ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 
 

ದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವುದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ಕಳೆದುಕೊಂಡು ಕ್ರಿಸ್ತನನ್ನು ಲಾಭವನ್ನಾಗಿ ಮಾಡಿಕೊಳ್ಳುವುದಕ್ಕಾಗಿ ನಾನು ಅವುಗಳನ್ನು ಕಸವೆಂದೆಣಿಸುತ್ತೇನೆ.ನಾನು ಧರ್ಮಶಾಸ್ತ್ರದಿಂದಾಗುವ ನೀತಿಯುಳ್ಳವನಾಗಿರದೆ ನಂಬಿಕೆಯಿಂದ ಅಂದರೆ ಕ್ರಿಸ್ತನಲ್ಲಿಯ ನಂಬಿಕೆಯಿಂದ ದೊರಕುವ ದೇವರ ನೀತಿಯನ್ನೇ ಹೊಂದಿದವನಾಗಿ ಕ್ರಿಸ್ತನಲ್ಲಿ ಕಾಣಿಸಿಕೊಳ್ಳಬೇಕೆಂದಿದ್ದೇನೆ.ಕ್ರಿಸ್ತನನ್ನೂ ಆತನ ಮರಣದಲ್ಲಿ ಆತನ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ. ಹೀಗೆ ನಾನು ಸತ್ತವರೊಳಗಿಂದ ಪುನರುತ್ಥಾನ ಹೊಂದುವೆನು. ಈಗಾಗಲೇ ನಾನು ಹೊಂದಿದ್ದೇನೆಂದಲ್ಲ, ಇಲ್ಲವೆ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ಅಲ್ಲ ಕ್ರಿಸ್ತಯೇಸುವಿನಿಂದ ನಾನು ಯಾವುದಕ್ಕಾಗಿ ಹಿಡಿಯಲ್ಪಟ್ಟೆನೋ ಅದನ್ನೇ ನಾನು ಪಡೆದುಕೊಳ್ಳುವಂತೆ ಮುಂದೆ ಸಾಗುತ್ತಿದ್ದೇನೆ. ಸಹೋದರರೇ, ನಾನಂತೂ ಅದನ್ನು ಪಡೆದಿದ್ದೇನೆಂದು ಬಾವಿಸಿಕೊಂಡಿಲ್ಲ. ಆದರೆ ಒಂದು ಸಂಗತಿ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳನ್ನು ಪಡೆಯುವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯ ಬಹುಮಾನದ ಗುರಿಯೆಡೆಗೆ ಸಾಗುತ್ತಾ ಇದ್ದೇನೆ. ಪಿಲಿಪ್ಪಿ 3:7-14

ಪ್ರಥಮವಾಗಿ ನಾವು ಅರಿಯಬೇಕಾದದ್ದೇನೆಂದರೆ ಅಪೊಸ್ತಲನು ಕ್ರಿಸ್ತೀಯ ಮಾರ್ಗದಲ್ಲಿ ನಡೆಯುವ ಅತ್ಯುತ್ಸಾಹಿಯಾದ ಯೌವನಸ್ತನಾಗಿ ಈ ಮೇಲಿನ ಮಾತುಗಳನ್ನು ನುಡಿದಿಲ್ಲ. ಈ ಮಾತುಗಳು ಒಬ್ಬ ಪರಿಪಕ್ವತೆಯುಳ್ಳ ಕ್ರೈಸ್ತನು ತನ್ನ ಶ್ರೇಷ್ಟವಾದ ಜೀವಿತದ ಕೊನೆಯಲ್ಲಿ ಆಡಿದ ಮಾತುಗಳು. ಪೌಲನು ಪರಿವರ್ತನೆಯಾಗಿ ಮೂವತ್ತು ವರ್ಷಗಳಾಗಿವೆ. ಆ ವರುಷಗಳಲ್ಲಿ ಆತನ ಸೇವೆಯಲ್ಲಿ ಅದ್ಬುತ ಕಾರ್ಯಗಳಿಂದಲೂ, ಸೂಚಕಕಾರ್ಯಗಳಿಂದಲೂ ಅನೇಕ ಸಭೆಗಳು ಕಟ್ಟಲ್ಪಡುವದಕ್ಕೋಸ್ಕರ ದೇವರು ಆತನನ್ನು ಉಪಯೋಗಿಸಿದನು. ಪ್ರಾರಂಭದಿಂದಲೂ ಪೌಲನು ಎಡೆಬಿಡದೆ ಸುವಾರ್ತಾ ಸೇವೆಯಲ್ಲಿ ಸತತವಾಗಿ ಪ್ರಯಾಣಮಾಡುತ್ತಾ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದನು. ಆತನು ಕರ್ತನ ಸಾರೂಪ್ಯಕ್ಕೆ ಹತ್ತಿರ ಬಂದಂತೆ ಆತನು ಪಾಪದ ಮೇಲಿನ ಜಯದ ಜೀವಿತವನ್ನು ತಿಳಿಯತೊಡಗಿದನು. ಆತನ ಅನೇಕ ಆನಂದಕರವಾದ ಅನುಭಗಳಲ್ಲಿ ಒಂದು ಅಪೂರ್ವ ಸಂಗತಿಯೇನೆಂದರೆ ಅವನು ಮೂರನೇ ಆಕಾಶಕ್ಕೆ ಎತ್ತಲ್ಪಟ್ಟು ಆತ್ಮೀಕ ಸತ್ಯದ ವಿಷಯವಾಗಿ ವಿಶೇಷ ಪ್ರಕಟಣೆಗಳನ್ನು ಪಡೆದುಕೊಂಡನು.

ಆದಾಗ್ಯೂ ಆತನ ಜೀವಿತದ ಕೊನೆಯಲ್ಲಿ ಆತನು ದೇವರ ಉದ್ದೇಶವನ್ನು ತನ್ನ ಜೀವಿತದಲ್ಲಿ ಇನ್ನೂ ಪೂರ್ಣಗೊಳಿಸಿಲ್ಲವೆಂದು ಹೇಳುತ್ತಾನೆ. ಎಲ್ಲಾ ಸಮಯಗಳಲ್ಲಿ ಜಯಶಾಲಿಯಾದ ಈ ಕ್ರೈಸ್ತನು ತನ್ನ ಗುರಿಯ ಕಡೆಗೆ ಇನ್ನೂ ಓಡುತ್ತಿದ್ದೇನೆಂದು ಹೇಳುತ್ತಾನೆ. ಅನೇಕ ವಿಶ್ವಾಸಿಗಳಿಗೆ ಹೊಸದಾಗಿ ಹುಟ್ಟುವುದೇ ಪ್ರಾರಂಭ ಮತ್ತು ಕೊನೆಯದಾಗಿರುತ್ತದೆ ಎನ್ನುವುದು ವಿಷಾದದ ಸಂಗತಿ ಯಾಕಂದರೆ ಅವರು ಇದರಿಂದ ದೈವೀಕ ದಂಡನೆಯಿಂದ ಪಾರಾಗಿದ್ದಾರೆ ಕ್ರಿಸ್ತನ ನಿಜ ಶಿಷ್ಯರಾಗಲು ಬಯಸುವವರಿಗೂ ಹಾಗೂ ಪೌಲನಿಗೂ ಇಂಥಹ ಜೀವಿತ ಬೇಕಿರಲಿಲ್ಲ. ಯಾವ ರೀತಿಯಾಗಿ ಕ್ರಿಸ್ತನು ಒಂದು ದೃಡವಾದ ಉದ್ದೇಶಕ್ಕೋಸ್ಕರ ಆತನನ್ನು ಕರೆದಿದ್ದನೋ ಆ ಉದ್ದೇಶವನ್ನು ನೆರವೇರಿಸುವ ಬಲವಾದ ಆಕಾಂಕ್ಷೆ ಆತನದಾಗಿತ್ತು. ಕರ್ತನು ನಮ್ಮನ್ನು ಪರಿವರ್ತನೆಯಾದ ನಂತರ ನಾವು ಕೇವಲ ನರಕದಿಂದ ತಪ್ಪಿಸಿಕೊಂಡು ಸ್ವರ್ಗ ಸೇರುವುದು ಮಾತ್ರವಲ್ಲ ನಾವು ಅದಕ್ಕಿಂತಲೂ ಅತ್ಯುತ್ತಮವಾದ ಜೀವಿತ ಜೀವಿಸಬೇಕೆಂದು ನಮ್ಮನ್ನು ಹಿಡಿದಿದ್ದು ಬಹು ಗಂಭೀರವಾದದ್ದು. ಮೂವತ್ತು ವರ್ಷ ಸತತವಾಗಿ ಸೇವೆ ಮಾಡಿದ ಅಪೊಸ್ತಲ ಪೌಲನು ತನ್ನ ಜೀವಿತದ ಕೊನೆಯಲ್ಲಿ ತಾನು ಇನ್ನೂ ಸಿದ್ದಿಗೆ ಬಂದವನಲ್ಲ ಎಂದು ಹೇಳಿದರೆ ಆ ಉದ್ದೇಶ ಎಷ್ಟೊಂದು ವಿಶಾಲವಾಗಿದೆ ನೋಡಿರಿ.

ಪೌಲನು ಇನ್ನೂ ಮುಂದೆ ಸಾಗಿ ಹೀಗೆ ಹೇಳುತ್ತಾನೆ ದೇವರ ಉದ್ದೇಶವನ್ನು ಗ್ರಹಿಸಿ ಅದನ್ನು ಪೂರ್ಣಗೊಳಿಸುವುದಕ್ಕೆ ಹೋಲಿಸಿದರೆ ನನಗೆ ಈ ಲೋಕದಲ್ಲಿ ಶ್ರೇಷ್ಠವಾದದ್ದೆಲ್ಲವನ್ನೂ ಕಸವೆಂದು ಎಣಿಸುತ್ತೇನೆ. ಪಿಲಿಪ್ಪಿ 3:14 ನೇ ವಚನದಲ್ಲಿ ನಮ್ಮ ಮುಂದೆ ಇಟ್ಟಿರುವ ಬಿರುದಿಗೆ ಹೋಲಿಸಿದರೆ ಈ ಲೋಕದಲ್ಲಿರುವದೆಲ್ಲದರ ನಷ್ಟವು ನಮಗೆ ಒಳ್ಳೆಯದೇ. ನಮ್ಮ ಸುತ್ತಲಿರುವ ಇತರ ಕ್ರೈಸ್ತರು ಇಹಲೋಕದ ಆಸ್ತಿ ಪಾಸ್ತಿ ಮಾಡುವುದರಲ್ಲಿ ತಲ್ಲೀನರಾಗಿರುವುದನ್ನು ಕಾಣುವಾಗ, ಅವುಗಳಿಗೆ ದೇವರಿಗಿಂತ ಹೆಚ್ಚಿನ ಮಹತ್ವವನ್ನು ಕೊಡುವಾಗ ಅವರ ಕ್ರೈಸ್ತತ್ವವು ಪೌಲನ ಕ್ರೈಸ್ತತ್ವಕ್ಕಿಂತ ಬಹಳ ದೂರವಿದೆ ಎಂದು ನಾವು ಹೇಳಬಹುದು.

ಕೇವಲ ನರಕದ ಬೆಂಕಿಯಿಂದ ರಕ್ಷಣೆ ಹೊಂದಬೇಕೆಂದು ನಾವು ಇಚ್ಚಿಸುವುದಾದರೆ, ಅದು ಜೀವವಿಮೆ ಕರಾರನ್ನು ತೆಗೆದುಕೊಂಡಂತೆ ನಮ್ಮ ಬಾಲ್ಯಾವಸ್ಥೆಯನ್ನು ತೋರಿಸುತ್ತದೆ. ಆದರೆ ನಾವು ಆತ್ಮೀಕವಾಗಿ ಬೆಳೆಯುವಾಗ ದೇವರು ನಾವು ಪ್ರತಿದಿನ ಹೇಗೆ ಜೀವಿಸಬೇಕೆಂದು ನಿತ್ಯತ್ವದಿಂದ ಯೋಜನೆ ಮಾಡಿದ್ದಾನೋ ಆ ದಾರಿಯಲ್ಲಿ ನಾವು ನಡೆಯಲು ಬಯಸುತ್ತೇವೆ (ಎಫೆಸ 2:10). ಆ ಮಾರ್ಗವನ್ನು ಪೌಲನು ತನ್ನ ಜೀವಿತದ ಬಗ್ಗೆ ದೇವರ ಉದ್ದೇಶವೆಂದು ಕರೆದನು. ನಾವು ಕೇವಲ ದೇವರ ಕೃಪೆಯನ್ನು ಪಡೆಯಲು ಬಯಸಿ ತೃಪ್ತರಾದರೆ, ನಾವು ಬೇರೆ ಎಷ್ಟೋ ಚಟುವಟಿಕೆಗಳನ್ನು ಮಾಡಿದರೂ ಆತನ ಚಿತ್ತವನ್ನು ಪೂರೈಸುವದಕ್ಕೆ ಮನಸ್ಸಿಲ್ಲದ್ದಿದ್ದರೆ ನಾವು ಮಾಡಿದ್ದೆಲ್ಲವೂ ನಿತ್ಯತ್ವದಲ್ಲಿ ಶೂನ್ಯವೇ. ಜನರು ಕ್ರಿಸ್ತನ ಮೂಲಕವಾಗಿ ದೇವರ ಕೃಪೆಯನ್ನು ಕಾಣದಂತೆ ಅವರ ಮನಸ್ಸನ್ನು ಮಂಕುಮಾಡುವದೇ ಸೈತಾನನ ಕೆಲಸವಾಗಿದೆ (2ಕೊರಿಂಥ 4:4). ಇದರಲ್ಲಿ ಆತನು ಜಯಿಸದಿದ್ದರೆ ಆತನ ಎರಡನೆಯ ಗುರಿಯು ವಿಶ್ವಾಸಿಯ ಬಗ್ಗೆ ದೇವರು ನಿಶ್ಚಿತವಾಗಿಟ್ಟಿರುವ ಯೋಜನೆಯ ವಿಷಯದಲ್ಲಿ ಅವನನ್ನು ಕುರುಡನನ್ನಾಗಿ ಮಾಡುವುದಾಗಿದೆ. ಹೆಚ್ಚಿನಾಂಶ ಇದರಲ್ಲಿ ಆತನು ಯಶಸ್ವಿಯಾಗುತ್ತಾನೆ. ಸಾವಿರಾರು ನಿಜ ವಿಶ್ವಾಸಿಗಳು ತಮ್ಮ ಜೀವಿತದ ದೊಡ್ಡ ನಿರ್ಣಯಗಳಲ್ಲಿಯೂ ಸಹ ದೇವರ ಚಿತ್ತವನ್ನು ಹುಡುಕುವುದಿಲ್ಲ.

ನಮ್ಮ ಕ್ರಿಸ್ತೀಯ ಜೀವಿತದಲ್ಲಿ ನಾವು ನಿರಂತರವಾಗಿ ಓಟದಲ್ಲಿಯೋ ಎಂಬಂತೆ ಓಡುವುದನ್ನು ಪಿಲಿಪ್ಪಿಯಲ್ಲಿರುವ ಈ ವಚನಗಳು ವರ್ಣಿಸುತ್ತವೆ. ಇದರ ಅವಶ್ಯಕತೆ ಎಷ್ಟಿದೆಯೆಂದರೆ, ಈ ಲೋಕದಲ್ಲಿ ಹೊಂದಬಹುದಾದ ಎಂಥಹ ಉನ್ನತ ಮಟ್ಟದ ಆತ್ಮೀಕ ಬೆಳವಣಿಗೆಯೂ ಕಡಿಮೆಯೇ ಆಗಿದೆ. ಅನೇಕ ವಿಶ್ವಾಸಿಗಳು ಈ ಪಾಠವನ್ನು ಅಸಡ್ಡೆ ಮಾಡಿದ್ದರಿಂದ ಅವರಲ್ಲಿ ಜೀವಕರ ಸಾಕ್ಷಿಯಿಲ್ಲ. ಅವರ ಒಂದೇ ಸಾಕ್ಷಿ ಏನೆಂದರೆ ಗತಕಾಲದಲ್ಲಿ ಯಾವುದೇ ಒಂದು ದಿನ ಸುವಾರ್ತೆ ಕೂಟದಲ್ಲಿ ಎತ್ತಿದ್ದೋ ಅಥವಾ ನಿರ್ಣಯದ ಪತ್ರದ ಮೇಲೆ ಸಹಿ ಹಾಕಿದ್ದೇ ಆಗಿದೆ, ಅದು ಅದ್ಬುತವಾದದ್ದೇ, ಆದರೆ ಅದರ ನಂತರ ಬೇರೇನೂ ಆಗಲಿಲ್ಲ. ಜ್ಞಾನೋಕ್ತಿ 24:30-34 ರಲ್ಲಿ ಬುದ್ದಿಹೀನನ ತೋಟದ ಬಗ್ಗೆ ಓದುತ್ತೇವೆ. ರಕ್ಷಣೆಯ ನಂತರ ಸಡಿಲವಾಗಿ ಜೀವಿಸುವವನ ಚಿತ್ರವಿದು. ಯಾವ ರೀತಿಯಾಗಿ ತೋಟವು ಮುಳ್ಳು ಗಿಡಗಳಿಂದಲೂ, ಕಳೆಗಳಿಂದಲೂ ದೂರವಿರಬೇಕೋ ಹಾಗೆಯೇ ನಮ್ಮ ಆತ್ಮಿಕ ಜೀವಿತವೂ ಸಹ.

ಜಾನ್ ವೆಸ್ಲಿಯವರ ಸಾಕ್ಷಿ ಕೂಟಗಳಲ್ಲಿ ಯಾರೂ ಒಂದು ವಾರಕ್ಕಿಂತ ಹಳೆಯ ಸಾಕ್ಷಿಯನ್ನು ಕೋಡಬಾರದೆಂದು ನಾನು ಕೇಳಿದ್ದೇನೆ. ಯಾರಿಗಾದರೂ ಒಂದು ವಾರಕ್ಕಿಂತ ಹಳೆಯ ಸಾಕ್ಷಿಯಿದ್ದರೆ ಅವರು ತಮ್ಮನ್ನು ತಾವೇ ಹಿಂಜಾರಿದವರು ಎಂದು ಬಾವಿಸಿಕೊಳ್ಳಬೇಕಿತ್ತು. ಇಂಥಹ ಪರೀಕ್ಷೆಗೆ ನಮ್ಮಲ್ಲಿ ಯಾರು ಸಿದ್ದರಾಗಿದ್ದಾರೆ ? ಇಂಥಹ ಕೂಟಗಳಲ್ಲಿ ನಾವು ಸುಮ್ಮನೆ ಕುಳಿತುಕೂಳ್ಳಬೇಕೋ?

ಪಿಲಿಪ್ಪಿ 3:13-14 ರಲ್ಲಿ ಪೌಲನು ಹೇಳುವುದನ್ನು ಗಮನಿಸಿರಿ "ಆದರೆ ಒಂದು ಸಂಗತಿ, ನಾನು ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಶಯಗಳನ್ನು ಪಡೆಯುವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯ ಬಹುಮಾನದ ಗುರಿಯೆಡೆಗೆ ಸಾಗುತ್ತಾ ಇದ್ದೇನೆ." ಕ್ರೈಸ್ತನ ಇನ್ನೊಂದು ಆದ್ಯತೆಯು ನಮಗೆ ಇಲ್ಲಿದೆ. ದೇವರ ಉದ್ದೇಶವನ್ನು ಅರಿತುಕೊಂಡು ಅದರ ದಿಸೆಯಲ್ಲಿ ಓಡುವುದು ಕೇವಲ ಕೆಲವೇ ಉತ್ತಮ ಕ್ರೈಸ್ತರ ಗುರಿಯಲ್ಲ, ಇದು ಪ್ರತಿಯೊಬ್ಬ ವಿಶ್ವಾಸಿಯ ಧ್ಯೇಯವಾಗಿರಬೇಕು.