ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ಪೌಲನು 2 ಕೊರಿಂಥ 11:2,3 ರಲ್ಲಿ ಸಭೆಯನ್ನು ಯೇಸುವಿನ ಜೊತೆ ಗೊತ್ತುಮಾಡಿ(ನಿಶ್ಚಯಿಸಿ) ಮುಂದೆ ಯೇಸುವಿನೊಂದಿಗೆ ಮದುವೆಗೊಸ್ಕರ ಸಿದ್ಧಪಡಿಸುವದನ್ನು ಹೇಳುತ್ತಾನೆ. ಕರ್ತನನ್ನು ಬಿಟ್ಟು ಇನ್ನೊಬ್ಬರನ್ನು ಅವರು ಪ್ರೀತಿಸಬಾರದೆಂದು ಪೌಲನು ತೀವ್ರ ಆಶೆ ಹೊಂದಿದ್ದನು.

ಅಬ್ರಹಾಮನ ಸೇವಕನ ಬಗ್ಗೆ ಆಲೋಚಿಸಿರಿ, ಆತನು ಇಸಾಕನಿಗೊಸ್ಕರ ರೆಬೆಕ್ಕಳನ್ನು ತರುವಾಗ ಅವಳ ಜೊತೆ 400 ಮೈಲು ದೂರ ಪ್ರಯಾಣ ಮಾಡುತ್ತಿದ್ದನು. ಇಂತಹ ಸಮಯದಲ್ಲಿ ಯಾರೋ ಒಬ್ಬ ಸುಂದರ ಯುವಕ ರೆಬೆಕ್ಕಳ ಮನಸ್ಸನ್ನು ಗೆಲ್ಲಲಿಕ್ಕೆ ಪ್ರಯತ್ನ ಮಾಡಿದಾಗ ಎಲೀಯೆಜರ ಏನು ಮಾಡುತ್ತಿದ್ದ? ಆತನು ಅವನಿಗೆ- ಇಲ್ಲಿಂದ ಹೊರಟು ಹೋಗು, ಇವಳು ನನ್ನ ದಣಿಯ ಮಗನಿಗೆ ಸೇರಿದ್ದಾಳೆ ಎಂದು ಹೇಳಿ ಹೊರಡಿಸುತ್ತಿದ್ದ. ಮತ್ತು ರೆಬೆಕ್ಕಳಿಗೆ "ಇಂಥವರಿಂದ ಯಾವ ರೀತಿಯಲ್ಲಿಯೂ ಆಕರ್ಷಿಸಲ್ಪಡಬೇಡ" ಎಂದು ಹೇಳುತ್ತಿದ್ದನು.

ಪೌಲನು ಕೊರಿಂಥ ಸಭೆಯನ್ನು ಈ ರೀತಿಯಲ್ಲಿ ಯೇಸುವಿಗೊಸ್ಕರ ಕಾಪಾಡಬೇಕೆಂದಿದ್ದನು. "ನೀನು ಯೇಸುವಿಗೊಸ್ಕರ ಕಾಯ್ದಿರಿಸಲ್ಪಟ್ಟಿದ್ದೀಯ, ಜಗತ್ತಿಗೊಸ್ಕರವಾಗಲಿ, ಹಣಕ್ಕೊಸ್ಕರವಾಗಲಿ ಅಥವಾ ಗೌರವಕ್ಕಾಗಿ ಅಲ್ಲ." ಇದು ಪೌಲನ ತೀವ್ರವಾದ ಆಶೆಯಾಗಿದೆ (ಅಥವಾ ಹೊಟ್ಟೆಕಿಚ್ಚು ಎಂದು ಹೇಳಬಹುದು). ಇನ್ನೊಬ್ಬರು ನಿನ್ನನ್ನು ನೋಡಿ ಆಕರ್ಷಿಸಲ್ಪಡಬಹುದು ಆದರೆ ನೀನು ದೇವರಿಗೊಸ್ಕರ ಬದುಕಬೇಕು.

ಒಬ್ಬ ನಿಜವಾದ ದೇವರ ಸೇವಕನು ತನ್ನ ಜನರ ಬಗ್ಗೆ ಈ ರೀತಿಯಾದ ಹಸಿವು ಹೊಂದಿರುತ್ತಾನೆ. ಸಭೆಯು ಯೇಸುವಿಗಾಗಿ ಒಬ್ಬ ಪರಿಶುದ್ಧ ಕನ್ಯೆಯಂತೆ ಸಿದ್ಧಗೊಂಡಿರಲು ತವಕ ಪಡುತ್ತಾನೆ. ಆದರೆ ಪೌಲನು ಹೀಗೆ ಹೇಳುತ್ತಾನೆ "ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು, ಕೆಟ್ಟು ಹೋದೀತೆಂದು ನನಗೆ ಭಯವುಂಟು.",

ದೇವರ ಪ್ರೀತಿಯಲ್ಲಿ ನೀವು ಹಿಂದೇಟು ಹಾಕಿರುವದು ನಿಮಗೆ ಹೇಗೆ ತಿಳಿಯುತ್ತದೆ? ದಾರಿತಪ್ಪಿರುವದು ಹೇಗೆ ಕಾಣುತ್ತದೆ? ಸಭೆಯಲ್ಲಿ ಯಾವುದೋ ತಪ್ಪು ಪ್ರಸಂಗವನ್ನು ಕೇಳಿದರೆ ದಾರಿತಪ್ಪುವದಕ್ಕಾಗುತ್ತಾ? ಆದರೆ 2 ಕೊರಿಂಥ11:3 ರಲ್ಲಿ ಹೀಗೆ ಹೇಳುತ್ತಾನೆ- ನಿಮ್ಮ ಮನಸ್ಸು ಯೇಸುಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ, ಭಕ್ತಿಯನ್ನೂ ಬಿಟ್ಟು ಹೋಗುವಾಗ ನೀವು ದಾರಿ ತಪ್ಪುವವರಾಗಿದ್ದೀರಿ. ಇದೇ ದಾರಿತಪ್ಪಿ ಹೋಗುವದಕ್ಕೆ ಗುರುತಾಗಿದೆ. ಪ್ರತಿಯೊಬ್ಬ ವಿಶ್ವಾಸಿ ಯೇಸುವಿನ ವಿಷಯದಲ್ಲಿ ಭಕ್ತಿಯನ್ನು ಕಳಕೊಂಡವವನಾಗಿದ್ದಾಗ ಆಗಲೇ ಆತನು ದಾರಿತಪ್ಪಿದ್ದಾನೆ. ಮತ್ತು ದೇವರ ಸೇವಕರು ಅಂಥವರನ್ನು ಈ ದಾರಿತಪ್ಪುವದರಿಂದ ಕಾಪಾಡಬೇಕಾಗುತ್ತೆ. ಈ ರೀತಿಯಾಗಿ ಕಾಪಾಡುವದು ಬಹಳ ಮಹತ್ವದ್ದಾಗಿದೆ.

ಸೈತಾನನು ವಿಶ್ವಾಸಿಗಳನ್ನು ಯೇಸುಕ್ರಿಸ್ತನ ಭಕ್ತಿಯಿಂದ ದೂರವಿಡಲು ಮತ್ತು ಯೇಸುವನ್ನು ಅತ್ಯಂತ ಆಸಕ್ತಿಯಿಂದ ಪ್ರೀತಿಸಲು ತಪ್ಪಿಸಲಿಕ್ಕೆ ಹುಡುಕುತ್ತಿರುತ್ತಾನೆ. ಯೇಸುವಿನ ಮೇಲೆಯಿರುವ ಪ್ರೀತಿಯನ್ನು ಕಳಕೊಂಡಿರುವಾಗ ಆತನಿಗಾಗಿ ಸೇವೆ ಮಾಡುವದಾಗಲಿ, ಸುವಾರ್ತೆ ಸಾರುವದಾಗಲಿ, ಸಭೆಯನ್ನು ಕಟ್ಟುವದರಿಂದ ಏನು ಪ್ರಯೋಜನ?

ಕರ್ತನು ಎಫೆಸ ಸಭೆಯವರಿಗೆ ಹೀಗೆ ಹೇಳುತ್ತಾನೆ- "ಇಷ್ಟೆಲ್ಲಾ ಒಳ್ಳೆ ಸೇವೆಗಳ ಪ್ರಯೋಜನವೇನು ಮೊದಲಿನಂತೆ ನನ್ನ ಮೇಲಿದ್ದ ಪ್ರೀತಿಯನ್ನು ಕಳಕೊಂಡಿರುವಾಗ? ನನಗೆ ನಿಮ್ಮ ಸೇವೆಗಳು ಬೇಕಾಗಿಲ್ಲ?" ದಯವಿಟ್ಟು ಯೇಸುವಿನಲ್ಲಿ ತೋರಿಸುವ ಭಕ್ತಿಯನ್ನು ಎಂದಿಗೂ ಬಿಡಬೇಡಿರಿ ಮತ್ತು ಕ್ರಿಸ್ತನಲ್ಲಿರುವ ಇನ್ನೊಬ್ಬರಿಗೂ ಕೂಡ ಈ ಭಕ್ತಿಯಲ್ಲಿ ಬೆಳೆಯಲು ಕಾಯಿರಿ.