ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ನಿಮ್ಮ ಸ್ಥಳೀಯ ಸಭಾ ನಾಯಕರುಗಳಲ್ಲಿ ನಿಮಗೆ ನಂಬಿಕೆ/ಭರವಸೆ ಇದ್ದಲ್ಲಿ ಎಲ್ಲಾ ವಿಷಯಗಳಲ್ಲಿ ಅವರಿಗೆ ಅಧೀನರಾಗುವುದು ಬಹು ಸುಲಭ. ಆದರೆ, ಬಹುಶ: ನಿಮ್ಮ ಸಭಾ ನಾಯಕರುಗಳಲ್ಲಿ ನಿಮಗೆ ನಂಬಿಕೆ ಇಲ್ಲದಿರಬಹುದು. ಆಗ ಎಲ್ಲಿ ನೀವು ನಿಮ್ಮ ನಾಯಕರುಗಳಿಗೆ ಅಧೀನರಾಗಬೇಕು ಮತ್ತು ಎಲ್ಲಿ ಅಧೀನರಾಗಬೇಕಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು, ಸಭಾ ವಿಷಯಗಳು ಮತ್ತು ವೈಯಕ್ತಿಕ ವಿಷಯಗಳನ್ನು ಬೇರ್ಪಡಿಸಬೇಕು.

ಸಭಾ ವಿಷಯಗಳು:

ಸಭೆಯಲ್ಲಿ ಕೂಟಗಳನ್ನು ನಡೆಸುವುದು, ಆತ್ಮಿಕವಾಗಿ ಸಭೆಯು ನಡೆಯುವ ದಿಕ್ಕು, ಆ ಸಭೆಯ ಸೇವಾಕಾರ್ಯದ ಮೇಲಿನ ಒತ್ತು/ಪ್ರಾಧಾನ್ಯತೆ, ಸಭೆಯು ಯೋಜಿಸುವ/ನಡೆಸುವ ಚಟುವಟಿಕೆಗಳು ಇತ್ಯಾದಿ., ಇತ್ಯಾದಿ. ಸಭಾ ವಿಷಯಗಳನ್ನೊಳಗೊಂಡಿವೆ. ಈ ಎಲ್ಲಾ ವಿಷಯಗಳಲ್ಲಿ ನಾಯಕರುಗಳು ಕೊಟ್ಟ ಮಾರ್ಗದರ್ಶನಗಳಿಗೆ ಯಾವಾಗಲೂ ಸಂಪೂರ್ಣ ಅಧೀನತೆ ಇರಬೇಕು. ಇದು ನೀನು ಅವರು ಪಕ್ವವಾದ ಸಹೋದರರೆಂದು ಗೌರವಿಸುತ್ತೀರಿಯೆಂದಲ್ಲ, ಅಥವಾ ನಿಮಗೆ ಅವರಲ್ಲಿ ನಂಬಿಕೆಯಿದೆಯೆಂದಲ್ಲ, ಆದರೆ, ನಿನ್ನನ್ನು ದೇವರು ಆ ಸಭೆಯಲ್ಲಿ ಇರಿಸಿದ್ದಾರೆಂಬುದು ನಿನಗೆ ಖಚಿತವಾಗಿರುವ ಪಕ್ಷದಲ್ಲಿ ಅವರು ನಿನ್ನನ್ನು ದೇವರು ಇರಿಸಿರುವ ಸಭೆಯ ಕುರುಬರಾಗಿದ್ದಾರೆ ಎಂಬ ಕಾರಣಕ್ಕಾಗಿ.

ತನ್ನ ತಂದೆಯು ತನ್ನನ್ನು ಯೋಸೆಫ್ ಮತ್ತು ಮೇರಿಯ ಮನೆಯಲ್ಲಿ ಇರಿಸಿದ್ದಾರೆಂಬ ಕಾರಣಕ್ಕಾಗಿ, ಅವರು ಅಸಂಪೂರ್ಣರಾಗಿದ್ದಾಗ್ಯೂ ಮತ್ತು ತನಗಿಂತಲೂ ಕಡಿಮೆ ಪಕ್ವವಾಗಿದ್ದಾಗ್ಯೂ, ಯೇಸುವು ಅವರಿಗೆ ಅಧೀನನಾಗಿ ನಡೆದನು. ಈ ರೀತಿ ನಜರೇತಿನ ತನ್ನ ಮೊದಲ 30 ವರ್ಷಗಳ ಕಾಲ ಅವನು ತನ್ನ ಮಾಂಸದ ಮೂಲಕ ಹೊಸ ಮತ್ತು ಸಜೀವ ದಾರಿಯನ್ನು ತೆರೆಯುವುದನ್ನು ಆರಂಭಿಸಿದನು. ಮನೆಯಲ್ಲಿ ಅಸಂಪೂರ್ಣ ಅಧಿಕಾರಿಗಳಿಗೆ ಅಧೀನರಾಗುವುದರ ಮೂಲಕ, ಹೊಸ ಮತ್ತು ಸಜೀವ ದಾರಿಯ ಮೊದಲ ಹೆಜ್ಜೆಗಳನ್ನು ಯೇಸುವು ತೆರೆದನು ಎಂಬ ವಾಸ್ತವಿಕತೆಯನ್ನು ನಾವೆಂದೂ ಮರೆಯಬಾರದು. ಇತರ ಎಲ್ಲಾ ಹೆಜ್ಜೆಗಳು ನಂತರ ಬಂದವು.

ನೀನು ಯಾವುದೇ ಸಭೆಯಲ್ಲಿ ಎಂದಿಗೂ ಜಗಳಕ್ಕೆ/ಕಲಹಕ್ಕೆ ಕಾರಣವಾಗಿರಬಾರದು. ಯಾಕೆಂದರೆ, ಅವರು ತಮ್ಮನ್ನು ಎಷ್ಟೇ ಆತ್ಮಿಕರು ಅಥವಾ ಆಸಕ್ತರು ಎಂದು ತಿಳಿದಿದ್ದರೂ, ಅಪಸ್ವರವನ್ನು ಬಿತ್ತುವವರನ್ನು ದೇವರು ದ್ವೇಷಿಸುತ್ತಾರೆ (ಜ್ಞಾನೋಕ್ತಿಗಳು 6:16-19). ದೇವರು ನೇಮಿಸಿದ ನಾಯಕತ್ವದ ವಿರೋಧ ದಂಗೆಯೇಳುವುದು ಯಾವಾಗಲೂ ಸೈತಾನಿಕವಾಗಿದೆ. ಇದು ಕೋರನ ದಾರಿಯಾಗಿದೆ (ಯೂದ. 1:11; ಅರಣ್ಯಕಾಂಡ 16), ಮತ್ತು ಅದು ಯಾವಾಗಲೂ ಗರ್ವದ ಮತ್ತು ಅಹಂಕಾರದ ಫಲವಾಗಿರುತ್ತದೆ.

ದೇವರು ನಿನ್ನನ್ನು ಒಂದು ನಿರ್ದಿಷ್ಟ ಸಭೆಯಲ್ಲಿ ಇರಿಸಿದ್ದಾರೆಂದು ನಿನಗೆ ಖಚಿತವಾಗಿಲ್ಲವೆಂದರೆ, ನೀನು ಆ ಸಭೆಯನ್ನು ಬಿಟ್ಟು ಬೇರೆ ಸಭೆಯನ್ನು ಸೇರಬೇಕೋ ಎಂಬುದನ್ನು ದೇವರ ಮುಂದೆ ನೀನು ಪರಿಗಣಿಸಬೇಕು. ಆದರೆ ನೀನು ಒಂದು ಸಭೆಯಲ್ಲಿ ಉಳಿದುಕೊಂಡು ಅಲ್ಲಿ ಗೊಂದಲವನ್ನು ಸೃಷ್ಟಿಸಬಾರದು. ಯಾಕೆಂದರೆ ದೇವರು ಅದನ್ನು ಎಂದಿಗೂ ಸಹಿಸುವುದಿಲ್ಲ.

ಯಾವುದೇ ಜವಾಬ್ದಾರಿಯಿಲ್ಲದೆ, ಉಪಾಹಾರ ಗೃಹದಲ್ಲಿ ತಿಂಡಿ ತಿನ್ನುವಂತೆ, ನೀನು ಯಾವುದೇ ಸಭೆಯಲ್ಲಿ ಸಂದರ್ಶಕನಂತಿರಬಾರದು. ಸಭೆಯು ಒಂದು ಉಪಾಹಾರಗೃಹವಲ್ಲ, ಬದಲಾಗಿ ಮನೆಯಾಗಿದೆ. ಆದ್ದರಿಂದ ಒಂದು ಸ್ಥಳೀಯ ಸಭೆಗೆ ನೀನು ಸಂಪೂರ್ಣವಾಗಿ ಸಮರ್ಪಿಸಿರಬೇಕು. ಇಲ್ಲದಿದ್ದಲ್ಲಿ ನೀನು ಆತ್ಮಿಕವಾಗಿ ಬೆಳೆಯುವುದಿಲ್ಲ. ನೀನು ಎಂದಿಗೂ ಆದರ್ಶ ಸಭೆಯನ್ನು ಕಂಡುಕೊಳ್ಳುವುದಿಲ್ಲವೆಂಬುದನ್ನು ನೆನಪಿಟ್ಟುಕೋ, ಯಾಕೆಂದರೆ ಪ್ರತಿಯೊಂದು ಸಭೆಯೂ ಅಸಂಪೂರ್ಣವಾಗಿದೆ. ಆದರೆ, ವರ್ತಮಾನದಲ್ಲಿ, ನೀನು ತಿಳಿದುಕೊಂಡಿರುವ ಪ್ರಕಾರ, ದೇವರ ವಾಕ್ಯಕ್ಕೆ ಸಮೀಪವಾಗಿರುವ ಸಭೆಯನ್ನು ನೀನು ನೋಡಿಕೋ.

ಸಭೆಯಲ್ಲಿ(ಈಗ ಇಲ್ಲದ) ಒಂದು ಹೊಸ ಪ್ರಾಧಾನ್ಯತೆಯನ್ನು ತರಬೇಕೆಂದು ನಿನಗೆ ಕೆಲವು ಸಲ ಅನಿಸಿದ್ರೆ, ಅದನ್ನು ಸಭಾಹಿರಿಯರ ಜೊತೆ ಮೊದಲು ಚರ್ಚಿಸುವುದು ಮತ್ತು ಅವರು ತೋರಿಸಿದಂತೆಯೇ ನಡೆಯುವುದು ಸಮರ್ಪಕವಾದ ಕ್ರಮ. ಅಸಮರ್ಪಕವಾದ ದಾರಿಯೆಂದರೆ, ಸಭಾಹಿರಿಯರ ಮಾರ್ಗದರ್ಶನಕ್ಕೆ ವಿರುದ್ಧವಾದ ರೀತಿಯಲ್ಲಿ ಬೋಧಿಸಿ, ನಿನ್ನ ಪ್ರಾಧಾನ್ಯತೆಯನು ತರುವುದು. ನೀನು ಸಭಾಹಿರಿಯರೊಡನೆ ಯಾವುದೇ ವಿಷಯದಲ್ಲಿ ಒಪ್ಪಿಕೊಳ್ಳದಿದ್ದಲ್ಲಿ, ಮತ್ತು ಅವರ ಹಿರಿತನಕ್ಕೆ ನೀನು ಅಧೀನರಾಗಿ ನಡೆಯದಿದ್ದಲ್ಲಿ, ಅಥವಾ ಸಭಾಹಿರಿಯರು ತಪ್ಪಾದ ದಿಕ್ಕಿನಲ್ಲಿ ಸಭೆಯನ್ನು ನಡೆಸುತ್ತಿದ್ದಾರೆಂದು ನಿನಗೆ ಅನಿಸಿದಲ್ಲಿ, ನೀನು ಯಾವತ್ತೂ ಸಭೆಯನ್ನು ಬಿಡಬಹುದು ಮತ್ತು ನಿನಗೆ ಅಗತ್ಯ ಹಾಗೂ ಪ್ರಮುಖ ಎಂದು ಅನಿಸುವ ಪ್ರಾಧಾನ್ಯತೆಯಿರುವ ಸಭೆಯನ್ನು ನೀನು ಆರಂಭಿಸಬಹುದು ಎಂಬುದನ್ನು ನೆನಪಿಡು.

ದೇವರು ನಿನ್ನೊಡನಿದ್ದರೆ, ಆವನು ಮಾರ್ಟಿನ್ ಲೂಥರ್, ಜಾನ್ ವೆಸ್ಲಿ, ವಿಲ್ಲಿಯಮ್ ಬೂತ್, ವಾಚ್ಮನ್ ನೀ, ಮತ್ತು ದೇವರ ಮಾರ್ಗದರ್ಶನದ ಪ್ರಕಾರ, ಶತಮಾನಗಳಾದ್ಯಂತ, ಅನೇಕ ಸ್ಥಳಗಳಲ್ಲಿ, ತಮ್ಮ ಮೂಲಭೂತ ಸಭೆಗಳನ್ನು ಬಿಟ್ಟು ಹೊಸ ಸಭೆಗಳನ್ನು ಆರಂಭಿಸಿದ ಅನೇಕರನ್ನು ಆಶೀರ್ವದಿಸಿದಂತೆ, ನಿನ್ನ ಪ್ರತಿಯೊಂದು ಹೆಜ್ಜೆಯಲ್ಲಿ ನಿನ್ನನ್ನು ಆಶೀರ್ವದಿಸುವನು. ಆದರೆ, ನೀನು ನಿನ್ನ ಮೊಂಡುತನತನದಿಂದ ವರ್ತಿಸುವುದಾದರೆ, ಮತ್ತು ದೇವರು ನಿನ್ನೊಡನೆ ಇಲ್ಲದಿದ್ದರೆ, ನೀನು ಥೈದನ ಮತ್ತು ಗಲಿಲಾಯದ ಯೂದನ ಹೆಜ್ಜೆಗಳನ್ನು ಅನುಸರಿಸುವಂಥಾಗುವುದು (ಅ.ಕೃ. 5:36,37) ಮತ್ತು ಸಾವಿರಾರು ಇತರರು ಈ ಇಪ್ಪತ್ತು ಶತಮಾನಗಳಲ್ಲಿ ಅನೇಕ ಹೊಸ ಚಳುವಳಿಗಳನ್ನು ಆರಂಭಿಸಿ ಕೊನೆಗೆ ಗೊಂದಲ ಮತ್ತು ಹತಾಶೆಯಲ್ಲಿ ಕೊನೆಗೊಂಡವರಂಥಾಗುವುದು.

ವೈಯಕ್ತಿಕ ವಿಷಯಗಳು:

ನೀನು ಯಾವ ಬಟ್ಟೆಯನ್ನು ಧರಿಸುವುದು, ನಿನ್ನ ಹಣವನ್ನು ಯಾವ ರೀತಿ ವ್ಯಯಿಸುವುದು, ಎಂಥಹ ರೀತಿಯ ಮನೆಯಲ್ಲಿ ನೀನು ವಾಸಿಸುವುದು, ಎಲ್ಲಿಗೆ ಅಥವಾ ಯಾವ ರೀತಿ ನೀನು ಪ್ರಯಾಣಿಸುವುದು (ವಾಯುಯಾನ ಅಥವಾ ರೈಲ್ವೇ ಪ್ರಯಾಣ) ನಿನ್ನ ಕುಟುಂಬದ ಸದಸ್ಯರು ಎಂಥಹ ಬಟ್ಟೆಯನ್ನು ಧರಿಸುವುದು, ಎಂಥಹ ಆಹಾರವನ್ನು ನೀನು ಸೇವಿಸುವುದು, ನಿಮ್ಮ ಮಕ್ಕಳಿಗೆ ಎಂಥಹ ಅಟಿಕೆಗಳನ್ನು ಖರೀದಿಸುವುದು, ನಿಮ್ಮ ಮಕ್ಕಳು ಕಂಪ್ಯೂಟರ್ ಆಟಗಳನ್ನು ಆಡುತ್ತಾರೆಯೇ ಇಲ್ಲವೇ, ನಿನ್ನ ಮಕ್ಕಳಿಗೆ ಪಕ್ಕದ ಮನೆಯ ಟಿ.ವಿ.ಯಲ್ಲಿ ಆಟದ ಕಾರ್ಯಕ್ರಮಗಳನ್ನು ನೋಡಲು ಬಿಡುವುದೋ ಇಲ್ಲವೋ, ನೀನು ಯಾವ ಕೆಲಸವನ್ನು ಮಾಡುವುದು, ಎಲ್ಲಿ ಕೆಲಸ ಮಾಡುವುದು ಇತ್ಯಾದಿ ಎಲ್ಲ ವೈಯಕ್ತಿಕ ವಿಷಯಗಳು. ಇಂಥ ಎಲ್ಲಾ ವಿಷಯಗಳಲ್ಲಿ ನೀನು ಏನು ಮಾಡಬೇಕೆಂದು ನಿನಗೆ ಅನಿಸುವುತ್ತದೆಯೋ, ಅದನ್ನು ನೀನು ಮಾಡುವುದರಲ್ಲಿ ನಿನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ನಿನಗೆ ನಿನ್ನ ಸಭಾಹಿರಿಯರಲ್ಲಿ ನಂಬಿಕೆಯಿಲ್ಲದಿದ್ದರೆ, ನೀನು ಅವರಿಗೆ ವಿಧೇಯರಾಗಿ ನಡೆಯಬೇಕಾಗಿಲ್ಲ ಅಥವಾ ಅವರೊಡನೆ ಇಂಥಹ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿಲ್ಲ. ಕೆಲ ವಿಷಯದ ಬಗ್ಗೆ ನಿನಗೆ ಸಂದೇಹವಿದ್ದರೆ, ನಿನಗೆ ಸಭಾಹಿರಿಯರಿಗಿಂಥ ಬೇರೆ ಜಾಗದಲ್ಲಿರುವ ಒಬ್ಬ ಹಿರಿಯ ಸಹೋದರನಲ್ಲಿ ನಂಬಿಕೆಯಿದ್ದರೆ, ಅವರ ಜೊತೆ ಕೂಡ ನೀನು ಚರ್ಚಿಸಬಹುದು. ಅಂಥಹ ವಿಷಯಗಳಲ್ಲಿ ಅಂತಿಮ ನಿರ್ಧಾರ ನಿನ್ನದೇ. ನಿನ್ನ ನಡವಳಿಕೆ ಅಥವಾ ನಿನ್ನ ಉಡುಪು ಅಥವಾ ನಿನ್ನ ಮಕ್ಕಳು ಸಭೆಯಲ್ಲಿ ಇತರರಿಗೆ ಎಡರು/ತೊಡಕು/ಅಡೆತಡೆಯಾಗುವುದರಲ್ಲಿ, ನೀನು ಸಭಾಹಿರಿಯರ ಮಾತನ್ನು ಕೇಳಿ, ಅದರ ಪ್ರಕಾರ ನಡೆಯಬೇಕೇ ವಿನ: ಅಂಥ ವಿಷಯಗಳನ್ನು ವಿಭಿನ್ನವಾಗಿ ಮಾಡುವುದರಲ್ಲಿ ದಂಗೆ ಇಲ್ಲ.

ಜ್ಞಾನದ ದಾರಿಯೆಂದರೆ ಸಭೆಯ ಹಿರಿಯರಿಗೆ ಅಧೀನರಾಗುವುದು ಎಲ್ಲಿ ಮತ್ತು ಎಲ್ಲಿ ಅಧೀನರಾಗಬೇಕಾಗಿಲ್ಲ ಎಂಬುದನ್ನು ಬೇರ್ಪಡಿಸುವುದು. ಸ್ಥಳೀಯ ಸಭಾಹಿರಿಯರಲ್ಲಿ ನಿನಗೆ ನಂಬಿಕೆಯಿಲ್ಲದಿರುವುದು ನೀನು ದಂಗೆಕೋರ ಎಂದು ಅರ್ಥವಲ್ಲ - ಯಾಕೆಂದರೆ ಎಲ್ಲಾ ಸಭಾಹಿರಿಯರು ಆತ್ಮಿಕ ಮನಸ್ಸುಳ್ಳವರಲ್ಲ ಮತ್ತು ಎಲ್ಲಾ ಸಭಾಹಿರಿಯರು ಅಗತ್ಯವಾಗಿ ನಂಬಿಕೆಯನ್ನು ಪ್ರೇರೇಪಿಸುವುದಿಲ್ಲ. ಆದರೆ, ನೀನು ಎಲ್ಲಿಯೂ ಯಾರಿಗೂ ಅಧೀನನಾಗಿರದಿದ್ದರೆ, ಆಗ ನೀನು ಸುಲಭವಾಗಿ ನೀನೇ ನಿನಗೆ ಒಂದು ನಿಯಮದಂತಿರುವೆ ಮತ್ತು ಹಾಗೆ ಸೈತಾನು ಕೆಡವಿ ನಾಶ ಪಡಿಸಲು ನೀನು ಸುಲಭವಾದ ಗುರಿಯಾಗುವೆ. ಎಲ್ಲಾ ವೇಳೆಯಲ್ಲಿ ಜ್ಞಾನದ ಹಾದಿಯಲ್ಲಿ ನಡೆಯಲು ದೇವರು ನಮಗೆಲ್ಲರಿಗೂ ನೆರವು ನೀಡಲಿ.