ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಹುಡುಕುವವರಿಗೆ
WFTW Body: 

ಇಬ್ರಿಯ. 12:15ರಲ್ಲಿ, ಸತ್ಯವೇದವು ವಿಷವುಳ್ಳ (ಕಹಿತನವುಳ್ಳ)ಬೇರು ತೊಂದರೆ ಮಾಡುವುದರ ಬಗ್ಗೆ ಹೇಳುತ್ತದೆ. ಅದು ಹಣ್ಣಾಗುವ ತನಕ ಕಾಯಬೇಕಾಗಿಲ್ಲ. ಬೇರು ಅಂದರೆ ಏನೆಂಬುದು ನಿಮಗೆ ತಿಳಿದಿದೆ. ಒಂದು ಮರವು ಬೇರು ಬಿಡಲು ಆರಂಭಿಸಿದಾಗ, ಬಹುಶ ಅದು ಇನ್ನೂ ಭೂಮಿಯ ಮೇಲೆ ಬೆಳೆದಿರಲಿಕ್ಕಿಲ್ಲ. ನಾವು ಬೀಜವನ್ನು ಬಿತ್ತಿದಾಗ, ಮೊದಲು ಅದು ಬೇರು ಬಿಡುತ್ತದೆ. ನಂತರವೇ ಅದು ಗಿಡವಾಗಿ ಬೆಳೆಯುವುದು.

ವಿಷವೆಂಬುದು (ಕಹಿತನ) ಹಾಗೆಯೇ. ನೀನು ನಿನ್ನ ಹೃದಯದಲ್ಲೇನದರೂ ಬಿತ್ತಿದ್ದೀಯ. ಅದು ಬೇರು ಬಿಡಲು ಆರಂಭಿಸುತ್ತದೆ. ನೀನದನ್ನು ಕಿತ್ತೊಗೆಯದಿದ್ದರೆ, ಅದು ಬೇರೂರಿ ನಿನಗೆ ತುಂಬಾ ತೊಂದರೆಯನ್ನು ಕೊಡುತ್ತದೆ. ಅದಲ್ಲದೆ, ನಿನ್ನ ಸುತ್ತಲಿರುವ ಅನೇಕ ಜನರಿಗೂ ಅದು ಕೆಡುಕನ್ನುಂಟು ಮಾಡುತ್ತದೆ. ಯಾಕೆಂದರೆ, ತನ್ನ ಹೃದಯದಲ್ಲಿ ಕಹಿತನವನ್ನು ಹೊಂದಿರುವವನು ತನ್ನ ಸುತ್ತಲಿರುವ ಜನರಿಗೆ ಅದರ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಅದು, ಸಿಡುಬು ರೋಗಿಯೂಬ್ಬ ಅಥವಾ ಕ್ಷಯ ರೋಗಿ ಅಥವಾ ಶೀತ ಅಥವಾ ಜ್ವರ ಇದ್ದವನು ಎಲ್ಲ ಕಡೆ ಹೋಗಿ ತನ್ನ ಕಾಯಿಲೆಯನ್ನು ಇತರರಿಗೆ ಹರಡಿದಂತೆ. ಕಾಯಿಲೆಯನ್ನು ಹರಡುವುದು ತುಂಬಾ ಸುಲಭ. ಕಹಿತನದಿಂದ ಕೂಡಿರುವವರು ಜಗತ್ತಿನೆಲ್ಲೆಡೆಯೂ ಇದ್ದಾರೆ. ಕ್ರೈಸ್ತ ಸಾಮ್ರಾಜ್ಯದಲ್ಲೂ ಅಂಥವರನ್ನು ಕಾಣಬಹುದು. ಮತ್ತೊಬ್ಬರ ಬಗ್ಗೆ ದೂರುವವರು ಅಥವಾ ಇನ್ನೊಬ್ಬರ ಬಗ್ಗೆ ಸುದ್ದಿ ಮಾಡುವವರು ಅಥವಾ ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವವರ ಹೃದಯದಲ್ಲಿರುವುದೇನು? ಇತರರ ವಿರುದ್ಧ ಅವರಲ್ಲಿ ವಿಷವಿದೆ(ಕಹಿತನವಿದೆ).

ಸಾಂಕ್ರಾಮಿಕತೆಯಿಂದ (ರೋಗ ಹರಡುವಿಕೆಯಿಂದ) ನಿನ್ನನ್ನೇ ನೀನು ರಕ್ಷಿಸಿಕೊಳ್ಳಬೇಕಾದರೆ, ನೀನೇನನ್ನು ಕೇಳಿಸಿಕೊಳ್ಳುತ್ತಿರುವೆ ಎಂಬುದರ ಬಗ್ಗೆ ಜಾಗರೂಕನಾಗಿರು. ಯಾರಿಂದಾದರೂ ಏಡ್ಸ್ ರೋಗವನ್ನು ನೀನು ಪಡೆಯಬಯಸುತ್ತೀಯ? ನೀನೆಷ್ಟು ಜಾಗರೂಕನಾಗಿರುವೆ? ಇದು ಅದಕ್ಕಿಂತಲೂ ಗಂಭೀರವಾದುದು. ಏಡ್ಸ್ ಗಿಂತಲೂ ಅತಿಯಾಗಿ ಅದು ನಿನ್ನನ್ನು ನಾಶಮಾಡಬಹುದು. ಕುಷ್ಟರೋಗಿಯನ್ನು ನೀನು ತಬ್ಬಿಕೊಳ್ಳಬಯಸುತ್ತೀಯ? ಇತರರ ಬಗ್ಗೆ ಚಾಡಿ ಮಾತಾಡುವ(ದೂರುವ)ವರನ್ನು ನೀನೇಕೆ ನಿನ್ನ ಮನೆಗೆ ಸ್ವಾಗತಿಸುತ್ತೀಯ ಮತ್ತು ತಬ್ಬಿಕೊಳ್ಳುತ್ತೀಯ? 1 ತಿಮೊಥೆ 5:13 ರಲ್ಲಿ ಮನೆಯಿಂದ ಮನೆಗೆ ಚಾಡಿ ಮಾತಾಡುವ ಹೆಂಗಸರ ಬಗ್ಗೆ ಸತ್ಯವೇದ ಹೇಳುತ್ತದೆ. ನಮ್ಮ ಅನೇಕ ಸಭೆಗಳಲ್ಲಿ ಇಂಥಹ ಅನೇಕ ಹೆಂಗಸರಿದ್ದಾರೆ. ಈ ಎಲ್ಲ ಹೆಂಗಸರು ಸೈತಾನನ ಪ್ರತಿನಿಧಿಗಳೆಂದು ಹೇಳಲು ನಾನು ಹಿಂಜರಿಯುವುದಿಲ್ಲ.

ನೀನು ಅವರನ್ನು ಸ್ವಾಗತಿಸುವುದು ಮಾತ್ರವಲ್ಲದೆ ಅವರಿಗೆ ಟೀ, ಬಿಸ್ಕಿಟ್ ಕೊಟ್ಟು ಸೈತಾನನು ಅವರ ಮೂಲಕ ನಿನಗೆ ಹೇಳಬೇಕೆಂದಿರುವುದನ್ನು ನೀನು ಕೇಳಿಸಿಕೊಳ್ಳುತ್ತೀಯ. ನಂತರ ಅವಳು ಇನ್ನೊಂದು ಮನೆಗೆ ಹೋಗುತ್ತಾಳೆ ಮತ್ತು ಅವಳು ಹೇಳಿದ ಸುದ್ದಿ ಕೇಳಿ ನೀನು ಇನ್ನೊಂದು ಮನೆಗೆ ಹೋಗುತ್ತೀಯ. ಹೀಗೆ ಸೈತಾನನು ತನ್ನ ನೂರಾರು ಪ್ರತಿನಿಧಿಗಳನ್ನು ದಿನೇ ದಿನೇ ಹೆಚ್ಚಿಸುತ್ತಾನೆ. ವಿಶ್ವಾಸಿಗಳು ಸಭೆಯಲ್ಲಿದ್ದುಕೊಂಡೇ ಅವನ ಕೆಲಸವನ್ನು ಮಾಡುತ್ತಾರೆ. ಸಹೋದರರನ್ನು ದೂರುವವನು ಎಂದು ಸೈತಾನನು ಕರೆಯಲ್ಪಟ್ಟಿದ್ದಾನೆ. ಪ್ರಕಟನೆ: 12:10 ರಲ್ಲಿ ನಾವು ಓದುವುನೇಂದರೆ, ಸಹೋದರರನ್ನು ದೂರುವವನು ದಬ್ಬಲ್ಪಟ್ಟಿದ್ದಾನೆ ಎಂಬುದಾಗಿ. ನಿನ್ನ ಮನೆಗೆ ಬಂದ ಆ ವ್ಯಕ್ತಿ ಸಹೋದರರ ದೂರುಗಾರ. ನೀನೂ ವಿಶ್ವಾಸಿ-ಸಹೋದರರ ದೂರುಗಾರನೇ?

ನೀನು ಹೇಳುತ್ತಿರುವುದು ಸರಿಯೇ ತಪ್ಪೇ ಎಂಬುದು ಪ್ರಮುಖವಲ್ಲ. ಪ್ರಕಟನೆ: 12:10ರಲ್ಲಿ "ಸೈತಾನನು ದೇವರ ಮುಂದೆ ಸಹೋದರರನ್ನು ದೂರುತ್ತಾನೆ". ಸೈತಾನನು ನಮಗೆ ಅನೇಕ ಸುಳ್ಳುಗಳನ್ನು ಹೇಳಬಹುದು. ಅವನೊಬ್ಬ ಸುಳ್ಳುಗಾರ. ಆದರೆ ದೇವರ ಮುಂದೆ ಅವನು ಸುಳ್ಳು ಹೇಳಲಾರ. ದೇವರ ಮುಂದೆ ನಮ್ಮ ಬಗ್ಗೆ ದೂರುವಾಗ ಸೈತಾನನು ಹೇಳುವುದೇನು? ಅವನು ದೇವರಲ್ಲಿಹೇಳುವುದೇನೆಂದರೆ, ನೀನು ನಿಜವಾಗಿಯೂ ಮಾಡಿದ ತಪ್ಪು. ಅವನು ನಿನ್ನ ಜೀವನವನ್ನು ಕೂಲಂಕುಶವಾಗಿ ಗಮನಿಸುತ್ತಿರುತ್ತಾನೆ. ನೀನೇನಾದರೂ ತಪ್ಪು ಮಾಡಿದರೆ ಅದನ್ನವನು ದೇವರಲ್ಲಿ ದೂರು/ಚಾಡಿ ಹೇಳುತ್ತಾನೆ: "ನೋಡು ಅವನು ಮಾಡಿದ ಈ ಕೃತ್ಯ ತಪ್ಪು ಎಂದು, ಅದು ಸುಳ್ಳಲ್ಲ" ಅದೇ ರೀತಿ ಮತ್ತೊಬ್ಬನ ಬಗ್ಗೆ ಅವನು ದೇವರಲ್ಲಿ ಹೇಳುತ್ತಾನೆ. "ನೋಡು ಆ ವ್ಯಕ್ತಿ ಮಾಡಿದ್ದು ನಿಜವಾಗಿಯೂ ತಪ್ಪು, ಅದು ಸುಳ್ಳಲ್ಲ. ಆದ್ದರಿಂದ ದೇವರ ಮುಂದೆ ಸೈತಾನನು ಮಾಡುವ ದೂರುಗಳೆಲ್ಲವೂ ನಿಜವಾದುವುಗಳು. ಅವು ಸುಳ್ಳಲ್ಲ.

ಆದ್ದರಿಂದ ನಾವು ಕಲಿಯುವ ಇನ್ನೊಂದು ಪಾಠವೇನೆಂದರೆ, ಯಾವನೋ ಒಬ್ಬ ಬಂದು, ನನಗೊಂದು ಕತೆ/ಸುದ್ದಿ ಹೇಳಿದರೆ, ಅದು ಸಂಪೂರ್ಣವಾಗಿ ಸತ್ಯವಾಗಿದ್ದರೂ, ಅವನು ಸಹೋದರರ ದೂರುಗಾರನಾಗಬಹುದು. ಅವನು ಸಹೋದರರ ಮಹಾ ದೂರುಗಾರನಾದ ಸೈತಾನನೊಡನೆ ಸಂಪೂರ್ಣವಾಗಿ ಅನ್ಯೋನ್ಯತೆಯಿಂದಿದ್ದಾನೆ. ಅವನು ಸಹೋದರರನ್ನು ದೂರುವ ಕೆಲಸವನ್ನು ಸದಾ ಮಾಡುವವನಾಗಿದ್ದಾನೆ. ಸೈತಾನನಿಗೆ ತನ್ನ ಪ್ರತಿನಿಧಿಗಳು ಬೇಕು. ಅವಿಶ್ವಾಸಿಗಳಲ್ಲಿ ಅವನಿಗೆ ಅನೇಕ ಪ್ರತಿನಿಧಿಗಳಿದ್ದಾರೆ. ಆದರೆ ದೇವರ ಮಕ್ಕಳ ಮಧ್ಯದಲ್ಲೂ ಅವನಿಗೆ ಪ್ರತಿನಿಧಿಗಳಿವೆ.

ಒಬ್ಬನ ಬಗ್ಗೆ ಕಹಿತನವಿರುವವರು, ಒಬ್ಬನನ್ನು ಕ್ಷಮಿಸದವರು, ಮತ್ತೊಬ್ಬನನ್ನು ದೂರುವವರು, ಮತ್ತೊಬ್ಬನ ಬಗ್ಗೆ ಸುದ್ದಿಯನ್ನು ಹರಡುತ್ತಾ ಹೋಗುತ್ತಾರೆ. ಆದ್ದರಿಂದಲೇ ಕೊಲೊಸ್ಸೆ 3:13 ರಲ್ಲಿ ನಾವು ಓದುವುದೇನೆಂದರೆ, "ಯಾವನಿಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕಿಸ್ತರು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ". ಯಾರ ಬಗ್ಗೆಯಾದರೂ ನಿನಗೆ ದೂರಿದೆಯೇ? ನಿನಗೆ ಯಾರಾದರೂ ಕೆಟ್ಟದ್ದನ್ನು ಮಾಡಿದ್ದಾರೆಯೇ? ಅವರನ್ನು ನೀನು ಕ್ಷಮಿಸು. ಕ್ಷಮಿಸದಿದ್ದರೆ ನೀನು ಸೈತಾನನ ಪ್ರತಿನಿಧಿಯಾಗುತ್ತೀಯ. ಅದು ಬಹಳ ಸುಲಭ. ನೀನು ಅವನನ್ನು ಕ್ಷಮಿಸಿದ್ದೀಯೆಂದು ತಿಳಿಯಬಹುದು. ಆದರೆ, ಮತ್ತೊಬ್ಬನಲ್ಲಿಗೆ ಹೋಗಿ ನೀನು ನಿನ್ನ ಕಷ್ಟದ ಕತೆಯನ್ನು ಆತನಲ್ಲಿ ಹೇಳಿ ಅವನು ನಿನಗಾಗಿ ಬೇಸರಪಡುವಂತೆ ಮಾಡುವುದು ನೀನು ಆತನನ್ನು ಕ್ಷಮಿಸಿಲ್ಲವೆಂದು ಸೂಚಿಸುತ್ತದೆ.

ಈ ರೀತಿಯಾಗಿ ನೀನು ಯಾರನ್ನು ನಾಶಪಡಿಸುತ್ತೀ? ನೀನು ಸುಳ್ಳುಕತೆಗಳನ್ನು ಹೇಳಿ ಇನ್ನೊಬ್ಬನ ಹೆಸರನ್ನು ನಾಶಪಡಿಸುತ್ತಿದ್ದೀಯೆಂದು ನೀನು ಯೋಚಿಸಬಹುದು. ಆ ಮನುಷ್ಯನು ದೇವರನ್ನು ಪ್ರೀತಿಸುವವನಾದರೆ, ನೀನು ಅವನಿಗೆಸಗುವ ಕೆಡುಕನ್ನು ದೇವರು ಆತನ ಒಳ್ಳೆಯದಕ್ಕಾಗಿ ಮತ್ತು ಅವನನ್ನು ಪಾವನಗೊಳಿಸುವುದಕ್ಕಾಗಿ ಉಪಯೋಗಿಸಬಲ್ಲನೆಂದು ನಿನಗೆ ತಿಳಿದಿದೆಯೇ? ನಂತರ ನೀನೇ ನಾಶಹೊಂದಬಹುದು. ಆದ್ದರಿಂದ ಅಂಥಹ ಮನೋಭಾವವನ್ನು ಬಿಟ್ಟುಬಿಡು. ಯೇಸುವು ತನ್ನ ಮಕ್ಕಳಿಗಾಗಿ, ಮತ್ತು ತಪ್ಪಿದ ತನ್ನ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸಿದನು. ಸೈತಾನನು ಅವರನ್ನು ದೂರುತ್ತಾನೆ. ನಿನಗೊಂದು ಆಯ್ಕೆಯಿದೆ. ಒಂದೇ ಯೇಸುವಿನೊಂದಿಗೆ ಅನ್ಯೋನ್ಯತೆಯಿಂದಿದ್ದು, ಅವರಿಗಾಗಿ ಪ್ರಾರ್ಥಿಸು ಇಲ್ಲವೇ, ಸೈತಾನನೊಡನೆ ಅನ್ಯೋನ್ಯತೆಯಿಂದಿದ್ದು ಅವರನ್ನು ದೂರು. ಕಡೇ ಪಕ್ಷ ಇಂದಿನಿಂದ ನೀನು ಸರಿಯಾದ ಆಯ್ಕೆಯನ್ನು ಮಾಡುವಿಯೆಂದು ನನಗೆ ನಿರೀಕ್ಷೆಯಿದೆ.