WFTW Body: 

ಸಭೆಯೆಂಬುದು ಹೊಸ ಒಡಂಬಡಿಕೆಯಲ್ಲಿ ದೇವರು ಕಟ್ಟುವ ಮನೆಗೆ ಹೊಲಿಕೆಯಾಗಿದೆ, ಮತ್ತು ಜ್ಞಾನೋಕ್ತಿ 24:3 ರಲ್ಲಿ ಹೇಳುವ ಪ್ರಕಾರ ಒಂದು ಮನೆ ಕಟ್ಟಬೇಕಾದರೆ ಜ್ಞಾನವು ಮೂಲಕಾರಣವಾಗಿದೆ.

ಕೇವಲ ದೇವರ ವಾಕ್ಯವನ್ನು ಅಭ್ಯಾಸ ಮಾಡುವುದರಿಂದ ಶಿಷ್ಯನಾಗಲು ಸಾದ್ಯವಿಲ್ಲ, ಇದು ಒಬ್ಬನ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಅಷ್ಟೆ. ಆದರೆ ಜ್ಞಾನೋಕ್ತಿ 9:10 ರಲ್ಲಿ ಹೇಳುವ ಪ್ರಕಾರ ದೇವರ ಭಯವೇ ಜ್ಞಾನದ ಮೂಲ. ದೇವರ ಭಯವೆಂಬುದು ಕ್ರಿಸ್ತೀಯ ಬದುಕಿನ ಅ,ಆ,ಇ,ಈ ಆಗಿದೆ. ಯಾಕೋಬ 3:17 ರಲ್ಲಿ ನಾವು ಹೀಗೆ ಓದುತ್ತೇವೆ "ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು". ಆದ್ದರಿಂದ ಕ್ರಿಸ್ತನ ಸಭೆಯನ್ನು ಕಟ್ಟುವವರು ಮೊದಲನೇಯದಾಗಿ ದೇವರ ಭಯವನ್ನು ಹೊಂದ ಬೇಕು. ಅವರು ಮತ್ತೊಬ್ಬರಿಗೆ ಕೀರ್ತನೆ 34:11 ರಲ್ಲಿ ಹೇಳಿದ ಪ್ರಕಾರ ಹೇಳಬೇಕು ಅದೇನೆಂದರೆ "ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ದೇವರ ಭಯವನ್ನು ನಿಮಗೆ ಕಲಿಸುವೆನು".

ನಾವು ಭೋದನೆಯ ನಿಖರತೆಯಾಗಲಿ, ಭಾವಾತ್ಮಕ ಅನುಭವವಾಗಲಿ, ಸ್ತುತಿಸ್ತೋತ್ರದ ಆರಾಧನೆಯಾಗಲಿ, ವಾಕ್ಯ ಪ್ರಚಾರ ವಾಡುವದಾಗಲಿ ಅಥವಾ ಇನ್ನೂ ಏನೇ ವಿಷಯದ ಬಗ್ಗೆ ಮಹತ್ವ ನೀಡಬಹುದು, ಆದರೆ ಇವೆಲ್ಲದರ ಮೂಲ ತಳಹದಿ (ಬುನಾದಿ) ದೇವರ ಭಯವಿಲ್ಲದೇ ಹೋದರೆ ನಾವು ಕಟ್ಟಿರುವುದೆಲ್ಲವೂ ಒಂದು ದಿನ ಬಿದ್ದು ಹೋಗುತ್ತದೆ.

ದೇವರ ಸಭೆಯನ್ನು ಕ್ರಮವಿಧಿವಿಧಾನಗಳು, ಯಾವುದೇ ಕೆಲಸ, ಹಣ, ಮನುಷ್ಯನ ಯೋಜನೆ ಅಥವಾ ಲೋಕದ ಯಾವದೇ ಸಿದ್ಧಾಂತದಿಂದ ಕಟ್ಟಿಲಿಕ್ಕಾಗುವದಿಲ್ಲ. ಇವುಗಳಿಂದ ಒಳಗೊಂಡ ಕ್ರೀಸ್ತಿಯ ಸೇವೆ ಮನುಷ್ಯರ ಕಣ್ಣಿಗೆ ನೋಡಲು ತುಂಬಾ ಆಕರ್ಷಣೆಯಾಗಿರುತ್ತದೆ. ಆದರೆ 1 ಕೊರಿಂಥ 3:11-15 ರಲ್ಲಿ ದೇವರು ಎಲ್ಲಾ ಕಾರ್ಯಗಳನ್ನು ಬೆಂಕಿಯಿಂದ ಪರೀಕ್ಷಿಸಿಸುವಾಗ ಅವೆಲ್ಲವುಗಳು ಕೇವಲ ಕಟ್ಟಿಗೆ, ಆಪು, ಹುಲ್ಲುಗಳಂತೆ ನಶಿಸಿ ಹೋಗುವವು.

1 ಪೇತ್ರ 4:17 ರಲ್ಲಿ ಹೇಳುವ ಪ್ರಕಾರ ನ್ಯಾಯ ವಿಚಾರಣೆ ದೇವರ ಮನೆಯಲ್ಲಿಯೇ ಪ್ರಾರಂಭವಾಗುತ್ತದೆ, ಇದು ದೇವರಿಂದ ಕಟ್ಟಿದ ಮನೆಯ ಗುರುತಾಗಿದೆ. ನಮ್ಮನ್ನು ನಾವೇ ತೀರ್ಪು ಮಾಡಿಕೊಳ್ಳುವದು ದೇವರ ಮುಂದೆ ಜೀವನ ಮಾಡುವದರ ಫಲವಾಗಿದೆ. ಯೆಶಾಯ 6:5, ಯೋಬ 42:5,6 ಪ್ರಕಟನೆ 1:17 - ಇವೆಲ್ಲವುಗಳಲ್ಲಿ ನಾವು ನೋಡುವಾಗ ಯೆಶಾಯ, ಯೋಬ ಮತ್ತು ಯೋಹಾನ ಇವರು ದೇವರನ್ನು ನೋಡಿದಾಗ ತಮ್ಮ ಅಪೂರ್ಣ ಮತ್ತು ಪಾಪಮಯ ಜೀವನವನ್ನಷ್ಟೆ ಕಾಣುತ್ತಾರೆ.

ಆದಾಮ ಮತ್ತು ಹವ್ವ ದೇವರ ಪವಿತ್ರತೆಯನ್ನು ಉಲ್ಲಘಿಂಸಿದಾಗ ದೇವರು ಅವರನ್ನು ಏದೆನ್ ತೋಟದಿಂದ ತಳ್ಳಿ ಬಿಟ್ಟನು. ಇದಾದ ಮೇಲೆ ದೇವರು ಕೆರೂಬಿಯರಿಂದ ಜೀವ ವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನು ಇರಿಸಿದನು. ಈ ಜೀವ ವೃಕ್ಷವನ್ನು ಯೇಸುಕ್ರಿಸ್ತನು ನಮಗೆ ನಿತ್ಯಜೀವದ (ಪವಿತ್ರ ಗುಣ) ಮಾಧ್ಯಮದಲ್ಲಿ ಕೊಡಲಿಕ್ಕೆ ಬಂದನು. ಕತ್ತಿಯು ಕ್ರೂಜೆಯನ್ನು ಗುರುತಿಸುತ್ತದೆ. ನಮ್ಮ ಸ್ವಾರ್ಥತೆಯ ಇಚ್ಛೆಗಳನ್ನು ಕೊಲ್ಲುವದರಿಂದ ಆ ಪವಿತ್ರವಾದ ಗುಣಲಕ್ಷಗಳಲ್ಲಿ ಪಾಲುಗಾರರಾಗುವದಕ್ಕೆ ಅವಕಾಶವಿದೆ. 8 ಕತ್ತಿಯ ಹೊಡೆತ ಮೊದಲು ಯೇಸುವಿನ ಮೇಲೆ ಬಿದ್ದಿರುವದು ನಿಜವಾಗಿದೆ. ಆದರೆ ಗಲಾತ್ಯ 2:20 ರಲ್ಲಿ ಹೇಳುವ ಪ್ರಕಾರ ನಾವೂ ಕೂಡ ಆತನೊಂದಿಗೆ ಕ್ರೂಜೆಯಲ್ಲಿ ಹಾಕಲ್ಪಟ್ಟೆವು. ಅದಕ್ಕಾಗಿಯೆ ಗಲಾತ್ಯ 5:24 ರಲ್ಲಿ "ಕ್ರಿಸ್ತ ಯೇಸುವಿನವರು ತಮ್ಮ ಶರೀರ ಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆ ಸಹಿತ ಶಿಲುಬೆಗೆ ಹಾಕಿದವರು" ಯೆಂಬುದಾಗಿ ಹೇಳುತ್ತದೆ.

ಕೆರೂಬಿಯರಂತೆ ಸಭೆಯ ಹಿರಿಯರು ಕತ್ತಿಯನ್ನು ಉಪಯೋಗಿಸ ಬೇಕು ಮತ್ತು ಪವಿತ್ರ ಜೀವನ ಕೇವಲ ಸ್ವೇಚ್ಛಾಭಿಲಾಷೆಯನ್ನು ಕ್ರೂಜೆಗೆ ಹಾಕುವದರಿಂದಲೇ ಎಂಬುದಾಗಿ ಸಭೆಗೆ ಸಾರಿ ಹೇಳಬೇಕು. ತಿರುಗಿ ದೇವರ ಕಡೆ ಅನ್ಯೊನ್ಯತೆ ಹೊಂದ ಬೇಕಾದರೆ ಅದು ಕೇವಲ ಆ ಕತ್ತಿಯಿಂದಲೇ ಸಾಧ್ಯ. ಈ ಕತ್ತಿಯ ಉಪಯೋಗ ಮಾಡದೇ ಇದ್ದದ್ದಕ್ಕೆ ಇಂದಿನ ಅನೇಕ ಸಭೆಗಳು ತಮ್ಮ ಇಚ್ಛೆಗಳೊಂದಿಗೆ ರಾಜಿ (ಒಪ್ಪಂದ) ಮಾಡಿಕೊಂಡಿದ್ದಾರೆ ಮತ್ತು ಕ್ರಿಸ್ತನ ಸಭೆಯೆಂಬುದಾಗಿ ವ್ಯಕ್ತ ಪಡಿಸಲು ವಿಫಲರಾಗಿದ್ದಾರೆ.

ಅರಣ್ಯಕಾಂಡ 25:1 ರಲ್ಲಿ ನಾವು ಹೀಗೆ ಓದುತ್ತೇವೆ - ಇಸ್ರಾಯೇಲ್ಯರು ಮೋವಾಬ್ ಸ್ತ್ರೀಯರೊಡನೆ ಸಹವಾಸ ಮಾಡುವವರಾದರು. ವಚನ 6ರಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬ ಮನುಷ್ಯನು ಮೋಶೆಗೂ ಎಲ್ಲಾ ಸಮೂಹದವರಿಗೂ ಕಾಣುವಂತೆ ಒಬ್ಬ ಮೋವಾಬ್ ಸ್ತ್ರೀಯನ್ನು ತನ್ನ ಕುಲದವರ ಬಳಿ ಕರಕೊಂಡು ಬಂದನು. ಆದರೆ ಒಬ್ಬ ಯಾಜಕನಿಂದ ಇಸ್ರಾಯೇಲ್ಯರು ನಾಶವಾಗದೆ ಉಳಿದರು, ಆತನ ಹೆಸರು ಫಿನೆಹಾಸ. ವಚನ 7,8 ರಲ್ಲಿ ಈತನು ದೇವರ ಮಹಿಮೆ ಬಗ್ಗೆ ಅದೆಷ್ಟು ಅಭಿಮಾನ ಹೊಂದಿದ್ದನೆಂದರೆ ತಕ್ಷಣವೇ ಈಟಿಯನ್ನು ಕೈಯಲ್ಲಿ ತೆಗೆದು 8 ಇಸ್ರಾಯೇಲ್ಯನ ಹಿಂದೆ ಹೋಗಿ ಅವನು ಮಲಗುವ ಕೊಣೆಯನ್ನು ಹೊಕ್ಕು ಅವರಿಬ್ಬರನ್ನೂ ಅಂದರೆ ಆ ಇಸ್ರಾಯೇಲ್ಯನನ್ನೂ ಆ ಸ್ತ್ರೀಯನ್ನೂ ಒಂದೇ ಏಟಿನಿಂದ ತಿವಿದು ಕೊಂದನು. ಆಗ ಇಸ್ರಾಯೇಲ್ಯರಿಗುಂಟಾಗಿದ್ದ ವ್ಯಾಧಿ ನಿಂತು ಹೋಯಿತು. ಆ ವ್ಯಾಧಿಯಿಂದ ಆಗಲೆ 24,000 ಜನರು ಸತ್ತಿದ್ದರು. ವ್ಯಾಧಿಯು ಅದೆಷ್ಟು ಬೇಗನೆ ಹಬ್ಬುತ್ತಿತೆಂದರೆ ಫಿನೆಹಾಸನು ಕೆರೂಬಿ ಧೂತನಂತೆ ಕತ್ತಿಯನ್ನು ಉಪಯೋಗಿಸಿದ್ದರಿಂದ ಎಲ್ಲಾ ಇಸ್ರಾಯೇಲ್ಯರು ನಾಶವಾಗದಂತೆ ಉಳಿದರು.

ನಿಮಗೀಗ ತಿಳಿಯ ಬಹುದು “ಕತ್ತಿ ಹಿಡಿದ ಕೆರೂಬಿ" ಧೂತನಂತೆ ಪ್ರತಿಯೊಂದು ಸಭೆಯಲ್ಲಿರುವದು ಅದೆಷ್ಟು ಅವಶ್ಯಕರವಾಗಿದೆ?

ವ್ಯಾಧಿಯು ಅತ್ಯಂತ ವೇಗದಲ್ಲಿ ಈಗಿನ ಕ್ರಿಸ್ತೀಯ ಜನರಲ್ಲಿ ಹಬ್ಬುತ್ತಾ ಇದೆ. ಇದರ ಕಾರಣವೆನೆಂದರೆ ನಮ್ಮಲ್ಲಿ ಸಾಕಷ್ಟು ಫಿನೆಹಾಸನಂತೆ ಕತ್ತಿಯನ್ನು ಉಪಯೋಗಿಸುವ ಸೇವಕರಿಲ್ಲ. ಅತ್ಯಧಿಕ ಸಂಖ್ಯೆಯಲ್ಲಿ ಅನೇಕ ಸಭಾಹಿರಿಯರು ಮತ್ತು ಬೋಧಕರು ಕೇವಲ ಮನುಷ್ಯರನ್ನು ಮೆಚ್ಚಿಸುವವರಾಗಿದ್ದಾರೆ ಮತ್ತು ನಮಗೆ ಮೋವಾಬ್-ಅನ್ನು ಪ್ರೀತಿಸಲಿಕ್ಕೆ ಒತ್ತಾಯಿಸುತ್ತಾರೆ. ಒಂದು ಸಭೆಯಲ್ಲಿ ಯಾಕೆ ನಾವು ಕತ್ತಿಯನ್ನು ಉಪಯೋಗಿಸಬಾರದೆಂದು, ಸೈತಾನನು ನಮಗೆ ಅನೇಕ ಕಾರಣಗಳನ್ನು ತೋರಿಸುತ್ತಾನೆ ಮತ್ತು ಆತನು ದೇವರ ವಾಕ್ಯಗಳ ಸಹಾಯದಿಂದ ತನ್ನ ಕಾರಣಗಳನ್ನು ಬಲಪಡಿಸುತ್ತಾನೆ, ಯೇಸುವಿಗೂ ಕೂಡ ಇದೆ ರೀತಿಯಲ್ಲಿ ಅಡ್ಡಗಾಲು ಹಾಕಿದನು.

ಫಿನೆಹಾಸನು ತನ್ನ ಕತ್ತಿಯನ್ನು ಉಪಯೋಗ ಮಾಡುವದರಿಂದ ತನಗೆ ಯಾವ ಲಾಭ ಪಡಕೊಂಡನು? ಏನೂ ಇಲ್ಲ. ಅದರ ಬದಲು ಆತನು ಶಾಂತ ಗುಣದವನಲ್ಲವೆಂಬುದಾಗಿ ತೋರಿಸ ಬಹುದು. ಅಷ್ಟೆ ಅಲ್ಲ ಫಿನೆಹಾಸನು, ಕೊಂದ ಮನುಷ್ಯನ ಸಂಭಂದಿಕರ ಸಿಟ್ಟು ಮತ್ತು ಚಾಡಿಮಾತುಗಳಿಗೆ ತುತ್ತಾಗ ಬಹುದು. ಆದರೆ ದೇವರ ಮಹಿಮೆ ಮತ್ತು ಅಭಿಮಾನ ಆತನನ್ನು ಪ್ರೋತ್ಸಾಹಿಸಿತು. ಆದ್ದರಿಂದ ದೇವರೂ ಕೂಡ ಅರಣ್ಯಕಾಂಡ 25:11 ರಲ್ಲಿ ತನ್ನ ಸಮ್ಮತಿಯ ಮುದ್ರೆಯನ್ನೂ ಕೂಡ ಹಾಕುತ್ತಾನೆ. ಆದ್ದರಿಂದ ನಮಗೆ ಕೇವಲ ದೇವರ ಸಮ್ಮತಿ ಹೊಂದಿರುವದು ಅತ್ಯಂತ ಅವಶ್ಯವಾಗಿದೆ. ದೇವರು ಅರಣ್ಯಕಾಂಡ 25:11,12,13 ರಲ್ಲಿ ಹೀಗೆ ಹೇಳುತ್ತಾನೆ "ನಾನೇ ನನ್ನ ಗೌರವವನ್ನು ಕಾಪಾಡಿಕೊಳ್ಳುವ ಮೇರೆಗೆ ಮಹಾಯಾಜಕ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆಗಿರುವ ಫಿನೆಹಾಸನು ನನ್ನ ಗೌರವವನ್ನು ಕಾಪಾಡಿದ್ದರಿಂದ ಇಸ್ರಾಯೇಲ್ಯರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದೆನೆ. ಹೀಗಿರುವದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವದಕ್ಕಾಗಿ ಇಸ್ರಾಯೇಲ್ಯರನ್ನು ನಿರ್ಮೂಲ ಮಾಡಬೇಕಾದ ಅಗತ್ಯವಿಲ್ಲ. ಆದಕಾರಣ ನಾನು ಅವನ ಸಂಗಡ ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆಂದು ಎಲ್ಲರಿಗೂ ತಿಳಿಸು". ಮಲಾಕಿ 2:4,5 ರಲ್ಲಿ ಓದುವ ಪ್ರಕಾರ ಲೇವಿಯರು ಕತ್ತಿಯನ್ನು ಉಪಯೋಗಿಸಿದ್ದರಿಂದ ದೇವರು ಇವರ ಜೊತೆಕೂಡ ಸಮಾಧಾನದ ಒಪ್ಪಂದ ಮಾಡಿಕೊಂಡಿದ್ದನು.

ಈಗಿನ ಅನೇಕ ಸಭೆಗಳಲ್ಲಿ ಸಮಾಧಾನವಿಲ್ಲ ಏಕೆಂದರೆ ಅವರು ಮನುಷ್ಯನ ಜ್ಞಾನದ ಪ್ರಕಾರ ಸಮಾಧಾನ ಹುಡುಕುತ್ತಾ ಇದ್ದಾರೆಯೆ ವಿನಹ ದೇವರ ಕತ್ತಿಯನ್ನು ಉಪಯೋಗಿಸುತ್ತಿಲ್ಲ. ಆದ್ದರಿಂದಲೇ ಭಿನ್ನಮತ, ಜಗಳ ಉಂಟಾಗುತ್ತಾ ಇದೆ. ಸ್ವ ಇಚ್ಛೆಯಿಂದ ತುಂಬಿದ ಜೀವಿತವನ್ನು ಕೊಲ್ಲುವದರಿಂದಲೇ ನಾವು ಕ್ರಿಸ್ತೇಸುವಿನ ಸಮಾಧಾನವನ್ನು ಮನೆಯಲ್ಲಿ ಮತ್ತು ಸಭೆಯಲ್ಲಿ ತರಲು ಸಾಧ್ಯ.

ಒಂದು ಸಭೆಯ ಪವಿತ್ರತೆಯನ್ನು ಕಾಪಾಡ ಬೇಕಾದರೆ, ಸಭೆಯ ನಾಯಕರು ದೇವರ ನಾಮದ ಮಹಿಮೆ, ಗೌರವಕ್ಕೋಸ್ಕರ ತಮ್ಮ ಸ್ವಂತ ಕೀರ್ತಿಯನ್ನು (ಶಾಂತ, ಸೌಮ್ಯ ಮನುಷ್ಯ) ಎಂಬುದನ್ನು ಬದಿಗಿಟ್ಟು ರೋಷಾಗ್ನಿಯಿಂದ ತುಂಬಿರಬೇಕು.

ಈ ರೋಷಾಗ್ನಿಯಿಂದಲೇ ಯೇಸುವು ದೇವಾಲಯದಲ್ಲಿ ಕೂತಿದ್ದ ಪಾರಿವಾಳ ಮಾರುವವರನ್ನು, ಚಿನಿವಾರರನ್ನು ಹೊರಕ್ಕೆ ಅಟ್ಟಿ ಓಡಿಸಿದನು. ಯೋಹಾನ 2:17ರಲ್ಲಿ ಯೇಸುವಿನ ಆ ರೋಷದ ಬಗ್ಗೆ ಹೀಗೆ ಹೇಳುತ್ತದೆ; "ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ." ಯೇಸುವಿನಂತೆ ಆಗಲಿಕ್ಕೆ ಇದು ಒಂದು ದೊಡ್ಡ ಅಂಶವಾಗಿದೆ. ಆದರೆ ಯೇಸುವಿನಂತೆ ಆಗಲಿಕ್ಕೆ ತನ್ನ ಜನಪ್ರಿಯತೆ ಕಳಕೊಳ್ಳುವದಾಗಲಿ, ಇನ್ನೊಬರಿಂದ ಅಪಾರ್ಥ ಹೊಂದುವದಾಗಲಿ ಯಾರು ಬಯಸಿಯಾರು?