ಲದ ವಿಷಯಗಳಲ್ಲಿ, ನಾವು ನಕಲಿ ದೀನತ್ವವನ್ನು ಹೊಂದಿದ್ದೇವೆ. ಆದರೆ ಬೆಲೆ ಇರುವಂತಹ ವಿಷಯಗಳಲ್ಲಿ ಮಾತ್ರ ನಾವು ಏನಾಗಿದ್ದೇವೆಂದು ನೋಡಬಹುದು!