WFTW Body: 

ಹನ್ನಳು ಒಂದು ಮಗುವಿಗೋಸ್ಕರ ದೇವರಲ್ಲಿ ಹಲವು ವರ್ಷಗಳ ಕಾಲ ಪ್ರಾರ್ಥಿಸಿದ್ದಳು. ಕೊನೆಗೆ ಅವಳು ಈ ರೀತಿ ಒಂದು ಶಪಥ ಮಾಡಿದಳು. ‘’ಆಕೆಯು ಒಂದು ಪ್ರಮಾಣವನ್ನು ಮಾಡಿ ಹೇಳಿದ್ದೇನೆಂದರೆ ಸೈನ್ಯಗಳ ಕರ್ತನೇ, ನೀನು ನಿಶ್ಚಯವಾಗಿ ನಿನ್ನ ದಾಸಿಯ ದೀನತೆಯನ್ನು ನೋಡಿ, ನಿನ್ನ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿನ್ನ ದಾಸಿಗೆ ಗಂಡು ಮಗುವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರ ಕತ್ತಿ ಬಿಳುವುದಿಲ್ಲ ಅಂದಳು’’ (1 ಸಮುವೇಲ 1:11).

ನಂತರ ಅವಳ ಯೋಚನೆಯಲ್ಲಿ ಬದಲಾವಣೆಯಾಯಿತು. ಮೊದಲು ಅವಳು ತನ್ನ ಸ್ವಂತ ಅವಶ್ಯಕತೆಗಳಿಗಾಗಿ ಯೋಚಿಸುತ್ತಿದ್ದಳು. ‘’ನನಗೆ ಒಂದು ಮಗು ಬೇಕು’’ ಎಂದು. ಆನಂತರ ಅವಳು ಹೀಗೆ ಹೇಳಲು ಶುರು ಮಾಡಿದಳು. ‘’ನನಗೆ ಒಂದು ಮಗುವಾದರೆ, ನಾನು ಅವನನ್ನು ದೇವರಿಗೆ ಕೊಡುತ್ತೇನೆ ಏಕೆಂದರೆ ದೇವರಿಗೂ ಕೂಡ ಒಂದು ಅವಶ್ಯಕತೆಯಿದೆ’’. ನಾವು ಯಾವಾಗ ನಮ್ಮ ಅವಶ್ಯಕತೆಗಳಿಗೆ ಮಾತ್ರವಲ್ಲದೆ, ದೇವರ ಅವಶ್ಯಕತೆಗಳಿಗಾಗಿಯೂ ಸಹ ಪ್ರಾರ್ಥನೆ ಮಾಡಿದಾಗ ಮಾತ್ರ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗಲು ಪ್ರಾರಂಭವಾಗುತ್ತದೆ. ಕರ್ತನು ನಮಗೆ ಎಲ್ಲಾದಕ್ಕೂ ಮುಂಚೆ ಹೀಗೆ ಪ್ರಾರ್ಥಿಸಲು ಹೇಳಿಕೊಟ್ಟರು. “ನಿನ್ನ ನಾಮವು ಪರಿಶುದ್ದವಾಗಲಿ’’ ಎಂದು. ಹನ್ನಳು ಸಾಮುವೇಲನಿಗೆ ಜನ್ಮ ಕೊಟ್ಟಾಗ ಅವಳು ತಾನು ಮಾಡಿದ ಪ್ರಮಾಣವನ್ನು ಮರೆಯಲಿಲ್ಲ. ಅವಳು ತನ್ನ ಮಗುವನ್ನು ದೇವಾಲಯಕ್ಕೆ ತಂದು ಹೀಗೆ ಹೇಳಿದಳು. ಈ ಹುಡುಗನಿಗಾಗಿ ಪ್ರಾರ್ಥಿಸುತ್ತೇನೆ. “ನಾನು ಕರ್ತನಿಗೆ ಮಾಡಿದ ವಿಜ್ಞಾಪನೆಯಂತೆ ಆತನು ನನಗೆ ಕೊಟ್ಟನು. ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು. ಆದುದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು.” (1 ಸಮುವೇಲನು 1:27,28).

ಅವಳು ಮತ್ತೆ ಅವನನ್ನು ಹಿಂತಿರುಗಿ ಪಡೆಯುವುದಿಲ್ಲ. ಅವಳು ಆ ಚಿಕ್ಕ ಹುಡುಗನಿಗೆ ಅಲ್ಲೇ ಮೊಣಕಾಲೂರಿ ಪ್ರಭುವನ್ನು ಆರಾಧನೆ ಮಾಡಲು ಕಲಿಸಿಕೊಟ್ಟಳು. ಈ ರೀತಿಯಾಗಿ ದೈವ ಭಕ್ತಿಯುಳ್ಳ ತಾಯಿಯನ್ನು ಪಡೆಯುವುದು ಬಹಳ ಒಳ್ಳೇಯದು. ಆನಂತರ ಅವಳು ಕೃತಜ್ಞತೆ ಸಲ್ಲಿಸುವ ಒಂದು ಬಹಳ ಒಳ್ಳೆಯ ಹಾಡನ್ನು ಹಾಡಿದಳು (1ಸಮುವೇಲ2:1-10). ಮರಿಯಳ ಕೃತಜ್ಞತೆಯ ಹಾಡು (ಲೂಕ1:46-55) ಕೂಡ ಇದೇ ರೀತಿಯಾಗಿರುವುದರಿಂದ ಅದು ಹನ್ನಳ ಹಾಡಿನಿಂದ ಪ್ರೇರಿತವಾಗಿರಬಹುದು ಎಂದು ಎನಿಸುತ್ತದೆ.

ಸಮುವೇಲನು ದೊಡ್ಡವನಾಗಿ ತನ್ನ ಪ್ರವಾದನೆ ಸೇವೆಯಿಂದ ಇಸ್ರಾಯೇಲಿನ ದಿಕ್ಕನ್ನೇ ಬದಲಾಯಿಸಿದನು. ನ್ಯಾಯಸ್ಥಾಪಕರ ದಿನಗಳಲ್ಲಿ ತಬ್ಬಿಬ್ಬಾದ ಸ್ಥಿತಿಯಿಂದ ದಾವೀದನ ಆಡಳಿತದಲ್ಲಿ ಉತ್ತಮವಾದ (ಭವ್ಯವಾದ) ಸ್ಥಿತಿಗೆ ತರುವುದನ್ನು ನಾವು ನೋಡುತ್ತೇವೆ. ಯಾಜಕನಾದ ಎಲಿಯ ಮಕ್ಕಳು ಯೋಗ್ಯತೆಯಿಲ್ಲದ, ಅಧರ್ಮಿಗಳೂ, ದೇವರ ಭಯವಿಲ್ಲದವರಾಗಿದ್ದರು (1 ಸಮುವೇಲ 2:12). ನಾಯಕರ ಮಕ್ಕಳು ಅನೈತಿಕವಾಗಿ, ಅಧರ್ಮಿಗಳಾಗಿದ್ದರೆ ಅದು ಬಹಳ ಬೇಸರದ ವಿಷಯ. ಇದರಲ್ಲಿ ಇನ್ನೂ ಕೆಟ್ಟ ವಿಷಯವೇನೆಂದರೆ ಎಲಿಯು ಅವರನ್ನು ದೇವರ ಗುಡಾರದಲ್ಲಿ ಸೇವೆ ಮಾಡಲು ಅನುಮತಿಸಿದನು. ಆದರೆ ಅವರು ಯಜ್ಞಗಳಿಂದ ಕದಿಯುತ್ತಿದ್ದರು ಮತ್ತು ದೇವಾಲಯದಲ್ಲಿರುವ ಸ್ತ್ರೀಯರ ಜೊತೆ ವ್ಯಭಿಚಾರ ಮಾಡುತ್ತಿದ್ದರು ಮತ್ತು ಇದಕ್ಕೆಲ್ಲ ಎಲಿಯ ಪ್ರತಿಕ್ರಿಯೆ ಏನಾಗಿತ್ತು? ಅವನು ಅವರನ್ನು ಕರೆದ ತಕ್ಷಣ, ದೇವರ ಕೆಲಸವನ್ನು ಬಿಟ್ಟು ಹೋಗಿ ಎಂದು ಹೇಳಬೇಕಾಗಿತ್ತು. ಅದರ ಬದಲು ಅವನು ಹೀಗೆ ಹೇಳಿದನು “ನನ್ನ ಮಕ್ಕಳೇ, ನಾನು ಕೇಳುತ್ತಿರುವುದು ಒಳ್ಳೇಯದಲ್ಲ” (ವ:24), ಅವನ ಧೈರ್ಯವಿಲ್ಲದ, ಕೆಲಸಕ್ಕೆ ಬಾರದ ನಾಯಕನಾಗಿದ್ದುನು. ಅಧರ್ಮಿಗಳಾದ ಮನುಷ್ಯರಿಗೆ ವ್ಯತ್ಯಾಸವಾಗಿ ಸಮುವೇಲನು ಬೆಳೆದನು. ``ಆದರೆ ಬಾಲಕನಾದ ಸಮುವೇಲನು ಬೆಳೆಯುತ್ತಾ ಇದ್ದನು; ಕರ್ತನ ಮತ್ತು ಮನುಷ್ಯರ ದಯೆಗೆ ಪಾತ್ರನಾಗಿದ್ದನು’’. (1 ಸಮುವೇಲ 2:26) ದೇವರು ಒಬ್ಬ ದೇವರ ಮನುಷ್ಯನನ್ನು ಎಲಿಯ ಬಳಿಗೆ ಕಳುಹಿಸಿ ಹೀಗೆ ಹೇಳಿದನು ನೀನು ನಿನ್ನ ಮಕ್ಕಳನ್ನು ನನಗಿಂತ ಹೆಚ್ಚಾಗಿ ಗೌರವಿಸಿದ್ದರಿಂದ ನಿನ್ನ ಸೇವೆ ಮುಂದುವರೆಸುವುದಿಲ್ಲ ಎಂದು (1 ಸಮುವೇಲ 2:27-29). ನಂತರ ದೇವರು ಈ ಸುಂದರ ಮಾತುಗಳನ್ನಾಡುವುದನ್ನು ನೋಡುತ್ತೇವೆ. ಇದನ್ನು ನಾವು ಜೀವನ ಪೂರ್ತಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು ‘’ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುತ್ತೇನೆ. ನನ್ನನ್ನು ತಿರಸ್ಕಾರ ಮಾಡುವವರನ್ನು ನಾನು ತಿರಸ್ಕರಿಸುತ್ತೇನೆ’’ (1 ಸಮುವೇಲ 2:30) . ನೀವು ದೇವರನ್ನು ಸನ್ಮಾನಿಸಿದರೆ ದೇವರು ಖಂಡಿತವಾಗಿ ನಿಮ್ಮನ್ನು ಸನ್ಮಾನಿಸುತ್ತಾರೆ.

ದೇವರ ಭಯವಿಲ್ಲದ ವಾತವರಣದ ಮಧ್ಯದಲ್ಲಿ, ಸಮುವೇಲನು ಶುದ್ಧವಾಗಿ ಬೆಳೆದನು. ಇದು ದೇವರ ಭಯವಿಲ್ಲದ ಮನೆ ಅಥವಾ ವಾತವರಣದಲ್ಲಿ ಬೆಳೆಯುವ ಯುವಕರಿಗೆ ಒಂದು ಮಾದರಿ, ನೀವು ಒಂದು ವೇಳೆ ಪೂರ್ಣ ರಾಜಿ ಮಾಡಿಕೊಳ್ಳುವ ಸಭೆಯಲ್ಲಿರಬಹುದು. ಆದರೆ ನೀವು ಅದರಿಂದ ಪ್ರಭಾವಕ್ಕೊಳಗಾಗಬೇಡಿ. ನೀವು ಸಮುವೇಲನಂತಿದ್ದರೆ, ಕರ್ತನÀ ಭಕ್ತಿಯಲ್ಲಿ ಧೃಡವಾಗಿದ್ದರೆ ಮತ್ತು ಭ್ರಷ್ಟರಾಗದಿದ್ದರೆ, ಆ ಸಂದರ್ಭದಲ್ಲಿ ಸಮುವೇಲನ ಹಾಗೆ, ನಿಮ್ಮನ್ನು ಸಹ ದೇವರ ವಾಣಿಯಾಗುವಂತೆ ದೇವರು ನಿಮ್ಮನ್ನು ಮಾಡುತ್ತಾರೆ.

ಒಂದು ರಾತ್ರಿ ಸಮುವೇಲನು ನಿದ್ರಿಸುತ್ತಿರುವಾಗ ಅವನಿಗೆ ‘’ಸಮುವೇಲ, ಸಮುವೇಲ’’ ಎಂದು ಕರೆಯುವ ಧ್ವನಿ ಕೇಳಿಸಿತು. ಅವನು ಎಲಿಯನು ಕರೆದಿರಬಹುದೆಂದು ತಿಳಿದು ಕೊಂಡು ಅವನ ಬಳಿಗೆ ಹೋದನು. ಆದರೆ ಅದು ಎಲಿಯಾಗಿರಲಿಲ್ಲ. ಎಲಿಯ ಸಮುವೇಲನಿಗೆ ಕರ್ತನೇ ನನ್ನೊಟ್ಟಿಗೆ ಮಾತಡಬೇಕೆಂದು ಕೇಳು ಎಂದು ಹೇಳುವವರೆಗೂ, ಆ ಧ್ವನಿ ಸಮುವೇಲನನ್ನು ಕರೆಯುತ್ತಲೆ ಇತ್ತು. ನಂತರ ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆ ಸಮುವೇಲನೆ, ಸಮುವೇಲನೆ, ಅಂದನು. ‘’ಸಮುವೇಲನು, ಅಪ್ಪಣೆಯಾಗಲಿ ನಿನ್ನ ದಾಸನು ಕಾದಿದ್ದಾನೆ ಎಂದನು’’ (1 ಸಮುವೇಲ 3:10) . ನಾವು ನಮ್ಮ ಎಲ್ಲಾ ದಿನಮಾನಗಳಲ್ಲಿ ದೇವರ ಧ್ವನಿಗೆ ಈ ರೀತಿಯ ಮನೋಭಾವವನ್ನು ಹೊಂದಿರಬೇಕು. ‘’ಮಾತನಾಡು ಕರ್ತನೇ ನಿನ್ನ ಸೇವಕನು ಕೇಳಿಸಿಕೊಳ್ಳುತ್ತಿದ್ದಾನೆ’’ ಎಂದು.

``ಆ ರಾತ್ರಿ ಬಂದು ನಾನು ನಿನ್ನ ಜೊತೆ ಮಾತನಾಡುತ್ತೇನೆ’’ ಎಂದು ಹೇಳಿ. ದೇವರು ಸಮುವೇಲನಿಗೆ ಮುನ್ಸೂಚನೆ ಕೊಡಲಿಲ್ಲ. ಆದುದರಿಂದ ಸಮುವೇಲನು ಎಲ್ಲಾ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗಿತ್ತು. ದೇವರು ಅನಿರೀಕ್ಷಿತವಾಗಿ ಪ್ರವಾದಿಗಳನ್ನು ಕರೆದು ಮಾತನಾಡುವುದನ್ನು ನಾವು ಅನೇಕ ಬಾರಿ ಸತ್ಯವೇದಲ್ಲಿ ಓದುತ್ತೇವೆ. ನಂತರ ಎರಡು ಮೂರು ತಿಂಗಳುಗಳವರೆಗೆ ದೇವರು ಮಾತನಾಡುವುದಿಲ್ಲ ಮತ್ತು ಒಮ್ಮೊಮ್ಮೆ ಅನಿರೀಕ್ಷಿತವಾಗಿ ಮಾತನಾಡುತ್ತಾರೆ. ಆದುದರಿಂದ ಅವರು ಯಾವಾಗಲು ಎಚ್ಚರದಿಂದಿರಬೇಕಾಗುತಿತ್ತು. ಆದುದರಿಂದ ದೇವರು ತನ್ನ ಮಾತನ್ನು ಕೇಳಲು ಕಾತರದಿಂದರುವವರೊಂದಿಗೆ ಮಾತ್ರ ಮಾತನಾಡುತ್ತಾರೆ. ಈಗಿನಿಂದಲಾದರೂ ನೀವು ದೇವರ ಧ್ವನಿಯನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡರೆ ನಿಮ್ಮ ಜೀವನ ಮತ್ತು ನಿಮ್ಮ ಸೇವೆ ಸಂಪೂರ್ಣವಾಗಿ ಬದಲಾಗುತ್ತದೆ.

ಮಧ್ಯರಾತ್ರಿಯಲ್ಲಿ ದೇವರು ನಿಮ್ಮ ಜೊತೆ ಮಾತನಾಡಬಹದು ಅಥವಾ ದೇವರ ವಾಕ್ಯವನ್ನು ಓದುವಾಗ ದೇವರು ನಿಮ್ಮ ಜೊತೆ ಮಾತನಾಡಬಹುದು ಅಥವಾ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಜೊತೆ ಮಾತನಾಡಬಹುದು. ದೇವರು ನಿಮ್ಮ ಜೊತೆ ಒಬ್ಬ ಸಹೋದರ ಅಥವಾ ಸಹೋದರಿಯ ಮೂಲಕ ಮಾತನಾಡಬಹುದು. ಅನ್ಯರ ಮಧ್ಯವಿರುವಾಗ ಅಥವಾ ಒಬ್ಬರೇ ಇರುವಾಗ ಮಾತನಾಡಬಹುದು. ಅನೇಕ ರೀತಿಯಲ್ಲಿ ದೇವರು ನಿಮ್ಮ ಜೊತೆ ಮಾತನಾಡಬಹುದು. ಆದರೆ ನಾವು ಎಲ್ಲಾ ಸಮಯದಲ್ಲಿ ಕೇಳಿಸಿಕೊಳ್ಳುವ ಮನೋಭಾವದವರಾಗಿರಬೇಕು. ‘’ಮಾತಾಡು ಕರ್ತನೇ, ನಿನ್ನ ಸೇವಕ ಕೇಳುತ್ತಿದ್ದಾನೆ’’ ಎಂಬ ಮನೋಭಾವವೇ ಸಮುವೇಲನನ್ನು ಪ್ರವಾದಿಯಾಗಿ ಬೆಳೆಯುವಂತೆ ಮಾಡಿತು. ಅವನು ಕೇಳಿಸಿಕೊಂಡ ನಂತರ ದೇವರು ಏನು ಹೇಳಿದರೆಂದು ಇತರರಿಗೆ ಹೇಳಲು ಸಾಧ್ಯವಾಯಿತು.

ದೇವರು ಆ ದಿನ ಸಮುವೇಲನಿಗೆ ಈ ರೀತಿ ಹೇಳಿದರು ‘’ನಾನು ಎಲಿಯನ್ನು ಅವನು ಮಾಡಿದ ಪಾಪಕ್ಕೆ ಶಿಕ್ಷಿಸಲಿದ್ದೇನೆ.” ನಂತರ ಬೆಳಗ್ಗಿನ ಸಮಯ ಎಲಿಯು ಸಮುವೇಲನನ್ನು ಕರೆದು ಕೇಳಿದನು ’’ ಕರ್ತನು ಏನೆಂದು ಹೇಳಿದರು?’’ ಎಂದು. ಸಮುವೇಲನು (1 ಸಮುವೇಲ 3:18) ಎಲ್ಲಾ ವಿಷಯವನ್ನು ಹೇಳಿದನು. ಎಲಿಗೆ ಕೆಟ್ಟ ಸುದ್ದಿಯಾಗಿದ್ದರು, ಸಮುವೇಲನು ಎಲ್ಲಾ ವಿಷಯಗಳನ್ನು ಹೇಳಿದನು. ಒಬ್ಬ ದೇವರ ಸೇವಕನೆಂದರೆ ಇದೆ ರೀತಿಯಾಗಿ ಇರಬೇಕು. ಎಲಿಯು ಸಮುವೇಲನಿಗೆ ತುಂಬಾ ಒಳ್ಳೆಯವನಾಗಿದ್ದರೂ, ಸಮುವೇಲನು ‘’ದೇವರು ನಿಮ್ಮನ್ನು ಶಿಕ್ಷಿಸಲಿದ್ದಾರೆ ನಿನ್ನ ಮಕ್ಕಳು ತಮ್ಮ ಮೇಲೆ ಶಾಪವನ್ನು ಬರಮಾಡಿಕೊಂಡಿದ್ದಾರೆ ಮತ್ತು ನೀನು ಅವರನ್ನು ಗದರಿಸಲಿಲ್ಲ, ಎಂದು ಎಲ್ಲವನ್ನು ಹೇಳಲು ಹಿಂಜರಿಯಲಿಲ್ಲ’’.