ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ
WFTW Body: 
 

ಯೆಹೆಜ್ಕೇಲ 16:49, 50 ರಲ್ಲಿ ದೇವರು ಸೊದೋಮ್ ಪಟ್ಟಣ ನಾಶವಾಗಲು ಮುಖ್ಯ ಕಾಅಣವೇನೆಂದು ವಿವರಿಸುತ್ತಾರೆ (ಆದಿ 19). ನಮ್ಮಲ್ಲಿ ಅನೇಕರು ಸೊದೋಮಿನ ಜನರ ಪಾಪವು ಲೈಂಗಿಕತೆಗೆ ಹಾಗೂ ಸಲಿಂಗರತಿಗೆ ಸಂಬಂಧಿಸಿದ್ದು ಎಂದು ಭಾವಿಸುವವರಾಗಿದ್ದಾರೆ. ಆದರೆ ಲೈಂಗಿಕ ಪಾಪವು ಒಂದು ರೀತಿಯ ಜೀವನ ಕ್ರಮದಿಂದ ಬರುವಂಥದ್ದಾಗಿದೆ.

ಇಂಥಹ ಪಾಪದ ಅಧೋಗತಿಗೆ ಅವರನ್ನು ನಡೆಸಿದ್ದಾದರೂ ಏನು? ಇಲ್ಲಿ ಸೊದೋಮಿನ ಜನರ ಪಾಪಗಳು ಯಾವುವೆಂದು ಹೇಳಲಾಗಿದೆ.

-ಗರ್ವ

-ಸೋಮಾರಿತನ

-ಹೊಟ್ಟೆಬಾಕತನ (ಒಳ್ಳೆಯ ಆಹಾರದ ಆಸೆ)

-ದೀನದರಿದ್ರರನ್ನು ಕಡೆಗಾಣಿಸುವಂಥದ್ದು

ಈ ಕಾರಣಗಳಿಗೋಸ್ಕರ ದೇವರು ಅ ಪಟ್ಟಣವನ್ನು ನಾಶಮಾಡಿದರು. ದೇವರು ಅವರ ಲೈಂಗಿಕ ಪಾಪವನ್ನು ಉಲ್ಲೇಖಿಸದಿರುವುದು ಆಶ್ಚರ್ಯಕರವಾಗಿದೆ.

ಸೊದೋಮಿನವರ ಲೈಂಗಿಕ ಪಾಪವು ಅವರ ಆಲಸ್ಯದ, ಸ್ವ ಸುಖದಲ್ಲಿ ಮುಳುಗಿರುವವ ಜೀವನ ಶೈಲಿಯ ಪರಿಣಾಮವಾಗಿದೆ. ಇದರಿಂದ ನಾವು ಕಲಿಯುವುದೇನು? ಏನೆಂದರೆ ಈ ಪಾಪಗಳಿಗೂ ಲೈಂಗಿಕ ಪಾಪಕ್ಕೂ ನಿಕಟವಾದ ಸಂಬಂಧವಿದೆ.

-ಗರ್ವ ಮತ್ತು ಲೈಂಗಿಕ ಪಾಪ

-ಸೋಮಾರಿತನ ಮತ್ತು ಲೈಂಗಿಕ ಪಾಪ

-ಹೊಟ್ಟೆಬಾಕತನ ಹಾಗೂ ಲೈಂಗಿಕ ಪಾಪ

-ಇತರರ ಬಗ್ಗೆ ಕಾಳಜಿಯಿರದಿರುವುದು ಮತ್ತು ಲೈಂಗಿಕ ಪಾಪ.

ಈ ನಾಲ್ಕು ಕ್ಷೇತ್ರಗಳನ್ನು ಗಮನಿಸಿರಿ. ನಿಮ್ಮಲ್ಲಿ ಅನೇಕ ಯೌವನಸ್ಥರು ಲೈಂಗಿಕ ಆಶಾಪಾಶವನ್ನು ಜಯಿಸಲು ಅಸಮರ್ಥರಾಗಿರುವುದನ್ನು ಗಮನಿಸಿ. ಇದು ಅತೀ ಕಷ್ಟವಾದ ಕ್ಷೇತ್ರವವಾದ್ದರಿಂದ ಈ ನಾಲ್ಕು ಸುಲಭವಾದ ಕ್ಷೇತ್ರಗಳನ್ನು ಜಯಿಸಲು ಪ್ರಾರಂಭಿಸೋಣ. ಹೀಗಾದರೆ ನೀವು ಲೈಂಗಿಕ ಕ್ಷೇತ್ರದಲ್ಲಿ ಜಯಿಸಲಿಕ್ಕೆ ನಿಮಗೆ ಸುಲಭವಾಗುವುದು.

ಮೊದಲನೆಯದಾಗಿ ಎಲ್ಲಾ ಸನ್ನಿವೇಶಗಳಲ್ಲಿ ನಿಮ್ಮನ್ನು ನೀವು ತಗ್ಗಿಸಿಕೊಳ್ಳಿರಿ. ಅಹಂಕಾರವನ್ನು ತೊರೆದುಬಿಡಿರಿ.

ನೀವು ಮಾಡುವ ಕೆಲಸ ಕಾರ್ಯಗಳನ್ನು ಆಸಕ್ತಿಯಿಂದಲೂ ಶ್ರದ್ಧೆಯಿಂದಲೂ ಮಾಡಿರಿ.

ಆಗಾಗ್ಗೆ ಉಪವಾಸ ಮಾಡಿರಿ ಹಾಗೂ ಊಟವನ್ನು ತ್ಯಜಿಸಿರಿ.

ನಾಲ್ಕನೆಯದಾಗಿ ನಿಮ್ಮ ಸುತ್ತಲಿರುವವರ ಕೊರತೆಯ ಅಗ್ಗೆ ಚಿಂತಿಸಿ ಅವರಿಗೆ ಹೇಗೆ ನೆರವಾಗಬಹುದೆಂದು ನೋಡಿರಿ.

ಈ ಮೇಲಿನ ಸಲಹೆಗಳನ್ನು ಒಂದು ವರ್ಷ ಪಾಲಿಸಿ ನೋಡಿ. ಆಗ ನಿಮಗೆ ಈ ಪಾಪವನ್ನು ಜಯಿಸಲು ಸುಲಭವಾಗುವುದು. ದೇವರ ಕೃಪೆಯಿಲ್ಲದೇ ಯಾವ ಪಾಪವನ್ನೂ ಜಯಿಸಲು ಸಾಧ್ಯವಿಲ್ಲ   ಆದರೆ ಆತನು ದೀನರಿಗೆ ಮಾತ್ರ ಕೃಪೆಯನ್ನು ಅನುಗ್ರಹಿಸುವನು ಮತ್ತು ಇತರರಿಗೆ ದಯೆತೋರಿಸುವ ಮತ್ತು ಅವರಿಗೆ ಸಹಾಯ ಮಾಡುವವರಿಗೆ ಮಾತ್ರ ಆತನು ನೆರವಾಗುತ್ತಾನೆ.