ಸ್ತೆಫನನ ಬಗ್ಗೆ (ಅ. ಕೃ. 6:10) ರಲ್ಲಿ, ಆತನು ಯಹೂದಿ ಧರ್ಮ-ನಾಯಕರಿಗೆ ಬೋಧಿಸುವಾಗ ಅವರು, "ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು." ಎಂದು ಬರೆಯಲಾಗಿದೆ. ನಾವು ಮಾತನಾಡುವಾಗ ಕೂಡ, ಇಂತಹ ಅನುಭವ ನಮ್ಮದಾಗಬಹುದು. ಸ್ತೆಫನನು ಅವರಿಗೆ - "ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? (ಅ.ಕೃ 7:52) ಎಂದು ಕೇಳಿದನು.
ಹಳೆ ಒಡಂಬಡಿಕೆಯ ಪ್ರತಿಯೊಂದು ಪ್ರವಾದಿಗಳು ಜನಪ್ರಿಯವಾಗಿರದವರಾಗಿದ್ದರು ಮತ್ತು ಬಾಧೆ (ಹಿಂಸೆ) ಪಡುವವರಾಗಿದ್ದರು. ಪ್ರವಾದಿಯು, ಬೋಧನೆ ಮಾಡುವ ಗುರುವಿ(ಶಿಕ್ಷಕನಿ)ಗಿಂತ ಬೇರೆಯಾಗಿದ್ದಾನೆ(ವಿಭಿನ್ನನಾಗಿದ್ದಾನೆ). ಬೋಧಕನನ್ನು ಅನೇಕರು ಸ್ವೀಕರಿಸಬಹುದು ಆದರೆ ಪ್ರವಾದಿಯು ಸಾಮಾನ್ಯವಾಗಿ ಜನಪ್ರಿಯನಾಗಿರುವದಿಲ್ಲ ಮತ್ತು ಆತನು ತಿರಸ್ಕರಿಸಲ್ಪಡುತ್ತಾನೆ. ಬೋಧಕನು ಯಾವುದೇ ವಿವಾದದಲ್ಲಿ ಸಿಲುಕಿರುವದಿಲ್ಲ. ಆದರೆ ನಿಜವಾದ ಪ್ರವಾದಿಯು ಯಾವಾಗಲೂ ವಿವಾದದಿಂದ ಸುತ್ತುವರಿದಿರುತ್ತಾನೆ. ಅದಕ್ಕಾಗಿ ಪ್ರವಾದಿಗಳು ಯಾವಾಗಲೂ ಹಿಂಸೆಯಿಂದ ಭಾದಿಸಲ್ಪಡುತ್ತಾರೆ. ಆದರೆ, ಬೋಧಕನಾಗಲೀ ಸುವಾರ್ತಾಪ್ರಚಾರಕನಾಗಲೀ ಹಿಂಸಿಸಲ್ಪಡುವದಿಲ್ಲ. ಸ್ತೆಫನನು ಸುವಾರ್ತೆ ಪ್ರಚಾರ ಮಾಡಿದಾಗ ತಾವು ಪಾಪಿಗಳೆಂದು ಅವರಿಗೆ ತಮ್ಮ ಆತ್ಮಸಾಕ್ಷಿ ಹೇಳಿತು. ಇದು ಅವರನ್ನು ಅದೆಷ್ಟು ರೇಗಿಸಿತೆಂದರೆ ಅವರು ಸ್ತೆಫನನನ್ನು ಕೊಂದುಬಿಟ್ಟರು. ಕ್ರಿಸ್ತನ ಸಭೆಯಲ್ಲಿ ಸ್ತೆಫನನು ಪ್ರಥಮ ರಕ್ತಸಾಕ್ಷಿಯಾದನು (ವಚನ 7:54,55).
ಅ.ಕೃ 7:55-60 ರಲ್ಲಿ ಸ್ತೆಫನನ ಬಗ್ಗೆ ಬರೆಯಲಾದ ವಾಕ್ಯಗಳಲ್ಲಿ, ನಿಜವಾಗಿಯೂ ಪವಿತ್ರಾತ್ಮನಿಂದ ತುಂಬಿದ ಪ್ರವಾದಿಯ ಗುಣಲಕ್ಷಣಗಳನ್ನು ನಾವಿಲ್ಲಿ ಗಮನಿಸಬಹುದು.
ಅನೇಕ ಕಾರಣಗಳಿಗಾಗಿ, ಸ್ತೆಫನನು ಮರಣಹೊಂದುವಂತೆ ದೇವರು ಸಮ್ಮತಿಸಿದನು. ಇದರಲ್ಲಿ ಮುಖ್ಯವಾದದ್ದು- ತಾರ್ಸಸಿನ ಸೌಲನ ಮಾನಸಾಂತರ. ಸ್ತೆಫನನು ಕೊಲ್ಲಲ್ಪಡುವ ಸಮಯದಲ್ಲಿ ಸ್ತೆಫನಲ್ಲಿದ್ದ ನಂಬಿಕೆಯಾಗಲಿ ಅಥವಾ ತನ್ನನ್ನು ಹಿಂಸಿಸಿದವರ ಬಗ್ಗೆ ಅವನ ಮನೋಭಾವವನ್ನು ಸೌಲನು ನೋಡದೆ ಇರುತ್ತಿದ್ದರೆ, ಸೌಲನು ಮಾನಸಾಂತರ ಹೊಂದುತ್ತಿರಲಿಲ್ಲವೇನೋ? ಕೊನೆ (ಸಾಯುವ) ಗಳಿಗೆಯಲ್ಲಿ ಯೇಸುವು ಪ್ರಾರ್ಥನೆ ಮಾಡುವದನ್ನು ನೋಡಿ, ಇವನು ನಿಜವಾಗಿಯೂ ದೇವರ ಮಗನಾಗಿದ್ದನು ಎಂದು ರೋಮ್ ಸಾಮ್ರಾಜ್ಯದ ಶತಾಧಿಪತಿಗೆ ಮನವರಿಕೆಯಾಯಿತು.
ಸ್ತೆಫನನು ಪ್ರಾರ್ಥನೆ ಮಾಡುವದನ್ನು ಸೌಲನು ನೋಡಿದಾಗ ಅವನ ಆತ್ಮಸಾಕ್ಷಿಯು ಅವನನ್ನು ಚುಚ್ಚಿತು ಮತ್ತು ಸೌಲನು ಬಹುಶ: ಯೋಚಿಸಿದ್ದೇನೆಂದರೆ, "ಇದು ಸುಳ್ಳು ಧರ್ಮವಾಗಿರಲಾರದು. ಬಹುಶ: ನಾನೇ ತಪ್ಪಾಗಿರಬಹುದು." ಕೊನೆಗೆ ದಮಸ್ಕದ ಹಾದಿಯಲ್ಲಿ ಹೋಗುವಾಗ ಯೇಸು ಪೌಲನನ್ನು ನೋಡಿ "ಸೌಲನೇ, ಸೌಲನೇ ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ? ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ" (ಅ.ಕೃ 26:14) ಎಂದಾಗ ಸೌಲನು ಮಾನಸಾಂತರ ಹೊಂದಿದನು.
ನಿಮಗೆ ಕೇಡನ್ನು ಮಾಡಿದ ಜನರಿಗೆ ನೀವು ಪ್ರತಿಕ್ರಿಯಿಸುವದನ್ನು ಬೇರೊಬ್ಬರು ನೋಡಿದಾಗ, ಅದು, ಅವರ ಮೇಲೆ ಒಂದು ರೀತಿಯಾದ ಪರಿಣಾಮ ಬೀರುತ್ತದೆ. ಮತ್ತು ಇದು ಅವರ ರಕ್ಷಣೆಗೆ ಆಸ್ಪದವಾಗುತ್ತದೆ. 2000 ವರ್ಷಗಳಿಂದ ಕ್ರೈಸ್ತರು ಹಿಂಸೆಗೆ ತೋರಿಸಿದ ದೈವಿಕ ಪ್ರತಿಕ್ರಿಯೆಯನ್ನು ನೋಡಿ ಅನೇಕರು ಮಾನಸಾಂತರ ಹೊಂದಿದವರಲ್ಲಿ ಸೌಲನು ಮೊದಲನೆಯವನಾಗಿದ್ದಾನೆ. ಆದರೆ ಸ್ತೆಫನನಂತೆ ಪ್ರತಿಕ್ರಿಯಿಸಲು ನಾವು ಪವಿತ್ರಾತ್ಮನಿಂದ ತುಂಬಲ್ಪಡಬೇಕು.