ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ಒಬ್ಬ ದೈವೀಕ ನಾಯಕನು ತನ್ನ ಎಲ್ಲಾ ಕಾರ್ಯಗಳನ್ನು ದೇವರ ಬಲದಿಂದ, ದೇವರ ಚಿತ್ತಕ್ಕನುಗುಣವಾಗಿ ಮತ್ತು ದೇವರ ಮಹಿಮೆಗೊಸ್ಕರ ಮಾಡುತ್ತಾನೆ. 1 ಕೊರಿಂಥ 3:12-15 ರಲ್ಲಿ ಹೇಳುವ ಪ್ರಕಾರ ಆ ದಿನ ಕ್ರಿಸ್ತೇಸುವೆಂಬ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ ಅಥವಾ ರತ್ನ ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿರುವದು ಎಂಬುದು ಅವರವರ ಕೆಲಸದಿಂದ ವ್ಯಕ್ತವಾಗುವದು. 2 ಕೊರಿಂಥ 3:5,6 ನೇ ಅಧ್ಯಾಯದಲ್ಲಿ ಪೌಲನು ಹೀಗೆ ಹೇಳುತ್ತಾನೆ "ದೇವರು ನಮ್ಮನ್ನು ತಕ್ಕ ಹಾಗೆ ಸಿದ್ಧಗೊಳಿಸದೆ ಹೋದ ಪಕ್ಷದಲ್ಲಿ, ನಾವು ಹೊಸ ಒಡಂಬಡಿಕೆಯ ಸೇವಕರರಾಗಲು ಸಾಧ್ಯವಿಲ್ಲ". ಒಬ್ಬ ದೈವಿಕ ನಾಯಕನು ದೇವರು ಕೊಟ್ಟಿದ್ದರಲ್ಲಿ ಸಂಪೂರ್ಣವಾಗಿ ಸೇವೆ ಸಲ್ಲಿಸುವದಲ್ಲದೆ, ತನ್ನ ಶ್ರಮೆಗಳಿಗೆ ಯಾವುದೇ ಗೌರವ ಹೊಂದಲು ಬಯಸುವದಿಲ್ಲ. ನಮ್ಮಲ್ಲಿ ನಿಜವಾಗಿಯೂ ದೇವರಿಂದ ತುಂಬಿದ ಜೀವನ ಹೊಂದಿ ಇನ್ನೊಬ್ಬರನ್ನು ಆರ್ಶೀರ್ವದಿಸುವದೇ ಆಗಿದ್ದರೆ, ನಾವು ಯಾವುದೇ ಗೌರವ(ಸನ್ಮಾನ)ವನ್ನು ಹೊಂದಲು ಆಶಿಸುವುದಿಲ್ಲ. ಏಕೆಂದರೆ ನಾವು ತಯಾರಿಸದೇ ಇರುವಂಥದ್ದರಲ್ಲಿ ನಾವು ಹೆಮ್ಮೆ ಹೊಂದಲಿಕ್ಕಾಗದು. ಉದಾಹರಣೆಗೆ ಹೇಳ ಬೇಕಾದರೆ- ಇನ್ನೊಬ್ಬರು ತಯಾರಿಸಿದ ಸಿಹಿಯನ್ನು, ನಾನು ನಿಮ್ಮೆಲ್ಲರಿಗೆ ಹಂಚಿದಾಗ; ನೀವು ನನಗೆ- "ಸಹೋದರ ಜ್ಯಾಕ್ ಇದು ತುಂಬ ಅದ್ಭುತವಾಗಿದೆ" ಎಂಬುದಾಗಿ ಹೇಳುವುದಾದರೆ, ನನ್ನ ಮನಸ್ಸಿನಲ್ಲಿ ಇದರ ಗೌರವ ಸಂಪಾದಿಸಲಿಕ್ಕೆ ಆಕರ್ಷಣೆ ಕೂಡ ಆಗುವದಿಲ್ಲ, ಏಕೆಂದರೆ ಈ ಸಿಹಿಯನ್ನು ನಾನಂತು ತಯಾರಿಸಿಲ್ಲ ಕೇವಲ ಜನರಿಗೆ ಹಂಚಿದ್ದೆನೆ ಮಾತ್ರ. ಆ ಸಿಹಿಯನ್ನು ನಾನು ತಯಾರಿಸಿದ್ದೇ ಆಗಿದ್ದರೆ ನನ್ನ ಮನಸಿನಲ್ಲಿ ಗೌರವ ಹೊಂದಲಿಕ್ಕೆ ಆಸ್ಪದವಿದೆ. ಆದರೆ ಯಾರೋ ಬೇರೊಬ್ಬರು ತಯಾರಿಸಿದ್ದರಲ್ಲಿ ನಾನು ಹೇಗೆ ಗೌರವ ಹೊಂದಲಿ?

ಈ ರೀತಿಯಲ್ಲಿ, ಇನ್ನೊಬ್ಬರಿಗೆ; ದೇವರಿಂದ ಪಡೆದಿರುವದನ್ನು ನಾವು ಸಾಗಿಸುತ್ತೇವೊ ಅಥವಾ ಸ್ವಂತ ಬಲದಿಂದ ಪಡೆದಿರುವದನ್ನು ಸಾಗಿಸುತ್ತೇವಾ? ನಾವು ನಮ್ಮ ಸೇವೆ(ಸಿಹಿ)ಯಲ್ಲಿ ಬಹಳ ಹೆಮ್ಮೆ ಪಡುತ್ತಾ ಇದ್ದೇವಾ? ಹಾಗಾದರೆ ಈ ಸೇವೆ (ಸಿಹಿ)ಯನ್ನು ದೇವರಿಂದಲ್ಲ ನಮ್ಮಿಂದ ನಾವೆ ಪಡೆದ ಹಾಗಾಯಿತು. ಏಕೆಂದರೆ ದೇವರಿಂದ ಪಡೆದದ್ದೆ ಆಗಿದ್ದರೆ ಇದರಲ್ಲಿ ನಾವು ಹೆಚ್ಚಳ ಪಡುವ ಅವಕಾಶವೇ ಇಲ್ಲ. ಯೇಸುವಿನ ಶಿಷ್ಯರು ಮಿನು, ರೊಟ್ಟಿಯ ತುಂಡುಗಳನ್ನು ಜನರಿಗೆ ಹಂಚುವಾಗ ಯಾವ ಹೆಚ್ಚಳವನ್ನೂ ಅನುಭವಿಸಲಿಲ್ಲ. ಅಷ್ಟೇ ಅಲ್ಲ 5 ರೊಟ್ಟಿ 2 ಮಿನುಗಳನ್ನು ಕೊಟ್ಟಂಥ ಪುಟ್ಟ ಬಾಲಕನೂ ಕೂಡ ಹೆಮ್ಮೆ ಪಡಲಿಲ್ಲ. ಯೇಸುವಿನ ಶಿಷ್ಯರು ಕೇವಲ ಹಂಚಿದರು. ದೇವರ ನಾಮಕ್ಕೆ ಸ್ತೋತ್ರ, ನಾವೆಲ್ಲರೂ ಕೇವಲ ಹಂಚುವ ಸೇವೆಯಲ್ಲಿದ್ದೇವೆ ಹೊರತು ಉತ್ಪಾದಿಸುವಂಥದ್ದಲ್ಲ. ಆದ್ದರಿಂದಲೇ ನಾವು ಯಾವಾಗಲೂ ಸಮಾಧಾನದಿಂದ ಇರಬಹುದು. ಉತ್ಪಾದಿಸಬೇಕಾದ ಪರಿಸ್ಥಿತಿ ಇರುವಾಗ ಮಾತ್ರ ಚಿಂತೆ ಕಾಡುತ್ತದೆ; ಬದಲಾಗಿ ಹಂಚುವ ಸಮಯದಲ್ಲಲ್ಲ. ಹಂಚುವ ಕೆಲಸದಲ್ಲಿ ದಣಿವು ಇದೆ ಆದರೆ ಚಿಂತೆ ಇಲ್ಲ. ನಮ್ಮ ಸಂತೃಪ್ತಿ ದೇವರಿಂದ ಇದೆ. ನಾವು ಚೆನ್ನಾಗಿ ಬಲ್ಲೆವು ನಮ್ಮಿಂದ ಯಾವುದೇ ಯೋಗ್ಯವಾದದ್ದನ್ನು ಉಂಟುಮಾಡಲಿಕ್ಕಾಗುವದಿಲ್ಲ, ಅದಕ್ಕಾಗಿಯೇ ನಾವು ಅದಕ್ಕೊಸ್ಕರ ಪ್ರಯತ್ನವನ್ನೂ ಮಾಡುವದಿಲ್ಲ.

ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ, ಪವಿತ್ರಾತ್ಮನ ಸಹಾಯವಿಲ್ಲದೇ ಸಾಧಿಸುವ ಪ್ರತಿಯೊಂದೂ ಸೇವೆಯೂ ಮನುಷ್ಯನ ಸಾಧನೆಯಾಗಿದೆ, ಮತ್ತು ಇದಕ್ಕೆ ಯಾವುದೇ ನಿತ್ಯತ್ವವಾದ ಮೌಲ್ಯತೆ ಇರುವದಿಲ್ಲ. ನೀವು ಪ್ರಾರ್ಥನೆಯಿಲ್ಲದೆ, ದೇವರ ಸಹಾಯವಿಲ್ಲದೆ ಹಾಗು ಪವಿತ್ರಾತ್ಮನ ಶಕ್ತಿ ಇಲ್ಲದೆ ಭೋಧಿಸ ಬಹುದು ಮತ್ತು ಅನೇಕ ಸಾಧನೆಯೂ ಮಾಡಬಹುದು. ನಿಮ್ಮಲ್ಲಿ ಒಳ್ಳೆಯ ಸಾಮರ್ಥ್ಯ ಇರಬಹುದು ಅದರಿಂದ ಅನೇಕ ಸಾಧನೆ ಕೂಡ ಗಳಿಸಬಹುದು, ಆದರೆ ಒಂದು ದಿವಸ ನಮಗೆ ತಿಳಿಸಲ್ಪಡುತ್ತದೆ ಅದು ಕೇವಲ ಹುಲ್ಲು, ಕಟ್ಟಿಗೆ ಮತ್ತು ಆಪುಗಳಿಂದ ಕಟ್ಟಿರುವಂಥದ್ದು, ಎಂದು.

ಮತ್ತಾಯ 15:12,13 ರಲ್ಲಿ ಓದುವ ಪ್ರಕಾರ ಯೇಸುಸ್ವಾಮಿ ಪರಿಸಾಯರನ್ನು ಖಂಡಿಸಿದ ಮೇಲೆ ಶಿಷ್ಯರು ಯೇಸುಸ್ವಾಮಿಯ ಬಳಿ ಬಂದು ಆತನನ್ನು - "ಪರಿಸಾಯರು ನಿನ್ನ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ ಎಂದು ಕೇಳಿದರು". ಅದಕ್ಕೆ ಆತನು- "ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು". ಹಾಗಾದರೆ ನಾವು ಪ್ರತಿಸಾರಿ ಭೋದಿಸುವಾಗ ಒಂದು ಬೀಜವನ್ನು ನೆಡುತ್ತೇವೆ, ಹಾಗು ದೇವರಿಂದ ಬರದೇ ಇರುವ ಯಾವುದೇ ಬೀಜವನ್ನು ದೇವರು ಒಂದು ದಿವಸ ಕಿತ್ತು ಬಿಸಾಡುತ್ತಾನೆ. ನಮ್ಮ ಕೆಲಸ ನಿತ್ಯತ್ವದಲ್ಲಿ ನೆಲೆಗೊಳ್ಳಬೇಕೆಂದರೆ ನಮಗೆ ಬೇಕಾದಷ್ಟು ಒದಗಿಸುವ ಪವಿತ್ರಾತ್ಮನ ಮೊರೆ ಹೋದರೆ ಮಾತ್ರ ಸಾಧ್ಯವಿದೆ. ಆದರೆ ನಮ್ಮ ಸೇವೆಯನ್ನು ದೇವರಿಗೊಸ್ಕರ ಮಾಡುವಾಗ ಪ್ರಾರ್ಥನೆಯಿಲ್ಲದೆ ಪ್ರಾರಂಭಿಸುವದಾಗಲಿ, ಯಾವಾಗಲೂ ನಿರ್ಬಲಾವಸ್ತೆಯಿಂದ ಆತನ ಮೇಲೆ ಅವಲಂಬಿಸದೇ ಮತ್ತು ಆತನ ಪವಿತ್ರಾತ್ಮನ ಶಕ್ತಿಯ ಸಹಾಯವಿಲ್ಲದೆ ಮಾಡುವದಾದರೆ ಆ ಒಂದು ದಿವಸ ದೇವರು ಅಂತಹದೆಲ್ಲವನ್ನು ಬೇರು ಸಹಿತ ಕಿತ್ತು ಹಾಕುತ್ತಾನೆ.

ಕ್ರಿಸ್ತೀಯ ಕೆಲಸಗಳ ಬಹಳ ಅಂಶಗಳಲ್ಲಿ ನಮಗೆ ಪವಿತಾತ್ಮನ ಸಹಾಯದ ಅವಶ್ಯಕತೆ ಇಲ್ಲದಿದ್ದರೂ ಸಾಕಷ್ಟು ಹಣ ಮತ್ತು ಒಳ್ಳೆ ಕಾರ್ಯ ನಿರ್ವಹಿಸುವಂಥದ್ದು ಮಾತ್ರ ಇದ್ದರೆ ಸಾಕು. ಉದಾಹರಣೆಗೆ ಒಂದು ಸಂಜೀವನ ಕೂಟ ಏರ್ಪಡಿಸ ಬೇಕೆಂದರೆ ಹಲವು ಕೆಲಸ ಒಳಗೂಡಿರುತ್ತವೆ. ಒಂದು ಹಾಲ್ (ಸ್ಥಳ) ಬಾಡಿಗೆಗಾಗಿ ಪಡೆಯ ಬೇಕು, ಆಮಂತ್ರಣ ಪತ್ರಗಳನ್ನು ವಿತರಿಸ ಬೇಕು, ಬರುವ ಜನರ ಇರುವಿಕೆಗೆ ಸ್ಥಳ ಸಿದ್ಧ ಮಾಡಬೇಕು, ಹಾಗು ಊಟದ ವ್ಯವಸ್ಥೆಯನ್ನು ಮುಂತಾದ ಕೆಲಸಗಳು ಒಳಗೊಂಡಿದೆ. ನಿಜಾಂಶವೆನೆಂದರೆ ಲೌಖಿಕವಾದ ಕೂಟಗಳು ಹಲವು ಕ್ರಿಸ್ತೀಯ ಕೂಟಗಳಿಗಿಂತ ಅದ್ಧುರಿಯಾಗಿಯೇ ಇರುತ್ತವೆ. ಆದರೆ ಕ್ರಿಸ್ತೀಯ ಕೂಟದಲ್ಲಿ ಅನಂತವಾಗಿ ನೆಲೆಗೊಳ್ಳುವ ವಿಷಯವೆನೆಂದರೆ "ದೇವರ ವಾಕ್ಯ" . ಅದನ್ನು ಕೇವಲ ಪವಿತ್ರಾತ್ಮನ ಅಭಿಷೇಕದಿಂದ ಸಾರಬೇಕು.

ಇಂತಹ ಕೂಟಗಳಿಗೆ ಬೇಕಾದ ವ್ಯವಸ್ಥೆಯ ಬಗ್ಗೆ ಅಲಕ್ಷ್ಯವಾಗಿ ನಾನು ಮಾತಾಡುತ್ತಿಲ್ಲ, ಒಂದು ಕೂಟದ ಸಫಲತೆಗೆ ಅವುಗಳ ಅವಶ್ಯಕತೆ ಇದೆ. ಆದರೆ ಯಾವದು ನಿತ್ಯತ್ವದಲ್ಲಿ ಬೆಲೆವುಳ್ಳದ್ದೆಂದರೆ, ಪವಿತ್ರಾತ್ಮನ ಶಕ್ತಿಯಿಂದ ಮಾಡಿರುವ ಪ್ರತಿಯೊಂದು ಕಾರ್ಯ ಮಾತ್ರವೆಂಬದು ನೆನಪಿರಲಿ. ಈ ನಿಜಾಂಶವನ್ನು ನಮ್ಮ ಸೇವೆಯಲ್ಲಿಯೂ ಕೂಡ ಅನುಸರಿಸೋಣ. ಆದ್ದರಿಂದ ನಮ್ಮ ಸೇವೆಯನ್ನು ನಾವೇ ಪರಿಕ್ಷಿಸೋಣ, ಕೇವಲ ಮನುಷ್ಯ ತರಬೇತಿ ಹಾಗು ಸಹಾಯದಿಂದ ನಮ್ಮ ಸೇವೆಯಲ್ಲಿ ಮುಂದೆ ಸಾಗುತ್ತಾವಿದ್ದೆವಾ ಎಂಬುದನ್ನು ಪರಿಕ್ಷಿಸೋಣ. ಪ್ರಾಮಾಣಿಕತೆಯಿಂದ ಇದನ್ನು ಅವಲೋಕಿಸಿದರೆ, ನಿಜವಾಗಿಯೂ ಆಶ್ಚರ್ಯಕರವಾದ ಉತ್ತರ ದೊರೆಯುತ್ತದೆ.

ಯೇಸುಕ್ರಿಸ್ತನು ನಿನ್ನೆಯಿದ್ದಂತೆ ಇಂದು, ಎಂದಿಗೂ ಇರುವವನು. ಅವನಿಗೆ ವಿರೋಧವು ಇವತ್ತಿಗೂ ಕೂಡ ಸತ್ಯವೇದ ಪ್ರಾಧ್ಯಾಪಕರು, ಸತ್ಯವೇದದ ಜೀವಿತ ಇಲ್ಲದೆ ಪವಿತ್ರಾತ್ಮನ ಅಭಿಷೇಕವಿಲ್ಲದೆ ನಾಯಕತ್ವ ಹೊಂದಿರುವ ಅನೇಕ ಸೇವಕರ ಮೂಲಕವಿದೆ. ಅಪೊಸ್ತಲರೂ ಕೂಡ ತಮ್ಮಕಾಲದಲ್ಲಿ ಇಂತಹ ವಿರೋಧವನ್ನು ಜನರಿಂದ ಅನುಭವಿಸಿದರು, ನಾವೂ ಕೂಡ ಯೇಸು ತೊರಿಸಿದ ಹೆಜ್ಜೆಜಾಡಿನಲ್ಲಿ ನಡೆಯುವದಾದರೆ ನಮಗೂ ಈ ವಿರೋಧದ ಅನುಭವ ಇರುವಂತಹದ್ದಾಗಿದೆ.

ನಾನು ಕರ್ತನ ಜೊತೆ ನಡೆಯುವದರಲ್ಲಿ ಹೆಚ್ಚು ಆಸಕ್ತನಾಗಿದ್ದೆನೆ. ಇಂತಹ ಜನರನ್ನು ಮೆಚ್ಚುಸುದಕ್ಕೊಸ್ಕರ ದೇವರನ್ನು ಅಸಮಾಧಾನ ಪಡಿಸುವದು ನನ್ನಿಂದ ಸಾಧ್ಯವಿಲ್ಲ. ಅಷ್ಟೆ ಅಲ್ಲ ಎಲ್ಲ ಜಗತ್ತನ್ನೂ ವಿರೋಧವಾಗಿ ನಿಲ್ಲಬೇಕಾದ ಪರಿಸ್ತಿತಿ ಬಂದರೆ ಅದಕ್ಕೊಸ್ಕರವೂ ಸಿದ್ಧನಿದ್ದೆನೆ, ಇದು ದೇವರ ಮೆಚ್ಚಿಸುವದಕ್ಕೆ ಬೆಲೆಯಾಗಿದ್ದರೆ ಇದಕ್ಕೂ ಹಿಂಜರಿಯುವದಿಲ್ಲ. ಗಲಾತ್ಯ 1:10 ರಲ್ಲಿ ನಾವು ಹೀಗೆ ಓದುತ್ತೆವೆ "ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ". ಹಾಗಿದ್ದರೆ ನಿರಂತರ ನಿರ್ಬಲಾವಸ್ತೆಯಿಂದ ದೇವರ ಬಳಿ ನಮ್ಮ ಸೇವೆಗೊಸ್ಕರ ಬಲಕ್ಕಾಗಿ ಬರುವ ಹಾಗೆ ಮತ್ತು ಪವಿತ್ರಾತ್ಮನ ಅಭೀಷೆಕ ನಮ್ಮ ಮೇಲೆ ಯಾವಾಗಲೂ ಇರುವಂತೆ ಆಸಕ್ತ ಚಿತ್ತದಿಂದ ಮುಂದೆ ಸಾಗೋಣ.